Tag: bajarangi 2

  • ‘ಭಜರಂಗಿ-2’ ಚಿತ್ರತಂಡಕ್ಕೆ ಮತ್ತೊಂದು ಶಾಕ್- 60 ಮಂದಿ ಕಲಾವಿದರಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ

    ‘ಭಜರಂಗಿ-2’ ಚಿತ್ರತಂಡಕ್ಕೆ ಮತ್ತೊಂದು ಶಾಕ್- 60 ಮಂದಿ ಕಲಾವಿದರಿದ್ದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ

    ನೆಲಮಂಗಲ: ‘ಭಜರಂಗಿ – 2’ ಚಿತ್ರದ ಶೂಟಿಂಗ್ ವೇಳೆ ಸಿನಿಮಾ ಸೆಟ್‍ಗೆ ಬೆಂಕಿ ಹೊತ್ತಿಕೊಂಡಿದ್ದ ಬೆನ್ನಲ್ಲೆ ಚಿತ್ರತಂಡಕ್ಕೆ ಇದೀಗ ಮತ್ತೊಂದು ಕಹಿ ಘಟನೆ ಎದುರಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮೋಹನ್ ಬಿ.ಕೆರೆ ಸ್ಟುಡಿಯೋ ಬಳಿ ‘ಭಜರಂಗಿ -2’ ಸಿನಿಮಾ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಅಪಘಾತವಾಗಿದೆ. ಎಂದಿನಂತೆ ಬಸ್ ಶೂಟಿಂಗ್ ತೆರಳುತ್ತಿತ್ತು. ಬಸ್ಸಿನಲ್ಲಿ ಸುಮಾರು 60ಕ್ಕೂ ಹೆಚ್ಚು ಕಲಾವಿದರಿದ್ದರು. ಆದರೆ ಬಸ್ ಮೋಹನ್ ಬಿ.ಕೆರೆ ಸ್ಟುಡಿಯೋದತ್ತ ಹೋಗುತ್ತಿದ್ದಾಗ ಮೊದಲು ಕಾರಿಗೆ ಡಿಕ್ಕಿಯಾಗಿ ನಂತರ ರಸ್ತೆಯ ಪಕ್ಕದಲ್ಲಿದ್ದ ಹೆವಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.

    ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಸ್ ಮೇಲೆಯೇ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇತ್ತೀಚೆಗಷ್ಟೆ ಸುಮಾರು ಒಂದು ಕೋಟಿಯಷ್ಟು ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದ ಗುಹೆಯ ಸೆಟ್‍ಗೆ ಬೆಂಕಿ ತಗುಲಿತ್ತು. ಅಂದು ಕೂಡ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

    ಈ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.