Tag: Banana Ice Cream

  • ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್

    ನಾಲ್ಕು ಪದಾರ್ಥ ಬಳಸಿ ಮಾಡಿ ಬಾಳೆಹಣ್ಣಿನ ಐಸ್‌ಕ್ರೀಮ್

    ಸ್‌ಕ್ರೀಮ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮನಗೆದ್ದ ಶೀತಲ ತಿನಿಸಿದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಲ ಐಸ್‌ಕ್ರೀಮ್‌ಗಳು, ಮನೆ ರುಚಿ ಕೊಡುವುದಿಲ್ಲ. ಆದ್ದರಿಂದ ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಬಾಳೆಹಣ್ಣಿನ ಐಸ್‌ಕ್ರೀಮ್ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಬೆಚ್ಚಗಿನ ಬಾದಾಮಿ ಸೂಪ್ ಸವಿದು ಆರೋಗ್ಯವಾಗಿರಿ

    ಬೇಕಾಗುವ ಸಾಮಗ್ರಿಗಳು:
    ಸಿಪ್ಪೆ ಸುಲಿದ ಬಾಳೆಹಣ್ಣು – 6
    ಸಕ್ಕರೆ – 4 ಚಮಚ
    ವೆನಿಲ್ಲಾ ಎಸೆನ್ಸ್ – 1 ಚಮಚ
    ಕಾಯಿಸಿ ತಣ್ಣಗಾದ ಹಾಲು – 100 ಗ್ರಾಂ
    ಹೆಚ್ಚಿದ ಬಾದಾಮಿ – ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಸಿಪ್ಪೆ ಸುಲಿದ ಬಾಳೆಹಣ್ಣನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
    * ಬಳಿಕ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ 4 ಚಮಚ ಸಕ್ಕರೆ, 1 ಚಮಚ ವೆನಿಲ್ಲಾ ಎಸೆನ್ಸ್, ತಣ್ಣಗಿನ ಹಾಲು ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    * ನಂತರ ಈ ಮಿಶ್ರಣವನ್ನು ಒಂದು ಬಾಕ್ಸ್‌ಗೆ  ಹಾಕಿಕೊಳ್ಳಿ. ಬಳಿಕ ಇದರ ಮುಚ್ಚಳ ಹಾಕಿ 4 ಗಂಟೆಗಳ ಕಾಲ ಫ್ರೀಜರ್ ಅಲ್ಲಿ ಇಡಿ.
    * ಈಗ ತಣ್ಣಗಿನ ಐಸ್‌ಕ್ರೀಮ್ ತಿನ್ನಲು ರೆಡಿ. ಇದನ್ನು ಸರ್ವಿಂಗ್ ಬೌಲ್‌ನಲ್ಲಿ ಹಾಕಿಕೊಂಡು ಅದರ ಮೇಲೆ ಹೆಚ್ಚಿದ ಬಾದಾಮಿ ಹಾಕಿ ಮಕ್ಕಳಿಗೆ ಮತ್ತು ಮನೆಯವರಿಗೆ ಸವಿಯಲು ಕೊಡಿ. ಇದನ್ನೂ ಓದಿ: ಹೈಡ್ರೇಟ್ ಆಗಿರಲು ಸವಿಯಿರಿ ಕಲ್ಲಂಗಡಿ, ದಾಳಿಂಬೆಯ ಪಂಚ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡೈರಿ ಫ್ರೀ – ಮೂರೇ ಪದಾರ್ಥ ಬಳಸಿ ಮಾಡಿ ಸಖತ್ ಟೇಸ್ಟಿ ಐಸ್‌ಕ್ರೀಮ್

    ಡೈರಿ ಫ್ರೀ – ಮೂರೇ ಪದಾರ್ಥ ಬಳಸಿ ಮಾಡಿ ಸಖತ್ ಟೇಸ್ಟಿ ಐಸ್‌ಕ್ರೀಮ್

    ಹಾಲು ಅಥವಾ ಹಾಲಿನ ಯಾವುದೇ ಉತ್ಪನ್ನಗಳನ್ನು ಬಳಸದೇ ಐಸ್‌ಕ್ರೀಮ್ ಮಾಡಬಹುದು ಎಂದರೆ ನೀವು ನಂಬುತ್ತೀರಾ? ಇಲ್ಲ ಎಂದರೆ ನಾವಿಂದು ಹೇಳಿಕೊಡುತ್ತಿರೋ ಐಸ್‌ಕ್ರೀಮ್ ರೆಸಿಪಿಯನ್ನೊಮ್ಮೆ ನೀವು ನೋಡಲೇ ಬೇಕು. ಈ ಐಸ್‌ಕ್ರೀಮ್ ಅನ್ನು ಕೇವಲ ಮೂರೇ ಪದಾರ್ಥಗಳನ್ನು ಬಳಸಿ ಮಾಡಬಹುದು. ಮಾತ್ರವಲ್ಲದೇ ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಅತ್ಯಂತ ಸರಳವಾಗಿರೋ ಈ ಐಸ್‌ಕ್ರೀಮ್ ವಿಧಾನವನ್ನು ನೀವೊಮ್ಮೆ ಟ್ರೈ ಮಾಡಿ ನೋಡಿ. ಮತ್ತೆ ಮನಬಂದಾಗೆಲ್ಲಾ ಖಂಡಿತಾ ಇದನ್ನು ಮಾಡುತ್ತಿರುತ್ತೀರಿ.

    ಬೇಕಾಗುವ ಪದಾರ್ಥಗಳು:
    ಬಾಳೆಹಣ್ಣು – 3
    ಕೋಕೋ ಪೌಡರ್ – 2 ಟೀಸ್ಪೂಮ್
    ಪೀನಟ್ ಬಟರ್ – 1 ಟೀಸ್ಪೂನ್ ಇದನ್ನೂ ಓದಿ: ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಬಾಳೆಹಣ್ಣುಗಳನ್ನು ಕತ್ತರಿಸಿ, 30 ನಿಮಿಷಗಳವರೆಗೆ ಫ್ರೀಜರ್‌ನಲ್ಲಿ ಇಡಿ.
    * ಈಗ ಬ್ಲೆಂಡರ್ ತೆಗೆದುಕೊಂಡು, ಬಾಳೆಹಣ್ಣುಗಳನ್ನು ಅದರಲ್ಲಿ ಹಾಕಿ ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ರುಬ್ಬಿಕೊಳ್ಳಬೇಕು. (ನೀರು ಬಳಸುವ ಅಗತ್ಯವಿಲ್ಲ)
    * ರುಬ್ಬಿಕೊಳ್ಳುವ ಸಮಯ ನೀವು ಆಗಾಗ ಬ್ಲೆಂಡರ್ ಅನ್ನು ನಿಲ್ಲಿಸಿ, ಬದಿಗೆ ಸರಿದಿರುವ ಪೇಸ್ಟ್ ಅನ್ನು ಮಧ್ಯಕ್ಕೆ ತಂದು ಮತ್ತೆ ರುಬ್ಬಿಕೊಳ್ಳುತ್ತಿರಿ. ಇದರಿಂದ ಎಲ್ಲಿಯೂ ಗಂಟುಗಳು ಉಳಿದುಕೊಳ್ಳುವುದಿಲ್ಲ.
    * ಈಗ ಬಾಳೆಹಣ್ಣಿನ ಪೇಸ್ಟ್‌ಗೆ ಕೋಕೋ ಪೌಡರ್ ಹಾಗೂ ಪೀನಟ್ ಬಟರ್ ಸೇರಿಸಿ ಮತ್ತೆ ಸುಮಾರು 3 ನಿಮಿಷಗಳ ವರೆಗೆ ಬ್ಲೆಂಡ್ ಮಾಡಿಕೊಳ್ಳಿ.
    * ಈಗ ಈ ಮಿಶ್ರಣವನ್ನು ಒಂದು ಗಟ್ಟಿ ಮುಚ್ಚಳದ ಪಾತ್ರೆಗೆ ಹಾಕಿ, ಫ್ರೀಜರ್‌ನಲ್ಲಿ ಸುಮಾರು 4-5 ಗಂಟೆಗಳ ಕಾಲ ಇಡಿ.
    * ಡೈರಿ ಫ್ರೀ ಬಾಳೆಹಣ್ಣಿನ ಐಸ್‌ಕ್ರೀಮ್ ಗಟ್ಟಿಯಾದ ಬಳಿಕ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ಟ್ರಾಬೆರಿ ಓಟ್ಸ್ ಕುಲ್ಫಿ