Tag: ball tampering

  • ಪಂದ್ಯಶ್ರೇಷ್ಠ ಜಡೇಜಾಗೆ ಬಿಸಿ ಮುಟ್ಟಿಸಿದ ICC

    ಪಂದ್ಯಶ್ರೇಷ್ಠ ಜಡೇಜಾಗೆ ಬಿಸಿ ಮುಟ್ಟಿಸಿದ ICC

    ನಾಗ್ಪುರ: ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (Test Cricket) ಉತ್ತಮ ಪ್ರದರ್ಶನ ನೀಡಿದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದಂಡದ ಬಿಸಿ ಮುಟ್ಟಿಸಿದೆ.

    ಪ್ರಥಮ ಇನ್ನಿಂಗ್ಸ್ನಲ್ಲಿ ಜಡೇಜಾ ಮೊದಲ ಹಂತದ ಐಸಿಸಿ ಕೋಡ್ ಆಫ್ ಕಂಡಕ್ಟ್ (ICC Code of Conduct) ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಡೇಜಾ ಅವರ ಪಂದ್ಯದ ಸಂಭಾವನೆಯಲ್ಲಿ ಶೇ.25 ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ಇದನ್ನೂ ಓದಿ: ಅಶ್ವಿನ್, ಶಮಿ ಸ್ಪಿನ್ ದಾಳಿಗೆ ಮಕಾಡೆ ಮಲಗಿದ ಕಾಂಗರೂ ಪಡೆ – ಭಾರತಕ್ಕೆ 1-0 ಜಯದ ಮುನ್ನಡೆ

    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ದಿನದ ಇನ್ನಿಂಗ್ಸ್‌ನಲ್ಲಿ 46ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಮೊಹಮ್ಮದ್ ಸಿರಾಜ್ ಅವರಿಂದ ವಸ್ತುವೊಂದನ್ನು ಪಡೆದುಕೊಂಡ ರವೀಂದ್ರ ಜಡೇಜಾ ಅವರು, ತಮ್ಮ ತೋರು ಬೆರಳಿಗೆ ಹಚ್ಚಿಕೊಂಡಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ: ಜಡೇಜಾ, ಅಶ್ವಿನ್‌ ದಾಳಿಗೆ ಆಸ್ಟ್ರೇಲಿಯಾ ಪಲ್ಟಿ – ಏಕದಿನ ಶೈಲಿಯಲ್ಲಿ ರೋಹಿತ್‌ ಬ್ಯಾಟಿಂಗ್‌

    ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಟ್ರೇಲಿಯಾ ಮಾಧ್ಯಮಗಳು ರವೀಂದ್ರ ಜಡೇಜಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದವು. ಮೊದಲನೇ ದಿನದಾಟದ ಅಂತ್ಯಕ್ಕೆ ಮ್ಯಾಚ್ ರೆಫರಿ ಈ ವೀಡಿಯೋವನ್ನು ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಜಡೇಜಾಗೆ ತೋರಿಸಿ ಸ್ಪಷ್ಟನೆ ಕೇಳಿದ್ದರು. ಬೆರಳಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ನೋವು ನಿವಾರಕ ಕ್ರೀಮ್ ಹಚ್ಚಿಕೊಳ್ಳಲಾಗಿತ್ತು ಎಂದು ರೋಹಿತ್ ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಜಡೇಜಾಗೆ ಕ್ಲೀನ್ ಚೀಟ್ ನೀಡಲಾಗಿತ್ತು.

    ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy 2023) ಟೆಸ್ಟ್ ಸರಣಿಯಲ್ಲಿ 132 ರನ್‌ಗಳ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ 1-0 ಅಂತರದಲ್ಲಿ ಜಯದ ಮುನ್ನಡೆ ಸಾಧಿಸಿದೆ.

    ಬಾಲ್ ಟ್ಯಾಂಪರಿಂಗ್ ಅಂದ್ರೆ ಏನು?
    ಯಾವುದೇ ಪಂದ್ಯ ನಡೆಯುವ ವೇಳೆ ಚೆನ್ನಾಗಿರುವ ಚೆಂಡನ್ನು ಫೀಲ್ಡಿಂಗ್ ತಂಡದ ಆಟಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಐಸಿಸಿ ನಿಯಮಗಳ ವಿರುದ್ಧವಾಗಿ ಯಾವುದಾದಾರೂ ವಸ್ತುಗಳನ್ನು ಬಳಸಿಕೊಂಡು ವಿರೂಪಗೊಳಿಸುವುದು. ಶೈನ್ ಇರುವ ಚೆಂಡನ್ನು ಚೆನ್ನಾಗಿ ಉಜ್ಜುವುದು, ಆ ಮೂಲಕ ಚೆಂಡನ್ನು ಹೆಚ್ಚು ಸ್ವಿಂಗ್ ಆಗುವಂತೆ ಹಾಗೂ ಬ್ಯಾಟ್ಸ್ಮನ್‌ಗೆ ಆಡದಂತೆ ಮಾಡುವುದನ್ನ ಬಾಲ್ ಟ್ಯಾಂಪರಿಂಗ್ ಎಂದು ಕರೆಯುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    ಸಿಡ್ನಿ: ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ ಡೇವಿಡ್ ವಾರ್ನರ್ ನಾಯಕತ್ವದ ಪಟ್ಟ ಇಲ್ಲದಿದ್ದರೂ ನಾನು ಯಾವತ್ತು ನಾಯಕನೇ ಎಂದು ಸ್ಟ್ರಾಂಗ್ ಮೆಸೇಜ್ ಒಂದನ್ನು ನೀಡಿದ್ದಾರೆ.

    ಚೆಂಡು ವಿರೂಪ ಪ್ರಕರಣದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ವಾಪಾಸ್ ಆಗಿರುವ ವಾರ್ನರ್ ಇದೀಗ 9 ವರ್ಷಗಳ ಬಳಿಕ ಬಿಗ್‍ಬಾಶ್ ಲೀಗ್ ಆಡುತ್ತಿದ್ದಾರೆ. ಈ ನಡುವೆ ಬಿಗ್‍ಬಾಶ್ ಲೀಗ್‍ನಲ್ಲಿ ತಂಡದ ನಾಯಕತ್ವವನ್ನು ಡೇವಿಡ್ ವಾರ್ನರ್‌ಗೆ ನೀಡಬೇಕೆಂಬ ಕೂಗು ಕೇಳಿ ಬರುತ್ತಿದ್ದೆ. ಆದರೆ ವಾರ್ನರ್ ನಾಯಕತ್ವದ ಅಜೀವ ನಿಷೇಧದಲ್ಲಿದ್ದಾರೆ. ಇದನ್ನೂ ಓದಿ: 10 ವರ್ಷಗಳ ಬಳಿಕ ಮತ್ತೆ ಎದುರುಬದುರಾಗಿ ಆಡಿದ ಕ್ರಿಕೆಟಿಗರು

    2018ರಲ್ಲಿ ಚೆಂಡು ವಿರೂಪ ಪ್ರಕರಣದಿಂದಾಗಿ ಡೇವಿಡ್ ವಾರ್ನರ್ ನಾಯಕತ್ವದ ಅಜೀವ ನಿಷೇಧ ಶಿಕ್ಷೆಯಲ್ಲಿದ್ದಾರೆ. ಇದೀಗ ಈ ನಿಷೇಧವನ್ನು ಹಿಂಪಡೆಯಬೇಕೆಂಬ ಕೂಗು ಜೋರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನರ್ ನನಗೆ ನಾಯಕತ್ವದ ಪಟ್ಟ ಇಲ್ಲದಿದ್ದರೂ ನಾನು ನಾಯಕನಾಗಿಯೇ ತಂಡದ ಜೊತೆ ಇರುತ್ತೇನೆ ನನಗೆ ಪಟ್ಟ ಬೇಕಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‍ಗೆ ದಿನಗಣನೆ – ಇಂಡೋ-ಪಾಕ್ ಕದನದಲ್ಲಿ ಇರಲ್ಲ ಇಬ್ಬರು ಬೆಂಕಿ ಬೌಲರ್ಸ್‌

    2018ರಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದ ಬಳಿಕ ಆಸ್ಟ್ರೇಲಿಯಾದ ಮೂವರು ಆಟಗಾರರಾದ ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಮತ್ತು ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಆ ಬಳಿಕ ಇದೀಗ ಅಂತಾರಾಷ್ಟ್ರೀಯ ತಂಡಕ್ಕೆ ವಾಪಾಸಾಗಿದ್ದಾರೆ. ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ ಭರ್ಜರಿ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

     

  • ಲಾರ್ಡ್ಸ್ ಟೆಸ್ಟ್​ನಲ್ಲಿ ಆಂಗ್ಲರ ವಿರುದ್ಧ ಚೆಂಡು ವಿರೂಪ ಆರೋಪ

    ಲಾರ್ಡ್ಸ್ ಟೆಸ್ಟ್​ನಲ್ಲಿ ಆಂಗ್ಲರ ವಿರುದ್ಧ ಚೆಂಡು ವಿರೂಪ ಆರೋಪ

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

    ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ? 

    ವಿರೇಂದ್ರ ಸೆಹ್ವಾಗ್ ಇದು ಇಂಗ್ಲೆಂಡ್ ಆಟಗಾರರು ನಡೆಸುತ್ತಿರುವ ಚೆಂಡು ವಿರೂಪವೇ ಅಥವಾ ಕೊರೊನಾ ಮುನ್ನಚ್ಚೆರಿಕಾ ಕ್ರಮವೇ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದರೆ. ಸ್ಟುವರ್ಟ್ ಬ್ರಾಡ್, ಈ ಘಟನೆಯ ಪೂರ್ಣ ವೀಡಿಯೋ ನೋಡದೆ ವಿಶ್ಲೇಷಿಸುವುದು ಸರಿಯಲ್ಲ. ಇದು ಆಕಸ್ಮಿಕವಾಗಿರಬಹುದು ಎಂದಿದ್ದಾರೆ.

    ಈ ನಡುವೆ ಈ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಈ ಕುರಿತು ಮ್ಯಾಚ್ ರೆಫ್ರಿ ಸೂಕ್ಷವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ.

  • ವಿಂಡೀಸ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕರಿನೆರಳು – ಲಂಕಾ ನಾಯಕನಿಗೆ ದಂಡ

    ವಿಂಡೀಸ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕರಿನೆರಳು – ಲಂಕಾ ನಾಯಕನಿಗೆ ದಂಡ

    ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಗೆ ದಂಡ ವಿಧಿಸಲಾಗಿದೆ.

    ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನದಾಟ ಆರಂಭಕ್ಕೂ ಮುನ್ನ ಘಟನೆ ನಡೆದಿದ್ದು, ಅನ್ ಫೀಲ್ಡ್ ಅಂಪೈರ್ ಗಳು ಶ್ರೀಲಂಕಾ ತಂಡ ಆಟಗಾರರು ಚೆಂಡು ವಿರೂಪಗೊಳಿಸಿದ್ದಾರೆ ಶಂಕಿಸಿ ಚೆಂಡು ಬದಲಾಯಿಸಲು ನಿರ್ಧರಿಸಿದ್ದರು.

    ಅಂಪೈರ್ ಗಳ ನಡೆಗೆ ವಿರೋಧ ವ್ಯಕ್ತಪಡಿಸಿದ ದಿನೇಶ್ ಚಂಡಿಮಾಲ್ ಶನಿವಾರ ಆಟ ಮುಂದುವರಿಸಲು ವಿರೋಧ ವ್ಯಕ್ತಪಡಿಸಿ ಮೈದಾನಕ್ಕೆ ಆಗಮಿಸಲು ನಿರಾಕರಿಸಿದ್ದರು. ಈ ವೇಳೆ ಮ್ಯಾಚ್ ರೆಫರಿಯಾಗಿದ್ದ ಜಾವಗಲ್ ಶ್ರೀನಾಥ್ ಅವರೊಂದಿಗೆ ಶ್ರೀಲಂಕಾ ಕೋಚ್ ಸುದೀರ್ಘ ಮಾತುಕತೆ ನಡೆಸಿದ ಬಳಿಕ 2 ಗಂಟೆಗಳ ತಡವಾಗಿ ಪ್ರತಿಭಟನೆ ಮೇಲೆಯೇ ಲಂಕಾ ತಂಡ ಆಟ ಮುಂದುವರೆಸಿತು. ಮೈದಾನಕ್ಕೆ ತಡವಾಗಿ ಆಗಮಿಸಿದ ಕಾರಣ ಲಂಕಾ ತಂಡಕ್ಕೆ 5 ರನ್ ಗಳ ದಂಡವನ್ನು ವಿಧಿಸಿದ್ದರು.

    ಈ ಕುರಿತು ಟ್ವೀಟ್ ಮಾಡಿದ್ದ ಐಸಿಸಿ, ಚಂಡಿಮಾಲ್ ಐಸಿಸಿ ನೀತಿ ಸಂಹಿತೆ 2.2.9 ರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ. ಈ ನಿಯಮವು ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದು, ಈಗಾಗಲೇ ಶ್ರೀಲಂಕಾ ತಂಡಕ್ಕೆ ಐದು ರನ್ ಗಳ ದಂಡ ವಿಧಿಸಿದ್ದರೂ ಮುಂದಿನ ದಿನಗಳಲ್ಲಿ ಶ್ರೀಲಂಕಾ ಆಟಗಾರರ ವರ್ತನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಚಂಡಿಮಾಲ್ ಐಸಿಸಿ ನಿಯಮ ಉಲ್ಲಂಘಿಸಿದ ಕಾರಣ ಪಂದ್ಯದ ಸಂಭಾವನೆಯ ಶೇ.75 ರಷ್ಟು ದಂಡ ಹಾಗೂ 3 ಋಣಾತ್ಮಕ ಅಂಕದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ತಿಳಿಸಿದೆ.

    ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಆಟಗಾರರಿಗೆ ಮೈದಾನಕ್ಕೆ ತೆರಳಿ ಪಂದ್ಯ ಮುಂದುವರಿಸಲು ಸೂಚಿಸಿತ್ತು. ಆದರೆ ತಮ್ಮ ತಂಡ ಆಟಗಾರರು ಚೆಂಡು ವಿರೂಪಗೊಳಿಸುವ ಕುರಿತ ಆರೋಪವನ್ನು ತಳ್ಳಿ ಹಾಕಿದೆ.

    ಈ ವರ್ಷದ ಮಾರ್ಚ್ ನಲ್ಲಿ ಆಸೀಸ್ ಆಟಗಾರು ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದಿದ್ದರು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಸೀಸ್ ತಂಡದ ನಾಯಕ ಸ್ಮಿತ್, ಉಪನಾಯಕ ವಾರ್ನರ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.

  • ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಬ್ಯಾನ್‍ಕ್ರಾಫ್ಟ್, ಡೇವಿಡ್ ವಾರ್ನರ್

    ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಬ್ಯಾನ್‍ಕ್ರಾಫ್ಟ್, ಡೇವಿಡ್ ವಾರ್ನರ್

    ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಜುಲೈನಲ್ಲಿ ನಡೆಯಲಿರುವ ಸೀಮಿತ ಓವರ್‍ಗಳ ಪಂದ್ಯದಲ್ಲಿ ಇಬ್ಬರೂ ಮತ್ತೆ ವೃತ್ತಿಪರ ಕ್ರಿಕೆಟ್‍ಗೆ ಮರಳಲಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾರ್ನರ್ ಒಂದು ವರ್ಷ ಮತ್ತು ಬ್ಯಾನ್ ಕ್ರಾಫ್ಟ್ 9 ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿಷೇಧಕ್ಕೊಳಗಾಗಿದ್ದರು. ಇಬ್ಬರ ನಿಷೇಧದ ಅವಧಿ ಇನ್ನೂ ಮುಗಿದಿಲ್ಲವಾದರೂ, ಕ್ರಿಕೆಟ್ ಆಸ್ಟ್ರೇಲಿಯಾ, ಇಬ್ಬರು ಆಟಗಾರರಿಗೂ ಕ್ಲಬ್ ಮಟ್ಟದ ಮತ್ತು ವಿದೇಶಗಳಲ್ಲಿ ದೇಶೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.

    ವೃತ್ತಿಪರ ಕ್ರಿಕೆಟ್‍ಗೆ ಮರಳಲು ಕಾಯುತ್ತಿರುವ ವಾರ್ನರ್ ಹಾಗೂ ಬ್ಯಾನ್ ಕ್ರಾಫ್ಟ್‍ಗೆ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರ ಮರುಜೀವ ನೀಡಿದಂತಾಗಿದೆ. ಉತ್ತರ ಆಸ್ಟ್ರೇಲಿಯಾದ ಡಾರ್ವಿನ್‍ನಲ್ಲಿ ಟಿ20 ಮತ್ತು ಏಕದಿನ ಟೂರ್ನಿ ನಡೆಯಲಿದ್ದು, ಇದರಲ್ಲಿ ಡೆಸರ್ಟ್ ಬ್ಲೇಜ್, ಸಿಟಿ ಸೈಕ್ಲೋನ್ಸ್, ನಾರ್ತರ್ನ್ ಟೈಡ್ ಮತ್ತು ಸೌತರ್ನ್ ಸ್ಟೋರ್ಮ್ ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ. ಬ್ಯಾನ್ ಕ್ರಾಫ್ಟ್ ಪೂರ್ಣಾವಾಧಿಗೆ ಟೂರ್ನಿಯಲ್ಲಿ ಆಡಲಿದ್ದು, ಡೇವಿಡ್ ವಾರ್ನರ್ ಜುಲೈ 21 ಮತ್ತು 22ರಂದು ನಡೆಯಲಿರುವ ಎರಡು ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಇದನ್ನು ಓದಿ:  ಬಾಲ್ ಟ್ಯಾಂಪರಿಂಗ್ ಬಳಿಕ ಮಗುವನ್ನು ಕಳೆದುಕೊಂಡ ವಾರ್ನರ್ ದಂಪತಿ

    ಡಾರ್ವಿನ್ ನಲ್ಲಿ ನಡೆಯಲಿರುವ ಸ್ಟ್ರೈಕ್ ಲೀಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕ್ಯಾಮರೂನ್ ಮತ್ತು ವಾರ್ನರ್ ನಮ್ಮನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಲು ನಮಗೆ ಅತೀವ ಸಂತೋಷವಾಗುತ್ತಿದೆ. ಇಬ್ಬರು ಅನುಭವಿ ಆಟಗಾರರ ಲಭ್ಯತೆ ಸ್ಥಳೀಯ ಆಟಗಾರರಿಗೆ ನೆರವಾಗಲಿದೆ ಎಂದು ಎಂದು ನಾರ್ತರ್ನ್ ಟೆರಿಟರಿ ಕ್ರಿಕೆಟ್ ನ ಮುಖ್ಯಸ್ಥ ಜೋಯಲ್ ಮೋರಿಸನ್ ಪ್ರತಿಕ್ರಿಯಿಸಿದ್ದಾರೆ.

    ಸೆಪ್ಟಂಬರ್ ಬಳಿಕ ಡೇವಿಡ್ ವಾರ್ನರ್, ಸಿಡ್ನಿ ಕ್ಲಬ್ ರ್ಯಾಂಡ್ವಿಕ್ ಪೀಟರ್‍ಶಾಮ್ ಕ್ಲಬ್ ಪರ ಆಡಲಿದ್ದು, ಈಗಾಗಲೇ ಕ್ಲಬ್‍ನ ತರಬೇತಿ ಶಿಬಿರಗಳಲ್ಲಿ ವಾರ್ನರ್ ಬೆವರು ಹರಿಸುತ್ತಿದ್ದಾರೆ.