Tag: Balakot

  • 7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತದ ವಾಯುಸೇನೆ ಪಾಕಿಸ್ತಾನದ ಉಗ್ರರ ತರಬೇತಿ ಶಿಬಿರದ ದಾಳಿ ನಡೆಸಿದೆ. ಇಂದು ಬೆಳಗಿನ ಜಾವ ಮೂರು ಶಿಬಿರಗಳ ಮೇಲೆ ದಾಳಿ ನಡೆಸಿದೆ. ಉರಿ ದಾಳಿ ನಡೆದ ಬಳಿಕ ಭಾರತ ಭೂಸೇನೆಯನ್ನು ನಡೆಸಿ ಸರ್ಜಿಕಲ್ ನಡೆಸಿದರೆ ಈ ಬಾರಿ ಭಾರತ ವಾಯುಸೇನೆಯನ್ನು ಬಳಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದೆ.

    1. ಗ್ವಾಲಿಯರ್ ನಿಂದ ಹೊರಟ 12 ಮಿರಾಜ್-2000 ಯುದ್ಧ ವಿಮಾನಗಳು (Mirage 2000) -ಈ ವಿಮಾನಗಳು ಹಲವು ರೀತಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದ್ದು, ಡಸಾಲ್ಟ್ ಏವಿಯೇಷನ್ ಈ ಜೆಟ್ ನ್ನು ನಿರ್ಮಾಣ ಮಾಡಿದ್ದು, 1980ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿದೆ. ಪಂಜಾಬ್ ನ ಭಟಿಂಡಾದಲ್ಲಿ ಮಿರಾಜ್ ಯುದ್ಧ ವಿಮಾನದ ಮೂಲಕ ಮೊದಲು ವಾಯು ಸೇನೆ ಟ್ರಯಲ್ ನೋಡಿತ್ತು. ಬಳಿಕ ಮಿರಾಜ್ ಯುದ್ಧ ವಿಮಾನಗಳು ಆಗ್ರಾದಲ್ಲಿ ಇಂಧನ ತುಂಬಿಸಿಕೊಂಡಿದ್ದವು. ಮಿರಾಜ್-2000 ವಿಮಾನವು ಗ್ವಾಲಿಯಾರ್ ನಿಂದ ಟೇಕಾಫ್ ಆಗಿತ್ತು. ಈ ಯುದ್ಧ ವಿಮಾನಗಳು 1000 ಕೆ.ಜಿ ತೂಕದ 10 ಲೇಸರ್ ಗೈಡೆಡ್ ಬಾಂಬ್‍ಗಳಿಂದ ತುಂಬಿದ್ದವು.

    2. ಅಮೆರಿಕ ನಿರ್ಮಿತ ಲೇಸರ್ ಗೈಡೆಡ್ ಬಾಂಬ್ ಜಿಬಿಯು-12 (GBU-12 Paveway Laser Guided Bomb): ನಿರ್ಧಿಷ್ಟ ಗುರಿಯನ್ನು ತಲುಪಲು ಭಾರತ ಈ ಬಾಂಬ್ ಬಳಕೆ ಮಾಡಿದೆ. ಇದನ್ನೂ ಓದಿ: ಪಾಕ್‍ನ 3 ಉಗ್ರರ ಕೇಂದ್ರಗಳು ಉಡೀಸ್- ಭಾರತದ ಬಾಂಬ್ ದಾಳಿಯ ಪ್ಲಾನ್ ಹೀಗಿತ್ತು

    3. ಮಾಟ್ರಾ ಮ್ಯಾಜಿಕ್ ಕ್ಲೋಸ್ ಕಂಬ್ಯಾಟ್ ಮಿಸೈಲ್ (Matra Magic Close Combat Missile)- ಪಾಕ್ ವಾಯುಸೇನೆಯಿಂದ ಪ್ರತಿದಾಳಿಯಾದ್ರೆ ಅಪ್ಪಳಿಸಲು ಸಿದ್ಧವಾಗಿದ್ದ ಫ್ರಾನ್ಸ್ ನಿರ್ಮಿತ ಕ್ಷಿಪಣಿ ಇದನ್ನೂ ಓದಿ: ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    4. ಲೈಟ್‍ನಿಂಗ್ ಪಾಡ್ (Litening POD)- ನಿರ್ದಿಷ್ಟ ಗುರಿಗಳನ್ನು ಟಾರ್ಗೆಟ್ ಮಾಡಲು ಬಳಸುವ ತಂತ್ರಜ್ಞಾನ ಇದನ್ನೂ ಓದಿ:ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ ಸೇನೆ!

    5. ನೇತ್ರಾ (Netra Airborne Early Warning Jet)- ಡಿಆರ್ ಡಿಒ ನಿರ್ಮಿಸಿದ ನೇತ್ರಾ ವಿಮಾನವನ್ನು ಈ ಬಾರಿಯ ಕಾರ್ಯಾಚರಣೆಗೆ ಬಳಕೆ ಮಾಡಿದೆ. ದಾಳಿ ನಡೆಸುವ ವಿಮಾನಕ್ಕೆ ಎಲ್ಲಿ ದಾಳಿ ನಡೆಸಬೇಕು ಎನ್ನುವ ನಿಖರ ಮಾಹಿತಿಯನ್ನು ಈ ವಿಮಾನಲ್ಲಿರುವ ವ್ಯವಸ್ಥೆ ನೀಡುತ್ತದೆ. ರೇಡಾರ್ ಗಳನ್ನು ಸ್ಕ್ಯಾನ್ ಮಾಡಿ ಪ್ರತಿ ದಾಳಿ ಹೇಗೆ ನಡೆಸಬೇಕು ಎನ್ನುವ ಮಾಹಿತಿಯನ್ನು ನೇತ್ರಾ ನೀಡುತ್ತದೆ. ಇದನ್ನೂ ಓದಿ: ಭಾರತದ ಬಾಂಬ್ ದಾಳಿಗೆ ಜೈಷ್ ಉಗ್ರರ ಅತಿ ದೊಡ್ಡ ಕ್ಯಾಂಪ್ ಧ್ವಂಸ

    6. ಇಲ್ಯೂಷನ್ 78ಎಂ (Ilyushin-78 M) – ರಷ್ಯಾ ನಿರ್ಮಿತ ಈ ವಿಮಾನ ಇಂಧನ ಟ್ಯಾಂಕ್ ಆಗಿ ಬಳಕೆಯಾಗುತ್ತದೆ. ಕಾರ್ಯಾಚರಣೆ ಗುಪ್ತವಾಗಿ ನಡೆಯಲು ಆಗ್ರಾ ವಾಯುನೆಯಲ್ಲಿ ಇಂಧನ ತುಂಬಿಸಿದ್ದ ಇಲ್ಯೂಷನ್ ಮಿರಾಜ್ ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಇಂಧನವನ್ನು ತುಂಬಿಸಿತ್ತು.

    7. ಹೆರಾನ್ (Heron Drone) – ಫೆ. 16ರಿಂದ 20 ರವರೆಗೆ ಉಗ್ರರ ಕೇಂದ್ರ ಸ್ಥಳಗಳನ್ನು ಪತ್ತೆ ಹಚ್ಚಲು ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭೂಸೇನೆ ಮತ್ತು ವಾಯುಸೇನೆ 4 ದಿನ ವೈಮಾನಿಕ ಸಮೀಕ್ಷೆ ನಡೆಸಿತ್ತು. ಇಸ್ರೇಲ್ ನಿರ್ಮಿತ ಹೆರಾನ್ ಹೆಸರಿನ ಮಾನವರಹಿತ ವೈಮಾನಿಕ ಸರ್ವೇಕ್ಷಣಾ ವಾಹನ ಬಳಸಿ ಈ ಸರ್ವೆ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ಯಾವುದೇ ಹಾನಿಯಾಗಿಲ್ಲ, ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ರು: ಪಾಕಿಸ್ತಾನ ಮೊಂಡುವಾದ

    ನವದೆಹಲಿ: ಭಾರತದ ವಾಯ ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಪಾಕಿಸ್ತಾನದ ಮೇಜರ್ ಜನರಲ್ ಆಸೀಪ್ ಗಫೂರ್ ಟ್ವೀಟ್ ಮಾಡುವ ಮೂಲಕ ಮೊಂಡುತನ ಪ್ರದರ್ಶನ ಮಾಡಿದ್ದಾರೆ.

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು. ಆದರೆ ಈ ಬಾರಿ ದಾಳಿಯನ್ನು ಒಪ್ಪಿಕೊಂಡಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿಸಿದೆ.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್‍ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ ಶಿಬಿರದ ಮೇಲೆ 100 ಕೆಜಿಯ 10 ಬಾಂಬ್ ಸಿಡಿಸಲಾಗಿದ್ದು, ಉಗ್ರರ ತಾಣದ 500 ಮೀ. ವ್ಯಾಪ್ತಿ ಧ್ವಂಸಗೊಂಡಿದೆ ಎನ್ನಲಾಗುತ್ತಿದ್ದು, ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಪುಲ್ವಾಮಾ ದಾಳಿಯ 12 ನೇ ದಿನಕ್ಕೆ ಭಾರತೀಯ ಪ್ರತಿಕಾರ ತೀರಿಸಿರುವುದು ಸ್ಪಷ್ಟವಾಗಿದೆ.

    ಬಾಂಬ್ ದಾಳಿಯ ವೇಳೆ ಮಿರಾಜ್ ಗೆ ಸುಖೋಯ್ ಯುದ್ಧ ವಿಮಾನ ಕೂಡ ಬೆಂಗಾವಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಿರಾಜ್-2000, ಏಕಕಾಲಕ್ಕೆ 1000 ಕೆ.ಜಿ ಲೇಸರ್ ಗೈಡೆಡೆ ಬಾಂಬ್ ಹಾಕಬಹುದಾದ ಸಾಮರ್ಥ್ಯ  ಹೊಂದಿದೆ. ಹೀಗಾಗಿ ಈ ವಿಮಾನಕ್ಕೆ ಭಾರತೀಯ ವಾಯು ಸೇನೆ `ವಜ್ರ’ ಎಂದು ಹೆಸರಿಟ್ಟಿದೆ. ಸದ್ಯ ದೇಶದ ವಾಯುನೆಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    https://www.youtube.com/watch?v=Y3sC0vgwSyg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv