ಬೆಳಗಾವಿ: ಎರಡು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೈಲಹೊಂಗಲದ (Bailhongal) ಇಂಚಲ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬೈಲಹೊಂಗಲ ನಗರದ ನಿವಾಸಿ ಮಂಗಲ ಭರಮನಾಯ್ಕರ್ (50), ಚಾಲಕ ಶ್ರೀಶೈಲ ನಾಗನಗೌಡರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ರಾಯನಾಯ್ಕ ಭರಮನಾಯ್ಕರ್ (87), ಗಂಗವ್ವ ಭರಮನಾಯ್ಕರ್ (80), ಮಂಜುಳ ನಾಗನಗೌಡರ್ (30), ಮತ್ತೊಂದು ಕಾರಿನ ಇಂಚಲ ಗ್ರಾಮದ ಚಾಲಕ ಸುಬಾನಿ ವಕ್ಕುಂದ (28) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್ – ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ
ಗೋಕಾಕ್‍ನ ಕೊಣ್ಣೂರು ಪಟ್ಟಣದಿಂದ ಮನೆ ಗೃಹಪ್ರವೇಶಕ್ಕೆ ಬಟ್ಟೆ ಖರೀದಿಸಿ ಮರಳುವಾಗ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ: ರಾಜಾರೋಷವಾಗಿ ನಡೆಸುತ್ತಿದ್ದ ಅಂದರ್ ಬಾಹರ್ ಜೂಜು ಅಡ್ಡೆ ಮೇಲೆ ಸಿಇಎನ್ ಪೊಲೀಸರು (Police) ದಾಳಿ ನಡೆಸಿ 70 ಜನರನ್ನು ಬಂಧಿಸಿದ ಘಟನೆ ಬೈಲಹೊಂಗಲದಲ್ಲಿ (Bailhongal) ನಡೆದಿದೆ.
ಖಚಿತ ಮಾಹಿತಿ ಮೇರೆಗೆ ನಗರದ ಬಾರ್ & ರೆಸ್ಟೋರೆಂಟ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜು ಅಡ್ಡೆಯಲ್ಲಿ ಪ್ರಮುಖ ಆರೋಪಿ ಮಹಾಂತೇಶ್ ತುರುಮುರಿ ಸೇರಿ 70 ಜನ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಎರಡು ಬಸ್‍ಗಳಲ್ಲಿ ಬೆಳಗಾವಿಗೆ ಕರೆತಂದಿದ್ದಾರೆ. ಇದನ್ನೂ ಓದಿ: ಸ್ನೇಹಿತರ ಭೇಟಿಗೆ ಬಂದಿದ್ದ ಯೋಧನ ಮೇಲೆ ಮಾರಣಾಂತಿಕ ಹಲ್ಲೆ- ವೀಡಿಯೋ ವೈರಲ್
ಬಂಧಿತರಿಂದ 2 ಲಕ್ಷ ರೂ. ನಗದು, 70 ಮೊಬೈಲ್ ಫೋನ್‍ಗಳನ್ನು ಜಪ್ತಿ ಮಾಡಲಾಗಿದೆ. ಸಿಇಎನ್ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ 10 ಜನ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ: ಹೆತ್ತಪ್ಪನೇ (Father) ಮಗನ (Son) ಕೊಲೆಗೆ ಮನೆ ಕೆಲಸದವನಿಗೆ ಸುಪಾರಿ ಕೊಟ್ಟು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿಸಿರುವ ಘಟನೆ ಬೈಲಹೊಂಗಲ (Bailhongal) ತಾಲೂಕಿನ ಕುಟರನಟ್ಟಿ ಗ್ರಾಮದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ.
ಬೈಲಹೊಂಗಲ ಪಟ್ಟಣದ ನಿವಾಸಿ ಸಂಗಮೇಶ ತಿಗಡಿ (38) ಕೊಲೆಯಾದ ವ್ಯಕ್ತಿ. ಮಾರುತೆಪ್ಪ ತಿಗಡಿ (72) ಮಗನ ಕೊಲೆಗೆ ಸುಪಾರಿ ಕೊಟ್ಟ ಅಪ್ಪ. ಆಗಸ್ಟ್ 20ರಂದು ರಾತ್ರಿ ಸಂಗಮೇಶಗೆ ಮದ್ಯ (Alcohol) ಕುಡಿಸಿ ಕುಟರನಟ್ಟಿ ಗ್ರಾಮದ ಹೊರವಲಯದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದನ್ನೂ ಓದಿ: ರೆಸಾರ್ಟ್ ತೋರಿಸುತ್ತೇನೆ ಬಾ ಅಂತ ಕರೆದು ಮಹಿಳೆ ಮೇಲೆ ರೇಪ್ – ಟೆಕ್ಕಿ ಅರೆಸ್ಟ್
ಹತ್ಯೆಯಾದವನ ಕಿಸೆಯಲ್ಲಿದ್ದ ಸುಣ್ಣದ ಡಬ್ಬಿ (Lime Box) ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಮೃತನ ಜೇಬಲ್ಲಿದ್ದ ಸುಣ್ಣದ ಡಬ್ಬಿಯಲ್ಲಿ ಕೊಲೆ ಮಾಡಿದ ಹಂತಕನ ನಂಬರ್ ಇತ್ತು. ತನ್ನ ಬಳಿ ಮೊಬೈಲ್ ಇಲ್ಲದ್ದಕ್ಕೆ ಮನೆಗೆಲಸ ಮಾಡುತ್ತಿದ್ದಾತನ ನಂಬರ್ ಅನ್ನು ಚೀಟಿಯಲ್ಲಿ ಬರೆದು ಸುಣ್ಣದ ಡಬ್ಬಿಯಲ್ಲಿ ಸಂಗಮೇಶ ಇಟ್ಟುಕೊಂಡಿದ್ದ. ಇದನ್ನೂ ಓದಿ: ಗ್ರಾಹಕರ ಖಾತೆಯಿಂದ 40 ಲಕ್ಷ ರೂ. ಎಗರಿಸಿದ ಬ್ಯಾಂಕ್ ಉದ್ಯೋಗಿ
ಪ್ರಕರಣದ ಹಿಂದೆ ಬಿದ್ದ ಪೊಲೀಸರು ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸಂಗಮೇಶ ಮನೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಸಂಗಮೇಶನ ನಡೆಯಿಂದ ಬೇಸತ್ತು ಹೋಗಿದ್ದ ತಂದೆ ಮಾರುತ್ತೆಪ್ಪ ಪುತ್ರನನ್ನು ಕೊಲ್ಲಲು ಮನೆಕೆಲಸ ಮಾಡಿಕೊಂಡಿದ್ದ ಮಂಜುನಾಥನಿಗೆ ಸುಪಾರಿ ಕೊಟ್ಟಿದ್ದಾನೆ. ಬಳಿಕ ಮಂಜುನಾಥ ಹಾಗೂ ಆತನ ಸ್ನೇಹಿತ ಅಡಿವೆಪ್ಪ ಬೋಳೆತ್ತಿನ್ ಆತನನ್ನು ಕೊಲೆ ಮಾಡಿ ಇದೀಗ ಜೈಲುಪಾಲಾಗಿದ್ದಾರೆ. ಇದನ್ನೂ ಓದಿ: ಧಾರವಾಡ ಮೂಲದ ಆಸ್ಟ್ರೇಲಿಯಾ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ – ಆಸ್ಟ್ರೇಲಿಯಾದ ಕಠಿಣ ಕಾನೂನುಗಳೇ ಸಾವಿಗೆ ಕಾರಣ
ಬೆಳಗಾವಿ: ಪತಿ (Husband) ಹಾಗೂ ಅತ್ತೆಯ ಮೇಲೆ ಸೊಸೆಯೊಬ್ಬಳು ಹಲ್ಲೆ ಮಾಡಿಸಿ ಅತ್ತೆಯನ್ನು ಕೊಲ್ಲಿಸಿದ ಪ್ರಕರಣ ಬೈಲಹೊಂಗಲದಲ್ಲಿ (Bailhongal) ನಡೆದಿದೆ.
ಮೃತಳನ್ನು ಮಹಾಬೂಬಿ ಯಾಕೂಶಿ (53) ಎಂದು ಗುರುತಿಸಲಾಗಿದೆ. ಮೇಹರೂಣಿ ಯಾಕೂಶಿ ಹಲ್ಲೆ ಮಾಡಿಸಿದ ಮಹಿಳೆ ಎಂದು ತಿಳಿದು ಬಂದಿದೆ. ಗಂಡ ಸುಬಾನ್ ಬೇರೆ ಮನೆ ಮಾಡಲಿಲ್ಲ ಎಂದು ಪತ್ನಿ (Wife) ಈ ಕೃತ್ಯ ಎಸಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: Bomb Threatː ಬೆಂಗಳೂರಿನ ITBT ಕಂಪನಿಗೆ ಬಾಂಬ್ ಬೆದರಿಕೆ ಕರೆ..!
ಮೇಹರೂಣಿ ಯಾಕೂಶಿ, ಪತಿ ಬೇರೆ ಮನೆ ಮಾಡಲಿಲ್ಲ ಎಂದು ಮನೆ ತೊರೆದು ತವರು ಮನೆಗೆ ತೆರಳಿದ್ದಾಳೆ. ಸ್ವಲ್ಪ ದಿನಗಳ ಬಳಿಕ ಅತ್ತೆ ಹಾಗೂ ಪತಿಯನ್ನು ತನ್ನ ತವರು ಮನೆಗೆ ಕರೆಸಿದ್ದಾಳೆ. ಈ ವೇಳೆ ತನ್ನ ಇಬ್ಬರೂ ಸಹೋದರರೊಂದಿಗೆ ಸೇರಿ ಅತ್ತೆ ಹಾಗೂ ಪತಿಯ ಮೇಲೆ ರಾಡ್‍ನಿಂದ ದಾಳಿ ನಡೆಸಿದ್ದಾರೆ ಎಂಬ ಆರೋಪ ಬಂದಿದೆ.
ಮೇ 22ರಂದು ಈ ಘಟನೆ ನಡೆದಿದ್ದು, ತೀವ್ರ ಗಾಯಗೊಂಡಿದ್ದ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೂರು ವರ್ಷದ ಹಿಂದೆ ಮೇಹರೂಣಿ ಮತ್ತು ಸುಬಾನ್ ಪ್ರೀತಿಸಿ ಮದುವೆಯಾಗಿದ್ದರು. ಒಂದು ವರ್ಷದ ಬಳಿಕ ಬೇರೆ ಮನೆ ಮಾಡುವಂತೆ ಗಂಡನೊಂದಿಗೆ ಜಗಳ ಆಡುತ್ತಿದ್ದಳು ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರನ್ನು ಬಂಧಿಸುವಂತೆ ಪತಿ ಮತ್ತು ಕುಟುಂಬಸ್ಥರ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ
ಬೆಳಗಾವಿ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶಂಕೆ ಹಿನ್ನೆಲೆಯಲ್ಲಿ ಯುವಕನನ್ನು ಪತಿ ಹಾಗೂ ಕುಟುಂಬಸ್ಥರು ಬರ್ಬರವಾಗಿ ಕೊಲೆಗೈದ ಘಟನೆ ಬೈಲಹೊಂಗಲ ತಾಲೂಕಿನ ಹೊಸ ಕುರಗುಂದ ಗ್ರಾಮದಲ್ಲಿ ನಡೆದಿದೆ.
ಹೊಸ ಕುರಗುಂದ ಗ್ರಾಮದ ನಿವಾಸಿ ದ್ಯಾಮಪ್ಪ ವಣ್ಣೂರ (22) ಹತ್ಯೆಯಾದ ಯುವಕ. ಅದೇ ಗ್ರಾಮದ ಈರಪ್ಪ ನಾಯ್ಕರ್ ಮತ್ತು ಕುಟುಂಬಸ್ಥರಿಂದ ಕೃತ್ಯ ನಡೆದಿದೆ. ಗ್ರಾಮದಲ್ಲಿ ಬುಧವಾರ ಸಂಜೆ ಘಟನೆ ನಡೆದಿದ್ದು, ದ್ಯಾಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದ್ಯಾಮಪ್ಪ ವಣ್ಣೂರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಈರಣ್ಣಗೆ ವ್ಯಕ್ತವಾಗಿತ್ತು. ಹೀಗಾಗಿ ಬುಧವಾರ ಪೈಕ್‍ನಲ್ಲಿ ಬರುತ್ತಿದ್ದ ದ್ಯಾಮಪ್ಪನನ್ನು ಅಡ್ಡಗಟ್ಟಿದ ಈರಣ್ಣ ನಾಯ್ಕರ್ ಹಾಗೂ ಆತನ ಕುಟುಂಬಸ್ಥರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದ್ಯಾಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೈಲಹೊಂಗಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.