Tag: Banana Boonoor

  • ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ವೇಳೆ ತುಂಬು ಗರ್ಭಿಣಿ ಸಾವು

    ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ವೇಳೆ ತುಂಬು ಗರ್ಭಿಣಿ ಸಾವು

    ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ವೇಳೆ ತುಂಬು ಗರ್ಭಿಣಿ ಸಾವನ್ನಪ್ಪಿರುವ ಘಟನೆ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

    ಬಾಳೆಹೊನ್ನೂರು ನಿವಾಸಿ ಶ್ವೇತಾ(27) ಮೃತ ದುರ್ದೈವಿ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ವೈದ್ಯ ಎಲ್ಡೋಸ್ ನಿರ್ಲಕ್ಷ್ಯದಿಂದ ಗರ್ಭಿಣಿ ಶ್ವೇತಾ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಹಸುಗೂಸು ಅಸುನೀಗಿದೆ. ಇದನ್ನೂ ಓದಿ: 8 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ- ಅಧಿಕಾರಿ ವಿರುದ್ಧ ಪ್ರಕರಣ ದಾಖಲು

    ಎಲ್ಡೋಸ್ ಈ ಹಿಂದೆ ಎನ್.ಆರ್.ಪುರ, ಶೃಂಗೇರಿಯಲ್ಲಿ ಅಮಾನತ್ತಾಗಿದ್ದು, ಪೋಷಕರು ಗರ್ಭಿಣಿಯನ್ನ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದರು. ಆದರೆ ಎಲ್ಡೋಸ್ ಅವರು ನಾನೇ ಹೆರಿಗೆ ಮಾಡಿಸುತ್ತೇನೆಂದು ಮುಂದಾಗಿದ್ದಾರೆ. ಆದರೆ ಶ್ವೇತಾ ಮತ್ತು ಮಗು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

    ಈ ಪರಿಣಾಮ ವೈದ್ಯರ ವಿರುದ್ಧ ಆಸ್ಪತ್ರೆ ಮುಂಭಾಗ ಸ್ಥಳಿಯರು ಪ್ರತಿಭಟನೆ ಮಾಡುತ್ತಿದ್ದು, ಆಸ್ಪತ್ರೆಗೆ ಮುತ್ತಿಗೆ ಹಾಕಲು ಯತ್ನಿಸಲಾಗುತ್ತಿದೆ. ಈ ವೇಳೆ ಪ್ರತಿಭಟನೆಯನ್ನು ನಿಲ್ಲಿಸಲು ಬಂದ ಪೊಲೀಸರ ಜೊತೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದ್ದಾರೆ.

  • ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್

    ಪೋಕ್ಸೋ ಆರೋಪಿ ಠಾಣೆಯಿಂದ್ಲೇ ಎಸ್ಕೇಪ್ – ನಾಲ್ವರು ಪೊಲೀಸರು ಸಸ್ಪೆಂಡ್

    ಚಿಕ್ಕಮಗಳೂರು: ಪೋಕ್ಸೋ ಕೇಸ್ ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗಿದ್ದಕ್ಕೆ ಒಬ್ಬ ಎಎಸ್‍ಐ ಸೇರಿದಂತೆ ಮೂವರು ಪೇದೆಗಳನ್ನ ಅಮಾನತು ಮಾಡಿರುವ ಘಟನೆ ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರು ಠಾಣೆಯಲ್ಲಿ ನಡೆದಿದೆ.

    ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗಿದ್ದಕ್ಕೆ ಆ ದಿನ ಕಾರ್ಯನಿರ್ವಹಿಸುತ್ತಿದ್ದ ಎ.ಎಸ್.ಐ ಪದ್ಮಾಕ್ಷ, ಪೇದೆಗಳಾದ ಬಸಂತ್ ಕುಮಾರ್, ರಘುವೀರ್ ಹಾಗೂ ಸಂತೋಷ್ ಎಂಬವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅಮಾನತುಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಬಾಳೆಹೊನ್ನೂರು ಸಮೀಪದ ಹಳ್ಳಿಯೊಂದರಲ್ಲಿ ನಿಜಾಮ್ ಎಂಬಾತನ ಮೇಲೆ 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನೆಂಬ ಆರೋಪವಿತ್ತು. ಬಾಲಕಿ ಶನಿವಾರ ತನ್ನ ಮನೆ ಸಮೀಪದ ಅಂಗಡಿಯಿಂದ ಬರುವಾಗ ಆರೋಪಿ ಗೂಡ್ಸ್ ವಾಹನದಲ್ಲಿ ಬಂದು ಬಾಲಕಿಗೆ ಪ್ರೀತಿಸುವಂತೆ ಒತ್ತಾಯಿಸಿದ್ದನು. ಬಾಲಕಿ ನಿರಾಕರಿಸಿದಾಗ ಆತ ಆಕೆಯನ್ನು ವಾಹನದೊಳಗೆ ಎಳೆದುಕೊಂಡು ಹೋಗಿದ್ದನು. ಇದನ್ನೂ ಓದಿ: ಮನೆಯಲ್ಲಿ ಐದು ಸದಸ್ಯರಿದ್ದರೂ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ

    ಗ್ರಾಮದಿಂದ ಸುಮಾರು ಐದಾರು ಕಿ.ಮೀ ದೂರದ ಅರಣ್ಯದಲ್ಲಿ ನೀನು ನನ್ನ ಧರ್ಮಕ್ಕೆ ಮತಾಂತರವಾಗು, ಮೊಬೈಲ್ ಕೊಡಿಸುತ್ತೇನೆ, ಮದುವೆ ಆಗುತ್ತೇನೆಂದು ಅತ್ಯಾಚಾರಕ್ಕೆ ಯತ್ನಿಸಿದ್ದನು. ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಪುನಃ ಕರೆತಂದು ಗ್ರಾಮಕ್ಕೆ ಬಿಟ್ಟು ಹೋಗುವಾಗ ಸ್ಥಳಿಯರು ವಿಚಾರಿಸಿ ದೂರು ನೀಡಿದ್ದರು.

    ಈ ಪ್ರಕರಣ ಸಂಬಂಧ ಶನಿವಾರ ಬಾಳೆಹೊನ್ನೂರು ಪೊಲೀಸರು ಆರೋಪಿಯನ್ನ ಬಂಧಿಸಿದ್ದರು. ಆದರೆ, ಆತ ಭಾನುವಾರ ಮಧ್ಯಾಹ್ನ ಠಾಣೆಯಿಂದಲೇ ಎಸ್ಕೇಪ್ ಆಗಿದ್ದನು. ಬಳಿಕ ಆತನನ್ನ 40 ಕಿ.ಮೀ. ದೂರದ ಬಾಳೆಹೊನ್ನೂರಿನಲ್ಲಿ ಬಂಧಿಸಿದ್ದರು. ಆದರೆ ಈಗ ಆರೋಪಿ ಠಾಣೆಯಿಂದಲೇ ಎಸ್ಕೇಪ್ ಆಗಿರುವುದು ಇಲಾಖೆಗೆ ಮುಜುಗರವೂ ಆಗಿತ್ತು. ಹಾಗಾಗಿ ಎಸ್‍ಪಿ ಅಕ್ಷಯ್ ಅವರು ಕರ್ತವ್ಯ ಲೋಪದ ಹಿನ್ನೆಲೆ ಓರ್ವ ಎ.ಎಸ್.ಐ. ಸೇರಿದಂತೆ ಮೂವರು ಪೇದೆಗಳನ್ನ ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಮಾಳಮಾರುತಿ ಪೊಲೀಸರ ಭರ್ಜರಿ ದಾಳಿ- ಖತರ್ನಾಕ್ ಕಳ್ಳ ಅಂದರ್