Tag: Ballistic Missile

  • ಮಿಷನ್‌ ದಿವ್ಯಾಸ್ತ್ರ ಪ್ರಯೋಗ ಯಶಸ್ವಿ – ಏನಿದು MIRV ತಂತ್ರಜ್ಞಾನ? ಯುದ್ಧದ ವೇಳೆ ಹೇಗೆ ಸಹಾಯವಾಗುತ್ತೆ? ಯಾರ ಬಳಿಯಿದೆ?

    ಮಿಷನ್‌ ದಿವ್ಯಾಸ್ತ್ರ ಪ್ರಯೋಗ ಯಶಸ್ವಿ – ಏನಿದು MIRV ತಂತ್ರಜ್ಞಾನ? ಯುದ್ಧದ ವೇಳೆ ಹೇಗೆ ಸಹಾಯವಾಗುತ್ತೆ? ಯಾರ ಬಳಿಯಿದೆ?

    ನವದೆಹಲಿ: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(DRDO) ಮತ್ತು ಭಾರತ್‌ ಡೈನಾಮಿಕ್ಸ್‌ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಮಹತ್ವಾಕಾಂಕ್ಷೆಯ ಮಿಷನ್ ದಿವ್ಯಾಸ್ತ್ರ (Mission Divyastra) ಯಶಸ್ವಿಯಾಗಿದೆ.

    ಅತ್ಯಾಧುನಿಕ ಮಲ್ಟಿಪಲ್ ಇಂಡಿಪೆಂಡೆಂಟ್ ಟಾರ್ಗೆಟೆಬಲ್ ರೀ ಎಂಟ್ರಿ ವೆಹಿಕಲ್ (MIRV) ತಂತ್ರಜ್ಞಾನ ಒಳಗೊಂಡ ಅಗ್ನಿ5 ಕ್ಷಿಪಣಿ (Agni Missile) ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಡಿಆರ್‌ಡಿಓ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

    ಒಡಿಶಾದ ಡಾ.ಎಪಿಜೆ ಅಬ್ದುಲ್‌ ಕಲಾಂ ದ್ವೀಪದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಗ್ನಿ5ರ ಕ್ಷಿಪಣಿ ನೆರವಿನಿಂದ ಏಕಕಾಲದಲ್ಲಿ ಕನಿಷ್ಠ 2, ಗರಿಷ್ಠ 10 ಅಣ್ವಸ್ತ್ರ ಸಿಡಿತಲೆಗಳನ್ನು ಬೇರೆ ಬೇರೆ ಗುರಿಗಳ ಮೇಲೆ ಪ್ರಯೋಗಿಸಬಹುದಾಗಿದೆ.

    ಏನಿದು MIRV ತಂತ್ರಜ್ಞಾನ?
    ಸಾಧಾರಣವಾಗಿ ಕ್ಷಿಪಣಿಗಳಲ್ಲಿ ಇರುವ ಸಿಡಿತಲೆಗಳನ್ನು ಒಂದೇ ಗುರಿಯನ್ನು ಇರಿಸಿ ಉಡಾಯಿಸಲಾಗುತ್ತದೆ. ಆದರೆ MIRV ತಂತ್ರಜ್ಞಾನದಲ್ಲಿ ಅನೇಕ ಸಿಡಿತಲೆಗಳನ್ನು ಇಟ್ಟು ಬೇರೆ ಬೇರೆ ಗುರಿಗಳ ಮೇಲೆ ಪ್ರಯೋಗಿಸಬಹುದು ಇದರಿಂದಾಗಿ ಏಕಕಾಲದಲ್ಲಿ ಹಲವು ಗುರಿಗಳನ್ನು ಛೇದಿಸಬಹುದು. ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್‌ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

    ಲಾಭ ಏನು?
    ಒಂದೇ ಪ್ರಯೋಗದಲ್ಲಿ ಹಲವು ಗುರಿಗಳನ್ನು ಧ್ವಂಸ ಮಾಡಬಹುದು. ಇದರಿಂದ ಪದೇ ಪದೇ ಕ್ಷಿಪಣಿಯನ್ನು ಉಡಾವಣೆ ಮಾಡಿ ಬೇರೆ ಗುರಿಯ ಮೇಲೆ ಪ್ರಯೋಗ ಮಾಡುವ ಅಗತ್ಯ ಇರುವುದಿಲ್ಲ. ವಿಶೇಷವಾಗಿ ಯುದ್ಧದ ಸಂದರ್ಭದಲ್ಲಿ ಈ ತಂತ್ರಜ್ಞಾನ ನೆರವಿಗೆ ಬರಲಿದೆ. ಇದರಿಂದ ಕ್ಷಿಪಣಿ ಮತ್ತು ಲಾಂಚ್‌ ಮಾಡುವ ವ್ಯವಸ್ಥೆ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗಲಿದೆ.

    ಯಾರ ಬಳಿಯಿದೆ?
    ಈ ತಂತ್ರಜ್ಞಾನವನ್ನು 1960 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಈಗಾಗಲೇ ಅಮೆರಿಕ, ಯುಕೆ, ಫ್ರಾನ್ಸ್‌ ಬಳಿ MIRV ತಂತ್ರಜ್ಞಾನವಿದ್ದು ಸಬ್‌ಮರೀನ್‌ ಮೂಲಕ ಉಡಾವಣೆ ಮಾಡುವ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು (Submarine-Launched Ballistic Missile) ಹೊಂದಿದೆ. ಚೀನಾದ ಜೊತೆ ಖಂಡಾತರ ಬ್ಯಾಲಿಸ್ಟಿಕ್‌ ಕ್ಷಿಪಣಿ (Intercontinental Ballistic Missile) ಇದ್ದರೆ ರಷ್ಯಾದ ಬಳಿ ಸಬ್‌ಮರೀನ್‌ ಜೊತೆಗೆ ಖಂಡಾತರ ಬ್ಯಾಲಿಸ್ಟಿಕ್‌ ಕ್ಷಿಪಣಿ ಇದೆ. ಪಾಕಿಸ್ತಾನವೂ MIRV ತಂತ್ರಜ್ಞಾನ ಇರುವ ಕ್ಷಿಪಣಿಯನ್ನು ಪ್ರಯೋಗ ಮಾಡುತ್ತಿದೆ. ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

    ಅಗ್ನಿ 5 ವಿಶೇಷತೆ ಏನು?
    ಅಗ್ನಿ-5 ಕ್ಷಿಪಣಿ 5 ಸಾವಿರ ಕಿಲೋಮೀಟರ್ ದೂರದ ಗುರಿಯನ್ನು ಛೇದಿಸುವ ಸಾಮರ್ಥ್ಯ ಇದೆ. ನೆರೆಯ ಚೀನಾ (China) ಬಳಿ 12ಸಾವಿರದಿಂದ 15ಸಾವಿರ ಕಿಲೋಮೀಟರ್ ದೂರದ ಗುರಿಯನ್ನು ಬೇಧಿಸುವ ಸಾಮರ್ಥ್ಯವುಳ್ಳ ಡಾಂಗ್‌ಫೆಂಗ್-41 ಕ್ಷಿಪಣಿಗಳಿವೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಅಗ್ನಿ 5 ಕ್ಷಿಪಣಿಯನ್ನು ಭಾರತ ತಯಾರಿಸಿದೆ. 5,500 ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿರುವ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ತಲುಪುವ ಸಾಮರ್ಥ್ಯ ಅಗ್ನಿ-5 ಕ್ಷಿಪಣಿಗಿದೆ. ಚೀನಾದ ಯಾವುದೇ ಭಾಗವನ್ನು ಈ ಕ್ಷಿಪಣಿ ಮೂಲಕ ಭಾರತ ಟಾರ್ಗೆಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ಏಷ್ಯಾದ ಎಲ್ಲಾ ಭಾಗವನ್ನು, ಆಫ್ರಿಕಾದ ಕೆಲ ಭಾಗಗಳನ್ನು, ಯುರೋಪ್ ಖಂಡವನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದೆ.

    ಅಗ್ನಿ ಕ್ಷಿಪಣಿಗಳು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಎರಡೂ ರೀತಿಯ ಸಿಡಿತಲೆಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷ. 1989ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗಿತ್ತು. ನಂತ ವಿವಿಧ ಅಗ್ನಿ ಕ್ಷಿಪಣಿಗಳ ಪರೀಕ್ಷೆಗಳನ್ನು ಡಿಆರ್‌ಡಿಒ ನಡೆಸಿಕೊಂಡು ಬಂದಿದೆ.

     

    ಏನಿದು ಬ್ಯಾಲಿಸ್ಟಿಕ್‌ ಕ್ಷಿಪಣಿ?
    ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಈ ಕ್ಷಿಪಣಿಗಳು ಇವು ತಮ್ಮದೇ ಆದ ಚೋದನ ಕ್ರಮಗಳಿಂದ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ, ಮತ್ತೆ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸಿ ಭೂಮಿಯನ್ನು ಅಪ್ಪಳಿಸುವ ಸಾಮರ್ಥ್ಯ ಹೊಂದಿರುತ್ತದೆ. ವೇಗವಾಗಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಅತಿ ಹೆಚ್ಚಿನ ತಾಪಮಾನ ಬಿಡುಗಡೆಯಾಗುವುದರಿಂದ ಶತ್ರುಗಳ ಕ್ಷಿಪಣಿಗಳನ್ನೇ ನಾಶ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ. ನಿಗದಿತ ಗುರಿಯನ್ನು ತಲುಪಲು ಜಿಪಿಎಸ್ ಅಳವಡಿಸಲಾಗಿರುತ್ತದೆ. ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತರ್ಗಾಮಿ ಅಲ್ಲದೇ ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದಾಗಿದೆ.

    ಏನಿದು ಕ್ರೂಸ್‌ ಕ್ಷಿಪಣಿ?
    ಕ್ರೂಸ್‌ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್‌ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ.

     

  • ಚೀನಾ ತಲುಪಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ

    ಚೀನಾ ತಲುಪಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ

    ಭುವನೇಶ್ವರ: ಅರುಣಾಚಲ ಪ್ರದೇಶದ ತವಾಗ್‌ ಗಡಿಯಲ್ಲಿ ಚೀನಾದ(China) ಜೊತೆ ಘರ್ಷಣೆ ನಡೆದಿರುವ ಸಮಯದಲ್ಲೇ ಭಾರತ(India) ಅಣ್ವಸ್ತ್ರ ಸಿಡಿತಲೆಯ ಖಂಡಾಂತರ ಕ್ಷಿಪಣಿ ಅಗ್ನಿ-5ರ(Nuclear Capable Agni-V Ballistic Missile) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದೆ.

    ಬರೋಬ್ಬರಿ 5 ಸಾವಿರ ಕಿಲೋಮೀಟರ್ ದೂರ ಕ್ರಮಿಸಬಲ್ಲ ಕ್ಷಿಪಣಿಗೆ ಡಮ್ಮಿ ಸಿಡಿತಲೆಯನ್ನು ಇರಿಸಿ ರಾತ್ರಿ ಒಡಿಶಾದ ಬಾಲಸೋರ್ ಜಿಲ್ಲೆಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ(ವೀಲರ್) ಯಶಸ್ವಿಯಾಗಿ ಪ್ರಯೋಗ ನಡೆಸಲಾಗಿದೆ.

    5,500 ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿರುವ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ತಲುಪುವ ಸಾಮರ್ಥ್ಯ ಅಗ್ನಿ-5 ಕ್ಷಿಪಣಿಗಿದೆ. ಚೀನಾದ ಯಾವುದೇ ಭಾಗವನ್ನು ಈ ಕ್ಷಿಪಣಿ ಮೂಲಕ ಭಾರತ ಟಾರ್ಗೆಟ್ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ಏಷ್ಯಾದ ಎಲ್ಲಾ ಭಾಗವನ್ನು, ಆಫ್ರಿಕಾದ ಕೆಲ ಭಾಗಗಳನ್ನು, ಯುರೋಪ್ ಖಂಡವನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದೆ.

    ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿ ಪಡಿಸಿದ 17.5 ಮೀಟರ್ ಎತ್ತರದ ಈ ಕ್ಷಿಪಣಿ 50 ಟನ್ ತೂಕ ಇದೆ. 1.5 ಟನ್ ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ.

    ಅಕ್ಟೋಬರ್ 2021 ರಲ್ಲಿ ಕೊನೆಯದಾಗಿ ಅಗ್ನಿ-5 ಪರೀಕ್ಷೆ ನಡೆಸಿತ್ತು. ಈ ವೇಳೆ 1998ರ ಯುಎನ್‌ಎಸ್‌ಸಿ ರೆಸಲ್ಯೂಶನ್ 1172 ಅನ್ನು ಉಲ್ಲೇಖಿಸಿ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ನಿಲ್ಲಿಸಬೇಕು ಎಂದು ನಿರ್ಣಯವು ಹೇಳಿರುವಾಗ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿತ್ತು. ಭಾರತ 5000-5,500 ಕಿ.ಮೀ ವ್ಯಾಪ್ತಿ ಎಂದು ಹೇಳಿದರೂ ಇದು 8,000 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ದೇಶಗಳಿಂದ ಆತಂಕ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಭಾರತ ಈ ಅಗ್ನಿ 5 ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿದೆ ಎಂದು ಚೀನಾ ಆರೋಪಿತ್ತು. ಇದನ್ನೂ ಓದಿ: ತನಿಖೆ ಮಾಡದೇ ಉಗ್ರ ಅಂತ ಹೇಗೆ ಘೋಷಣೆ ಮಾಡಿದ್ರಿ: ಡಿಕೆಶಿ ಪ್ರಶ್ನೆ

    ಇದು ಸಾಂಪ್ರದಾಯಿಕ ಮತ್ತು ಅಣ್ವಸ್ತ್ರ ಎರಡೂ ರೀತಿಯ ಸಿಡಿತಲೆಗಳನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. 1989ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗಿತ್ತು. ನಂತ ವಿವಿಧ ಅಗ್ನಿ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸಿಕೊಂಡು ಬಂದಿದೆ.

    ಬ್ಯಾಲಿಸ್ಟಿಕ್ ಕ್ಷಿಪಣಿ ಎಂದರೇನು?
    ಈ ಕ್ಷಿಪಣಿಗಳು ಇವು ತಮ್ಮದೇ ಆದ ಚೋದನ ಕ್ರಮಗಳಿಂದ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ, ಮತ್ತೆ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸಿ ಭೂಮಿಯನ್ನು ಅಪ್ಪಳಿಸುವ ಸಾಮರ್ಥ್ಯ ಹೊಂದಿರುತ್ತದೆ. ವೇಗವಾಗಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವಾಗ ವಾತಾವರಣದೊಂದಿಗೆ ಘರ್ಷಣೆಯುಂಟಾಗಿ ಅತಿ ಹೆಚ್ಚಿನ ತಾಪಮಾನ ಬಿಡುಗಡೆಯಾಗುವುದರಿಂದ ಶತ್ರುಗಳ ಕ್ಷಿಪಣಿಗಳನ್ನೇ ನಾಶ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ. ನಿಗದಿತ ಗುರಿಯನ್ನು ತಲುಪಲು ಜಿಪಿಎಸ್ ಅಳವಡಿಸಲಾಗಿರುತ್ತದೆ. ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭೂಮಿಯಿಂದ, ಆಕಾಶದಿಂದ, ಸಮುದ್ರದಿಂದ, ಜಲಾಂತರ್ಗಾಮಿ ಅಲ್ಲದೇ ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • Made In India `ಅಗ್ನಿ ಪ್ರೈಮ್‌ʼ ಕ್ಷಿಪಣಿ ಪರೀಕ್ಷೆ ಯಶಸ್ವಿ- ದಾಳಿ ಸಾಮರ್ಥ್ಯ ಎಷ್ಟು?

    Made In India `ಅಗ್ನಿ ಪ್ರೈಮ್‌ʼ ಕ್ಷಿಪಣಿ ಪರೀಕ್ಷೆ ಯಶಸ್ವಿ- ದಾಳಿ ಸಾಮರ್ಥ್ಯ ಎಷ್ಟು?

    ಭುವನೇಶ್ವರ: 1 ರಿಂದ 2 ಸಾವಿರ ಕಿಮೀ ವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಭಾರತದ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic Missile) `ಅಗ್ನಿ ಪ್ರೈಮ್‌’ (Agni Prime) ಪರೀಕ್ಷೆ ಯಶಸ್ವಿಯಾಗಿದೆ.

    ಇಂದು ಒಡಿಶಾದಿಂದ ಮೇಡ್ ಇನ್ ಇಂಡಿಯಾದ (Made In India) ಹೊಸ ತಲೆಮಾರಿನ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ. ಹೊಸ ತಲೆಮಾರಿನ ಅಗ್ನಿ ಪ್ರೈಮ್‌ ಕ್ಷಿಪಣಿಯನ್ನು ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ (APG Abdul Kalam Island) ಬೆಳಗ್ಗೆ 9.45ರ ಸುಮಾರಿಗೆ ಮೊಬೈಲ್ ಲಾಂಚರ್ ನಿಂದ ಕ್ಷಿಪಣಿಯನ್ನು ಪರೀಕ್ಷಿಸಲಾಗಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡಿಸೆಂಬರ್‌ವರೆಗೂ ಹಲವರು ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರೆ: ಜಮೀರ್ ಸ್ಫೋಟಕ ಹೇಳಿಕೆ

    ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ, ಕ್ಷಿಪಣಿಯು (Missile) ಗರಿಷ್ಠ ವ್ಯಾಪ್ತಿ ಪ್ರಯಾಣಿಸಿದೆ. ಎಲ್ಲಾ ಪರೀಕ್ಷಾ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಗ್ನಿ ಪ್ರೈಮ್‌ ಕ್ಷಿಪಣಿಯ ಈ ಸತತ 3ನೇ ಬಾರಿಗೆ ಯಶಸ್ವಿ ಹಾರಾಟ ನಡೆಸಿದ್ದು, ಈ ಮೂಲಕ ವ್ಯವಸ್ಥೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನೂ ಸ್ಥಾಪಿಸಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ- JDS ಎಂಎಲ್‌ಸಿ ಅಚ್ಚರಿ ಹೇಳಿಕೆ

    ರಾಡರ್, ಟೆಲಿಮೆಟ್ರಿ ಮತ್ತು ಎಲೆಕ್ಟ್ರೊ ಆಪ್ಟಿಕಲ್ ಟ್ರ‍್ಯಾಕಿಂಗ್ ಸಿಸ್ಟಮ್‌ಗಳಂತಹ ಹಲವಾರು ಶ್ರೇಣಿಯ ಉಪಕರಣಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಅಗ್ನಿ ಪ್ರೈಮ್‌ ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದೆ. ಸಂಪೂರ್ಣ ಪಥವನ್ನು ಕವರ್ ಮಾಡಲು ಟರ್ಮಿನಲ್ ಪಾಯಿಂಟ್‌ನಲ್ಲಿ ಎರಡು ಡೌನ್ ರೇಂಜ್ ಹಡಗುಗಳನ್ನು ಒಳಗೊಂಡಂತೆ ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಕ್ಷಿಪಣಿಯು 1 ಸಾವಿರ ಕಿಮೀ ನಿಂದ 2 ಸಾವಿರ ಕಿಮೀ ವರೆಗೆ ದಾಳಿಯ ಸಾಮರ್ಥ್ಯವನ್ನು ಹೊಂದಿದೆ. 2021ರ ಡಿಸೆಂಬರ್ 18ರಂದು ಇದೇ ನೆಲೆಯಿಂದ ಕ್ಷಿಪಣಿಯ ಕೊನೆಯ ಪ್ರಯೋಗ ನಡೆಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]