ಬೆಂಗಳೂರು: ರಸ್ತೆಗೆ ತ್ಯಾಜ್ಯ ಎಸೆದವರಿಗೆ ತಕ್ಕ ಪಾಠ ಕಲಿಸಲು ಬಿಎಸ್‌ಡಬ್ಲ್ಯೂಎಂಎಲ್ (Bengaluru Solid Waste Management Limited) ಸಿಬ್ಬಂದಿ ಅವರು ಹಾಕಿದ ಕಸವನ್ನು ಅವರ ಮನೆ ಮುಂದೆಯೇ ಸುರಿದು 100 ರೂ. ದಂಡ ವಿಧಿಸಿದ್ದಾರೆ.
ಬೆಂಗಳೂರಿನ (Bengaluru) ದತ್ತಾತ್ರೇಯ ಟೆಂಪಲ್ ರಸ್ತೆ, ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿ ನಿವಾಸಿಗಳು ಮನೆ ಮುಂದೆ ಆಟೋ ಬಂದರೂ ಕೂಡ ಕಸ ಹಾಕದೇ, ಕಸವನ್ನು ರಸ್ತೆಗೆ ಎಸೆಯುತ್ತಿದ್ದರು. ಇದನ್ನು ಗಮನಿಸಿದ ಬಿಎಸ್‌ಡಬ್ಲ್ಯೂಎಂಎಲ್ ಸಿಬ್ಬಂದಿ ಅದೇ ಕಸವನ್ನು ಎತ್ತಿಕೊಂಡು ಹಾಕಿದವರ ಮನೆ ಮುಂದೆಯೇ ಸುರಿದು, 100 ರೂ. ದಂಡ ಹಾಕಿದ್ದಾರೆ.ಇದನ್ನೂ ಓದಿ: ನೇರಳೆ ಮಾರ್ಗ ಮಧ್ಯೆಯೇ ನಿಂತ ನಮ್ಮ ಮೆಟ್ರೋ ರೈಲು – ಒಂದು ಗಂಟೆ ಕಾಲ ಪರದಾಡಿದ ಪ್ರಯಾಣಿಕರು
ಈ ಮೂಲಕ ನಿವಾಸಿಗಳಿಗೆ ಬಿಎಸ್‌ಡಬ್ಲ್ಯೂಎಂಎಲ್ ಸಿಬ್ಬಂದಿ ಪಾಠ ಕಲಿಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರು: ಫುಡ್ ಡೆಲಿವರಿ ನೆಪದಲ್ಲಿ ಬಂದು ವೃದ್ಧೆ ಕೈ-ಕಾಲು ಕಟ್ಟಿಹಾಕಿ ಮನೆಯಲ್ಲಿ 8 ಲಕ್ಷ ರೂ. ಹಣ ದರೋಡೆ ಮಾಡಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.
ಆರೋಪಿಗಳು ಫುಡ್ ಡೆಲಿವರಿ ಇದೆ ಅಂತಾ ಬಾಗಿಲ ಬೆಲ್ ಮಾಡಿದ್ದಾರೆ. ಡೋರ್ ಓಪನ್ ಮಾಡುತ್ತಿದ್ದಂತೆ ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯನ್ನು ತಳ್ಳಿಕೊಂಡು ಒಳಗಡೆ ನುಗ್ಗಿದ್ದಾರೆ. ವೃದ್ಧೆಗೆ ಚಾಕು ತೋರಿಸಿ, ಕೈ-ಕಾಲು ಕಟ್ಟಿ ಹಾಕಿ ಎಂಟು ಲಕ್ಷ ದರೋಡೆ ಮಾಡಿದ್ದಾರೆ.
ಕೆಲಸದಿಂದ ತೆಗೆದಿದ್ದಕ್ಕೆ ಕೃತ್ಯ
ಮನೆ ಡ್ರೈವರ್ ಕೆಲಸದಿಂದ ತೆಗೆದಿದ್ದಕ್ಕೆ ಈ ಕೃತ್ಯ ಎಸಗಿರೋದು ಬೆಳಕಿಗೆ ಬಂದಿದೆ. ವೃದ್ಧೆ ಕನಕಪುಷ್ಪ ಎಂಬವರ ಮಗ ರಾಹುಲ್ ಬಳಿ ಮಡಿವಾಳ ಎಂಬಾತ ನಾಲ್ಕು ತಿಂಗಳಿನಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಆತನ ಸಂಬಳ ಕ್ಲಿಯರ್ ಮಾಡಿ ಡ್ರೈವರ್ ಕೆಲಸದಿಂದ ತೆಗೆದು ಕಳುಹಿಸಿದ್ದರು. ಇದರಿಂದ ಕೋಪಗೊಂಡ ಮಡಿವಾಳ, ವೃದ್ಧೆಯ ಮಗ ಹೊರಗೆ ಹೋಗೋದನ್ನೆ ಕಾದಿದ್ದ.
ರಾಹುಲ್ ಹೊರಗೆ ಹೋಗ್ತಿದ್ದಂತೆ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಬಳಿ ಬಂದಿದ್ದ. ಡೆಲಿವರಿ ಬಾಯ್ ಅಂತಾ ಡೋರ್ ಬೆಲ್ ಮಾಡಿದ್ದಾರೆ. ಮೊದಲಿಗೆ ವೃದ್ಧೆ ಬಾಗಿಲು ತೆರೆಯುವುದಿಲ್ಲ. ನಾವು ಯಾವುದೇ ಆರ್ಡರ್ ಮಾಡಿಲ್ಲ ಅಂತ ಹೇಳುತ್ತಾರೆ. ಈ ವೇಳೆ ನಿಮ್ಮ ಮಗ ರಾಹುಲ್ ಅನ್ನೋರು ಆರ್ಡರ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಮಡಿವಾಳ ಸೇರಿ ನಾಲ್ವರು ಮನೆ ಒಳಗೆ ನುಗ್ಗಿದ್ದಾರೆ. ವೃದ್ಧೆ ಕನಕಪುಷ್ಪ ಕೈ-ಕಾಲು ಕಟ್ಟಿ ಕುತ್ತಿಗೆಗೆ ಚಾಕು ಇರಿದಿದ್ದಾರೆ. ನಂತರ ಎಂಟು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.
ಸದ್ಯ ವೃದ್ಧೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಶೀಲ ಶಂಕಿಸಿ ವ್ಯಕ್ತಿಯೊಬ್ಬ ಪತ್ನಿ (Wife) ಹಾಗೂ ಅತ್ತೆಯ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ ಘಟನೆ ಬನಶಂಕರಿಯಲ್ಲಿ ನಡೆದಿದೆ.
ತಲ್ವಾರ್‌ನಿಂದ ದಾಳಿ ನಡೆಸಿದ ಆರೋಪಿ ಆಸೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆಸೀಫ್ ತನ್ನ ಪತ್ನಿ ಹೀನಾ ಕೌಸರ್ (25) ಅತ್ತೆ ಫರ್ವಿನ್ ತಾಜ್ ಮೇಲೆ ದಾಳಿ ನಡೆಸಿದ್ದಾನೆ. ಜ.14ರಂದು ಬನಶಂಕರಿ ದೇಗುಲದ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
10 ವರ್ಷಗಳ ಹಿಂದೆ ತಾಯಿಯ ಅಣ್ಣನ ಮಗ ಆಸೀಫ್‌ನ ಜೊತೆ ಹೀನಾ ಕೌಸರ್ ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ವರ್ಷ ಪರ ಸ್ತ್ರೀ ಸಹವಾಸ ಮಾಡಿದ ಪತಿ, ಪತ್ನಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಾಲೇಜು ಸ್ನೇಹಿತರಿಗೆ ಪತ್ನಿ ಮಾಡಿದ್ದ ಮೆಸೇಜ್ ನೋಡಿ ಅಕ್ರಮ ಸಂಬಂಧ ಇದೆ ಎಂದು ನಿತ್ಯ ಕಿರುಕುಳ ನೀಡುತ್ತಿದ್ದ. ಕಾಟ ತಾಳದೆ 8 ತಿಂಗಳ ಹಿಂದೆ ಮಗಳ ಜೊತೆ ತವರು ಮನೆಗೆ ಬಂದಿದ್ದ ಪತ್ನಿ, ಜೀವನಕ್ಕಾಗಿ ಕೆಲಸಕ್ಕೆ ಸೇರಿದ್ದಳು. ಆದರೂ ಪತ್ನಿಯ ಶೀಲ ಶಂಕಿಸಿ ಅತ್ತೆ ಮನೆಗೆ ಬಂದು ಮೂರು ಬಾರಿ ಹಲ್ಲೆ ಯತ್ನ ನಡೆಸಿದ್ದ.
ಜ.14 ರಂದು ಅತ್ತೆ ಇಲ್ಲದಿದ್ದಾಗ ಏಕಾಏಕಿ ಮನೆಗೆ ನುಗ್ಗಿ ತಲ್ವಾರ್ ಮೂಲಕ ಪತ್ನಿ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಮನೆಗೆ ಬಂದ ಅತ್ತೆಯ ಮೇಲೂ ಸಹ ಆರೋಪಿ ದಾಳಿ ನಡೆಸಿದ್ದಾನೆ. ಕಿರುಚಾಟ ಕೇಳಿ ಅಕ್ಕಪಕ್ಕದವರು ಬರುತ್ತಿದ್ದಂತೆ ತಲ್ವಾರ್ ಬಿಟ್ಟು ಆರೋಪಿ ಪರಾರಿಯಾಗಿದ್ದ. ಗಾಯಗೊಂಡಿದ್ದ ಮಗಳು ಹಾಗೂ ತಾಯಿಯನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ತುಮಕೂರು: ಗುರಾಯಿಸಿದ್ದಾನೆಂದು ಆರೋಪಿಸಿ ಯುವಕನಿಗೆ 15 ಮಂದಿ ಯುವಕರಿದ್ದ ತಂಡ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತುಮಕೂರು (Tumakuru) ನಗರದ ಬನಶಂಕರಿ (Banashankari) ಬಳಿ ನಡೆದಿದೆ.
ಕುಶಾಲ್ (23) ಹಲ್ಲೆಗೆ ಒಳಗಾದ ಯುವಕ. ಕುಶಾಲ್ ಬನಶಂಕರಿ 2 ನೇ ಹಂತದ ಮರಳೂರು ದಿಣ್ಣೆ ಬಳಿ ನಿವಾಸಿಯಾಗಿದ್ದಾನೆ. ಬನಶಂಕರಿ ಬಳಿಯಿರುವ ಬಾಬಾ ಕೆಫೆ ಬಳಿ ಟೀ ಕುಡಿಯಲು ಹೋಗಿದ್ದ ವೇಳೆ ಕುಶಾಲ್ ಮೇಲೆ ಸುಮಾರು 15 ಯುವಕರಿದ್ದ ತಂಡ ಏಕಾಏಕಿ ಹಲ್ಲೆ ನಡೆಸಿದೆ. ನವೆಂಬರ್ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನಬಂದಂತೆ ಥಳಿಸುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ವಕ್ಫ್ ಆಸ್ತಿ ಭೂಕಬಳಿಕೆ ಹೆಚ್ಚಿದ್ದಕ್ಕೆ ಬಿಜೆಪಿಯಿಂದ ಹೆಚ್ಚು ನೋಟಿಸ್ ನೀಡಲಾಗಿದೆ – ಕುಮಾರ್ ಬಂಗಾರಪ್ಪ
ಹಲ್ಲೆಗೆ ಒಳಗಾದ ಕುಶಾಲ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ನಾನು ಟೀ ಕುಡಿಯುತ್ತಿದ್ದ ವೇಳೆ 15 ಜನರು ಹಲ್ಲೆ ಮಾಡಿದ್ದಾರೆ. ಏಕಾಏಕಿ ಬಂದು ಗುರಾಯಿಸುತ್ತೀಯಾ ಎಂದು 15 ಜನರ ಯುವಕರು ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಇದನ್ನೂ ಓದಿ: ಸುತ್ತಿಗೆಯಿಂದ ತಲೆಗೆ ಹೊಡೆದು ಮಗನಿಂದಲೇ ತಂದೆಯ ಹತ್ಯೆ
– ಫಾರಿನ್ ಕರೆನ್ಸಿ, ಚಿನ್ನ ಬೆಳ್ಳಿ ಜೊತೆ ಸಿಕ್ತು ಶಕ್ತಿ ಟಿಕೆಟ್
ಬೆಂಗಳೂರು: ನಗರದ ನಂಬರ್ ಒನ್ ಶ್ರೀಮಂತ ದೇಗುಲ ಬನಶಂಕರಿ ಸನ್ನಿಧಾನಕ್ಕೆ (Banashankari Temple) ಈ ತಿಂಗಳು ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ ಫಾರಿನ್ ಕರೆನ್ಸಿಗಳು ಹಾಗೂ ಇಡೀ ದೇಗುಲದ ಆಡಳಿತ ಮಂಡಳಿಗೆ ಅಚ್ಚರಿಯಾಗುವ ವಸ್ತು ಕೂಡ ಸಿಕ್ಕಿದೆ.
ಬೆಂಗಳೂರಿನ ಶ್ರೀಮಂತ ದೇಗುಲದಲ್ಲಿ ಮೊದಲ ಸ್ಥಾನ ಬನಶಂಕರಿ ದೇವಿಗೆ. ಈ ಬಾರಿ ದೇವಾಲಯದಲ್ಲಿ ಜಾತ್ರೆ ಇದ್ದಿದ್ರಿಂದ ದೇಗುಲದ ಹುಂಡಿ ಮತಷ್ಟು ತುಂಬಿ ತುಳುಕಿದೆ. ಬರೀ 32 ದಿನದಲ್ಲಿ ಭರ್ತಿ ಅರ್ಧಕೋಟಿ ಹತ್ರತ್ರ ಅಂದ್ರೆ 47 ಲಕ್ಷದ 92 ಸಾವಿರ ಸಂಗ್ರಹವಾಗಿದೆ. ವಿಶೇಷ ಅಂದ್ರೆ ಮಹಿಳೆಯರು ಶಕ್ತಿ ಯೋಜನೆಯ ಬಸ್ ಟಿಕೆಟ್‍ನ್ನು (Bus Ticket) ಕೂಡ ಹುಂಡಿಗೆ ಹಾಕುತ್ತಿದ್ದಾರೆ ಇದು ಯಾವ ಕಾರಣಕ್ಕೆ ಅನ್ನೋದು ದೇಗುಲದವರಿಗೂ ಅಚ್ಚರಿ ತಂದಿದೆ. ಆದರೆ ಶಕ್ತಿ ಯೋಜನೆಯ ಬಳಿಕ ಹುಂಡಿಯಲ್ಲಿ ಬಿಎಂಟಿಸಿ ಟಿಕೆಟ್ ಸಿಗೋದು ಕೂಡ ಹೆಚ್ಚಾಗಿದೆಯಂತೆ.
ಕೇವಲ ಹುಂಡಿಗೆ ಲಕ್ಷ ಲಕ್ಷ ದುಡ್ಡು ಮಾತ್ರವಲ್ಲ ಚಿನ್ನ ಬೆಳ್ಳಿ ಕೂಡ ಬಂದಿದೆ. ಅಲ್ಲದೇ ವಿದೇಶಿ ಕರೆನ್ಸಿಗಳ ಹವಾ ಕೂಡ ಜೋರಾಗಿದೆ. ಯುಎಸ್, ಆಸ್ಟ್ರೇಲಿಯಾ, ಅರಬ್, ಡಾಲರ್ ಗಳು ಕೂಡ ಹುಂಡಿಯಲ್ಲಿ ಸಿಕ್ಕಿದೆ. ಇದರ ಜೊತೆಗೆ ಸಾಕಷ್ಟು ಜನ ಭಕ್ತರು ದೇವಿಗೆ ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಪತ್ರವನ್ನು ಬರೆದಿದ್ದಾರೆ. ಇದನ್ನೂ ಓದಿ: ಚಿಕ್ಕಪ್ಪನಿಂದಲೇ 11 ವರ್ಷದ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ
ಬನಶಂಕರಿ ದೇವಿ ಬೆಂಗಳೂರಿನ ಪಾಲಿಗೆ ಮಾತ್ರ ನಂಬಿಕೆಯ ದೇವಾಲಯ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಭಕ್ತರು ಕೂಡ ಇದ್ದಾರೆ. ಹೀಗಾಗಿಯೇ ದಿನದಿಂದ ದಿನಕ್ಕೆ ಭಕ್ತವೃಂದದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಬೆಂಗಳೂರು: ಪಿಕ್ ಪಾಕೆಟ್ (Pick Pocket) ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ತಂಡದ ವಿಚಾರಣೆ ಮಾಡಿದ ಪೊಲೀಸರಿಗೆ ಅವರ ಇಡೀ ಕುಟುಂಬವೇ ಕಳ್ಳತನ (Theft) ಮಾಡುವ ಕುಟುಂಬ (Family) ಎಂದು ತಿಳಿದು ಶಾಕ್ ಆದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರಿನ ಎಸ್.ಆರ್ ನಗರದ ಪೊಲೀಸರು ಪಿಕ್ ಪಾಕೆಟ್ ಪ್ರಕರಣದಲ್ಲಿ ತಂಡವೊಂದನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಈ ವಿಷಯ ಹೊರಬಿದ್ದಿದೆ. ಗಂಡ, ಹೆಂಡತಿ, ಅಣ್ಣ, ಭಾವ, ಮಕ್ಕಳು ಸೇರಿದಂತೆ ಆ ಕುಟುಂಬದ ಪ್ರತಿಯೊಬ್ಬರು ಕೂಡಾ ಕಳ್ಳರೇ ಆಗಿದ್ದರು. ಕಳ್ಳತನವೇ ಇವರ ಫುಲ್ ಟೈಂ ಜಾಬ್ ಆಗಿತ್ತು. ಅದರಿಂದಲೇ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂಬ ವಿಷಯವನ್ನು ಕೇಳಿ ಪೊಲೀಸರು ಇಂತಹವರು ಇರುತ್ತಾರ ಎಂದು ದಂಗಾಗಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಹೋಗಿದ್ದವರ ಮನೆ ಬೀಗ ಮುರಿದು ಕಳ್ಳತನ – ಆರೋಪಿ ಅರೆಸ್ಟ್
ಬನಶಂಕರಿ (Banashankari) ನಿವಾಸಿಗಳಾದ ವೇಲು, ಸುಂದರ್‌ರಾಜ್, ಮಹೇಶ್, ಸೇರಿದಂತೆ ಎಲ್ಲರೂ ಬೆಳಗಾದರೆ ಒಟ್ಟಿಗೆ ಒಂದು ಮೀಟಿಂಗ್ ಮಾಡುತ್ತಾರೆ. ಇಂದು ಯಾರು ಯಾವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಯಾವ ಬಸ್ ರೂಟ್ ಅಲ್ಲಿ ಪಿಕ್‌ಪಾಕೆಟ್ ಮಾಡಬೇಕು ಎಂಬುದನ್ನು ನಿರ್ಧರಿಸಿ ಕುಟುಂಬದ ಎಂಟೂ ಜನ ಬೇರೆ ಬೇರೆ ಕಡೆ ತೆರಳುತ್ತಿದ್ದರು. ಅದರಂತೆ ಕೆಲವರು ಜನರ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದರೆ ಇನ್ನೂ ಕೆಲವರು ರಶ್ ಇರುವ ಬಿಎಂಟಿಸಿ ಬಸ್‌ಗಳಲ್ಲಿ ಹತ್ತಿಕೊಂಡು ಪರ್ಸ್, ಮೊಬೈಲ್‌ಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು. ಇದನ್ನೂ ಓದಿ: ಬೆಂಗಳೂರಿನ ಶಂಕಿತ ಉಗ್ರರಿಗೆ ಗನ್ ಸಪ್ಲೈ ಮಾಡುತ್ತಿದ್ದ ಜಾಡು ಪತ್ತೆ ಹಚ್ಚಿದ ಸಿಸಿಬಿ
ಸಂಜೆ ಕದ್ದ ಮಾಲನ್ನು ಮಾರಿ ಬಿಂದಾಸ್ ಜೀವನ ನಡೆಸುತ್ತಿದ್ದರು. ಪರ್ಸ್, ಮೊಬೈಲ್, ಸಣ್ಣ ಪ್ರಮಾಣದ ಹಣಗಳನ್ನು ಕದ್ದರೆ ಜನರು ಅದನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಅಲ್ಲದೇ ಇಂತಹ ಸಣ್ಣ ಪುಟ್ಟ ವಿಷಯಗಳಿಗೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂಬ ಧೈರ್ಯದ ಮೇಲೆ ಇದನ್ನೇ ಫುಲ್‌ಟೈಂ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಇದೀಗ ಖತರ್‌ನಾಕ್ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ 25ಕ್ಕೂ ಹೆಚ್ಚು ಕೇಸ್‌ಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಸಿಕ್ಕಿ ಬೀಳುತ್ತಲೇ 5,000 ರೂ. ಲಂಚವನ್ನು ಜಗಿದು ನುಂಗಿದ ಕಂದಾಯ ಅಧಿಕಾರಿ
ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ ಎಸ್ ಬುರಡಿಕಟ್ಟಿ ಮತ್ತು ಸದಸ್ಯರು ಬೆಳ್ಳಿ ಗಣಪತಿಯನ್ನು ಇಂದು ಬನಶಂಕರಿ ದೇವಸ್ಥಾನದ ಸದಸ್ಯರಾದ ಶಂಕ್ರಪ್ಪ ಬುರಡಿಕಟ್ಟಿ, ಮಂಜುನಾಥ ಗೌಡ, ಶಿವಣ್ಣನವರ, ಶಿವಪ್ಪ ಹೆದ್ದೇರಿ, ನಾಗರಾಜ ಉದಗಟ್ಟಿ, ಬಸವರಾಜ ಕೊಪ್ಪದ ಮತ್ತು ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕಳೆದ ವಾರ ನಗರದ ಒಂದು ಕಡೆ ಮಗುವನ್ನು ಮಹಡಿಯಿಂದ ತಳ್ಳಿ ತಾಯಿಯೊಬ್ಬಳು ಕೊಲೆ ಮಾಡಿದ್ದಳು. ಈಗ ಬನಶಂಕರಿಯಲ್ಲಿ ತಾಯಿಯೊಬ್ಬಳು ಮಗುವಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸುದ್ದಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಸೈಮಾ ನಾರಾಯಣ್ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ. ತನ್ನ 10 ವರ್ಷದ ಮಗಳು ಆರಾಧನಾಗೆ ಮನೆಯಲ್ಲೇ ನೇಣು ಹಾಕಿ ಹತ್ಯೆ ಮಾಡಿದ ಬಳಿಕ ಸೈಮಾ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಸ್ತುತ ಪೊಲೀಸರು ಸೈಮಾ ಪತಿ ನಾರಾಯಣ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿ – ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕಿ
ವಿರಾಜಪೇಟೆ ಮೂಲದ ಪತ್ನಿ ಸೈಮಾ ಮುತ್ತಪ್ಪ, ಕೋಲಾರ ಮೂಲದ ಪತಿ ನಾರಾಯಣ್ ಕಳೆದ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಡೆಂಟಲ್ ಡಾಕ್ಟರ್ ಆಗಿದ್ದರು. ನಾರಾಯಣ್ ಮತ್ತು ಸೈಮಾ ಇಬ್ಬರು ಒಟ್ಟಿಗೆ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಸೈಮಾ ಮತ್ತು ಮಗಳು ಮನೆಯಲ್ಲಿನ ಪ್ರತ್ಯೇಕ ಕೋಣೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎರಡು ದಿನಗಳ ಬಳಿಕ ನಾರಾಯಣ್ ಮನೆಗೆ ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ನೋಡಿ ತಾಯಿಯೇ ಮಗಳನ್ನು ನೇಣಿಗೆ ಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಬ್ಬರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ತನಿಖೆಯಾಗಬೇಕಿದೆ. ಇದನ್ನೂ ಓದಿ: ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ
ವಿಷಯ ತಿಳಿದ ತಕ್ಷಣ ಆಸ್ಟ್ರೇಲಿಯಾದಲ್ಲಿದ್ದ ಸೈಮಾ ಸಹೋದರ ಬೆಂಗಳೂರಿಗೆ ಬಂದಿದ್ದಾರೆ. ಇಂದು ಪೊಲೀಸರಿಗೆ ದೂರು ನೀಡಿದ್ದು, ಇವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.
ಆಫ್ರೀನ್ ಖಾನಂ(28) ಕೊಲೆಯಾದ ದುರ್ದೈವಿ. ಬನಶಂಕರಿ ಠಾಣಾ ವ್ಯಾಪ್ತಿಯ ಯಾರಬ್ ನಗರದಲ್ಲಿ ಘಟನೆ ನಡೆದಿದೆ. ಯಾರಬ್ ನಗರದ ನಿವಾಸಿ ಆಫ್ರೀನ್ ಖಾನಂ ಎನ್ನುವ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಹಂತಕ ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ರಾತ್ರಿ ಆಫ್ರೀನ್ ಖಾನಂ ಗಂಡ ಮನೆಗೆ ಬಂದು ಬೀಗ ಒಡೆದು ಮನೆಯಲ್ಲಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ
ಪರಿಚಿತ ವ್ಯಕ್ತಿಯಿಂದಲೇ ಕೊಲೆಯಾಗಿರೋ ಬಗ್ಗೆ ಶಂಕೆ ಇದ್ದು, ಇವರಿಬ್ಬರು 8 ವರ್ಷದ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು ಎಂದು ಆಕೆಯ ಪತಿ ತಿಳಿಸಿದ್ದಾರೆ. ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಟೇರೆಸ್ ಮುಂದೆ ಮಕ್ಕಳು ಆಟವಾಡುವ ಮಕ್ಕಳ ಪೋಷಕರೇ ಎಚ್ಚರವಾಗಿರಿ. ಸ್ವಲ್ಪ ಯಾಮಾರಿದರೂ ಮಕ್ಕಳ ಪ್ರಾಣಕ್ಕೆ ಹಾನಿಯಾಗಬಹುದು. ಇದಕ್ಕೆ ಪೂರಕವೆಂಬಂತೆ ಆಟವಾಡುತ್ತಿದ್ದ 10 ವರ್ಷದ ಬಾಲಕ ಆಯತಪ್ಪಿ ಸಾವನಪ್ಪಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗಗನ್(10) ಮೃತ ಬಾಲಕನಾಗಿದ್ದಾನೆ. ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿಈ ಘಟನೆ ನಡೆದಿದ್ದು, ನಿನ್ನೆ ಸಂಜೆ ಅಪಾರ್ಟ್ ಮೆಂಟ್‍ನ ಟರೇಸ್‍ನಲ್ಲಿ ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ 5ನೇ ಮಹಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಅಕ್ಟೋಬರ್ ತಿಂಗಳು ಸ್ಪೆಷಲ್ – ವಿಶೇಷ ಪೋಸ್ಟ್ ಹಂಚಿಕೊಂಡ ಮೇಘನಾ
ಮಗನನ್ನು ಒಬ್ಬನೇ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಒಂಟಿಯಾಗಿದ್ದಾಗ ಸ್ನೇಹಿತರ ಜೊತೆ ಆಟವಾಡುವಾಗ ಆಯತಪ್ಪಿ ಕೆಳಬಿದ್ದು, ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಆರ್.ಆರ್.ನಗರ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಆದರೆ ನಿಜಕ್ಕೂ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರೋದಾ ಅಥವಾ ಬೇರೆ ಏನಾದರೂ ಅವಘಡ ಸಂಭವಿಸಿದೀಯ ಅನ್ನೋದು ತನಿಖೆಯಿಂದಷ್ಟೇ ತಿಳಿಯಬೇಕಿದೆ.