Tag: bandeppa kashampur

  • ಶಾಸಕರ ಮನವೊಲಿಕೆಯಿಂದ ಕೊನೆಗೂ ಲಸಿಕೆ ಪಡೆದ ಅಜ್ಜಿ

    ಶಾಸಕರ ಮನವೊಲಿಕೆಯಿಂದ ಕೊನೆಗೂ ಲಸಿಕೆ ಪಡೆದ ಅಜ್ಜಿ

    ಬೀದರ್: ಕೋವಿಡ್‌ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದ ವಯೋವೃದ್ಧೆಯ ಮನವೊಲಿಸಿ ಕೊನೆಗೂ ಲಸಿಕೆ ಹಾಕಿಸುವಲ್ಲಿ ಶಾಸಕರೊಬ್ಬರು ಯಶಸ್ವಿಯಾಗಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.

    ತಾಲ್ಲೂಕಿನ ಖಾಶೆಂಪುರ ಪಿ. ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ 85 ವಯಸ್ಸಿನ ರತ್ನಮ್ಮ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ವೇಳೆ ಸ್ವತಃ ಶಾಸಕ ಬಂಡೆಪ್ಪ ಖಾಶೆಂಪುರ್‌ ಅವರು ಅಜ್ಜಿಯ ಮನೆಗೆ ಬಂದು ಲಸಿಕೆ ಪಡೆಯುವಂತೆ ಅವರ ಮನೆವೊಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯ 25 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು

    ನನಗೆ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಗೆ ಅಲೆದು ದಣಿದಿದ್ದೇನೆ. ಹೀಗಾಗಿ ನಾನು ಲಸಿಕೆ ಪಡೆಯುವುದಿಲ್ಲ ಎಂದು ವೃದ್ಧೆ ಪಟ್ಟು ಹಿಡಿದಿದ್ದಾರೆ. ಆಗ ಶಾಸಕರು, ವಾರಕ್ಕೆ ಒಂದು ಬಾರಿ ನಾವೇ ಬಂದು ನಿಮ್ಮ ಆರೋಗ್ಯ ತಪಾಸಣೆ ಮಾಡುತ್ತೇವೆ. ವೈದ್ಯಕೀಯ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಶಾಸಕರ ಮನವೊಲಿಕೆಯಿಂದ ವೃದ್ಧೆ ಕೊನೆಗೂ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಒಮಿಕ್ರಾನ್ ಆತಂಕ – ಸೋಂಕಿತ ರಾಷ್ಟ್ರಗಳಿಂದ ಬರೋರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

    ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಿ ಓಮಿಕ್ರಾನ್‌ ಆತಂಕ ಮೂಡಿಸಿದೆ. ಹೊಸ ತಳಿ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ಪ್ರತಿಯೊಬ್ಬರೂ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಒತ್ತಿ ಹೇಳಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದೆ.

  • ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಬೀದರ್: ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುವಾಗ ಎರಡು ಬಾರಿ ಕರೆಂಟ್ ಕಟ್ಟಾಗಿದ್ದಕ್ಕೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಗರಂ ಆಗಿದ್ದ ಘಟನೆ ಬೀದರ್‍ ರಂಗಮಂದಿರದಲ್ಲಿ ನಡೆದಿದೆ.

    ಇಂದು ಸಚಿವರಿಗೆ ದಲಿತ ಪರ ಸಂಘಟನೆಗಳಿಂದ ಸನ್ಮಾನ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಈ ವೇಳೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಗರಂ ಆದ ಸಚಿವರು ರೈತರಿಗಾಗಿ ನಿರಂತರ ಜ್ಯೋತಿ ನೀಡಬೇಕು ಹಾಗೂ ಸಮಸ್ಯೆ ಇರುವ ಕಡೆ ದುರಸ್ಥಿ ಕಾರ್ಯ ನಡೆಸ ಬೇಕು ಎಂದು ಜೆಎಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆ ಅದರು ಸಮಸ್ಯೆ ಬಗೆಹರಿದಿಲ್ಲ ಎಂದು ಗರಂ ಆದರು.

    ರೈತರು ನಿರಂತವಾಗಿ ಈ ಕುರಿತು ತಮಗೇ ದೂರು ನೀಡುತ್ತಾರೆ. ವಿದ್ಯುತ್ ಸರಿಯಾಗಿ ನೀಡದ ಹಿನ್ನೆಲೆ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗಿ ಹೋಗಿದೆ. ರೈತರು ಅಧಿಕಾರಿಗಳಿಗೆ ಫೋನ್ ಮಾಡಿ ಸುಸ್ತಾಗಿ ಕೊನೆಗೆ ನಮಗೆ ಫೋನ್  ಮಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ಜಿಟಿಡಿಗೆ ಖಾತೆ ಬದಲಾವಣೆ?- ಎಚ್‍ಡಿಡಿ ಜೊತೆ ಸಿಎಂ ಮಾತುಕತೆ

    ಜಿಟಿಡಿಗೆ ಖಾತೆ ಬದಲಾವಣೆ?- ಎಚ್‍ಡಿಡಿ ಜೊತೆ ಸಿಎಂ ಮಾತುಕತೆ

    ಬೆಂಗಳೂರು: ಜೆಡಿಎಸ್‍ನಲ್ಲಿ ಅಸಮಾಧಾನ ಶಮನ ಯತ್ನ ಮುಂದುವರೆದಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ ದೇವೇಗೌಡರನ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿದ್ದಾರೆ.

    ಜಿಟಿ ದೇವೇಗೌಡ ಅವರು ಸಹಕಾರ ಹಾಗೂ ಅಬಕಾರಿ ಎರಡರಲ್ಲಿ ಒಂದು ಖಾತೆಯನ್ನು ಬಯಸಿದ್ದು, ಈಗಾಗಲೇ ಕುಮಾರಸ್ವಾಮಿ ಜಿ.ಟಿ. ದೇವೇಗೌಡರ ಖಾತೆ ಬದಲಾವಣೆಗೆ ಈಗಾಗಲೇ ಅಸ್ತು ಎಂದಿದ್ದಾರೆ. ಬಂಡೆಪ್ಪ ಕಾಶಂಪುರ್ ಬಳಿ ಇರುವ ಸಹಕಾರ ಖಾತೆ ವಾಪಸ್ ಪಡೆದರೆ ಮತ್ತೆ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಆದ್ದರಿಂದ ಈ ಹಿನ್ನೆಲೆಯಲ್ಲಿ ಬಂಡೆಪ್ಪ ಅವರ ಮನವೊಲಿಸಿ ಮುಂದುವರೆಯಲು ಯತ್ನಿಸಿದ್ದಾರೆ.

    ಈ ಖಾತೆ ಬದಲಾವಣೆ ಕುರಿತು ತಂದೆಯ ಜೊತೆ ಸಿಎಂ ಚರ್ಚೆ ಮಾಡಿದ್ದು, ಜಿಟಿ ದೇವೇಗೌಡ ಕೂಡ ಮಾಜಿ ಪ್ರಧಾನಿಗಳ ನಿವಾಸದಲ್ಲಿದ್ದಾರೆ. ಬಂಡೆಪ್ಪ ಕಾಶಂಪೂರ್ ಅವರ ಮನವೊಲಿಸುವ ಕಸರತ್ತು ನಡೆಯುತ್ತಿದ್ದು, ಕಾಶಂಪೂರ್ ಬಳಿ ಇರುವ ಸಹಕಾರ ಖಾತೆ ಜಿಟಿಡಿಗೆ ಕೊಡುವ ಸಾಧ್ಯತೆ ಇದೆ.

    ಈ ಬಗ್ಗೆ ಬಂಡೆಪ್ಪ ಕಾಶಂಪೂರ್, ಖಾತೆ ಬದಲಾವಣೆ ವಿಚಾರವೇ ತನಗೆ ಗೊತ್ತಿಲ್ಲ. ವರಿಷ್ಠರು ಏನು ತೀರ್ಮಾನ ತಗೋತಾರೆ ಅನ್ನುವುದು ಗೊತ್ತಿಲ್ಲ. ನಾನು ಸಚಿವ ಸ್ಥಾನವನ್ನೇ ಕೇಳಿದವನಲ್ಲ. ಹೀಗಾಗಿ ಖಾತೆ ಯಾವುದಾದರೇನು, ಎಲ್ಲವೂ ವರಿಷ್ಠರಿಗೆ ಬಿಟ್ಟಿದ್ದು. ಆದರೆ ತಕ್ಷಣವೇ ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ. ಸಹಕಾರ ಇಲಾಖೆಯ ಸಭೆ ಕರೆದಿದ್ದೇನೆ. ವರಿಷ್ಟರು ತನ್ನನ್ನು ಕರೆಯಬಹುದು. ಅಲ್ಲಿವರೆಗೆ ಕಾದು ನೋಡೋಣ ಎಂದು ಆಪ್ತರಲ್ಲಿ ಸಚಿವ ಬಂಡೆಪ್ಪ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

    ಜಟಿ ದೇವೇಗೌಡ ಅವರಿಗೆ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಸಿಕ್ಕಿತ್ತು. 8ನೇ ತರಗತಿ ಓದಿರುವ ಜಿಟಿಡಿಗೆ ಈ ಖಾತೆ ಸಿಕ್ಕಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ಜಿಟಿಡಿ ಬೆಂಬಲಿಗರು ಸಹ ವಿರೋಧ ವ್ಯಕ್ತಪಡಿಸಿ ಬೇರೆ ಖಾತೆ ನೀಡುವಂತೆ ಆಗ್ರಹಿಸಿದ್ದರು.