Tag: Balehonnur

  • ಮಲೆನಾಡಿನಲ್ಲಿ ಮಳೆಗೆ 4ನೇ ಬಲಿ – ಮರ ಬಿದ್ದು ವ್ಯಕ್ತಿ ಸಾವು

    ಮಲೆನಾಡಿನಲ್ಲಿ ಮಳೆಗೆ 4ನೇ ಬಲಿ – ಮರ ಬಿದ್ದು ವ್ಯಕ್ತಿ ಸಾವು

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾವಿನ ಸಂಖ್ಯೆ 4ಕ್ಕೇರಿದೆ. ಬೈಕ್‌ನಲ್ಲಿ ಹೋಗುತ್ತಿದ್ದಾಗ ಮರಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ (Chikkamagaluru) ಎನ್.ಆರ್.ಪುರ (NR Pura) ತಾಲೂಕಿನ ಎಲೆಕಲ್ ಘಾಟಿ ಬಳಿ ನಡೆದಿದೆ.

    ಮೃತ ವ್ಯಕ್ತಿಯನ್ನು ಬಾಳೆಹೊನ್ನೂರು (Balehonnur) ಸಮೀಪದ ಬಿಳುಕೊಪ್ಪ (Bilukoppa) ಮೂಲದ ಅನಿಲ್ ಪಾಯ್ಸ್ (55) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ಟೀಸರ್ ಬಿಡುಗಡೆ

    ಮೃತ ಅನಿಲ್ ಬೈಕ್‌ನಲ್ಲಿ ಬಾಳೆಹೊನ್ನೂರಿಗೆ ಹೋಗುತ್ತಿದ್ದರು. ಈ ವೇಳೆ ಎಲೆಕಲ್ ಘಾಟಿ ಬಳಿ ಹೋಗುವಾಗ ಭಾರೀ ಗಾಳಿ-ಮಳೆಗೆ ಮರ ಬಿದ್ದಿದ್ದು, ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್‌ಐ ರವೀಶ್ ಭೇಟಿ ನೀಡಿ, ಅಗ್ನಿಶಾಮಕ ವಾಹನದಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ತಲೆಗೆ ಭಾರೀ ಪೆಟ್ಟು ಬಿದ್ದ ಪರಿಣಾಮ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ ಸಿಡಿಲು ಬಡಿದು ಇಬ್ಬರು ಹಾಗೂ ಮರಬಿದ್ದು ಓರ್ವ ಸಾವನ್ನಪ್ಪಿದ್ದರು.ಇದನ್ನೂ ಓದಿ: ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳಿಸೋ ಮುನ್ನ ಎಚ್ಚರ!

  • ಭದ್ರಾ ನದಿ ಅಬ್ಬರಕ್ಕೆ ಬಾಳೆಹೊನ್ನೂರು ಪಟ್ಟಣ ಜಲಾವೃತ

    ಭದ್ರಾ ನದಿ ಅಬ್ಬರಕ್ಕೆ ಬಾಳೆಹೊನ್ನೂರು ಪಟ್ಟಣ ಜಲಾವೃತ

    ಚಿಕ್ಕಮಗಳೂರು: ಭದ್ರಾ ನದಿ (Bhadra River) ಅಬ್ಬರಕ್ಕೆ ಬಾಳೆಹೊನ್ನೂರು (Balehonnur) ಪಟ್ಟಣ ಜಲಾವೃತವಾಗಿದೆ. ಭಾಗಶಃ ಹಸಿರು, ಮಣ್ಣು ಮಿಶ್ರಿತದ ಮಳೆ ನೀರಿನಲ್ಲಿ ಬಾಳೆಹೊನ್ನೂರು ಮುಳುಗಿದೆ.

    ಸಮೃದ್ಧ ಮಳೆಯಿಂದ ಪರಿಸರ ಹಚ್ಚಹಸಿರಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಭದ್ರಾ ನದಿ (Bhadra river) ಉಕ್ಕಿ ಹರಿದಿದ್ದು ಪಟ್ಟಣದ ತಗ್ಗು ಪ್ರದೇಶಗಳು ಭದ್ರಾ ನದಿ ದಂಡೆಯಲ್ಲಿರುವ ತೋಟಗಳು ಸಂಪೂರ್ಣ ಮುಳುಗಿದೆ. ಇದನ್ನೂ ಓದಿ: ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹತ್ಯೆ – ಪ್ರತೀಕಾರ ತೀರಿಸಿಕೊಂಡ ಇಸ್ರೇಲ್‌

     

    ಚಿಕ್ಕಮಗಳೂರು ಜಿಲ್ಲೆಗೆ ಇಂದು ಸಹ ರೆಡ್‌ ಅಲರ್ಟ್‌ ಜಾರಿಯಾಗಿದೆ. ರಾಜ್ಯದ ನಾಲ್ಕು ಜಿಲ್ಲೆಗೆ ರೆಡ್‌ ಅಲರ್ಟ್‌ (Red Alert) ಜಾರಿಯಾಗಿದ್ದರೆ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಜಾರಿಯಾಗಿದೆ.  ಇದನ್ನೂ ಓದಿ: Wayanad Landslide : ಅರ್ಧ ಸೆಕೆಂಡ್‌ನಲ್ಲಿ ನೂರು ಜನ ಸಮಾಧಿ!

    ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ರೆಡ್‌ ಅಲರ್ಟ್‌ ಜಾರಿಯಾಗಿದ್ದು, ಭಾರೀ ಮಳೆ (Heavy Rain) ಬೀಳಲಿದೆ. ಉತ್ತರ ಕನ್ನಡ,ಉಡುಪಿ, ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಆರೆಂಜ್‌ ಅಲರ್ಟ್‌ ಜಾರಿ ಮಾಡಿದೆ. ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್‌ ಜಾರಿಯಾಗಿದೆ.

  • ಚಲಿಸುವಾಗಲೇ ಕಳಚಿತು ಬೆಂಗಳೂರು ಟು ಶೃಂಗೇರಿ ಬಸ್ಸಿನ ಚಕ್ರ

    ಚಲಿಸುವಾಗಲೇ ಕಳಚಿತು ಬೆಂಗಳೂರು ಟು ಶೃಂಗೇರಿ ಬಸ್ಸಿನ ಚಕ್ರ

    ಚಿಕ್ಕಮಗಳೂರು: ಮಳೆಯಲ್ಲಿ (Rain) ಸಂಚರಿಸುತ್ತಿದ್ದಾಗಲೇ ಬಸ್ಸಿನ ಚಕ್ರ ಕಳಚಿ ಬಿದ್ದ ಘಟನೆ ಎನ್.ಆರ್.ಪುರ (NR Pura) ತಾಲೂಕಿನ ಬಾಳೆಹೊನ್ನೂರಿನ (Balehonnur) ರೋಟರಿ ಸರ್ಕಲ್‌ನಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಖಾಸಗಿ ಬಸ್ಸು ಬೆಂಗಳೂರಿನಿಂದ ಹೊರಟು ಶೃಂಗೇರಿಗೆ ಬರುತ್ತಿತ್ತು. ಬೆಳಗ್ಗೆ 5:18 ರ ವೇಳೆಗೆ ರೋಟರಿ ಸರ್ಕಲ್‌ನಲ್ಲಿ ಬಸ್ಸು ಸಂಚರಿಸುತ್ತಿದ್ದಾಗ ಹಿಂಬದಿಯ ಎರಡೂ ಚಕ್ರ ಕಳಚಿದೆ. ಇದನ್ನೂ ಓದಿ: ಶಿರೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಭೂ ಸಮಾಧಿ – ಅಂತ್ಯಸಂಸ್ಕಾರ ಮಾಡಲೂ ಜನರಿಲ್ಲ

    ಏಕಕಾಲಕ್ಕೆ ಬಸ್ಸಿನ ಎರಡು ಚಕ್ರಗಳು ಕಳಚಿ ಬೀಳುವ ದೃಶ್ಯ  ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಕ್ರ ಕಳಚುವ ಸಮಯದಲ್ಲಿ ಮಳೆ ಬರುತ್ತಿತ್ತು ಮತ್ತು ಬಸ್ಸು ನಿಧಾನವಾಗಿ ಸಂಚರಿಸುತ್ತಿತ್ತು.

    ಒಂದು ವೇಳೆ ಘಾಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರೆ ಮಹಾ ದುರಂತವೇ ನಡೆಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.

     

  • ವಿಶೇಷ ಬೇಡಿಕೆ ಇಟ್ಟು ಅಯೋಧ್ಯೆ ರಾಮನಿಗೆ ಹಿಂಗಾರ ಸಮರ್ಪಣೆಗೆ ಮುಂದಾದ ಮಲೆನಾಡಿಗರು

    ವಿಶೇಷ ಬೇಡಿಕೆ ಇಟ್ಟು ಅಯೋಧ್ಯೆ ರಾಮನಿಗೆ ಹಿಂಗಾರ ಸಮರ್ಪಣೆಗೆ ಮುಂದಾದ ಮಲೆನಾಡಿಗರು

    ಚಿಕ್ಕಮಗಳೂರು: ಅಯೋಧ್ಯೆಯ (Ayodhya) ಬಾಲಕರಾಮನಿಗೆ ಮಲೆನಾಡಿನ ರೈತರು ವಿಶೇಷ ಬೇಡಿಕೆ ಪತ್ರದೊಂದಿಗೆ ಅಡಿಕೆ ಹಿಂಗಾರ (Betel Nut Flower) ಸಮರ್ಪಣೆಗೆ ಮುಂದಾಗಿದ್ದಾರೆ.

    ಮಲೆನಾಡಿನಲ್ಲಿ ಅಡಿಕೆಗೆ ಹಳದಿ ಎಲೆ ರೋಗದ ಸಮಸ್ಯೆ ಇದೆ. ಕಸ್ತೂರಿ ರಂಗನ್ ವರದಿಯ ಭೀತಿ, ಬಫರ್ ಜೋನ್ ಹಾಗೂ ಮೀಸಲು ಅರಣ್ಯದ ಹೆಸರಲ್ಲಿ ಆಳುವ ವರ್ಗದ ಕಾನೂನಿನ ಕುಣಿಕೆಗೆ ಬೆಲೆ ತೆರುವಂತಾಗಿದೆ. ಕೃಷಿಯನ್ನೇ ನಂಬಿ ಜೀವನ ನಡೆಸುವವರ ಜೀವನ ಉಳಿಯಲಿ ಎಂಬ ಪ್ರಾರ್ಥನೆಯ ಪತ್ರದೊಂದಿಗೆ ಮಲೆನಾಡಿನ ಅಡಿಕೆ ಹಿಂಗಾರ ಸರ್ಮಪಿಸಲು ಮಲೆನಾಡಿನ ಶ್ರೀರಾಮನ ಭಕ್ತರು ಮುಂದಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಜನಸಾಗರ- ರಾಮಲಲ್ಲಾನ ದರ್ಶನಕ್ಕೆ ಓಡೋಡಿ ಬರುತ್ತಿರೋ ಭಕ್ತರು

    ಬಾಳೆಹೊನ್ನೂರಿನ (Balehonnur) ಖಾಂಡ್ಯ ಮಾಕರ್ಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಅಯೋಧ್ಯೆಗೆ ಶ್ರೀರಾಮನ ಭಕ್ತರು ತೆರಳಲು ತಯಾರಿ ನಡೆಸಿದ್ದಾರೆ. ಸೋಮವಾರ ಅಥವಾ ಮಂಗಳವಾರ ರಾಮಲಲ್ಲನಿಗೆ ಅಡಿಕೆ ಹಿಂಗಾರ ಸಮರ್ಪಣೆಯಾಗಲಿದೆ. ಇದನ್ನೂ ಓದಿ: ಸಿಎಂ ಆಗಿದ್ದೀರಿ, ಪಿಎಂ ಕೂಡ ಆಗಿದ್ದೀರಿ.. ಈಗ ಆರಾಮಾಗಿರಿ ಅಂತ ಹಿರಿಯ ನಾಯಕರು ಹೇಳಿದ್ದರು: ಮೋದಿ

  • ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ: ರಂಭಾಪುರಿ ಶ್ರೀ

    ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ: ರಂಭಾಪುರಿ ಶ್ರೀ

    ಚಿಕ್ಕಮಗಳೂರು: ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ (Balehonnur) ರಂಭಾಪುರಿ (Rambhapuri) ಮಠದ ಜಗದ್ಗುರು ವೀರಸೋಮೇಶ್ವರ ಮಹಾಸ್ವಾಮಿಜಿಗಳು (Veera Someshwara Jagadguru) ಸಂದೇಶ ನೀಡಿದ್ದಾರೆ.

    ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 209ರಲ್ಲಿ ಮತದಾನ (Vote) ಮಾಡಿದ ಶ್ರೀಗಳು ನಾಡಿನ ಜನತೆಗೆ ಸಂದೇಶ ಸಾರಿದ್ದಾರೆ. ಬಾಳೆಹೊನ್ನೂರಿನ ಮತಗಟ್ಟೆಯಲ್ಲಿ ಶ್ರೀಗಳ ಮತದಾನ ಬಳಿಕ ಉಳಿದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ. ಅದರಂತೆ ಜನರು ಮತದಾನ ಮಾಡಲಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ಏಳು ಗಂಟೆಗೆ ಮೊದಲ ಮತದಾನ ಮಾಡಿದ ರಂಭಾಪುರಿ ಶ್ರೀಗಳು ಬಳಿಕ ನಾಡಿನ ಸಮಸ್ತ ಜನತೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸುಧಾಮೂರ್ತಿ ದಂಪತಿ

  • 100 ಟನ್, 20 ಅಡಿ ಉದ್ದದ ರೇಣುಕಾಚಾರ್ಯರ ಪ್ರತಿಮೆಯ ಶಿಲೆ 100 ಚಕ್ರದ ಲಾರಿಯಲ್ಲಿ ರಂಭಾಪುರಿ ಮಠಕ್ಕೆ ಆಗಮನ

    100 ಟನ್, 20 ಅಡಿ ಉದ್ದದ ರೇಣುಕಾಚಾರ್ಯರ ಪ್ರತಿಮೆಯ ಶಿಲೆ 100 ಚಕ್ರದ ಲಾರಿಯಲ್ಲಿ ರಂಭಾಪುರಿ ಮಠಕ್ಕೆ ಆಗಮನ

    ಚಿಕ್ಕಮಗಳೂರು: 100 ಟನ್ ತೂಕವುಳ್ಳ 20 ಅಡಿ ಉದ್ದವಿರುವ ಬೃಹತ್ ಶಿಲೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ರಂಭಾಪುರಿ ಮಠದ ಆವರಣ ತಲುಪಿದೆ.

    ಪಂಚಪೀಠಗಳಲ್ಲೇ ಮೊದಲ ಪೀಠವಾಗಿರುವ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಆಂಧ್ರಪ್ರದೇಶದ ಮಡಕಶಿರಾ ಕಲ್ಲು ಕ್ವಾರಿಯಿಂದ ಬಹೃತ್ ಶಿಲೆ ಮಠದ ಆವರಣಕ್ಕೆ ಆಗಮಿಸಿದೆ. ಸೆಪ್ಟೆಂಬರ್ 10 ರಂದು ಆಂಧ್ರಪ್ರದೇಶದ ಮಡಕಶಿರಾದಿಂದ 100 ಚಕ್ರದ ಲಾರಿಯಲ್ಲಿ ಹೊರಟ ಈ ಶಿಲೆ ಐದು ದಿನಗಳ ಬಳಿಕ ಮಠಕ್ಕೆ ಆಗಮಿಸಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಮೆಗಾ ಶೈಕ್ಷಣಿಕ ಉತ್ಸವ ವಿದ್ಯಾಪೀಠಕ್ಕೆ ನಾಳೆ ಚಾಲನೆ

    ಒಟ್ಟು 350 ಕಿ.ಮೀ. ದೂರದ ಆಂಧ್ರಪ್ರದೇಶದ ಮಡಕಶಿರಾದಿಂದ ಬಾಳೆಹೊನ್ನೂರಿಗೆ ಕಲ್ಲನ್ನು ತರಲಾಗಿದೆ. ಇದರ ತೂಕ ಸುಮಾರು 100 ಟನ್ ಇದ್ದು, 20 ಅಡಿ ಉದ್ದವಿದೆ. ಸಾಗಾಣೆ ಕಾರ್ಯದಲ್ಲಿ 12 ಕಾರ್ಮಿಕರು ತೊಡಗಿದ್ದಾರೆ ಎಂದು ಕಲ್ಲು ಸಾಗಾಟದ ಜವಾಬ್ದಾರಿ ಹೊತ್ತಿದ್ದ ಬೆಂಗಳೂರು ಮೂಲದ ಶ್ರೀಧರಬಾಬು ತಿಳಿಸಿದ್ದಾರೆ.

    ಆಂಧ್ರದ ಮಡಕಶಿರಾದಿಂದ ಹೊರಟ ಕಲ್ಲು ಐದು ದಿನಗಳ ನಿರಂತರ ಪ್ರಯಾಣದ ವೇಳೆ ಪಾವಗಡ, ಮಧುಗಿರಿ, ತುಮಕೂರು, ತಿಪಟೂರು, ಶಿವಮೊಗ್ಗ, ಎನ್.ಆರ್.ಪುರ ಮಾರ್ಗವಾಗಿ ಬಂದು ಬಾಳೆಹೊನ್ನೂರು ತಲುಪಿದೆ. ಶಿಲಾಮೂರ್ತಿ ನಿರ್ಮಾಣಕ್ಕೆ ಬೇಕಾಗಿರುವ ಇನ್ನೂ ಎರಡೂ ಶಿಲೆಗಳು ಶೀಘ್ರವೇ ಮಠಕ್ಕೆ ಬರಲಿವೆ. ಯಂತ್ರಗಳ ಬಳಕೆಯಿಂದ ಕಲ್ಲನ್ನು ಅನ್ ಲೋಡ್ ಮಾಡಲು ಮುಂದಾಗುವುದರಿಂದ ಕಲ್ಲಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ 16 ಕಾರ್ಮಿಕರು ಬಳಸಿ ಲಾರಿಯಿಂದ ಅನ್ ಲೋಡ್ ಮಾಡಲಾಗುವುದು ಎಂದು ಶ್ರೀಧರಬಾಬು ಮಾಹಿತಿ ನೀಡಿದ್ದಾರೆ.

    ಬರೋಬ್ಬರಿ 100 ಚಕ್ರದ ಲಾರಿಯಲ್ಲಿ 100 ಟನ್ ತೂಕದ 20 ಅಡಿ ಉದ್ದದ ಈ ಶಿಲೆ ಐದು ದಿನಗಳ ನಿರಂತರ ಪ್ರಯಾಣದಿಂದ ಬಂದಿದ್ದು, ಈ ಶಿಲೆಯನ್ನು ನೋಡಲು ಜನ ಕೂಡ ದೇವಾಲದಯದ ಆವರಣದಲ್ಲಿ ಜಮಾಯಿಸಿದರು. ರಂಭಾಪುರಿ ಮಠದ ಆವರಣದಲ್ಲಿ 8 ಕೋಟಿಗೂ ಅಧಿಕ ವೆಚ್ಚದಲ್ಲಿ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ನಿರ್ಮಾಣಗೊಳ್ಳಲಿದೆ.

  • ಬೀದಿ ನಾಟಕದ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸ್

    ಬೀದಿ ನಾಟಕದ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸ್

    ಚಿಕ್ಕಮಗಳೂರು: ಕೊರೊನಾ ಆತಂಕದಿಂದಾಗಿ ಮನೆಯಲ್ಲೇ ಇರಿ ಎಂದು ಪೊಲೀಸರು ಲಾಠಿ ಹಿಡಿದಾಯ್ತು, ಒದೆ ಕೊಟ್ಟಾಯ್ತು, ಕೇಸು ಹಾಕಾಯ್ತು, ಕೈ ಮುಗಿದಾಯ್ತು. ಜನ ಯಾವುದಕ್ಕೂ ಜಪ್ಪಯ್ಯ ಅನ್ನಲಿಲ್ಲ. ಹಾಗಾಗಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಪೊಲೀಸರು ವಿಭಿನ್ನವಾಗಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಜಾಗತಿಕ ಶಾಪವಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿ ವಿರುದ್ಧ ಜನರಿಗೆ ಎಲ್ಲಾ ರೀತಿಯ ಮನವಿ ಮಾಡಿಕೊಂಡಿದ್ದ ಪೊಲೀಸರು ಇದೀಗ ವಿಭಿನ್ನ ಪ್ರಯತ್ನಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಾಳೆಹೊನ್ನೂರು ಪೊಲೀಸರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಮಹಾಮಾರಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರು. “ಮಾಡಲು ಕೊರೊನಾ ಸಂಹಾರ, ಪಾಲಿಸಿ ಸಾಮಾಜಿಕ ಅಂತರ” ಎಂಬ ಶೀರ್ಷಿಕೆಯಡಿ ಬೀದಿ ನಾಟಕ ಮಾಡಿ ಪೊಲೀಸರು ಜಾಗೃತಿ ಮೂಡಿಸಿದರು.

    ಬಾಳೆಹೊನ್ನೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾರ್ವಜನಿಕರು ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳು ಸೇರಿದಂತೆ ಕೊರೊನಾ ವೈರಸ್ ಉಂಟು ಮಾಡುತ್ತಿರುವ ಹಾನಿಯ ಕುರಿತು ಸಾರ್ವಜನಿಕರಿಗೆ ಎಳೆ ಎಳೆಯಾಗಿ ಬಿಡಿಸಿ ಮನಮುಟ್ಟುವಂತೆ ನಾಟಕ ಪ್ರದರ್ಶಿಸಿದರು. ವಿಶೇಷ ಅಂದ್ರೆ ಪೊಲೀಸ್ ಆಗಿ ಯಕ್ಷಗಾನ ಶೈಲಿಯಲ್ಲಿ ನಾಟಕ ಪ್ರದರ್ಶಿಸಿದ್ದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ವಿವಿಧ ಪ್ರಯತ್ನ ಮಾಡಿದ ಬಾಳೆಹೊನ್ನೂರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಬೀದಿ ನಾಟಕ ಪ್ರದರ್ಶಿಸಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಮುಂದಾಗ ಪೊಲೀಸರು ಖಾಕಿ ಸಮವಸ್ತ್ರದ ಮೇಲೆಯೇ ನಾಟಕದ ಉಡುಗೆ ತೊಟ್ಟು ರಸ್ತೆಗಳಲ್ಲಿ ನಾಟಕ ಮಾಡಿದ್ದು ವಿಶೇಷವಾಗಿತ್ತು. ಪೊಲೀಸರ ಈ ಬೀದಿ ನಾಟಕವನ್ನು ನಿಂತು ನೋಡಿದ ಜನ ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡೇ ಪೊಲೀಸರ ಜಾಗೃತಿಯ ನಾಟಕವನ್ನ ವೀಕ್ಷಿಸಿದರು.

  • ಶಾಸಕ ರಾಜೇಗೌಡ ಮಗಳ ಮದುವೆಯಲ್ಲಿ ಡಿಕೆಶಿ ಭಾಗಿ

    ಶಾಸಕ ರಾಜೇಗೌಡ ಮಗಳ ಮದುವೆಯಲ್ಲಿ ಡಿಕೆಶಿ ಭಾಗಿ

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದರು.

    ಈ ವೇಳೆ ರಂಭಾಪುರಿ ಶ್ರೀಗಳು ಡಿ.ಕೆ.ಶಿವಕುಮಾರ್ ಅವರಿಗೆ ರಂಭಾಪುರಿ ಮಠದ 119ನೇ ಜಗದ್ಗುರುಗಳಾದ ವೀರ ಗಂಗಾಧರ ಶ್ರೀಗಳ ಫೋಟೋವನ್ನು ಉಡುಗೊರೆಯಾಗಿ ನೀಡಿದರು. ಆಗ ಡಿ.ಕೆ.ಶಿವಕುಮಾರ್ ಜೊತೆಗಿದ್ದ ಚಿಕ್ಕಮಗಳೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮತ್ ಜೊತೆ ಮಾತನಾಡಿ, ರೀ, ಅಧ್ಯಕ್ಷರೇ, ಇವರೇ ನಮ್ಮ ಹೈಕಮಾಂಡ್, ಇವರ ಫೋಟೋವನ್ನು ನಮ್ಮ ಕೆಪಿಸಿಸಿ ಕಚೇರಿಯ ನನ್ನ ಕೊಠಡಿಯಲ್ಲಿ ಹಾಕಬೇಕು, ಅದು ನಿಮ್ಮ ಜವಾಬ್ದಾರಿ ಎಂದು ಫೋಟೋವನ್ನು ಮುಟ್ಟಿ ತೋರಿಸಿದರು.

    ಶ್ರೀಗಳ ಆಶೀರ್ವಾದದ ಬಳಿಕ ಬಾಳೆಹೊನ್ನೂರು ಸಮೀಪದ ಬಾಸಾಪುರ ತೋಟದಲ್ಲಿ ನಡೆಯುತ್ತಿದ್ದ ತಮ್ಮ ಪಕ್ಷದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮಗಳ ಮದುವೆಯಲ್ಲಿ ಭಾಗಿಯಾಗಿ, ನೂತನ ವಧುವರರಿಗೆ ಶುಭ ಕೋರಿದರು.

    ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೊರೊನಾದಿಂದ ರಾಜ್ಯಾದ್ಯಂತ ಆರ್ಥಿಕ ಸಂಕಷ್ಟ ಎದುರಾಗಿದೆ. ಹಾಗಾಗಿ, ಸರ್ಕಾರ ಎಲ್ಲ ಬ್ಯಾಂಕುಗಳ ಇ.ಎಮ್.ಐಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು. ಜನಸಾಮಾನ್ಯರಿಗೆ ಆರ್ಥಿಕವಾಗಿ ಉಸಿರಾಡಲು ಆಗುತ್ತಿಲ್ಲ. ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟದಲ್ಲಿದ್ದು, ಬ್ಯಾಂಕುಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಪವಿತ್ರ ಕೆಲಸವನ್ನು ರಾಜ್ಯ ಸರ್ಕಾರ ತುರ್ತಾಗಿ ಮಾಡಬೇಕು ಎಂದರು.

  • ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ ಸಂಸದ ತೇಜಸ್ವಿ ಸೂರ್ಯ

    ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ ಸಂಸದ ತೇಜಸ್ವಿ ಸೂರ್ಯ

    ಚಿಕ್ಕಮಗಳೂರು: ರಾಜಕೀಯ ಜಂಜಾಟವನ್ನೆಲ್ಲಾ ಬದಿಗೊತ್ತಿ ಸಂಸದ ತೇಜಸ್ವಿ ಸೂರ್ಯ ಹುಡುಗರ ಜೊತೆ ಭತ್ತದ ಕಣದಲ್ಲಿ ಕ್ರಿಕೆಟ್ ಆಡಿದ್ದಾರೆ.

    ಬೆಂಗಳೂರಿನಲ್ಲಿ ವಾಸವಿರುವ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಗಸೆ ಮೂಲದ ಮಾಲತೇಶ್ ಸಂಸದ ತೇಜಸ್ವಿ ಸೂರ್ಯ ಸ್ನೇಹಿತ. ಇತ್ತೀಚಿಗೆ ಅವರ ಮನೆಯ ಗೃಹ ಪ್ರವೇಶ ನಡೆದಿತ್ತು. ಆದರೆ ಗೃಹಪ್ರವೇಶಕ್ಕೆ ತೇಜಸ್ವಿ ಸೂರ್ಯ ಬಂದಿರಲಿಲ್ಲ. ಅದಕ್ಕಾಗಿ ಸಂಸದರು ತಮ್ಮ ಸುಮಾರು 12 ಜನ ಸ್ನೇಹಿತರೊಂದಿಗೆ ಬಾಳೆಹೊನ್ನೂರಿಗೆ ಬಂದಿದ್ದರು. ಇದೇ ವೇಳೆ, ಸ್ನೇಹಿತನ ಮನೆ ಮುಂಭಾಗ ಭತ್ತದ ಕಣದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದನ್ನ ಗಮನಿಸಿ ತೇಜಸ್ವಿ ಸೂರ್ಯ ಅವರು ತಮ್ಮ ಸ್ನೇಹಿತರನ್ನು ಕರೆದುಕೊಂಡು ಹೋಗಿ ಭತ್ತದ ಕಣದಲ್ಲೇ ಸುಮಾರು ಒಂದು ಗಂಟೆಗಳ ಕಾಲ ಕ್ರಿಕೆಟ್ ಆಡಿದ್ದಾರೆ.

    ಕ್ರಿಕೆಟ್ ಆಡಿದ ಬಳಿಕ ತನ್ನ ಸ್ನೇಹಿತರೊಂದಿಗೆ ಬಾಳೆಹೊನ್ನೂರಿನ ಭದ್ರಾ ನದಿ, ಕಾಫಿ ತೋಟ, ಹೊಲಗದ್ದೆಗಳನ್ನು ಸುತ್ತು ಹೊಡೆದು, ಮಲೆನಾಡಿನ ಸೌಂದರ್ಯವನ್ನ ಸವೆದಿದ್ದಾರೆ. ಸಂಸದರೊಂದಿಗೆ ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಪುಣ್ಯಪಾಲ್, ನಾಗರಾಜ್ ಭಟ್, ಶಶಾಂಕ್, ಮಂಜುನಾಥ್ ಕ್ರಿಕೆಟ್ ಆಡಿ ಸೆಲ್ಫಿ ಹೊಡೆದುಕೊಂಡು ಖುಷಿ ಪಟ್ಟಿದ್ದಾರೆ.

    ಕ್ರಿಕೆಟ್ ಆಡುವಾಗ ಸಂಸದ ತೇಜಸ್ವಿ ಸೂರ್ಯ ಅವರು ಎಲ್ಲರೊಂದಿಗೆ ತಾವೂ ಕೂಡ ಒಬ್ಬನೆಂಬಂತೆ ಮಿಂಗಲ್ ಆಗಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡಿ ಉತ್ತಮ ಕ್ರಿಕೆಟ್ ಆಟಗಾರ ಎಂಬುದನ್ನು ತೋರಿಸಿದ್ದಾರೆ. ಬಾಳೆಹೊನ್ನೂರು ಹುಡುಗರು ಕೂಡ ಸಂಸದರ ಜೊತೆ ಕ್ರಿಕೆಟ್ ಆಡಿ ಖುಷಿ ಪಟ್ಟಿದ್ದಾರೆ.

  • ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

    ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

    ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದು, ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಾಳೆಹೊನ್ನೂರು ಸಮೀಪದ ಗಂಡಿಗೇಶ್ವರ ನಿವಾಸಿ ಮಿಥುನ್ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಹಲ್ಗೋಡಿನಲ್ಲಿ ಬುಧವಾರ ಘಟನೆ ನಡೆದಿದೆ. ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

    ಮಿಥುನ್ ತನ್ನನ್ನು ಪ್ರೀತಿಸುವಂತೆ ಖಾಂಡ್ಯದ ಯುವತಿಯನ್ನು ಪೀಡಿಸುತ್ತಿದ್ದ. ಆದರೆ ಯುವಕನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಸಿಕ್ಕಾಗೆಲ್ಲಾ ಪ್ರೀತಿಸುವಂತೆ ಮಿಥುನ್ ಯುವತಿಗೆ ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೆ ಬೆದರಿಕೆ ಕೂಡ ಹಾಕಿದ್ದ. ಮಿಥುನ್ ವರ್ತನೆಯಿಂದ ಬೇಸತ್ತ ಯುವತಿ ಆತನ ಪ್ರೀತಿಯನ್ನು ನಿರಾಕರಿಸುತ್ತಾ ಬಂದಿದ್ದಳು. ಇದರಿಂದ ಮನನೊಂದು ಯುವಕ ಮಹಲ್ಗೋಡು ಬಳಿ ಯುವತಿಯ ಹೊಟ್ಟೆ, ಬೆನ್ನು ಹಾಗೂ ಕುತ್ತಿಗೆಗೆ ಚಾಕು ಇರಿದು ನಾಪತ್ತೆಯಾಗಿದ್ದಾನೆ.

    ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಯುವತಿಯನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಹಾಸನಕ್ಕೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

    ತಲೆಮರೆಸಿಕೊಂಡಿರುವ ಪಾಗಲ್ ಪ್ರೇಮಿ ಮಿಥುನ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.