Tag: Banana

  • ಚಿಕ್ಕಬಳ್ಳಾಪುರ | 1kg ಏಲಕ್ಕಿ ಬಾಳೆ 130 ರೂ.ವೆರೆಗೆ ಮಾರಾಟ – ರೈತರು ಖುಷ್‌, ಗ್ರಾಹಕರ ಜೇಬಿಗೆ ಕತ್ತರಿ

    ಚಿಕ್ಕಬಳ್ಳಾಪುರ | 1kg ಏಲಕ್ಕಿ ಬಾಳೆ 130 ರೂ.ವೆರೆಗೆ ಮಾರಾಟ – ರೈತರು ಖುಷ್‌, ಗ್ರಾಹಕರ ಜೇಬಿಗೆ ಕತ್ತರಿ

    ಚಿಕ್ಕಬಳ್ಳಾಪುರ: ಆಷಾಢ ಮಾಸ ಕಳೆದು ಶ್ರಾವಣ ಮಾಸ (Shravan Maas) ಬಂದಿದೆ. ಮುಂದೆ ಸಾಲು ಸಾಲು ಹಬ್ಬಗಳ ಸರದಿ. ಅದ್ರಲ್ಲೂ ಹೂ ಹಣ್ಣು ಕಾಯಿಗೆ ಭಾರೀ ಡಿಮ್ಯಾಂಡ್ ಆಗೋ ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ.

    ಇದ್ರಿಂದ ಈಗಲೇ ಮಾರುಕಟ್ಟೆಯಲ್ಲಿ (Market) ಏಲಕ್ಕಿ ಬಾಳೆಹಣ್ಣು ದರ ಕೇಳೀ ಗ್ರಾಹಕರು ಸುಸ್ತಾಗುವಂತಾಗಿದೆ. ಹೌದು ಶ್ರಾವಣ ಮಾಸ ಬಂದಿದ್ದೇ ತಡ, ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ ಸೇರಿದಂತೆ ಶುಭಕಾರ್ಯಗಳು ಆರಂಭವಾಗಿವೆ. ಇನ್ನು ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜೆ, ಪುನಸ್ಕಾರಗಳಿಂದ ಮದುವೆ ಮನೆಯವರೆಗೂ ಬಾಳೆಹಣ್ಣು (Banana) ಬೇಕೇಬೇಕು. ಇದರಿಂದ ಏಲಕ್ಕಿ ಬಾಳೆಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಆಷಾಢ ಮಾಸದಲ್ಲಿ ಕೆಜಿ ಏಲಕ್ಕಿ ಬಾಳೆಹಣ್ಣಿಗೆ 30 ರಿಂದ 40 ರೂಪಾಯಿ ಬೆಲೆಯಿತ್ತು. ಆದ್ರೆ ಶ್ರಾವಣ ಆರಂಭವಾಗುತ್ತಿದ್ದಂತೆ ಕೆಜಿ ಯಾಲಕ್ಕಿ ಬಾಳೆಹಣ್ಣು 100 ರಿಂದ 130 ರೂಪಾಯಿಯವರೆಗೂ ಏರಿಕೆಯಾಗಿದೆ.  ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್- ದಲಿತ ಸಚಿವರು, ಶಾಸಕರ ಒಗ್ಗಟ್ಟಿಗೆ ಪರಮೇಶ್ವರ್ ಕರೆ

    ಏಲಕ್ಕಿ ಬಾಳೆಹಣ್ಣಿಗೆ ಭಾರೀ ಡಿಮ್ಯಾಂಡ್..
    ಇನ್ನು ಚಿಕ್ಕಬಳ್ಳಾಪುರ, ಮಂಚೇನಹಳ್ಳಿ, ಗೌರಿಬಿದನೂರು ಭಾಗದಲ್ಲಿ ಯಥೇಚ್ಛವಾಗಿ ಯಾಲಕ್ಕಿ ಬಾಳೆ ಬೆಳೆಯಲಾಗುತ್ತಿದೆ. ಕಳೆದ ಆಷಾಢ ಮಾಸದಲ್ಲಿ ವಿಪರೀತ ಗಾಳಿ ಬೀಸಿ ಕೆಲವು ತೋಟಗಳು ನಾಶವಾಗಿವೆ. ಅಳಿದುಳಿದ ಬಾಳೆತೋಟಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರಿನ ಹಾಪ್ ಕಾಮ್ಸ್ ನಲ್ಲೇ ರೈತರು ಬೆಳೆದ ಏಲಕ್ಕಿ ಬಾಳೆಗೆ ಕೆಜಿಗೆ 87 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಮಾರುಕಟ್ಟೆಯಲ್ಲಿ 130 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಇದರಿಂದ ಬಾಳೆಹಣ್ಣು ವರ್ತಕರು ಬಾಳೆಕಾಯಿಗಾಗಿ ರೈತರ ತೋಟಗಳಿಗೆ ಮುಗಿಬಿದ್ದಿದ್ದಾರೆ. ಕೆಜಿ ಬಾಳೆಕಾಯಿಗೆ 90 ರೂಪಾಯಿ ಕೊಡ್ತೀನಿ ಕೊಡಿ ಅಂದ್ರು ಯಾರು ಕೊಡುತ್ತಿಲ್ಲ. ಈಗಲೇ ಹೀಗಾದ್ರೆ ಮುಂದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಏನ್ ಮಾಡೋದು ಅಂತಾರೆ ಗ್ರಾಹಕರು.

    ರೈತರಲ್ಲಿ ಹರ್ಷ, ಗ್ರಾಹಕರ ಜೇಬಿಗೆ ಕತ್ತರಿ
    ಒಂದಡೆ ಶ್ರಾವಣ ಮಾಸ, ಮತ್ತೊಂದೆಡೆ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರೈತರು ಸದ್ಯ ಬಾಳೆ ತೋಟ ಮಾರುತ್ತಿಲ್ಲ. ಇದರಿಂದ ಏಲಕ್ಕಿ ಬಾಳೆಗೆ ಚಿನ್ನದ ಬೆಲೆ ಬಂದಿದ್ದು, ಬಾಳೆಹಣ್ಣು ಬೆಳೆದವನೇ ಶ್ರೀಮಂತ ಎನ್ನುವಂತಾಗಿದೆ. ಆದ್ರೆ ಗ್ರಾಹಕರ ಜೇಬಿಗೆ ಕತ್ತರಿಯಂತೂ ಬೀಳುತ್ತಿದೆ. ಇದನ್ನೂ ಓದಿ: ಕಲಬುರಗಿ ಕರ್ನಾಟಕ ಕೇಂದ್ರಿಯ ವಿವಿ ವಿದ್ಯಾರ್ಥಿನಿ ಕೆನ್ನೆಗೆ ಮುತ್ತಿಟ್ಟ ಕ್ಯಾಂಟೀನ್ ಓನರ್

  • ವಿಜಯನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – ನೆಲಕ್ಕೆ ಉರುಳಿತು ಹತ್ತಾರು ಎಕರೆ ಬಾಳೆ ಬೆಳೆ

    ವಿಜಯನಗರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – ನೆಲಕ್ಕೆ ಉರುಳಿತು ಹತ್ತಾರು ಎಕರೆ ಬಾಳೆ ಬೆಳೆ

    ಬಳ್ಳಾರಿ: ವಿಜಯನಗರ (Vijanagara) ಜಿಲ್ಲೆಯಾದ್ಯಂತ ಬಿರುಗಾಳಿ (Rain) ಸಹಿತ ಸುರಿದ ಭಾರೀ ಮಳೆಗೆ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನೆಲಕಚ್ಚಿದೆ.

    ಹೊಸಪೇಟೆಯ ಹೊಸೂರು ಮಾಗಾಣಿಯಲ್ಲಿ ಒಂದೇ ತಿಂಗಳಿನಲ್ಲಿ ಕೈಗೆ ಬರುತ್ತಿದ್ದ ಬಾಳೆಗೊನೆಗಳು (Banana Tree) ನೆಲಕ್ಕುರುಳಿವೆ. ಒಂದು ಕೆಜಿಗೆ 18-20 ರೂ. ಬಾಳೆ ಮಾರಾಟ ಮಾಡುತ್ತಿದ್ದ ರೈತರೀಗಿಗ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ.  ಇದನ್ನೂ ಓದಿ: ಒಂದೇ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ – ಎಲ್ಲೆಲ್ಲಿ ಎಷ್ಟು ಮಳೆ?

    ಕಳೆದ ಬಾರಿಯೂ ಇದೇ ರೀತಿ ಬಾಳೆ ತೋಟ ನೆಲಕ್ಕೆ ಉರುಳಿ ಬಿದ್ದಿತ್ತು. ನೆಲಕ್ಕೆ ಉರುಳಿದ ಬಾಳೆ ಗೊನೆಗಳು ಸಂಪೂರ್ಣ ಕಟಾವಿಗೆ ಬಂದಿದ್ದವು. ಪ್ರತಿಬಾರಿ ಹೀಗೆ ಆದರೆ ನಮ್ಮ ಜೀವನ ಹೇಗೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಕಳೆದ ಬಾರಿಯೂ ಬಾಳೆ ಬೆಳೆ ಬಿದ್ದಾಗ ಅಧಿಕಾರಿಗಳು ಶಾಸಕರು ಬಂದರು. ಆದರೆ ನಮಗೆ ಒಂದು ರೂಪಾಯಿ ಪರಿಹಾರ ನೀಡಲಿಲ್ಲ. ಈ ಬಾರಿಯೂ ಪರಿಹಾರ ಸಿಗುತ್ತೋ ಇಲ್ವೋ ಗೊತ್ತಿಲ್ಲ ಎಂದು ಬಾಳೆ ಬೆಳೆ ಕಳೆದುಕೊಂಡ ರೈತ ಮಾರುತಿ ನೋವು ತೋಡಿಕೊಂದ್ದಾರೆ. ಇದನ್ನೂ ಓದಿ:ಬಂಗಾಳಕೊಲ್ಲಿಯಲ್ಲಿ ಚುರುಕುಗೊಂಡ ಚಂಡಮಾರುತ – ಒಂದು ವಾರ ರಾಜ್ಯದಲ್ಲಿ ಗಾಳಿ ಸಹಿತ ಮಳೆ

     

  • ಟೊಮೆಟೋ ಬಳಿಕ ಬಾಳೆಹಣ್ಣಿಗೆ ಬಂಗಾರದ ಬೆಲೆ- 1 ಕೆಜಿ ಏಲಕ್ಕಿ ಬಾಳೆ 80 ರೂ.ಗೆ ಮಾರಾಟ

    ಟೊಮೆಟೋ ಬಳಿಕ ಬಾಳೆಹಣ್ಣಿಗೆ ಬಂಗಾರದ ಬೆಲೆ- 1 ಕೆಜಿ ಏಲಕ್ಕಿ ಬಾಳೆ 80 ರೂ.ಗೆ ಮಾರಾಟ

    ಕೋಲಾರ: ಇಷ್ಟು ದಿನಗಳ ಕಾಲ ಟೊಮೆಟೋ ಬೆಲೆ ಏರಿಕೆಯಿಂದ ಸದ್ದು ಮಾಡಿ ಈಗ ಟೊಮೆಟೋ ಬೆಲೆ ಇಳಿಕೆಯಾಗಿದೆ. ಶ್ರಾವಣ ಮಾಸದ ಆರಂಭವಾಗಿ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಈಗ ಟೊಮೆಟೋ ಸ್ಥಾನವನ್ನು ಬಾಳೆಹಣ್ಣು ತುಂಬಲಿದೆ. ಸದ್ಯ ಬಾಳೆಹಣ್ಣು (Banana) ಬೆಳೆದವರಿಗೆ ಜಾಕ್‍ಪಾಟ್ ಎನ್ನುವಂತಾಗಿದ್ದು ಬಾಳೆ ಬೆಳೆದ ರೈತನ (Farmer) ಬದುಕು ಬಂಗಾರವಾಗಿದೆ.

    ಕೋಲಾರದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಟೊಮೆಟೋ ಬೆಲೆ (Tomato Price) ಏರಿಕೆ ಸದ್ದು ಜೋರಾಗಿತ್ತು. ಆದರೆ ಟೊಮೆಟೋ ಬೆಲೆ ಈಗ ಕಡಿಮೆಯಾಗಿದೆ. ಆದರೆ ಟೊಮೆಟೋ ರೀತಿಯಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವುದು ಬಾಳೆ ಹಣ್ಣು. ಇನ್ನೇನು ಶ್ರಾವಣ ಮಾಸ ಆರಂಭವಾಗಲಿದ್ದು, ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ದಸರಾ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ಈ ಹಿನ್ನೆಲೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಾಳೆ ಹಣ್ಣು ಬೆಳೆದ ರೈತರಿಗೆ ಜಾಕ್‍ಪಾಟ್ ಬೆಲೆ ಸಿಗುತ್ತಿದೆ. ಏಲಕ್ಕಿ ಬಾಳೆಹಣ್ಣು ಬೆಳೆದಿರುವ ಕೋಲಾರ ಜಿಲ್ಲೆಯ ದೊಡ್ಡಕಾರಿ ಗ್ರಾಮದ ಪ್ರಭಾಕರ್ ಅವರಿಗೆ ಭರ್ಜರಿ ಬೆಲೆ ಸಿಕ್ಕಿದೆ. ಐದು ಲಕ್ಷ ರೂಪಾಯಿ ಬಂಡವಾಳ ಹಾಕಿ 15 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಪ್ರಭಾಕರ್ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆಹಣ್ಣು ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ರೈತರು ತೋಟದಲ್ಲೇ ಒಂದು ಕೆ.ಜಿ. ಬಾಳೆಹಣ್ಣಿಗೆ 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ವಿವಿಧ ಕಂಪನಿಗಳು, ವಿವಿಧ ಮಾರುಕಟ್ಟೆಗಳಿಂದ ರೈತರ ತೋಟಕ್ಕೆ ಬಂದು ಬಾಳೆಹಣ್ಣು ಖರೀದಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್‍ಡಿಕೆ

    ಇತ್ತೀಚೆಗೆ ಕೋಲಾರ (Kolara) ಜಿಲ್ಲೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೆಚ್ಚಾಗಿ ಟೊಮೆಟೋ ಸೇರಿದಂತೆ ಹೆಚ್ಚು ತರಕಾರಿ ಬೆಳೆಗಳನ್ನೇ ರೈತರು ಬೆಳೆದಿದ್ದರು. ಅದರಲ್ಲೂ ಬಹುತೇಕ ಬೆಳೆಗಳು ವೈರಸ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆ ಟೊಮೆಟೋಗೆ ಅತಿ ಹೆಚ್ಚಿನ ಬೆಲೆ ಬಂದಿತ್ತು. ಹಾಗಾಗಿ ಮತ್ತೆ ಬಹುತೇಕ ರೈತರು ಟೊಮೆಟೋ ಬೆಳೆಯನ್ನೇ ಬೆಳೆಯುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ಬಾಳೆ ವಾರ್ಷಿಕ ಬೆಳೆ ಇದಕ್ಕಾಗಿ ಸರಾಸರಿ ಹನ್ನೊಂದು ತಿಂಗಳಿಂದ ಒಂದು ವರ್ಷ ಕಾಯಬೇಕು. ಆದರೆ ಟೊಮೆಟೋ ಅಥವಾ ತರಕಾರಿ ಬೆಳೆಗಳು ಮೂರು ತಿಂಗಳಲ್ಲೇ ಫಸಲು ಬರುತ್ತದೆ. ಹಾಗಾಗಿ ರೈತರು ದೀರ್ಘಕಾಲಿಕ ಬೆಳೆ ಬೆಳೆಯಲು ಮನಸ್ಸು ಮಾಡುತ್ತಿಲ್ಲ. ಕೆಲವೇ ಕೆಲವು ರೈತರು ಮಾತ್ರ ಬಾಳೆ ಬೆಳೆ ಬೆಳೆದಿದ್ದಾರೆ.

     

    ಟೊಮೆಟೋ ಸೇರಿದಂತೆ ಇತರ ತರಕಾರಿ ಬೆಳೆಗಳಿಗೆ ಹೋಲಿಕೆ ಮಾಡಿದ್ರೆ ಬಾಳೆ ಬೆಳೆಗೆ ರೋಗಬಾಧೆ ಕಡಿಮೆ ಮತ್ತು ನಿರ್ವಹಣಾ ವೆಚ್ಚವೂ ಕಡಿಮೆ. ಹಾಗಾಗಿ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದರೆ ಉತ್ತಮ ಲಾಭ ಪಡೆಯಬಹುದು ಅನ್ನೋದು ಬಾಳೆ ಬೆಳೆದ ರೈತರ ಮಾತು. ಸದ್ಯ ಈಗಿನ ಪರಿಸ್ಥಿತಿಯನ್ನು ನೋಡಿದ್ರೆ, ಟೊಮೆಟೋ ರೀತಿ ಬಾಳೆ ಬೆಳೆದ ರೈತರೂ ಕೂಡಾ ಲಕ್ಷಾಧೀಶ್ವರರು ಹಾಗೂ ಕೋಟ್ಯಧೀಶ್ವರರಾಗಲಿದ್ದಾರೆ ಅನ್ನೋದು ರೈತರ ಅಭಿಪ್ರಾಯ. ಇನ್ನು ಮಾರುಕಟ್ಟೆಯಲ್ಲೂ ಕೂಡಾ ಸದ್ಯ ಕೆಜಿ ಬಾಳೆಹಣ್ಣಿಗೆ 100 ರೂಪಾಯಿ ಇದ್ದು ಹಬ್ಬಗಳ ಸಾಲು ಶುರುವಾದರೆ, ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಇಷ್ಟು ದಿನ ಬೆಲೆ ಏರಿಕೆಯಿಂದ ಸದ್ದು ಮಾಡಿದ್ದ ಟೊಮೆಟೋ ಬೆಲೆ ಕಡಿಮೆಯಾಗಿದ್ದು, ಇನ್ನು ಮುಂದೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಾಳೆ ಹಣ್ಣಿನ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಈಗ ಕೇವಲ ಟೊಮೆಟೋ ಬೆಳೆದವರಷ್ಟೇ ಅಲ್ಲಾ ಬಾಳೆಹಣ್ಣು ಬೆಳೆದವರು ಕೂಡಾ ಕೋಟ್ಯಧಿಪತಿಗಳಾಗಿರೋದಂತೂ ಸುಳ್ಳಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ಖಿನ್ನತೆಯಿಂದ ಬಳಲುತ್ತಿದ್ದೀರಾ ಹಾಗಾದ್ರೆ ಈ ಆಹಾರ ಸೇವಿಸಿ

    ತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಕೆಲಸದಿಂದಾಗಿ ಹೆಚ್ಚಾಗಿ ಯುವಜನರ ಮೇಲೂ ಹೆಚ್ಚು ಒತ್ತಡ ಬೀರುತ್ತಿದೆ. ಒತ್ತಡದಿಂದಾಗಿ ಅನೇಕ ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದರಿಂದ ಹೊರಬರಲು ಅನೇಕ ದಿನಗಳೇ ಬೇಕಾಗುತ್ತದೆ. ಈ ಮಾನಸಿಕ ಖಿನ್ನತೆಯಿಂದಾಗಿ ಜನರು ತಮ್ಮ ಸಂತೋಷವನ್ನೇ ಮರೆಯುತ್ತಿದ್ದಾರೆ. ಮಾ.19 ಅಂತಾರಾಷ್ಟ್ರೀಯ ಸಂತೋಷದ ದಿನ. ಆಹಾರ (Food) ಪದ್ಧತಿ ಮೂಲಕ ನಿಮ್ಮನ್ನು ನೀವು ಸಂತೋಷವಾಗಿಡಲು ಒಂದಿಷ್ಟು ಮಾಹಿತಿ ಇಲ್ಲಿದೆ.

    ಮೀನು ತಿನ್ನಿ: ಆಲ್ಬಕೋರ್ ಹಾಗೂ ಸಾಲ್ಮನ್‍ಗಳಂತಹ ಮೀನುಗಳಲ್ಲಿ (Fish) ಒಮೆಗಾ – 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದನ್ನು ತಿನ್ನುವುದರಿಂದ ನಿಮ್ಮ ಖಿನ್ನತೆಯ ಮಟ್ಟ ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲದೇ ದಿನವಿಡೀ ಸಂತೋಷದಿಂದ ಕಳೆಯಹುದು. ಈ ಆಮ್ಲಗಳು ಸೆಲ್ ಸಗ್ನಲಿಂಗ್ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ.

    ಚಾಕಲೇಟ್‍ಗಳು: ಚಾಕಲೇಟಿನಲ್ಲಿ (Chocolate) ಸಕ್ಕರೆಯ ಅಂಶವಿರುವುದರಿಂದ ನಿಮ್ಮ ಮನಸ್ಸನ್ನು ಖುಷಿಯಿಂದ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಚಾಕೊಲೇಟ್ ಅನ್ನು ಸೇವಿಸಿದಾಗ, ಇದು ಕ್ಯಾನಬಿನಾಯ್ಡ್‍ಗಳಂತೆಯೇ ಇರುವಂತಹ ಉತ್ತಮ ಸಂಯೋಜನೆಗಳ ಕ್ಯಾಸ್ಕೇಡ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸುತ್ತದೆ. ಚಾಕಲೇಟ್ ಅನ್ನು ಇತಿ ಮಿತಿಯಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

    ಮೊಸರು, ಯೋಗಾರ್ಟ್ ಸೇವಿಸಿ: ಮೊಸರು, ಯೋಗಾರ್ಟ್‍ನಂತಹ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಮನಸ್ಸನ್ನು ಉಲ್ಲಾಸವಾಗಿರಲು ಮಾತ್ರವಲ್ಲದೇ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಅವುಗಳಲ್ಲಿರುವ ಪ್ರೋಬಯಾಟಿಕ್‍ಗಳಿಂದ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಜೊತೆಗೆ ಸೆರೊಟೋನಿನ್ ಎಂಬ ಭಾವನೆಯ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ಬಾಳೆಹಣ್ಣು: ಬಾಳೆಹಣ್ಣುಗಳು (Banana) ವಿಟಮಿನ್ ಬಿ 6 ಅನ್ನು ಹೊಂದಿರುತ್ತವೆ. ಇದು ಡೋಪಮೈನ್ ಮತ್ತು ಸಿರೊಟೋನಿನ್ ಎಂಬ ಹಾರ್ಮೋನುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬಾಳೆಹಣ್ಣುಗಳು ನೈಸರ್ಗಿಕ ಸಕ್ಕರೆ ಮತ್ತು ಪ್ರಿಬಯಾಟಿಕ್ ಫೈಬರ್‍ನ ಉತ್ತಮ ಮೂಲವಾಗಿದೆ. ಇದು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸ್ಥಿರವಾಗಿರಿಸುತ್ತದೆ. ಇದನ್ನೂ ಓದಿ: PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

  • ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್‍ರಿಂದ ಬಾಳೆ ಹಣ್ಣು ಭಾಗ್ಯ

    ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್‍ರಿಂದ ಬಾಳೆ ಹಣ್ಣು ಭಾಗ್ಯ

    ತುಮಕೂರು: ಹೆಲ್ಮೆಟ್ (Helmet) ಆಯ್ತು, ಈಗ ಜೆಡಿಎಸ್ (JDS) ಮುಖಂಡ ಆರ್. ಉಗ್ರೇಶ್ (R Ugresh) ಅವರು ಬಾಳೆ ಹಣ್ಣು ಭಾಗ್ಯ ಕರುಣಿಸಿದ್ದಾರೆ.

    ಹೌದು. ಹುಟ್ಟು ಹಬ್ಬದ ಪ್ರಯುಕ್ತ ಉಗ್ರೇಶ್ ಅವರು ಹಣ್ಣು ಹಂಪಲು ಹಂಚಿದ್ದಾರೆ. ಅಂತೆಯೇ ಹಣ್ಣು ಕೊಂಡೊಯ್ಯಲು ಜನ ಮುಗಿಬಿದ್ದಿದ್ದಾರೆ. ಸಿಕ್ಕಿದ್ದೇ ಸೀರುಂಡೆ ಎಂದು ಅಭಿಮಾನಿಗಳು ಬಾಳೆ ಗೊನೆಯನ್ನೇ ಹೊತ್ತೊಯ್ದ ಪ್ರಸಂಗ ನಡೆದಿದೆ.

    ಶಿರಾ ಕ್ಷೇತ್ರ (Sira Assembly constituency) ದ ಜೆಡಿಎಸ್ (JDS) ಟಿಕೆಟ್ ಆಕಾಂಕ್ಷಿಯೂ ಆದ ಉಗ್ರೇಶ್, ಕಳೆದ ತಿಂಗಳು ಹೆಲ್ಮೆಟ್ ಹಂಚಿ ಸುದ್ದಿಯಲ್ಲಿದ್ದರು. ಟಿಕೆಟ್ ಗಾಗಿ ಮೂರ್ನಾಲ್ಕು ಮುಖಂಡರಲ್ಲಿ ಫೈಟ್ ನಡೆಯುತ್ತಿದ್ದು, ಅದರಲ್ಲಿ ಉಗ್ರೇಶ್ ಮುಂಚೂಣಿಯಲಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ವೋಟರ್ ಐಡಿ ಗೋಲ್ಮಾಲ್ – ಸ್ಥಳೀಯ ಶಾಸಕರ ಮೇಲೆ ಕಾಂಗ್ರೆಸ್ ಆರೋಪ

    ಇದೀಗ ಹುಟ್ಟು ಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದು, ಕಾರು, ಬೈಕಲ್ಲಿ ಶಿರಾ ಜನತೆ ಬಾಳೆಗೊನೆ ಎಸ್ಕೇಪ್ ಮಾಡಿದ್ದಾರೆ. ಶಿರಾ ನಗರದಲ್ಲಿ ರ‍್ಯಾಲಿ ನಡೆಸಿ, ಅಭಿಮಾನಿಗಳು ಉಗ್ರೇಶ್ ಅವರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಠಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಬಾಳೆಹಣ್ಣಿನ ರವಾ ಫ್ರೈ ಒಮ್ಮೆ ನೀವೂ ಟ್ರೈ ಮಾಡಿ

    ಬಾಳೆಹಣ್ಣಿನ ರವಾ ಫ್ರೈ ಒಮ್ಮೆ ನೀವೂ ಟ್ರೈ ಮಾಡಿ

    ನೀವು ಮೀನಿನ ರವಾ ಫ್ರೈ ಸವಿದಿರುತ್ತೀರಿ. ಅದೇ ಸ್ವಾದವನ್ನು ನೀವು ಸಸ್ಯಾಹಾರದಲ್ಲೂ ಪಡೆಯಬಹುದು ಎಂಬುದು ನಿಮಗೆ ಗೊತ್ತಾ? ಬಾಳೆಹಣ್ಣಿನಿಂದ ಮಾಡುವ ರವಾ ಫ್ರೈ ಥೇಟ್ ಫಿಶ್ ಫ್ರೈ ಟೇಸ್ಟ್ ಅನ್ನೇ ನೀಡುತ್ತದೆ. ನೀವೂ ಕೂಡಾ ಒಂದು ಬಾರಿ ಮಾಡಿ ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    * ಬಾಳೆಕಾಯಿ – 2
    * ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ – ಅರ್ಧ ಟೀಸ್ಪೂನ್
    * ಕೊತ್ತಂಬರಿ ಪುಡಿ – 1 ಟೀಸ್ಪೂನ್
    * ಜೀರಿಗೆ ಪುಡಿ – ಅರ್ಧ ಟೀಸ್ಪೂನ್
    * ಗರಂ ಮಸಾಲಾ – ಅರ್ಧ ಟೀಸ್ಪೂನ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ನಿಂಬೆ ರಸ – 2 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್

    ರವಾ ಲೇಪನಕ್ಕೆ:
    * ಒರಟಾದ ರವೆ – 1 ಕಪ್
    * ಅಕ್ಕಿ ಹಿಟ್ಟು – 2 ಟೀಸ್ಪೂನ್
    * ಮೆಣಸಿನ ಪುಡಿ – ಕಾಲು ಟೀಸ್ಪೂನ್
    * ಉಪ್ಪು – ಅರ್ಧ ಟೀಸ್ಪೂನ್
    * ಎಣ್ಣೆ – ಹುರಿಯಲು

    ಮಾಡುವ ವಿಧಾನ:
    * ಮೊದಲಿಗೆ ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು ಅಡ್ಡಕ್ಕೆ ತೆಳುವಾದ ತುಂಡುಗಳಾಗಿ ಕತ್ತರಿಸಿ.
    * ಒಂದು ದೊಡ್ಡ ತಟ್ಟೆಯಲ್ಲಿ ಮೆಣಸಿನ ಪುಡಿ, ಅರಿಶಿನ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ನಿಂಬೆ ರಸ ಮತ್ತು 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.
    * ಎಲ್ಲವೂ ಚೆನ್ನಾಗಿ ಮಿಶ್ರಣವಾದ ಬಳಿಕ ಕತ್ತರಿಸಿದ ಬಾಳೇಕಾಯಿಗೆ ಅದನ್ನು ಹರಡಿ 30 ನಿಮಿಷ ಹಾಗೇ ಬಿಡಿ.
    * ಈಗ ಇನ್ನೊಂದು ಲೇಪನಕ್ಕೆ ಬೇರೊಂದು ಬಟ್ಟಲಿನಲ್ಲಿ ರವೆ, ಅಕ್ಕಿ ಹಿಟ್ಟು, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಮ್ಯಾರಿನೇಟ್ ಮಾಡಿದ ಬಾಳೆಕಾಯಿಯನ್ನು ತೆಗೆದುಕೊಂಡು, ರವೆಯ ಮಿಶ್ರಣದಲ್ಲಿ ಅದ್ದಿ.
    * ಈಗ ಡೀಪ್ ಫ್ರೈಗೆ ಕಾದ ಎಣ್ಣೆಯಲ್ಲಿ ಕೋಟ್ ಮಾಡಲಾದ ಬಾಳೆಕಾಯಿಯ ತುಂಡುಗಳನ್ನು ಬಿಡಿ.
    * ಅವುಗಳನ್ನು ಗರಿಗರಿಯಾಗಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಕಂದು ಬಣ್ಣವಾಗುವವರೆಗೆ ಬೇಯಿಸಿ ಬಳಿಕ ಟಿಶ್ಯೂ ಪೇಪರ್ ಮೇಲೆ ಹರಡಿ.
    * ಈಗ ಬಾಳೆಕಾಯಿಯ ರವಾ ಫ್ರೈ ತಯಾರಾಗಿದ್ದು, ಅದನ್ನು ಹಸಿರು ಚಟ್ನಿಯೊಂದಿಗೆ ಸವಿಯಿರಿ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

    ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

    ದಾವಣಗೆರೆ: ಮತ್ತೊಮ್ಮೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕೆಂದು ಅಭಿಮಾನಿಯೊಬ್ಬ ಬಾಳೆ ಹಣ್ಣಿನ ಮೇಲೆ ಬರೆದು ದೇವರ ಮೇಲೆ ಎಸೆದಿದ್ದಾನೆ.

    ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಎಂಬಾತ ಮತ್ತೊಮ್ಮೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕೆಂದು ದೇವರಲ್ಲಿ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಿರೇಕಲ್ಮಠ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಎಂದು ಬರೆದು ದೇವರ ರಥದ ಮೇಲೆ ಎಸೆದಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಾಲು ಮಾರಾಟಗಾರನ ಹತ್ಯೆ – ಮೋದಿ ಭೇಟಿ ಸಮಯದಲ್ಲೇ ಗುಜರಾತ್‍ನಲ್ಲಿ ಗುಂಪು ಘರ್ಷಣೆ

    ಜಾತ್ರಾಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಹಣ್ಣು ಜವಣೆ ಎಸೆಯುವ ಪದ್ದತಿ ಇದೆ. ಇದೇ ರೀತಿ ಈ ಹಿಂದೆ ಆರ್‌ಸಿಬಿ ಅಭಿಮಾನಿಯೊಬ್ಬರು ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು, ಬಾಳೆ ಹಣ್ಣಿನ ಜೊತೆಗೆ ಹತ್ತು ರೂಪಾಯಿ ಇಟ್ಟು ಪ್ರಾರ್ಥನೆ ಮಾಡಿ ರಥದ ಮೇಲೆ ಎಸೆದಿದ್ದರು. ಇದನ್ನೂ ಓದಿ: ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಲಿ- ರಥಕ್ಕೆ ಬಾಳೆಹಣ್ಣು ಎಸೆದ ಪ್ರೇಮಿ

    ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಲಿ- ರಥಕ್ಕೆ ಬಾಳೆಹಣ್ಣು ಎಸೆದ ಪ್ರೇಮಿ

    ತುಮಕೂರು: ಯುವಕ, ಯುವತಿಯರು ತಾವು ಪ್ರೀತಿಸಿದಾತ ಅಥವಾ ಆಕೆಯನ್ನು ಮದುವೆಯಾಗಲು ಅವಿರತ ಪ್ರಯತ್ನ ಮಾಡುತ್ತಿರುತ್ತಾರೆ. ಅಂತೆಯೇ ತುಮಕೂರಿನಲ್ಲಿ ಯುವಕನೊಬ್ಬ ರಥಕ್ಕೆ ಬಾಳೆಹಣ್ಣು ಎಸೆದ ಘಟನೆ ನಡೆದಿದೆ.

    ಹೌದು. ತಿಪಟೂರಿನ ಕೆಂಪಮ್ಮ ದೇವಿ ಜಾತ್ರೆಯಲ್ಲಿ ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ಪ್ರೇಮಿ ರಥಕ್ಕೆ ಎಸೆದಿದ್ದಾನೆ. ಈ ಮೂಲಕ ಪ್ರಿಯತಮೆಯನ್ನು ಮದುವೆಯಾಗಲು ದೇವಿ ಮೊರೆ ಹೋಗಿದ್ದಾನೆ. ಇದನ್ನೂ ಓದಿ: ಬುಡಕಟ್ಟು ಸಮುದಾಯದ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಬಾಲಕ – ಕ್ರಮಕ್ಕೆ ಸಿಎಂ ಸೂಚನೆ

    “ನಮ್ಮುಡುಗಿ ಜೊತೆ ಮದುವೆ ಆಗಲಿ” ಪಿ ಲವ್ ಎಲ್ ಅಂತಾ ಬಾಳೆಹಣ್ಣಿನಲ್ಲಿ ಬರೆದಿದ್ದಾನೆ. ನಂತರ ಅದನ್ನು ರಥಕ್ಕೆ ಎಸೆಯುವ ಮೂಲಕ ದೇವಿಯಲ್ಲಿ ಬೇಡಿಕೊಂಡಿದ್ದಾನೆ.

  • ವಿಭಿನ್ನ ಟೇಸ್ಟ್‌ನ  ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ

    ವಿಭಿನ್ನ ಟೇಸ್ಟ್‌ನ  ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ

    ಚಳಿಗೆ ಬಿಸಿ ಬಿಸಿಯಾದ ತಿಂಡಿಯನ್ನು ತಿನ್ನಬೇಕು ಎಂದು ಪ್ರತಿಯೊಬ್ಬರಿಗೂ ಎನ್ನಿಸುತ್ತದೆ. ಚಳಿಗಾಲದಲ್ಲಿ ರುಚಿಯಾದ ತಿಂಡಿಯನ್ನು ಬಯಸುವುದು ಸಹಜವಾಗಿದೆ. ಹೀಗಿರುವಾಗ ರುಚಿಯಾದ ಮತ್ತು ಆರೋಗ್ಯಕರವಾದ ವಿಭಿನ್ನ ಟೇಸ್ಟ್‌ನ  ನೀಡುವ ಬಾಳೆಕಾಯಿ ಸಮೋಸ ಮನೆಯಲ್ಲಿಯೇ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಗೋಧಿಹಿಟ್ಟು- 2 ಕಪ್
    * ಓಂ ಕಾಳು- ಸ್ವಲ್ಪ ಕಾಲು
    * ರುಚಿಗೆ ತಕ್ಕಷ್ಟು ಉಪ್ಪು
    * ತುಪ್ಪ- ಅರ್ಧ ಕಪ್
    * ಬಾಳೆಕಾಯಿ – 4
    * ಹಸಿರು ಬಟಾಣಿ – ಅರ್ಧ ಕಪ್
    * ಅಡುಗೆ ಎಣ್ಣೆ – 2 ಕಪ್
    * ಜೀರಿಗೆ- ಸ್ವಲ್ಪ
    * ಜೀರಿಗೆ ಪುಡಿ- ಸ್ವಲ್ಪ
    * ಅರಿಸಿಣ ಪುಡಿ-ಸ್ವಲ್ಪ
    * ದನಿಯಾ ಪುಡಿ- 1 ಚಮಚ
    * ಗರಂಮಸಾಲ – ಸ್ವಲ್ಪ
    * ಖಾರದಪುಡಿ – 1 ಚಮಚ


    ಮಾಡುವ ವಿಧಾನ:
    * ಮೊದಲು ಹಸಿರು ಬಟಾಣಿಯನ್ನು ನೆನೆಸಿಟ್ಟುಕೊಂಡು, ನಂತರ ಬಾಳೆಕಾಯಿ ಹಾಗೂ ಹಸಿರು ಬಟಾಣಿಯನ್ನು ಕುಕ್ಕರಿನಲ್ಲಿ ಮೆತ್ತಗೆ ಬೇಯಿಸಿಕೊಳ್ಳಬೇಕು.


    * ನಂತರ ಮತ್ತೋಂದು ಪಾತ್ರೆಯಲ್ಲಿ ಗೋಧಿಹಿಟ್ಟಿಗೆ ಓಂಕಾಳು, ಉಪ್ಪು, ಮೂರು ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಚಪಾತಿ ಹಿಟ್ಟಿಗಿಂತಲೂ ಗಟ್ಟಿಯಾಗಿ ಚೆನ್ನಾಗಿ ಕಲೆಸಿಡಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ

    * ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ ಬೇಯಿಸಿ ಜಜ್ಜಿದ ಬಟಾಣಿ, ಬಾಳೆಕಾಯಿ, ಬೇಯಿಸಿದ ಬಟಾಣಿ, ಜೀರಿಗೆ, ಅರಿಸಿಣಪುಡಿ, ಜೀರಿಗೆ ಪುಡಿ, ದನಿಯಾ ಪುಡಿ, ಗರಂಮಸಾಲ, ಖಾರದಪುಡಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

    * ನಾದಿದ ಹಿಟ್ಟನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಿಸಿ. ಅದರೊಳಗೆ ಹೂರಣ ತುಂಬಿಸಿ.
    *ಸಮೋಸಾವನ್ನು ಬೇಯಿಸಿದರೆ ರುಚಿಯಾದ ಬಾಳೆಕಾಯಿ ಸಮೋಸ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

  • ಮಕ್ಕಳಿಗೆ ಇಷ್ಟವಾಗುವ ಬಾಳೆಹಣ್ಣಿನ ದೋಸೆ ಮಾಡಿ ಸವಿಯಿರಿ

    ಮಕ್ಕಳಿಗೆ ಇಷ್ಟವಾಗುವ ಬಾಳೆಹಣ್ಣಿನ ದೋಸೆ ಮಾಡಿ ಸವಿಯಿರಿ

    ರಾಗಿ, ಗೋಧಿ ಎಂದು ವಿಧ ವಿಧವಾದ ದೋಸೆ ಮಾಡುವ ನಾವು ಬಾಳೆಹಣ್ಣಿನ ದೋಸೆ ಮಾಡಬಹುದು. ಹಾಗೆಯೇ ಬಾಳೆಹಣ್ಣಿನ ದೋಸೆಯ ಬಗ್ಗೆ ಗೊತ್ತಾ? ಹೌದು, ಬಾಳೆಹಣ್ಣಿನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡಬಹುದು. ನೀವು ಮಕ್ಕಳಿಗೆ ಇಷ್ಟವಾಗುವ ಸಿಹಿಯಾದ ಈ ದೋಸೆಯನ್ನು ಮಾಡಲು ಟ್ರೈ ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಬಾಳೆಹಣ್ಣು- 8
    * ಗೋಧಿ ಹಿಟ್ಟು- 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಬೆಲ್ಲ – ಸ್ವಲ್ಪ
    * ತುಪ್ಪ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಬಾಳೆಹಣ್ಣನ್ನು ತೆಗೆದುಕೊಂಡು ಚನ್ನಾಗಿ ಕಿವುಚಿಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
    * ಬಾಳೆ ಹಣ್ಣಿನ ಪೇಸ್ಟ್‍ಗೆ ಸ್ವಲ್ಪ ಗೋಧಿ ಹಿಟ್ಟು ಹಾಗೂ ಸ್ವಲ್ಪ ನೀರನ್ನು ಹಾಕುತ್ತಾ ಕಲಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಉಪ್ಪು ಹಾಗೂ ಬೆಲ್ಲವನ್ನು ಸೇರಿಸಿ ಚನ್ನಾಗಿ ಕಲಸಿದ ನಂತರ ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಬರಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
    * ಗೋಧಿ ದೋಸೆಯ ಹಿಟ್ಟು ಸಿದ್ದವಾಗಿದೆ. ಈಗ ಒಂದು ಕಾವಲಿ ತೆಗೆದುಕೊಂಡು ಕಾಯಲು ಇಡಿ. ಅದಕ್ಕೆ ಮೇಲೆ ತುಪ್ಪ ಸವರಿ ದೋಸೆ ಆಕಾರದಲ್ಲಿ ಈ ಮಿಶ್ರಣವನ್ನು ಹಾಕಿದರೆ ರುಚಿಯಾದ ಬಾಳೆಹಣ್ಣಿನ ದೋಸೆ ಸವಿಯಲು ಸಿದ್ಧವಾಗುತ್ತದೆ.