Tag: Bananthi

  • ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ರಾಮನಗರ: ಇಂದು ಅಂಗೈಯಲ್ಲೇ ಎಲ್ಲವೂ ಅನ್ನೋ ಅಷ್ಟರಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಆದರೂ ಈ ಮೂಢನಂಬಿಕೆ ಮಾತ್ರ ಇನ್ನೂ ಜೀವಂತವಾಗಿದೆ. ಗ್ರಾಮಕ್ಕೆ ಕೇಡಾಗುತ್ತದೆಯೆಂದು ಹೆದರಿ 20 ದಿನದ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮದ ಹೊರಗಿಟ್ಟಿರುವ ಘಟನೆ ನಡೆದಿದೆ.

    ಹೌದು. ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿದೆ. ಇಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ 2 ತಿಂಗಳು 3 ದಿನ ಊರ ಹೊರಗಿಟ್ಟು ಮೌಢ್ಯತೆಯ ಪರಮಾವಧಿ ಮೀರಿದ್ದಾರೆ.

    ಗ್ರಾಮದ ಶ್ರೀರಂಗಪ್ಪ ದೇವರಿಗಾಗಿ ಈ ಮೌಢ್ಯತೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಉಲ್ಲಂಘಿಸಿದ್ರೇ ಗ್ರಾಮಕ್ಕೆ ಕೇಡಾಗುತ್ತೆ ಅನ್ನೋ ನಂಬಿಕೆ ಇಲ್ಲಿನ ಜನರನ್ನು ಆವರಿಸಿದೆ. ಈ ಮೌಢ್ಯ ಆಚರಣೆ ಕೇವಲ ಬಾಣಂತಿಯರಿಗೆ ಮಾತ್ರವಲ್ಲ, ಋತುಮತಿಗಳಿಗೆ ಹಾಗೂ ದೊಡ್ಡವರಾಗುವ ಬಾಲಕಿಯರಿಗೂ ಅನ್ವಯಿಸುತ್ತೆ. ಇವರಿಗಾಗಿ ಗ್ರಾಮದ ಹೊರಗೆ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದಾರೆ. ತಮ್ಮ ದಿನದ ಅವಧಿ ಮುಗಿಯುವರೆಗೂ ಅವರು ಅಲ್ಲೇ ವಾಸವಿರಬೇಕು. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಲೆಕ್ಕ ಹಾಕಿದರೆ ದೇವರದೊಡ್ಡಿ ಗ್ರಾಮದಲ್ಲಿ ಕೇವಲ 100 ರಿಂದ 139 ಮನೆಗಳಿವೆ. ರಾಜಧಾನಿಯಿಂದ ಕೇವಲ 45 ಕಿ.ಮೀ ದೂರ. ರಾಜಧಾನಿಯಲ್ಲಿ ಆಧುನೀಕತೆ ಅಬ್ಬರವಿದ್ದರೆ ಈ ಗ್ರಾಮದಲ್ಲಿ ಮೌಢ್ಯತೆ ಮನೆ ಮಾಡಿರೋದು ಮಾತ್ರ ವಿರ್ಪಯಾಸವೇ ಸರಿ. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

  • ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು – ಆಸ್ಪತ್ರೆಗೆ ಕಲ್ಲು ಎಸೆದು, ಶವವಿಟ್ಟು ಪ್ರತಿಭಟನೆ

    ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು – ಆಸ್ಪತ್ರೆಗೆ ಕಲ್ಲು ಎಸೆದು, ಶವವಿಟ್ಟು ಪ್ರತಿಭಟನೆ

    ಶಿವಮೊಗ್ಗ: ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಆಕೆಯ ಸಂಬಂಧಿಗಳು ಆಸ್ಪತ್ರೆಗೆ ಕಲ್ಲು ಎಸೆದು, ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

    ಭದ್ರಾವತಿ ತಾಲೂಕು ಬಾರಂದೂರು ಗ್ರಾಮದ ರಾಧಾ ಎಂಬವರು ಹೆರಿಗೆಗಾಗಿ ಕಳೆದ ಭಾನುವಾರ ಭದ್ರಾವತಿಯ ನಿರ್ಮಲಾ ಆಸ್ಪತ್ರೆಗೆ ದಾಖಲಾಗಿದ್ದರು. ರಾಧಾ ಅವರು ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಸಂದರ್ಭದಲ್ಲಿ ಹೆಚ್ಚು ರಕ್ತ ಸ್ರಾವವಾಗಿದ್ದರಿಂದ ಬಾಣಂತಿಯನ್ನು ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವಂತೆ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಧಾ ಅವರನ್ನು ನಿನ್ನೆ ರಾತ್ರಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಧಾ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.

    ರಾಧಾ ಸಾವಿಗೆ ಮೊದಲು ಚಿಕಿತ್ಸೆ ನೀಡಿದ ನಿರ್ಮಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕೆಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ವೇಳೆ ರಾಧಾ ಮೃತ ದೇಹವನ್ನು ಆಸ್ಪತ್ರೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ವೈದ್ಯರು ಹಾಗೂ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನೆಯ ಸಂದರ್ಭದಲ್ಲಿ ಆಕ್ರೋಶಗೊಂಡ ಸಂಬಂಧಿಗಳು ಆಸ್ಪತ್ರೆಗೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಓಲ್ಡ್ ಟೌನ್ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸ್ ಮಧ್ಯಪ್ರವೇಶದ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಮೃತ ರಾಧಾ ಸಂಬಂಧಿಕರ ನಡುವೆ ವಾಗ್ದಾಳಿ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವೈದ್ಯರ ನಿರ್ಲಕ್ಷ್ಯದಿಂದ ಕೋಮಾ ಸೇರಿದ ಬಾಣಂತಿ

    ವೈದ್ಯರ ನಿರ್ಲಕ್ಷ್ಯದಿಂದ ಕೋಮಾ ಸೇರಿದ ಬಾಣಂತಿ

    ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಕಡತೂರು ಗ್ರಾಮದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಕೋಮಾದ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಬಾಣಂತಿ ದಿವ್ಯ ಎಂಬವರು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಕೋಮಾದಲ್ಲಿದ್ದಾರೆ. ದಿವ್ಯ ಕಳೆದ ಮೂರು ತಿಂಗಳಿನಿಂದ ಕೋಮಾದಲ್ಲಿದ್ದು, ನಗರದ ಆರ್‍ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮಾರ್ಚ್ 31ರಂದು ದಿವ್ಯಾ ಮಾಲೂರಿನ ಸೇಂಟ್ ಮಾರಿಸ್ ಖಾಸಗಿ ಅಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದರು.

    ಹೆರಿಗೆ ವೇಳೆ ಅತಿಯಾದ ಅರಿವಳಿಕೆ ಹೊಂದಿದ್ದ ಚುಚ್ಚುಮದ್ದು ನೀಡಿದ್ದ ಹಿನ್ನೆಲೆಯಲ್ಲಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಇದಿಂಗೂ ಬಾಣಂತಿ ಜೀವಂತ ಶವವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಬಾಣಂತಿಯ ಸಂಬಂಧಿಕರು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಿಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.