Tag: bandemutt

  • ಬಸವಲಿಂಗ ಶ್ರೀ ಆತ್ಮಹತ್ಯೆ ಕೇಸ್- ಬಂಧಿತರ ಮೊಬೈಲ್ FSLಗೆ ರವಾನೆ

    ಬಸವಲಿಂಗ ಶ್ರೀ ಆತ್ಮಹತ್ಯೆ ಕೇಸ್- ಬಂಧಿತರ ಮೊಬೈಲ್ FSLಗೆ ರವಾನೆ

    ರಾಮನಗರ: ಬಂಡೆ ಮಠದ ಶ್ರೀ (BandeMutt Shree) ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪೊಲೀಸರ ವಶದಲ್ಲಿರುವ ಮೂವರು ಆರೋಪಿಗಳನ್ನೂ ಎರಡು ದಿನಗಳಿಂದ ನಿರಂತರ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳ ಮೊಬೈಲ್ ಗಳನ್ನು  ವಿಧಿವಿಜ್ಞಾನ ಪ್ರಯೋಗಾಲಯ (FSL) ಗೆ ಕಳಹಿಸಲಾಗಿದ್ದು, ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿರುವ ವೀರಶೈವ ಲಿಂಗಾಯತ ಮುಖಂಡ ಸಚ್ಚಿದಾನಂದ ಮೂರ್ತಿ (Sacchidanand Murthy) ಯನ್ನೂ ಸಹ ವಿಚಾರಣೆ ನಡೆಸಲಾಗಿದೆ.

    ಬಸವಲಿಂಗ ಶ್ರೀಗಳ ಡೆತ್ ನೋಟ್ ನಲ್ಲಿ ಉಲ್ಲೇಖ ಆಗಿರೋ ವೀರಶೈವ ಲಿಂಗಾಯತ ಮುಖಂಡ ಸಚ್ಚಿದಾನಂದ ಮೂರ್ತಿಗೆ ಮಾಗಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಡೆತ್ ನೋಟ್ ನಲ್ಲಿ ಸಚ್ಚಿದಾನಂದ ಮೂರ್ತಿ ಕೂಡಾ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ರು ಎಂಬ ಅಂಶ ಹೊರಬಂದ ಹಿನ್ನೆಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅ.28ರಂದೇ ನೋಟಿಸ್ ನೀಡಿದ್ರು. ಮುಂದುವರಿದ ಭಾಗವಾಗಿ ನಿನ್ನೆ ಸಚ್ಚಿದಾನಂದ ಮೂರ್ತಿ ಮಾಗಡಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.

    ಕಸ್ಟಡಿಯಲ್ಲಿರೋ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಮತ್ತು ಮಹದೇವಯ್ಯನ ಮೊಬೈಲ್ ಗಳನ್ನ ಎಫ್‍ಎಸ್‍ಎಲ್ ತನಿಖೆಗೆ ಒಳಪಡಿಸಿರೋ ಪೊಲೀಸರು. ಟೆಕ್ನಿಕಲ್ ಎವಿಡೆನ್ಸ್ ಗಳ ಮೇಲೆ ಗಮನಹರಿಸಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೊಗಳನ್ನೇ ಆಧಾರವಾಗಿ ಇರಿಸಿಕೊಂಡು ಅದನ್ನು ರೆಕಾರ್ಡ್ ಮಾಡಿರುವ ಮೂಲ ಮೊಬೈಲ್ ಹುಡುಕಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಡು ಪ್ರಾಣಿಗಳ ದಾಳಿಯಿಂದ ಮೃತರಾದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಿ – ಜೆಡಿಎಸ್ ಶಾಸಕರ ಆಗ್ರಹ

    ಆರೋಪಿಗಳ ಮೊಬೈಲ್‍ಗಳು ಪೊಲೀಸರ ಕೈಗೆ ಬರುವ ಹೊತ್ತಿಗೆ ಅವುಗಳಲ್ಲಿದ್ದ ಬಹುತೇಕ ಎಲ್ಲ ಮಾಹಿತಿ ಡಿಲೀಟ್ ಮಾಡಲಾಗಿದ್ದು, ವಾಟ್ಸಪ್ ಚಾಟ್‍ಗಳನ್ನೂ ಕ್ಲಿಯರ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಕಸ್ಟಡಿಯಲ್ಲಿರೋ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಆರೋಪಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆ ಬಳಿಕ ಮೂವರು ಆರೋಪಿಗಳನ್ನು ಕರೆದೊಯ್ದು ಹನಿಟ್ರ್ಯಾಪ್ ಗೆ ಪ್ಲಾನ್ ಮಾಡಿರುವ ಕಣ್ಣೂರು ಮಠದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ ಎನ್ನಲಾಗಿದೆ.

    ಒಟ್ಟಾರೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವನ್ನ ಬೇಧಿಸಿದ್ದಷ್ಟೂ ತಿರುವುಗಳು ಹೆಚ್ಚಾಗುತ್ತಿವೆ. ಇನ್ನು ಎರಡು ದಿನ ಆರೋಪಿಗಳನ್ನ ಕಸ್ಟಡಿಯಲ್ಲಿಟ್ಟುಕೊಳ್ಳಲಿರೋ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿ ಆರೋಪಿಗಳ ಬಾಯ್ಬಿಡಿಸ್ತಾರಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್

    ಬಂಡೇಮಠ ಶ್ರೀಗಳ ಆತ್ಮಹತ್ಯೆ ಕೇಸ್- ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್

    ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ (BandeMutt Basavalinga Swamji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಮೇಜರ್ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಯಾಗಿರುವ ವೀರಶೈವ ಲಿಂಗಾಯತ ಮುಖಂಡನಿಗೆ ನೋಟಿಸ್ ನೀಡಲಾಗಿದೆ.

    ಡೆತ್‍ನೋಟ್‍ನಲ್ಲಿ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖ ಆಗಿದ್ದರಿಂದ ಮಾಗಡಿ ಪೋಲಿಸರು (Magadi Police) ನೋಟಿಸ್ ನೀಡಿದ್ದಾರೆ. ಸಚ್ಚಿದಾನಂದ ಮೂರ್ತಿಯಿಂದಲೂ ಅಪಪ್ರಚಾರ ಎಂದು ಬಸವಲಿಂಗ ಶ್ರೀಗಳು ಬರೆದಿದ್ದರು. ಹೆಸರು ಪ್ರಸ್ತಾಪ ಹಿನ್ನಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ನಿಟ್ಟನಲ್ಲಿ ವಿಚಾರಣೆ ನಡೆಸಲಾಗುತ್ತದೆ. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

     

    ಪ್ರಕರಣ ಸಂಬಂಧ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಡೆತ್‍ನೋಟ್‍ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ ಆಗ್ತೀದೆ ಎಂದು ಬಸವಲಿಂಗ ಶ್ರೀ ಉಲ್ಲೇಖಿಸಿದ್ದಾರೆ. ಇದನ್ನ ಬೆನ್ನತ್ತಿರುವ ಪೊಲೀಸರು ಆ ಮತ್ತೊಬ್ಬ ಪ್ರತಿಷ್ಠಿತ ಮಠದ ಶ್ರೀಗೂ ಬಲೆ ಬೀಸಿದ್ದಾರೆ. ಬಂಧಿತ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ಬಸವಲಿಂಗ ಶ್ರೀಗೆ ಕಿರುಕುಳ ನೀಡಿದ್ದ ಆ ಮತ್ತೊಂದು ಮಠದ ಸ್ವಾಮೀಜಿ ಯಾರು..? ಬಂಡೇಮಠಕ್ಕೂ ಆ ಮತ್ತೊಬ್ಬ ಸ್ವಾಮೀಜಿಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗಳನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಅದು ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಆದ್ರೆ, ಈ ಕುರಿತು ಮತ್ಯಾವ ಸ್ವಾಮೀಜಿಯನ್ನೂ ವಿಚಾರಣೆ ನಡೆಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ರಾಮನಗರ: ಕಂಚುಗಲ್ ಬಂಡೇಮಠ (BandeMutt) ಶ್ರೀ ಆತ್ಮಹತ್ಯೆ ಪ್ರಕರಣವು ದಿನಕ್ಕೊಮದು ತಿರುವು ಪಡೆದುಕೊಳ್ಳುತ್ತಿದೆ. ಕಾವಿಯಿಂದಲೇ ಕಾವಿಗೆ ಖೆಡ್ಡಾ ತೋಡಿರುವ ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನೀಲಾಂಬಿಕೆ (Neelambike) ಅಲಿಯಾಸ್ ಚಂದು ಮೋಹಕ್ಕೆ ಬಂಡೇಮಠ ಶ್ರೀ ಬಿದ್ದಿದ್ದಾರೆ. ಕಣ್ಣೂರು ಶ್ರೀ, ನೀಲಾಂಬಿಕೆ, ಮಹದೇವಯ್ಯ ಮೊಬೈಲ್ (Mobile) ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ನೀಲಾಂಬಿಕೆ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಶಾಕ್ ಆಗಿದೆ. ನೀಲಾಂಬಿಕೆ ಮೊಬೈಲ್‍ನಲ್ಲಿ ಸ್ಫೋಟಕ ರಹಸ್ಯ ವೀಡಿಯೋ ಲಭ್ಯವಾಗಿರುವ ಮಾಹಿತಿ ಲಭಿಸಿದೆ.

    ನೀಲಾಂಬಿಕೆ ಫೋನ್‍ನಲ್ಲಿ ಮಠಾಧೀಶರು, ಪ್ರಭಾವಿಗಳ ಮೊಬೈಲ್ ನಂಬರ್ ದೊರೆತಿದೆ. ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್ ಮಾಡಲಾಗುತ್ತಿತ್ತು. ಪ್ರತಿನಿತ್ಯ ಎಲ್ಲರಿಗೂ ಬೆಳಗ್ಗಿನ ವಂದನೆ ಹಾಗೂ ಶುಭರಾತ್ರಿ ಮೆಸೇಜ್ ಕಳುಹಿಸಲಾಗುತ್ತಿತ್ತು. ಬಸವಲಿಂಗಶ್ರೀಗಳ ಜೊತೆ ನೀಲಾಂಬಿಕೆ ಆಡಿಯೋ ಹಾಗೂ ವಿಡಿಯೋ ಕಾಲ್ ಮಾಡಲಾಗುತ್ತಿತ್ತು. ಇದನ್ನೂ ಓದಿ: ಬಂಡೆ ಶ್ರೀ ಪ್ರಖ್ಯಾತಿಯನ್ನು ಸಹಿಸದೇ ಹನಿಟ್ರ್ಯಾಪ್ – ಕಣ್ಣೂರು ಶ್ರೀ ಕುತಂತ್ರ ಬಯಲು

    ಬಸವಲಿಂಗ ಸ್ವಾಮೀಜಿ (Basavalinga Swmiji) ಗೆ ನೀಲಾಂಬಿಕೆ ಪ್ರತಿನಿತ್ಯ ಮೆಸೇಜ್ ಮಾಡುತ್ತಿದ್ದಳು. ಒಂದೊಂದು ಮೆಸೇಜ್ ಮಾಡಿ ಪರಿಚಯವಾಗಿದ್ದಾಳೆ. ನಾನು ಸಹ ಮಠದ ಭಕ್ತೆ, ನನಗೆ ಸನ್ಯಾಸತ್ವದ ಬಗ್ಗೆ ಮಾಹಿತಿ ಇದೆ. ನನಗೆ ಸನ್ಯಾಸತ್ವದ ದೀಕ್ಷೆ ಕೊಡಿ ಎಂದಿದ್ದಳು. ದಿನ ಕಳೆದಂತೆ ಸ್ನೇಹ, ಗೆಳತನ ಹೆಚ್ಚಾಗಿ ವಾಟ್ಸಪ್ ಕಾಲ್‍ನಲ್ಲಿ ಸಂಭಾಷಣೆ ಬಳಿಕ ವೀಡಿಯೋ ಕಾಲ್‍ನಲ್ಲಿ ಮಾತು ಆರಂಭವಾಗಿದೆ. ನಂತರ ಎಲ್ಲಾ ರೆಕಾರ್ಡ್ ಮಾಡಿ ಬಲೆಗೆ ಸ್ಕೆಚ್ ಹಾಕಲಾಗಿದೆ. ಇದನ್ನೂ ಓದಿ: ಬಂಡೆ ಶ್ರೀಗೆ ಖೆಡ್ಡಾ ತೋಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅರೆಸ್ಟ್‌

    ಮೊದ ಮೊದಲಿಗೆ 500, 1000 ಸಹಾಯ ಕೇಳ್ತಿದ್ದ ನೀಲಾಂಬಿಕೆ, ಶ್ರೀಗಳ ನಗ್ನ ವೀಡಿಯೋ ಹಾಗೂ ಏಕಾಂತದ ವೀಡಿಯೋ ಸೆರೆ ಹಿಡಿದಿದ್ದಾಳೆ. ವೀಡಿಯೋ ಮಾಡಿದ ಬಳಿಕ ಕೋಟಿ ಕೋಟಿಗೆ ಬ್ಲಾಕ್‍ಮೇಲ್ ಶುರು ಮಾಡಿದ್ದಾಳೆ. ನಂತರ ವೀಡಿಯೋವನ್ನು `ಆ’ ನಾಯಕನಿಗೆ ಕಳಿಸಿದ್ದಾಳೆ ಎಂಬ ಮಾಹಿತಿ ದೊರಕಿದೆ. ಒಟ್ಟಿನಲ್ಲಿ ನೀಲಾಂಬಿಕೆಯನ್ನು ಬಳಸಿಕೊಂಡೇ ಬಸವಲಿಂಗಾಶ್ರೀಗೆ ಕಣ್ಣೂರು ಶ್ರೀ ಖೆಡ್ಡಾ ತೋಡಿದ್ದಾರೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?

    ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್‍ನಲ್ಲಿ ಮತ್ತೊಂದು ಮಠದ ಸ್ವಾಮೀಜಿ ಭಾಗಿ?

    ರಾಮನಗರ: ಬಂಡೆ ಮಠ (Bande Mutt) ದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ತನಿಖೆ ಮುಂದುವರಿದಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಸವಲಿಂಗ ಶ್ರೀ (Basavalinga Shree) ಗಳನ್ನು ಖೆಡ್ಡಾಗೆ ಕೆಡವಲು ಮತ್ತೊಂದು ಮಠದ ಸ್ವಾಮೀಜಿ ಕೂಡ ಕೈ ಜೋಡಿಸಿದ್ದರು ಎಂಬ ಮಾತುಗಳು ಕೇಳಿಬರುತ್ತಿದ್ದಂತೆ. ಆ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ ಎಂಬ ವಿಚಾರಗಳು ಹರಿದಾಡುತ್ತಿದೆ.

    ದಿನ ಕಳೆದಂತೆ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್ ಬಗ್ಗೆ ಊಹಾಪೋಹಗಳ ಜೊತೆ ವದಂತಿಗಳೂ ಹೆಚ್ಚುತ್ತಿವೆ. ಒಂದೆಡೆ ಪೊಲೀಸರ ವಿಚಾರಣೆ ತೀವ್ರಗೊಂಡರೆ ಮತ್ತೊಂದೆಡೆ ಶ್ರೀಗಳನ್ನು ಖೆಡ್ಡಾಗೆ ಕೆಡವಿದ ಟೀಂ ಬಗ್ಗೆ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬರ್ತಿವೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಮತ್ತೊಂದು ಮಠದ ಸ್ವಾಮೀಜಿ ಎಂಬ ವಿಚಾರ ಇದೀಗ ಚರ್ಚೆಗೆ ಬಂದಿರೋದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಪ್ರಕರಣದಲ್ಲಿ ಓರ್ವ ಸ್ವಾಮೀಜಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

    ಇತ್ತ ಪೊಲೀಸರ ವಿಚಾರಣೆ ತೀವ್ರಗೊಳ್ತಿದ್ದಂತೆಯೇ ಆ ಸ್ವಾಮೀಜಿಗೆ ನಡುಕ ಉಂಟಾಗಿದೆ. ಬಸವಲಿಂಗ ಶ್ರೀ ಮೇಲಿನ ದ್ವೇಷಕ್ಕೆ ಹನಿಟ್ರ್ಯಾಪ್ ಅಸ್ತ್ರವನ್ನ ಬಳಸಿದವರಲ್ಲಿ ಪ್ರಮುಖ ಪಾತ್ರ ವಹಿಸಿರೋದು ಮತ್ತೊಂದು ಮಠದ ಶ್ರೀಗಳು ಎಂದು ಹೇಳಲಾಗ್ತಿದೆ. ಆದರೆ ಆ ಮತ್ತೊಂದು ಮಠದ ಸ್ವಾಮೀಜಿ ಯಾರು.? ಬಂಡೇ ಮಠಕ್ಕೂ ಮತ್ತೊಬ್ಬ ಸ್ವಾಮೀಜಿಗೂ ಏನು ಸಂಬಂಧ ಅನ್ನೊದು ನಿಗೂಢವಾಗಿದೆ. ಇನ್ನು ವಿಚಾರಣೆ ಎದುರಿಸುತ್ತಿರುವಾಗಲೇ ಆ ಮತ್ತೊಬ್ಬ ಶ್ರೀ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಅಂತಲೂ ಹೇಳಲಾಗ್ತಿದೆ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಅಲ್ಲದೇ ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಓರ್ವ ಶಾಸಕನಿಗೂ ಕರೆ ಮಾಡಿ ತಮ್ಮನ್ನು ಟ್ರ್ಯಾಪ್ ನಲ್ಲಿ ಸಿಲುಕಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸಹಾಯ ಮಾಡಿ ಅಂತಲೂ ಕೇಳಿಕೊಂಡಿದ್ದಾರೆ ಎಂದು ಶ್ರೀಗಳು ಮನವಿ ಮಾಡಿದ್ದರಂತೆ. ಅಷ್ಟಕ್ಕೂ ಆ ಶಾಸಕರಾದ್ರೂ ಯಾರು.? ಶಾಸಕರಿಗೂ ಹಾಗೂ ಶ್ರೀಗಳಿಗೂ ಏನು ಸಂಬಂಧ ಆನ್ನೋ ಹೊಸ ಚರ್ಚೆ ಕೂಡಾ ಮಠದ ಸುತ್ತಮುತ್ತ ನಡೆಯುತ್ತಿದೆ. ಒಟ್ಟಾರೆ ಶ್ರೀಗಳ ಆತ್ಮಹತ್ಯೆ ಕುರಿತು ಹಲವು ಪ್ರಶ್ನೆಗೆ ಪೊಲೀಸರೇ ಉತ್ತರಿಸಬೇಕಿದೆ. ಶ್ರೀಗಳಿಗೆ ಖೆಡ್ಡಾ ತೋಡಿದ ಆ ಗ್ಯಾಂಗ್ ಯಾವುದು, ಅದರಲ್ಲಿ ಯಾರೆಲ್ಲಾ ಇದ್ದಾರೆ.? ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಯಾರು ಎಂಬುದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.

    Live Tv
    [brid partner=56869869 player=32851 video=960834 autoplay=true]