Tag: ball

  • ಅಂಪೈರ್‌ಗಳಿಂದ ಬಾಲನ್ನು ಪಡೆದಿದ್ದು ಯಾಕೆ: ಅಭಿಮಾನಿಗಳಿಗೆ ಧೋನಿ ಸ್ಪಷ್ಟೀಕರಣ

    ಅಂಪೈರ್‌ಗಳಿಂದ ಬಾಲನ್ನು ಪಡೆದಿದ್ದು ಯಾಕೆ: ಅಭಿಮಾನಿಗಳಿಗೆ ಧೋನಿ ಸ್ಪಷ್ಟೀಕರಣ

    ಮುಂಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಅಂಪೈರ್‌ಗಳಿಂದ ನಾನು ಬಾಲನ್ನು ಪಡೆದಿದ್ದು ಯಾಕೆ ಎನ್ನುವುದಕ್ಕೆ ಮಾಜಿ ನಾಯಕ ಧೋನಿ ಸ್ಪಷ್ಟನೆ ಕೊಟ್ಟಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ಬಳಿಕ ಧೋನಿ ಚೆಂಡನ್ನು ಪಡೆದಿದ್ದರು. ಆ ಕುರಿತಾದ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಧೋನಿ ಏಕದಿನ ಕ್ರಿಕೆಟ್‍ನಿಂದ ನಿವೃತ್ತಿಯ ತೆಗೆದುಕೊಳ್ಳುತ್ತಿದ್ದಾರಾ ಎನ್ನುವ ಚರ್ಚೆಯಾಗಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿದ ಧೋನಿ, ಆಟದ ವೇಳೆ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿರಲಿಲ್ಲ. ಹೀಗಾಗಿ ಯಾಕೆ ಆಗುತ್ತಿಲ್ಲ ಎಂದು ಪರಿಶೀಲಿಸಲು ಬಾಲ್ ಪಡೆದೆ. ಮುಂದಿನ ವರ್ಷ ಇಂಗ್ಲೆಂಡ್ ನೆಲದಲ್ಲಿಯೇ ವಿಶ್ವಕಪ್ ಟೂರ್ನಿ ನಡೆಯುತ್ತದೆ. ಆಗ ಎದುರಾಳಿ ತಂಡವನ್ನು ರಿವರ್ಸ್ ಸ್ವಿಂಗ್ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

    ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಗಳು ಚೆನ್ನಾಗಿ ರಿವರ್ಸ್ ಸ್ವಿಂಗ್ ಮಾಡಿದರು. ಆದರೆ ನಮ್ಮ ತಂಡದಿಂದ ಏಕೆ ಸಾಧ್ಯವಾಗಲಿಲ್ಲ ಎಂದು ಗೊಂದಲ ಉಂಟಾಗಿತ್ತು. ಹೀಗಾಗಿ ಸೂಕ್ತ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಬಾಲ್ ಪಡೆದು ನಮ್ಮ ತಂಡದ ಬೌಲಿಂಗ್ ಕೋಚ್‍ಗೆ ನೀಡಿ, ಚರ್ಚೆ ನಡೆಲು ಬಾಲನ್ನು ಪಡೆದೆ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಐಸಿಸಿ ನಿಯಮದ ಪ್ರಕಾರ 50 ಓವರ್ ಗಳ ಬಳಿಕ ಚೆಂಡು ಅನುಪಯುಕ್ತ. ಪಂದ್ಯದ ಪಳಿಕ ಚೆಂಡು ಪಡೆದು ಚರ್ಚೆ ಮಾಡುವ ಉದ್ದೇಶ ಇತ್ತು. 40 ಓವರ್ ಬಳಿಕ ರಿಸರ್ವ್ ಸ್ವಿಂಗ್ ಮಾಡುವಲ್ಲಿ ಯಶಸ್ವಿಯಾದರೆ, ಬೌಲರ್ ಗಳಿಗೆ ಯಾರ್ಕರ್ ಹಾಕಲು ಸಹ ಸುಲಭವಾಗಲಿದೆ. ಕೊನೆಯ 10 ಓವರ್‍ಗಳಲ್ಲಿ ಸಾಧ್ಯವಾದಷ್ಟು ರನ್ ನಿಯಂತ್ರಿಸಬೇಕು. ರಿವರ್ಸ್ ಸ್ವಿಂಗ್ ಗೆಲುವಿನ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ. ಹೀಗಾಗಿ ಅಂಪೈರ್ ಬಳಿ ಬೌಲಿಂಗ್ ಕೋಚ್ ಗೆ ನೀಡಲು ಈ ಬಾಲನ್ನು ನೀಡುತ್ತೀರಾ ಎಂದು ಕೇಳಿದೆ ಎಂದು ಧೋನಿ ತಿಳಿಸಿದರು.

    ಕೊಹ್ಲಿಯನ್ನು ಹೊಗಳಿದ ಧೋನಿ:
    ಕೊಹ್ಲಿ ಶ್ರೇಷ್ಠ ಆಟಗಾರ. ಕ್ರಿಕೆಟ್ ಜಗತ್ತಿನಲ್ಲಿ ಅನೇಕ ಮೈಲುಗಳನ್ನು ನಿರ್ಮಿಸಿದ್ದಾರೆ. ವಿವಿಧ ದೇಶಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅವರ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ. ಕ್ರಿಕೆಟ್ ದಂತಕಥೆಯ ಸಮೀಪಕ್ಕೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ತಂಡವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ನಾಯಕ ಕೊಹ್ಲಿ ಜವಾಬ್ದಾರಿಯುತವಾಗಿ ಆಟವಾಡುತ್ತಿದ್ದಾರೆ. ಜೊತೆಗೆ ತಂಡದ ಸದಸ್ಯರನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾಯಕನಿಗೆ ಇಂತಹ ಗುಣಗಳು ಅಗತ್ಯ. ಕೊಹ್ಲಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಧೋನಿ ಹಾರೈಸಿದರು.

  • ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.

    ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಏನಿದು ವದಂತಿ?
    ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.

  • ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಬೆಂಗಳೂರು: ಗಾಲ್ಫ್ ಚೆಂಡು ಗೃಹಕಚೇರಿ ಕೃಷ್ಣಾ ನಿವಾಸದ ಒಳಗೆ ಬಿದ್ದಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ವಾಹನದ ಗಾಜು ಜಖಂ ಗೊಂಡಿದೆ.

    ಕೃಷ್ಣಾ ನಿವಾಸದ ಪಕ್ಕದಲ್ಲಿಯೇ ಇರುವ ಗಾಲ್ಫ್ ಮೈದಾನದಿಂದ ಚೆಂಡು ಹಾರಿ ಬಂದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಕಾಕತಾಳೀಯ ಅಂದರೆ ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಗಾಲ್ಫ್ ಚೆಂಡುಗಳು ಕೃಷ್ಣಾ ನಿವಾಸದೊಳಗೆ ಬಂದು ಬೀಳುತ್ತಿದ್ದವು. ಹೀಗಾಗಿ ಕುಮಾರಸ್ವಾಮಿ ಮೈದಾನದ ಸುತ್ತಲೂ 100 ಅಡಿ ಎತ್ತರದ ಬಲೆ ಹಾಕಿಸಿದ್ದರು. ಆದರೆ ಈಗ ಗಾಲ್ಫ್ ಚೆಂಡು ಅಷ್ಟು ಎತ್ತರದ ಬಲೆ ದಾಟಿ ಮತ್ತೆ ಕೃಷ್ಣಾ ನಿವಾಸದ ಒಳಗೆ ಬಂದು ಬಿದ್ದಿದೆ.

    ಗಾಲ್ಫ್ ಚೆಂಡು ವಶಕ್ಕೆ ಪಡೆದಿರುವ ಪೊಲೀಸರು, ಯಾರು ಹೊಡೆದಿದ್ದು ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

  • ಬಾಲ್ ತಂದುಕೊಡ್ಲಿಲ್ಲ ಅಂತ ಪ್ರಾಣವನ್ನೆ ತೆಗೆದ್ರು!

    ಬಾಲ್ ತಂದುಕೊಡ್ಲಿಲ್ಲ ಅಂತ ಪ್ರಾಣವನ್ನೆ ತೆಗೆದ್ರು!

    ಬೆಂಗಳೂರು: ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲನ್ನು ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವ್ಯಕ್ತಿಯನ್ನು ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

    ಈ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಮಣಿಕಂಠ ಮೃತ ದುರ್ದೈವಿಯಾಗಿದ್ದು, ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಪ್ರಕರಣ ಕುರಿತಂತೆ ಮಹಾಲಕ್ಷ್ಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.

    ಶೀಘ್ರವೇ ಕಾರ್ಯಚರಣೆ ನಡೆಸಿದ ಮಹಾಲಕ್ಷ್ಮೀ ಠಾಣಾ ಪೊಲೀಸರು ಮೃತ ಮಣಿಕಂಠನ ಸ್ನೇಹಿತರಾದ ಶಿವಾಜಿ, ಪುನೀತ್, ವಿನೋದ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಏನಿದು ಪ್ರಕರಣ?
    ಮೃತ ಮಣಿಕಂಠ ಹಾಗೂ ಆರು ಆರೋಪಿಗಳು ಒಂದೇ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಕ್ರಿಕೆಟ್ ಆಟ ಆಡುತ್ತಿರುವಾಗ ಬಾಲ್ ಮೈದಾನದಿಂದ ಹೊರಗೆ ಹೋಗಿದೆ. ಈ ವೇಳೆ ಶಿವಾಜಿ ಎಂಬಾತನು ಮಣಿಕಂಠನಿಗೆ ಬಾಲ್ ತರುವಂತೆ ಹೇಳಿದ್ದಾನೆ. ಮೃತನು ಬಾಲ ಅನ್ನು ತಂದು ಕೊಡದಿದ್ದಕ್ಕೆ ತಂಡದ ಸದಸ್ಯರ ಜೊತೆ ಜಗಳ ಏರ್ಪಟ್ಟಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಸ್ಥಳದಲ್ಲೇ ಮಣಿಕಂಠನನ್ನು ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.