Tag: Balluru Lake

  • ಈಜಾಡಲು ಹೋಗಿ ಬಳ್ಳೂರು ಕೆರೆಯಲ್ಲಿ ಮೃತಪಟ್ಟ ವಿದ್ಯಾರ್ಥಿಯ ಶವ ಪತ್ತೆ

    ಈಜಾಡಲು ಹೋಗಿ ಬಳ್ಳೂರು ಕೆರೆಯಲ್ಲಿ ಮೃತಪಟ್ಟ ವಿದ್ಯಾರ್ಥಿಯ ಶವ ಪತ್ತೆ

    ಬೆಂಗಳೂರು: ಆನೇಕಲ್ ತಾಲೂಕಿನ ಬಳ್ಳೂರಿನಲ್ಲಿ ಈಜಾಡಲು (Swimming) ಕೆರೆಗೆ ಹೋಗಿ ಸಾವನ್ನಪ್ಪಿದ್ದ ವಿದ್ಯಾರ್ಥಿಯ ಶವ ಇಂದು ಬೆಳಗ್ಗೆ ಬಳ್ಳೂರು ಕೆರೆಯಲ್ಲಿ (Balluru Lake) ಪತ್ತೆಯಾಗಿದೆ.

    ಹತ್ತನೇ ತರಗತಿ ವಿದ್ಯಾರ್ಥಿ ಧನುಷ್ (15) ಮೃತದೇಹಕ್ಕಾಗಿ ಭಾನುವಾರದಿಂದ ಅಗ್ನಿಶಾಮಕ ದಳದ ಸದಸ್ಯರು ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: ತಿರುಪತಿಯಲ್ಲಿ ದೇವರ ದರ್ಶನಕ್ಕೆ 3 ಕಿ.ಮೀ.ವರೆಗೆ ಸರತಿ ಸಾಲು

    ಧನುಷ್ ತಂದೆ ತಾಯಿ ಬೆಂಗಳೂರಿನಲ್ಲಿ ವಾಸವಿದ್ದರೆ, ಆತ ತಾತ ಹಾಗೂ ಮಾವನ ಜೊತೆ ಅತ್ತಿಬೆಲೆಯಲ್ಲಿ ವಾಸವಿದ್ದ. ಭಾನುವಾರ ಮಧ್ಯಾಹ್ನ ಕ್ರಿಕೆಟ್ ಆಡುವುದಾಗಿ ಮನೆಯಿಂದ ಧನುಷ್‌ ಹೊರ ಹೋಗಿದ್ದ.

    ಕ್ರಿಕೆಟ್ ಆಡಲು ಹೋದವನು ಕೆರೆಯಲ್ಲಿ ಈಜಾಡಲು ತೆರಳಿದ್ದ. ಕೆರೆಯಲ್ಲಿ ನೀರು ತುಂಬಿದ್ದರಿಂದ ಈಜಾಡಲು ಬಾರದೇ ಮುಳುಗಿ ಧನುಷ್‌ ಸಾವನ್ನಪ್ಪಿದ್ದಾನೆ.

    ಭಾನುವಾರ ಸಂಜೆ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸೇರಿ ಹುಡುಕಾಟ ನಡೆಸಿದ್ದರು. ಆದರೆ ಕತ್ತಲಾದ ಕಾರಣ ಹುಡುಕಾಟ ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಬೆಳಿಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತೆ ಹುಡುಕಾಟ ಪ್ರಾರಂಭ ಮಾಡಿದಾಗ ಮೃತ ದೇಹ ಪತ್ತೆಯಾಗಿದೆ. ಇದನ್ನೂ ಓದಿ: ಕೊಲೆಯಾಗಿ 10 ದಿನ ಕಳೆದರೂ ಪತ್ತೆಯಾಗಿಲ್ಲ ರೇಣುಕಾಸ್ವಾಮಿ ಮೊಬೈಲ್