Tag: Bandepa Kashhepura

  • ಬೀದರ್‌ನಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ

    ಬೀದರ್‌ನಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವ

    ಬೀದರ್: ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಮತ್ತೆ ಎರಡು ಗ್ರಾಮಗಳಲ್ಲಿ ಭೂಮಿ ಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

    ಬೀದರ್ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ತಡರಾತ್ರಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸಿದ್ದಕ್ಕೆ ಮಂಗಲಗಿ ಗ್ರಾಮಸ್ಥರು ಆತಂಕಗೊಂಡು ಮನೆಯಿಂದ ಹೊರ ಬಂದಿದ್ದಾರೆ.

    ಮತ್ತೊಂದೆಡೆ ತಾಲೂಕಿನ ಸಿರಕಟನಹಳ್ಳಿಯಲ್ಲೂ ಒಂದು ಬಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಇದರಿಂದ ಭಯಗೊಂಡ ಗ್ರಾಮಸ್ಥರು ಮನೆಯಿಂದ ಹೊರಗಡೆ ಬಂದು ಜಾಗರಣೆ ಮಾಡಿದ್ದಾರೆ. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

    ವಿಷಯ ತಿಳಿದು ತಡರಾತ್ರಿ ಸಿರಕಟನಹಳ್ಳಿ ಗ್ರಾಮಕ್ಕೆ ಶಾಸಕ ಬಂಡೆಪ್ಪ ಖಾಶೆಂಪೂರ್ ಭೇಟಿ ನೀಡಿ ಪರಿಶೀಲನೆ ಮಾಡಿ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದಕ್ಕೆ ಹಾಗೂ ಭೂಮಿಯಿಂದ ಕೇಳಿ ಬರುತ್ತಿರುವ ನಿಗೂಢ ಶಬ್ದಕ್ಕೆ ಈ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಇದು ಭೂಕಂಪನವಲ್ಲ, ಮಳೆ ಜಾಸ್ತಿಯಾಗಿದ್ದರಿಂದ ಈ ರೀತಿಯಾಗುತ್ತಿದೆ ಎಂದು ಗ್ರಾಮಸ್ಥರಿಗೆ ಶಾಸಕರು ತಿಳಿಸಿದರು. ಇದನ್ನೂ ಓದಿ: ವಿದ್ಯುತ್‌ ನೀಡದಿದ್ದಕ್ಕೆ ಅಖಿಲೇಶ್‌ ಯಾದವ್‌ ಮೊದಲು ಕ್ಷಮೆಯಾಚಿಸಲಿ: ಯೋಗಿ ಆದಿತ್ಯನಾಥ್

  • ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸಿಗದೆ ಗರ್ಭಿಣಿ ಪರದಾಟ!

    ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸಿಗದೆ ಗರ್ಭಿಣಿ ಪರದಾಟ!

    ಬೀದರ್: ತುಂಬು ಗರ್ಭಿಣಿಗೆ ಸ್ಟ್ರೆಚರ್ ನೀಡದ ಪರಿಣಾಮ ಮಹಡಿಯಿಂದ ಮಹಡಿ ಸುತ್ತಾಡಿ ಗರ್ಭಿಣಿ ನರಕಯಾತನೆ ಅನುಭವಿಸಿದ ಅಮಾನವೀಯ ಘಟನೆ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಒಂದು ಕಡೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಮೊತ್ತೊಂದು ಕಡೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ ತುಂಬು ಗರ್ಭಿಣಿಗೆ ಸಿಬ್ಬಂದಿ ಸ್ಟ್ರೆಚರ್ ನೀಡದೆ ನಿರ್ಲಕ್ಷ್ಯ ತೊರಿದ್ದಾರೆ. ಹೆರಿಗೆ ವಾಡ್9 ಸಿಗದೇ ಮಹಡಿಯಿಂದ ಮಹಡಿ ಸುತ್ತಾಡಿ ಹೊಟ್ಟೆ ನೋವು ಕಾಣಿಸಿಕೊಂಡು ಗರ್ಭಿಣಿ ಸುಸ್ತಾಗಿ ನರಕಯಾತನೆ ಅನುಭವಿಸಿದ್ದಾರೆ.

    ಬೀದರ್ ತಾಲೂಕಿನ ಕಾಶೆಂಪೂರ್ ಗ್ರಾಮದ ರೇಷ್ಮಾ ಎಂಬ ತುಂಬು ಗರ್ಭಿಣಿ ಜಿಲ್ಲಾಸ್ಪತ್ರೆಗೆ ಬಂದು ನರಕಯಾತನೆ ಅನುಭವಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪೂರ್ ಸ್ವಗ್ರಾಮದ ಗರ್ಭಿಣಿ ಮಹಿಳೆಗೆ ಈ ಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಪದೇ ಪದೇ ಈ ರೀತಿ ನಡೆಯಿವ ಅವಮಾನವೀಯ ಘಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತಿಲ್ಲ.