Tag: Bandhavgarh

  • ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ಕಾಡಾನೆಗಳ ಸಾವಿಗೆ ರಾಗಿ ಕಾರಣವೇ?

    ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ 11 ಕಾಡಾನೆಗಳ ಸಾವಿಗೆ ರಾಗಿ ಕಾರಣವೇ?

    ಧ್ಯಪ್ರದೇಶದ (Madhya Pradesh) ಬಾಂಧವಗಢ (Bandhavgarh) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನಾರೋಗ್ಯದಿಂದ ಇತ್ತೀಚೆಗೆ ಮೂರು ದಿನಗಳ ಅಂತರದಲ್ಲಿ 11 ಆನೆಗಳು (Elephant) ಸಾವನ್ನಪ್ಪಿವೆ. ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯ ಕಿತೋಳಿ ವ್ಯಾಪ್ತಿಯ ಸಂಖಾನಿ ಮತ್ತು ಬಾಕೇಲಿಯಲ್ಲಿ ನಾಲ್ಕು ಕಾಡಾನೆಗಳು ಮೃತಪಟ್ಟಿವೆ. ಇನ್ನೂ ಎರಡು ದಿನದ ಅಂತರದಲ್ಲಿ 6 ಆನೆಗಳು ಸಾವನ್ನಪ್ಪಿದ್ದವು. ಇನ್ನೊಂದು ಆನೆ ಭಾನುವಾರ ಚಿಕಿತ್ಸೆ ವೇಳೆ ಸಾವನ್ನಪ್ಪಿದೆ. 

    ಮೃತಪಟ್ಟ 11 ಆನೆಗಳು 13 ಆನೆಗಳ ಹಿಂಡಿನ ಭಾಗವಾಗಿದ್ದವು. ಸಾವಿಗೀಡಾದ ಆನೆಗಳಲ್ಲಿ ಒಂದು ಗಂಡು ಆನೆಯಾಗಿದ್ದು, ಉಳಿದಂತೆ ಎಲ್ಲಾ ಹೆಣ್ಣು ಆನೆಗಳಾಗಿವೆ. ಗುಂಪಿನಲ್ಲಿ ಉಳಿದ 2 ಆನೆಗಳು ಆರೋಗ್ಯವಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆನೆಗಳಿಂದ ಸಂಗ್ರಹಿಸಲಾದ ಅಂಗಾಂಗಗಳ ಮಾದರಿಗಳನ್ನು ಉತ್ತರ ಪ್ರದೇಶದ ಐಸಿಎಆರ್-ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಮಧ್ಯಪ್ರದೇಶದ ಸಾಗರದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೀಸಲು ಸಿಬ್ಬಂದಿ ಸಾವನ್ನಪ್ಪಿದ ಆನೆಗಳ ಬಗ್ಗೆ ಮಾಹಿತಿ ನೀಡಿ, ಆನೆಗಳು ಸಾಯುವ ಮೊದಲು ನೆಲಕ್ಕೆ ಬಿದ್ದು ನಡುಗುತ್ತಿದ್ದವು ಎಂದು ತಿಳಿಸಿದ್ದರು. 

    ಆನೆಗಳ ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಆನೆಗಳ ಸಾವಿಗೆ ಕೊಡೋ ರಾಗಿ ಕಾರಣ ಎಂದು ಶಂಕಿಸಲಾಗಿದೆ. ಕೊಡೋ ರಾಗಿ ದೇಹದಲ್ಲಿ ಮೈಕೋಟಾಕ್ಸಿನ್‌ಗಳನ್ನು ಉತ್ಪಾದಿಸುತ್ತದೆ. ಇದು ಸೈಕ್ಲೋಪಿಯಾಜೋನಿಕ್ ಆಮ್ಲದ ಉತ್ಪಾದನೆಗೆ ಕಾರಣವಾಗುತ್ತದೆ. ಇದು ದೇಹದಲ್ಲಿ ವಿಷವನ್ನು ಉಂಟುಮಾಡುತ್ತದೆ ಎಂದು ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. 

    ಈ ಬಗ್ಗೆ ಮಾಹಿತಿ ಕಲೆ ಹಾಕಲು ಅರಣ್ಯ ಅಧಿಕಾರಿಗಳು, ಆನೆಗಳು ಮೃತಪಟ್ಟ ಸಮೀಪದ ಹೊಲಗಳಿಂದ ಸಂಗ್ರಹಿಸಿದ ‘ಕೊಡೋ ರಾಗಿ’ ಮತ್ತು ಆನೆಗಳ ಹೊಟ್ಟೆಯಿಂದ ಸಂಗ್ರಹಿಸಿದ ಮಾದರಿಯನ್ನು ಐಸಿಎಆರ್- ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಉತ್ತರಪ್ರದೇಶ ಮತ್ತು ಸಾಗರದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇನ್ನೂ, ಮೂರು ದಿನಗಳಲ್ಲಿ 11 ಆನೆಗಳು ಸಾವನ್ನಪ್ಪಿರುವುದು ದೇಶದಲ್ಲಿ ಇದೇ ಮೊದಲ ನಿದರ್ಶನ ಎಂದು ಕೆಲವು ವನ್ಯಜೀವಿ ತಜ್ಞರು ಹೇಳಿದ್ದಾರೆ.

    ಆನೆಗಳಿಗೆ ವಿಷಪ್ರಾಶನ?

    ಮಧ್ಯ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ವರದಿಗಳು, ವಿಷ ಪ್ರಾಶನದಿಂದ ಆನೆಗಳು ಸಾವನ್ನಪ್ಪಿರುವ ಸಾಧ್ಯತೆಯ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದ್ದಾರೆ. 

    ಕೊಡೋ ರಾಗಿ ಎಂದರೇನು? 

    ಕೊಡೋ ರಾಗಿ (Paspalum scrobiculatum) ಅನ್ನು ಭಾರತದಲ್ಲಿ ಕೊಡ್ರ ಮತ್ತು ವರಗು ಎಂದೂ ಕರೆಯಲಾಗುತ್ತದೆ. ಈ ಬೆಳೆಯನ್ನು ಭಾರತ, ಪಾಕಿಸ್ತಾನ, ಫಿಲಿಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಬೆಳೆಯಲಾಗುತ್ತದೆ.

    ಈ ಕೊಡೋ ರಾಗಿ ಸೇವಿಸಿ 1983ರಲ್ಲಿ ಆನೆಗಳು ಮೃತಪಟ್ಟ ಬಗ್ಗೆ ವರದಿ ಇದೆ. ಇನ್ನೂ 1922 ರಲ್ಲಿ ಉತ್ತರ ಪ್ರದೇಶದಲ್ಲಿ ಕೊಡೋ ರಾಗಿ ಸೇವನೆಯಿಂದ ಕೆಲವು ವ್ಯಕ್ತಿಗಳಲ್ಲಿ ವಿಷದ ಅಂಶ ಪತ್ತೆ ಆಗಿತ್ತು. ಇದಕ್ಕೆ ರಾಗಿಯಲ್ಲಿನ ಮೈಕೋಟಾಕ್ಸಿನ್ ಸೈಕ್ಲೋಪಿಯಾಜೋನಿಕ್ ಆ್ಯಸಿಡ್(CPA) ಎಂಬ ಅಂಶ ಕಾರಣ ಎಂದು ವರದಿಯಾಗಿತ್ತು. 

    ಕೊಡೋ ರಾಗಿ ತೇವಾಂಶವುಳ್ಳ ಸ್ಥಿತಿಯಲ್ಲಿ ಕೊಯ್ಲು ಮಾಡುವಾಗ ಶಿಲೀಂದ್ರಗಳ ಸೋಂಕು ಹೆಚ್ಚಾಗಿ ಇದು ವಿಷಕಾರಿಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಕೆಲವು ಪ್ರಕರಣಗಳಲ್ಲಿ ಮನುಷ್ಯರು ಮತ್ತು ಪ್ರಾಣಿಗಳಲ್ಲೂ ಒಂದೇ ರೀತಿಯ ರೋಗಲಕ್ಷಣ ಪತ್ತೆಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. 

    ಕೊಡೋ ರಾಗಿ ಏಕೆ ವಿಷವಾಗುತ್ತದೆ? 

    ಮುಖ್ಯವಾಗಿ ಒಣ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಕೊಡೋ ರಾಗಿ ಬೆಳೆಯಲಾಗುತ್ತದೆ. ಈ ರಾಗಿ ಬ್ಯಾಕ್ಟೀರಿಯಾ ಮತ್ತು ಎರ್ಗೋಟ್ ಎಂಬ ಶಿಲೀಂಧ್ರಗಳ ಸೋಂಕಿಗೆ ಹೆಚ್ಚು ಗುರಿಯಾಗುತ್ತದೆ. ಕೊಯ್ಲು ಮಾಡುವಾಗ ಬೀಳುವ  ಮಳೆಯಿಂದ  ಈ ಶಿಲೀಂದ್ರದ ಸೋಂಕು ಉಂಟಾಗುತ್ತದೆ. ಇದನ್ನು ಸ್ಥಳೀಯವಾಗಿ ಮಾತಾವ್ನಾ ಕೊಡು ಅಥವಾ ಮಾಟೋನಾ ಕೊಡೋ ಎಂದು ಕರೆಯಲಾಗುತ್ತದೆ. ಈ ಸೋಂಕಿಗೊಳಗಾದ ರಾಗಿಯ ಸೇವನೆಯಿಂದ ಪ್ರಾಣಿಗಳ ದೆಹಕ್ಕೆ ವಿಷದ ಅಂಶ ಸೇರುತ್ತದೆ. 

    ಪ್ರಾಣಿಗಳ ಮೇಲೆ ಕೊಡೋ ರಾಗಿ ವಿಷಕಾರಿ  ಪ್ರಭಾವ ಏನು? 

    ಕೊಡೋ ವಿಷವು ಮುಖ್ಯವಾಗಿ ನರ ಮತ್ತು ಹೃದಯರಕ್ತನಾಳದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವಾಂತಿ, ತಲೆತಿರುಗುವಿಕೆ ಮತ್ತು ಪ್ರಜ್ಞೆ ಕಳೆದುಕೊಳ್ಳುವಿಕೆ, ಕೈಕಾಲುಗಳ ನಡುಕ ಉಂಟಾಗಲಿದೆ. ಅಲ್ಲದೇ ಯಕೃತ್‌, ಹೃದಯದಲ್ಲಿ ಕ್ಯಾಲ್ಸಿಯಂ ಅಂಶದ ಮೇಲೆ ಪರಿಣಾಮ ಬೀರುವ ಮೂಲಕ ಹೃದಯವನ್ನು ದುರ್ಬಲಗೊಳಿಸುತ್ತದೆ. ಜಠರ, ಕರುಳಿನ ಅಸ್ವಸ್ಥತೆಗಳನ್ನು ಉಂಟುಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. 

    ಪರಿಹಾರವೇನು? 

    ಬೆಳೆಗಳ ಮೇಲೆ ಬೆಳೆಯುವ ಶಿಲೀಂದ್ರಗಳನ್ನು ನಾಶಮಾಡಲು ಬೇರೆ ಜೀವಿಗಳ ಬಳಕೆ ಮಾಡುವುದು. ಸಂಶೋಧಕರ ಪ್ರಕಾರ ಅನೇಕ ಸೂಕ್ಷ್ಮಜೀವಿಗಳು ಶಿಲೀಂಧ್ರ ಬೆಳವಣಿಗೆ ಮತ್ತು ಮೈಕೋಟಾಕ್ಸಿನ್ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಬೆಳೆ ಕಟಾವಿನ ಬಳಿಕ ಸರಿಯಾದ ಸಂಗ್ರಹಣೆ, ಉತ್ತಮ ಕೃಷಿ ಪದ್ಧತಿಯ ಅಳವಡಿಕೆ ಅಗತ್ಯವಾಗಿದೆ. ತೇವಾಂಶವುಳ್ಳ ವಾತಾವರಣದಲ್ಲಿ ಶಿಲೀಂಧ್ರಗಳು ವೇಗವಾಗಿ ಹರಡುವುದರಿಂದ ಕೊಯ್ಲು ಮಾಡಿದ ರಾಶಿಗಳು ಮಳೆಯಿಂದ ರಕ್ಷಣೆ ಮಾಡಬೇಕು. ಒಣಗಿಸುವ ಮೊದಲು ಸಸ್ಯಗಳನ್ನು ತೇವಗೊಳಿಸಿ ಒಕ್ಕಣೆ ಮಾಡುವ ಹಳೆಯ ಅಭ್ಯಾಸವನ್ನು ನಿಲ್ಲಿಸಬೇಕು. ಸೋಂಕಿತ ಧಾನ್ಯಗಳನ್ನು ತೆಗೆದುಹಾಕುವುದು ಸಹ ರೋಗದ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವರದಿಯಾಗಿದೆ. 

  • ಮಧ್ಯಪ್ರದೇಶದ ಸಂರಕ್ಷಿತಾರಣ್ಯದಲ್ಲಿ 7 ತಿಂಗಳ ಹುಲಿ ಮರಿ ಅನುಮಾನಾಸ್ಪದ ಸಾವು

    ಮಧ್ಯಪ್ರದೇಶದ ಸಂರಕ್ಷಿತಾರಣ್ಯದಲ್ಲಿ 7 ತಿಂಗಳ ಹುಲಿ ಮರಿ ಅನುಮಾನಾಸ್ಪದ ಸಾವು

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಬಾಂಧವಗಢ (Bandhavgarh) ಹುಲಿ ಸಂರಕ್ಷಿತಾರಣ್ಯದಲ್ಲಿ (Tiger Reserve) ಏಳು ತಿಂಗಳ ಹೆಣ್ಣು ಹುಲಿ ಮರಿಯೊಂದು (Female Tiger Cub) ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎಫ್‌ಎಸ್ ನಿನಾಮ, ಹೆಣ್ಣು ಹುಲಿಮರಿ ಇನ್ನೊಂದು ಹುಲಿಯೊಂದಿಗೆ ಕಾದಾಟ ಮಾಡುವ ವೇಳೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಹುಲಿ ಮರಿಯ ಮೃತದೇಹದಲ್ಲಿ ಮತ್ತೊಂದು ಹುಲಿಯ ಪಗ್‌ಮಾರ್ಕ್ (Pug Mark) ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಬಾಂಬ್ ಸ್ಫೋಟದ ಬೆದರಿಕೆ, ಪ್ರಧಾನಿ ಕೊಲ್ಲುವುದಾಗಿ ಕಾಮೆಂಟ್: ಆರೋಪಿಗಾಗಿ ತೀವ್ರ ಶೋಧ

    ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಗೆ ಸಹಾಯವಾಗಲು ಶ್ವಾನದಳವನ್ನು (Dog Squads) ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಅಂದರೆ ಜುಲೈ ತಿಂಗಳಿನಲ್ಲಿ ಮಧ್ಯಪ್ರದೇಶ ಮತ್ತೊಮ್ಮೆ ಹುಲಿರಾಜ್ಯವಾಗಿ ಹೊರಹೊಮ್ಮಿದ್ದು, ಒಟ್ಟು 785 ಹುಲಿಗಳನ್ನು ಈ ರಾಜ್ಯ ಒಳಗೊಂಡಿದೆ. ಇದನ್ನೂ ಓದಿ: ಹನಿಮೂನ್‍ಗೆ ಬಂದು ಪತಿಯನ್ನು ಹೋಟೆಲ್‍ನಲ್ಲೇ ಬಿಟ್ಟು ಹೋದ ಪತ್ನಿ!

    ಹುಲಿಗಳ ಸಂಖ್ಯೆಯಲ್ಲಿ ಮಧ್ಯಪ್ರದೇಶ ಅಗ್ರಸ್ಥಾನದಲ್ಲಿದ್ದು, ಕರ್ನಾಟಕದಲ್ಲಿ 563, ಉತ್ತರಾಖಂಡದಲ್ಲಿ 560 ಮತ್ತು ಮಹಾರಾಷ್ಟ್ರ 444 ಹುಲಿಗಳನ್ನು ಒಳಗೊಂಡಿದೆ. ಅಲ್ಲದೇ ಮಧ್ಯಪ್ರದೇಶದಲ್ಲಿ ಒಟ್ಟು ಆರು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಅವುಗಳೆಂದರೆ ಕನ್ಹಾ ಹುಲಿ ಸಂರಕ್ಷಿತ ಪ್ರದೇಶ, ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶ, ಪನ್ನಾ ಹುಲಿ ಸಂರಕ್ಷಿತ ಪ್ರದೇಶ, ಪೆಂಚ್ ಹುಲಿ ಸಂರಕ್ಷಿತ ಪ್ರದೇಶ, ಸತ್ಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ಸಂಜಯ್ ದುಬ್ರಿ ಹುಲಿ ಸಂರಕ್ಷಿತ ಪ್ರದೇಶ. ಇದನ್ನೂ ಓದಿ: ಗೇ ಡೇಟಿಂಗ್ ಆ್ಯಪ್‌ನಲ್ಲಿ ಯುವಕರಿಗೆ ವಂಚನೆ- 6 ಮಂದಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]