Tag: Bakrid

  • ಬಕ್ರೀದ್‌ ಆಚರಣೆ; ಪ್ರಾಣಿ ಬಲಿಗೆ ಹಲವು ನಿರ್ಬಂಧ – ಸರ್ಕಾರದ ಮಾರ್ಗಸೂಚಿಯಲ್ಲೇನಿದೆ?

    ಬಕ್ರೀದ್‌ ಆಚರಣೆ; ಪ್ರಾಣಿ ಬಲಿಗೆ ಹಲವು ನಿರ್ಬಂಧ – ಸರ್ಕಾರದ ಮಾರ್ಗಸೂಚಿಯಲ್ಲೇನಿದೆ?

    ಬೆಂಗಳೂರು: ಮುಸ್ಲಿಂ ಬಾಂಧವರ ಮತ್ತೊಂದು ಪ್ರಮುಖ ಹಬ್ಬವಾದ ಬಕ್ರೀದ್‌ ಆಚರಣೆಗೆ (ಜು.10) ಸಿದ್ಧತೆ ನಡೆದಿದೆ. ಹಬ್ಬ ಆಚರಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

    ಈ ಬಾರಿ ಬಕ್ರೀದ್‌ ಹಬ್ಬದ ವೇಳೆ ಜಾನುವಾರುಗಳನ್ನು ಬಲಿ ನೀಡಲು ಅವಕಾಶ ಇರುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿಕೆ ನೀಡಿದ್ದರು. ಅದರಂತೆ ಪ್ರಾಣಿ ಬಲಿಗೆ ಹಲವು ನಿರ್ಬಂಧಗಳನ್ನು ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ. ಇದನ್ನೂ ಓದಿ: ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ ನಾಮನಿರ್ದೇಶನಕ್ಕೆ ಕೊಂಕು

    ರಾಜ್ಯದಲ್ಲಿ ಜಾರಿಯಲ್ಲಿರುವ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಕರುಗಳನ್ನು ಬಲಿ ನೀಡುವಂತಿಲ್ಲ. ಬಲಿ ನೀಡುವುದಕ್ಕಾಗಿ ಅವುಗಳನ್ನು ಸಾಗಾಟ ಮಾಡುವಂತೆಯೂ ಇಲ್ಲ ಎಂದು ಸೂಚಿಸಿದೆ.

    ನಿಯಮಗಳೇನು?
    ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು.

    ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯಮ 2020ರ ನಿಯಮಗಳು ಉಲ್ಲಂಘನೆಯಾಗದಂತೆ ಖುರ್ಬಾನಿಯನ್ನು (ಪ್ರಾಣಿ ಬಲಿದಾನ) ನೆರವೇರಿಸುವುದು. ಇದನ್ನೂ ಓದಿ: 75ನೇ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಪಕ್ಷಾತೀತ ಸ್ವಾತಂತ್ರ್ಯ ನಡಿಗೆ: ಡಿ.ಕೆ. ಶಿವಕುಮಾರ್

    ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಿದೆ.

    ಜಿಲ್ಲಾಡಳಿತ/ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿಗದಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಖುರ್ಬಾನಿಯನ್ನು ನೆರವೇರಿಸತಕ್ಕದ್ದು.

    ಖುರ್ಬಾನಿ ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳುವುದು.

    ಪ್ರಾಣಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು.

    ಪೊಲೀಸ್‌ ಇಲಾಖೆ, ಪಶು ಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡುವ ಸಾಮಾನ್ಯ ಮತ್ತು ಸ್ಥಳೀಯವಾಗಿ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

    ಹಬ್ಬದ ಆಚರಣೆ ಕುರಿತು ರಾಜ್ಯ ಸರ್ಕಾರ/ ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸತಕ್ಕದ್ದು.

    Live Tv
    [brid partner=56869869 player=32851 video=960834 autoplay=true]

  • ಬಕ್ರೀದ್ ಹಬ್ಬ- ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

    ಬಕ್ರೀದ್ ಹಬ್ಬ- ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

    ಮೈಸೂರು: ಇಂದು ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದ್ದು, ಇತ್ತ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

    ಹೌದು. ಬಕ್ರೀದ್ ಪ್ರಯುಕ್ತ ಇಂದು ರಜೆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಾವಿಪತಿಯ ಸುಳಿವು ಕೊಟ್ಟ ವೈಷ್ಣವಿ

    ರಜೆ ದಿನವಾದ್ದ ಹಾಗೂ ಆಷಾಢ ಮಾಸವಾಗಿರುವುದರಿಂದ ಬೆಟ್ಟಕ್ಕೆ ಹೆಚ್ಚು ಜನ ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಢಳಿತ ನಿಷೇಧ ಹೇರಿದೆ. ಆಷಾಡ ಮಾಸದ ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಜಿಲ್ಲಾಡಳಿತ ಈಗಾಗಲೇ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

  • 1.25 ಲಕ್ಷಕ್ಕೆ ಮಾರಾಟವಾದ ಎರಡು ಬಂಡೂರು ಟಗರು

    1.25 ಲಕ್ಷಕ್ಕೆ ಮಾರಾಟವಾದ ಎರಡು ಬಂಡೂರು ಟಗರು

    ಮಂಡ್ಯ: ಎರಡು ಬಂಡೂರು ಟಗರುಗಳು 1.25 ಲಕ್ಷಕ್ಕೆ ಮಾರಾಟವಾಗುವ ಮೂಲಕವಾಗಿ ಸುದ್ದಿಯಾಗಿವೆ. ಇದನ್ನೂ ಓದಿ: ತನ್ನನ್ನು ಕಾಪಾಡುವಂತೆ ಕನ್ನಂಬಾಡಿ ಕೂಗಿ ಹೇಳುತ್ತಿದೆ: ಸುಮಲತಾ

    ಮಂಡ್ಯದ ಸೂನಗನಹಳ್ಳಿಯ ರೈತ ಶಂಭು ಅವರು ಬಂಡೂರು ತಳಿಯ ಜೋಡಿ ಟಗರುಗಳನ್ನು ಸಾಕಿದ್ದರು. ಇವರ ಟಗರುಗಳು ಬರೋಬ್ಬರಿ 1 ಲಕ್ಷ 25 ಸಾವಿರ ರೂಪಾಯಿಗೆ ಮಾರಾಟವಾಗಿವೆ. ಇದನ್ನೂ ಓದಿ: ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

    ತಲಾ 80 ಕೆಜಿ ತೂಕದ ಎರಡು ಬಂಡೂರು ತಳಿಯ ಟಗರುಗಳನ್ನು ಶಂಭು ಅವರು ಒಂದು ವರ್ಷದಿಂದ ಸಾಕಿದ್ದರು. ಇದೀಗ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬೂದ್ದೀನ್ ಎಂಬುವವರು ಬಕ್ರೀದ್ ಹಬ್ಬಕ್ಕೆ 1ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿ ಖರೀದಿ ಮಾಡಿದ್ದಾರೆ. ಒಂದು ವರ್ಷದಿಂದ ಶಂಭು ಅವರು ಈ ಟಗರುಗಳನ್ನು ಪ್ರೀತಿಯಿಂದ ಸಾಕಿದ್ದರು. ಶಂಭು ಅವರು ಟಗರುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಸಾಬೂದ್ದೀನ್ ಅವರು ಕೇಕ್ ಕಟ್ ಮಾಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಟಿ ಮಯೂರಿ ಮಗನ ಜೊತೆ ಸಮಯ ಕಳೆದ ಜೆಕೆ

  • ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ – ಉಪವಿಭಾಗಾಧಿಕಾರಿ ಗೋಪಾಲಕೃಷ್ಣ

    ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ – ಉಪವಿಭಾಗಾಧಿಕಾರಿ ಗೋಪಾಲಕೃಷ್ಣ

    ಹುಬ್ಬಳ್ಳಿ: ಕೋವಿಡ್ ಸೋಂಕು ಕಡಿಮೆಯಾದರು ಸಹ 3 ನೇ ಅಲೆ ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಎಚ್ಚರಿಕೆ ವಹಿಸಬೇಕು ಹಾಗೂ ಈ ಬಾರಿ ಬಕ್ರಿದ್‍ಗೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಗೋಪಾಲಕೃಷ್ಣ ಹೇಳಿದ್ದಾರೆ.

    ಬಕ್ರಿದ್ ಹಬ್ಬದಂದು ಮಸೀದಿಗಳಲ್ಲಿ ಸ್ಯಾನಿಟೈಜಿಂಗ್ ಮಾಡಿ ಹಾಗೂ ಪ್ರಾರ್ಥಿಸುವಾಗ 6 ಅಡಿ ಅಂತರ ಕಾಪಾಡಿಕೊಂಡು ಸುಲಲಿತ ಮತ್ತು ಸುರಕ್ಷತೆಯಿಂದ ಆಚರಿಸಬೇಕು. ಹಬ್ಬದಂದು ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಒಂದು ಬಾರಿಗೆ 50 ಜನರಿಗೆ ಅವಕಾಶ ನೀಡಲಾಗಿದ್ದು, ನಂತರ ಮತ್ತೆ 50 ಜನರು ಪಾಳೆಯ ರೂಪದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಆದರೆ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮಿನಿ ವಿಧಾನಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಬಕ್ರೀದ್ ಹಬ್ಬದ ಕುರಿತು ಏರ್ಪಡಿಸಲಾಗಿದ್ದ, ಮುಸ್ಲಿಂ ಮುಖಂಡರ ಜೊತೆ ವೀಡಿಯೋ ಸಂವಾದದ ಮೂಲಕ ಅವರು ಮಾತದ ಅವರು, 60 ವಯಸ್ಸು ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನವರಿಗೆ ಮಸೀದಿಗಳಲ್ಲಿ ಪ್ರಾರ್ಥಿಸಲು ಅವಕಾಶವಿರುವುದಿಲ್ಲ. ಅವರು ಮನೆಯಲ್ಲಿಯೇ ಪ್ರಾರ್ಥಿಸಬೇಕು. ಮಸೀದಿಗೆ ಬರುವ ಮುನ್ನ ದೇಹದ ತಾಪಮಾನ ಪರೀಕ್ಷೆ ಮಾಡಿಸಿರಬೇಕು. ಹಸ್ತಲಾಘವ ಮತ್ತು ಆಲಿಂಗನ ಮಾಡುವುದು ನಿಷೇಧಿಸಲಾಗಿದೆ. ಆಸ್ಪತ್ರೆ, ಶಾಲಾ ಕಾಲೇಜು ಆವರಣ, ಆಟದ ಮೈದಾನ , ಪುಟ್‍ಪಾತ್ ಹಾಗೂ ಉದ್ಯಾನವನದ ಒಳಗಡೆ ಮತ್ತು ಹೊರಗಡೆ ಬಲಿದಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

    ಸಭೆಯಲ್ಲಿ ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಈದ್ಗಾ ಮೈದಾನದಲ್ಲಿ 50 ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪವಿಭಾಗಾಧಿಕಾರಿ ಸಾಮೂಹಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥಿಸುವುದನ್ನು ನಿಷೇಧಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸುತ್ತೇನೆ. ಸರ್ಕಾರ ಆದೇಶ ಪ್ರಕಾರ ರಾಜ್ಯದಾದ್ಯಂತ ಈದ್ಗಾ ಮೈದಾನದಲ್ಲಿ ಪಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಶಹರ ತಹಶೀಲ್ದಾರ ಶಶಿಧರ ಮಾಡ್ಯಾಳ, ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸಫ್ ಸವಣೂರು, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

  • ಬಕ್ರಿದ್‍ಗೆ ವಧೆ ಮಾಡಲು ತಂದಿದ್ದ ಗೋವುಗಳ ರಕ್ಷಣೆ

    ಬಕ್ರಿದ್‍ಗೆ ವಧೆ ಮಾಡಲು ತಂದಿದ್ದ ಗೋವುಗಳ ರಕ್ಷಣೆ

    ಬೆಂಗಳೂರು: ಬಕ್ರೀದ್ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ಹತ್ತಾರು ಗೋವುಗಳನ್ನು ಬಲಿ ಕೊಡಲು ಸಿಲಿಕಾನ್ ಸಿಟಿಗೆ ತರಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಾಗಾಗಿ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆಮುಂದೆ ಕಟ್ಟಿಹಾಕಿದ್ದ ನೂರಾರು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ವಯಸ್ಸಾಗಿರುವ ಎತ್ತುಗಳು ಮತ್ತು ಎಮ್ಮೆಗಳನ್ನು ಮಾತ್ರ ವಧೆ ಮಾಡಲು ರಾಜ್ಯದಲ್ಲಿ ಅವಕಾಶವಿದೆ. ಆದರೆ ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ಕಾನೂನು ಉಲ್ಲಂಘಿಸಿ, ಪೊಲೀಸರ ಕಣ್ತಪ್ಪಿಸಿ ಹತ್ತಾರು ಗೋವುಗಳನ್ನು ತಂದು ಮನೆ ಮುಂದೆ ಕಟ್ಟಿಕೊಂಡಿದ್ದಾರೆ. ದೇವರ ಜೀವನಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆ ಮುಂದೆ ಎತ್ತುಗಳನ್ನು ತಂದು ಕಟ್ಟಿ ಹಾಕಿರುವ ಬಗ್ಗೆ ಸ್ವಯಂ ಸೇವಾ ಸಂಘಟನೆಯ ಸದಸ್ಯರೊಬ್ಬರು ದೂರು ಕೊಟ್ಟಿದ್ದರು. ಇದರ ಅನ್ವಯ ಕಾರ್ಯಚರಣೆಗೆ ಇಳಿದ ಪೊಲೀಸರು ಬಕ್ರೀದ್ ಹಬ್ಬಕ್ಕೆಂದು ಕಡಿಯಲು ತಂದಿದ್ದ ನೂರಾರು ಎತ್ತುಗಳು, ಹಸುಗಳನ್ನು ರಕ್ಷಣೆ ಮಾಡಿದ್ದಾರೆ.  ಇದನ್ನೂ ಓದಿ: ಮೇಲ್ಮನೆಯಲ್ಲೂ ಗೋಹತ್ಯೆ ನಿಷೇಧ ಬಿಲ್ ಅಂಗೀಕಾರ – ವಿಪಕ್ಷಗಳಿಂದ ಗದ್ದಲ, ಬಿಜೆಪಿ ಸದಸ್ಯರ ಸಂಭ್ರಮ

    ಗೋವುಗಳನ್ನು ರಕ್ಷಣೆ ಮಾಡಿದ ಪೊಲೀಸರು, ಸ್ಟೇಷನ್ ಬಳಿ ತಂದಿದ್ದಾರೆ. ಸದ್ಯ ಗೋವುಗಳ ರಕ್ಷಣೆ ಮಾಡಲಾಗಿದ್ದು ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ಗೋವುಗಳನ್ನು ವಧೆ ಮಾಡಲು ತಂದವರ ಹುಡುಕಾಟ ನಡೆಯುತ್ತಿದೆ.

  • ಉಡುಪಿಯಲ್ಲಿ ಬಕ್ರೀದ್ ಆಚರಣೆ- ಕಟ್ಟುನಿಟ್ಟಿನ ನಿಯಮದಡಿ ನಮಾಜ್‍ಗೆ ಅವಕಾಶ

    ಉಡುಪಿಯಲ್ಲಿ ಬಕ್ರೀದ್ ಆಚರಣೆ- ಕಟ್ಟುನಿಟ್ಟಿನ ನಿಯಮದಡಿ ನಮಾಜ್‍ಗೆ ಅವಕಾಶ

    – ಆಲಿಂಗನ ಇಲ್ಲ, ವೃದ್ಧರು-ಮಕ್ಕಳಿಗೆ ಅವಕಾಶ ಇಲ್ಲ

    ಉಡುಪಿ: ಕರಾವಳಿಯ ಮುಸಲ್ಮಾನರಿಗೆ ಇಂದು ಬಕ್ರೀದ್ ಹಬ್ಬದ ಸಂಭ್ರಮ. ಸಾಂಕ್ರಾಮಿಕ ಕೊರೊನ ಹರಡಿರುವುದರಿಂದ ಬಕ್ರೀದ್ ಹಬ್ಬವನ್ನು ಬಹಳ ಸರಳವಾಗಿ ಮುಸಲ್ಮಾನರು ಆಚರಿಸಿದ್ದಾರೆ. ಮಸೀದಿಗಳಲ್ಲಿ ಬೆಳಗ್ಗೆ ನಮಾಜ್ ನಡೆದಿದ್ದು, ಕೇವಲ ಐವತ್ತು ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.

    ಪ್ರತಿ ಮಸೀದಿಯಲ್ಲೂ ಕೂಡ ಇದೇ ಷರತ್ತು ಅನ್ವಯ ಆಗಿದೆ. ನಮಾಜ್ ಗೆ ಮಾತ್ರ ಅವಕಾಶ ಕಲ್ಪಿಸಿರುವ ಕಮಿಟಿ, ನಮಾಜ್ ನಂತರ ಆಲಿಂಗನಕ್ಕೆ ಅವಕಾಶ ಕೊಟ್ಟಿಲ್ಲ. ಐವತ್ತಕ್ಕಿಂತ ಹೆಚ್ಚು ಜನ ಮಸೀದಿಗೆ ಆಗಮಿಸಿದರೆ ಎರಡು ಬ್ಯಾಚ್ ಗಳಲ್ಲಿ ನಮಾಜ್ ಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಮತ್ತು ವೃದ್ಧರಿಗೆ ಯಾವುದೇ ಕಾರಣಕ್ಕೂ ಬಕ್ರೀದ್ ನಮಾಜ್ ಗೆ ಮಸೀದಿಗೆ ಪ್ರವೇಶ ಇರಲಿಲ್ಲ. ಇದನ್ನೂ ಓದಿ:  ತ್ಯಾಗ ಬಲಿದಾನದ ಸಂಕೇತ ಬಕ್ರೀದ್: ಈ ಹಬ್ಬದ ವಿಶೇಷತೆ ಏನು? ಇಲ್ಲಿದೆ ವಿವರ

    ಮಕ್ಕಳು ಮತ್ತು ವೃದ್ಧರಿಗೆ ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಿ, ಹಬ್ಬವನ್ನು ಆಚರಿಸುವಂತೆ ಧರ್ಮಗುರುಗಳು ಆಯಾಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆಯೇ ಕರೆ ಕೊಟ್ಟಿದ್ದರು. ಈ ಹಿಂದೆ ಮುಸಲ್ಮಾನರ ರಂಜಾನ್ ಹಬ್ಬದ ಸಂಭ್ರಮಕ್ಕೂ ಕೊರೊನಾ ಅಡ್ಡ ಬಂದಿತ್ತು.

  • ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಗಾಲು – ಬೆಳಗಾವಿ ಕುರಿಗಾಹಿಗಳಿಗೆ ಉಡುಪಿಯಲ್ಲಿ ಟೆನ್ಶನ್

    ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಗಾಲು – ಬೆಳಗಾವಿ ಕುರಿಗಾಹಿಗಳಿಗೆ ಉಡುಪಿಯಲ್ಲಿ ಟೆನ್ಶನ್

    ಉಡುಪಿ: ಜಿಲ್ಲೆಯ ಬಕ್ರೀದ್ ಆಚರಣೆಗೆ ಕೊರೊನ ಮಹಾಮಾರಿ ಅಡ್ಡಗಾಲು ಇಟ್ಟಿದೆ. ಮುಸಲ್ಮಾನರ ಪವಿತ್ರ ಮತ್ತು ಅದ್ಧೂರಿ ಹಬ್ಬ ಬಕ್ರೀದ್ ಈ ಬಾರಿ ಕಳೆ ಕಟ್ಟಿಲ್ಲ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮುಸಲ್ಮಾನರು ಈ ಬಾರಿ ಸರಳವಾಗಿ ಬಕ್ರೀದ್ ಆಚರಿಸಲು ನಿರ್ಧಾರ ಮಾಡಿದಂತಿದೆ.

    ಪ್ರತಿ ವರ್ಷ ಬಕ್ರೀದ್ ಬಂದಾಗ ಉಡುಪಿ ನಗರದ ಬೀಡಿನಗುಡ್ಡೆ ಮೈದಾನದಲ್ಲಿ ನಾಲ್ಕು ದಿನದಲ್ಲಿ ಸಾವಿರದ ಇನ್ನೂರು ಆಡು ಮತ್ತು ಕುರಿ ವ್ಯಾಪಾರ ಆಗುತ್ತಿತ್ತು. ಈ ಬಾರಿ ಕೇವಲ 250 ರಿಂದ ಮುನ್ನೂರು ಆಡುಗಳು ಮಾರಾಟವಾಗಿದೆ.

    ಕಳೆದ ಹದಿನೈದು ವರ್ಷಗಳಿಂದ ಗುಳೇದಗುಡ್ಡ ನಿವಾಸಿ ರಾಮಪ್ಪ ಐಹೊಳೆ ಬಕ್ರೀದ್‍ಗಾಗಿ ಆಡು ಕುರಿಗಳನ್ನು ಹೊತ್ತು ಉಡುಪಿಗೆ ಬರುತ್ತಾರೆ. ಕಳೆದ ಬಾರಿ ಸಾವಿರದ ಇನ್ನೂರಕ್ಕೂ ಹೆಚ್ಚು ಆಡು ವ್ಯಾಪಾರವಾಗಿತ್ತು. ಈ ಬಾರಿ ಹಬ್ಬದ ಹಿಂದಿನ ದಿನದವರೆಗೂ ಮುನ್ನೂರು ಆಡುಗಳು ಸೇಲಾಗಿದೆ. ನಾವು ಆಡು ಕುರಿಯನ್ನೇ ನಂಬಿ ಜೀವನ ಮಾಡುವವರು. ಈ ಬಾರಿ ಕೊರೊನಾ ಸಂಕಷ್ಟ ಬಂದಿದೆ, ಮಾರುಕಟ್ಟೆ ಇಲ್ಲ ಎಂದಿದ್ದಾರೆ.

    ವ್ಯಾಪಾರ ಆದರೆ ನಾವು ಜೀವನ ನಿರ್ವಹಣೆ ಮಾಡುತ್ತೇವೆ. ಎರಡು, ಮೂರು ಕುರಿಗಳನ್ನು ಖರೀದಿಸುತ್ತಿದ್ದ ಪರ್ಮನೆಂಟ್ ಗಿರಾಕಿಗಳು, ಈ ಬಾರಿ ಒಂದು ಕುರಿಯನ್ನು ಖರೀದಿಸಿದ್ದಾರೆ. ಬೆಳಗಾವಿಯಿಂದ ಇಲ್ಲಿಯ ತನಕ ನಾವು ಬಂದು ವ್ಯಾಪಾರ ಮಾಡುತ್ತಿದ್ದೇವೆ. ಕೊರೊನಾ ನಮಗೆ ಬಹಳ ನಷ್ಟಕ್ಕೆ ಕಾರಣವಾಗಿದೆ ಎಂದು ರಾಮಪ್ಪ ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿ ತಾಲಿಬ್, ಕಳೆದ ಬಾರಿ ನಾವು ಮೂರು ಆಡು ಖರೀದಿ ಮಾಡಿದ್ದೇವೆ. ಈ ಬಾರಿ ಒಂದು ತೆಗೆದುಕೊಂಡಿದ್ದೇವೆ. ರಂಜಾನ್ ಹಬ್ಬಕ್ಕೂ ಬಟ್ಟೆ ಖರೀದಿ ಮಾಡಿಲ್ಲ. ಕೊರೊನಾದಿಂದ ವ್ಯಾಪಾರ ಇಲ್ಲ. ನಮ್ಮ ಬಳಿ ಹಣ ಕೂಡಾ ಟರ್ನ್ ಓವರ್ ಆಗುತ್ತಿಲ್ಲ. ನಮ್ಮ ಬೇಡಿಕೆ ಗಾತ್ರದ ಆಡು ಕೂಡಾ ಸಿಕ್ಕಿಲ್ಲ ಎಂದರು.

  • ಕೊರೊನಾ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜೋರು ವ್ಯಾಪಾರ

    ಕೊರೊನಾ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬಕ್ಕೆ ಜೋರು ವ್ಯಾಪಾರ

    -ಇತ್ತ ಕುರಿ ವ್ಯಾಪಾರ ಬಲು ಜೋರು

    ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ.

    ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ ಹಿನ್ನೆಲೆ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿಲ್ಲ ಅಂತ ಅಸಮಧಾನ ತೋಡಿಕೊಂಡಿದ್ದಾರೆ.

    ವರಮಹಾಲಕ್ಷ್ಮಿ ಹಬ್ಬದ ವ್ಯಾಪಾರ ಒಂದು ಕಡೆಯಾದ್ರೆ ಇನ್ನೊಂದೆಡೆ ಬಕ್ರಿದ್ ಹಿನ್ನೆಲೆ ಕುರಿಗಳ ವ್ಯಾಪಾರವೂ ಜೋರಾಗಿದೆ. ರಾಯಚೂರು ನಗರಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಕುರಿಗಳನ್ನ ತಂದು ಮಾರಾಟ ಮಾಡುತ್ತಿದ್ದಾರೆ. ಕೊರೊನಾ ಆತಂಕದ ನಡುವೆ ಬಕ್ರಿದ್ ಹಬ್ಬದ ಖರೀದಿ ಜೋರಾಗಿ ನಡೆದಿದೆ.

    ಆಗಸ್ಟ್ 1 ರಂದು ಬಕ್ರಿದ್ ಹಬ್ಬಕ್ಕೆ ಕುರ್ಬಾನಿ ನೀಡಲು ಮುಸ್ಲಿಂ ಬಾಂಧವರು ಕುರಿಗಳ ಖರೀದಿ ಮಾಡುತ್ತಿದ್ದಾರೆ. 12 ಸಾವಿರದಿಂದ 60 ಸಾವಿರ ರೂ. ವರೆಗೆ ಒಂದು ಕುರಿ ಮಾರಾಟ ನಡೆದಿದೆ. ಕೊರೊನಾ ವ್ಯಾಪಾಕವಾಗುತ್ತಿದ್ದರೂ, ಎಚ್ಚೆತ್ತುಕೊಳ್ಳದ ಜನತೆ ಹಬ್ಬದ ಸಂಭ್ರಮದ ಗುಂಗಿನಲ್ಲಿದ್ದಾರೆ.

     

  • ನಜೀರ್ ಅಹ್ಮದ್ ನಿವಾಸದಲ್ಲಿ ‘ಕೈ’ ನಾಯಕರಿಗೆ ಭರ್ಜರಿ ಬಕ್ರೀದ್ ಬಾಡೂಟ

    ನಜೀರ್ ಅಹ್ಮದ್ ನಿವಾಸದಲ್ಲಿ ‘ಕೈ’ ನಾಯಕರಿಗೆ ಭರ್ಜರಿ ಬಕ್ರೀದ್ ಬಾಡೂಟ

    ಬೆಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಿ ಜನರು ತುತ್ತು ಅನ್ನಕ್ಕಾಗಿ ಪರಡಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಕಷ್ಟ ಕೇಳ ಬೇಕಾದ ನಾಯಕರು ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

    ಇಂದು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ  ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಹ್ವಾನವನ್ನು ನೀಡಿದ್ದು, ಹಬ್ಬದ ಸಂಭ್ರಮದಲ್ಲಿ ಭಾಗಹಿಸಿದ್ದ ನಾಯಕರು ಬಾಡೂಟ ಸವಿದಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಇದ್ದರೂ ಕೂಡ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಆ ಭಾಗದ ನಾಯಕರೇ ಇಂದು ನಜೀರ್ ಅಹ್ಮದ್ ಅವರ ನಿವಾಸದಲ್ಲಿ ನಡೆದ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಕೆಜೆ ಜಾರ್ಜ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂಬಿ ಪಾಟೀಲ್, ಮಹದೇವ ಪ್ರಸಾದ್, ಜಮೀರ್ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

  • ಬೀದರ್‌ನಲ್ಲಿ ಮಳೆಗಾಗಿ ಮುಸ್ಲಿಮರಿಂದ ಪ್ರಾರ್ಥನೆ

    ಬೀದರ್‌ನಲ್ಲಿ ಮಳೆಗಾಗಿ ಮುಸ್ಲಿಮರಿಂದ ಪ್ರಾರ್ಥನೆ

    ಬೀದರ್: ಒಂದು ಕಡೆ ಭೀಕರ ಪ್ರವಾಹದಿಂದ ರಾಜ್ಯದ ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿಸಿದ್ದರೆ, ಗಡಿ ಜಿಲ್ಲೆ ಬೀದರ್‌ನಲ್ಲಿ ಮಾತ್ರ ಬರಗಾಲ ತಾಂಡವಾಡುತ್ತಿದೆ.

    ಬರಗಾಲದಿಂದ ತತ್ತರಿಸಿ ಹೋಗಿರುವ ಜಿಲ್ಲೆಯ ಜನರಿಗೆ ವರುಣ ದೇವ ಕೃಪೆ ತೋರಲಿ ಎಂದು ಬೀದರ್‌ನಲ್ಲಿ ಇಂದು ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಮತ್ತೊಂದು ಕಡೆ ಪ್ರವಾಹದಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ನಿರಾಶ್ರಿತರರಿಗೆ ದೇಣಿಗೆ ಸಂಗ್ರಹ ಮಾಡುವ ಮೂಲಕ ಮುಸ್ಲಿಂ ಭಾಂದವರು ಮಾನವೀಯತೆ ಮೆರೆದಿದ್ದಾರೆ.

    ಸಾವಿರಾರು ಮುಸ್ಲಿಂ ಭಾಂದವರು ಜಿಲ್ಲೆಯ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಎಲ್ಲಾ ಜಾತಿ, ಧರ್ಮ ಒಂದೇ ಎಂಬ ಸಾಮಾಜಿಕ ಸಂದೇಶವನ್ನು ಸಾರಿ ಸಾರಿ ಹೇಳಿದರು. ಈ ವೇಳೆ ಭೀಕರ ಪ್ರವಾಹಕ್ಕೆ ಬಿಜೆಪಿ ನಾಯಕರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ರಹೀಂ ಖಾನ್ ತೀವ್ರ ವಾಗ್ದಾಳಿ ನಡೆಸಿದರು.

    ಬಿಜೆಪಿಯವರು ಯಾವಾಗಲು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಎಲ್ಲರೂ ಸೇರಿ ಕೆಲಸ ಮಾಡಿದ್ರೇನೆ ಆಗಲ್ಲಾ, ಆದ್ರೆ ಬಿಎಸ್‍ವೈ ಒಬ್ಬರಿಂದ ಆಗುತ್ತಾ? ಈ ಭೀಕರ ಪ್ರವಾಹ ಸಮಸ್ಯೆಗೆ ಬಿಜೆಪಿಯ ಕೇಂದ್ರ ಸರ್ಕಾರ ಶೀಘ್ರ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ರಹೀಂ ಖಾನ್ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.