Tag: Balochistan

  • ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಇಸ್ಲಾಮಾಬಾದ್: ಬಲೂಚಿಸ್ತಾನ್‌ ಪರ ಮಾತನಾಡಿದ್ದಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಪಾಕಿಸ್ತಾನವು ‘ಭಯೋತ್ಪಾದಕ’ ಎಂಬ ಹಣಪಟ್ಟಿ ಕಟ್ಟಿದೆ.

    ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಭಾರತೀಯ ಸಿನಿಮಾದ ಜಾಗತಿಕ ವ್ಯಾಪ್ತಿಯ ಬಗ್ಗೆ ಮಾತನಾಡುವಾಗ, ಬಲೂಚಿಸ್ತಾನ್ (Balochistan) ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದರು. ಹೀಗಾಗಿ, ಪಾಕಿಸ್ತಾನ (Pakistan) ಸರ್ಕಾರ ಅವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದೆ. ಇದನ್ನೂ ಓದಿ: ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಸಲ್ಮಾನ್ ಅವರನ್ನು ಪಾಕಿಸ್ತಾನದ 1997 ರ ಭಯೋತ್ಪಾದನಾ ನಿಗ್ರಹ ಕಾಯ್ದೆಯ 4ನೇ ವೇಳಾಪಟ್ಟಿಯ ಅಡಿಯಲ್ಲಿ ಸೇರಿಸಲಾಗಿದೆ. ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಕಟ್ಟುನಿಟ್ಟಿನ ನಿಗಾದಲ್ಲಿರುವ ವ್ಯಕ್ತಿಗಳಿಗೆ ಈ ವರ್ಗವನ್ನು ಕಾಯ್ದಿರಿಸಲಾಗಿದೆ.

    ‘ಈಗ ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ಗಳಿಸುತ್ತದೆ. ಏಕೆಂದರೆ ಇಲ್ಲಿ ಹಲವಾರು ದೇಶಗಳ ಜನರು ವಾಸಿಸುತ್ತಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಲ್ಮಾನ್‌ ಖಾನ್‌ ಸಮಾರಂಭದಲ್ಲಿ ಮಾತನಾಡಿದ್ದರು.

    ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸುವ ಅವರ ಹೇಳಿಕೆಯು ಪಾಕ್‌ನ ತೀವ್ರ ಟೀಕೆಗೆ ಗುರಿಯಾಗಿದೆ. ಏಕೆಂದರೆ ಪಾಕಿಸ್ತಾನ ಆ ಪ್ರಾಂತ್ಯವನ್ನು ದೇಶದ ಅವಿಭಾಜ್ಯ ಅಂಗವೆಂದು ನೋಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸಲ್ಮಾನ್ ಅವರ ಮಾತುಗಳನ್ನು ಶ್ಲಾಘಿಸಿದ್ದಾರೆ. ಬಲೂಚ್ ಸ್ವಾತಂತ್ರ್ಯದ ಪ್ರಮುಖ ವಕೀಲರಾದ ಮೀರ್ ಯಾರ್ ಬಲೂಚ್, ‘ನಟ ಆರು ಕೋಟಿ ಬಲೂಚ್ ಜನರಿಗೆ ಸಂತೋಷ ತಂದಿದ್ದಾರೆ’ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ: ಟ್ರಂಪ್ ಅದೇ ರಾಗ

    ಪಾಕಿಸ್ತಾನದ ಅತಿದೊಡ್ಡ ಆದರೆ ಕಡಿಮೆ ಅಭಿವೃದ್ಧಿ ಹೊಂದಿದ ಪ್ರಾಂತ್ಯವಾದ ಬಲೂಚಿಸ್ತಾನ್, ದೀರ್ಘಕಾಲದಿಂದ ಆರ್ಥಿಕ ನಿರ್ಲಕ್ಷ್ಯ, ರಾಜಕೀಯ ದಮನ ಮತ್ತು ಮಿಲಿಟರಿ ದಮನಗಳನ್ನು ಎದುರಿಸುತ್ತಿದೆ. ಅಪಾರ ಖನಿಜ ಸಂಪತ್ತಿನ ಹೊರತಾಗಿಯೂ, ಈ ಪ್ರದೇಶವು ಬಡತನದಿಂದ ಬಳಲುತ್ತಿದೆ. ಅದರ ಜನಸಂಖ್ಯೆಯ 70% ಕ್ಕಿಂತ ಹೆಚ್ಚು ಜನರು ಬಡತನ ರೇಖೆಯ ಕೆಳಗಿದ್ದಾರೆ.

  • ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್‌ನಿಂದ ಸೇನಾ ವಾಹನದ ಮೇಲೆ ದಾಳಿ – 10ಕ್ಕೂ ಹೆಚ್ಚು ಪಾಕ್ ಸೈನಿಕರ ಸಾವು

    ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್‌ನಿಂದ ಸೇನಾ ವಾಹನದ ಮೇಲೆ ದಾಳಿ – 10ಕ್ಕೂ ಹೆಚ್ಚು ಪಾಕ್ ಸೈನಿಕರ ಸಾವು

    ಕ್ವೆಟ್ಟಾ: ಬಲೂಚಿಸ್ತಾನದಲ್ಲಿ (Balochistan) ನಡೆಯುತ್ತಿರುವ ಪ್ರತಿರೋಧ ಚಳುವಳಿಯ ಭಾಗವಾಗಿ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ (Balochistan Liberation Front) ಪಾಕಿಸ್ತಾನದ ಸೇನಾ ವಾಹನದ ಮೇಲೆ ದಾಳಿ ನಡೆಸಿದೆ. ಪರಿಣಾಮ 10ಕ್ಕೂ ಹೆಚ್ಚು ಪಾಕ್ ಸೈನಿಕರು (Pakistan Army) ಸಾವನ್ನಪ್ಪಿದ್ದಾರೆ.

    ಪಾಕಿಸ್ತಾನ ಸೇನೆಯು ಬಲೂಚ್ ರಾಜಿ ಆಜೋಯ್ ಸಂಗರ್ ಎಂಬ ಬಲೂಚ್ ಸಶಸ್ತ್ರ ಗುಂಪುಗಳ ಒಕ್ಕೂಟದ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಆಕ್ರಮಣಕಾರಿಯಾಗಿ ಮುನ್ನುಗ್ಗಲು ಪ್ರಯತ್ನಿಸಿದಾಗ ಖುಜ್ದಾರ್‌ನ ಜೆಹ್ರಿ ಪ್ರದೇಶದಲ್ಲಿ ಭೀಕರ ದಾಳಿ ನಡೆದಿದೆ. ಇದನ್ನೂ ಓದಿ:ಬೆಳಕಿನ ಕಿರಣಗಳಲ್ಲಿ ನಮ್ಮ ದೇಶ ಅದ್ಭುತ, ಬೆಂಗ್ಳೂರು, ಪುಣೆ ಮಿನುಗುತ್ತೆ – ಬಾಹ್ಯಾಕಾಶದಿಂದ ಭಾರತ ಕಂಡ ಬಗೆ ಹಂಚಿಕೊಂಡ ಶುಕ್ಲಾ

    ಈ ಕುರಿತು ಬಲೂಚ್ ರಾಜಿ ಆಜೋಯ್ ಸಂಗರ್ ವಕ್ತಾರ ಬಲೂಚ್ ಖಾನ್ ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಘರ್ಷಣೆ ಸಮಯದಲ್ಲಿ 10ಕ್ಕೂ ಅಧಿಕ ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆ. BRASನ ಆರು ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಬಲೂಚ್ ಲಿಬರೇಶನ್ ಆರ್ಮಿ, ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್, ಬಲೂಚ್ ರಿಪಬ್ಲಿಕನ್ ಗಾರ್ಡ್ ಮತ್ತು ಸಿಂಧು ದೇಶ್ ರೆವಲ್ಯೂಷನರಿ ಆರ್ಮಿಗಳನ್ನು ಒಳಗೊಂಡಿರುವ ಒಕ್ಕೂಟವು ಒಂದೇ ಧ್ವಜದ ಅಡಿಯಲ್ಲಿ ಒಗ್ಗಟ್ಟಿನಿಂದ ಉಳಿಯುತ್ತವೆ. ಎಲ್ಲ ಪ್ರತಿರೋಧಗಳ ನಡುವೆಯೂ BRAS ಏಕತೆಗೆ ಬದ್ಧರಾಗುವುದನ್ನು ಪುನರುಚ್ಛರಿಸುತ್ತದೆ ಎಂದಿದ್ದಾರೆ.

    ಬಲೂಚಿಸ್ತಾನ್ ದೀರ್ಘಕಾಲದಿಂದ ನಡೆಯುತ್ತಿರುವ ಮಾನವ ಹಕ್ಕುಗಳ ಸಮಸ್ಯೆಗಳಿಗೆ ಕೇಂದ್ರಬಿಂದುವಾಗಿದೆ. ಈ ಪ್ರದೇಶವು ಪ್ರತ್ಯೇಕತಾವಾದಿ ಚಳುವಳಿಗಳು, ಬಲವಾದ ಮಿಲಿಟರಿ ಸಂಬಂಧಿಸಿದ ಹಿಂಸಾಚಾರಗಳನ್ನು ಎದುರಿಸಿದೆ.ಇದನ್ನೂ ಓದಿ: ದೀಪಾವಳಿ ಬೋನಸ್ ಕೊಟ್ಟಿಲ್ಲ ಅಂತ ಬೇಸರ; ಟೋಲ್ ಸಂಗ್ರಹಿಸದೇ ವಾಹನಗಳನ್ನ ಫ್ರೀ ಬಿಟ್ಟ ಸಿಬ್ಬಂದಿ

  • ಬಲೂಚಿಸ್ತಾನದಲ್ಲಿ ಆರ್ಮಿ ಸ್ಕೂಲ್ ಬಸ್ ಮೇಲೆ ಬಾಂಬ್ ದಾಳಿ – 4 ಮಕ್ಕಳು ಸಾವು

    ಬಲೂಚಿಸ್ತಾನದಲ್ಲಿ ಆರ್ಮಿ ಸ್ಕೂಲ್ ಬಸ್ ಮೇಲೆ ಬಾಂಬ್ ದಾಳಿ – 4 ಮಕ್ಕಳು ಸಾವು

    ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ(Balochistan) ಸೇನಾ ಶಾಲಾ ಬಸ್ ಮೇಲೆ ಬಾಂಬ್ ದಾಳಿ ನಡೆದಿದೆ. ದಾಳಿಯಲ್ಲಿ 4 ಮಕ್ಕಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

    ಬಲೂಚಿಸ್ತಾನ್ ಪ್ರಾಂತ್ಯದ ಖುಜ್ದಾರ್‌ನಲ್ಲಿ(Khuzdar) ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಬಾಂಬ್ ಇರಿಸಿದ್ದ ಕಾರು ಬಂದು ಡಿಕ್ಕಿ ಹೊಡೆದಿದೆ. ಈ ಬಾಂಬ್ ದಾಳಿಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಉಪ ಆಯುಕ್ತ ಯಾಸಿರ್ ಇಕ್ಬಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಮಿಂಚಿದ ರಶ್ಮಿಕಾ- ಶ್ರೀವಲ್ಲಿ ಬ್ಯೂಟಿಗೆ ಫ್ಯಾನ್ಸ್ ಫಿದಾ

    ಸ್ಫೋಟ ಸಂಭವಿಸಿದಾಗ ಸೇನಾ ಸ್ವಾಮ್ಯದ ಶಾಲೆಗೆ ಹೋಗುತ್ತಿದ್ದ ಬಸ್‌ನಲ್ಲಿ ಸುಮಾರು 40 ವಿದ್ಯಾರ್ಥಿಗಳು ಇದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪರಾಧದ ಆದಾಯದಿಂದ ಸೋನಿಯಾ, ರಾಹುಲ್‌ 142 ಕೋಟಿ ಲಾಭ ಪಡೆದಿದ್ದಾರೆ: ಇಡಿ

    ಪಾಕಿಸ್ತಾನದ(Pakistan) ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಗ್ದ ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಸಂಪೂರ್ಣ ಅನಾಗರಿಕತೆಯ ಕೃತ್ಯ ಎಂದು ದಾಳಿಕೋರರ ವಿರುದ್ಧ ಕಿಡಿಕಾರಿದ್ದಾರೆ.

  • ಭಾರತ ಕೆಣಕಿ ಹೋಳಾದ ಪಾಕಿಸ್ತಾನ – ಸ್ವತಂತ್ರ ದೇಶ ಘೋಷಿಸಿಕೊಂಡ ಬಲೂಚಿಸ್ತಾನ

    ಭಾರತ ಕೆಣಕಿ ಹೋಳಾದ ಪಾಕಿಸ್ತಾನ – ಸ್ವತಂತ್ರ ದೇಶ ಘೋಷಿಸಿಕೊಂಡ ಬಲೂಚಿಸ್ತಾನ

    – ವಿಶ್ವಸಂಸ್ಥೆ ಮಾನ್ಯತೆ, ರಾಯಭಾರ ಕಚೇರಿಗೆ ಭಾರತಕ್ಕೆ ಮನವಿ
    – ಪಾಕ್ ಸೈನ್ಯ ಬಲೂಚಿಸ್ತಾನ ತೊರೆಯಲಿ

    ಇಸ್ಲಾಮಾಬಾದ್: ಪಾಕಿಸ್ತಾನದಿಂದ(Pakistan) ಬಲೂಚಿಸ್ತಾನ್ ಸ್ವತಂತ್ರವಾಗಿದೆ ಎಂದು ಬಲೂಚಿಸ್ತಾನದ(Balochistan) ಲೇಖಕ ಮಿರ್ ಯಾರ್ ಬಲೂಚ್(Mir Yar Baloch) ಸೇರಿ ಕೆಲ ನಾಯಕರು ಎಕ್ಸ್‌ನಲ್ಲಿ ಘೋಷಿಸಿದ್ದು, ಈ ವಿಚಾರವೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಇತ್ತೀಚಿನ ಗಡಿಯಾಚೆಗಿನ ಮಿಲಿಟರಿ ಕಾರ್ಯಾಚರಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾದ ನಡುವೆ ಈ ಘೋಷಣೆ ಬಂದಿದೆ. ಬಲೂಚಿಸ್ತಾನದ ಪರ ಲೇಖಕ ಮತ್ತು ವಕೀಲ ಮಿರ್ ಯಾರ್ ಬಲೂಚ್, ಎಕ್ಸ್ ಖಾತೆಯಲ್ಲಿ `ರಿಪಬ್ಲಿಕ್ ಆಫ್ ಬಲೂಚಿಸ್ತಾನ’ ಪೋಸ್ಟ್‌ಗಳ ಮೂಲಕ ಘೋಷಣೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಸೋಫಿಯಾ‌ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ

    ಅಲ್ಲದೇ ನವದೆಹಲಿಯಲ್ಲಿ ಬಲೂಚಿಸ್ತಾನದ ರಾಯಭಾರ ಕಚೇರಿಗೆ ಅವಕಾಶ ನೀಡುವಂತೆ ಅವರು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನಿ ಸೈನ್ಯವನ್ನು ಬಲೂಚಿಸ್ತಾನದಿಂದ ಕಳುಹಿಸಿ, ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಪಾಕ್ ಉಗ್ರರ ವಿರುದ್ಧದ ಆಪರೇಷನ್ ಸಿಂಧೂರ(Operation Sindoor) ಬಳಿಕ ಬಲೂಚಿಸ್ತಾನದವರು ಈ ಘೋಷಣೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ವರುಣನ ಆರ್ಭಟ – ಲಕ್ಷಾಂತರ ರೂ.ಮೌಲ್ಯದ ಭತ್ತ ನಾಶ

    ʻನಾವು ನಮ್ಮ ಸ್ವಾತಂತ್ರ‍್ಯವನ್ನು ಪಡೆದುಕೊಂಡಿದ್ದೇವೆʼ
    ಭಯೋತ್ಪಾದಕ ಪಾಕಿಸ್ತಾನದ ಪತನ ಸಮೀಪಿಸುತ್ತಿದೆ. ನಾವು ನಮ್ಮ ಸ್ವಾತಂತ್ರ‍್ಯವನ್ನು ಪ್ರತಿಪಾದಿಸಿದ್ದೇವೆ. ಅಲ್ಲದೇ ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿಯನ್ನು ಅನುಮತಿಸುವಂತೆ ನಾವು ಭಾರತವನ್ನು ವಿನಂತಿಸುತ್ತೇವೆ. ಜಿನ್ಹಾ ಹೌಸ್ ಅನ್ನು ಬಲೂಚಿಸ್ತಾನ ಹೌಸ್ ಎಂದು ಮರುನಾಮಕರಣ ಮಾಡಬೇಕು ಎಂದು ಮಿರ್ ಯಾರ್ ಬಲೂಚ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ವಿಶ್ವಸಂಸ್ಥೆಯು ತಕ್ಷಣವೇ ಬಲೂಚಿಸ್ತಾನಕ್ಕೆ ಶಾಂತಿ ಪಡೆಗಳನ್ನು ಕಳುಹಿಸಬೇಕು. ಪಾಕ್ ಸೇನೆ, ಪೊಲೀಸ್ ಸಿಬ್ಬಂದಿ, ಮಿಲಿಟರಿ ಗುಪ್ತಚಾರ ಸೇರಿ ಶಸ್ತ್ರಾಸ್ತ್ರ ಸೇರಿ ಎಲ್ಲಾ ಯುದ್ಧ ಸಾಮಾಗ್ರಿಗಳನ್ನು ಬಿಟ್ಟು ತಕ್ಷಣವೇ ಬಲೂಚಿಸ್ತಾನವನ್ನು ತೊರೆಯವಂತೆ ಆಗ್ರಹಿಸಬೇಕು ಎಂದಿದ್ದಾರೆ. ಇದನ್ನೂ ಓದಿ: Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    ಬಲೂಚಿಸ್ತಾನ್‌ನ ಸ್ವಾತಂತ್ರ‍್ಯ ಸರ್ಕಾರದ ರಾಜ್ಯೋತ್ಸವ ಶೀಘ್ರದಲ್ಲೇ ನಡೆಯಲಿದೆ. ಬಲೂಚಿಸ್ತಾನದ ನಿಯಂತ್ರಣವನ್ನು ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು. ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡಲಾಗಿವುದು. ನಮ್ಮ ಮಿತ್ರ ರಾಷ್ಟçಗಳನ್ನು ಬಲೂಚಿಸ್ತಾನದ ಸರ್ಕಾರ ರಚನೆಯಂದು ಆಹ್ವಾನಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ – 31 ಜನರಿಗೆ ಗಾಯ

    ಮತ್ತೊಂದು ಪೋಸ್ಟ್‌ನಲ್ಲಿ, ಅವರು ಹೇ ನಾ-ಪಾಕಿಸ್ತಾನ್. ನಿಮ್ಮ ಬಳಿ ಸೈನ್ಯವಿದ್ದರೆ, ನಾವು ಬಲೂಚ್‌ನ ಸ್ವತಂತ್ರ ಯೋಧರಿದ್ದಾರೆ. ಈ ಯೋಧರು ನಿಮ್ಮ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆಯ ಬರಹ ಪೋಸ್ಟ್ ಮಾಡಿದ್ದಾರೆ.

  • ಪೊಲೀಸರೇ ಅರೆಸ್ಟ್‌ – ಪಾಕ್‌ ಹಿಡಿತದಲ್ಲಿದ್ದ ನಗರ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಪೊಲೀಸರೇ ಅರೆಸ್ಟ್‌ – ಪಾಕ್‌ ಹಿಡಿತದಲ್ಲಿದ್ದ ನಗರ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಇಸ್ಲಾಮಾಬಾದ್‌: ಭಾರತದ (India) ಮೇಲೆ ನಡೆಸುತ್ತಿರುವ ಪಾಕಿಸ್ತಾನಕ್ಕೆ (Pakistan) ಬಲೂಚಿಸ್ತಾನ ಹೋರಾಟಗಾರರು ಶಾಕ್‌ ನೀಡುತ್ತಿದ್ದಾರೆ. ಪಾಕ್‌ ಸರ್ಕಾರ ಹಿಡಿತದಲ್ಲಿರುವ ಬಲೂಚಿಸ್ತಾನದ (Balochistan) ಕಲಾತ್ ಜಿಲ್ಲೆಯ ಮಂಗೋಚಾರ್ ನಗರವನ್ನು ವಶಪಡಿಸಿದೆ ಎಂದು ಅಧಿಕೃತವಾಗಿ ತಿಳಿಸಿದೆ.

    ಖಾಜಿನೈ ಹೆದ್ದಾರಿಯನ್ನು ನಿರ್ಬಂಧಿಸಿದ ಬಳಿಕ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಲೂಚಿಸ್ತಾನದಾದ್ಯಂತ 39 ಸ್ಥಳಗಳಲ್ಲಿ ನಡೆದ ದಾಳಿಗಳ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ ಎಂದು ಬಲೂಚಿಸ್ತಾನ ಲಿಬರೇಷನ್‌ ಆರ್ಮಿ (Baloch Liberation Army) ಹೇಳಿಕೊಂಡಿದೆ. ಇದನ್ನೂ ಓದಿ: ಭಾರತದ ವಾಯುನೆಲೆಗೆ ಯಾವುದೇ ಹಾನಿಯಾಗಿಲ್ಲ, ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ ಪಾಕ್‌ : ಭಾರತ

    ಪೊಲೀಸ್ ಠಾಣೆಗಳನ್ನು ವಶಪಡಿಸಿಕೊಂಡಿದ್ದೇವೆ. ಪ್ರಮುಖ ಹೆದ್ದಾರಿಗಳಲ್ಲಿ ದಿಗ್ಬಂಧನ ಹೇರಿದ್ದೇವೆ. ಪಾಕಿಸ್ತಾನಿ ಪಡೆಗಳ ಮೇಲೆ ಮತ್ತು ಖನಿಜ ಸಂಪನ್ಮೂಲಗಳನ್ನು ಲೂಟಿ ಮಾಡುವವರ ವಿರುದ್ಧ ದಾಳಿ ನಡೆಸುತ್ತೇವೆ ಎಂದು ಹೇಳಿದೆ.

  • ಬಲೂಚಿಸ್ತಾನ್‌ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು

    ಬಲೂಚಿಸ್ತಾನ್‌ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು

    – ಸ್ಫೋಟದ ತೀವ್ರತೆಗೆ ವಾಹನ ಸಮೇತ ಸೈನಿಕರ ದೇಹ ಛಿದ್ರ ಛಿದ್ರ

    ಇಸ್ಲಾಮಾಬಾದ್‌: ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್‌ ಪ್ರದೇಶದಲ್ಲಿ ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆ ವಾಹನದ (Pakistan Army vehicle) ಮೇಲೆ ಬಲೂಚ್ ಲಿಬರೇಶನ್ ಆರ್ಮಿ (BLA) ಐಇಡಿ (ಸುಧಾರಿತ ಸ್ಫೋಟಕ ಸಾಧನ) ದಾಳಿ ನಡೆಸಿದ್ದು, ಪಾಕ್ ಸೇನೆಯ 12 ಮಂದಿ ಪಾಕ್‌ ಸೈನಿಕರನ್ನು ಹತ್ಯೆ ಮಾಡಿದೆ.

    ಬಲೂಚ್‌ ಲಿಬರೇಷನ್‌ ಆರ್ಮಿಯ (Balochistan Liberation Army) ಹೋರಾಟಗಾರರು ಪಾಕ್‌ ಸೇನಾ ವಾಹನವನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾರೆ. ಈ ವೇಳೆ ವಿಶೇಷ ಕಾರ್ಯಾಚರಣೆ ಕಮಾಂಡರ್ ತಾರಿಕ್ ಇಮ್ರಾನ್ ಮತ್ತು ಸುಬೇದಾರ್ ಉಮರ್ ಫಾರೂಕ್ ಸೇರಿದಂತೆ ಸೇನಾ ವಾಹನದಲ್ಲಿದ್ದ 12 ಸೈನಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಾಹೋರ್‌ನಲ್ಲಿ ಅಲ್ಲೋಲ ಕಲ್ಲೋಲ – ಮಿಲಿಟರಿ ವಿಮಾನ ನಿಲ್ದಾಣದ ಬಳಿ ಮೂರು ಸ್ಫೋಟ

    ಸಾಂದರ್ಭಿಕ ಚಿತ್ರ

    ಸ್ಫೋಟ ಸಂಭವಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಸ್ಫೋಟದ ತೀವ್ರತೆಗೆ ವಾಹನ ಸಮೇತ ಅದರಲ್ಲಿದ್ದ ಸೈನಿಕರ ದೇಹ ಛಿದ್ರ ಛಿದ್ರವಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪಾಕ್‌ ಸೇನೆ ಬಲೂಚ್‌ ಹೋರಾಟಗಾರರನ್ನ ಸದೆಬಡಿಯಲು ಪಣ ತೊಟ್ಟಿದೆ. ಇದನ್ನೂ ಓದಿ: ಉಗ್ರರು ಅಮಾಯಕರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಆಗಲ್ಲ – ಆಪರೇಷನ್‌ ಸಿಂಧೂರ ಬೆಂಬಲಿಸಿದ ಇಸ್ರೇಲ್‌

    ಒಂದು ವಾರದ ಹಿಂದೆಯಷ್ಟೇ ಬಲೂಚಿಸ್ತಾನ ಪ್ರಾಂತ್ಯದ ಕಚ್‌ ಮತ್ತು ಜಿಯಾರತ್‌ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳು 10 ಉಗ್ರರನ್ನ ಕೊಂದಿದ್ದವು, ಇದಕ್ಕೆ ಪ್ರತೀಕಾರವಾಗಿ ಬಲೂಚ್‌ ಉಗ್ರರು ಐಇಡಿ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Operation Sindoor | ಭಾರತದ ದಾಳಿಯಲ್ಲಿ 31 ಮಂದಿ ಹತ್ಯೆ, 46 ಮಂದಿಗೆ ಗಾಯ – ಹೊಣೆ ಹೊತ್ತ ಪಾಕ್‌ ಸೇನೆ 

  • ಪಾಕ್‌ ರೈಲು ಹೈಜಾಕ್‌, ಪುಲ್ವಾಮಾ ಮಾದರಿ ಅಟ್ಯಾಕ್‌ – ಏನಿದು ಬಲೂಚ್ ದಂಗೆ?

    ಪಾಕ್‌ ರೈಲು ಹೈಜಾಕ್‌, ಪುಲ್ವಾಮಾ ಮಾದರಿ ಅಟ್ಯಾಕ್‌ – ಏನಿದು ಬಲೂಚ್ ದಂಗೆ?

    – ಕೊಂದು ಎಸೆಯಿರಿ ಎಂದಿದ್ದ ಪಾಕ್‌!
    – ಉಗ್ರರಿಗೆ ಹೆದರಿ ಸೇನೆ ತೊರೆಯುತ್ತಿರೋ ಪಾಕ್‌ ಯೋಧರು!

    ಲೂಚಿಸ್ತಾನ್ ಲಿಬರೇಷನ್ ಆರ್ಮಿಯಿಂದ (Baloch Liberation Army) ಹೈಜಾಕ್‌ ಆಗಿದ್ದ ಪಾಕಿಸ್ತಾನದ (Pakistan) ಜಾಫರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಇದರ ಬೆನ್ನಲ್ಲೇ ಪುಲ್ವಾಮ ಮಾದರಿ ದಾಳಿಯಲ್ಲಿ ಪಾಕ್‌ನ 90 ಮಂದಿ ಸೈನಿಕರನ್ನು ಹತ್ಯೆಗೈಯ್ಯಲಾಗಿದೆ ಎಂದು ಬಿಎಲ್‌ಎ ಹೇಳಿಕೊಂಡಿದೆ.

    ರೈಲು ಹೈಜಾಕ್‌ ಬಳಿಕ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಬೇಡಿಕೆಗಳನ್ನು ಈಡೇರಿಸಲು 48 ಗಂಟೆಗಳ ಸಮಯ ನೀಡಲಾಗಿತ್ತು. ಪಾಕಿಸ್ತಾನವು (Pakistan) ಮಾತುಕತೆಗೆ ನಿರಾಕರಿಸಿ ಮೊಂಡುತನ ಪ್ರದರ್ಶಿಸಿದ್ದಕ್ಕೆ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗಿದೆ ಎಂದು ಬಿಎಲ್‌ಎ ವಕ್ತಾರ ಜೀಯಂಡ್ ಬಲೂಚ್ ಹೇಳಿದ್ದರು. ಇನ್ನೂ ಕಾರ್ಯಾಚರಣೆಯಲ್ಲಿ ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ 12 ಸಾವನ್ನಪ್ಪಿದ್ದರು. ಈ ಬಲೂಚಿಸ್ತಾನ್ ಎಲ್ಲಿದೆ? ಬಲೂಚಿಸ್ತಾನ್ ಹಾಗೂ ಪಾಕ್‌ ನಡುವಿನ ಸಂಘರ್ಷವೇನು? ಬಲೂಚಿಸ್ತಾನ್ ಲಿಬರೇಷನ್ ಆರ್ಮಿಯ ಉದ್ದೇಶವೇನು ಎಂಬ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಬಲೂಚಿಸ್ತಾನ್ ಎಲ್ಲಿದೆ?
    ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನವನ್ನು ಈ ಹಿಂದೆ ಕಲಾತ್ ಎಂದು ಕರೆಯಲಾಗುತ್ತಿತ್ತು. ಆಗಸ್ಟ್ 11, 1947 ರಂದು ಬ್ರಿಟಿಷ್ ಮೇಲ್ವಿಚಾರಣೆಯಲ್ಲಿ ಕಲಾತ್ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದಕ್ಕೆ ಸಹಿ ಹಾಕಿ, ಕಲಾತ್‌ನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಲಾಯಿತು. ಆದರೆ ಅದರ ಸ್ವಾತಂತ್ರ್ಯವು ಅತ್ಯಂತ ಅಲ್ಪಕಾಲಿಕವಾಗಿತ್ತು. ಮಾರ್ಚ್ 27, 1948 ರಂದು, ಪಾಕಿಸ್ತಾನವು ಬಲೂಚಿಸ್ತಾನವನ್ನು ಆಕ್ರಮಿಸಿಕೊಂಡಿತು.

    ಪಾಕ್‌ ಜೊತೆ ವಿಲೀನಕ್ಕೆ ಏಕೆ ವಿರೋಧ?
    ಏಕೀಕರಣದ ನಂತರ ಪಾಕ್‌ ತೆಗೆದುಕೊಂಡ ಮಿಲಿಟರಿ ಮತ್ತು ರಾಜಕೀಯ ನಿರ್ಧಾರಗಳ ಮೇಲೆ ಬಲೂಚಿಸ್ತಾನ ಕಡಿಮೆ ಪ್ರಭಾವವನ್ನು ಹೊಂದಿದೆ. ಅದರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಕೊರತೆಯಿಂದಾಗಿ ಬಲೂಚ್‌ನ ಜನ ಪಾಕ್‌ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

    ಏನಿದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ?
    ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ) 2000ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದು, ಈಗ 25ನೇ ವರ್ಷಕ್ಕೆ ಕಾಲಿಟ್ಟಿದೆ. ಇದು ಸ್ಥಾಪನೆಗೊಳ್ಳುವ ಮುನ್ನವೇ ಪ್ರತ್ಯೇಕ ಬಲೂಚಿಸ್ತಾನ ಬೇಕು ಎಂಬ ಬೇಡಿಕೆ ಇತ್ತು. 2000ನೇ ಇಸವಿಯಲ್ಲಿ ಪಾಕ್ ಆಡಳಿತದ ವಿರುದ್ಧ ಸರಣಿ ಬಾಂಬ್ ಸ್ಪೋಟಿಸಿ ಬಲೂಚಿಸ್ತಾನದ ಬೇಡಿಕೆ ಮುಂದಿರಿಸಿದಾಗ ಬಿಎಲ್‌ಎ ಹೆಸರು ಹೆಚ್ಚು ಪ್ರಚಾರಕ್ಕೆ ಬಂದಿತ್ತು.

    ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯವನ್ನು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿ ಸ್ವಾತಂತ್ರ್ಯ ನೀಡುವಂತೆ ಆಗ್ರಹಿಸುತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯವು ಭೌಗೋಳಿಕವಾಗಿ ಸ್ವಲ್ಪ ದೊಡ್ಡ ಗಾತ್ರ ಹೊಂದಿದ್ದು,ಈ ಪ್ರಾಂತ್ಯವು ಅನಿಲ, ಖನಿಜ ಸಂಪತ್ತಿಗೆ ಹೆಸರುವಾಸಿಯಾಗಿದೆ. ಇಲ್ಲಿ, ಬಿಎಲ್‌ಎ ಹೊರತಾಗಿ ಇನ್ನೂ ಕೆಲವು ಜನಾಂಗೀಯ ಬಂಡುಕೋರ ಸಂಘಟನೆಗಳೂ ಇವೆ. ಬಲೂಚಿಸ್ತಾನದ ಬೆಟ್ಟ, ಪವರ್ತ ಪ್ರದೇಶಗಳು ಬಂಡುಕೋರರಿಗೆ ಸುರಕ್ಷಿತ ತಾಣವಾಗಿವೆ.

    ಸಕ್ರಿಯವಾಗಿರುವ ಬಿಎಲ್‌ಎ ಆಜಾದ್ ಬಣ
    ಬಿಎಲ್‌ಎ ಬಂಡುಕೋರ ಸಂಘಟನೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಕ್ರಿಯವಾಗಿದೆ. 2022ರಲ್ಲಿ ಪಾಕ್ ಸೇನೆ ಮತ್ತು ನೌಕಾ ನೆಲೆಗಳ ಮೇಲೆ ದಾಳಿ ನಡೆಸಿ ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿತ್ತು. ಅಲ್ಲದೇ ಕರಾಚಿಯ ವಿವಿಯಲ್ಲಿ ಚೀನೀಯರ ಮೇಲೆ ದಾಳಿ ನಡೆಸಿತ್ತು. ಬಲೂಚಿಸ್ತಾನದಲ್ಲಿರುವ ಪಾಕಿಸ್ತಾನದ ಭದ್ರತಾ ಪಡೆ ಹಾಗೂ ಇತರೆ ಸೇನಾ ನೆಲೆಗಳ ಮೇಲೆ ಬಿಎಲ್‌ಎ ಪದೇಪದೆ ದಾಳಿ ನಡೆಸುತ್ತಿರುತ್ತದೆ. ಕರಾಚಿ ಬಂದರನ್ನೂ ಗುರಿಯಾಗಿಟ್ಟುಕೊಂಡು ಬಿಎಲ್‌ಎ ದಾಳಿ ನಡೆಸಿದ್ದು ಇದೆ. ಮುಂದುವರೆದು ಈಗ ಮಹಿಳಾ ಸೂಸೈಡ್ ಬಾಂಬರ್‌ಗಳನ್ನೂ ಬಿಎಲ್‌ಎ ಕಣಕ್ಕಿಳಿಸಿದೆ.

    ಪಾಕ್‌ ಚೀನಾ ಸಂಬಂಧಕ್ಕೆ ಬಿಎಲ್‌ಎ ಅಸಮಾಧಾನ
    ಪಾಕಿಸ್ತಾನ ಸೇನೆ ಹಾಗೂ ಚೀನಾ ಹಿತಾಸಕ್ತಿ ವಿಚಾರದಲ್ಲಿ ಬಲೂಚ್ ಬಂಡುಕೋರರಿಗೆ ಸಹಮತ ಇಲ್ಲ. ಪಾಕಿಸ್ತಾನದ ಗ್ವಾದರ್‌ನ್ನು ಚೀನಾಕ್ಕೆ ಬಿಟ್ಟುಕೊಟ್ಟ ವಿಚಾರದಲ್ಲಿ ಬಲೂಚ್ ಬಂಡುಕೋರರ ವಿರೋಧ ಇದೆ. ಇಲ್ಲಿ ಬಂದರು ನಿರ್ಮಾಣ ನಡೆಯುತ್ತಿದ್ದು, ಆ ಭಾಗದಲ್ಲಿ ಅವರು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಇನ್ನೂ ಬಿಎಲ್‌ಎ ಬಂಡುಕೋರರು ಇರಾನ್ ಹಾಗೂ ಅಫ್ಘಾನಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.

    ಬಲೂಚಿಸ್ತಾನ್ ಖನಿಜ ಸಂಪತ್ತಿಗೆ ಹೆಸರುವಾಸಿ
    ಪಾಕಿಸ್ತಾನದ ಮಟ್ಟಿಗೆ ಬಲೂಚಿಸ್ತಾನ ಉತ್ತಮ ಆದಾಯ ತರುವ ಪ್ರದೇಶವಾಗಿದೆ. ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಮೂಲಕ ಚೀನಾ ಈ ಪ್ರದೇಶದಲ್ಲಿ 65 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಇದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಬೆಲ್ಸ್ ಆಂಡ್ ರೋಡ್ ಉಪಕ್ರಮದ ಭಾಗವಾಗಿ ಜಾರಿಯಾಗಿದೆ. ಈ ಪ್ರಾಂತ್ಯದಲ್ಲಿ ಬ್ಯಾರಿಕ್ ಗೋಲ್ಡ್‌ಗೆ ಸೇರಿದ ರೇಕೊ ಡಿಕ್ ಸೇರಿ ಹಲವು ಗಣಿಗಾರಿಕೆ ಯೋಜನೆಗಳಿವೆ. ಈ ಪ್ರಾಂತ್ಯದಲ್ಲೇ ಜಗತ್ತಿನ ಅತಿದೊಡ್ಡ ಚಿನ್ನ ಹಾಗೂ ತಾಮ್ರದ ಗಣಿ ಇದೆ. ಚೀನಾ ಕೂಡ ಇಲ್ಲಿಂದ ಚಿನ್ನ ಹಾಗೂ ತಾಮ್ರದ ಗಣಿಗಾರಿಕೆ ನಡೆಸುತ್ತಿದೆ.

    ಬಲೂಚಿಸ್ತಾನ್ ಸ್ವಾತಂತ್ರ್ಯಕ್ಕೆ ಬಿಎಲ್‌ಎ ಪಣ
    ಕಳೆದುಹೋದ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಬಲೂಚಿಸ್ತಾನ ಇನ್ನೂ ಹೋರಾಡುತ್ತಿದೆ. ರಾಜಕುಮಾರ ಅಬ್ದುಲ್ ಕರೀಮ್‌ನಿಂದ ನವಾಬ್ ಖೈರ್ ಬುಕ್ಷ್ ಮರ್ರಿ ಸೇರಿದಂತೆ ಹಲವಾರು ಬಲೂಚಿಸ್ತಾನದ ನಾಯಕರು ಬಲೂಚಿಸ್ತಾನವನ್ನು ಪಾಕಿಸ್ತಾನದೊಂದಿಗೆ ವಿಲೀನ ಮಾಡಿರುವುದನ್ನು ʻಆಕ್ರಮಣʼ ಎಂದು ಕರೆದಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಈ ಸ್ವಾಧೀನವನ್ನು ಇಸ್ಲಾಮಿಕ್ ಸಹೋದರತ್ವದ ವಿಲೀನ ಎಂದು ಹೇಳಿಕೊಳ್ಳುತ್ತದೆ.

    1948 ರಿಂದ ವಿಲೀನ ಮಾಡಿರುವುದರ ವಿಚಾರಕ್ಕೆ ಹಿಂಸಾಚಾರಗಳು ನಡೆಯುತ್ತಿವೆ. ಇಲ್ಲಿಯವರೆಗೆ, ಬಲೂಚಿಸ್ತಾನದಲ್ಲಿ ಐದು ವಿಭಿನ್ನ ದಂಗೆಗಳು ನಡೆದಿವೆ. 1948 ರಲ್ಲಿ ಆರಂಭಿಕ ದಂಗೆಯ ನಂತರ, ಬಲೂಚಿಸ್ತಾನದವರು ಕ್ರಮವಾಗಿ 1958, 1963-69, 1973-77 ರಲ್ಲಿ ಮೂರು ಬಾರಿ ಪಾಕ್ ವಿರುದ್ಧ ದಂಗೆಗಳು ನಡೆದಿವೆ. 1990 ರ ದಶಕದ ಅಂತ್ಯದಲ್ಲಿ, ದಿ.ನವಾಬ್ ಖೈರ್ ಬುಕ್ಷ್ ಮಾರಿ ನಿರ್ದೇಶನದ ಮೇರೆಗೆ ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನದ ಐದನೇ ಹೋರಾಟ ಆರಂಭವಾಯಿತು. ಆಗಸ್ಟ್ 2006 ರಲ್ಲಿ ಹಿರಿಯ ಬಲೂಚ್ ನಾಯಕ ನವಾಬ್ ಅಕ್ಬರ್ ಖಾನ್ ಬುಗ್ತಿ ಅವರ ಹತ್ಯೆಯ ನಂತರ, ಹಿಂಸಾಚಾರವು ಬಲೂಚಿಸ್ತಾನದಾದ್ಯಂತ ವ್ಯಾಪಿಸಿತು. ಬುಗ್ತಿ ಅವರ ಮರಣದ ನಂತರ, ಸ್ವತಂತ್ರ ರಾಜ್ಯಕ್ಕಾಗಿ ಬೆಂಬಲದ ಅಲೆ ಹೆಚ್ಚಾಯಿತು.

    ದಂಗೆ ನಿಯಂತ್ರಣಕ್ಕೆ ಪಾಕ್‌ನಿಂದ ಕೊಂದು ಎಸೆಯಿರಿ ನೀತಿ
    2009 ರಲ್ಲಿ ದಂಗೆ ನಿಯಂತ್ರಣಕ್ಕೆ ಪಾಕಿಸ್ತಾನ ಸರ್ಕಾರವು ʻಕೊಂದು ಎಸೆಯಿರಿʼ ಎಂಬ ನೀತಿಯನ್ನು ಜಾರಿಗೆ ತಂದಿತು. 2009 ರಿಂದ ಹಲವಾರು ರಾಜಕೀಯ ಮತ್ತು ವಿದ್ಯಾರ್ಥಿ ಕಾರ್ಯಕರ್ತರನ್ನು ನ್ಯಾಯಾಲಯದ ಹೊರಗೆ ಕೊಲ್ಲಲಾಗಿದೆ. 2014ರ ಅಂತ್ಯದ ವೇಳೆಗೆ, ಸರ್ಕಾರದ ದೌರ್ಜನ್ಯಗಳನ್ನು ಟೀಕಿಸಲು ಪ್ರಯತ್ನಿಸಿದವರನ್ನು ಪಾಕಿಸ್ತಾನಿ ಸೈನಿಕರು ಬೇಟೆಯಾಡಿದ್ದರು. ಇದಾದ ಬಳಿಕ ಹೋರಾಟದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆಯಾಗಿತ್ತು.

    ಬಲೂಚಿಸ್ತಾನದ ಮಾನವ ಹಕ್ಕುಗಳ ಆಯೋಗದ 2021 ರ ವಾರ್ಷಿಕ ವರದಿ ಪ್ರಕಾರ, ಪಾಕ್‌ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಬಲೂಚಿಸ್ಥಾನದಲ್ಲಿ 47 ನಕಲಿ ಎನ್‌ಕೌಂಟರ್‌ಗಳನ್ನು ನಡೆಸಿದ್ದು, 366 ಜನರು ಸಾವನ್ನಪ್ಪಿದ್ದಾರೆ. 442 ಜನರು ಕಾಣೆಯಾಗಿದ್ದಾರೆ. ಅವರಲ್ಲಿ 170 ಜನರನ್ನು ಚಿತ್ರಹಿಂಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.

    ಇದೆಲ್ಲದರ ವಿರುದ್ಧ ತಿರುಗಿ ಬಿದ್ದಿರುವ ಬಿಎಲ್‌ಎ ಈಗ ಪಾಕ್‌ನ್ನು ಸೆದೆ ಬಡಿಯಲು ಮುಂದಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ದಾಳಿಗಳಿಂದ ಪಾಕ್‌ನ ಸೈನಿಕರು ಸಹ ಸೇನೆಯನ್ನು ತೊರೆಯುತ್ತಿದ್ದಾರೆ. ಒಂದೇ ವಾರದಲ್ಲಿ ಸುಮಾರು 2500 ಜನ ಯೋಧರು ಸೇನೆ ತೊರೆದಿದ್ದಾರೆ ಎಂದು ವರದಿಯಾಗಿದೆ.

  • ಉಗ್ರರ ದಾಳಿ ಭೀತಿ – ಪಾಕ್‌ ಸೇನೆ ತೊರೆಯುತ್ತಿದ್ದಾರೆ ಯೋಧರು!

    ಉಗ್ರರ ದಾಳಿ ಭೀತಿ – ಪಾಕ್‌ ಸೇನೆ ತೊರೆಯುತ್ತಿದ್ದಾರೆ ಯೋಧರು!

    ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಸೈನಿಕರ ರಾಜೀನಾಮೆ

    ಇಸ್ಲಾಮಾಬಾದ್‌: ಬಲೂಚಿಸ್ತಾನ (Balochistan) ಸೇರಿದಂತೆ ಪಾಕಿಸ್ತಾನದ (Pakistan) ಅನೇಕ ಕಡೆಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರ ದಾಳಿಯಿಂದ ಪಾಕ್ ಯೋಧರು (Pakistan Army) ಸೇನೆಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಒಂದೇ ವಾರದಲ್ಲಿ 2500ಕ್ಕೂ ಹೆಚ್ಚು ಸೈನಿಕರು ರಾಜೀನಾಮೆ ನೀಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರದ ಬಗ್ಗೆ ಪಾಕ್‌ ಸರ್ಕಾರ ಅಧಿಕೃತ ಮಾಹಿತಿ ನೀಡಿಲ್ಲ.

    ಬಲೂಚಿಸ್ತಾನ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ – ಬಲೂಚಿಸ್ತಾನ ಲಿಬರೇಷನ್ ಆರ್ಮಿ ಬಂಡುಕೋರರು ಸೇನೆಯನ್ನು ಗುರಿಯಾಗಿಸಿಕೊಂಡು ನಿರಂತರ ದಾಳಿ ನಡೆಸುತ್ತಲೇ ಇದ್ದಾರೆ. ಈ ದಾಳಿಗಳಿಂದ ಭಾರೀ ಸಂಖ್ಯೆಯಲ್ಲಿ ಸೈನಿಕರು ಮೃತಪಟ್ಟಿರುವುದೇ ಇತರರು ರಾಜೀನಾಮೆ ನೀಡಲು ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಪುಲ್ವಾಮಾ ಸ್ಟೈಲ್‌ ದಾಳಿ – ಪಾಕ್‌ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ

    ಮಾ.16ರಂದು ಪಾಕ್ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ‌ (BLA) ಪುಲ್ವಾಮಾ ಮಾದರಿಯ ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 90 ಸೈನಿಕರನ್ನು ಹತ್ಯೆ ಮಾಡಿದ್ದೇವೆ ಎಂದು ಬಿಎಲ್‌ಎ ಹೇಳಿಕೊಂಡಿತ್ತು. ಪಾಕಿಸ್ತಾನದಲ್ಲಿ ಭದ್ರತಾ ವ್ಯವಸ್ಥೆ ಬಹಳ ಕಳಪೆಯಾಗಿದೆ. ಇದಕ್ಕಾಗಿ ಸೇನೆ ತೊರೆಯುತ್ತಿರುವ ಯೋಧರು ತಮ್ಮ ಜೀವ ಕಳೆದುಕೊಳ್ಳುವ ಬದಲಿಗೆ ಸೇನೆ ತೊರೆದು ವಿದೇಶಗಳಲ್ಲಿ ಉದ್ಯೋಗಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರೈಲು ಹೈಜಾಕ್‌ನಲ್ಲಿ ಸೆರೆಯಾಗಿದ್ದ ಎಲ್ಲಾ 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ: ಬಿಎಲ್‌ಎ ಹೇಳಿಕೆ

  • Pakistan Train Hijack | 150ಕ್ಕೂ ಹೆಚ್ಚು ಸೈನಿಕರ ಹತ್ಯೆ – 50ಕ್ಕೂ ಹೆಚ್ಚು ಒತ್ತೆಯಾಳುಗಳು ಗಲ್ಲಿಗೆ

    Pakistan Train Hijack | 150ಕ್ಕೂ ಹೆಚ್ಚು ಸೈನಿಕರ ಹತ್ಯೆ – 50ಕ್ಕೂ ಹೆಚ್ಚು ಒತ್ತೆಯಾಳುಗಳು ಗಲ್ಲಿಗೆ

    – ರೈಲು ಹೈಜಾಕ್ ಸ್ಥಳಕ್ಕೆ 200ಕ್ಕೂ ಹೆಚ್ಚು ಶವಪೆಟ್ಟಿಗೆಗಳ ರವಾನೆ

    ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ರೈಲು ಹೈಜಾಕ್ ಪ್ರಕರಣದಲ್ಲಿ (Pakistan Train Hijack Case) ಭಾರೀ ಸಾವು ನೋವು ಉಂಟಾಗಿದೆ. ಬಲೂಚ್ ಲಿಬರೇಷನ್ ಆರ್ಮಿ ವಶದಲ್ಲಿರುವ ಪ್ರಯಾಣಿಕರ ರಕ್ಷಣೆಗೆ ಪಾಕ್ ಸೇನೆ (Pakistan Army) ಕೌಂಟರ್ ಆಪರೇಷನ್ ನಡೆದಿದೆ.

    ಈವರೆಗೂ 190 ಪ್ರಯಾಣಿಕರನ್ನು ರಕ್ಷಿಸಿದ ಭದ್ರತಾ ಪಡೆಗಳು, 30 ಪ್ರತ್ಯೇಕತಾವಾದಿಗಳನ್ನು ಕೊಂದಿದೆ. ಉಳಿದ ಪ್ರಯಾಣಿಕರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್, ಡ್ರೋನ್ ಬಳಸಿ ಪಾಕ್ ಸೇನೆ ಕಾರ್ಯಚರಣೆ ನಡೆಸಿದೆ. ಆದ್ರೆ, ಬಿಎಲ್‌ಎ ಪಟ್ಟುಬಿಡಲು ತಯಾರಿಲ್ಲ. ನೂರಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಬಿಎಲ್‌ಎ ಈವರೆಗೂ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೊಂದಿದೆ.

    50 ಒತ್ತೆಯಾಳುಗಳು ಗಲ್ಲಿಗೆ:
    ರೈಲು ಹೈಜಾಕ್‌ ಮಾಡಿ 200 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಬಲೂಚ್‌ ದಂಗೆಕೋರರು, ಪಾಕಿಸ್ತಾನ ಸೇನೆ ನಮ್ಮ ವಿರುದ್ಧ ನಡೆಸಿದ ದಾಳಿಗೆ ಪ್ರತೀಕಾರವಾಗಿ 50 ಒತ್ತೆಯಾಳುಗಳನ್ನ ಗಲ್ಲಿಗೇರಿಸಿರುವುದಾಗಿ ಹೇಳಿಕೊಂಡಿದೆ. ಮಿಲಿಟರಿ ಕಾರ್ಯಾಚರಣೆಯನ್ನು ರದ್ದುಗೊಳಿಸಿ, ಬಂಧಿಸಿರುವ ಬಲೂಚ್‌ ಕೈದಿಗಳನ್ನು 20 ಗಂಟೆಗೊಳಗೆ ಬಿಡುಗೆ ಮಾಡಬೇಕು. ಇಲ್ಲದಿದ್ದರೆ ಉಳಿದ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಧಂಗೆಕೋರರ ಗುಂಪು ಎಚ್ಚರಿಕೆ ನೀಡಿದೆ.

    ದಂಗೆಕೋರರು ಹೇಳುವ ಪ್ರಕಾರ, ಅವರ ವಶದಲ್ಲಿರುವ ಎಲ್ಲಾ ಒತ್ತೆಯಾಳುಗಳು ಪಾಕಿಸ್ತಾನದ ಸೇನೆ, ಪೊಲೀಸ್, ಫ್ರಾಂಟಿಯರ್ ಕಾರ್ಪ್ಸ್ ಮತ್ತು ಇತರ ಭದ್ರತಾ ಪಡೆಗಳ ಸಿಬ್ಬಂದಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: PUBLiC TV Exclusive | ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ಸಿಐಡಿ ವಿಚಾರಣೆ ಆದೇಶ ವಾಪಸ್ ಪಡೆದ ಸರ್ಕಾರ!

    ಮೊದಲು ವೈಮಾನಿಕ ದಾಳಿ ನಿಲ್ಲಿಸಬೇಕು. ಇಲ್ಲ ಅಂದ್ರೆ ಉಳಿದವರನ್ನು ಕೊಲ್ತೇವೆ. ನಮ್ಮ ಬಿಎಲ್‌ಎ ಸೈನಿಕರ ಮೇಲೆ ದಾಳಿ ಮಾಡಿದ್ರೆ ಇಡೀ ರೈಲನ್ನೇ ಸ್ಫೋಟಿಸ್ತೇವೆ. ನಮ್ಮ ಆತ್ಮಾಹುತಿ ಪಡೆ ರೈಲಲ್ಲಿ ಸಜ್ಜಾಗಿದೆ ಎಂದು 70 ರಿಂದ 80 ಮಂದಿ ಇರುವ ಮಜೀದ್ ಬ್ರಿಗೇಡ್ ಎಚ್ಚರಿಕೆ ನೀಡಿದೆ.  ಇದನ್ನೂ ಓದಿ: ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

    ಈಗಾಗಲೇ ರೈಲ್ವೇ ಹಳಿಯನ್ನು ಬಿಎಲ್‌ಎ ಸಂಪೂರ್ಣವಾಗಿ ಸ್ಫೋಟಿಸಿದೆ. ಒತ್ತೆಯಾಳುಗಳ ಪೈಕಿ ಕೆಲವರನ್ನು ಪರ್ವತ ಪ್ರದೇಶಕ್ಕೆ ಕರೆದೊಯ್ದಿದೆ. ತಮ್ಮ ಬೇಡಿಕೆ ಈಡೇರಿಕೆಗೆ 24 ಗಂಟೆಗಳ ಸಮಯ ಕೊಟ್ಟಿದೆ. ಬದುಕುವ ಆಸೆ ಇದ್ರೆ ಬಲೂಚ್‌ನಿಂದ ದೂರ ಇರಿ ಎಂದು ಚೀನಾ ಮತ್ತು ಪಾಕ್‌ಗೆ ಬಿಎಲ್‌ಎ ನೇರ ವಾರ್ನಿಂಗ್ ಕೊಟ್ಟಿದೆ. ಇದು ಪರ್ವತ ಪ್ರದೇಶವಾದ ಕಾರಣ ಸೇನಾ ಕಾರ್ಯಚರಣೆ ಜಟಿಲವಾಗಿದೆ. ಪ್ರತ್ಯೇಕತಾವಾದಿಗಳು ಚಿಕ್ಕ ಚಿಕ್ಕ ಗುಂಪುಗಳಾಗಿ ಬೇರ್ಪಟ್ಟಿರೋದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ರೈಲು ಹೈಜಾಕ್ ಆದ ಸ್ಥಳಕ್ಕೆ 200ಕ್ಕೂ ಹೆಚ್ಚು ಶವಪೆಟ್ಟಿಗೆಗಳನ್ನು ಸರ್ಕಾರ ರವಾನಿಸಿದೆ. ಈ ನಡುವೆ ಉಗ್ರರು 150ಕ್ಕೂ ಹೆಚ್ಚು ಪಾಕಿಸ್ತಾನದ ಸೈನಿಕರನ್ನ ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ.  ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು

  • 400 ಪ್ರಯಾಣಿಕರಿದ್ದ ಪಾಕ್‌ ರೈಲು ಹೈಜಾಕ್ – 120 ಮಂದಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು, 6 ಸೈನಿಕರ ಹತ್ಯೆ

    400 ಪ್ರಯಾಣಿಕರಿದ್ದ ಪಾಕ್‌ ರೈಲು ಹೈಜಾಕ್ – 120 ಮಂದಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು, 6 ಸೈನಿಕರ ಹತ್ಯೆ

    – 100ಕ್ಕೂ ಹೆಚ್ಚು ಮಂದಿಯನ್ನು ಗಲ್ಲಿಗೇರಿಸುವ ಎಚ್ಚರಿಕೆ ನೀಡಿದ ಉಗ್ರರು

    ಇಸ್ಲಾಮಾಬಾದ್‌: 400 ಪ್ರಯಾಣಿಕರಿದ್ದ ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು (Jaffar Express Train) ಬಲೂಚಿಸ್ತಾನ್‌ (Balochistan) ಪ್ರಾಂತ್ಯದ ಪ್ರತ್ಯೇಕತಾ ವಾದಿ ಉಗ್ರರ ಗುಂಪು ಬೋಲಾನ್‌ ಪ್ರದೇಶದಲ್ಲಿ ಇಂದು (ಮಂಗಳವಾರ) ಹೈಜಾಕ್‌ ಮಾಡಿದೆ ಎಂದು ವರದಿಯಾಗಿದೆ.

    ಬಲೂಚ್ ಲಿಬರೇಶನ್ ಆರ್ಮಿ (BLA) ಭಯೋತ್ಪಾದಕ ಗುಂಪು ದಾಳಿ ಹೊಣೆ ಹೊತ್ತುಕೊಂಡಿದೆ. ಘಟನೆಯಲ್ಲಿ 6 ಮಂದಿ ಸೈನಿಕರು ಹತ್ಯೆಗೀಡಾಗಿದ್ದು, ರೈಲು ಚಾಲಕ ಗಾಯಗೊಂಡಿದ್ದಾರೆ. ಸುಮಾರು 120 ಮಂದಿಯನ್ನು ಉಗ್ರರ ಗುಂಪು ಒತ್ತೆಯಾಳಾಗಿರಿಸಿಕೊಂಡಿದೆ. ಇದನ್ನೂ ಓದಿ: ನಾಯಿಗಳಂತೆ ಅತ್ಯಾಚಾರಿಗಳನ್ನೂ ಸಂತಾನಹರಣಗೊಳಿಸಬೇಕು: ರಾಜಸ್ಥಾನ ರಾಜ್ಯಪಾಲ

    ಮೊದಲಿಗೆ ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಬೋಲಾನ್‌ನ ಧದರ್‌ನ ಮಶ್ಕಾಫ್‌ನಲ್ಲಿ ಪ್ರದೇಶದಲ್ಲಿ ಪೇಶಾವರ ಮಾರ್ಗದ ರೈಲ್ವೆ ಅಳಿಯನ್ನು ಉಗ್ರರು ಸ್ಫೋಟಿಸಿದ್ದಾರೆ. ಇದರಿಂದ ಜಾಫರ್ ಎಕ್ಸ್‌ಪ್ರೆಸ್ ಅಳಿ ತಪ್ಪಿದ್ದು, ದಾಳಿ ನಡೆಸಿದ ನಮ್ಮ ಉಗ್ರರು ರೈಲನ್ನು ಹೈಜಾಕ್‌ ಮಾಡಿದ್ದಾರೆ ಎಂದು ಉಗ್ರರ ಗುಂಪು ಹೇಳಿಕೊಂಡಿದೆ.  ಇದನ್ನೂ ಓದಿ: ಬೈಕಲ್ಲಿ ಬಂದು ನೀರು ಕೇಳಿದ್ರು, ಬಳಿಕ ವಿಷದ ಇಂಜೆಕ್ಷನ್‌ ಚುಚ್ಚಿ ಸಾಯಿಸಿದ್ರು – ಯುಪಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ!

    ಸದ್ಯ ಉಗ್ರರು ಸೆರೆ ಹಿಡಿದಿರುವ ಒತ್ತೆಯಾಳುಗಳಲ್ಲಿ ಪಾಕಿಸ್ತಾನಿ ಮಿಲಿಟರಿ, ಪೊಲೀಸ್‌, ಭಯೋತ್ಪಾದಕ ನಿಗ್ರಹ ದಳ ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಕರ್ತವ್ಯ ನಿರತ ಸಿಬ್ಬಂದಿಯೂ ಸೇರಿದ್ದಾರೆ. ಇವರೆಲ್ಲರೂ ರಜೆಯ ಮೇಲೆ ಪಂಜಾಬ್‌ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕೆಲವರು ಪಾಕಿಸ್ತಾನಿ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೇವೆ. ಆದ್ರೆ ಸೆರೆ ಸಿಕ್ಕ ಮಹಿಳೆಯರು ಮಕ್ಕಳು ಮತ್ತು ಬಲೂಚಿಸ್ತಾನದ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದೇವೆ ಎಂದು ಉಗ್ರರ ಗುಂಪು ಹೇಳಿದೆ.

    ಸದ್ಯ ಸ್ಥಳೀಯ ಸರ್ಕಾರವು ತುರ್ತು ಕ್ರಮಕ್ಕೆ ಮುಂದಾಗಿದ್ದು, ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಪ್ರಯತ್ನದಲ್ಲಿ ತೊಡಗಿದೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿವೆ ಎಂದು ಸರ್ಕಾರಿ ವಕ್ತಾರ ಶಾಹಿದ್ ರಿಂಡ್ ಹೇಳಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.  ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ವಿಜಯೇಂದ್ರಗೆ ದುಬೈ ನಂಟಿದೆ: ಪ್ರಿಯಾಂಕ್ ಖರ್ಗೆ ಟಕ್ಕರ್

    ರಕ್ತಪಾತದ ಎಚ್ಚರಿಕೆ ನೀಡಿದ ಉಗ್ರರ ಗುಂಪು!
    ನಾವು ರೈಲನ್ನು 100ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದೇವೆ. ನಮ್ಮ ವಿರುದ್ಧ ಸೇನೆ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೂ ಅದರ ಪರಿಣಾಮ ತೀವ್ರವಾಗಿರುತ್ತದೆ. 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನ ಗಲ್ಲಿಗೇರಿಸಲಾಗುವುದು. ಈ ರಕ್ತಪಾತದ ಸಂಪೂರ್ಣ ಜವಾಬ್ದಾರಿ ಸೇನೆಯೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.