Tag: Bajrang Dal activists

  • ಮೀನು ಸಾಗಾಟದ ಟೆಂಪೋದಲ್ಲಿ 12 ಟನ್ ಗೋಮಾಂಸ ಸಾಗಣೆ

    ಮೀನು ಸಾಗಾಟದ ಟೆಂಪೋದಲ್ಲಿ 12 ಟನ್ ಗೋಮಾಂಸ ಸಾಗಣೆ

    – ಭಜರಂಗದಳದ ಕಾರ್ಯಾಚರಣೆಯಿಂದ ಬಹಿರಂಗ

    ಮಂಗಳೂರು: ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಸಾಗಣೆ ಮಾಡುತ್ತಿದ್ದ ವೇಳೆ ಭಜರಂಗ ದಳದ ಕಾರ್ಯಕರ್ತರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿದ್ದಾರೆ.

    ಮಂಗಳೂರಿನಲ್ಲಿ ಘಟನೆ ನಡೆದಿದ್ದು, ಭಾರೀ ಪ್ರಮಾಣದಲ್ಲಿ ಗೋಮಾಂಸವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಂಗಳೂರಿನ ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ನಗರದ ಹೊರವಲಯದ ಅಡ್ಯಾರ್ ನಿಂದ ಮೀನು ಸಾಗಟದ ಟೆಂಪೋವನ್ನು ಭಜರಂಗದಳದ ಕಾರ್ಯಕರ್ತರು ಬೆನ್ನಟ್ಟಿಕೊಂಡು ಬಂದಿದ್ದರು. ಇದೇ ವೇಳೆ ಕಂಕನಾಡಿ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ನಗರದ ಪಡೀಲ್ ನಲ್ಲಿ ಟೆಂಪೋವನ್ನು ತಡೆದಿದ್ದಾರೆ.

    ಬಳಿಕ ತಪಾಸಣೆ ನಡೆಸಿದಾಗ ಮೀನು ಸಾಗಾಟದ ಟೆಂಪೋದಲ್ಲಿ ಬರೋಬ್ಬರಿ 12 ಟನ್ ಗೋಮಾಂಸ ಪತ್ತೆಯಾಗಿದ್ದು, ಪೊಲೀಸರು ಗೋಮಾಂಸವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಈ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರೋದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

    ಕಳೆದ ಒಂದು ವಾರದ ಹಿಂದೆ ಇದೇ ರೀತಿ ಹಾಲು ಸಾಗಾಟದ ಟೆಂಪೋದಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ಅಡ್ಡ ಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿತ್ತು.

  • ಮಗುಚಿ ಬಿದ್ದ ಕಾರು – ನಾಲ್ವರ ರಕ್ಷಣೆ

    ಮಗುಚಿ ಬಿದ್ದ ಕಾರು – ನಾಲ್ವರ ರಕ್ಷಣೆ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಸ್ಥಳದಲ್ಲಿದ್ದ ಭಜರಂಗದಳ ಕಾರ್ಯಕರ್ತರು ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಾಗುಂಡಿ ಬಳಿ ನಡೆದಿದೆ.

    ಎನ್.ಆರ್.ಪುರ ತಾಲೂಕಿನ ಮಾಗುಂಡಿ ಗ್ರಾಮದ ನಿವಾಸಿ ಸಲಾಂ ಅವರ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಬ್ಬೇಗೌಡ ಎಂಬವರ ಮನೆಯ ಬಳಿ ಮಗುಚಿ ಬಿದ್ದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಗಂಡ-ಹೆಂಡತಿ ಹಾಗೂ ಇಬ್ಬರು ಮಕ್ಕಳು ಇದ್ದರು ಎಂದು ತಿಳಿದು ಬಂದಿದೆ. ಕಾರು ಮಗುಚಿ ಬೀಳುತ್ತಿದ್ದಂತೆ ಕಾರಿನಲ್ಲಿದ್ದವರು ಕೂಗಾಡಿದ್ದಾರೆ. ಸ್ಥಳದಲ್ಲಿದ್ದ ಭಜರಂಗದಳ ಯುವಕರು ಕಾರನ್ನ ಎತ್ತಿ ನಿಲ್ಲಿಸಿ ಗಾಯಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಭಜರಂಗದಳದ ಜಿಲ್ಲಾ ಸಂಚಾಲಕ ಶಶಾಂಕ್ ಹೇರೂರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮ್ಮ ಮೊದಲ ಆದ್ಯತೆ ಮಾನವೀಯತೆ. ಏಕೆಂದರೆ ನಮ್ಮ ಧರ್ಮ ನಮಗೆ ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನ ಕಲಿಸಿಕೊಟ್ಟಿದೆ ಎಂದು ಸಂಘಟನೆಯ ಕಾರ್ಯಕರ್ತರೊಬ್ಬರು ಹೇಳಿದರು.

  • ಪಾರ್ಕಿನಲ್ಲಿ ಸಿಕ್ಕಿಬಿದ್ದ ಜೋಡಿಗೆ ಮದ್ವೆ

    ಪಾರ್ಕಿನಲ್ಲಿ ಸಿಕ್ಕಿಬಿದ್ದ ಜೋಡಿಗೆ ಮದ್ವೆ

    ಹೈದರಾಬಾದ್: ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನದ ಪಾರ್ಕ್ ನಲ್ಲಿದ್ದ ಯುವಕ-ಯುವತಿಗೆ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ಹೈದರಾಬಾದ್ ನಲ್ಲಿ ಬಜರಂಗದಳದ ಕಾರ್ಯಕರ್ತರು ಪ್ರೇಮಿಗಳ ದಿನವನ್ನು ವಿರೋಧಿಸಿ ಅಂಗಡಿ, ಪಬ್ ಮತ್ತು ಕಚೇರಿಗಳನ್ನು ಮುಂಚಿತವಾಗಿ ಮುಚ್ಚಿಸಿ ರ‍್ಯಾಲಿ ಮತ್ತು ಪ್ರತಿಭಟನೆಗಳನ್ನು ಮಾಡುತ್ತಿದ್ದರು. ಈ ವೇಳೆ ಹೈದರಾಬಾದಿನ ಕೊಂಡಲಕೋಯ ಆಕ್ಸಿಜನ್ ಪಾರ್ಕ್ ನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ-ಯುವತಿಯನ್ನು ನೋಡಿದ್ದಾರೆ.

    ಕಾರ್ಯಕರ್ತರು ಅವರು ಬಳಿ ಹೋಗಿ ನೀವು ನಿಜವಾಗಿಯೂ ಪ್ರೀತಿಸುತ್ತಿದ್ದರೆ ಮದುವೆಯಾಗಿ ಎಂದು ಬಲವಂತದಿಂದ ಯುವಕನಿಂದ ಯುವತಿಗೆ ಅರಿಶಿಣದ ದಾರ ಕಟ್ಟಿಸುವ ಮೂಲಕ ಮದುವೆ ಮಾಡಿಸಿದ್ದಾರೆ. ಈ ಎಲ್ಲ ದೃಶ್ಯವನ್ನು ಕಾರ್ಯಕರ್ತರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಹೈದರಾಬಾದ್ ನಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸುವ ಜೋಡಿಯ ಮೇಲೆ ಕಣ್ಣಿಡಲು ರಾಜ್ಯದಾದ್ಯಂತ ಸುಮಾರು 30 ತಂಡಗಳನ್ನು ಕಳುಹಿಸುವ ಯೋಜನೆ ಇದೆ ಎಂದು ಮುಂಚಿತವಾಗಿವೇ ವಿಶ್ವ ಹಿಂದೂ ಪರಿಷತ್ ತಿಳಿಸಿತ್ತು. ಅಷ್ಟೇ ಅಲ್ಲದೇ ಪಾರ್ಕ್, ಶಾಪಿಂಗ್ ಮಳಿಗೆ ಹಾಗೂ ಮುಂತಾದ ಪ್ರತಿದಿನ ಓಡಾಡುವ ಸ್ಥಳಗಳನ್ನು ಹೊರತುಪಡಿಸಿ ಆಫೀಸ್ ಹೊರಗಡೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಘೋಷಿಸಿತ್ತು.

    ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೆದ್ಕಲ್ ಪೊಲೀಸರು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ದಂಪತಿ ತಾವು ಸ್ವ ಇಚ್ಛೆಯಿಂದ ವಿವಾಹವಾಗಿದ್ದೇವೆ ಎಂದು ಹೇಳಿ ದೂರು ನೀಡಲಿಲ್ಲ. ಆದರೂ ನವದಂಪತಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಉಪ ಆಯುಕ್ತ ಪಿವಿ ಪದ್ಮಜಾ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv