Tag: bandeppa kashempur

  • ರಾಜ್ಯದ ಜನರನ್ನು ದಾರಿ ತಪ್ಪಿಸಲು ಕದ್ದಾಲಿಕೆ ಕೇಸ್ ಸಿಬಿಐಗೆ: ಕಾಶೆಂಪೂರ್

    ರಾಜ್ಯದ ಜನರನ್ನು ದಾರಿ ತಪ್ಪಿಸಲು ಕದ್ದಾಲಿಕೆ ಕೇಸ್ ಸಿಬಿಐಗೆ: ಕಾಶೆಂಪೂರ್

    ಬೀದರ್: ರಾಜ್ಯದ ಜನರನ್ನು ದಾರಿ ತಪ್ಪಿಸಲು ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ ಮೊತ್ತೊಂದು ಕಡೆ ಬರಗಾಲ ತಾಂಡವಾಡುತ್ತಿದ್ದು ಕೇಂದ್ರದಿಂದ ಎಷ್ಟು ಅನುದಾನ ಬರುತ್ತೆ ಎಂದು ಜನ ಕಾಯುತ್ತಿದ್ದಾರೆ. ಅದ್ದರಿಂದ ಜನರನ್ನು ದಾರಿ ತಪ್ಪಿಸಲು ಸಿಎಂ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಎಂದು ಹೇಳಿದರು.

    ಸಿಬಿಐ ತನಿಖೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೆದರುವುದಿಲ್ಲ. ಅವರಿಗೆ ಎಲ್ಲಾ ರೀತಿಯ ಶಕ್ತಿಯಿದ್ದು, ಯಾವ ತನಿಖೆಗೂ ಎಲ್ಲರೂ ಸಿದ್ಧರಿದ್ದಾರೆ. ಹೆಚ್‍ಡಿಕೆ ಕುಟುಂಬ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ. ಈ ಪ್ರಕರಣವನ್ನು ಅವರು ಸಮರ್ಥವಾಗಿ ಎದುರಿಸುತ್ತಾರೆ ಎಂದು ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

  • ‘ಬಿಎಸ್‍ವೈ ಓಲ್ಡ್ ಮ್ಯಾನ್’ – ಬಂಡೆಪ್ಪ ಕಾಶೆಂಪುರ್ ವಾಗ್ದಾಳಿ

    ‘ಬಿಎಸ್‍ವೈ ಓಲ್ಡ್ ಮ್ಯಾನ್’ – ಬಂಡೆಪ್ಪ ಕಾಶೆಂಪುರ್ ವಾಗ್ದಾಳಿ

    ಚಿಕ್ಕಬಳ್ಳಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಗೆ ವಯಸ್ಸಾಗಿದ್ದು, ಎಲ್ಲಿ ತಮ್ಮನ್ನು ಎಲ್.ಕೆ. ಅಡ್ವಾಣಿ ಅವರಂತೆ ಅಧಿಕಾರದಿಂದ ದೂರ ಇಡುತ್ತಾರೋ ಎಂಬ ಭಯದಿಂದ ಅಧಿಕಾರ ಹಿಡಿದು ಮುಖ್ಯಮಂತ್ರಿ ಆಗಲು ಅತುರ ಪಡುತ್ತಿದ್ದಾರೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.

    ಕಾರಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರ ದರ್ಶನ ಪಡೆದು ರೆಸಾರ್ಟ್ ಗೆ ವಾಪಾಸ್ಸಾದ ಸಚಿವ ಬಂಡೆಪ್ಪ ಕಾಶೆಂಪುರ ಮಾಧ್ಯಮಗಳ ಜೊತೆ ಮಾತನಾಡಿ, ಯಡಿಯೂರಪ್ಪ ಅಧಿಕಾರ ಹಿಡಿದು ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಲು ಆತುರಪಡುತ್ತಿದ್ದಾರೆ. ಎಲ್ಲಿ ತನ್ನನ್ನು ಅಡ್ವಾಣಿ ತರ ಮೂಲೆಗುಂಪು ಮಾಡಿ ಕೂರಿಸಿಬಿಡುತ್ತಾರೋ ಎಂಬ ಆತಂಕ ಅವರಿಗೆ ಕಾಡುತ್ತಿದೆ ಎಂದರು.

    ಬಿಎಸ್‍ವೈ ಅಧಿಕಾರ ಹಿಡಿಯಲು ವಾಮಮಾರ್ಗಗಳ ಮೂಲಕ ಅಡ್ಡ ದಾರಿ ಹಿಡಿದಿದ್ದಾರೆ. ಮೈತ್ರಿ ಸರ್ಕಾರ ದೇವರು ಹಾಗೂ ಜನರ ಆಶೀರ್ವಾದದಿಂದ ರಚನೆಯಾಗಿದೆ. ಹೀಗಾಗಿ ಕೊನೆ ಕ್ಷಣದವರೆಗೂ ನಾವು ಕಾಯುತ್ತೇವೆ. ಅಂತಿಮ ಕ್ಷಣದಲ್ಲಿ ಏನಾದ್ರೂ ಚಮತ್ಕಾರ ನಡೆದು ಅತೃಪ್ತ ಶಾಸಕರು ಬರಬಹುದು. ಸರ್ಕಾರ ಉಳಿಯಬಹುದು ಅವರು ಮನವರಿಕೆ ಮಾಡಿಕೊಳ್ಳುವ ವಿಶ್ವಾಸ ಇದೆ ಎಂದರು.

    ಬಿಜೆಪಿಯವರ ಬಳಿ ಪೂರ್ಣ ಪ್ರಮಾಣದ ಶಾಸಕರ ಸಂಖ್ಯೆ ಇಲ್ಲ. ಪೂರ್ಣ ಪ್ರಮಾಣ ಸಂಖ್ಯೆ ಬರಬೇಕಾದರೆ 113 ಶಾಸಕರ ಬೆಂಬಲ ಇರಬೇಕು. ಆದರೆ ಬಿಜೆಪಿಯವರ ಬಳಿಯೂ 113 ಸಂಖ್ಯೆ ಇಲ್ಲ, ಇನ್ನೂ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ಯಾವುದೋ ಒಂದು ಚಮತ್ಕಾರದಿಂದ ಈ ಸರ್ಕಾರ ಉಳಿಯಬಹುದು ಎಂದರು.

  • ರೈತರಿಗೆ ನೋಟಿಸ್ – ಬ್ಯಾಂಕ್ ಅಧಿಕಾರಿಗಳಿಗೆ ಬಂಡೆಪ್ಪ ಕಾಶೆಂಪೂರ್ ಕ್ಲಾಸ್

    ರೈತರಿಗೆ ನೋಟಿಸ್ – ಬ್ಯಾಂಕ್ ಅಧಿಕಾರಿಗಳಿಗೆ ಬಂಡೆಪ್ಪ ಕಾಶೆಂಪೂರ್ ಕ್ಲಾಸ್

    ಬೆಂಗಳೂರು: ರೈತರಿಗೆ ನೋಟಿಸ್ ಕೊಟ್ಟಿದ್ದಕ್ಕೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಂಡೆಪ್ಪ ಕಾಶೆಂಪೂರ್ ಅವರು ಬ್ಯಾಂಕ್ ಅಧಿಕಾರಿಗೆ ಫೋನ್ ಮಾಡಿ ಗರಂ ಆಗಿದ್ದಾರೆ. ರೈತರಿಗೆ ನೋಟಿಸ್ ಕೊಡಬಾರದು ಎಂದು ಸರ್ಕಾರ ಸೂಚನೆ ನೀಡಿದೆ. ಅಲ್ಲದೆ ಈ ಬಗ್ಗೆ ಸಿಎಂ ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಿದ್ದರೂ ಸಹ ರೈತರಿಗೆ ನೋಟಿಸ್ ಕೊಡ್ತೀರಾ ಎಂದು ಸಚಿವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ನವಲಿಹಾಳ ಗ್ರಾಮದ ಸಹಕಾರ ಬ್ಯಾಂಕ್ ನಿಂದ ರೈತರಿಗೆ ನೋಟಿಸ್ ನೀಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೆ ನೋಟಿಸ್ ಕೊಟ್ಟರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧವೇ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಕಬ್ಬಿನ ಹಣ ಪಾವತಿಸದ್ದಕ್ಕೆ ಸಚಿವರ ಸಕ್ಕರೆ ಕಾರ್ಖಾನೆಗೆ ರೈತರಿಂದ ಮುತ್ತಿಗೆ

    ಕಬ್ಬಿನ ಹಣ ಪಾವತಿಸದ್ದಕ್ಕೆ ಸಚಿವರ ಸಕ್ಕರೆ ಕಾರ್ಖಾನೆಗೆ ರೈತರಿಂದ ಮುತ್ತಿಗೆ

    ಬೀದರ್: ಕಬ್ಬಿನ ಹಣ ಪಾವತಿ ಮಾಡದ ಹಿನ್ನಲೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾಲೀಕತ್ವದ ಬಿಎಸ್ ಕೆ ಸಕ್ಕರೆ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

    ಬೀದರ್ ತಾಲೂಕಿನ ಮನ್ನಳ್ಳಿ ಬಳಿ ಇರುವ ಸಚಿವರ ಸಕ್ಕರೆ ಕಾರ್ಖಾನೆಗೆ ಇಂದು ಸಂಜೆ 200ಕ್ಕೂ ಹೆಚ್ಚು ರೈತರು ಆಗಮಿಸಿ, ಬಾಕಿ ಹಣಕ್ಕಾಗಿ ಒತ್ತಾಯಿಸಿದ್ದಾರೆ. ಈ ವೇಳೆ ಕಾರ್ಖಾನೆ ಆಡಳಿತ ಮಂಡಳಿಯನ್ನು ತರಾಟೆ ತೆಗೆದುಕೊಂಡ ರೈತರು, ಹಲವು ತಿಂಗಳಿನಿಂದ ಬಾಕಿ ಹಣ ಪಾವತಿಸುವಂತೆ ಕೇಳಿಕೊಂಡು ಬಂದಿದ್ದೇವೆ. ಆದರೆ ನೀವು ಮಾತ್ರ ಹಣ ನೀಡದೆ ಸತಾಯಿಸುತ್ತಿದ್ದೀರಿ. ಕೂಡಲೇ ನಮ್ಮ ಖಾತೆಗೆ ಹಣ ಹಾಕಿ ಎಂದು ಒತ್ತಾಯಿಸಿದರು.

    ಕಾರ್ಖಾನೆಯ ಆವರಣದಲ್ಲಿ ನೂರಾರು ರೈತರು ಸೇರಿದ್ದರಿಂದ ಭದ್ರತೆ ಉದ್ದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಾರ್ಖಾನೆ ಆಡಳಿತ ಮಂಡಳಿಯು ರೈತರ ಮನವೊಲಿಸಲು ಯಶಸ್ವಿಯಾಗಿದ್ದು, ಒಂದು ತಿಂಗಳ ಒಳಗಾಗಿ ಬಾಕಿ ಹಣ ಪಾವತಿಸುವ ಭರವಸೆ ನೀಡಿದೆ.

    ನೀವು ಭರವಸೆ ನೀಡುತ್ತಲೇ ಬಂದಿದ್ದೀರಿ. ಒಂದು ತಿಂಗಳಿನಲ್ಲಿ ಬಾಕಿ ಹಣ ಪಾವತಿಸದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ರೈತರು ಖಡಕ್ ಎಚ್ಚರಿಕೆ ನೀಡಿ, ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

  • ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕಕ್ಕೆ ಆಗಲ್ವಾ – ಕ್ಯೂ ನಿಂತಿದ್ದ ಗರ್ಭಿಣಿಯರನ್ನ ನೋಡಿ ಸಚಿವರ ತರಾಟೆ

    ಬೀದರ್: ಸ್ಕ್ಯಾನಿಂಗ್ ಗಾಗಿ ಎರಡು ಗಂಟೆಗಳಿಂದ ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರು ಹಾಗೂ ರೋಗಿಗಳನ್ನು ನೋಡಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಬ್ರಿಮ್ಸ್ ನಿರ್ದೇಶಕರಿಗೆ ಫುಲ್ ತರಾಟೆ ತೆಗೆದುಕೊಂಡು ಘಟನೆ ನಡೆದಿದೆ.

    ಕ್ಯೂನಲ್ಲಿ ನಿಂತಿರುವ ಗರ್ಭಿಣಿಯರಿಗೆ ನಿಮ್ಮ ಯೋಗ್ಯತೆಗೆ 30 ಕುರ್ಚಿ ಹಾಕುವುದಕ್ಕೆ ಆಗಲ್ವಾ. ಗರ್ಭಿಣಿಯರು ಬೆಳಗ್ಗೆಯಿಂದಲೂ ನಿಂತಿದ್ದರು ಕುರ್ಚಿ ಹಾಕಲು ನಿಮ್ಮ ಬಳಿ ಹಣ ಇಲ್ವಾ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬ್ರಿಮ್ಸ್ ನಿರ್ದೇಶಕರಿಗೆ ರೋಗಿಗಳ ಮುಂದೆಯೇ ಫಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಚಿವರು ಗರಂ ಆದ ತಕ್ಷಣ ಬ್ರಿಮ್ಸ್ ನಿರ್ದೇಶಕ ಕ್ಷೀರಸಾಗರ ಇನ್ನು ಟೆಂಡರ್ ಆಗಬೇಕು ಸರ್ ಎಂದಿದ್ದಾರೆ. ಅದಕ್ಕೆ ಸಚಿವರು ಟೆಂಡರ್ ಬಿಡ್ರೀ ಒಂದು ಗಂಟೆಯಲ್ಲಿ ಇಲ್ಲಿ ಕುರ್ಚಿ ಹಾಕಬೇಕು ಎಂದು ಸಚಿವರು ತಾಕೀತು ಮಾಡಿದ್ದಾರೆ. ಬೆಳಗ್ಗೆಯಿಂದ ನಾವು ಸ್ಕ್ಯಾನಿಂಗ್‍ಗಾಗಿ ಕ್ಯೂ ನಿಂತಿದ್ದೇವೆ. ನಮಗೆ ಹೋಗಲಿ ಗರ್ಭಿಣಿಯರು ಕ್ಯೂನಲ್ಲಿ ನಿಂತರೂ ಆರೋಗ್ಯ ಅಧಿಕಾರಿ ಸ್ಕ್ಯಾನಿಂಗ್ ಮಾಡಲು ರೆಡಿ ಇಲ್ಲಾ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪಕ್ಷೇತರರಿಗೆ ಸ್ಥಾನ ನೀಡಿ ಆಪರೇಷನ್ ಕಮಲಕ್ಕೆ ಬ್ರೇಕ್: ಸಚಿವ ಬಂಡೆಪ್ಪ ಕಾಶೆಂಪುರ

    ಪಕ್ಷೇತರರಿಗೆ ಸ್ಥಾನ ನೀಡಿ ಆಪರೇಷನ್ ಕಮಲಕ್ಕೆ ಬ್ರೇಕ್: ಸಚಿವ ಬಂಡೆಪ್ಪ ಕಾಶೆಂಪುರ

    ಬೀದರ್: ಮೈತ್ರಿ ಸರ್ಕಾರದಲ್ಲಿ ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡುವ ಮೂಲಕ ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿದ್ದೇವೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಈಗ ಅವರಿಗೆ ಸೆಟ್ ಬ್ಯಾಕ್ ಆಗಿದ್ದು, ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿ, ಜೆಡಿಎಸ್ ಶಾಸಕರು ಜೆಡಿಎಸ್ ಪಕ್ಷದಲೇ ಇರುತ್ತಾರೆ. ಇಬ್ಬರು ಪಕ್ಷೇತರರು ನಮ್ಮ ಕಡೆ ಬಂದ ಕಾರಣ ಈ ಸರ್ಕಾರ ಸುಭದ್ರವಾಗಿದೆ ಎಂದರು.

    ಶಾಸಕ ಸುಧಾಕರ್ ಹಾಗೂ ಬಿಸಿ ಪಾಟೀಲ್ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವರಾಗಬೇಕೆಂಬ ಅಪೇಕ್ಷೆ ಎಲ್ಲರಿಗೂ ಇರುತ್ತೆ. ಈ ಅಸಮಾಧಾನವನ್ನು ಎರಡು ಪಕ್ಷದ ಹೈಕಮಾಂಡ್ ಸರಿಪಡಿಸಲಿದ್ದಾರೆ ಎಂದರು.

  • ಕೈ ನಾಯಕರು ಹಾದಿ ಬೀದಿಯಲ್ಲಿ ಬಾಯಿಗೆ ಬಂದಂತೆ ಮಾತನಾಡೋದನ್ನು ನಿಲ್ಲಿಸಬೇಕು: ಸಚಿವ ಪುಟ್ಟರಾಜು

    ಕೈ ನಾಯಕರು ಹಾದಿ ಬೀದಿಯಲ್ಲಿ ಬಾಯಿಗೆ ಬಂದಂತೆ ಮಾತನಾಡೋದನ್ನು ನಿಲ್ಲಿಸಬೇಕು: ಸಚಿವ ಪುಟ್ಟರಾಜು

    ಬೆಂಗಳೂರು: ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಅಜಯ್ ಸಿಂಗ್ ಪದಗ್ರಹಣ ಸಮಾರಂಭಕ್ಕೆ ಜೆಡಿಎಸ್ ನಾಯಕರ ಗೈರಿಗೆ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಸಮರ್ಥನೆ ಕೊಟ್ಟಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡಿದರೆ ಹೀಗೆ ಆಗುತ್ತದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನು ಓದಿ: ನಮಗೆ ಯಾರು ಅನಿವಾರ್ಯ ಇಲ್ಲ, ನಾವು ಎಲ್ಲರಿಗೂ ಅನಿವಾರ್ಯ – ಎಲ್ಲದ್ದಕ್ಕೂ ನಾವು ರೆಡಿ ಎಂದ ಸುರೇಶ್ ಗೌಡ

    ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಮ್ಮ ಮೂಲವನ್ನು ಗಮನಿಸಬೇಕು. ಸಿಎಂ ಕುಮಾರಸ್ವಾಮಿ ಅವರು ಮೆಚ್ಯೂರಿಟಿ ಇರುವುದಕ್ಕೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿರುವುದು. ಹಾದಿ ಬೀದಿಯಲ್ಲಿ ನಿಂತು ಮಾತನಾಡುವುದನ್ನು ಬಿಡಬೇಕು. ಕಾಂಗ್ರೆಸ್ಸಿನವರ ವರ್ತನೆಯಿಂದಾಗಿ ನಾವು ಯಾರೂ ಅಜಯ್ ಸಿಂಗ್ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಅಜಯ್ ಸಿಂಗ್ ನಮಗೆ ಆತ್ಮೀಯರು. ಆದರೆ ಕಾಂಗ್ರೆಸ್‍ನವರ ಹೇಳಿಕೆಯಿಂದಾಗಿ ಕಾರ್ಯಕ್ರಮಕ್ಕೆ ಗೈರು ಹಾಜರಿ ಹಾಕಿದ್ದೇವೆ. ಪದೇ ಪದೇ ಕೆಣಕಿದರೆ ಉತ್ತರ ಕೊಡಬೇಕಾಗುತ್ತದೆ. ಕಾಂಗ್ರೆಸ್‍ನವರು ಈ ವರ್ತನೆಯನ್ನು ಬಿಡಬೇಕು ಎಂದು ಸಚಿವರು ಹೇಳಿದ್ದಾರೆ.

    ಹಿಂದೆ ಬಿಜೆಪಿ ಜೊತೆ ಸೇರಿ ಉತ್ತಮ ಆಡಳಿತ ನೀಡಿದ್ದೇವೆ. ಕೃಷ್ಣದೇವರಾಯನ ಆಡಳಿತ ಮರುಕಳಿಸಿದಂತಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಹೇಗಿತ್ತು ಎಂಬುದನ್ನು ಹೇಳಿದ್ದೇನೆ ಅಷ್ಟೇ. ಈಗ ಬಿಜೆಪಿ ಜೊತೆ ಹೋಗುತ್ತೇವೆ ಎಂದಿಲ್ಲ ಎಂದು ಪುಟ್ಟರಾಜು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಅನಿವಾರ್ಯವಾಗಿ ಶರಣಾಗಿದ್ದೇವೆ, ಕಳೆದ 20 ವರ್ಷಗಳಲ್ಲಿ ದಿ ಬೆಸ್ಟ್ ಸಿಎಂ ಅಂದ್ರೆ ಸಿದ್ದರಾಮಯ್ಯ: ರಾಯರೆಡ್ಡಿ

    ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ ಪ್ರತಿಕ್ರಿಯಿಸಿ, ಕಾಂಗ್ರೆಸ್ ಕೆಳಹಂತದ ನಾಯಕರನ್ನು ಮೊದಲು ಹದ್ದುಬಸ್ತಿನಲ್ಲಿಡಬೇಕು. ಮನಸ್ಸಿಗೆ ಬಂದಂತೆ ಮಾತನಾಡಬಾರದು. ಸರ್ಕಾರದ ಯಾವುದೇ ಬೆಳವಣಿಗೆಗೆ ಸಂಬಂಧಿಸಿದಂತೆ ಮಾತನಾಡಲು ಜೆಡಿಎಸ್ ವರಿಷ್ಠ ದೇವೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಇದ್ದಾರೆ. ತಮ್ಮ ನಾಯಕರನ್ನು ಖುಷಿ ಪಡಿಸಲು ಕಾಂಗ್ರೆಸ್ ಶಾಸಕರು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಇತ್ತೀಚೆಗಷ್ಟೆ ಶಾಸಕ ಸೋಮಶೇಖರ್ ಅವರು ಬೆಂಗಳೂರಿಗೆ ಯಾವುದೇ ಅಭಿವೃದ್ಧಿ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಹಾಗಾದರೆ ಮೆಟ್ರೋ ಎರಡನೇ ಹಂತಕ್ಕೆ ಕ್ಲಿಯರೆನ್ಸ್ ಕೊಟ್ಟಿದ್ದು ಯಾರು? ಎಲಿವೇಟೆಡ್ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಯಾರು? ದೇಶದಲ್ಲೇ ಕುಮಾರಸ್ವಾಮಿ ಅವರು ಅತ್ಯುತ್ತಮ ಮುಖ್ಯಮಂತ್ರಿ ಅಂತಾ ಹೊಗಳುತ್ತಿರುವಾಗ ಇವರು ಏನೇನೋ ಹೇಳಿಕೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು.

    https://www.youtube.com/watch?v=jB2geNxJJtU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬಿಜೆಪಿ ಶಾಸಕರೇ ನಮ್ಮ ಕಡೆ ಬರ್ತಾರೆ : ಬಂಡೆಪ್ಪ ಕಾಶೆಂಪುರ

    ಬಿಜೆಪಿ ಶಾಸಕರೇ ನಮ್ಮ ಕಡೆ ಬರ್ತಾರೆ : ಬಂಡೆಪ್ಪ ಕಾಶೆಂಪುರ

    ವಿಜಯಪುರ: ಬಿಜೆಪಿ ನಾಯಕರಿಗೆ ತಮ್ಮ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಅಂತ ಭಯ ಶುರುವಾಗಿದೆ. ಆದರಿಂದ ಆಪರೇಷನ್ ಕಮಲ, ಜೆಡಿಎಸ್- ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ತಾರೆ ಅಂತ ಹುಸಿಬಾಂಬ್ ಹಾಕ್ತಾರೆ ಅಷ್ಟೇ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ವ್ಯಂಗ್ಯವಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನು ಸ್ವಲ್ಪದಿನದಲ್ಲಿ ಮೈತ್ರಿ ಸರ್ಕಾರ ಸ್ಥಿರವಾಗಿ ನಡೆಯುತ್ತಿದೆ ಅಂತ ಅರ್ಥವಾದ ಮೇಲೆ ಬಿಜೆಪಿ ಶಾಸಕರೇ ನಮ್ಮ ಕಡೆ ಬರ್ತಾರೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸುಮ್ಮನೆ ನಮ್ಮ ಸರ್ಕಾರದ ಮೇಲೆ ಬಿಜೆಪಿ ಅವರು ಸುಳ್ಳು ಆರೋಪ ಮಾಡ್ತಾರೆ. ಪ್ರಧಾನಿ ಮೋದಿ ಅವರು ಸುಳ್ಳು ಮಾಹಿತಿ ನಂಬಿ ಕಾಂಗ್ರೆಸ್ ಅವರು ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್ ರೀತಿ ನೋಡುತ್ತಿದ್ದಾರೆ ಅಂತ ಹೇಳಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.

    ಸಚಿವ ಎಂ.ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಬ್ಬರು ಹಿರಿಯರು, ದೊಡ್ಡವರ ಬಗ್ಗೆ ನಾನೇನು ಮಾತನಾಡಲ್ಲ ಎಂದರು.

    ಮುಂಬರುವ ಬಜೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಅವರಿಂದ ಭರ್ಜರಿ ದಾಖಲೆ ಪ್ರಮಾಣದ ಕೊಡುಗೆ ಇದೆ. ಅಲ್ಲದೆ ಸಾಲಮನ್ನಾ ವಿಷಯದಲ್ಲಿ ಯಾವ ರೈತರಿಗೂ ನೋಟಿಸ್ ನೀಡಿಲ್ಲ. ಸಾಲಮನ್ನಾದ ಯೋಜನೆಯಿಂದ ಅನರ್ಹರಿಗೆ ಲಾಭವಾಗುವುದು ತಪ್ಪಲಿ ಎನ್ನುವ ಉದ್ದೇಶದಿಂದ ರೈತರಿಂದ ದಾಖಲೆಗಳ ಸಂಗ್ರಹ ಕಾರ್ಯವನ್ನು ನಡೆಸುತ್ತಿದ್ದೇವೆ. ಸರ್ಕಾರ ಫಸ್ಟ್ ಕ್ಲಾಸ್ ಆಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು.

    ಹಾಗೆಯೇ ಕಾಂಗ್ರೆಸ್ ಜೆಡಿಎಸ್‍ನ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಇದೆಲ್ಲ ಬಿಜೆಪಿಯವರ ಹುಸಿಬಾಂಬ್ ಅಷ್ಟೇ. ಏಳು ತಿಂಗಳಿನಿಂದ ಬಿಜೆಪಿಯವರು ಹಾಕುತ್ತಿರುವ ಎಲ್ಲ ಬಾಂಬ್‍ಗಳು ಠುಸ್ ಆಗಿವೆ. ಬಿಜೆಪಿಗರು ಅಸ್ತಿತ್ವ ಕಳೆದುಕೊಳ್ಳುವ ಭೀತಿ ಶುರುವಾಗಿದೆ ಅದಕ್ಕೆ ಹೀಗೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ಸ್ವಲ್ಪ ಹೊಂದಾಣಿಕೆ ಕೊರತೆ ಇದೆ. ಅದನ್ನು ಸರಿಪಡಿಸಿಕೊಳ್ಳಲಾಗುತ್ತದೆ ಎಂದು ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತ ಇರುವುದನ್ನ ಪರೋಕ್ಷವಾಗಿ ಬಂಡೆಪ್ಪ ಕಾಶೆಂಪುರ ಅವರು ಒಪ್ಪಿಗೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv