Tag: Bajaranga dala

  • ಕರಾವಳಿಯಲ್ಲಿ ಹೆಚ್ಚಿದ ಅಕ್ರಮ ಗೋಮಾಂಸ ಸಾಗಾಟ – ಹಿಂದೂ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ

    ಕರಾವಳಿಯಲ್ಲಿ ಹೆಚ್ಚಿದ ಅಕ್ರಮ ಗೋಮಾಂಸ ಸಾಗಾಟ – ಹಿಂದೂ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ

    – ಆರೋಪಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿದ ಒತ್ತಡ

    ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ (Mangaluru) ಗೋಮಾಂಸ ಮಾಫಿಯಾ ಜೋರಾಗಿದೆ. ನಗರದ ಮಧ್ಯೆಯೇ ಅಕ್ರಮ ಗೋಮಾಂಸ ಸಾಗಾಟ ಆಗುತ್ತಿದ್ದು, ಕಾನೂನಿನ ಭಯವೇ ಇಲ್ಲವಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು, ಗೋಮಾಂಸ ಮಾಫಿಯಾ ನಿಲ್ಲದೇ ಹೋದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಒಂದೇ ಒಂದು ಅಧಿಕೃತ ಗೋ ಕಸಾಯಿಖಾನೆ ಇಲ್ಲ. ಆದರೂ ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾತ್ರ ನಿರಂತರವಾಗಿ ನಡೆಯುತ್ತಿದೆ. ನಗರದ ಮಧ್ಯೆ ಗೋಮಾಂಸ ಸಾಗಾಟ ಮಾಡಿ ಕಟುಕರು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ 5 ಕಡೆಗಳಲ್ಲಿ ಅಕ್ರಮ ಗೋಮಾಂಸ ಸಾಗಾಟವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪತ್ತೆ ಹಚ್ಚಿ, ಪೊಲೀಸರಿಗೆ ತಿಳಿಸಿದ್ದರು. ಇದನ್ನೂ ಓದಿ: ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

    ಪೊಲೀಸರು 1 ಟನ್‌ಗೂ ಅಧಿಕ ಗೋಮಾಂಸ ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲದೇ ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ, ಫರಂಗಿಪೇಟೆ ಮುಂದಾದ ಕಡೆಗಳಲ್ಲಿ ಅಕ್ರಮ ಗೋ ಕಸಾಯಿಖಾನೆ ಕಾರ್ಯಾಚರಿಸುತ್ತಿದೆ. ಇಲ್ಲಿಂದಲೇ ಎಲ್ಲಾ ಕಡೆಗಳಿಗೂ ರಾಜಾರೋಷವಾಗಿ ನಗರದ ನಡುವೆಯೇ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ. ಅಕ್ರಮ ಗೋಮಾಂಸ ಸಾಗಾಟಗಾರರಿಗೆ ಯಾರು ರಕ್ಷಣೆ ನೀಡುತ್ತಿರುವುದು ಎನ್ನುವ ಪ್ರಶ್ನೆ ಎದ್ದಿದೆ.

    ಜಿಲ್ಲೆಯಾದ್ಯಂತ ಕಾನೂನು ಮೀರಿ ಪ್ರತಿದಿನ ನೂರಾರು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಗೋಮಾಂಸ ಸಾಗಾಟ ಮಾಡಿ ಸಿಕ್ಕಿಬಿದ್ದರೂ, ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳತ್ತಿಲ್ಲ. ಇತ್ತೀಚಿಗೆ ಮಂಗಳೂರು ಹೊರವಲಯದ ಸುರಲ್ಪಾಡಿ ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋಸಾಗಾಟದ ವಾಹನವನ್ನು ಸಿನಿಮೀಯ ರೀತಿಯಲ್ಲಿ ಅಡ್ಡ ಹಾಕಿದ್ದರು. ಇದನ್ನೂ ಓದಿ: ಪತ್ನಿ ಕೊಂದು ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಹಂತಕ – ಕಾರಣ ಬಾಯ್ಬಿಡದ ಟೆಕ್ಕಿ

    ಈ ವೇಳೆ ಸುಮಾರು 25 ಗೋವುಗಳನ್ನು ಅಮಾನುಷವಾಗಿ ಸಾಗಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದ್ದು, ಸಾಗಾಟಗಾರರು ಈ ವೇಳೆ ಓಡಿ ಪರಾರಿಯಾಗಿದ್ದರು. ಬಳಿಕ ಬಜಪೆ ಪೊಲೀಸರು ಗೋವುಗಳನ್ನು ರಕ್ಷಣೆ ಮಾಡಿದ್ದರು. ಜಿಲ್ಲೆಯಾದ್ಯಂತ ನಡೆಯುತ್ತಿರುವ ಗೋಮಾಂಸ ಸಾಗಾಟ ವಾಹನ, ಅಕ್ರಮ ಕಸಾಯಿಖಾನೆ ನಡೆಯುವ ಸ್ಥಳ ಮುಟ್ಟುಗೋಲು ಹಾಕಿಕೊಳ್ಳಿ. ನಮ್ಮನ್ನು ಕೆಣಕಬೇಡಿ, ಅಕ್ರಮ ಗೋಮಾಂಸ ಸಾಗಾಟ ನಿಲ್ಲದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಐಸ್‌ಕ್ರೀಂ ಪ್ರಿಯರೇ ಎಚ್ಚರ – ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ

    ಒಟ್ಟಿನಲ್ಲಿ, ಜಿಲ್ಲೆಯಾದ್ಯಂತ ಅಕ್ರಮ ಗೋಸಾಗಾಟ, ಗೋಮಾಂಸ ಸಾಗಾಟ ಹೆಚ್ಚಿದೆ. ಪೊಲೀಸರ ಭಯ ಇಲ್ಲದಂತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆದರೂ ಪೊಲೀಸರು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

  • ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ- ಬೂದಿ ಮುಚ್ಚಿದ ಕೆಂಡದಂತಾದ ಶಿವಮೊಗ್ಗ

    ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ- ಬೂದಿ ಮುಚ್ಚಿದ ಕೆಂಡದಂತಾದ ಶಿವಮೊಗ್ಗ

    – ಶನಿವಾರ ಬೆಳಗ್ಗೆ 10ರವರೆಗೆ 144 ಸೆಕ್ಷನ್

    ಶಿವಮೊಗ್ಗ: ನಗರದಲ್ಲಿ ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಇಂದು ಬೆಳಗ್ಗೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದೆ. ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಬಳಿ ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ನಾಗೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಳಗ್ಗೆ ನೆಹರೂ ಕ್ರೀಡಾಂಗಣದಲ್ಲಿ ವಾಕಿಂಗ್ ಮುಗಿಸಿಕೊಂಡು ವಾಪಾಸ್ ಹೋಗುತ್ತಿದ್ದ ವೇಳೆ ಐದಾರೂ ಜನರು ಇದ್ದ ದುಷ್ಕರ್ಮಿಗಳ ತಂಡ ಹಲ್ಲೆ ಮಾಡಿ ಪರಾರಿಯಾಗಿದೆ. ಘಟನೆ ನಂತರ ನಗರದಲ್ಲಿ ಐದಾರೂ ಕಡೆಗಳಲ್ಲಿ ಅಹಿತಕರ ಘಟನೆಗಳು ನಡೆದಿವೆ. ಐದಾರು ಕಾರುಗಳು, 2 ಆಟೋ, 2 ಬೈಕ್, ತರಕಾರಿ ಗಾಡಿಯನ್ನು ಜಖಂ ಗೊಳಿಸಲಾಗಿದೆ. 10ಕ್ಕಿಂತ ಹೆಚ್ಚು ಜನರಿಗೆ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

    ಗಾಂಧಿ ಬಜಾರ್, ಮೀನು ಮಾರುಕಟ್ಟೆ, ಚೋರ್ ಬಜಾರ್, ರವಿ ವರ್ಮ ಬೀದಿ, ಕಸ್ತೂರಾ ಬಾ ರಸ್ತೆಗಳಲ್ಲಿ ಕಿಡಿಗೇಡಿಗಳು ದುಷ್ಕøತ್ಯ ನಡೆಸಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಸುಮಾರು 10 ಕ್ಕಿಂತ ಹೆಚ್ಚು ಜನ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಂಧಿ ಬಜಾರ್ ಸುತ್ತಮುತ್ತ ನಿಲ್ಲಿಸಿದ್ದ, ಸುಮಾರು ಐದಕ್ಕೂ ಹೆಚ್ಚು ಕಾರುಗಳು ಜಖಂ ಗೊಳಿಸಲಾಗಿದೆ.

    ಘಟನೆ ಹಿನ್ನೆಲೆಯಲ್ಲಿ ಪೂರ್ವ ವಲಯದ ಐಜಿಪಿ ರವಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಶಿವಮೊಗ್ಗ ಎಸ್.ಪಿ.ಶಾಂತರಾಜು ಜೊತೆ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ಐದಾರು ಅಹಿತಕರ ಘಟನೆಗಳು ನಡೆದಿವೆ. ಹಿಂದೂ, ಮುಸ್ಲಿಂ ಉಭಯ ಸಮುದಾಯದ ನಡುವೆ ಸಾಮರಸ್ಯದ ವಿಷಯ ಇದೆ. ಪರಿಶೀಲನೆ ನಡೆಸುತ್ತಿದ್ದೇನೆ. ಸಾರ್ವಜನಿಕರು ಸಹಕಾರ ನೀಡಬೇಕು. ಯಾರು ಕೂಡ ಹತಾಶರಾಗುವುದು ಬೇಡ. ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ವದಂತಿಗಳಿಗೆ ಕಿವಿಗೂಡಬೇಡಿ, ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಶಿವಮೊಗ್ಗ ನಗರದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಾಳೆಯವರೆಗೂ ಮೂರು ಠಾಣಾ ವ್ಯಾಪ್ತಿ (ದೊಡ್ಡಪೇಟೆ, ತುಂಗಾನಗರ ಹಾಗೂ ಕೋಟೆ)ಯಲ್ಲಿ ಕರ್ಪ್ಯೂ ವಿಧಿಸಿದ್ದು, ಮೂರು ದಿನ ಸೆಕ್ಷನ್ 144 ಜಾರಿಯಲ್ಲಿರುವಂತೆ ಆದೇಶಿಸಿದ್ದಾರೆ.

  • ಮಂಗ್ಳೂರಲ್ಲಿ ಹೊಸ ವರ್ಷಾಚರಣೆಗೆ ಹದ್ದಿನ ಕಣ್ಣು – ಹಿಂದೂಪರ ಸಂಘಟನೆಗಳಿಂದ ನೈತಿಕ ಪೊಲೀಸ್‍ಗಿರಿ

    ಮಂಗ್ಳೂರಲ್ಲಿ ಹೊಸ ವರ್ಷಾಚರಣೆಗೆ ಹದ್ದಿನ ಕಣ್ಣು – ಹಿಂದೂಪರ ಸಂಘಟನೆಗಳಿಂದ ನೈತಿಕ ಪೊಲೀಸ್‍ಗಿರಿ

    ಮಂಗಳೂರು: ಈ ಬಾರಿ ಮಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ ಮೇಲೆ ನೈತಿಕ ಪೊಲೀಸ್‍ಗಿರಿ ಛಾಯೆ ಆವರಿಸಿದೆ. ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಪಾರ್ಟಿಗೆ ಹೋಗೋರಿದ್ದರೆ ಹುಷಾರು. ನಿಮ್ಮ ಮಕ್ಕಳೇನಾದರೂ ಕಪಲ್ಸ್ ಗಳಾಗಿ ನ್ಯೂ ಇಯರ್ ಪಾರ್ಟಿಗೆ ಹೋದರೆ ಅಪಾಯ ಆಹ್ವಾನಿಸಿಕೊಳ್ತೀರಿ.

    ಹೌದು. ಇಂತಹದ್ದೊಂದು ಮುನ್ಸೂಚನೆ ಮೊದಲೇ ಸಿಕ್ಕಿಬಿಟ್ಟಿದೆ. ಕಡಲ ನಗರಿ ಮಂಗಳೂರಿನಲ್ಲಿ ಈ ಬಾರಿ ನ್ಯೂ ಇಯರ್ ಪಾರ್ಟಿ ನೆಪದಲ್ಲಿ ಕಪಲ್ಸ್ ಪಾರ್ಟಿ ಮಾಡೋ ರೆಸ್ಟೋರೆಂಟ್‍ಗಳಿಗೆ ಹಿಂದು ಸಂಘಟನೆಗಳು ಮೊದಲೇ ಎಚ್ಚರಿಕೆ ನೀಡಿದ್ದು, ತಪ್ಪಿದರೆ ರೇಡ್ ಮಾಡೋ ಬೆದರಿಕೆ ಹಾಕಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಅಬಕಾರಿ ಇಲಾಖೆಗೂ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮನವಿ ನೀಡಿದ್ದು, ಯಾವುದೇ ರೀತಿಯಲ್ಲೂ ಮಧ್ಯರಾತ್ರಿ ನಂತರದ ಪಾರ್ಟಿಗಳಿಗೆ ಅವಕಾಶ ನೀಡಬಾರದು ಅನ್ನುವ ಆಗ್ರಹ ಮಾಡಿದೆ.

    ಮುಖ್ಯವಾಗಿ ತಡರಾತ್ರಿ ನಡೆಯೋ ಪಾರ್ಟಿಗಳಲ್ಲಿ ಹರೆಯದ ಯುವಕ-ಯುವತಿಯರು ಪಾಲ್ಗೊಳ್ಳುತ್ತಾರೆ. ಅಶ್ಲೀಲ ನೃತ್ಯ, ಗಾಂಜಾ, ಡ್ರಗ್ಸ್ ಸೇವನೆಯಿಂದ ಅಲ್ಲಿ ಹದ್ದು ಮೀರಿದ ವರ್ತನೆಗಳು ನಡೆಯುತ್ತವೆ. ಇಂತಹ ಪಾರ್ಟಿಗಳಲ್ಲಿ ಕೇವಲ ಕಪಲ್ಸ್ ಮಾತ್ರ ಬರುತ್ತಿದ್ದು ಹೆತ್ತವರಿಗೆ ಈ ಕಪಲ್ ಗಳ ವರ್ತನೆ ಬಗ್ಗೆ ತಿಳಿಯೋದಿಲ್ಲ ಅಂತಾ ಹಿಂದು ಸಂಘಟನೆ ನಾಯಕರು ಆರೋಪಿಸಿದ್ದಾರೆ.

    ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ರಾತ್ರಿ 11 ಗಂಟೆ ನಂತರದ ಪಾರ್ಟಿ, ಡಿಜೆ ಡ್ಯಾನ್ಸ್ ಗಳಿಗೆ ಅವಕಾಶ ನೀಡಬಾರದು ಅನ್ನೋ ಕಿರಿಕ್ ಶುರುವಿಟ್ಟಿದೆ. ಹಿಂದು ಸಂಘಟನೆಗಳ ಎಚ್ಚರಿಕೆಗೆ ಪೊಲೀಸ್ ಕಮಿಷನರ್ ಕೂಡ ಸ್ಪಂದಿಸಿದ್ದು, ಮಧ್ಯರಾತ್ರಿ ಪಾರ್ಟಿಗಳಿಗೆ ಅವಕಾಶ ಕೊಡದಿರಲು ನಿರ್ಧರಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ನ್ಯೂ ಇಯರ್ ಪಾರ್ಟಿ ಅರೇಂಜ್ ಮಾಡಿದ್ದ ರೆಸ್ಟೋರೆಂಟ್, ಸ್ಟಾರ್ ಹೊಟೇಲ್‍ಗಳ ವ್ಯವಸ್ಥಾಪಕರು ಹಿಂದೂ ಸಂಘಟನೆಗಳ ಎಚ್ಚರಿಕೆಯಿಂದ ಚಿಂತೆಗೆ ಬಿದ್ದಿದ್ದಾರೆ. ಇಂಥ ಪಾರ್ಟಿಗಳಿಗೆ 3 ರಿಂದ 5, 10 ಸಾವಿರದ ವರೆಗೆ ಮೊದಲೇ ಬುಕ್ಕಿಂಗ್ ಮಾಡೋ ವ್ಯವಸ್ಥೆ ಇರುವುದರಿಂದ ಹಿಂದೂ ಸಂಘಟನೆಗಳ ಕೊನೆಕ್ಷಣದ ಎಚ್ಚರಿಕೆ ಸವಾಲಾಗಿ ಪರಿಣಮಿಸಿದೆ.

    ಒಟ್ಟಿನಲ್ಲಿ ಈ ಬಾರಿ ಹಿಂದೂ ಸಂಘಟನೆಗಳು ಪೊಲೀಸರಿಗೆ ಹೇಳಿಯೇ ನೈತಿಕ ಪೊಲೀಸ್‍ಗಿರಿ ನಡೆಸಲಿದ್ದಾರೆ ಅನ್ನುವುದು ಹೊಸ ವಿಚಾರ. ಹೀಗಾಗಿ ಈ ಸಲದ ನ್ಯೂ ಇಯರ್ ಪಾರ್ಟಿಗೆ ದೂರದಿಂದ ಬರೋರು ಎಚ್ಚರಿಕೆ ವಹಿಸಬೇಕಾಗಿದೆ.