Tag: balamuri

  • ಪ್ರವಾಸಿಗರ ಹಾಟ್‌ಸ್ಪಾಟ್ ಬಲಮುರಿ ಡೆತ್ ಸ್ಪಾಟ್ ಆಯ್ತಾ? – ಒಂದೂವರೆ ವರ್ಷದಲ್ಲಿ 20ಕ್ಕೂ ಅಧಿಕ ಮಂದಿ ಸಾವು

    ಪ್ರವಾಸಿಗರ ಹಾಟ್‌ಸ್ಪಾಟ್ ಬಲಮುರಿ ಡೆತ್ ಸ್ಪಾಟ್ ಆಯ್ತಾ? – ಒಂದೂವರೆ ವರ್ಷದಲ್ಲಿ 20ಕ್ಕೂ ಅಧಿಕ ಮಂದಿ ಸಾವು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು (Tourists) ಹರಿದು ಬರುತ್ತಾರೆ. ಹೀಗಾಗಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿರುವ ಬಲಮುರಿ (Balamuri) ಇದೀಗ ಸಾವಿನ ಕೂಪವಾಗಿ ಬದಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ಬಲಮುರಿಯಲ್ಲಿ ಕಾವೇರಿ ನದಿ (Cauvery River) ಅಪಾಯ ಮಟ್ಟದಲ್ಲಿ ಹರಿಯುವ ವೇಳೆ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಏರುತ್ತದೆ. ಇದೇ ಕಾವೇರಿ ಶಾಂತವಾಗಿ ಹರಿವಾಗ ಪ್ರವಾಸಿಗರಿಗೆ ಇಲ್ಲಿ ಏಂಜಾಯ್ ಮಾಡಲು ಅನುಮತಿ ನೀಡುತ್ತೆ. ಸದ್ಯ ಕಾವೇರಿ ಕಾವೇರಿ ನದಿ ಶಾಂತವಾಗಿ ಹರಿಯುತ್ತಿರುವ ಹಿನ್ನೆಲೆ ಪ್ರವಾಸಿಗರಿ ಅನುಮತಿ ನೀಡಿದೆ. ಆದರೆ ಪ್ರವಾಸಿಗರು ಏಂಜಾಯ್ ಮಾಡುವ ವೇಳೆ ಮೈಮರೆತ ವೇಳೆ ಸಾವು ನೋವುಗಳು ಸಹ ಇದೀಗ ಹೆಚ್ಚಾಗುತ್ತಿವೆ. ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುಳಿಯದ ಮಳೆ – ಕೆಆರ್‌ಎಸ್ ನೀರಿನ ಮಟ್ಟ 89 ಅಡಿಗೆ ಕುಸಿತ

    ಸದ್ಯ ಈ ಬಲಮುರಿಯಲ್ಲಿ 5 ತಿಂಗಳಿನಲ್ಲಿ ಈಜಲು ಹೋದ ಪ್ರವಾಸಿಗರ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಒಂದೂವರೆ ವರ್ಷದ ದತ್ತಾಂಶ ನೋಡುವುದಾದರೆ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಾದರೂ ಸಹ ಜಿಲ್ಲಾಡಳಿತ ಪೊಲೀಸ್ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇದನ್ನೂ ಓದಿ: ಮಂಡ್ಯ | ಬೈಕ್ ಅಡ್ಡಗಟ್ಟಿದ ಪೊಲೀಸ್ರು – ಆಯತಪ್ಪಿ ಬಿದ್ದು ತಾಯಿ ಮಡಿಲಲ್ಲೇ ಪ್ರಾಣಬಿಟ್ಟ ಮಗು

  • ಪೊಲೀಸರ ಕಣ್ತಪ್ಪಿಸಿ ಈಜಲು ನೀರಿಗಿಳಿದ ಮಂಗ್ಳೂರು ಕಾಲೇಜು ವಿದ್ಯಾರ್ಥಿ ಸಾವು

    ಪೊಲೀಸರ ಕಣ್ತಪ್ಪಿಸಿ ಈಜಲು ನೀರಿಗಿಳಿದ ಮಂಗ್ಳೂರು ಕಾಲೇಜು ವಿದ್ಯಾರ್ಥಿ ಸಾವು

    ಮಂಡ್ಯ: ನಿಷೇಧದ ನಡುವೆಯೂ ಪೊಲೀಸರ ಕಣ್ಣುತಪ್ಪಿಸಿ ಈಜಲು ನೀರಿಗಿಳಿದ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದೆ.

    19 ವರ್ಷದ ಮಹಮದ್ ಸಾಹಿಲ್ ಮೃತ ದುರ್ದೈವಿ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನೀರಿಗಿಳಿದು ಸಾಯುವವರ ಸಂಖ್ಯೆ ಹೆಚ್ಚಾಗಿದ್ದು, ಅದನ್ನು ತಪ್ಪಿಸಲು ಬಲಮುರಿಗೆ ಇಂದು ಮತ್ತು ನಾಳೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.

    ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿರೋ ಕೇರಳ ಮೂಲದ ಮಹಮದ್ ಸುಹೇಲ್, ತನ್ನ 15 ಜನ ಸ್ನೇಹಿತರೊಂದಿಗೆ ಇಂದು ಬಲಮುರಿಗೆ ಬಂದಿದ್ರು. ಬಲಮುರಿಗೆ ಪ್ರವೇಶ ನಿಷೇಧವಿದ್ರೂ, ಪೊಲೀಸರ ಕಣ್ಣುತಪ್ಪಿಸಿ ನೀರಿಗಿಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ.

    ಸದ್ಯ ಪೊಲೀಸರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ನಿಷೇಧಿತ ಪ್ರದೇಶಕ್ಕೆ ಆಗಮಿಸಿ ಪ್ರಾಣ ಕಳೆದುಕೊಳ್ಳದಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.

    ಘಟನೆ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.