Tag: Banaras Hindu University

  • ಕೋವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಅನೇಕರಲ್ಲಿ ಸೈಡ್ ಎಫೆಕ್ಟ್: ಬನಾರಸ್ ಹಿಂದೂ ಯೂನಿವರ್ಸಿಟಿ

    ಕೋವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಅನೇಕರಲ್ಲಿ ಸೈಡ್ ಎಫೆಕ್ಟ್: ಬನಾರಸ್ ಹಿಂದೂ ಯೂನಿವರ್ಸಿಟಿ

    ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ (Bharat Biotech) ಸಂಸ್ಥೆ ಅಭಿವೃದ್ಧಿಪಡಿಸಿದ್ದ ಕೋವ್ಯಾಕ್ಸಿನ್ (Covaxin) ಲಸಿಕೆಯ ಅಡ್ಡಪರಿಣಾಮಗಳ (Side Effect) ಬಗ್ಗೆ ವರದಿ ಬಂದಿದೆ. ಈ ಲಸಿಕೆ ಪಡೆದ ವರ್ಷದ ಬಳಿಕ ಅನೇಕರಲ್ಲಿ ಸೈಡ್ ಎಫೆಕ್ಟ್ ಕಂಡುಬಂದಿವೆ ಎಂದು ಬನಾರಸ್ ಹಿಂದೂ ವಿವಿ (Banaras Hindu University) ನಡೆಸಿದ ಅಧ್ಯಯನ ತಿಳಿಸಿದೆ.

    ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚಿಗೆ ಮೇಲಿಂದ ಮೇಲೆ ವರದಿಗಳು ಬರುತ್ತಿವೆ. ಎರಡು ವಾರಗಳ ಹಿಂದಷ್ಟೇ ಕೋವಿಶೀಲ್ಡ್ ಅಡ್ಡಪರಿಣಾಮಗಳ ಬಗ್ಗೆ ವರದಿ ಆಗಿತ್ತು. ಇದೀಗ ಕೋವ್ಯಾಕ್ಸಿನ್ ಸರದಿ. ಈ ವರದಿ ಪ್ರಕಾರ ಕೋವ್ಯಾಕ್ಸಿನ್ ಪಡೆದ ಹದಿಹರೆಯದವರು ಮತ್ತು ಯುವಕರಲ್ಲಿ ಹೆಚ್ಚು ಅಡ್ಡಪರಿಣಾಮ ಕಂಡುಬಂದಿದೆ. ಇದನ್ನೂ ಓದಿ: ಕೈಬೆರಳಿನ ಶಸ್ತ್ರಚಿಕಿತ್ಸೆಗೆ ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿದ್ರು!- ತನಿಖೆಗೆ ಆದೇಶ

    ಒಟ್ಟು 1,024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 48% ರಷ್ಟು ಮಂದಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿರೋದು ಕಂಡುಬಂದಿದೆ. ಅಲ್ಲದೇ, ನರ ಸಂಬಂಧಿ ಕಾಯಿಲೆ, ಸ್ನಾಯು ಸೆಳೆತ, ಕೀಲುನೋವು, ಚರ್ಮ ರೋಗಗಳು ಕೂಡ ಕಂಡುಬಂದಿವೆ. 4.6% ರಷ್ಟು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ ಕೂಡ ಕಂಡುಬಂದಿದೆ. ಇದೆಲ್ಲಾ ಇತರೆ ಲಸಿಕೆಗಳ ಅಡ್ಡಪರಿಣಾಮಗಳಿಗಿಂತ ಭಿನ್ನ ಎನ್ನಲಾಗಿದ್ದು, ಮತ್ತಷ್ಟು ಆಳ ಅಧ್ಯಯನ ಮುಂದುವರೆದಿದೆ. ಇದನ್ನೂ ಓದಿ: SSLCಯಲ್ಲಿ 99% ಅಂಕ ತೆಗೆದ ವಿದ್ಯಾರ್ಥಿನಿಯ ಮೆದುಳಿನಲ್ಲಿ ರಕ್ತಸ್ರಾವವಾಗಿ ದುರ್ಮರಣ

  • ನಾಳೆ ಶುಭಗಳಿಗೆಯಲ್ಲಿ ಮೋದಿ ನಾಮಪತ್ರ ಸಲ್ಲಿಕೆ – ಇಂದು ವಾರಣಾಸಿಯಲ್ಲಿ ಅದ್ಧೂರಿ ರೋಡ್‌ ಶೋ!

    ನಾಳೆ ಶುಭಗಳಿಗೆಯಲ್ಲಿ ಮೋದಿ ನಾಮಪತ್ರ ಸಲ್ಲಿಕೆ – ಇಂದು ವಾರಣಾಸಿಯಲ್ಲಿ ಅದ್ಧೂರಿ ರೋಡ್‌ ಶೋ!

    – ಮೋದಿ ಕಾರ್ಯಕ್ರಮದ ಲಿಸ್ಟ್‌ ಹೀಗಿದೆ…

    ಲಕ್ನೋ: ಸತತ 3ನೇ ಬಾರಿಗೆ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು, ಮೇ 14 ರಂದು (ಮಂಗಳವಾರ) ಬೆಳಗ್ಗೆ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶುಭಗಳಿಗೆಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನಾದಿನವಾದ ಸೋಮವಾರ (ಇಂದು) ವಾರಣಾಸಿಯಲ್ಲಿ (Varanasi) ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

    ಮೋದಿ ನಾಮಪತ್ರ ಸಲ್ಲಿಕೆ ವೇಳೆ ಲಕ್ಷಾಂತರ ಜನ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ವಾರಣಾಸಿಯಲ್ಲಿ ಅದ್ಧೂರಿ ರೋಡ್‌ ಶೋ (Modi Road Show) ನಡೆಯಲಿದೆ. ಶಂಖನಾದ (ಶಂಖನಾದ), ಡೋಲು, ವಾದ್ಯಗೋಷ್ಠಿಗಳು ಮೊಳಗಲಿವೆ, ಅನೇಕ ಪಂಡಿತರು ಮಂತ್ರಗಳ ಪಠಣ ಮಾಡಲಿದ್ದಾರೆ. ಹಾಗಾಗಿ ಹಬ್ಬದ ವಾತಾವರಣವೇ ಅಲ್ಲಿ ಸೃಷ್ಟಿಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

    ಬಿಗಿ ಭದ್ರತೆ:
    ನಾಮಪತ್ರ ಸಲ್ಲಿಕೆಗೂ ಮುನ್ನಾದಿನ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (Banaras Hindu University) ದ್ವಾರದಿಂದ ಅದ್ಧೂರಿ ರೋಡ್‌ ಶೋ ಆರಂಭವಾಗಲಿದೆ. ಅಲ್ಲಿ ಮೋದಿಯವರು ಬಿಎಚ್‌ಯು ಸಂಸ್ಥಾಪಕ ಮಹಾಮಾನ ಪಂ. ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕಾಶಿ ವಿಶ್ವನಾಥ ಧಾಮದ ಗೇಟ್ ಸಂಖ್ಯೆ-4 ರಲ್ಲಿ ರೋಡ್‌ ಶೋ ಮುಕ್ತಾಯಗೊಳ್ಳಲಿದೆ.

    ಮುಸ್ಲಿಂ ಸಮುದಾಯದಿಂದ ವಿಶೇಷ ಸ್ವಾಗತ:
    ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದಾರೆ. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಲಿದೆ. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಲಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಗುವುದು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಲಿದ್ದಾರೆ ಎಂದು ಕಾಶಿ ಪ್ರದೇಶ ಬಿಜೆಪಿ ವಕ್ತಾರ ನವರತನ್ ರಾಠಿ ತಿಳಿಸಿದ್ದಾರೆ.

    ರೋಡ್‌ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರಾತ್ರಿ ಬನಾರಸ್ ಲೋಕೋಮೋಟಿವ್ ವರ್ಕ್ಸ್‌ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದು, ಅಲ್ಲಿಯೇ ಪ್ರಮುಖ ನಾಗರಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಮೇ 14 ರಂದು (ಮಂಗಳವಾರ) ಅವರು ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ನಂತರ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಾರೆ.

    ಮೋದಿ ಅವರು 2014 ಮತ್ತು 2019ರಲ್ಲಿ ವಾರಣಾಸಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸತತ 3ನೇ ಅವಧಿಗೆ ವಾರಣಾಸಿಯಿಂದಲೇ ಸ್ಪರ್ಧಿಸುತ್ತಿರುವ ಮೋದಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ 3ನೇ ಬಾರಿಗೆ ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ದಾರೆ.

  • ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ

    ಕಾಶಿ-ತಮಿಳು ಸಂಗಮ; ಶರ್ಟ್, ಪಂಚೆ ಧರಿಸಿ ಮಿಂಚಿದ ಮೋದಿ

    ಚೆನ್ನೈ: ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಸಹಯೋಗದಲ್ಲಿ ವಿವಿಯ ಆಂಫಿಥಿಯೇಟರ್ ಮೈದಾನದಲ್ಲಿ ಶಿಕ್ಷಣ ಸಚಿವಾಲಯವು ಹಮ್ಮಿಕೊಂಡಿರುವ ಒಂದು ತಿಂಗಳ `ಕಾಶಿ-ತಮಿಳು ಸಂಗಮ’ (Kashi Tamil Sangamam) ಸಾಂಸ್ಕೃತಿಕ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಚಾಲನೆ ನೀಡಿದ್ದಾರೆ.

    51ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳ ಈ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ (Naredndra Modi) ಅವರೂ ಸಾಂಪ್ರದಾಯಿಕ ಉಡುಗೆಯಲ್ಲೇ ಆಗಮಿಸಿ ಗಮನ ಸೆಳೆದಿದ್ದಾರೆ. ಶ್ವೇತ ವರ್ಣದಲ್ಲಿ ಕಂಗೊಳಿಸುವ ಬಿಳಿಯ ಉಡುಪು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್ ಮೂಲದ ಗಣಿ ಉದ್ಯಮಿಗೆ ಶಾಸಕನಿಂದ 9 ಕೋಟಿ ದೋಖಾ ಆರೋಪ

    `ಕಾಶಿ-ತಮಿಳು ಸಂಗಮ’ ಕಾರ್ಯಕ್ರಮವು ತೀರ್ಥಯಾತ್ರಿಕರ ಪುಣ್ಯಸ್ಥಳ ಕಾಶಿ ಹಾಗೂ ತಮಿಳುನಾಡಿನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ಹಾಗೂ ಕೇಂದ್ರ ಸರ್ಕಾರದ (Government Of India) `ಏಕ್ ಭಾರತ್ ಶ್ರೇಷ್ಠ ಭಾರತ್’ (Ek Bharat Shreshta Bharat) ಪರಿಕಲ್ಪನೆಯನ್ನು ಎತ್ತಿಹಿಡಿಯುವ ಗುರಿಯನ್ನೂ ಹೊಂದಿದೆ. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಅವರಿಂದು `ತಿರುಕ್ಕುರಲ್ ಮತ್ತು ಕಾಶಿ ತಮಿಳು’ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಬಳಿಕ ತಮಿಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದನ್ನೂ ಓದಿ: ಆಶಿಕಾ ರಂಗನಾಥ್ ಕುಡಿದು ರಂಪಾಟ: ಚಿತ್ರದ ಮಾರ್ಕೆಟಿಂಗ್ ಟೀಮ್ ತಪ್ಪು ಎಂದ ಡೈರೆಕ್ಟರ್

    ನಂತರ ತಮಿಳುನಾಡಿನ ಮಠ, ದೇವಾಲಯಗಳಿಗೆ ಗೌರವ ಸಲ್ಲಿಸಿ, ಗುರುಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉತ್ತರಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೊದಲಾದವರು ಉಪಸ್ಥಿತರಿದ್ದರು.

    ಈ ಉತ್ಸವದಲ್ಲಿ ಒಟ್ಟು 51 ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿದ್ದು, ಶಿವ ಪುರಾಣ, ರಾಮಾಯಣ ಮತ್ತು ಮಹಾಭಾರತ ಪೌರಾಣಿಕ, ಐತಿಹಾಸಿಕ ನಾಟಕವನ್ನು ಆಧರಿಸಿದ ಬೊಂಬೆ ಪ್ರದರ್ಶನ ನಡೆಯಲಿದೆ. ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿರುವ ಈ ಉತ್ಸವಕ್ಕೆ 2,500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೌಚಾಲಯಕ್ಕೆ ತೆರಳುತ್ತಿದ್ದ ದಲಿತ ವಿದ್ಯಾರ್ಥಿನಿ ತಡೆದ ವಿವಿ ಭದ್ರತಾ ಸಿಬ್ಬಂದಿ

    ಶೌಚಾಲಯಕ್ಕೆ ತೆರಳುತ್ತಿದ್ದ ದಲಿತ ವಿದ್ಯಾರ್ಥಿನಿ ತಡೆದ ವಿವಿ ಭದ್ರತಾ ಸಿಬ್ಬಂದಿ

    ಲಕ್ನೋ: ದಲಿತ ಎಂಬ ಕಾರಣಕ್ಕೆ ಕ್ಯಾಂಪಸ್‍ನಲ್ಲಿರುವ ಶೌಚಾಲಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಭದ್ರತಾ ಸಿಬ್ಬಂದಿ ತಡೆದಿರುವ ಘಟನೆ ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್‍ಯು)ದಲ್ಲಿ ನಡೆದಿದೆ.

    ವಿದ್ಯಾರ್ಥಿನಿ ಕಾಲೇಜಿನ ಹೊಸ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕಳೆದ ಐದು ದಿನಗಳಿಂದ ಮಹಿಳಾ ಮಹಾವಿದ್ಯಾಲಯದ ಆವರಣದ ಸಮೀಪವಿರುವ ಬಹುಜನ ಹೆಲ್ಪ್ ಡೆಸ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಈ ವೇಳೆ ಮಹಿಳಾ ಮಹಾವಿದ್ಯಾಲಯದ ಹತ್ತಿರವಿರುವ ಶೌಚಾಲಯಕ್ಕೆ ಹೋಗಿದ್ದಾಳೆ. ಆಗ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದು, ಇಲ್ಲಿ ಶೌಚಾಲಯಕ್ಕೆ ಹೋಗಲು ಅವಕಾಶವಿಲ್ಲ. ಹತ್ತಿರದಲ್ಲಿರುವ ಆಸ್ಪತ್ರೆ ಅಥವಾ ಕಾಲೇಜು ಕ್ಯಾಂಪಸ್‍ನಲ್ಲಿರುವ ಶೌಚಾಲಯಕ್ಕೆ ತೆರಳುವಂತೆ ಸೂಚಿಸಿದ್ದಾರೆ.

    ಆಗ ವಿದ್ಯಾರ್ಥಿನಿ ಪಟ್ಟು ಬಿಡೆದೆ ವಾದಿಸಿದ್ದಾಳೆ. ಭದ್ರತಾ ಸಿಬ್ಬಂದಿ ವರ್ತನೆಯು ತಾರತಮ್ಯ, ಅಮಾನವೀಯ ಹಾಗೂ ಕಾನೂನು ಬಾಹಿರವಾಗಿತ್ತು. ಭದ್ರತಾ ಸಿಬ್ಬಂದಿ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ವಿವಿ ಆಡಳಿತ ಮುಖ್ಯಸ್ಥ ಓಪಿ ರೈ ಅವರಿಗೆ ನೀಡಿದ ಲಿಖಿತ ದೂರಿನಲ್ಲಿ ವಿದ್ಯಾರ್ಥಿನಿ ಒತ್ತಾಯಿಸಿದ್ದಾಳೆ.

    ದೂರು ನೀಡಿರುವ ವಿದ್ಯಾರ್ಥಿನಿ ಈ ಕುರಿತು ಪ್ರತಿಕ್ರಿಯಿಸಿ, ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಿಎಚ್‍ಯುವ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ಕಾರ್ಯಕ್ರಮ ಸಂಘಟನಾ ಸಮಿತಿಯ ಸದಸ್ಯೆಯಾಗಿದ್ದೇನೆ. ಕಾಲೇಜಿನ ಹೊಸ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಕಳೆದ ಐದು ದಿನಗಳಿಂದ ಮಹಿಳಾ ಮಹಾವಿದ್ಯಾಲಯದ ಆವರಣದ ಸಮೀಪವಿರುವ ಬಹುಜನ ಹೆಲ್ಪ್ ಡೆಸ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ವಿವರಿಸಿದ್ದಾಳೆ.

    ವಿದ್ಯಾರ್ಥಿನಿಯ ಆರೋಪವನ್ನು ತಳ್ಳಿ ಹಾಕಿರುವ ಭದ್ರತಾ ಸಿಬ್ಬಂದಿ ಆಕೆ ಪುರುಷರ ಶೌಚಾಲಯಕ್ಕೆ ಹೊರಟಿದ್ದರು. ಹೀಗಾಗಿ ತಡೆದೆ ಎಂದು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ವಿವಿ ಆಡಳಿತ ಮುಖ್ಯಸ್ಥ ಓಪಿ ರೈ ಅವರು ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ರೈ, ವಿದ್ಯಾರ್ಥಿನಿಯ ದೂರು ಸ್ವೀಕರಿಸಿದ್ದು, ಆಕೆಯ ಕುಂದು ಕೊರತೆಗಳನ್ನು ಕೇಳಲು ವೈಯಕ್ತಿಕವಾಗಿ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದೇವೆ. ಈ ಕುರಿತು ಆರೋಪಿಗಳಾದ ಭದ್ರತಾ ಸಿಬ್ಬಂದಿಯನ್ನೂ ಕರೆದು ವಿಚಾರಣೆ ನಡೆಸಲಾಗಿದೆ. ವಿದ್ಯಾರ್ಥಿನಿಯು ಪುರುಷರ ಶೌಚಾಲಯಕ್ಕೆ ಪ್ರವೇಶಿಸುತ್ತಿದ್ದರಿಂದ ತಡೆದೆವು ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು ಇಬ್ಬರು ಮಹಿಳಾ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದ್ದೇವೆ. ಸಮಿತಿಯ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.