Tag: bakery

  • ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ – ರಾಯಚೂರಲ್ಲಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ

    ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ – ರಾಯಚೂರಲ್ಲಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ದಾಳಿ

    ರಾಯಚೂರು: ನಗರದಲ್ಲಿ ರಾತ್ರೋರಾತ್ರಿ ಏಕಾಏಕಿ ಹೋಟೆಲ್, ಬೇಕರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ರಾಸಾಯನಿಕ ಬಣ್ಣಗಳ ಬಳಕೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ, ಆಹಾರ ಸುರಕ್ಷತೆ ನಿಯಮ ಉಲ್ಲಂಘಿಸಿದ ಮಾಲೀಕರಿಗೆ ದಂಡ ವಿಧಿಸಿದೆ.

    ನಗರದ ಸ್ಟೇಷನ್ ರಸ್ತೆ, ಮಂತ್ರಾಲಯ ರಸ್ತೆಯ ಹೋಟೆಲ್‌ಗಳ ಮೇಲೆ ರಾಯಚೂರು (Raichur) ಉಪವಿಭಾಗ ಸಹಾಯಕ ಆಯುಕ್ತ ಗಜಾನನ ಬಾಳೆ ನೇತೃತ್ವದಲ್ಲಿ ದಾಳಿ ನಡೆದಿದೆ. ರಾಯಚೂರು ತಹಶೀಲ್ದಾರ್ ಹಾಗೂ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳ ತಂಡ ಸುಮಾರು 10 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದೆ. ಇದನ್ನೂ ಓದಿ: ಕೊಪ್ಪಳ | ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ – 35 ಟನ್ ರೇಷನ್ ಸಾಗಿಸ್ತಿದ್ದ ಲಾರಿ ವಶಕ್ಕೆ

    ಮಾಂಸಾಹಾರ ಹೋಟೆಲ್‌ಗಳಲ್ಲಿ ರಾಸಾಯನಿಕ ಬಣ್ಣಗಳ ಬಳಕೆ ಪತ್ತೆಯಾಗಿದೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿರುವ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ 50 ಸಾವಿರ ರೂ. ದಂಡ ವಿಧಿಸಿ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

  • ಆನೇಕಲ್ | ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ ಬಿಎಂಟಿಸಿ ಬಸ್

    ಆನೇಕಲ್ | ನಿಯಂತ್ರಣ ತಪ್ಪಿ ಬೇಕರಿಗೆ ನುಗ್ಗಿದ ಬಿಎಂಟಿಸಿ ಬಸ್

    ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್‌ವೊಂದು (BMTC) ಬೇಕರಿಗೆ ನುಗ್ಗಿದ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಜಿಗಿಣಿಯಲ್ಲಿ  ನಡೆದಿದೆ.

    ಬಿಎಂಟಿಸಿ ಬಸ್ ಮುಂಜಾನೆ ಬನ್ನೇರಘಟ್ಟದಿಂದ ಜಿಗಣಿ ಕಡೆಗೆ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿ ಬೇಕರಿಗೆ ನುಗ್ಗಿದೆ. ಬೆಳಗ್ಗೆ ಯಾರೂ ಗ್ರಾಹಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಜೊತೆಗೆ ಬೇಕರಿ ಇನ್ನೂ ಓಪನ್ ಮಾಡದ ಹಿನ್ನೆಲೆ ಗ್ರಾಹಕರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ: ಪತ್ನಿ ಕಿರುಕುಳಕ್ಕೆ ಬೇಸತ್ತು, ವೀಡಿಯೋ ಮಾಡಿಟ್ಟು ಟೆಕ್ಕಿ ಆತ್ಮಹತ್ಯೆ

    ಇನ್ನು ಚಾಲಕ ಬಹುಶಃ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ. ಸದ್ಯ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ಚಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: `ಕೈ’ ಸರ್ಕಾರ ಬಂದ್ಮೇಲೆ ಜನಿವಾರ, ಶಿವದಾರ, ಉಡುದಾರಕ್ಕೂ ಕತ್ತರಿ ಬೀಳ್ತಿದೆ, ಹಿಜಬ್‌ಗೆ ಬಹುಪರಾಕ್ ನಡೀತಿದೆ: ಆರ್.ಅಶೋಕ್

  • ಫ್ರೀಯಾಗಿ ಸಿಗರೇಟ್ ನೀಡದ್ದಕ್ಕೆ ಬೇಕರಿ ಮಾಲೀಕನ ಮೇಲೆಯೇ ಹಲ್ಲೆ

    ಫ್ರೀಯಾಗಿ ಸಿಗರೇಟ್ ನೀಡದ್ದಕ್ಕೆ ಬೇಕರಿ ಮಾಲೀಕನ ಮೇಲೆಯೇ ಹಲ್ಲೆ

    ಬೆಂಗಳೂರು: ರಾತ್ರಿ ವೇಳೆ ಬಂದು ಟೀ, ಸಿಗರೇಟು ಫ್ರೀಯಾಗಿ ನೀಡುವಂತೆ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು (Chikkabidarakallu) ಗ್ರಾಮದ ರಾಘವೇಂದ್ರ ಬೇಕರಿಯಲ್ಲಿ ನಡೆದಿದೆ.

    ಬೇಕರಿ ಮಾಲೀಕ ಮಂಜಯ್ಯ ಶೆಟ್ಟಿ ಹಲ್ಲೆಗೊಳಗಾಗಿದ್ದಾರೆ. ಭಾನುವಾರ ರಾತ್ರಿ 9:20ರ ಸುಮಾರಿಗೆ ಬೇಕರಿ ಮುಚ್ಚುವ ಸಮಯಕ್ಕೆ ರೌಡಿಗಳ ಗುಂಪೊಂದು ಬಂದಿದೆ. ಬೇಕರಿ ಬಳಿ ಬಂದು ಟೀ, ಸಿಗರೇಟು ಇನ್ನಿತರ ವಸ್ತುಗಳನ್ನ ಫ್ರೀಯಾಗಿ ನೀಡುವಂತೆ ಗಲಾಟೆ ಮಾಡಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಇದನ್ನೂ ಓದಿ: ಬಿರಿಯಾನಿ ಪಾರ್ಸೆಲ್‌ಗಾಗಿ 15 ನಿಮಿಷ ನಿಂತ ಬಸ್ – ಬಿಎಂಟಿಸಿ ವಿರುದ್ಧ ಪ್ರಯಾಣಿಕರು ಗರಂ

    ಹಲ್ಲೆ ಮಾಡುವ ದೃಶ್ಯ ಬೇಕರಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾದ ಬೇಕರಿ ಮಾಲೀಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪದೇ ಪದೇ ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಕಾಂಡಿಮೆಟ್ಸ್ ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸುವ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಗ್ರಹಿಸಿದ್ದಾರೆ.

    ಈ ಪ್ರಕರಣದಲ್ಲಿ ಅಂಗಡಿ ಪಕ್ಕದ ರಸ್ತೆಯ ಆನಂದ್ ಹಾಗೂ ಇನ್ನಿತರರು ಹಲ್ಲೆ ನಡೆಸಿದ್ದು, ಖಂಡನೀಯ. ಕೂಡಲೇ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಕಾರ್ಮಿಕ ಸಂಘಗಳ ಮುಖ್ಯಸ್ಥರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಕುದುರೆ ಹಿಡಿದು ಓಡಿದ ವಿನೀಶ್‌ – ದರ್ಶನ್‌ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋ ನೋಡಿ

  • ಗಂಗೆ ಮುಟ್ಟಿ ಆಣೆ ಮಾಡಲು ಹೋದವರು ನೀರುಪಾಲು

    ಗಂಗೆ ಮುಟ್ಟಿ ಆಣೆ ಮಾಡಲು ಹೋದವರು ನೀರುಪಾಲು

    ಹಾಸನ: ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದ ಸ್ನೇಹಿತರಿಬ್ಬರು ಆಣೆ-ಪ್ರಮಾಣ ಮಾಡಲು ಹೋಗಿ ನೀರುಪಾಲಾದ ದುರಂತ ಹಾಸನದಲ್ಲಿ (Hassan) ನಡೆದಿದೆ. ನೀರಿನಲ್ಲಿ ಮುಳುಗಿ ಇಬ್ಬರು ಜಲಸಮಾಧಿಯಾಗಿದ್ದಾರೆ.

    ಹಾಸನ ತಾಲೂಕಿನ ತೇಜೂರು ಗ್ರಾಮದ ಆನಂದ್ ಮತ್ತು ಚಂದ್ರು ಇಬ್ಬರು ಹಾಸನದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಸಮಾರಂಭಗಳಲ್ಲಿ ಸಿಹಿ ತಯಾರಿಸುವ ಕಂಟ್ರ್ಯಾಕ್ಟ್ ಕೂಡ ತೆಗೆದುಕೊಳ್ಳುತ್ತಿದ್ದರು. ಗುರುವಾರ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವ ಮುನ್ನ, ರಿಂಗ್ ರಸ್ತೆಯ ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದಾರೆ. ತಮ್ಮ ಬ್ಯುಸಿನೆಸ್‍ನ ಆರ್ಡರ್ ಒಪ್ಪಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು, ಬಾ.. ಗಂಗೆ ಮುಟ್ಟಿ ಸತ್ಯ ಮಾಡೋಣ ಎಂದು ಕುಡಿದ ಮತ್ತಿನಲ್ಲೇ ಇಬ್ಬರು ಕೆರೆಗೆ ಇಳಿದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರು ಪಾಲಾಗಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ ಹೊಡೆದು ಬೈಕ್‌ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು

    ಸಿಹಿ ತಿಂಡಿ ತಯಾರಿಸುವ ಕೆಲಸ ಮಾಡಲೆಂದು ಬೇರೆಯವರಿಂದ ಹಣ ಪಡೆದಿದ್ದರು. ನಂತರ ಕೆಲಸಕ್ಕೆ ಹೋಗಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಆಗಾಗ ಮಾತುಕತೆ ನಡೆಯುತಿತ್ತು. ಹಲವು ದಿನ ಕಳೆದರು ಹಣ ಪಡೆದಿದ್ದ ಮನಸ್ತಾಪ ತಿಳಿಯಾಗಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಆಣೆ-ಪ್ರಮಾಣ ಮಾಡಲು ಹೋಗಿ ನೀರು ಪಾಲಾಗಿದ್ದಾರೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ

    ಒಟ್ಟಾರೆ ಸ್ನೇಹಿತರ ಮಧ್ಯೆ ಹಣಕಾಸಿನ ವಿಚಾರ ಅತಿರೇಕಕ್ಕೆ ಹೋಗಿ ದುರಂತ ಸಾವಿನಲ್ಲಿ ಅಂತ್ಯವಾಗಿದೆ. ಚಂದ್ರುವಿಗೆ ಮದುವೆಯಾಗಿದ್ದು, ಈತನನ್ನೇ ನಂಬಿದ್ದ ಕುಟುಂಬ ಈಗ ಕಣ್ಣೀರಿಡುವಂತಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದರೋಡೆಗೆ ಯತ್ನಿಸಿದವನಿಗೆ ನ್ಯಾಪ್ಕಿನ್‍ನಲ್ಲೆ ಹೊಡೆದು ಓಡಿಸಿದ್ಲು

    ದರೋಡೆಗೆ ಯತ್ನಿಸಿದವನಿಗೆ ನ್ಯಾಪ್ಕಿನ್‍ನಲ್ಲೆ ಹೊಡೆದು ಓಡಿಸಿದ್ಲು

    ಅಂಗಡಿಗೆ ನುಗ್ಗಿ ದರೋಡೆಗೆ ಯತ್ನಿಸಿದ ಖದೀಮನಿಗೆ ಮಹಿಳೆಯೊಬ್ಬರು ನ್ಯಾಪ್ಕಿನ್‍ನಲ್ಲೆ ಹೊಡೆದು ಹೊರದಬ್ಬಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು, ಸಾಮಾನ್ಯವಾಗಿ ಕಳ್ಳನಿಂದ ಬಚಾವ್ ಆಗಲು ಮಹಿಳೆಯರು ಚಾಕು ಅಥವಾ ಪೆಪ್ಪರ್ ಸ್ಪ್ರೇ ಇಟ್ಟುಕೊಂಡಿರುತ್ತಾರೆ. ಆದರೆ ನೆದರ್‌ಲ್ಯಾಂಡ್‍ನ ಡೆವೆಂಟರ್‌ನ ಬೇಕರಿಯೊಂದರಲ್ಲಿ ಮಹಿಳೆಯೊಬ್ಬಳು ನ್ಯಾಪ್ಕಿನ್‍ನಲ್ಲಿಯೇ ಕಳ್ಳನಿಗೆ ತಕ್ಕ ಪಾಠ ಕಲಿಸಿದ್ದಾಳೆ.

    ಈ ಘಟನೆಯು ಮೆವ್ಲಾನಾ ಎಂಬ ಬೇಕರಿಯಲ್ಲಿ ನಡೆದಿದೆ. ಲತೀಫ್ ಪೆಕರ್ ಅವರು ತಮ್ಮ ಮಗನ ಬೇಕರಿಯನ್ನು ನ್ಯಾಪ್ಕಿನ್‍ನಲ್ಲಿ ಕ್ಲೀನ್ ಮಾಡುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಮುಖವಾಡ ಧರಿಸಿ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಏಕಾಏಕಿ ಖದೀಮ ಅಂಗಡಿಗೆ ನುಗ್ಗಿದ್ದಾನೆ. ನಂತರ ಲಾಕರ್‌ನಲ್ಲಿ ಹಣ ಕದಿಯಲು ಯತ್ನಿಸಿದ್ದಾನೆ. ಆದರೆ ಇದ್ಯಾವುದಕ್ಕೂ ಧೃತಿಗೆಡದೇ ಲತೀಫ್ ಅಂಗಡಿಯನ್ನು ಕ್ಲೀನ್ ಮಾಡುತ್ತಿದ್ದ ನ್ಯಾಪ್ಕಿನ್‍ನಲ್ಲಿ ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸುತ್ತಾ ಅಂಗಡಿಯಿಂದ ತಳ್ಳಲು ಯತ್ನಿಸುತ್ತಿರುತ್ತಾರೆ. ಅಷ್ಟರಲ್ಲಿ ವ್ಯಕ್ತಿಯೋರ್ವ ಅಂಗಡಿಗೆ ಬಂದಿದ್ದನ್ನು ಕಂಡು ಕಳ್ಳ ಓಡಿಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಈ ವೀಡಿಯೋವನ್ನು ತನ್ಸು ಯೆಗೆನ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಲತೀಫ್ ಪೆಕರ್ ಅವರು ಕ್ಲೀನ್ ಮಾಡುವ ಬಟ್ಟೆಯನ್ನು ಬಳಸಿ ಕಳ್ಳನನ್ನು ಓಡಿಸಿದ್ದಾರೆ. ಶುಚಿಗೊಳಿಸುವ ಬಟ್ಟೆಯ ಶಕ್ತಿ ಕಡಿಮೆ ಎಂದು ಅಂದಾಜು ಮಾಡಬೇಡಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿಯವರೆಗೂ ಈ ವೀಡಿಯೋವನ್ನು ಸುಮಾರು 34,000 ಮಂದಿ ವೀಕ್ಷಿಸಿದ್ದು, ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 25 ಸಾವಿರ ಬಿಸ್ಕೆಟ್, ಬೇಕರಿ ತಿಂಡಿಯಿಂದ ತೆಯ್ಯಂ ಕಲಾಕೃತಿ -ಕೇರಳ ಕಲಾಕಾರನ ಕೈಚಳಕ

    25 ಸಾವಿರ ಬಿಸ್ಕೆಟ್, ಬೇಕರಿ ತಿಂಡಿಯಿಂದ ತೆಯ್ಯಂ ಕಲಾಕೃತಿ -ಕೇರಳ ಕಲಾಕಾರನ ಕೈಚಳಕ

    ತಿರುವನಂತಪುರಂ: ಕೇವಲ ಬಿಸ್ಕೆಟ್, ಬೇಕರಿ ಉತ್ಪನ್ನಗಳನ್ನು ಬಳಸಿಕೊಂಡು ಕೇರಳದ ಕಲಾ ಪ್ರಕಾರವಾದ ತೆಯ್ಯಂ ಕಲಾಕೃತಿಯನ್ನು ತಯಾರಿಸಲಾಗಿದೆ. ಕಲಾಕಾರನ ಈ ಬುದ್ದಿವಂತಿಕೆ ಮತ್ತು ಕೈಚಳಕಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಕಲಾಕಾರ ಡಾವಿಂಚಿ ಸುರೇಶ್ ಈ ಕಾಲಕೃತಿಯನ್ನು ರಚಿಸಿದ್ದಾರೆ. ಇವರು ಸುಮಾರು 15 ಗಂಟೆಗಳ ಸಮಯ ತೆಗೆದುಕೊಂಡು 24 ಅಡಿ ಉದ್ದದ ತ್ಯೆಯಂ ಚಿತ್ರವನ್ನು ರಚಿಸಿದ್ದಾರೆ. ಕೇರಳದ ಕಣ್ಣೂರಿನ ಬೇಕರಿ ಅಂಗಡಿಯೊಂದರಲ್ಲಿ ತೆಯ್ಯಂ ಕಲಾಕೃತಿಯನ್ನು ರಚಿಸಿದ್ದಾರೆ. ಇದನ್ನೂ ಓದಿ:  ಗೊಬ್ಬರಕ್ಕೆ 28,6555 ಕೋಟಿ ಸಬ್ಸಿಡಿ

    ಹಲವು ಟೇಬಲ್‍ಗಳನ್ನು ಜೋಡಿಸಿ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನಿಟ್ಟು, ಬಳಿಕ ವಿವಿಧ ಬಿಸ್ಕೆಟ್ ಮತ್ತು ಬೇಕರಿ ಉತ್ಪನ್ನಗಳನ್ನು ಈ ಕಲಾಕೃತಿ ರಚಿಸಲು ಬಳಸಲಾಗಿದೆ. ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದರು. ಅವರ ಬೆಂಬಲದಿಂದ ಕೆಲಸ ಸುಲಭವಾಯಿತು. ನಾವು 24 ಅಡಿ ಉತ್ತದ ಈ ಕಲಾಕೃತಿಗೆ 25,000 ಬಿಸ್ಕೆಟ್ ಬಳಕೆ ಮಾಡಲಾಗಿದೆ. ಬೇಕರಿ ಉತ್ಪನ್ನಗಳಿಂದಲೇ ಮಾಡಿದ್ದೇವೆ ಎಂದು ಕಲಾಕಾರ ಸುರೇಶ್ ಹೇಳಿದ್ದಾರೆ. ಇದನ್ನೂ ಓದಿ:  ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಬೇಕರಿ ಬಾಣಸಿಗ ಮಹಮ್ಮದ್ ರಶೀದ್ ಬೇಕ್ ಸ್ಟೋರಿ ಬೇಕರಿ ಎಂಬ ಹೊಸ ಯೋಜನೆಯನ್ನು ಯೋಚಿಸಿ, ಈ ಚಿತ್ರವನ್ನು ರಚಿಸುವಂತೆ ಕಲಾಕಾರ ಸುರೇಶ್ ಬಳಿ ಕೇಳಿಕೊಂಡಿದ್ದೆ. ಬಳಿಕ ಎಲ್ಲರೂ ಸೇರಿ ಬೇಕರಿ ಅಂಗಡಿಯ ಹಾಲ್‍ನಲ್ಲಿ ಟೇಬಲ್ ಮೇಲೆ ವಿಶಿಷ್ಟ ಕಲಾಕೃತಿಯನ್ನು ರಚನೆ ಮಾಡಿದ್ದಾರೆ ಎಂದು ಮಹಮ್ಮದ್ ರಶೀದ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಮಂತಾರಿಂದ ದೂರವಾಗ್ತಿದ್ದಂತೆ ಹೊಸ ಮನೆ ಖರೀದಿಸಿದ ನಟ ನಾಗಚೈತನ್ಯ

  • ಶುಚಿತ್ವ ಕಾಪಾಡಿಕೊಳ್ಳದ ಹೋಟೆಲ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ

    ಶುಚಿತ್ವ ಕಾಪಾಡಿಕೊಳ್ಳದ ಹೋಟೆಲ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ

    ಯಾದಗಿರಿ: ನಗರದ ಹೊಟೇಲ್ ಮತ್ತು ಬೇಕರಿಗಳಲ್ಲಿ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ್ಯ ತೊರಿದ ಅಂಗಡಿ ಮಾಲಿಕರಿಗೆ ಯಾದಗಿರಿ ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಚಾಟಿ ಬೀಸಿದ್ದಾರೆ.

    ನಗರದ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ನೂತನ ಬಸ್ ನಿಲ್ದಾಣಗಳ ಹೋಟೆಲ್, ಬೇಕರಿ, ಬಿಡಾ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದ ವೇಳೆ ಹೋಟೆಲ್‍ನಲ್ಲಿ ಸ್ವಚ್ಛತೆ ಮರಿಚಿಕೆಯಾಗಿತ್ತು. ಇದನ್ನು ಕಂಡು ಗರಂ ಆದ ಪೌರಾಯುಕ್ತ ಭೀಮಣ್ಣ ನಾಯಕ, ಹೋಟೆಲ್ ಅಡುಗೆ ಕೋಣೆ ಪರಿಶೀಲನೆ ಮಾಡಿ ಸ್ವಚ್ಛತೆ ಕಾಪಾಡಬೇಕು ಇಲ್ಲದಿದ್ದರೆ ಅಂಗಡಿ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಅಂಗಡಿ ಮಾಲಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಹಲವು ಅಂಗಡಿ ಮುಂಗಟ್ಟುಗಳಲ್ಲಿ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ. ಇದರೊಂದಿಗೆ ನಿಯಮ ಮಿರಿ ಕೆಲ ಕಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದನ್ನು ಗಮನಿಸಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಸರ ಅಭಿಯಂತರ ಸಂಗಮೇಶ್ ಪಣಶೇಟ್ಟಿ, ಆರೋಗ್ಯ ನಿರೀಕ್ಷಕರಾದ ಶರಣಮ್ಮ ಇನ್ನಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

  • ಕೇಕ್ ಉತ್ಸವಕ್ಕೆ ಬಂದ ಜನರಿಗೆ ನಿರಾಸೆ

    ಕೇಕ್ ಉತ್ಸವಕ್ಕೆ ಬಂದ ಜನರಿಗೆ ನಿರಾಸೆ

    ಮೈಸೂರು: ಮಾಗಿ ಉತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ಕೇಕ್ ಉತ್ಸವದ ವೀಕ್ಷಣೆಗೆ ಬಂದವರಿಗೆ ಭಾರೀ ನಿರಾಸೆ ಉಂಟಾಗಿದೆ.

    ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಒಟ್ಟು ಮೂರು ದಿನಗಳ ಕಾಲ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಕೇಕ್ ಉತ್ಸವ ಜಿಲ್ಲಾಡಳಿತದಿಂದ ಆಯೋಜನೆಯಾಗಿದೆ. ಭಿನ್ನ ವಿಭಿನ್ನ ಮಾದರಿಯ ಕೇಕ್‍ನ ಆಕೃತಿಗಳು ಉತ್ಸವದಲ್ಲಿ ಇರುತ್ತವೆ ಎಂದು ಉತ್ಸವಕ್ಕೆ ಬಂದವರಿಗೆ ನಿರಾಸೆ ಉಂಟಾಗಿದೆ. ಯಾಕೆಂದರೆ ಕೇಕ್ ಉತ್ಸವದಲ್ಲಿ ಕೇವಲ ಎರಡೇ ಎರಡು ಕೇಕ್‍ನ ಆಕೃತಿ ಇವೆ. ಇನ್ನುಳಿದಂತೆ ಬಗೆ ಬಗೆಯ ಕೇಕ್ ಮತ್ತು ಚಾಟ್ಸ್ ತಿನಿಸುಗಳ ಮಾರಾಟಕ್ಕಿವೆ.

    ಕಳೆದ ವರ್ಷ ಬಹಳ ಅತ್ಯಾಕರ್ಷಕವಾಗಿ ಕೇಕ್ ಉತ್ಸವ ಮೂಡಿಬಂದಿದ್ದು, ಸಾರ್ವಜನಿಕರ ಗಮನ ಸೆಳೆದು ಪ್ರಶಂಸೆಗೆ ಪಾತ್ರವಾಗಿತ್ತು. ಕಳೆದ ವರ್ಷ ಕೇಕ್‍ನಿಂದ ನಿರ್ಮಿಸಿದ್ದ ಹಲವು ಬಗೆಯ ಆಕೃತಿಗಳು ನೋಡುಗರ ಮನ ಸೂರೆಗೊಂಡಿದ್ದವು. ಅದೇ ಗುಂಗಿನಲ್ಲಿ ಈ ಬಾರಿಯ ಕೇಕ್ ಉತ್ಸವ ವೀಕ್ಷಣೆಗೆ ಜನರು ಆಗಮಿಸಿದ್ದಾರೆ. ಆದರೆ ಅವರಿಗೆ ಕೇವಲ ಕೇಕ್, ಬೇಕರಿ ತಿನಿಸು, ಚುರುಮುರಿ, ಪಾನಿಪುರಿ, ಬಜ್ಜಿ ಮಾರಾಟ ಮಾಡುವ ಮಳಿಗೆಗಳು ಮಾತ್ರ ಕಂಡು ಬಂದಿದೆ. ಹೀಗಾಗಿ ಜನರು ಉತ್ಸವದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

  • ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ಲಕ್ನೋ: ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯುವುದು ಸಾಮಾನ್ಯ. ಆದರೆ ಲಕ್ನೋದ ಬೇಕರಿ ವ್ಯಾಪಾರಿಗಳು ಪಟಾಕಿ ರೂಪದಲ್ಲೇ ಸ್ವೀಟ್‍ಗಳನ್ನು ತಯಾರಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

    ದೀಪಾವಳಿಗೆ ಹೆಚ್ಚು ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯವಾಗುತ್ತದೆ. ಇದರ ಬದಲು ಪಟಾಕಿ ರೀತಿಯಲ್ಲೇ ಇರುವ ಈ ಸಿಹಿ ತಿನಿಸುಗಳನ್ನು ಕೊಂಡ ತಿನ್ನುವುದರಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು. ಇದರ ಜೊತೆಗೆ ಈ ಸಿಹಿ ತಿಂಡಿಗಳು ಆರೋಗ್ಯಕರ ಮತ್ತು ಶುಗರ್ ಫ್ರೀ ಆಗಿದ್ದು, ಎಲ್ಲರೂ ತಿನ್ನಬಹುದು ಎಂದು ವ್ಯಾಪಾರಿಗಳು ಈ ಪ್ಲಾನ್ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸ್ವೀಟ್ ವ್ಯಾಪಾರಿ ಕೃಷ್ಣ ಅಹಿರ್ವಾಲ್, ನಾವು ಈ ದೀಪಾವಳಿಗೆ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂದುಕೊಂಡಿದ್ದೇವು. ಈ ಕಾರಣದಿಂದಲೇ ಸಿಹಿ ತಿನಿಸುಗಳನ್ನು ಪಟಾಕಿಯ ರೀತಿಯಲ್ಲಿ ವಿನ್ಯಾಸ ಮಾಡಿದ್ದೇವೆ. ಕೆಲ ಗ್ರಾಹಕರು ಇದನ್ನು ನೋಡಿ ಬೇಕರಿಯಲ್ಲಿ ದೀಪಾವಳಿ ಪ್ರಯುಕ್ತ ಪಟಾಕಿ ಮಾರುತ್ತಿದ್ದಾರೆ ಎಂದು ಭಾವಿಸಿದ್ದರು. ನಂತರ ಅವು ಸ್ವೀಟ್ಸ್ ಎಂದು ತಿಳಿದಾಗ ಆಶ್ಚರ್ಯ ಪಟ್ಟರು ಎಂದು ಹೇಳಿದ್ದಾರೆ.

    ಈ ವಿಧಾನದಿಂದ ಕಾರ್ಪೊರೇಟ್ ಸಂಸ್ಥೆಯಲ್ಲಿ ನೌಕರಿಗೆ ಗಿಫ್ಟ್ ಕೊಡುವವರಿಗೆ ಉಪಯೋಗವಾಗಿದೆ. ಪಟಾಕಿ ಸಿಡಿಸಿ ಪರಿಸರವನ್ನು ಹಾಳು ಮಾಡುವ ಬದಲು ಈ ರೀತಿ ಆರೋಗ್ಯಕ್ಕೆ ಒಳ್ಳೆಯದಾಗುವ ಶುಗರ್ ಫ್ರೀ ತಿಂಡಿಗಳನ್ನು ತಿಂದರೆ ಒಳ್ಳೆಯದು. ಇದನ್ನು ಮಕ್ಕಳಿಗೂ ಕೊಡಬಹುದು ಇದರಿಂದ ಮಕ್ಕಳು ನಮಗೆ ಪಟಾಕಿ ಕೊಡಿಸಿ ಎಂದು ಹಠಮಾಡುವುದಿಲ್ಲ ಎಂದು ಅಹಿರ್ವಾಲ್ ಹೇಳಿದ್ದಾರೆ.

    ರಾಕೆಟ್ ಮತ್ತು ಬಾಂಬ್ ಸೇರಿದಂತೆ ಎಲ್ಲ ರೀತಿಯ ಪಟಾಕಿಗಳ ಮಾದರಿಯಲ್ಲಿ ತಿಂಡಿಗಳನ್ನು ವಿನ್ಯಾಸ ಮಾಡಿದ್ದೇವೆ. ಇದಕ್ಕೆ ಉತ್ತಮವಾದ ಪ್ಯಾಕಿಂಗ್ ಮಾಡಿದ್ದೇವೆ. ಈ ಎಲ್ಲವೂ ಜನರನ್ನು ಆಕರ್ಷಣೆ ಮಾಡುತ್ತಿದೆ. ಈಗ ಬಹಳ ಚೆನ್ನಾಗಿ ವ್ಯಾಪಾರವಾಗುತ್ತಿದೆ ಎಂದು ಬೇಕರಿ ಮಾಲೀಕ ಮನು ಅಗರ್ವಾಲ್ ಹೇಳಿದ್ದಾರೆ.

  • ಬೇಕರಿಯಲ್ಲೇ ಮಾಲೀಕ ಸಜೀವ ದಹನ

    ಬೇಕರಿಯಲ್ಲೇ ಮಾಲೀಕ ಸಜೀವ ದಹನ

    ವಿಜಯಪುರ: ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಪರಿಣಾಮ ಬೇಕರಿ ಮಾಲೀಕ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಮಾಧವರಾವ್ ಚೌಧರಿ(35) ಮೃತ ದುರ್ದೈವಿ. ಪಟ್ಟಣದ ವಿದ್ಯಾನಗರದ ಮುಖ್ಯ ರಸ್ತೆಯಲ್ಲಿ ಈ ಬೇಕರಿ ಇದ್ದು, ಮಾಧವರಾವ್ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಬೇಕರಿಯೊಳಗಿದ್ದ ದೀಪದಿಂದ ಬೇಕರಿಯೊಳಗೆ ಬೆಂಕಿ ತಗುಲಿದೆ.

    ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಾಧವರಾವ್ ರಾತ್ರಿ ಪೂಜೆ ಮಾಡಿ, ದೀಪ ಹಚ್ಚಿಟ್ಟು ತಾನೂ ಬೇಕರಿಯಲ್ಲೇ ಮಲಗಿದ್ದರು. ಬೇಕರಿ ಒಳಗಡೆ ಲಾಕ್ ಮಾಡಿ ಮಲಗಿದ್ದ ಮಾಧವರಾವ್ ಸಜೀವ ದಹನವಾಗಿದ್ದಾರೆ. ಬೆಳಗ್ಗಿನ ಜಾವ ಬೇಕರಿಯಿಂದ ಹೊಗೆ ಬರುತ್ತಿದ್ದುದನ್ನು ಕಂಡು ಸ್ಥಳೀಯರು ದೌಡಾಯಿಸಿದ್ದಾರೆ.

    ಬಳಿಕ ಸ್ಥಳೀಯರು ಬೇಕರಿಯ ಶೆಟರ್ ಮುರಿದು ಮಾಲೀಕನನ್ನು ಹೊರ ತೆಗೆದರು. ಆದರೆ ಅಷ್ಟರಲ್ಲೇ ಮಾಧವರಾವ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ ವ್ಯಕ್ತಿ ಮಾಧವರಾವ್ ಈ ಅಂಗಡಿಯನ್ನು ಬಾಡಿಗೆ ಪಡೆದಿದ್ದರು.

    ಈ ಬಗ್ಗೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.