Tag: Bal puraskar

  • ರಾಜ್ಯದ ಇಬ್ಬರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ

    ರಾಜ್ಯದ ಇಬ್ಬರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ

    ಬೆಂಗಳೂರು: ದೇಶದ 29 ಸಾಧಕ ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರದಾನ ಮಾಡಿದರು.

    ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಸಂಗೀತ ಮತ್ತು ಮನರಂಜನೆ ವಿಭಾಗದಲ್ಲಿ (ಪಿಯಾನೋ) ಸೈಯದ್ ಫತ್ತಿನ್ ಅಹಮದ್ ಹಾಗೂ ಸಮಾಜ ಸೇವೆ ವಿಭಾಗದಲ್ಲಿ ಅಭಿನವ್ ಚೌಧರಿಗೆ ವರ್ಚ್ಯುವಲ್ ಸಭೆಯ ಮೂಲಕ ಬಾಲ ಪುರಸ್ಕಾರ ಪ್ರಶಸ್ತಿ ನೀಡಿ ಪ್ರಧಾನಿ ನರೇಂದ್ರ ಮೋದಿ ಗೌರವಿಸಿದರು. ಇದನ್ನೂ ಓದಿ: ಬೆಂಗಳೂರು ನಗರಕ್ಕೆ ಸಿಎಂ ಸೇರಿ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಪ್ರಕಟ – ಯಾರಿಗೆ ಯಾವ ಜಿಲ್ಲೆ?

    ಪ್ರಶಸ್ತಿ ಜೊತೆಗೆ ಬ್ಲಾಕ್ ಚೈನ್ ತಂತ್ರಜ್ಞಾನದ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಯಿತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಾಧಕ ವಿದ್ಯಾರ್ಥಿಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಸನ್ಮಾನಿಸಿದರು. ಸಂಶೋಧನೆ, ಸಮಾಜಸೇವೆ, ಶಾಲಾ ಸಾಧನೆ, ಕ್ರೀಡೆ, ಕಲೆ, ಸಂಸ್ಕೃತಿ, ಧೈರ್ಯ- ಸಾಹಸ ಕ್ಷೇತ್ರದಲ್ಲಿ ಸಾಧನೆಗೈದ ಮಕ್ಕಳಿಗೆ ಈ ‌ಪ್ರಶಸ್ತಿ ನೀಡಲಾಗುತ್ತದೆ. ಇದನ್ನೂ ಓದಿ:  ಏನಮ್ಮಾ ಯಾರಾದ್ರೂ ಫೋನ್ ಮಾಡಿದ್ರೆ ರಿಸೀವ್ ಮಾಡಲ್ವಾ..?- ಪಿಎಸ್‍ಐಗೆ ಸಿದ್ದರಾಮಯ್ಯ ತರಾಟೆ

  • ಬೆಂಗಳೂರಿನ ವೀರ್ ಕಶ್ಯಪ್‌ಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ

    ಬೆಂಗಳೂರಿನ ವೀರ್ ಕಶ್ಯಪ್‌ಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ

    ಬೆಂಗಳೂರು: ಕೊರೊನಾ ಕಾಲದಲ್ಲಿ ತನ್ನದೆ ಯೋಚನೆಯ ಮೂಲಕ ಹೊಸ ಬೋರ್ಡ್ ಗೇಮ್ ಆವಿಷ್ಕಾರ ಮಾಡಿದ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಬೆಂಗಳೂರಿನ ವೀರ್ ಕಶ್ಯಪ್‍ಗೆ ಪ್ರಧಾನಮಂತ್ರಿ ಬಾಲ ಪುರಸ್ಕಾರ ನೀಡಿ ಗೌರವಿಸಿದೆ.

    ಬೆಂಗಳೂರಿನ ಆರ್ ಆರ್ ನಗರದ ನಿವಾಸಿಗಳಾದ ಕಮಾಂಡರ್ ವಿನಾಯಕ್, ಸಂಗೀತಾ ದಂಪತಿಯ ಮಗ ವೀರ್ ಕಶ್ಯಪ್(10) ಕಳೆದ ವರ್ಷದ ಬೇಸಿಗೆ ರಜೆಗೆ ಅಜ್ಜಿ ಮನೆಗೆ ಹೋಗಿ ಕೊರೊನಾದಿಂದ ಅಲ್ಲಿಯೇ ಉಳಿದುಕೊಂಡಿದ್ದ. ಆ ಸಯಮದಲ್ಲಿ ಅಜ್ಜಿಮನೆಯಲ್ಲಿ ಆಟವಾಡಲು ಬೋರ್ಡ್ ಗೇಮ್ ಇರಲಿಲ್ಲ. ಹಾಗಾಗಿ ಈ 10 ವರ್ಷ ಪ್ರಾಯದ ವೀರ್ ಕಶ್ಯಪ್ ನಾನೇ ಯಾಕೆ ಒಂದು ಬೋರ್ಡ್ ಗೇಮ್ ಆವಿಷ್ಕಾರ ಮಾಡಬಾರದು ಅಂತಾ ಯೋಚಿಸಿ ಕೊರೊನಾ ಯುಗ ಎಂಬ ಹೆಸರನ್ನಿಟ್ಟು ಹೊಸ ಬೋರ್ಡ್ ಗೇಮ್‍ನ್ನು ಕಂಡುಹಿಡಿದ್ದಾನೆ.

    ಈತ ಕಂಡುಹಿಡಿದ ಕೊರೊನಾ ಯುಗ ಗೇಮ್ ಕೋವಿಡ್‍ನ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುದರೊಂದಿಗೆ ಆಟವಾಡಿವವರು ಈ ನಿಯಮಗಳಿಗೆ ಒಳಗಾಗಿ ಪಾಲನೆ ಮಾಡುವಂತೆ ವೀರ್ ಅನುಷ್ಠಾನ ಮಾಡಿದ್ದಾನೆ. ಈ ಗೇಮ್ ಅಮೆಜಾನ್‍ನಲ್ಲಿ ಬಿಡುಗಡೆ ಹೊಂದಿ ಎಲ್ಲರ ಗಮನ ಸೆಳೆದಿತ್ತು.

    ಈ ಅವಿಷ್ಕಾರವನ್ನು ಗಮಿಸಿರುವ ಕೇಂದ್ರ ಸರ್ಕಾರ ವೀರ್ ಕಶ್ಯಪ್‍ಗೆ 2021ರ ಬಾಲ ಪುರಸ್ಕಾರ ನೀಡಿ ಗೌರವಿಸಿದೆ. ಹಾಗೆ ಇಂದು ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗಿಯಾಗಿ ತನ್ನ ಆವಿಷ್ಕಾರದ ಕುರಿತು ಸವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾನೆ.

    ನನ್ನ ಬೋರ್ಡ್ ಗೇಮ್ ಅನ್ನು ಗುರುತಿಸಿ ನನಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ ಹಾಗೆ ನಮ್ಮ ಪ್ರಧಾನಿ ಮೋದಿ ಸರ್ ಜೊತೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗಿಯಾಗಿ ಅವರೊಂದಿಗೆ ಮಾತಾನಾಡಿದ್ದು ಇನ್ನೂ ಹೆಚ್ಚಿನ ಖುಷಿ ಕೊಟ್ಟಿದೆ ಎಂದು ಬಾಲಕ ಮಾಧ್ಯಮಗಳೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.