Tag: Bandahalli Village

  • ಹುಟ್ಟುಹಬ್ಬಕ್ಕೆ ಪ್ರಿಯತಮೆ ವಿಶ್ ಮಾಡದಿದ್ದಕ್ಕೆ ಪ್ರಿಯಕರ ನೇಣಿಗೆ ಶರಣು

    ಹುಟ್ಟುಹಬ್ಬಕ್ಕೆ ಪ್ರಿಯತಮೆ ವಿಶ್ ಮಾಡದಿದ್ದಕ್ಕೆ ಪ್ರಿಯಕರ ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ಹುಟ್ಟುಹಬ್ಬದ ದಿನ ಪ್ರಿಯತಮೆ ವಿಶ್ ಮಾಡಲಿಲ್ಲ ಅಂತ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಂಡಹಳ್ಳಿ ಗ್ರಾಮದ ಶಿವಕುಮಾರ್ (27) ಆತ್ಮಹತ್ಯೆಗೆ ಶರಣಾದ ಪ್ರಿಯಕರ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಿವಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕಾರು ಚಾಲಕ ಕಂ ಮಾಲೀಕನಾಗಿದ್ದ ಶಿವಕುಮಾರ್ ಹಾಗೂ ಬೆಂಗಳೂರು ಮೂಲದ ಯುವತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಕೆಲ ದಿನಗಳಿಂದ ಯುವತಿ ಶಿವಕುಮಾರ್ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಆದರೂ ಫೆಬ್ರವರಿ 26ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಶಿವಕುಮಾರ್ ಪ್ರಿಯತಮೆ ಕರೆ ಮಾಡುತ್ತಾಳೆ ಎನ್ನುವ ನಂಬಿಕೆಯಲ್ಲಿದ್ದ.

    ಪ್ರಿಯತಮೆ ಮಾತ್ರ ವಿಶ್ ಮಾಡಲಿಲ್ಲ. ಇದರಿಂದ ಮನನೊಂದ ಪ್ರಿಯಕರ ಶಿವಕುಮಾರ್, ನನ್ನ ಸಾವಿಗೆ ಯಾರೂ ಕಾರಣರಲ್ಲ. ಸಾವಿಗೆ ಆ ಯುವತಿ ಸಹ ಕಾರಣವಲ್ಲ. ಆಕೆಗೆ ಏನೂ ಮಾಡಬೇಡಿ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.