Tag: Bald Head

  • ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಸಿಡ್ನಿ: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಆಶಸ್ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್ ಸ್ಪಿನ್ನರ್ ಜ್ಯಾಕ್ ಲೀಜ್ ಬೊಕ್ಕ ತಲೆಯ ಪ್ರೇಕ್ಷಕನೊಬ್ಬನಿಗೆ ಆಟೋಗ್ರಾಫ್ ಹಾಕಿದ ವೀಡಿಯೋ ಒಂದು ವೈರಲ್ ಆಗುತ್ತಿದೆ.

    ಈಗಾಗಲೇ ಆಶಸ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್‌ನಲ್ಲೂ ತನ್ನ ಹಿಡಿತವನ್ನು ಸಾಧಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗೆ ಚಿಯರ್ ಅಪ್ ಮಾಡಿಕೊಂಡಿದ್ದು ಅಭಿಮಾನಿಯೋರ್ವ ತನ್ನ ಬೊಕ್ಕ ತಲೆಗೆ ಆಟೋಗ್ರಾಫ್ ನೀಡುವಂತೆ ಕೇಳಿಕೊಂಡಿದ್ದಾನೆ. ಲೀಚ್ ಕೂಡ ಆತನ ಆಸೆಯಂತೆ ಆತನ ತಲೆಗೆ ಸೈನ್ ಮಾಡಿ ಮನಗೆದ್ದಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟದಲ್ಲಿ ಟೆಸ್ಟ್‌ – ಭಾರತದ ಗೆಲುವಿಗೆ ಬೇಕಿದೆ 8 ವಿಕೆಟ್‌

    ಬೌಂಡರಿ ಲೈನ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಗಳು ಜ್ಯಾಕ್ ಲೀಚ್ ಹೆಸರನ್ನು ಕೂಗಿ ಕರೆಯುತ್ತಿದ್ದರು. ಈ ವೇಳೆ 46.5 ನೇ ಓವರ್ ಆಗುತ್ತಿದ್ದಂತೆ ಅಭಿಮಾನಿ ತನ್ನ ಬೋಳು ತಲೆಗೆ ಆಟೋಗ್ರಾಫ್ ಹಾಕುವಂತೆ ಲೀಚ್ ಜೊತೆ ಮನವಿ ಮಾಡಿದ್ದಾನೆ. ಲೀಚ್ ಒಪ್ಪಿಗೆ ಸೂಚಿಸಿ ಸೈನ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಚಪ್ಪಳೆ ತಟ್ಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪಂತ್ ನೂತನ ಮೈಲಿಗಲ್ಲು – ಧೋನಿ ಜೊತೆ Elite ಪಟ್ಟಿಗೆ ಸೇರ್ಪಡೆ

  • ಬೋಳು ತಲೆ ಇರೋದು ಮುಚ್ಚಿಟ್ಟು ಮದ್ವೆಯಾದ ಪತಿಯ ವಿರುದ್ಧ ದೂರು

    ಬೋಳು ತಲೆ ಇರೋದು ಮುಚ್ಚಿಟ್ಟು ಮದ್ವೆಯಾದ ಪತಿಯ ವಿರುದ್ಧ ದೂರು

    – ಮದ್ವೆಯಾದ ತಿಂಗಳಿಗೆ ಬಯಲಾಯ್ತು ಪತಿಯ ರಹಸ್ಯ

    ಮುಂಬೈ: ತಾನು ಮದುವೆಯಾದ ಯುವಕನಿಗೆ ಬೋಳು ತಲೆ ಇದೆ ಎಂದು ತಿಳಿದುಕೊಂಡ ಯುವತಿ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

    27 ವರ್ಷದ ಯುವತಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಕಳೆದ ಒಂದು ತಿಂಗಳ ಹಿಂದೆ ಕುಟುಂಬಸ್ಥರು ನಿರ್ಧರಿಸಿದ್ದ ಮುಂಬೈನ ಮೀರಾ ರಸ್ತೆಯ ನಿವಾಸಿಯಾಗಿದ್ದ ಯುವಕನೊಂದಿಗೆ ಮದುವೆ ನಡೆದಿತ್ತು. ಆದರೆ ಮದುವೆಯಾಗುವ ಯುವಕ ತನಗೆ ಬೋಳು ತಲೆ ಇದೆ ಎಂಬುದನ್ನು ಮರೆಮಾಚಿ ಮದುವೆಯಾಗಿದ್ದ. ಇದನ್ನು ತಿಳಿದ ಯುವತಿ ಪತಿ ಹಾಗೂ ಅವರ ಕುಟುಂಬಸ್ಥರನ್ನು ಪ್ರಶ್ನೆ ಮಾಡಿದ್ದಳು, ಇದಕ್ಕೆ ಉತ್ತರಿಸಿದ್ದ ಅವರು ‘ಇಂದಿನ ಕಾಲದಲ್ಲಿ ಇದು ಸಾಮಾನ್ಯ ಸಂಗತಿ’ ಎಂದು ಹೇಳಿ ಸುಮ್ಮನಾಗಿದ್ದರು.

    ತನ್ನ ಭವಿಷ್ಯದ ಕನಸಗಳೊಂದಿಗೆ ಮದುವೆಯಾಗಿದ್ದ ಯುವತಿಗೆ ಇದು ಶಾಕ್ ನೀಡಿತ್ತು. ತನಗೆ ಸುಳ್ಳು ಹೇಳಿ ಮದುವೆಯಾದ ಪತಿಯ ವಿರುದ್ಧ ಸದ್ಯ ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಯಾ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    29 ವರ್ಷದ ಯುವಕ ಮುಂಬೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಿಗ್ ಧರಿಸಿ ಯುವತಿಗೆ ವಂಚಿಸಿ ಮದುವೆಯಾಗಿದ್ದ. ಸದ್ಯ ಆತ ಥಾಣೆ ಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾನೆ. ಇತ್ತ ಯುವತಿ ನೀಡಿರುವ ದೂರಿನಲ್ಲಿ, ತಾನು ಪತಿ ವಿಗ್ ಧರಿಸಿರುವುದನ್ನು ತಿಳಿದು ಅಘಾತಕ್ಕೊಳಗಾಗಿದ್ದೆ. ಇದನ್ನು ಮದುವೆ ಮುನ್ನ ತಿಳಿಸಿರಲಿಲ್ಲ. ಒಂದೊಮ್ಮೆ ಆತ ತನಗೆ ಬೋಳು ತಲೆ ಇರೋ ವಿಚಾರ ತಿಳಿಸಿದ್ದರೆ ನಾನು ಮದುವೆಯಾಗುತ್ತಿರಲಿಲ್ಲ. ಮದುವೆಯ ಪ್ರಸ್ತಾಪವನ್ನೇ ತಿರಸ್ಕರಿಸುತ್ತಿದ್ದೆ ಎಂದು ವಿವರಿಸಿದ್ದಾಳೆ.