Tag: banasavadi

  • ಡಿಎಂಕೆ ನಾಯಕ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್

    ಡಿಎಂಕೆ ನಾಯಕ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್

    ಬೆಂಗಳೂರು: ತಮಿಳುನಾಡಿನ ಡಿಎಂಕೆ (DMK) ನಾಯಕ ಎಂಕೆ ಅಳಗಿರಿಯ (MK Alagiri) ಆಪ್ತ ಮಧುರೈನ ವಿಕೆ ಗುರುಸ್ವಾಮಿ ಮೂರ್ತಿ (55) ಮೇಲೆ 5 ಜನರ ಗುಂಪು ದಾಳಿ ಮಾಡಿದೆ.

    ಗುರುಸ್ವಾಮಿ ಮೂರ್ತಿ ಕಾನೂನು ಸಮಸ್ಯೆ ಇರುವ ಸೈಟ್ ವಿಚಾರವಾಗಿ ಮಾತುಕತೆಗೆ ಬೆಂಗಳೂರಿಗೆ ಬಂದಿದ್ದ. ಭಾನುವಾರ ವಿಮಾನದ ಮೂಲಕ ಬಂದು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ. ಸೋಮವಾರ ಮನೆಯೊಂದನ್ನು ಹುಡುಕಿ ಸಂಜೆ ಸೈಟ್ ಬಗ್ಗೆ ಮಾತುಕತೆ ಮಾಡಲು ಹೋಟೆಲ್‌ಗೆ ಹೋಗಿದ್ದ. ಬ್ರೋಕರ್ ಜೊತೆ ಮಾತುಕತೆ ನಡೆಸುತ್ತಿದ್ದಾಗ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದ 5 ಜನರು ಏಕಾಏಕಿ ಗುರುಸ್ವಾಮಿ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.

    ತನ್ನ 20ನೇ ವಯಸ್ಸಿನಲ್ಲೇ ಗುರುಸ್ವಾಮಿ ಮೂರ್ತಿ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದ. ಜೀವ ಬೆದರಿಕೆ ಇದ್ದ ಹಿನ್ನೆಲೆ ಆತ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಮಧುರೈನಲ್ಲಿ ಸಾಕಷ್ಟು ದ್ವೇಷ ಕಟ್ಟಿಕೊಂಡಿದ್ದ. ಹತ್ಯೆಗೆ ಸ್ಕೆಚ್ ಹಾಕಿ 5 ಜನರ ತಂಡ ಇಂದು ಬೆಂಗಳೂರಿನ ಬಾಣಸವಾಡಿಯ ಸುಖ್‌ಸಾಗರ್ ಹೋಟೆಲ್‌ನಲ್ಲಿದ್ದಾಗ ದಾಳಿ ಮಾಡಿದೆ. ಇದನ್ನೂ ಓದಿ: ಚೆನ್ನೈ ಪೊಲೀಸರಿಗೆ ಲೀಗಲ್ ನೋಟಿಸ್ – ಉದಯ್‌ನಿಧಿ ವಿರುದ್ಧ ಎಫ್‌ಐಆರ್ ದಾಖಲಿಸಲು 7 ದಿನ ಕಾಲಾವಕಾಶ

    ಗುರುಸ್ವಾಮಿ ಜೊತೆಯಲ್ಲಿದ್ದವರಿಂದಲೇ ಆತನ ಬಗ್ಗೆ ಮಾಹಿತಿ ಲೀಕ್ ಮಾಡಿ, ದಾಳಿ ಮಾಡಿರುವ ಶಂಕೆ ಮೂಡಿದೆ. ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿರುವ ಗುರುಸ್ವಾಮಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂ ಸಮಾಜದ ಅನಿಷ್ಟಗಳಿಗೆ ಮುಸ್ಲಿಮರ ಆಕ್ರಮಣವೇ ಕಾರಣ: ಆರ್‌ಎಸ್ಎಸ್‌ ಮುಖಂಡ ಕೃಷ್ಣ ಗೋಪಾಲ್

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲ ನೆಲಸಮ!

    ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲ ನೆಲಸಮ!

    ಬೆಂಗಳೂರು: ಸಿಲಿಕಾನ್ ಸಿಟಿಯ ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲವನ್ನು ನೆಲಸಮ ಮಾಡಲಾಗಿದೆ.

    ಅನಧಿಕೃತ ಎಂದು ತಹಶೀಲ್ದಾರರ ನೇತೃತ್ವದಲ್ಲಿ ದೇಗುಲವನ್ನು ನಾಶ ಮಾಡಲಾಗಿದೆ. ಇದೀಗ ದೇಗುಲವನ್ನು ಕೆಡವಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರಗಡೆ ಪ್ರತಿಷ್ಠಾಪನೆ ಮಾಡಿದ ಆಂಜನೇಯ ದೇಗುಲದ ಹೊರಭಾಗವನ್ನು ಕೂಡ ಸಿಬ್ಬಂದಿ ಜೆಸಿಬಿಯಲ್ಲಿ ತೆಗೆಯುತ್ತಿದ್ದಾರೆ.

    ಮಂತ್ರಿ ಮಹಲ್ ಹಾಗೂ ಬಸವೇಶ್ವರ ವೃತ್ತ (ವಿಧಾನ ಸೌಧದ ಬಳಿ) ಇರುವ ದರ್ಗಾ ಅಧಿಕೃತವೇ ಇದಕ್ಕೆ ಸರ್ಕಾರ ಅನುಮತಿ ನೀಡಿದೆಯಾ? ಹಿಂದೂ ದೇವಾಲಯಗಳೇ ಏಕೆ ಗುರಿ, ರಾಜಕೀಯ ವ್ಯಕ್ತಿಗಳಿಗೆ ಕಾನೋನು ಇಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು: ಡಿಕೆಶಿ

    ಮೂರ್ತಿಯನ್ನು ನೀವೇ ತೆಗೆದುಕೊಂಡು ಹೋಗಿ ಇಲ್ಲವೇ ನಾವೇ ಎತ್ತಿಕೊಂಡು ಹೋಗುತ್ತೇವೆ ಎಂದು ಸಿಬ್ಬಂದಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ದೇವಾಲಯ ಆವರಣದೊಳಗೆ ಸಾರ್ವಜನಿಕರು ಜಮಾಯಿಸಿದ್ದಾರೆ. ಅಲ್ಲದೆ ಆಂಜನೇಯ ವಿಗ್ರಹ ತೆರವು ಹಿನ್ನೆಲೆಯಲ್ಲಿ ಕೊನೆಯ ಬಾರಿ ಪೂಜೆ ಸಲ್ಲಿಸಿ ಗ್ರಾಮಸ್ಥರು ಭಾವುಕರಾದರು.

  • ಸೂಚನೆ ನೀಡಿದ್ರೂ ಶರಣಾಗದ ಸರಗಳ್ಳ- ಬಂಧಿಸಲು ಹೋದ ಪೊಲೀಸ್ರ ಮೇಲೆಯೇ ಹಲ್ಲೆ!

    ಸೂಚನೆ ನೀಡಿದ್ರೂ ಶರಣಾಗದ ಸರಗಳ್ಳ- ಬಂಧಿಸಲು ಹೋದ ಪೊಲೀಸ್ರ ಮೇಲೆಯೇ ಹಲ್ಲೆ!

    ಬೆಂಗಳೂರು: ನಗರದಲ್ಲಿ ಸರಗಳ್ಳನ ಮೇಲೆ ತಡರಾತ್ರಿ ಬಾಣಸವಾಡಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಸುಹೇಲ್ ಅಲಿಯಾಸ್ ಪಪ್ಪಾಯಿ ಗುಂಡೇಟಿಗೆ ಒಳಗಾದ ಸರಗಳ್ಳ. ಸುಹೇಲ್ ಗ್ಯಾಂಗ್ ಗೆ ಶರಣಾಗಲು ಪೊಲೀಸರು ಮಾಹಿತಿ ನಿಡಿದ್ದರೂ ಶರಣಾಗದೇ ಇರುವುದರಿಂದ ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ.

    ನಗರದಲ್ಲಿ ಕಳೆದ ಮೂರು ದಿನಗಳಿಂದ ಸರಣಿ ಸರಗಳ್ಳತನದ ಒಂಬತ್ತು ಪ್ರಕರಣಗಳು ದಾಖಲಾಗಿತ್ತು. ಸುಹೇಲ್ ಗ್ಯಾಂಗ್ ಮಾಡಿರುವ ಖಚಿತ ಮಾಹಿತಿ ಮೇರೆಗ ಪೊಲಿಸರು ಆತನ ಬಂಧನಕ್ಕೆ ಬಾಣಸವಾಡಿ ಎಸಿಪಿ ಮಹದೇವಪ್ಪ ನೇತೃತ್ವದಲ್ಲಿ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆಯಲ್ಲಿ ಸುಹೇಲ್ ಆ್ಯಂಡ್ ಗ್ಯಾಂಗ್ ಬಾಣಸವಾಡಿ ಅಗ್ನಿಶಾಮಕದಳ ಸ್ಟೇಷನ್ ರಸ್ತೆಯಲ್ಲಿ ಇರುವುದಾಗಿ ಮಾಹಿತಿ ಬಂದಿತ್ತು.

    ಸ್ಥಳಕ್ಕೆ ತೆರಳಿದ ಬಾಣಸವಾಡಿ ಇನ್ಸ್ ಪೆಕ್ಟರ್ ಮುನಿಕೃಷ್ಣ ತಂಡ ಸುಹೇಲ್ ಬಂಧನಕ್ಕೆ ಮುಂದಾಗಿತ್ತು. ಈ ವೇಳೆಯಲ್ಲಿ ಸುಹೇಲ್ ಮಾರಕಾಸ್ತ್ರದಿಂದ ಸಬ್ ಇನ್ಸ್ ಪೆಕ್ಟರ್ ಶರತ್ ಹಾಗೂ ಮುಖ್ಯಪೇದೆ ರಫಿಕ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಮುನಿಕೃಷ್ಣ ಮೂರು ಸುತ್ತು ಫೈರಿಂಗ್ ಮಾಡಿದ್ದಾರೆ. ಮೊದಲು ಶರಣಾಗುವಂತೆ ಸೂಚನೆ ನೀಡಿದ್ದರೂ ಆರೋಪಿ ಸುಹೇಲ್ ಶರಣಾಗತಿ ಆಗಲಿಲ್ಲ. ಆಗ ಇನ್ಸ್ ಪೆಕ್ಟರ್ ಸುಹೇಲ್ ಎರಡು ಕಾಲಿಗೂ ಗುಂಡು ಹಾರಿಸಿದ್ದಾರೆ. ಹಲ್ಲೆಗೊಳಗಾದ ಸುಹೇಲ್ ಹಾಗೂ ಪೊಲೀಸರನ್ನು ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಸದ್ಯ ಸುಹೇಲ್ ಜೊತೆಯಿದ್ದ ಇಬ್ಬರು ಪರಾರಿಯಾಗಿದ್ದಾರೆ. ಸುಹೇಲ್ ವಿರುದ್ಧ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.

    ಸದ್ಯ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

    ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

    ಬೆಂಗಳೂರು: ‘ನನ್ನ ಗಂಡನಿಗೆ ಪುರುಷತ್ವ ಇಲ್ಲ’ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಚಾರ ಮೊದಲೇ ಗೊತ್ತಿದ್ದರೂ ತನ್ನ ಮಾವ ಹಾಗೂ ಅತ್ತೆ ನನ್ನ ಜೊತೆ ಮದುವೆ ಮಾಡಿಸಿದ್ದರು. ಈ ಮೂಲಕ ಇವರೆಲ್ಲಾ ಸೇರಿ ನನಗೆ ಮೋಸ ಮಾಡಿದ್ದಾರೆ ಎಂದು ಮಹಿಳೆ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲೇನಿದೆ?: 2014ರ ಜೂನ್ 5ರಂದು ನನಗೆ (ವಾಣಿ – ಹೆಸರು ಬದಲಿಸಲಾಗಿದೆ) ಎಡ್ವಿನ್ ಎಂಬಾತನ ಜೊತೆ ಮದುವೆ ಮಾಡಿಸಿದ್ದಾರೆ. ಮದುವೆ ಸಂದರ್ಭ ವರದಕ್ಷಿಣೆಯನ್ನೂ ನೀಡಿದ್ದೆವು.

    ಮದುವೆಯಾದ ಫಸ್ಟ್ ನೈಟಲ್ಲೇ ಪತಿಗೆ ಪುರುಷತ್ವ ಇಲ್ಲ. ಒಬ್ಬ ಗಂಡಸಿಗೆ ಇರಬೇಕಾದ ಯಾವುದೇ ರೀತಿಯ ಭಾವನೆಗಳಾಗಲೀ, ಲಕ್ಷಣಗಳಾಗಲೀ ಇಲ್ಲ ಎಂದು ನನಗೆ ಗೊತ್ತಾಯಿತು. ಇದರಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿ, ಮಾನಸಿಕವಾಗಿ ನೊಂದಿದ್ದೇನೆ.

    ನನ್ನ ಪತಿ ದುರ್ಬಲ ಎಂದು ಎಡ್ವಿನ್ ತಂದೆ ಆರೋಕ್ಯದಾಸ್ ಹಾಗೂ ತಾಯಿ ಸೆಲ್ವಿ ಅವರಿಗೆ ಗೊತ್ತಿತ್ತು. ಆದರೂ ಅವರು ಮದುವೆ ಮಾಡಿ ನನಗೆ ಮೋಸ ಮಾಡಿದ್ದಾರೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮಾರ್ಚ್ 15ರಂದು ನೀಡಿರುವ ದೂರಿನಲ್ಲಿ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.

     

  • ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿ ಬಂಧನ

    ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿ ಬಂಧನ

    ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಗಗನ ಸಖಿಯೊಬ್ಬರ ಎದೆ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    28 ವರ್ಷದ ಪ್ರೇಮ್ ಕುಮಾರ್ ಬಂಧಿತ ಆರೋಪಿ. ಬಾಣಸವಾಡಿಯ ಮಾರುತಿ ಸೇವಾನಗರದ ನಿವಾಸಿಯಾಗಿರುವ ಈತ ಪೈಂಟರ್ ಕೆಲಸ ಮಾಡುತ್ತಿದ್ದಾನೆ.

    ಏನಿದು ಪ್ರಕರಣ?: ಕಳೆದ ಫೆ. 12ರಂದು ರಾತ್ರಿ ನಗರದ ಹೆಚ್‍ಬಿಆರ್ ಲೇಔಟ್‍ನ 99 ದೋಸಾ ಹೊಟೇಲ್‍ನಿಂದ ಊಟ ಮುಗಿಸಿ ಗಗನ ಸಖಿ ತನ್ನ ಗೆಳೆಯ ಅನಿಶ್ ಜೊತೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಎರಡು ಬೈಕಿನಲ್ಲಿ ಬಂದ ಹೆಲ್ಮೆಟ್‍ಧಾರಿ ದುಷ್ಕರ್ಮಿಗಳು ಆಕೆಯ ಎದೆಯ ಮೇಲಿನ ಬಟ್ಟೆ ಎಳೆದು ಅಸಭ್ಯವಾಗಿ ವರ್ತನೆ ಮಾಡಿದ್ದರು. ಕೂಡಲೇ ಯುವತಿ ಕಿರುಚಾಡಿದ್ದು, ಗೆಳೆಯನಿದ್ದ ಕಾರಣ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದರು.

    ಘಟನೆ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯ ಮೇಲೆ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.