ನವದೆಹಲಿ: ದ್ವೀಪಸಮೂಹದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ (Volcanic Eruption) ದೆಹಲಿಯಿಂದ ಇಂಡೋನೇಷ್ಯಾದ ಬಾಲಿಗೆ (Bali) ತೆರಳುತ್ತಿದ್ದ ಏರ್ ಇಂಡಿಯಾ (Air India Flight) ವಿಮಾನವು ದೆಹಲಿಗೆ ವಾಪಸ್ ಆಗಿದೆ.
ಬುಧವಾರ ದೆಹಲಿಯಿಂದ ಬಾಲಿಗೆ ಏರ್ ಇಂಡಿಯಾ ವಿಮಾನ AI2145 ಹೊರಟಿತ್ತು. ಬಾಲಿಯ ಗಮ್ಯಸ್ಥಾನ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟದ ವರದಿಗಳು ಕೇಳಿಬಂದವು. ಸುರಕ್ಷತೆಯ ದೃಷ್ಟಿಯಿಂದ ದೆಹಲಿಗೆ ಹಿಂತಿರುಗಲು ಸೂಚಿಸಲಾಯಿತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಒದಗಿಸಲಾಗಿದೆ. ಟಿಕೆಟ್ ಹಣವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ
ಬಾಲಿಯ ಪೂರ್ವದಲ್ಲಿರುವ ಜ್ವಾಲಾಮುಖಿ ಸ್ಫೋಟಗೊಂಡ ನಂತರ ಬುಧವಾರ ಬಾಲಿಗೆ ಹೋಗುವ ಮತ್ತು ಬರುವ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಟಗರು’ (Tagaru) ನಟಿ ಮಾನ್ವಿತಾ ಕಾಮತ್ (Manvita Kamath) ಸದ್ಯ ಬಾಲಿಗೆ ಹಾರಿದ್ದಾರೆ. ಪತಿ ಅರುಣ್ ಜೊತೆ ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಸದ್ಯ ಹನಿಮೂನ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಸದ್ಯ ಹನಿಮೂನ್ ಮೂಡ್ ನಲ್ಲಿದ್ದಾರೆ. ಇರಾ ಖಾನ್ ಮತ್ತು ನೂಪುರ್ ಶಿಖರೆ ಹನಿಮೂನ್ (Honeymoon) ಗಾಗಿ ಬಾಲಿಯನ್ನು (Bali) ಆಯ್ಕೆ ಮಾಡಿಕೊಂಡಿದ್ದಾರೆ. ಬಾಲಿಯಲ್ಲಿನ ನೆನಪಿಗಾಗಿ ಒಂದು ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಇರಾ ಖಾನ್ (Ira Khan)- ನೂಪುರ್ ಶಿಖರೆ ಜೋಡಿ ಜ.10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ನಂತರ ಮುಂಬೈನ ಪ್ರತಿಷ್ಟಿತ ರೆಸಾರ್ಟ್‌ವೊಂದರಲ್ಲಿ ಅದ್ದೂರಿ ಆರತಕ್ಷತೆ (Reception) ನಡೆದಿತ್ತು. ಈ ಸಮಾರಂಭಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್ (Sharukh Khan) ದಂಪತಿ ಸೇರಿದಂತೆ ಅನೇಕರು ಭಾಗಿದ್ದರು.
ಮುದ್ದಿನ ಮಗಳು ಇರಾ ಖಾನ್- ನೂಪುರ್ ಮದುವೆಯ ಬಳಿಕ ಆರತಕ್ಷತೆ ಗ್ರ್ಯಾಂಡ್ ಆಗಿ ಹಮ್ಮಿಕೊಂಡಿದ್ದರು. ನೂಪುರ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರೆ, ಇರಾ ಕೆಂಪು ಲೆಹೆಂಗಾ ಧರಿಸಿ ಮಿಂಚಿದ್ದರು.
ಇರಾ ಆರತಕ್ಷತೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಗೌರಿ- ಶಾರುಖ್ ಖಾನ್ ಜೋಡಿ, ರಣ್‌ಬೀರ್ ಕಪೂರ್, ಕತ್ರಿನಾ ಕೈಫ್, ಜಯಾ ಬಚ್ಚನ್, ಸುಶ್ಮಿತಾ ಸೇನ್, ತೆಲುಗು ನಟ ನಾಗಚೈತನ್ಯ, ಫರ್ಹಾನ್ ಅಖ್ತರ್, ಜೆನಿಲಿಯಾ ದೇಶ್‌ಮುಖ್, ಅದಿತಿ- ಸಿದ್ಧಾರ್ಥ್ ಜೋಡಿ, ಅನಿಲ್ ಕಪೂರ್, ಹೇಮಾ ಮಾಲಿನಿ, ರೇಖಾ ಸೇರಿದಂತೆ ಅನೇಕರು ಭಾಗಿಯಾಗುವ ಮೂಲಕ ನವಜೋಡಿಗೆ ಶುಭಕೋರಿದ್ದರು.
ಇರಾ ಖಾನ್- ನೂಪುರ್ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡು ಕಡೆ ಕುಟುಂಬದವರನ್ನು ಒಪ್ಪಿಸಿ ಗುರುಹಿರಿಯರ ಸಮ್ಮುಖದಲ್ಲಿ ಜ.10ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದರು.
ದೀಪಾವಳಿಯನ್ನು (Deepavali) ಒಟ್ಟು ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಮನೆಯವರೆಲ್ಲರೂ ಎಣ್ಣೆ ಸ್ನಾನ ಮಾಡುವ ನರಕ ಚತುದರ್ಶಿ, ಮರು ದಿವಸ ಅಮಾವಾಸ್ಯೆ, ಮೂರನೇ ದಿನವೇ ಬಲಿ ಪಾಡ್ಯಮಿ. ದೀಪಾವಳಿ ಬಲಿಪಾಡ್ಯಮಿಯೊಂದಿಗೆ (Balipadyami) ಈ ಮೂರು ದಿನಗಳ ಹಬ್ಬ ಮುಗಿಯುತ್ತದೆ. ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ (Bali Maharaja) ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ತಲೆಗೆ ಏರುತ್ತದೆ. ಬಲಿ ರಾಜನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಆತ ಪ್ರೋತ್ಸಾಹ ನೀಡುತ್ತಿರುತ್ತಾನೆ. ಇವರ ಕಾಟ ಹೆಚ್ಚಾಗುತ್ತಿದ್ದಂತೆ ಹೇಗಾದರೂ ಮಾಡಿ ಬಲಿಯನ್ನು ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.
ದೇವತೆಗಳಿಗೆ ಅಭಯ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬಂದು ದಾನವನ್ನು ಕೇಳುತ್ತಾನೆ. ಬಲೀಂದ್ರ ರಾಜ ಕೊಡುಗೈ ದಾನಿ. ನಿನಗೆ ಏನು ಬೇಕೆಂದು ಕೇಳು ಎಂದು ವಾಮನನಿಗೆ (Vamana) ಹೇಳುತ್ತಾನೆ. ಆಗ ವಾಮನ, ನನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬಹುದೇ ಎಂದು ಕೇಳುತ್ತಾನೆ. ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ
ಪ್ರಜಾಪರಿಪಾಲನೆಯಲ್ಲಿ ಹೆಸರು ಮಾಡಿರುವ ನನಗೆ ಈ ಪುಟ್ಟ ಬಾಲಕನ ಬೇಡಿಕೆಯನ್ನು ಈಡೇರಿಸುವ ಯೋಗ್ಯತೆ ಇಲ್ವಾ ಎಂಬ ಅಹಂಕಾರದಿಂದ ಬಲೀಂದ್ರ ಮಹಾರಾಜ ವಾಮನನಿಗೆ, ನೀನು ಕೇಳಿದ ಮೂರು ಹೆಜ್ಜೆ ಊರುವಷ್ಟು ಜಾಗ ನೀಡುತ್ತೇನೆ ಎಂದು ವಚನವನ್ನು ಕೊಡುತ್ತಾನೆ.
ಭೂಮಿಯನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಪಾದ ಇಡು ಎಂದು ಹೇಳುತ್ತಾನೆ.
ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ವಾಮನ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ.
ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನಾನು ನನ್ನ ಮಕ್ಕಳಂತೆ ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಇದನ್ನೂ ಓದಿ: ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?
ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಅದೇನೆಂದರೆ ಆಶ್ವಯುಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆ ಮಾಡುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ. ಆಶ್ವಯುಜ ಕೃಷ್ಣ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪಾಡ್ಯ. ಇದನ್ನು ಬಲಿರಾಜ್ಯವೆಂದು ಹೇಳುತ್ತಾರೆ. ಆ ರೀತಿ ಆಚರಿಸಲ್ಪಡುವ ಕೊನೆಯ ದಿನವೇ ಬಲಿಪಾಡ್ಯಮಿ. ಈ ಅವಧಿಯಲ್ಲಿ ಬಲಿ ಚಕ್ರವರ್ತಿ ಪಾತಾಳದಿಂದ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರ ಪೂಜೆ ನಡೆಯುತ್ತದೆ.
ದೀಪಾವಳಿಯ ದಿನದಂದು ಪ್ರಜೆಗಳನ್ನು ನೋಡಲು ಬಲೀಂದ್ರ ಮಹಾರಾಜ ಬರುತ್ತಾನೆ ಎಂಬ ನಂಬಿಕೆಯಿಂದ ಜನರು ಅಭ್ಯಂಜನ ಸ್ನಾನಾದಿಗಳನ್ನು ಮಾಡಿಕೊಂಡು ಮನೆಯ ಎಲ್ಲ ಪಾತ್ರೆಗಳಲ್ಲಿ ಶುದ್ಧವಾದ ನೀರನ್ನು ತುಂಬಿಸುತ್ತಾರೆ. ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳನ್ನು ಹೇಳುವ ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಶ್ಛ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೇತೇಃ ಚಿರಂಜೀವಿನಃ | ಶ್ಲೋಕವನ್ನು ಹೇಳುತ್ತಾರೆ. ಹಿಂದೂ ಪುರಾಣಗಳ ಪ್ರಕಾರ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂಬಂಧಿಸಿದ ಏಳು ಪೌರಾಣಿಕ ವ್ಯಕ್ತಿಗಳನ್ನು ಚಿರಂಜೀವಿಗಳು ಎಂದು ನಂಬಲಾಗಿದೆ. ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮನನ್ನು ಸ್ತುತಿಸಿದರೆ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.
ಜಕಾರ್ತ: ಇಸ್ಲಾಮಿಕ್ ಪ್ರಾರ್ಥನೆ (Islamic Prayer) ಬಳಿಕ ಹಂದಿ ಮಾಂಸ ತಿಂದ ಟಿಕ್ ಟಾಕ್ ಸ್ಟಾರ್ ಲೀನಾ ಮುಖರ್ಜಿಗೆ ಇಂಡೋನೇಷ್ಯಾ ನ್ಯಾಯಾಲಯವು (Indonesia Court) 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಟಿಕ್‌ಟಾಕ್ ಸ್ಟಾರ್ ಲೀನಾ ಮುಖರ್ಜಿ (Lina Mukherjee) ಬಾಲಿಗೆ ಪ್ರವಾಸಕ್ಕೆ ತೆರಳಿದ್ದಳು. ಈ ವೇಳೆ ಬಿಸ್ಮಿಲ್ಲಾ ಪ್ರಾರ್ಥನೆ ಮಾಡಿದ ಬಳಿಕ ಹಂದಿ ಮಾಂಸ ತಿಂದ ವೀಡಿಯೋವನ್ನ ಟಿಕ್‌ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದಾದ 6 ತಿಂಗಳ ಬಳಿಕ ಆಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಬಾಲಿಯಲ್ಲಿ 33 ವರ್ಷದ ಲೀನಾ ಮುಖರ್ಜಿ ಅವರು ಕಳೆದ ಮಾರ್ಚ್‌ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವಿಡಿಯೊ ವೈರಲ್ ಆಗುತ್ತಲೇ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ, ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿರುವ ಕಾರಣ ಲೀನಾ ಮುಖರ್ಜಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಧರ್ಮ ನಿಂದನೆಯ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಕೋರ್ಟ್ ಹೇಳಿದ್ದೇನು?
ಧಾರ್ಮಿಕ ಆಚಾರ-ವಿಚಾರಗಳನ್ನು ನಂಬುವವರು ಹಾಗೂ ಒಂದು ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷ ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಲೀನಾ ಮುಖರ್ಜಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಲೆಮ್‌ಬಾಂಗ್ ನ್ಯಾಯಾಲಯವು ತಿಳಿಸಿದೆ. ಇದನ್ನೂ ಓದಿ: RSS ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು INDIA ಬಣ ಬಿಡಲ್ಲ: ರಾಹುಲ್ ಗಾಂಧಿ
ಇಸ್ಲಾಮಿಕ್ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ. ಪ್ರವಾದಿ ಮೊಹಮ್ಮದ್ ಹೆಸರಿನಲ್ಲಿ ಜನರಿಗೆ ಉಚಿತವಾಗಿ ಮದ್ಯ ಹಂಚುತ್ತಿದ್ದ 6 ಜನರನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.
ಹಲವು ದಿನಗಳಿಂದ ಸಮಂತಾ ಬಗ್ಗೆ ಹಣಕಾಸಿನ ವಿಚಾರವೊಂದು ಭಾರೀ ಸದ್ದು ಮಾಡುತ್ತಿತ್ತು. ಅವರು ತಮಗಿರೋ ಮೈಯೋಸಿಟಿಸ್ (Myositis) ಖಾಯಿಲೆ ಚಿಕಿತ್ಸೆಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಮಾಡಿದ್ದಾರೆಂದು, ಆ ಸಾಲವನ್ನು ನಟನೊಬ್ಬನಿಂದ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುಳ್ಳು ಸುದ್ದಿಗೆ ಸಮಂತ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಲ ಮಾಡಿ ಚಿಕಿತ್ಸೆ ಪಡೆಯುವಂತಹ ದುಸ್ಥಿತಿಯಲ್ಲಿ ನಾನಿನಲ್ಲ ಎಂದಿದ್ದಾರೆ.
‘ನನಗಿರೋ ಕಾಯಿಲೆಗೆ ಚಿಕಿತ್ಸೆ ಪಡೆಯಲು 25 ಕೋಟಿ ರೂಪಾಯಿ ಸಾಲ ಮಾಡಿದ್ದೇನೆ ಎನ್ನುವುದು ಶುದ್ದ ಸುಳ್ಳು. ಚಿಕಿತ್ಸೆಗೆ ಅಷ್ಟು ಹಣದ ಅವಶ್ಯಕತೆಯಿಲ್ಲ. ನಾನು ದುಡಿದ ಹಣದಲ್ಲೇ ಸ್ವಲ್ಪ ಖರ್ಚು ಮಾಡುತ್ತಿದ್ದೇನೆ. ನನಗಿರೊ ಕಾಯಿಲೆ ದೊಡ್ಡದೇನೂ ಅಲ್ಲ. ಸಾವಿರಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇಕಾಬಿಟ್ಟಿ ಪೋಸ್ಟ್ ಮಾಡುವ ಬದಲು ಆಲೋಚಿಸಿ’ ಎಂದು ಸ್ಯಾಮ್ ಬರೆದುಕೊಂಡಿದ್ದಾರೆ.
ಏನಿದು ಸುದ್ದಿ?
ಸಮಂತಾ (Samantha) ಅನಾರೋಗ್ಯದಿಂದ ದೂರದ ದೇಶಕ್ಕೆ ಚಿಕಿತ್ಸೆಗಾಗಿ (Treatment) ಹೋಗಿರುವುದು, ಕೆಲವು ತಿಂಗಳಲ್ಲಿ ಅಮೆರಿಕಾಕ್ಕೆ (America) ಹಾರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಹೊರ ಬಿದ್ದಿರುವ ಸತ್ಯ ದೇವುಡಾ ಎನ್ನುವಂತಿದೆ. ಕಾರಣ ಅದೊಬ್ಬ ಸ್ಟಾರ್ ಭರ್ತಿ 25 ಕೋಟಿ ರೂಪಾಯಿ ಕೊಟ್ಟಿದ್ದಾನೆಂದು ಹೇಳಲಾಗಿತ್ತು.
ಸಮಂತಾ ಈಗ ಬಾಲಿ (Bali) ದ್ವೀಪದಲ್ಲಿದ್ದಾರೆ. ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಸದ್ಗುರು ಬಳಿ ಯೋಗ-ಧ್ಯಾನದಲ್ಲಿ ತೊಡಗಿದ್ದ ಸ್ಯಾಮ್ ಈಗ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಅಮೆರಿಕಾಕ್ಕೆ ಹಾರಲಿದ್ದಾರೆ. ಅಲ್ಲಿ ಎಷ್ಟು ತಿಂಗಳು ಬೇಕು? ಅದ್ಯಾವ ರೀತಿಯ ಟ್ರೀಟ್‌ಮೆಂಟ್? ಒಂದೂ ಗೊತ್ತಿಲ್ಲ. ಅಷ್ಟರಲ್ಲಿ ಬಡಾ ಖಬರ್ ಸಮಂತಾ ಬ್ಯಾಂಕ್ ಅಕೌಂಟ್‌ನಿಂದ ಹೊರ ಬಿದ್ದಿದೆ. ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಪಡೆದಿದ್ದಾರಂತೆ ಕ್ವೀನ್ ಬಿ. ಅದನ್ನು ಸ್ಟಾರ್ ನಟ ಕೊಟ್ಟಿದ್ದಾನಂತೆ ಎನ್ನುವ ಸುದ್ದಿ ಗಿರಕಿ ಹೊಡೆಯುತ್ತಿತ್ತು. ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ
ಖುಷಿ ಹಾಗೂ ಸಿಟಾಡೆಲ್ ಸಿನಿಮಾ ಮುಗಿಸಿ ಒಂದು ವರ್ಷ ಬಣ್ಣದ ಲೋಕದಿಂದ ದೂರ ಎಂದು ಘೋಷಿಸಿದ್ದರು. ಮೈಯೋಸಿಟಿಸ್ ಖಾಯಿಲೆ ಚಿಕಿತ್ಸೆಯೇ ಮೂಲ ಕಾರಣ. ಈ ನಡುವೆ ಒಪ್ಪಿಕೊಂಡಿದ್ದ ಕೆಲವು ಕಮಿಟ್‌ಮೆಂಟ್ ಮುಗಿಸಲು ಆಗಲಿಲ್ಲ. ಹೀಗಾಗಿ ನಂಬಿಕೆ ದ್ರೋಹ ಮಾಡಬಾರದೆಂದು ನಿರ್ಮಾಪಕರಿಂದ ಪಡೆದ ಅಡ್ವಾನ್ಸ್ ಮರಳಿಸಿದ್ದರು ಸಮಂತಾ. ನಿಜಕ್ಕೂ ಎಲ್ಲರೂ ಶಹಬ್ಬಾಶ್ ಎಂದಿದ್ದರು.
ಸಮಂತಾಗೆ ಇಷ್ಟು ಕೋಟಿ ಕೊಟ್ಟಿದ್ಯಾರು? ಅಷ್ಟೊಂದು ಹಣ ಪಡೆದಿದ್ದು ನಿಜವಾದರೆ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ? ಇವೆಲ್ಲ ಬರೀ ಪ್ರಶ್ನೆಗಳು. ಉತ್ತರ ಹೇಳಬೇಕಾದ ಸ್ಯಾಮ್ ದೂರದ ಬಾಲಿಯಲ್ಲಿದ್ದಾರೆ. ಹೈದ್ರಾಬಾದ್‌ನಲ್ಲಿ ಸದ್ಯಕ್ಕೆ ಸಾಲ ಪಡೆದ ಹಣದ್ದೇ ಬೆಂಕಿ ಚರ್ಚೆ. ಹಾಗಿದ್ದರೆ ಸಮಂತಾ ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದ ಹಣ ಏನಾಯಿತು? ನಾಗ್‌ಚೈತನ್ಯ ಈಕೆ ಹಣ ನುಂಗಿ ನೀರು ಕುಡಿದರೆ? ಏನಾಗಲಿದೆ ಸ್ಯಾಮ್ ಭವಿಷ್ಯ? ಹೀಗೆ ಸಾವಿರ ಸಾವಿರ ಪ್ರಶ್ನೆಗಳು ಮೂಡಿದ್ದವು. ಎಲ್ಲದಕ್ಕೂ ಸಮಂತಾ ಉತ್ತರಿಸಿದ್ದಾರೆ.
ಸಮಂತಾ (Samantha) ಅನಾರೋಗ್ಯದಿಂದ ದೂರದ ದೇಶಕ್ಕೆ ಚಿಕಿತ್ಸೆಗಾಗಿ (Treatment) ಹೋಗಿರುವುದು, ಕೆಲವು ತಿಂಗಳಲ್ಲಿ ಅಮೆರಿಕಾಕ್ಕೆ (America) ಹಾರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಹೊರ ಬಿದ್ದಿರುವ ಸತ್ಯ ದೇವುಡಾ ಎನ್ನುವಂತಿದೆ. ಕಾರಣ ಅದೊಬ್ಬ ಸ್ಟಾರ್ ಭರ್ತಿ 25 ಕೋಟಿ ರೂಪಾಯಿ ಕೊಟ್ಟಿದ್ದಾನಂತೆ. ಚಿಕಿತ್ಸೆಗಾಗಿ ಇಷ್ಟು ಕೋಟಿ ಬೇಕಾ? ಏನಿದರ ಹಿಂದಿನ ಹೂರಣ.
ಸಮಂತಾ ಈಗ ಬಾಲಿ (Bali) ದ್ವೀಪದಲ್ಲಿದ್ದಾರೆ. ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಸದ್ಗುರು ಬಳಿ ಯೋಗ-ಧ್ಯಾನದಲ್ಲಿ ತೊಡಗಿದ್ದ ಸ್ಯಾಮ್ ಈಗ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಅಮೆರಿಕಾಕ್ಕೆ ಹಾರಲಿದ್ದಾರೆ. ಅಲ್ಲಿ ಎಷ್ಟು ತಿಂಗಳು ಬೇಕು? ಅದ್ಯಾವ ರೀತಿಯ ಟ್ರೀಟ್‌ಮೆಂಟ್? ಒಂದೂ ಗೊತ್ತಿಲ್ಲ. ಅಷ್ಟರಲ್ಲಿ ಬಡಾ ಖಬರ್ ಸಮಂತಾ ಬ್ಯಾಂಕ್ ಅಕೌಂಟ್‌ನಿಂದ ಹೊರ ಬಿದ್ದಿದೆ. ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಪಡೆದಿದ್ದಾರಂತೆ ಕ್ವೀನ್ ಬಿ. ಅದನ್ನು ಸ್ಟಾರ್ ನಟ ಕೊಟ್ಟಿದ್ದಾನಂತೆ. ಇದನ್ನೂ ಓದಿ:‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ
ಖುಷಿ ಹಾಗೂ ಸಿಟಾಡೆಲ್ ಸಿನಿಮಾ ಮುಗಿಸಿ ಒಂದು ವರ್ಷ ಬಣ್ಣದ ಲೋಕದಿಂದ ದೂರ ಎಂದು ಘೋಷಿಸಿದ್ದರು. ಮೈಯೋಸಿಟಿಸ್ ಖಾಯಿಲೆ ಚಿಕಿತ್ಸೆಯೇ ಮೂಲ ಕಾರಣ. ಈ ನಡುವೆ ಒಪ್ಪಿಕೊಂಡಿದ್ದ ಕೆಲವು ಕಮಿಟ್‌ಮೆಂಟ್ ಮುಗಿಸಲು ಆಗಲಿಲ್ಲ. ಹೀಗಾಗಿ ನಂಬಿಕೆ ದ್ರೋಹ ಮಾಡಬಾರದೆಂದು ನಿರ್ಮಾಪಕರಿಂದ ಪಡೆದ ಅಡ್ವಾನ್ಸ್ ಮರಳಿಸಿದ್ದರು ಸಮಂತಾ. ನಿಜಕ್ಕೂ ಎಲ್ಲರೂ ಶಹಬ್ಬಾಶ್ ಎಂದಿದ್ದರು. ಕೈಯಲ್ಲಿದ್ದ ಹಣ ಕೊಟ್ಟು ಈಗ ಸ್ಟಾರ್ ನಟನಿಂದ ಕೋಟಿ ಕೋಟಿ ಸಾಲ ಪಡೆದುಕೊಂಡಿದ್ದಾರೆ. ಇದು ಸತ್ಯವಾ ಸುಳ್ಳಾ?
ಸಮಂತಾಗೆ ಇಷ್ಟು ಕೋಟಿ ಕೊಟ್ಟಿದ್ಯಾರು? ಅಷ್ಟೊಂದು ಹಣ ಪಡೆದಿದ್ದು ನಿಜವಾದರೆ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ? ಇವೆಲ್ಲ ಬರೀ ಪ್ರಶ್ನೆಗಳು. ಉತ್ತರ ಹೇಳಬೇಕಾದ ಸ್ಯಾಮ್ ದೂರದ ಬಾಲಿಯಲ್ಲಿದ್ದಾರೆ. ಹೈದ್ರಾಬಾದ್‌ನಲ್ಲಿ ಸದ್ಯಕ್ಕೆ ಸಾಲ ಪಡೆದ ಹಣದ್ದೇ ಬೆಂಕಿ ಚರ್ಚೆ. ಹಾಗಿದ್ದರೆ ಸಮಂತಾ ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದ ಹಣ ಏನಾಯಿತು? ನಾಗ್‌ಚೈತನ್ಯ ಈಕೆ ಹಣ ನುಂಗಿ ನೀರು ಕುಡಿದರೆ? ಏನಾಗಲಿದೆ ಸ್ಯಾಮ್ ಭವಿಷ್ಯ ? ಸಾವಿರದ ಪ್ರಶ್ನೆಗಳು ಸಾಲು ಸಾಲು. ಈ ಪ್ರಮಾಣದಲ್ಲಿ ಹಣವನ್ನು ಸಾಲವಾಗಿ ಪಡೆದಿರುವುದು ಅನುಮಾನ ಎನ್ನುತ್ತಾರೆ ಸಮಂತಾ ಹತ್ತಿರದವರು.
ಅನಾರೋಗ್ಯದ ಕಾರಣದಿಂದಾಗಿ ಸಿನಿಮಾ ರಂಗಕ್ಕೆ ಅಲ್ಪವಿರಾಮ ಹೇಳಿರುವ ನಟಿ ಸಮಂತಾ (Samantha), ಅಮೆರಿಕಾಗೆ ಹಾರುವ ಮುನ್ನ ಟೆಂಪಲ್ ರನ್ (Temple Run) ಮಾಡಿದ್ದರು. ಸ್ವಲ್ಪ ದಿನಗಳ ಕಾಲ ಸದ್ಗುರು ಆಶ್ರಮದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಬಾಬ್ ಕಟ್ (Bob Cut) ಮಾಡಿಕೊಂಡು ಬಾಲಿಗೆ (Bali) ಹಾರಿದ್ದಾರೆ. ಅಲ್ಲಷ್ಟು ದಿನಗಳನ್ನು ಕಳೆದು ಅವರು ಅಮೆರಿಕಾಗೆ ಹಾರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಸತತವಾಗಿ ಧ್ಯಾನಮಗ್ನಳಾಗಿದ್ದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ ಎಂದು ಸಮಂತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?
ವೈಯಕ್ತಿಕ ಜೀವನದ ಅದ್ಯಾವ ವಿಷಯವನ್ನೂ ಸಮಂತಾ ಮುಚ್ಚಿಡೋದೇ ಇಲ್ಲ. ಇದೀಗ ಶೂಟಿಂಗ್ ಇಲ್ಲದೇ ಇದ್ದಾಗ ದಿನಚರಿ ಹೇಗಿರುತ್ತೆ ಅನ್ನೋದ್ರ ಬಗ್ಗೆ ಸಮಂತಾ ಮನಬಿಚ್ಚಿದ್ದಾರೆ. ಬೆಳಗ್ಗೆ ಬೇಗ ಏಳುವುದು, ಬಳಿಕ ರುದ್ರಾಕ್ಷಿ ಹಿಡಿದು ಧ್ಯಾನ ಮಾಡುವುದು, ಬಳಿಕ ಯೋಗ. ಹೀಗೆ ಕಟ್ಟುನಿಟ್ಟಿನ ದಿನಚರಿಯನ್ನು ಅವರು ಅನುಸರಿಸುತ್ತಾರೆ.
ಸಮಂತಾ ಅವರು ಸಿಟಾಡೆಲ್, ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ (Kushi) ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ. ಎರಡು ಪ್ರಾಜೆಕ್ಟ್‌ನಲ್ಲೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್, ಅನಾರೋಗ್ಯದ ಸಮಸ್ಯೆ ಇರೋದ್ರಿಂದ ಇದೆಲ್ಲದರಿಂದ ಅವರಿಗೆ ಬಿಡುವು ಬೇಕಾಗಿದೆ. ಆರೋಗ್ಯ ಮತ್ತು ಮನಸ್ಸಿಗೆ ರಿಲಾಕ್ಸೇಷನ್ ಬೇಕಾಗಿದೆ. ಹಾಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಬ್ಯುಸಿಯಾಗಿರುತ್ತಾರೆ.
ಏಕಾಏಕಿ ಮದುವೆ ಫೋಟೋ ಹಂಚಿಕೊಂಡು ಅಚ್ಚರಿ ಮೂಡಿಸಿದ್ದ ಖ್ಯಾತನಟ ಆಶಿಷ್ ವಿದ್ಯಾರ್ಥಿ, ಇದೀಗ ತಮ್ಮ ಪತ್ನಿಯ ಜೊತೆ ಬಾಲಿಗೆ (Bali) ಹಾರಿದ್ದಾರೆ. ಆಶಿಷ್ ಜೊತೆ ಇರುವಂತಹ ಫೋಟೋವನ್ನು ಅವರ ಪತ್ನಿ ರೂಪಾಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದಂಪತಿ ಹನಿಮೂನ್ (Honeymoon) ಮೂಡ್ ನಲ್ಲಿ ಇದ್ದಾರೆ.
ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ನಟಿಸಿರುವ ಆಶಿಷ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ (Roopali) ಜೊತೆ ದಾಂಪತ್ಯ (Wedding) ಜೀವನಕ್ಕೆ ನಟ ಕಾಲಿಟ್ಟಿದ್ದರು. ಅದನ್ನು ಸೋಷಿಯಲ್ ಮೀಡಿಯಾ ಮೂಲಕವೂ ಖಚಿತ ಪಡಿಸಿದ್ದರು. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ
ಬಹುಭಾಷಾ ನಟ ಆಶಿಷ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿದೆ. ಹೊಂದಾಣಿಕೆ ಆಗದೇ ಇರುವ ಕಾರಣಕ್ಕಾಗಿ ಇಬ್ಬರೂ ಡಿವೋರ್ಸ್ ಬಯಸಿದ್ದರು. ನಂತರ ದೂರ ದೂರವಾದರು.
ಉದ್ಯಮಿ ರೂಪಾಲಿ ಅವರನ್ನ ನಟ ಆಶಿಷ್ 2ನೇ ಮದುವೆಯಾಗಿದ್ದಾರೆ. ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25 ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಟ ಆಶಿಷ್ ಮದುವೆಯಾಗಿದ್ದರು. ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆಂದು ಆಸೆ ಇತ್ತು ಅದೇ ರೀತಿ ಆಯಿತು. ಖುಷಿಯಿದೆ. ಸದ್ಯದಲ್ಲೇ ನಮ್ಮಿಬ್ಬರ ಭೇಟಿ ಬಗ್ಗೆ ಎಲ್ಲವನ್ನೂ ಹೇಳುವೆ ಎಂದು ಆಶಿಷ್ ಮಾತನಾಡಿದ್ದರು.
ಜಕಾರ್ತ: ಪ್ರವಾಸಕ್ಕೆ ಬಂದಿದ್ದ ರಷ್ಯಾದ (Russia) ಇನ್ಸ್ಟಾಗ್ರಾಮ್ (Instagram) ತಾರೆಯೊಬ್ಬಳು, ದೇವಸ್ಥಾನದ ಮರದ ಕೆಳಗೆ ನಗ್ನ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ (Indonesia) ಬಾಲಿಯಿಂದ ಗಡಿಪಾರಾಗಿದ್ದಾಳೆ. ಮಹಿಳೆ ನಗ್ನ ಫೋಟೋಶೂಟ್ ಮಾಡಿಸಿರುವುದು, ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿ, ತೀವ್ರ ಪ್ರತಿಭಟನೆಯ ನಂತರ ಇಂಡೋನೇಷ್ಯಾ ಸರ್ಕಾರ ಮಹಿಳೆಯನ್ನು ಗಡಿಪಾರು ಮಾಡಿದೆ.
ರಷ್ಯಾದ 40ರ ಹರೆಯದ ಮಹಿಳೆ ಲೂಯ್ಜಾ ಕೊಶ್ಯಾಕ್ ಬಾಲಿ ಪ್ರವಾಸ ಕೈಗೊಂಡಿದ್ದರು. ಬಾಲಿಯ (Bali) ಸುಂದರ ತಾಣಗಳಲ್ಲಿ ಕೆಲ ದಿನಗಳ ಕಾಲ ಕಳೆದ ಕೋಶ್ಯಾಕ್, ಬಾಲಿಯ ತಬನನ್ ದೇವಸ್ಥಾನ ವೀಕ್ಷಣೆಗೆ ಆಗಮಿಸಿದ್ದಳು. ಈ ವೇಳೆ ಭಾರೀ ಗಾತ್ರದ ಮರ ಈಕೆಯ ಕಣ್ಣಿಗೆ ಬಿದ್ದಿದೆ. ಇದೇ ಮರದ ಬಳಿ ನಗ್ನವಾಗಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಹಲವು ಫೋಟೋಗಳನ್ನು ತೆಗೆಸಿರುವ ಕೋಶ್ಯಾಕ್ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಮೂವರು ಯುವತಿಯರ ಭೀಕರ ಹತ್ಯೆ – ಈಕ್ವೆಡಾರ್ ಬೀಚ್‌ನಲ್ಲಿ ನಡೆದಿದ್ದೇನು?
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ, ಬಾಲಿಯ ಹಿಂದೂ ಸಮುದಾಯದ ಜನ ಮಹಿಳೆ ವಿರುದ್ಧ ತಿರುಗಿಬಿದ್ದಿದ್ದಾರೆ. ಬಾಲಿ ಉದ್ಯಮಿ ನಿಲುಡಿಜೆಲಾಂಟಿಕ್ ತಮ್ಮ ಖಾತೆಯಲ್ಲಿ ಮಹಿಳೆಯ ನಗ್ನ ಫೋಟೋವನ್ನ ಹಂಚಿಕೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿಯನ್ನು ಅಗೌರವಿಸುವ ಎಲ್ಲಾ ವಿದೇಶಿಗರೇ ಗಮನಿಸಿ, ?ಬಾಲಿ ನಮ್ಮ ನೆಲ, ನಿಮ್ಮದಲ್ಲ. ದೇವಸ್ಥಾನದ ಪವಿತ್ರ ಮರದ ಬುಡದಲ್ಲಿ ನಗ್ನ ಚಿತ್ರ ಪ್ರದರ್ಶಿಸಿ ನೀವು ಆರಾಮಾಗಿ ಇಲ್ಲಿ ಕಳೆಯಬಹುದು ಎಂದು ಭಾವಿಸಿದ್ದೀರಾ? ನಮ್ಮ ಸಂಸ್ಕೃತಿ, ಪದ್ಧತಿ, ದೇಶವನ್ನು ಗೌರವಿಸಲು ಸಾಧ್ಯವಿಲ್ಲ ಎಂದಾದರೆ ಹೊರನಡೆಯಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯ ಫೋಟೋಶೂಟ್ ಖಂಡಿಸಿ ಬಾಲಿಯ ಹಿಂದೂ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಕಾರ್ಯಪ್ರವೃತ್ತರಾದ ಇಂಡೋನೇಷ್ಯಾ ಅಧಿಕಾರಿಗಳು, ಲೂಯ್ಜಾ ಕೋಶ್ಯಾಕ್ ಬಂಧಿಸಿದ್ದಾರೆ. ಇಷ್ಟೇ ಅಲ್ಲ ಮತ್ತೆ ಇಂಡೋನೇಷ್ಯಾ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ – 6 ಮಂದಿ US ಶಿಕ್ಷಕಿಯರು ಅರೆಸ್ಟ್
ತಬನನ್ ದೇವಸ್ಥಾನದ ಆವರಣದಲ್ಲಿರುವ ಈ ಪವಿತ್ರ ಮರ ಸುಮಾರು 700 ವರ್ಷಗಳಷ್ಟು ಹಳೆಯ ಮರವಾಗಿದೆ. ಕಳೆದ ವರ್ಷ ರಷ್ಯಾದ ಯೋಗಪಟು ಇದೇ ಮರದ ಬುಡದಲ್ಲಿ ಫೋಟೋ ತೆಗೆದು ವಿವಾದ ಸೃಷ್ಟಿಸಿದ್ದರು.