Tag: Balochistan Liberation Army

  • ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    ಇಸ್ಲಾಮಾಬಾದ್‌: ಕದನ ವಿರಾಮದ (Ceasefire) ಬಳಕವೂ ಭಾರತದ ವಿರುದ್ಧ ಆಟಟೋಪ ನಡೆಸುತ್ತಿರುವ ಪಾಕಿಸ್ತಾನಕ್ಕೆ (Pakistan) ಬಲೂಚಿಸ್ತಾನ ಹೋರಾಟಗಾರರು ಶಾಕ್‌ ಮೇಲೆ ಶಾಕ್‌ ನೀಡುತ್ತಿದ್ದಾರೆ. ಭಾರತಕ್ಕೆ ಬೆಂಬಲ ಘೋಷಿಸಿದ್ದ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ 51ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ.

    ಪಾಕಿಸ್ತಾನಿ ಮಿಲಿಟರಿ (Paklistan Army) ಮತ್ತು ಗುಪ್ತಚರ ತಾಣಗಳನ್ನು ಗುರಿಯಾಗಿಸಿಕೊಂಡು 51ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಬಿಎಲ್‌ಎ ಅಧಿಕೃತವಾಗಿ ಹೇಳಿಕೊಂಡಿದೆ. ಇದನ್ನೂ ಓದಿ: ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    Balochistan

    ಬಿಎಲ್‌ಎ ವಕ್ತಾರ ಜಿಯಾಂಡ್ ಬಲೋಚ್ ನೀಡಿದ ಮಾಹಿತಿ ಪ್ರಕಾರ, ಈ ವಾರದ ಆರಂಭದಲ್ಲಿ ಭಾರತ-ಪಾಕಿಸ್ತಾನ (India Pakistan) ಮಿಲಿಟರಿ ಉದ್ವಿಗ್ನತೆ ತೀವ್ರತೆ ಪಡೆದುಕೊಂಡಿತ್ತು. ಇದರ ಸದುಪಯೋಗ ಪಡೆದುಕೊಂಡು ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನದ 51ಕ್ಕೂ ಹೆಚ್ಚು ಸ್ಥಳಗಳಲ್ಲಿ ಹಲವು ಗಂಟೆಗಳ ಕಾಲ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

    ಈ ದಾಳಿಯಲ್ಲಿ ಪಾಕ್‌ ಬೆಂಗಾವಲು ವಾಹನ, ಗುಪ್ತಚರ ಕೇಂದ್ರಗಳು ಮತ್ತು ಖನಿಜ ಸಾಗಣೆ ವಾಹನಗಳೂ ಸೇರಿದ್ದವು. ಈ ದಾಳಿಗಳು ಶತ್ರುಗಳನ್ನ ನಿರ್ಮೂಲನೆ ಮಾಡುವುದು ಮಾತ್ರವಲ್ಲದೇ ಮುಂಬರುವ ದಿನಗಳಲ್ಲಿ ಬಲವಾದ ಯುದ್ಧಕ್ಕೆ ಸಿದ್ಧತೆ ಬಲಪಡುವ ನಿಟ್ಟಿನಲ್ಲಿ ಸೇನಾ ಸಿದ್ಧತೆಯೂ ಕೂಡ ಆಗಿದೆ ಎಂದು ಯುದ್ಧದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    Pakistan Army

    ಇತ್ತೀಚೆಗಷ್ಟೇ ಪಾಕಿಸ್ತಾನದ ಸೇನಾ ಬೆಂಗಾಲವು ವಾಹನದ ಮೇಲೆ ಸುಧಾರಿತ ಸ್ಫೋಟಕ ಸಾಧನ (IED) ದಾಳಿ ನಡೆಸಿ 12 ಸೈನಿಕರನ್ನ ಬಿಎಲ್‌ಎ ಹತ್ಯೆಗೈದಿತ್ತು. ಈ ಬೆನ್ನಲ್ಲೇ ಬಲೂಚಿಸ್ತಾನದಾದ್ಯಂತ 39 ಸ್ಥಳಗಳಲ್ಲಿ ದಾಳಿ ನಡೆಸಿ ಪಾಕ್‌ ಪೊಲೀಸರನ್ನೇ ಅಪಹರಿಸಿತ್ತು.

    1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ. ಪಾಕ್‌-ಭಾರತ ನಡುವಿನ ಉದ್ವಿಗ್ನತೆಯನ್ನು ಬಲೂಚ್‌ ಲಿಬರೇಷನ್‌ ಆರ್ಮಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ದೇಹದಲ್ಲಿ ಒಂದು ತೊಟ್ಟು ರಕ್ತ ಇರೋವರೆಗೂ ಯುದ್ಧ ಮಾಡ್ತೀನಿ – ಮೈ ಪರಚಿಕೊಂಡ ಪಾಕ್‌ ಪ್ರಧಾನಿ

  • ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಕ್ವೆಟ್ಟಾದಿಂದ ಪಾಕ್‌ ಸೇನೆ ಪಲಾಯನ – ಸೇನಾ ಠಾಣೆಗಳನ್ನ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಇಸ್ಲಾಮಾಬಾದ್:‌ ಇತ್ತ ಭಾರತದ ದಾಳಿಗೆ (India’s Strike) ತತ್ತರಿಸಿರುವ ಪಾಕ್‌ ಅಕ್ಷರಶಃ ನಡುಗಿಹೋಗಿದೆ. ಇದೇ ಸಮಯ ಬಳಸಿಕೊಂಡಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ತನ್ನ ಪ್ರತ್ಯೇಕ ದೇಶದ ಹೋರಾಟವನ್ನು ತೀವ್ರಗೊಳಿಸಿದೆ.

    balochistan liberation army

    ಅಂತಾರಾಷ್ಟ್ರೀಯ ಗಡಿಯಲ್ಲಿ ಹೆಚ್ಚುತ್ತಿರುವ ಘರ್ಷಣೆಗಳಿಗೆ ಭಾರತ-ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡುತ್ತಿರುವಾಗ, ಇಸ್ಲಾಮಾಬಾದ್ ಈಗ ಮತ್ತೊಂದು ಭಾಗದಿಂದ ಮುತ್ತಿಗೆಗೆ ಒಳಗಾಗಿದೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪ್ರಾಂತೀಯ ರಾಜಧಾನಿ ಕ್ವೆಟ್ಟಾ ಸೇರಿದಂತೆ ಬಲೂಚಿಸ್ತಾನದಾದ್ಯಂತ (Balochistan) ಹಲವಾರು ಕಾರ್ಯತಂತ್ರದ ಸೇನಾ ಠಾಣೆಗಳನ್ನ ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಇದು ಪಾಕಿಸ್ತಾನಿ ಸೇನೆಯನ್ನು ಹಿಮ್ಮೆಟ್ಟುವಂತೆ ಮಾಡಿದೆ ಮತ್ತು ದೇಶದ ಪಶ್ಚಿಮ ರಕ್ಷಣಾ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿದೆ.

    Balochistan

    ಇದಕ್ಕೂ ಮುನ್ನ ಬಲೂಚಿಸ್ತಾನದಲ್ಲಿ ಹಲವೆಡೆ ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನದ ಧ್ವಜವನ್ನು ಹೋರಾಟಗಾರರು ಹಾರಿಸಿದ್ದರು. ಜಗತ್ತು ಪಾಕಿಸ್ತಾನದಿಂದ ತಮ್ಮ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ಹಿಂದಕ್ಕೆ ಪಡೆದು ಹೊಸದಾಗಿ ಉದಯೋನ್ಮುಖ ರಾಷ್ಟ್ರವಾದ ಬಲೂಚಿಸ್ತಾನಕ್ಕೆ ಸ್ಥಳಾಂತರಿಸುವ ಸಮಯ ಬಂದಿದೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ವಿದಾಯ, ಬಲೂಚಿಸ್ತಾನಕ್ಕೆ ಸ್ವಾಗತ ಎಂದು ಬಿಎಲ್‌ಹೆಚ್‌ ಹೇಳಿತ್ತು. ಇದನ್ನೂ ಓದಿ: ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನ ತ್ಯಜಿಸುವಂತೆ ಅಮೆರಿಕ ಹೇಳಲು ಸಾಧ್ಯವಿಲ್ಲ: ಜೆಡಿ ವ್ಯಾನ್ಸ್

    1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ. ಪಾಕ್‌-ಭಾರತ ನಡುವಿನ ಉದ್ವಿಗ್ನತೆಯನ್ನು ಬಲೂಚ್‌ ಲಿಬರೇಷನ್‌ ಆರ್ಮಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಕರಾಚಿಯ 15 ಕಡೆ ಭಾರೀ ಸ್ಫೋಟ – INS ವಿಕ್ರಾಂತ್‌ ನೌಕೆಯಿಂದ ಅಟ್ಯಾಕ್‌

  • ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನ ಧ್ವಜ ಹಾರಾಟ

    ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನ ಧ್ವಜ ಹಾರಾಟ

    * ಭಾರತ-ಪಾಕ್‌ ಯುದ್ಧದ ಮಧ್ಯೆ ಬಲೂಚ್‌ ಲಿಬರೇಷನ್‌ ಆರ್ಮಿ ಫುಲ್‌ ಆ್ಯಕ್ಟಿವ್

    ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ಯುದ್ಧ ಸನ್ನಿವೇಶದ ಮಧ್ಯೆ ಬಲೂಚಿಸ್ತಾನ ಲಿಬರೇಷನ್‌ ಆರ್ಮಿ (Balochistan Liberation Army) ಫುಲ್‌ ಆ್ಯಕ್ಟಿವ್ ಆಗಿದೆ.

    ಇದೇ ಸುಸಂದರ್ಭ ಎಂದು ತನ್ನ ಪ್ರತ್ಯೇಕ ದೇಶದ ಹೋರಾಟವನ್ನು ಬಲೂಚ್ ಲಿಬರೇಷನ್ ಆರ್ಮಿ ತೀವ್ರಗೊಳಿಸಿದೆ. ಮತ್ತೆ ಪಾಕಿಸ್ತಾನಕ್ಕೆ ಬಲೂಚಿಸ್ತಾನ ಸಂಕಷ್ಟ ತಂದೊಡ್ಡಿದೆ. ಇದನ್ನೂ ಓದಿ: ಬಲೂಚಿಸ್ತಾನ್‌ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು

    ಭಾರತದ ಆಪರೇಷನ್ ಸಿಂಧೂರ, ಡ್ರೋನ್‌ ದಾಳಿಗಳ ನಡುವೆ ಬಲೂಚಿಸ್ತಾನದಲ್ಲಿ ಹಲವೆಡೆ ಪಾಕ್ ಧ್ವಜಗಳಿಗೆ ಗುಡ್ ಬೈ ಹೇಳುತ್ತಿದೆ. ಪಾಕಿಸ್ತಾನದ ಧ್ವಜಗಳನ್ನು ಇಳಿಸಿ ಬಲೂಚಿಸ್ತಾನದ ಧ್ವಜ ಹಾರಾಟ ಮಾಡಲಾಗಿದೆ. ಬಲೂಚ್‌ ಪರ ಘೋಷಣೆ ಕೂಗಿದ್ದಾರೆ.

    ಜಗತ್ತು ಪಾಕಿಸ್ತಾನದಿಂದ ತಮ್ಮ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ಹಿಂದಕ್ಕೆ ಪಡೆದು ಹೊಸದಾಗಿ ಉದಯೋನ್ಮುಖ ರಾಷ್ಟ್ರವಾದ ಬಲೂಚಿಸ್ತಾನಕ್ಕೆ ಸ್ಥಳಾಂತರಿಸುವ ಸಮಯ ಬಂದಿದೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನಕ್ಕೆ ವಿದಾಯ, ಬಲೂಚಿಸ್ತಾನಕ್ಕೆ ಸ್ವಾಗತ ಎಂದು ಬಿಎಲ್‌ಹೆಚ್‌ ಹೇಳಿದೆ.

    ಈಗಾಗಲೇ ಬಲೂಚ್ ಲಿಬರೇಷನ್ ಆರ್ಮಿಯಿಂದಲೂ ಪಾಕಿಸ್ತಾನ ಸೈನಿಕರನ್ನು ಗುರಿಯಾಗಿಟ್ಟುಕೊಂಡು ದಾಳಿ ಮುಂದುವರಿದಿದೆ. ಈ‌ ನಡುವೆ ಬಲೂಚಿಸ್ತಾನದ ನಾಗರಿಕರಿಂದ ಪಾಕ್ ಧ್ವಜ ತೆಗೆಯುವ ಕೆಲಸ ನಡೆದಿದೆ.

    1971 ರಿಂದಲೂ ಪ್ರತ್ಯೇಕ ಬಲೂಚಿಸ್ತಾನ ದೇಶಕ್ಕಾಗಿ ಪಾಕಿಸ್ತಾನದ ಜತೆ ಸಂಘರ್ಷ ಜಾರಿಯಲ್ಲಿದೆ. ಪಾಕ್‌-ಭಾರತ ನಡುವಿನ ಉದ್ವಿಗ್ನತೆಯನ್ನು ಬಲೂಚ್‌ ಲಿಬರೇಷನ್‌ ಆರ್ಮಿ ಸದುಪಯೋಗಪಡಿಸಿಕೊಳ್ಳುತ್ತಿದೆ. ಇದನ್ನೂ ಓದಿ: ರಫೇಲ್‌ ಬಗ್ಗೆ ಸುಳ್ಳು ಹೇಳಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕಿಸ್ತಾನ!

  • ಬಲೂಚಿಸ್ತಾನ್‌ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು

    ಬಲೂಚಿಸ್ತಾನ್‌ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು

    – ಸ್ಫೋಟದ ತೀವ್ರತೆಗೆ ವಾಹನ ಸಮೇತ ಸೈನಿಕರ ದೇಹ ಛಿದ್ರ ಛಿದ್ರ

    ಇಸ್ಲಾಮಾಬಾದ್‌: ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್‌ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆ ವಾಹನದ (Pakistan Army vehicle) ಮೇಲೆ ಬಲೂಚ್ ಲಿಬರೇಶನ್ ಆರ್ಮಿ (BLA) ಐಇಡಿ (ಸುಧಾರಿತ ಸ್ಫೋಟಕ ಸಾಧನ) ದಾಳಿ ನಡೆಸಿದ್ದು, ಪಾಕ್ ಸೇನೆಯ 12 ಮಂದಿ ಪಾಕ್‌ ಸೈನಿಕರನ್ನು ಹತ್ಯೆ ಮಾಡಿದೆ.

    ಬಲೂಚ್‌ ಲಿಬರೇಷನ್‌ ಆರ್ಮಿಯ (Balochistan Liberation Army) ಹೋರಾಟಗಾರರು ಪಾಕ್‌ ಸೇನಾ ವಾಹನವನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ. ಈ ವೇಳೆ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದಂತೆ ಸೇನಾ ವಾಹನದಲ್ಲಿದ್ದ 12 ಸೈನಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಾಹೋರ್‌ನಲ್ಲಿ ಅಲ್ಲೋಲ ಕಲ್ಲೋಲ – ಮಿಲಿಟರಿ ವಿಮಾನ ನಿಲ್ದಾಣದ ಬಳಿ ಮೂರು ಸ್ಫೋಟ

    ಸಾಂದರ್ಭಿಕ ಚಿತ್ರ

    ಸ್ಫೋಟ ಸಂಭವಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಸ್ಫೋಟದ ತೀವ್ರತೆಗೆ ವಾಹನ ಸಮೇತ ಅದರಲ್ಲಿದ್ದ ಸೈನಿಕರ ದೇಹ ಛಿದ್ರ ಛಿದ್ರವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪಾಕ್‌ ಸೇನೆ ಬಲೂಚ್‌ ಹೋರಾಟಗಾರರನ್ನ ಸದೆಬಡಿಯಲು ಪಣ ತೊಟ್ಟಿದೆ. ಇದನ್ನೂ ಓದಿ: ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್‌ ಸಿಂಧೂರ ಬೆಂಬಲಿಸಿದ ಇಸ್ರೇಲ್‌

    ಒಂದು ವಾರದ ಹಿಂದೆಯಷ್ಟೇ ಬಲೂಚಿಸ್ತಾನ ಪ್ರಾಂತ್ಯದ ಕಚ್‌ ಮತ್ತು ಜಿಯಾರತ್‌ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು 10 ಉಗ್ರರನ್ನ ಕೊಂದಿದ್ದವು, ಇದಕ್ಕೆ ಪ್ರತೀಕಾರವಾಗಿ ಬಲೂಚ್‌ ಉಗ್ರರು ಐಇಡಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Operation Sindoor | ಭಾರತದ ದಾಳಿಯಲ್ಲಿ 31 ಮಂದಿ ಹತ್ಯೆ, 46 ಮಂದಿಗೆ ಗಾಯ – ಹೊಣೆ ಹೊತ್ತ ಪಾಕ್‌ ಸೇನೆ 

  • ಪಾಕಿಸ್ತಾನದ 2ನೇ ಅತಿ ದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ

    ಪಾಕಿಸ್ತಾನದ 2ನೇ ಅತಿ ದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) 2ನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣವಾದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ದಿಕ್ ಮೇಲೆ ದಾಳಿ ನಡೆದಿದೆ.

    ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA)ಯ ಮಜೀದ್ ಬ್ರಿಗೇಡ್, ಟರ್ಬತ್‌ನಲ್ಲಿರುವ ನೌಕಾ ವಾಯುನೆಲೆಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ. ಇದನ್ನೂ ಓದಿ: ಅರುಣಾಚಲ ಪ್ರದೇಶ ನಮ್ಮದು.. ಭಾರತ ಆಕ್ರಮಿಸಿಕೊಂಡಿದೆ: ಚೀನಾ

    ಬಲೂಚಿಸ್ತಾನದಲ್ಲಿ ಚೀನಾದ ಹೂಡಿಕೆಗೆ ಮಜೀದ್‌ ಬ್ರಿಗೇಡ್‌ ಟೀಕೆ ವ್ಯಕ್ತಪಡಿಸಿದೆ. ಈ ಪ್ರದೇಶದ ಸಂಪನ್ಮೂಲಗಳನ್ನು ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದೆ. ತನ್ನ ಯೋಧರು ವಾಯುನೆಲೆಯೊಳಗೆ ನುಸುಳಿದ್ದಾರೆ ಎಂದು ಬಿಎಲ್‌ಎ ಹೇಳಿಕೊಂಡಿದೆ. ಹೆಚ್ಚುವರಿಯಾಗಿ, ಚೀನಾದ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

    ಇದರ ಬೆನ್ನಲ್ಲೇ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಗಸ್ತು ತಿರುಗಿವೆ. ಟರ್ಬಟ್ ಮಿಲಿಟರಿ ಚಟುವಟಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಮೂರು ಗಂಟೆಗಳ ಕಾಲ ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ನಡೆದಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ನೀತಿ ಆಯೋಗದ ಮಾಜಿ ಉದ್ಯೋಗಿ ಲಂಡನ್‌ನಲ್ಲಿ ಅಪಘಾತಕ್ಕೆ ಬಲಿ

    ದಾಳಿಯಲ್ಲಿ 10 ಕ್ಕೂ ಹೆಚ್ಚು ಪಾಕಿಸ್ತಾನಿ ಸಿಬ್ಬಂದಿಯನ್ನು ಕೊಂದಿರುವುದಾಗಿ ಬಿಎಲ್‌ಎ ಹೇಳಿಕೊಂಡಿದೆ. ತಮ್ಮವರು ಪಿಎನ್‌ಎಸ್‌ ಸಿದ್ದಿಕ್ ಮೇಲೆ ದಾಳಿ ಮಾಡಿದ್ದಾರೆಂದು ಹೇಳಲಾದ ಆಡಿಯೊ ಕ್ಲಿಪ್ ಅನ್ನು ಸಹ ಬಿಡುಗಡೆ ಮಾಡಿದೆ.