Tag: bajarangadal

  • ವ್ಯಾಲೆಂಟೈನ್ಸ್ ಡೇಗೆ ಬಜರಂಗದಳ ವಿರೋಧ

    ವ್ಯಾಲೆಂಟೈನ್ಸ್ ಡೇಗೆ ಬಜರಂಗದಳ ವಿರೋಧ

    ಮಂಗಳೂರು: ಪ್ರೇಮಿಗಳ ದಿನಕ್ಕೂ ಕರಾವಳಿಗೂ ಎಣ್ಣೆ ಸೀಗೆಕಾಯಿಯ ಸಂಬಂಧ. ಪ್ರತೀವರ್ಷ ವ್ಯಾಲೆಂಟೈನ್ಸ್ ಡೇ ಬಂದಾಗ ಕರಾವಳಿಯಲ್ಲಿ ಪ್ರೇಮಿಗಳ ದಿನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಇದೀಗ ಈ ಬಾರಿಯೂ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿದೆ.

    ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಜರಂಗದಳ ದ.ಕ. ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಭಾರತ ದೇಶವು ಪುಣ್ಯ ಭೂಮಿ ವೈಶಿಷ್ಟ್ಯವಾದ ಸಂಸ್ಕೃತಿ ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ. ಅಲ್ಲದೆ ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದ್ದು, ಶತಮಾನಗಳ ಇತಿಹಾಸವನ್ನು ಹೊಂದಿದೆ. ಅದಾಗಿಯೂ ಭಾರತೀಯ ಸಂಸ್ಕೃತಿಗೆ ಸೆಡ್ಡು ಹೊಡೆಯುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ ಎಂದು ಹೇಳಿದ್ದಾರೆ.

    ಈ ಪಾಶ್ಚಿಮಾತ್ಯ ಸಂಸ್ಕೃತಿಗಳು ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ನಮ್ಮ ಅಮೂಲ್ಯವಾದ ಸಂಸ್ಕೃತಿ ಆಚರಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆ ಪ್ರೇಮಿಗಳ ದಿನ. ಹೀಗಾಗಿ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತದೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

    ಭಾರತೀಯ ಪರಂಪರೆಯಲ್ಲಿ ಪ್ರೇಮಿಗಳ ದಿನಾಚರಣೆ ಸರಿಯಲ್ಲ. ಆದುದರಿಂದ ಪ್ರೇಮಿಗಳ ದಿನಾಚರಣೆ ಆಚರಿಸಬಾರದು. ನಗರದ ಎಲ್ಲಾ ಹೂ ಅಂಗಡಿ ಮತ್ತು ಗಿಫ್ಟ್ ಸೆಂಟರ್ ಗಳು ಪ್ರೇಮಿಗಳ ದಿನಾಚರಣೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು. ಈ ಮೂಲಕ ಈ ಆಚರಣೆಗೆ ಬೆಂಬಲ ಸೂಚಿಸಬಾರದು ಎಂದು ವಿನಂತಿಸುವುದಾಗಿ ಪುನೀತ್ ತಿಳಿಸಿದ್ದಾರೆ.

  • ಬಿಜೆಪಿಯವರು ಉಗ್ರರು ಹೇಳಿಕೆಗೆ ಖಂಡನೆ- ಕೇಸರಿ ಪಡೆಯಿಂದ ಇಂದು ಜೈಲ್ ಭರೋ ಚಳವಳಿ

    ಬಿಜೆಪಿಯವರು ಉಗ್ರರು ಹೇಳಿಕೆಗೆ ಖಂಡನೆ- ಕೇಸರಿ ಪಡೆಯಿಂದ ಇಂದು ಜೈಲ್ ಭರೋ ಚಳವಳಿ

    ಬೆಂಗಳೂರು: ಬಿಜೆಪಿ, ಆರ್ ಎಸ್‍ಎಸ್‍ನವರು ಉಗ್ರಗಾಮಿಗಳು ಎಂದಿರೋ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಇವತ್ತು ಜೈಲ್ ಭರೋ ಕೈಗೊಂಡಿದೆ.

    ನಾನೂ ಉಗ್ರ, ನನ್ನನ್ನು ಬಂಧಿಸಿ ಘೋಷಣೆಯಡಿ ಬಿಜೆಪಿ ಕಾರ್ಯಕರ್ತರು ಜೈಲಿಗೆ ಮುತ್ತಿಗೆ ಹಾಕಲಿದ್ದಾರೆ. ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ಜೈಲಿಗೆ ಮುತ್ತಿಗೆ ಹಾಕ್ಬೇಕಿತ್ತು. ಆದ್ರೆ ವೀವೇಕಾನಂದ ಜಯಂತಿ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಜೈಲ್ ಭರೋ ಇರಲ್ಲ. ಇದನ್ನೂ ಓದಿ: ಬಿಜೆಪಿಯವರು ಉಗ್ರರು ಎಂದು ಹೇಳಿಕೆ ನೀಡಿ ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ

    ಇತ್ತೀಚೆಗೆ ಚಾಮರಾಜನಗರದ ನಾಗವಳ್ಳಿಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿ, ಬಜರಂಗದಳ ಹಾಗೂ ಆರ್ ಎಸ್‍ಎಸ್ ನಲ್ಲೂ ಉಗ್ರಗಾಮಿಗಳಿದ್ದಾರೆ ಎಂದು ಹೇಳಿಕೆ ನೀಡಿದ್ದರು.

    ಆದ್ರೆ ಈ ಬಗ್ಗೆ ಗುರುವಾರದಂದು ಸ್ಪಷ್ಟನೆ ನೀಡಿದ ಸಿಎಂ, ನಾನು, ಎಲ್ಲಿ ಯಾರಿಗೆ ಉಗ್ರಗಾಮಿ ಎಂದಿದ್ದೇನೆ. ಆರ್ ಎಸ್‍ಎಸ್, ಬಜರಂಗದಳದವರು ಹಿಂದುತ್ವದ ಹೆಸರಲ್ಲಿ ಉಗ್ರಗಾಮಿಗಳಂತೆ ವರ್ತಿಸ್ತಿದ್ದಾರೆ ಅಂತ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಅಂತ ಹೇಳಿದ್ರು. ಇದನ್ನೂ ಓದಿ: ಬಿಜೆಪಿ, ಆರ್ ಎಸ್ಎಸ್‍ನಲ್ಲೂ ಉಗ್ರರಿದ್ದಾರೆ: ಸಿಎಂ ಸಿದ್ದರಾಮಯ್ಯ

    ಸಮಾಜದ ಶಾಂತಿ ಕದಡುವ ಆರ್ ಎಸ್‍ಎಸ್ ಆಗಲಿ, ಪಿಎಫ್‍ಐ ಆಗಲಿ ಯಾವುದೇ ಸಂಘಟನೆಯಾದ್ರೂ ನಾವು ಕ್ರಮ ತೆಗೆದುಗೊಳ್ಳುತ್ತೇವೆ. ಕೋಮುವಾದ ಸಂಘಟನೆಗಳನ್ನು ಸಹಿಸುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು. ಸಿಎಂ ಅವರ ಈ ಹೇಳಿಕೆಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು.

  • ಬಶೀರ್ ಹತ್ಯೆ ಖಂಡಿಸಿ ಬಿಜೆಪಿಯವರೇಕೆ ಬೀದಿಗಿಳಿದಿಲ್ಲ- ಸಿಎಂ ಪ್ರಶ್ನೆ

    ಬಶೀರ್ ಹತ್ಯೆ ಖಂಡಿಸಿ ಬಿಜೆಪಿಯವರೇಕೆ ಬೀದಿಗಿಳಿದಿಲ್ಲ- ಸಿಎಂ ಪ್ರಶ್ನೆ

    ಶಿವಮೊಗ್ಗ: ಶವದ ಮೇಲೆ ರಾಜಕೀಯ ಮಾಡುವುದನ್ನು ಆರ್ ಎಸ್‍ಎಸ್ ಮತ್ತು ಭಜರಂಗ ದಳ ಬಿಡಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಬಶೀರ್ ಹತ್ಯೆ ಸಂಬಂಧ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಮುಸ್ಲಿಂ ಯುವಕ ಮೃತಪಟ್ಟಿದ್ದು ಇದಕ್ಕೆ ಯಾಕೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ. ಶವದ ಮೇಲೆ ರಾಜಕೀಯ ಮಾಡುವುದನ್ನು ಆರ್ ಎಸ್‍ಎಸ್ ಮತ್ತು ಭಜರಂಗ ದಳ ಬಿಡಬೇಕು ಎಂದಿದ್ದಾರೆ.

    ದ್ವೇಷದ ರಾಜಕರಾಣ ಮತ್ತು ಕೋಮುವಾದಿ ಭಾವನೆಗಳನ್ನು ಕೆರಳಿಸಿರುವುದಕ್ಕೆ ಯಾವತ್ತು ಕೊನೆಯಿಲ್ಲ. ಇದರಿಂದ ಸಮಾಜಕ್ಕೆ ಹಾನಿಯಾಗುತ್ತದೆ. ಅಲ್ಲದೇ ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತದೆ. ಯರೂ ಕೂಡ ಶವ ಮತ್ತು ಸತ್ತವನ ಮೇಲೆ ರಾಜಕಾರಣ ಮಾಡಲು ಹೋಗಬಾರದು. ಅದು ಬಿಟ್ಟು ಅವರ ಕುಟುಂಬದವರಿಗೆ ಸಾಂತ್ವನ ಹೇಳಬೇಕು. ಒಟ್ಟಿನಲ್ಲಿ ಸಮಾಜದಲ್ಲಿ ಸಾಮರಸ್ಯ ಕಾಪಾಡೋದು ನಮ್ಮೆಲ್ಲರ ಜವಾಬ್ದಾರಿ. ಅದನ್ನು ಎಲ್ಲಾ ಪಕ್ಷದವರು ಮಾಡಬೇಕು ಅಂದ್ರು.

    ಬಿಜೆಪಿಯವರು ಒಬ್ಬರು ಸತ್ತ ತಕ್ಷಣ ಯಾಕೆ ಅಲ್ಲಿ ಪ್ರತಿಭಟನೆ ನಡೆಸುತ್ತಾರೆ. ಈವಾಗ ಮುಸ್ಲಿಂ ಒಬ್ಬ ಸತ್ತಿದ್ದಾನೆ ಅಲ್ವ. ಈವಾಗ ಯಾಕೆ ಅಲ್ಲಿ ಪ್ರತಿಭಟನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಧಾರ್ಮಿಕ ಭಾನವೆಗಳನ್ನು ಕೆರಳಿಸರೋದ್ರಿಂದ ಯಾರಿಗೆ ಅನುಕೂಲವಾಗುತ್ತದೆ. ಇದರಿಂದ ಸಮಾಜಕ್ಕೆ ಹಾನಿಯಾಗುತ್ತದೆ. ಶಾಂತಿ, ನೆಮ್ಮದಿ ಇರೋದಿಲ್ಲ. ಹೀಗಾಗಿ ಇಂತವುಗಳನ್ನು ಬಿಟ್ಟು ಬಿಡಬೇಕು ಅಂದ್ರು.

    ಕರಾವಳಿಯಲ್ಲಿ ಗಲಭೆಗೆ ಆರ್ ಎಸ್‍ಎಸ್, ಭಜರಂಗದಳವೇ ಕಾರಣ. ದ್ವೇಷ ರಾಜಕಾರಣದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಯಾವುದೇ ಸಂಘಟನೆ ನಿಷೇಧ ಮಾಡಲು ಸೂಕ್ತ ಸಾಕ್ಷಾಧಾರ ಬೇಕು. ಚಕ್ರವರ್ತಿ ಸೂಲಿಬೆಲೆ ಫೇಸ್‍ಬುಕ್ ಸ್ಟೇಟಸ್ ಹಾಕಿರುವುದು ಇದು ಸಹ ಕೋಮು ಭಾವನೆ ಕೆರಳಿಸುವ ಇನ್ನೂಂದು ದಾರಿ ಅಷ್ಟೆ ಎಂದು ಕಿಡಿಕಾರಿದ್ದಾರೆ.

    https://youtu.be/ZWFlu1dmwi0

    https://www.youtube.com/watch?v=prf8LAzRcus

    https://www.youtube.com/watch?v=IlGszWsi80U

  • ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಹೆಚ್ಚಿದ ಒತ್ತಡ- ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಬಿಜೆಪಿ ಕರೆ

    ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಹೆಚ್ಚಿದ ಒತ್ತಡ- ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಬಿಜೆಪಿ ಕರೆ

    ಮಂಗಳೂರು: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತೆ ಉದ್ವಿಗ್ನಗೊಂಡಿದ್ದು, ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದನ್ನೂ ಓದಿ: ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ಕಳೆದೆರಡು ದಿನಗಳಿಂದ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಗುರುವಾರ ರಾತ್ರಿ 10 ಗಂಟೆಗೆ ಪೊಲೀಸರು ತೆರವುಗೊಳಿಸಿದ್ದಾರೆ. ಇನ್ನು ನಿನ್ನೆ ಬಂದ್ ಇದ್ದ ಸುರತ್ಕಲ್‍ನಲ್ಲಿ ವಾಹನ ಸಂಚಾರ ಎಂದಿನಂತಿದ್ದು ಅಂಗಡಿ ಮುಂಗಟ್ಟುಗಳು ತೆರೆದಿವೆ. ಆದರೂ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಈ ಮಧ್ಯೆ ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಡ ಹೆಚ್ಚಾಗ್ತಿದ್ದು, ರಾಜ್ಯಾದ್ಯಂತ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ. ಇಂದು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಮತ್ತು ಪಿಎಫ್‍ಐ ನಿಷೇಧಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆಗೆ ಬಿಜೆಪಿ ಕರೆ ಕೊಟ್ಟಿದೆ. ಆದ್ರೆ ದೀಪಕ್ ರಾವ್ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

    ಬುಧವಾರ ಮಧ್ಯಾಹ್ನ ಸುಮಾರು 1.30 ರ ಸಮಯಕ್ಕೆ ಸುರತ್ಕಲ್ ಬಳಿಕ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕಡಿದು ದೀಪಕ್ ರಾವ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಈ ಆರೋಪಿಗಳನ್ನು ಅಜ್ಞಾನ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು

  • ವಿಎಚ್‍ಪಿ, ಬಜರಂಗದಳ, ದುರ್ಗಾವಾಹಿನಿಗಳಿಂದ ಮಂಗ್ಳೂರಲ್ಲಿ ಲವ್ ಜಿಹಾದ್ ಬಗ್ಗೆ ಜಾಗೃತಿ

    ವಿಎಚ್‍ಪಿ, ಬಜರಂಗದಳ, ದುರ್ಗಾವಾಹಿನಿಗಳಿಂದ ಮಂಗ್ಳೂರಲ್ಲಿ ಲವ್ ಜಿಹಾದ್ ಬಗ್ಗೆ ಜಾಗೃತಿ

    ಮಂಗಳೂರು: ಲವ್ ಜಿಹಾದ್ ವಿರುದ್ದ ಜಾಗೃತಿ ಅಭಿಯಾನ ನಡೆಸಲು ವಿಎಚ್‍ಪಿ, ಬಜರಂಗದಳ ಹಾಗೂ ದುರ್ಗಾವಾಹಿನಿ ಸಂಘಟನೆಗಳು ನಿರ್ಧರಿಸಿವೆ.

    ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಹತ್ತಾರು ಯುವತಿಯರು ಮನೆಯಿಂದ ನಾಪತ್ತೆಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಈ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಹಿಂದೂ ಯುವತಿಯರಿಗೆ ಲವ್ ಜಿಹಾದ್‍ನಿಂದಾಗುವ ತೊಂದರೆಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಇದನ್ನೂ ಓದಿ: ಮತ್ತೆ ನೈತಿಕ ಪೊಲೀಸ್‍ಗಿರಿ-ಮಂಗ್ಳೂರಲ್ಲಿ ಯುವಕ, ಯುವತಿಯರ ಮೇಲೆ ಹಲ್ಲೆ

    ಜಾಗೃತಿಗಾಗಿ ಹಲವಾರು ತಂಡಗಳು ಸಿದ್ಧವಾಗಿದ್ದು ಕರಪತ್ರ ಹಂಚುವ ಮೂಲಕ, ಕಾಲೇಜು ವಿದ್ಯಾರ್ಥಿಗಳಿಗೆ ಲವ್ ಜಿಹಾದ್‍ನ ದುಷ್ಪರಿಣಾಮಗಳನ್ನು ಮನವರಿಕೆ ಮಾಡಲು ನಿರ್ಧರಿಸಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

     ಇದನ್ನೂ ಓದಿ: ಮೆಹಂದಿ ಶಾಸ್ತ್ರದಂದೇ ರಾತ್ರಿ ನಾಪತ್ತೆಯಾಗಿದ್ದ ಯುವತಿ ಈಗ ಜೈಲು ಪಾಲು!

  • ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಬಜರಂಗದಳ ಕಾರ್ಯಕರ್ತರಿಂದ ಅಂಗಡಿಗೆ ಬೆಂಕಿ

    ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಬಜರಂಗದಳ ಕಾರ್ಯಕರ್ತರಿಂದ ಅಂಗಡಿಗೆ ಬೆಂಕಿ

    ಡೆಹ್ರಾಡೂನ್: ಅಪ್ರಾಪ್ತನೊಬ್ಬ ಫೇಸ್‍ಬುಕ್ ನಲ್ಲಿ ಕೇದಾರನಾಥದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಆಕ್ರೋಶಗೊಂಡ ಬಜರಂಗದಳ ಕಾರ್ಯಕರ್ತರು ಆತನ ಕುಟುಂಬದ ಅಂಗಡಿಯನ್ನೇ ಭಸ್ಮಗೊಳಿಸಿದ ಘಟನೆ ಉತ್ತರಾಖಂಡ್‍ನಲ್ಲಿ ನಡೆದಿದೆ.

    ಉತ್ತರಾಖಂಡ್ ನ ಗರ್ವಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಕೇದರಾನಾಥ ದೇವಾಲಯದ ಬಗ್ಗೆ ಅಪ್ರಾಪ್ತ ಅವಹೇಳನಕಾರಿ ಫೋಟೋವೊಂದನ್ನು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದನು. ಇದರಿಂದ ಆಕ್ರೋಶಗೊಂಡ ಬಜರಂಗದಳ ಕಾರ್ಯಕರ್ತರು ಭಾನುವಾರ ಆತನ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಹಿಂದೂ ಪರ ಘೋಷಣೆಗಳನ್ನು ಕೂಗಿದ್ದಾರೆ.

    ಘಟನೆ ಸೂಕ್ಷ್ಮತೆಯನ್ನು ಅರಿತು ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡಾಯಿಸಿದ್ರು. ಪೋಸ್ಟ್ ಹಾಕಿದ ಆರೋಪಿಯನ್ನು ಹಿಡಿದು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ವರದಿಗಳ ಪ್ರಕಾರ ಯುವಕ ಕೇದರನಾಥ್ ದೇವಾಲಯದ ಅವಹೇಳನಕಾರಿ ಫೋಟೋದೊಂದಿಗೆ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ ಬಜರಂಗದಳ ಕಾರ್ಯಕರ್ತರು ಅಂಗಡಿಗೆ ಬೆಂಕಿ ಹಚ್ಚಿದ ನಂತರ ಅಂಗಡಿ ಮಾಲೀಕನಿಗಾಗಿ ಹುಡುಕಾಡುತ್ತಿದ್ದರು. ಆದ್ರೆ ಮಾಲೀಕ ಅಲ್ಲಿಂದ ಪರಾರಿಯಾಗಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ವಿಡಿಯೋ ಮಾಡಿದ್ದು, ಆರೋಪಿಯನ್ನು ಬಂಧಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸೆರೆಹಿಡಿದ ವಿಡಿಯೋದಲ್ಲಿ ಬಜರಂಗ ದಳ ಕಾರ್ಯಕರ್ತರು ಹೇಳಿದ್ದಾರೆ.

    ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ಪ್ರಾಫೆಟ್ ಮೊಹಮ್ಮದ್‍ರ ಬಗ್ಗೆ ಯುವಕನೊಬ್ಬ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಕಾರಣ ಭಾರೀ ಪ್ರತಿಭಟನೆ ನಡೆದು ಕೋಮು ಗಲಭೆ ಉಂಟಾಗಿತ್ತು.