Tag: Banasawadi

  • ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ

    ಬೆಂಗಳೂರು: ಹೈಪರ್ ಟೆನ್ಷನ್ ಹಾಗೂ ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರುವ ಪತ್ನಿಯು ಪತಿಗೆ ಕಿರುಕುಳ ನೀಡಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಪತ್ನಿ ಹಾಗೂ ಅತ್ತೆಯ ಕಿರುಕುಳ ಹಾಗೂ ಹಲ್ಲೆಯಿಂದ ಬೇಸತ್ತು ಕರುಣಾಕರನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋದ ರೈತ ನೀರು ಪಾಲು

    ಮ್ಯಾಟ್ರಿಮೋನಿಯಲ್ಲಿ ಲೇಖನಾಶ್ರೀ ಪರಿಚಯವಾಗಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಕರುಣಾಕರಣ್ ಮದುವೆಯಾಗಿದ್ದ. ಇದೀಗ ಪತ್ನಿ ಹಾಗೂ ಆಕೆಯ ತಾಯಿ ಐದು ವರ್ಷದ ಹಿಂದಿನ ಕೆಲ ಖಾಸಗಿ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಕರುಣಾಕರನ್ ದೂರಿದ್ದಾರೆ.

    ಐದು ವರ್ಷದ ಫೋಟೋಗಳನ್ನ ಇಟ್ಟುಕೊಂಡು ತೊಂದರೆ ನೀಡಿದ್ದ ಹಿನ್ನೆಲೆಯಲ್ಲಿ ಕರುಣಾಕರನ್ ಚೆನ್ನೈಗೆ ತೆರಳಿದ್ದ. ಈ ವೇಳೆ ಪತ್ನಿ ಹಾಗೂ ಅತ್ತೆ ಮಿಸ್ಸಿಂಗ್ ಕಂಪ್ಲೆಂಟ್ ಕೂಡ ನೀಡಿದ್ದರು. ನಂತರ ಮನೆಗೆ ಬಂದಾಗ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪತ್ನಿ ಹಾಗೂ ಅತ್ತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರುಣಾಕರನ್ ದೂರಿನಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿಎಂಕೆ ಮುಖಂಡನ ಮೇಲೆ ಹಲ್ಲೆ ಪ್ರಕರಣ- ಐವರು ಪೊಲೀಸರ ವಶಕ್ಕೆ

    ಡಿಎಂಕೆ ಮುಖಂಡನ ಮೇಲೆ ಹಲ್ಲೆ ಪ್ರಕರಣ- ಐವರು ಪೊಲೀಸರ ವಶಕ್ಕೆ

    ಬೆಂಗಳೂರು: ಡಿಎಂಕೆ ಮುಖಂಡ ಗುರುಸ್ವಾಮಿ (DMK Leader Guruswamy Murthy) ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಮಧಿಸಿದಂತೆ ಇದೀಗ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.

    ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸರು ಕಳೆದ ಎರಡು ದಿನಗಳಿಂದ ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದರು. ಸದ್ಯ ತಮಿಳುನಾಡಿನ (Tamilnadu) ಮಧುರೈ ಹಾಗೂ ಧರ್ಮಪುರಿಯಲ್ಲಿ ಕಾರ್ಯಾಚರಣೆ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ರಾಜಕೀಯ ದ್ವೇಷಕ್ಕೆ ಕೊಲೆ ಯತ್ನ ನಡೆಸಿರೋ ಬಗ್ಗೆ ಮಾಹಿತಿ ದೊರೆತಿದೆ. ಇದೀಗ ವಶಕ್ಕೆ ಪಡೆದಿರುವ ಐವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

    ಏನಿದು ಪ್ರಕರಣ..?: ಗುರುಸ್ವಾಮಿ ಮೂರ್ತಿ ಕಾನೂನು ಸಮಸ್ಯೆ ಇರುವ ಸೈಟ್ ವಿಚಾರವಾಗಿ ಮಾತುಕತೆಗೆ ಬೆಂಗಳೂರಿಗೆ ಬಂದಿದ್ದ. ಭಾನುವಾರ ವಿಮಾನದ ಮೂಲಕ ಬಂದು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ. ಸೆ.4 ರಂದು ಸೋಮವಾರ ಮನೆಯೊಂದನ್ನು ಹುಡುಕಿ ಸಂಜೆ ಸೈಟ್ ಬಗ್ಗೆ ಮಾತುಕತೆ ಮಾಡಲು ಹೋಟೆಲ್‍ಗೆ ಹೋಗಿದ್ದ. ಬ್ರೋಕರ್ ಜೊತೆ ಬಾಣಸವಾಡಿಯ ಸುಖ್‍ಸಾಗರ್ ಹೋಟೆಲ್‍ನಲ್ಲಿ ಮಾತುಕತೆ ನಡೆಸುತ್ತಿದ್ದಾಗ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದ 5 ಮಂದಿ ಏಕಾಏಕಿ ಗುರುಸ್ವಾಮಿ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ಡಿಎಂಕೆ ನಾಯಕ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್

    ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಗುರುಸ್ವಾಮಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ದಾಳಿ ನಡೆದ ಹೋಟೇಲ್‍ನಲ್ಲಿ ಮಾಲೀಕರು ಹೋಮ-ಹವನ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಸ್ತ ಮುಗಿಸಿ ಮಾರನೇ ದಿನವೇ ಓಡಿ ಹೋಗಿದ್ದ ಪತಿರಾಯನನ್ನ ಹುಡುಕಿ ಕರೆತಂದ ಪೊಲೀಸರು

    ಪ್ರಸ್ತ ಮುಗಿಸಿ ಮಾರನೇ ದಿನವೇ ಓಡಿ ಹೋಗಿದ್ದ ಪತಿರಾಯನನ್ನ ಹುಡುಕಿ ಕರೆತಂದ ಪೊಲೀಸರು

    ಬೆಂಗಳೂರು: ಮದುವೆಯಾಗಿ, ಪ್ರಸ್ತ ಮುಗಿಸಿ ಮಾರನೇ ದಿನವೇ ಓಡಿ ಹೋಗಿದ್ದ ಗಂಡನನ್ನ ಬಾಣಸವಾಡಿ ಪೊಲೀಸರು ಹುಡುಕಿ ಕರೆತಂದಿದ್ದಾರೆ.

    ಮದುವೆಯಾದ ಮೂರೇ ದಿನಕ್ಕೆ ಅನುರಾಧ ಎಂಬವರನ್ನ ವರಿಸಿದ ಕೇಶವಮೂರ್ತಿ ನಾಪತ್ತೆಯಾಗಿದ್ದ. ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇಂದು ಅನುರಾಧ ಗಂಡ ಕೇಶವಮೂರ್ತಿಯನ್ನು ಕರೆತಂದು ವಿಚಾರಣೆ ಮಾಡಲಾಗ್ತಿದೆ.

    ಏಪ್ರಿಲ್ 2 ರಂದು ಧರ್ಮಸ್ಥಳದಲ್ಲಿ ಗುರುಹಿರಿಯರ ಸಮ್ಮುಖದಲ್ಲೇ ಅನುರಾಧ ಹಾಗೂ ಕೇಶವಮೂರ್ತಿಯ ವಿವಾಹವಾಗಿತ್ತು. ಏಪ್ರಿಲ್ 3 ರಂದು ಬೆಂಗಳೂರಿನ ಶ್ರೀರಾಮಪುರದಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ರು. ಮದುವೆಗೆ 2 ಲಕ್ಷ ನಗದು 50 ಗ್ರಾಂ ಚಿನ್ನ ನೀಡಲಾಗಿತ್ತು. ಮದುವೆ ಬಳಿಕ ಐದು ಲಕ್ಷ ನಗದು ಮತ್ತು ಚಿನ್ನಾಭರಣದೊಂದಿಗೆ ಕೇಶವಮೂರ್ತಿ ಪರಾರಿಯಾಗಿದ್ದ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಇದೀಗ ಕೇಶವಮೂರ್ತಿಯನ್ನ ಹುಡುಕಿ ಕರೆತಂದಿರೋ ಪೊಲೀಸರು ಎರಡೂ ಕುಟುಂಬಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.