Tag: Bal Thackeray

  • ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ – ಅಡ್ವಾಣಿಗೆ ಅಂದು ಠಾಕ್ರೆ ನೀಡಿದ್ದ ಸಲಹೆಯ ಬಗ್ಗೆ ಉದ್ಧವ್‌ ಮಾತು

    ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ – ಅಡ್ವಾಣಿಗೆ ಅಂದು ಠಾಕ್ರೆ ನೀಡಿದ್ದ ಸಲಹೆಯ ಬಗ್ಗೆ ಉದ್ಧವ್‌ ಮಾತು

    ಮುಂಬೈ: ಮೋದಿಯನ್ನು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಹಿಂದುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಬಾಳ್ ಠಾಕ್ರೆ ಅವರು ಸಲಹೆ ನೀಡಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

    Uddhav Thackeray

    2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋದ್ರಾ ಗಲಭೆಯ ವೇಳೆ “ಮೋದಿ ಹಟಾವೋ” ಅಭಿಯಾನ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಈ ವೇಳೆ ನಮ್ಮ ತಂದೆ ಮತ್ತು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಗುಜರಾತ್‍ನಲ್ಲಿ 2022ರ ಕೋಮು ಗಲಭೆ ಬಳಿಕ ದಿವಂಗತ ಬಿಜೆಪಿ ಮಠಾಧೀಶ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದರು. ಈ ವೇಳೆ ನಡೆದ ಗೋದ್ರಾ ಗಲಭೆಯ ವೇಳೆ “ಮೋದಿ ಹಟಾವೋ” ಅಭಿಯಾನ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಮೋದಿಯನ್ನು ಪದಚ್ಯುತಗೊಳಿಸುವ ಬೇಡಿಕೆಯ ಬಗ್ಗೆ ಬಾಳ್ ಠಾಕ್ರೆ ಅವರೊಂದಿಗೆ ಮಾತನಾಡಲು ರಾಷ್ಟ್ರ ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಎಲ್‍ಕೆ ಆಡ್ವಾಣಿ ಅವರು ಮುಂಬೈಗೆ ಭೇಟಿ ನೀಡಿದ್ದರು.

    ರ್‍ಯಾಲಿವೊಂದರಲ್ಲಿ ಪಾಲ್ಗೊಂಡು ನಂತರ ಕುಳಿತುಕೊಂಡು ಮಾತನಾಡುತ್ತಿದ್ದೆವು. ಆಗ ಎಲ್‍ಕೆ ಆಡ್ವಾಣಿ ಅವರು ಬಾಳ್ ಠಾಕ್ರೆ ಅವರೊಂದಿಗೆ ಯಾವುದೋ ವಿಚಾರ ಚರ್ಚಿಸಬೇಕು ಎಂದರು. ನಾನು ಮತ್ತು ಬಿಜೆಪಿ ದಿವಂಗತ ನಾಯಕ ಪ್ರಮೋದ್ ಜಿ ಅಲ್ಲಿಂದ ಎದ್ದು ಹೊರಟೆವು. ಆಗ ಎಲ್‍ಕೆ ಆಡ್ವಾಣಿಯವರು ಮೋದಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವ ಬೇಡಿಕೆಯ ಬಗ್ಗೆ ಬಾಳ್ ಠಾಕ್ರೆ ಅವರ ಅನಿಸಿಕೆಯನ್ನು ಕೇಳಿದ್ದರು. ಇದನ್ನೂ ಓದಿ: ಬಾಬರಿ ಮಸೀದಿ ಕೆಡವಿದಾಗ ನೀವು ಓಡಿಹೋಗಿದ್ದಿರಿ: ಬಿಜೆಪಿಗೆ ಉದ್ಧವ್‌ ಠಾಕ್ರೆ ತರಾಟೆ

    ಈ ವೇಳೆ ಬಾಳ್ ಠಾಕ್ರೆ ಅವರು ಅಡ್ವಾಣಿ ಅವರಿಗೆ ಮೋದಿಯನ್ನು ಮುಟ್ಟೋಕು ಹೋಗಬೇಡಿ. ಮೋದಿಯನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿದರೆ, ಬಿಜೆಪಿ ಗುಜರಾತ್‍ನನ್ನು ಕಳೆದುಕೊಳ್ಳುತ್ತದೆ ಮತ್ತು ಅದರಿಂದ ಹಿಂದುತ್ವಕ್ಕೆ ಹಾನಿಯಾಗುತ್ತದೆ ಎಂದು  ತಿಳಿಸಿದ್ದರು ಎಂದಿದ್ದಾರೆ.

  • ಹನುಮಾನ್‌ ಚಾಲೀಸಾ ಪಠಿಸಿದವರನ್ನು ಬಂಧಿಸಿದ್ದಕ್ಕೆ ಬಾಳಾ ಠಾಕ್ರೆ ನೊಂದಿದ್ದಾರೆ: ಕೇಂದ್ರ ಸಚಿವ

    ಹನುಮಾನ್‌ ಚಾಲೀಸಾ ಪಠಿಸಿದವರನ್ನು ಬಂಧಿಸಿದ್ದಕ್ಕೆ ಬಾಳಾ ಠಾಕ್ರೆ ನೊಂದಿದ್ದಾರೆ: ಕೇಂದ್ರ ಸಚಿವ

    ಮುಂಬೈ: ಹನುಮಾನ್ ಚಾಲೀಸಾ ಪಠಣ ಮಾಡಿದವರನ್ನು ಬಂಧಿಸಿರುವುದು ಬಾಳಾ ಠಾಕ್ರೆ ಅವರ ಆತ್ಮವನ್ನು ನೋಯಿಸಿದ ಹಾಗೆ ಆಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಕ್ಕಾಗಿ ಅಥವಾ ಶ್ರೀರಾಮನ ಹೆಸರನ್ನು ತೆಗೆದುಕೊಂಡಿದ್ದಕ್ಕಾಗಿ ಬಂಧಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಬಾಳಾ ಸಾಹೇಬರ ಆತ್ಮ ನೊಂದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ, ಶಾಸಕರಾದ ರವಿ ರಾಣಾ ಅವರು ಮುಂಬೈನಲ್ಲಿರುವ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ರಾಣಾ ದಂಪತಿಯನ್ನು ಬಂಧಿಸಲಾಯಿತು. ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿಯಾದ ಶರದ್ ಪವಾರ್

    ಇದೇ ವೇಳೆ ಧ್ವನಿವರ್ಧಕ ತೆರವುಗೊಳಿಸುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಬ್ದ ಮಾಲಿನ್ಯದಿಂದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಹಲವು ನಿಯಮಗಳಿವೆ. ಅದರಂತೆ ತಡರಾತ್ರಿ ಹಾಗೂ ಮುಂಜಾನೆ ಧ್ವನಿವರ್ಧಕಗಳನ್ನು ಬಳಸಬಾರದು ಎಂದರು.

    loud speaker

    ಉತ್ತರ ಪ್ರದೇಶ ಸರ್ಕಾರವು ಧಾರ್ಮಿಕ ಸ್ಥಳಗಳಿಂದ ಸುಮಾರು 11,000 ಸಾವಿರ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ. ಹಾಗೂ 35,221 ವಾಲ್ಯೂಮ್ ಅನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ

  • ಶಿವಸೇನೆ ವಿರುದ್ಧ ಗುಡುಗಿದ ಫಡ್ನವೀಸ್ ಪತ್ನಿ

    ಶಿವಸೇನೆ ವಿರುದ್ಧ ಗುಡುಗಿದ ಫಡ್ನವೀಸ್ ಪತ್ನಿ

    ಮುಂಬೈ: ಶಿವಸೇನಾ ಸಂಸ್ಥಾಪಕರಾದ ಬಾಳ್ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಮಾಡಲು ಒಂದು ಸಾವಿರ ಮರಗಳನ್ನು ಕಡಿಯಲು ಮುಂದಾದ ಶಿವಸೇನೆ ಸರ್ಕಾರದ ನಿರ್ಧಾರವನ್ನು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಪಡ್ನವೀಸ್ ವಿರೋಧಿಸಿದ್ದಾರೆ.

    ಮುಂಬೈನ ಔರಂಗಾಬಾದ್‍ನಲ್ಲಿ ಬಾಳ್ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಮಾಡಲು ತೀರ್ಮಾನಿಸಿರುವ ಉದ್ಧವ್ ಠಾಕ್ರೆ ಅವರ ನೇತೃತ್ವದ ಸರ್ಕಾರ, ಇದಕ್ಕಾಗಿ ಸುಮಾರು 1,000 ಮರಗಳನ್ನು ಕಡಿಯಲು ನಿರ್ಧಾರ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮೃತಾ ಅವರು ಶಿವಸೇನೆಯನ್ನು ಕಪಟಿ ಎಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮೃತಾ ಪಡ್ನವೀಸ್ ಅವರು, ಬೂಟಾಟಿಕೆ ಎಂಬುದು ಒಂದು ರೋಗ. ಈ ಕಾಯಿಲೆಯಿಂದ ಬಳಲುತ್ತಿರುವ ಶಿವಸೇನೆ ಶೀಘ್ರವೇ ಗುಣಮುಖವಾಗಲಿ. ನಿಮಗೆ ಅಗತ್ಯವಿದ್ದಾಗ ಕಮೀಷನ್‍ಗಾಗಿ ಮರಗಳನ್ನು ಕಡಿಯುವುದು ಕ್ಷಮೆಯೇ ಇಲ್ಲದ ಪಾಪ ಎಂದು ಶಿವಸೇನೆಯನ್ನು ಕಟುವಾಗಿ ಟೀಕಿಸಿದ್ದಾರೆ.

    ಈ ಹಿಂದೆ ಶಿವಸೇನೆ ಮುಂಬೈನ ಆರೆ ಕಲೋನಿಯಲ್ಲಿ ಮೆಟ್ರೋ ಲೈನ್ ಮತ್ತು ಮೂರು ಕಾರ್ ಶೆಡ್‍ಗಳನ್ನು ನಿರ್ಮಿಸಲು ಮರಗಳನ್ನು ಕಡಿದಾಗ ಪರಿಸರ ಕಾಳಜಿಯ ಹೆಸರಿನಲ್ಲಿ ಇದನ್ನು ವಿರೋಧಿಸಿತ್ತು. ಆದರೆ ಈಗ ಮೊದಲ ಬಾರಿಗೆ ಸಿಎಂ ಅಗಿರವ ಉದ್ಧವ್ ಠಾಕ್ರೆ ಅವರು ತಮ್ಮ ತಂದೆಯ ಸ್ಮಾರಕ ನಿರ್ಮಾಣಕ್ಕಾಗಿ ಒಂದು ಸಾವಿರ ಮರಗಳನ್ನು ಕಡಿಯಲು ಮುಂದಾಗಿರುವುದು ಎಲ್ಲೆಡೆ ವಿರೋಧಕ್ಕೆ ಎಡೆಮಾಡಿಕೊಟ್ಟಿದೆ.

    ಈ ವಿಚಾರವಾಗಿ ಔರಂಗಾಬಾದ್ ಮೇಯರ್ ನಂದಕುಮಾರ್ ಅವರು, ಈಗಾಗಲೇ ಮಾಧ್ಯಮ ಹೇಳಿಕೆ ನೀಡಿದ್ದು, ಸ್ಮಾರಕಕ್ಕಾಗಿ ಯಾವುದೇ ಮರಗಳನ್ನೂ ಕಡಿಯಲು ಬಿಡುವುದಿಲ್ಲ. ಇಲ್ಲಿ ಕೇವಲ ಠಾಕ್ರೆ ಅವರ ಸ್ಮಾರಕ ಮಾತ್ರ ನಿರ್ಮಾಣ ಮಾಡುತ್ತಿಲ್ಲ. ಸ್ಮಾರಕ ಜೊತೆಗೆ ಉದ್ಯಾನವನವನ್ನು ನಿರ್ಮಿಸುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

  • ಶಿವಸೇನೆಯಿಂದ ಬಾಳಾ ಠಾಕ್ರೆಗೆ ಅವಮಾನ – ಕರಂದ್ಲಾಜೆ

    ಶಿವಸೇನೆಯಿಂದ ಬಾಳಾ ಠಾಕ್ರೆಗೆ ಅವಮಾನ – ಕರಂದ್ಲಾಜೆ

    ಉಡುಪಿ: ಶಿವಸೇನೆ ಸರ್ಕಾರ ರಚಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆ ಹೋಗುವುದು ಬಾಳ ಠಾಕ್ರೆ ಅವರ ಉದ್ದೇಶಕ್ಕೆ ಅವಮಾನ ಮಾಡಿದಂತೆ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವ್ಯಾಖ್ಯಾನಿಸಿದ್ದಾರೆ.

    ಉಡುಪಿಯ ಪಡುಕೆರೆಯಲ್ಲಿ ಬೀಚ್ ಕ್ಲೀನಿಂಗ್ ಅಭಿಯಾನದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಶಿವಸೇನೆ ಮೂರು ದಶಕದ ದೋಸ್ತಿಗಳು. ಆದರೆ ಶಿವಸೇನೆ ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಎನ್ನುವುದು ಗೊತ್ತಿಲ್ಲ ಎಂದರು.

    ಇನ್ನೂ ಅವಕಾಶ ಇದೆ. ಹಿಂದುತ್ವದ ಆಧಾರದಲ್ಲಿ ನಾವು ಜೊತೆಯಾಗಿ ಚುನಾವಣೆ ಎದುರಿಸಿದ್ದೇವೆ. ಕಾಂಗ್ರೆಸ್, ಎನ್‍ಸಿಪಿ ಜೊತೆ ಹೋಗುದು ಬಾಳಾಠಾಕ್ರೆ ಅವರ ಉದ್ದೇಶಕ್ಕೆ ಅವಮಾನ ಎಂದರು. ಈ ಬೆಳವಣಿಗೆ ಶಿವಸೇನೆಯ ಮೂಲ ಉದ್ದೇಶಕ್ಕೆ ಆಘಾತವಾಗಿದೆ. ಇನ್ನೂ ಅವಕಾಶ ಇದೆ, ನಮ್ಮ ಪಾಟ್ನರ್ಸ್ ಆಗಿ ಮುಂದುವರಿಯಲಿ ಎಂದು ಸಲಹೆ ನೀಡಿದರು.