Tag: bahubali

  • ಬಾಹುಬಲಿಗೆ ದಶಕದ ಸಂಭ್ರಮ: ಗುಡ್‌ನ್ಯೂಸ್ ಕೊಟ್ಟ ಜಕ್ಕಣ್ಣ

    ಬಾಹುಬಲಿಗೆ ದಶಕದ ಸಂಭ್ರಮ: ಗುಡ್‌ನ್ಯೂಸ್ ಕೊಟ್ಟ ಜಕ್ಕಣ್ಣ

    ಸ್‌ಎಸ್ ರಾಜಮೌಳಿ (SS Rajamouli) ನಿರ್ದೇಶನದಲ್ಲಿ ಮೂಡಿಬಂದ ಬಾಹುಬಲಿ (Bahubali) ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೈಲಿಗಲ್ಲನ್ನ ಸ್ಥಾಪಿಸಿದೆ. ಎರಡು ಪಾರ್ಟ್‌ನಲ್ಲಿ ಮೂಡಿಬಂದ ಈ ಸಿನಿಮಾ ಇತಿಹಾಸದ ಪುಟಗಳಲ್ಲಿ ತನ್ನ ದಾಖಲೆಯನ್ನ ಬರೆದಿಟ್ಟಿದೆ. ದೇಶವಷ್ಟೇ ಅಲ್ಲದೇ ಇಡೀ ಜಗತ್ತಿನಾದ್ಯಂತ ಭಾರತ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿದೆ. ಬಾಹುಬಲಿ ಸಿನಿಮಾ ಇಡೀ ಭಾರತೀಯ ಚಿತ್ರರಂಗಕ್ಕೆ ದಿಕ್ಸೂಚಿಯಾಗಿದೆ ಅಂದ್ರೆ ಅತೀಶಯೋಕ್ತಿಯಾಗಲಾರದು.

    ದಾಖಲೆಗಳ ಮೇಲೆ ದಾಖಲೆಗಳನ್ನ ಮಾಡಿರುವ ಬಾಹುಬಲಿ ಸಿನಿಮಾಗೆ ದಶಕದ ಸಂಭ್ರಮ. ಜುಲೈ 10ರಂದು ತೆರೆಕಂಡ ಬಾಹುಬಲಿ ಪಾರ್ಟ್-1 ಸಿನಿಮಾಗೆ 2025ರ ಜುಲೈ 10ಕ್ಕೆ ಭರ್ತಿ 10 ವರ್ಷ ತುಂಬಿದೆ. ಈ ಖುಷಿ ವಿಚಾರವನ್ನ ನಿರ್ದೇಶಕ ರಾಜಮೌಳಿ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಆ ಜರ್ನಿಯನ್ನ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.

    ಇದೇ ಖುಷಿ ಸಂದರ್ಭದಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಬಾಹುಬಲಿ ಸಿನಿಮಾ ಮತ್ತೆ ತೆರೆಗೆ ಬರುವ ಡೇಟ್ ಕೂಡಾ ಅನೌನ್ಸ್ ಮಾಡಿದ್ದಾರೆ. ಅಕ್ಟೋಬರ್ 31ಕ್ಕೆ ವಿಶ್ವದಾದ್ಯಂತ ಬಾಹುಬಲಿ ದರ್ಶನ ಕೊಡಲಿದೆಯಂತೆ. ಪ್ರಭಾಸ್, ರಾಣಾ ದಗ್ಗುಭಾಟಿ, ರಮ್ಯ ಕೃಷ್ಣ, ಸತ್ಯರಾಜ್, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಮುಂತಾದವ್ರು ಈ ಚಿತ್ರದ ಯಶಸ್ಸಿನ ಭಾಗವಾಗಿದ್ದಾರೆ.

  • ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಬ್ಯುಸಿ

    ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಬ್ಯುಸಿ

    ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿ ಅವರು ಬರೋಬ್ಬರಿ 7 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾವೆಲ್ಲಾ ಸಿನಿಮಾಗಳು ನಟಿಯ ಕೈಯಲ್ಲಿವೆ ಎಂಬುದರ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಶ್ರುತಿ ಹಾಸನ್?

    ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಅದ್ಭುತ ನಟಿ ಅನುಷ್ಕಾ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಬಾಹುಬಲಿ, ಅರುಂಧತಿ ಅಂತಹ ಸಿನಿಮಾಗಳೇ ಸಾಕ್ಷಿ. ಹಾಗಾಗಿ ಇದೇ ರೀತಿಯ ವಿಭಿನ್ನ ಎಂದೆಸಿದ ಸಿನಿಮಾಗಳಿಗೆ ನಟಿ ಓಕೆ ಎಂದಿದ್ದಾರೆ. ಬರೋಬ್ಬರಿ ಅರ್ಧ ಡಜನ್ ಸಿನಿಮಾ ಅನುಷ್ಕಾ ಕೈಯಲ್ಲಿವೆ. ಇದನ್ನೂ ಓದಿ:ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿ ಶೋಭಾ ಶೆಟ್ಟಿ

    ‘ಘಾಟಿ’ ಸಿನಿಮಾ, ಮತ್ತೊಂದು ಮಲಯಾಳಂನ ‘ಕಥನಾರ್’ ಚಿತ್ರದ ರಿಲೀಸ್‌ಗೆ ಸಜ್ಜಾಗಿದೆ. ತೆಲುಗಿನಲ್ಲಿ 3 ಸಿನಿಮಾ, ತಮಿಳಿನಲ್ಲಿ 2 ಸಿನಿಮಾ, ಮಲಯಾಳಂನ 2 ಚಿತ್ರಗಳಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಪೈಕಿ ಒಂದು ಪ್ರಾಜೆಕ್ಟ್‌ನಲ್ಲಿ ಪ್ರಭಾಸ್ ಜೊತೆ ಮತ್ತೊಮ್ಮೆ ಸ್ವೀಟಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಜೋಡಿಯ ಸಿನಿಮಾಗೆ ಪ್ರತಿಷ್ಠಿತ ಸಂಸ್ಥೆಯೊಂದು ನಿರ್ಮಾಣಕ್ಕೆ ಸಾಥ್ ಕೊಟ್ಟಿದೆ ಎಂದು ಹೇಳಲಾಗ್ತಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಸಿಗಲಿದೆಯಂತೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟಪಡಿಸುವವರೆಗೂ ಕಾದುನೋಡಬೇಕಿದೆ.

    ಕಡೆಯದಾಗಿ 2023ರಲ್ಲಿ ತೆರೆಕಂಡ ‘ಮಿಸ್‌ ಶೆಟ್ಟಿ ಮಿಸ್ಟರ್‌ ಪೋಲಿಶೆಟ್ಟಿ’ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಈಗ ಬ್ಯಾಕ್‌ ಟು ಬ್ಯಾಕ್‌ 7 ಚಿತ್ರಗಳು ಒಪ್ಪಿಕೊಂಡಿದ್ದಾರೆ ಎಂದು ಕೇಳಿ ನಟಿಯ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

  • ಅನುಷ್ಕಾ ಶೆಟ್ಟಿ ಬರ್ತ್‌ಡೇಯಂದು ಫ್ಯಾನ್ಸ್‌ಗೆ ಸಿಗಲಿದೆ ಗುಡ್ ನ್ಯೂಸ್- ಏನದು?

    ಅನುಷ್ಕಾ ಶೆಟ್ಟಿ ಬರ್ತ್‌ಡೇಯಂದು ಫ್ಯಾನ್ಸ್‌ಗೆ ಸಿಗಲಿದೆ ಗುಡ್ ನ್ಯೂಸ್- ಏನದು?

    ರಾವಳಿ ಬೆಡಗಿ ಅನುಷ್ಕಾ ಶೆಟ್ಟಿಗೆ (Anushka Shetty) ನವೆಂಬರ್ 7ರಂದು ಹುಟ್ಟುಹಬ್ಬದ (Birthday) ಸಂಭ್ರಮ. ಈ ದಿನವೇ ಸ್ವೀಟಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗಲಿದೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಇದನ್ನೂ ಓದಿ:ಬ್ರೇಕಪ್ ಆಗಿರೋದು ನಿಜ: ಸ್ಪಷ್ಟನೆ ನೀಡಿದ ಜಯಶ್ರೀ ಆರಾಧ್ಯ

    ಅನುಷ್ಕಾ ಅವರು ಸದ್ಯ ತೆಲುಗಿನ ‘ಘಾಟಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ಚಿತ್ರ ಮಲಯಾಳಂನ ‘ಕಟನಾರ್’ ಸಿನಿಮಾದಲ್ಲೂ ಸ್ವೀಟಿ ನಟಿಸಿದ್ದಾರೆ. ಈ ಎರಡು ಚಿತ್ರಗಳ ಅವರ ಪಾತ್ರದ ಪೋಸ್ಟರ್ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದೆ ಚಿತ್ರತಂಡ. ಜೊತೆಗೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದಾರೆ. ಈ ಮೂಲಕ ಸ್ವೀಟಿ ಫ್ಯಾನ್ಸ್‌ಗೆ ನಟಿಯ ನಯಾ ಲುಕ್ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

    ಇನ್ನೂ ‘ಬಾಹುಬಲಿ’ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಅನುಷ್ಕಾ ಅವರು ಕಳೆದ ವರ್ಷ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರು ಕೈತುಂಬಾ ಸಿನಿಮಾಗಳಿವೆ. ನಟಿಯ ಹುಟ್ಟುಹಬ್ಬದಂದು ಅಫಿಷಿಯಲ್ ಆಗಿ ಸಿನಿಮಾ ಕುರಿತು ಸುದ್ದಿ ಸಿಗಲಿದೆ.

    ಅಂದಹಾಗೆ, ಕಟನಾರ್, ಕಾಂಚೆ, ಘಾಟಿ, ಗೌತಮಿಪುತ್ರ ಶತಕರ್ಣಿ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅನುಷ್ಕಾ ಕೈಯಲ್ಲಿವೆ.

  • ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

    ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ

    ರಾವಳಿ ಬೆಡಗಿ ಅನುಷ್ಕಾ ಶೆಟ್ಟಿ (Anushka Shetty) ಅವರು ತೆಲುಗು ಮತ್ತು ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ನಂತರ ಒಪ್ಪಿಕೊಂಡಿದ್ದ 2 ಬಿಗ್ ಪ್ರಾಜೆಕ್ಟ್‌ಗಳ ಶೂಟಿಂಗ್ ಅನ್ನು ನಟಿ ಮುಗಿಸಿಕೊಟ್ಟಿದ್ದಾರೆ. ಬೆಳ್ಳಿಪರದೆಯಲ್ಲಿ ಅನುಷ್ಕಾ ಸಿನಿಮಾ ನೋಡಲು ಕಾಯುತ್ತಿರುವ ಫ್ಯಾನ್ಸ್‌ಗೆ ಈಗ ಅವರ ಮುಂದಿನ ಸಿನಿಮಾಗಳ ಅಪ್‌ಡೇಟ್‌ ಸಿಕ್ಕಿದೆ. ಇದನ್ನೂ ಓದಿ:ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

    ಅನುಷ್ಕಾ ಶೆಟ್ಟಿ ಕ್ಯಾಮೆರಾ ಮುಂದೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಕೆಲಸದ ಮೂಲಕ ಅವರು ಉತ್ತರ ಕೊಡೋಕೆ ರೆಡಿಯಾಗಿದ್ದಾರೆ. ತೆಲುಗಿನ ‘ಘಾಟಿ’ ಹಾರರ್ ಮತ್ತು ಮಲಯಾಳಂನಲ್ಲಿ ಜಯಸೂರ್ಯ ಜೊತೆ ಅನುಷ್ಕಾ ನಟಿಸಿದ್ದಾರೆ. ಈ 2 ಪ್ರಾಜೆಕ್ಟ್‌ಗಳ ಶೂಟಿಂಗ್ ಮುಗಿದಿದೆ.

    ಅದರಲ್ಲೂ ಮಲಯಾಳಂ ಸಿನಿಮಾದಲ್ಲಿ ಅವರು ನೀಲಿ ಎಂಬ ಮಾಟಗಾತಿಯ ಪಾತ್ರಕ್ಕೆ ಅನಷ್ಕಾ ಜೀವತುಂಬಿದ್ದಾರೆ. ಈ ಚಿತ್ರ 2 ಭಾಗಗಳಲ್ಲಿ ಮೂಡಿ ಬರಲಿದೆ. ಅನುಷ್ಕಾ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರಕ್ಕೆ ರೊಜಿನ್ ಥಾಮಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಅಂದಹಾಗೆ, ಮಲಯಾಳಂ ಸಿನಿಮಾ, ಕಾಂಚೆ, ಘಾಟಿ, ಗೌತಮಿಪುತ್ರ ಶತಕರ್ಣಿ, ಕ್ರಿಷ್ ಜಗರ್ಲಮುಡಿ ನಿರ್ದೇಶನ ಮಹಿಳಾ ಪ್ರಧಾನ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಅನುಷ್ಕಾ ಕೈಯಲ್ಲಿವೆ. ಮುಂದಿನ ವರ್ಷ ಒಂದೊಂದೇ ಸಿನಿಮಾಗಳು ರಿಲೀಸ್ ಆಗಲಿವೆ.

  • Narendra Modi Biopic: ಪಿಎಂ ಪಾತ್ರದಲ್ಲಿ ‘ಬಾಹುಬಲಿ’ ನಟ

    Narendra Modi Biopic: ಪಿಎಂ ಪಾತ್ರದಲ್ಲಿ ‘ಬಾಹುಬಲಿ’ ನಟ

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಈಗಾಗಲೇ ಬಯೋಪಿಕ್‌ವೊಂದು ಬಂದಿದೆ. ಆದರೆ ಈಗ ಮತ್ತೊಮ್ಮೆ ಮೋದಿ ಅವರ ಜೀವನ ಕಥೆಯನ್ನು ತೆರೆಯ ಮೇಲೆ ತೋರಿಸಲು ತಯಾರಿ ನಡೆಯುತ್ತಿದೆ. ಪಿಎಂ ನರೇಂದ್ರ ಮೋದಿ ಪಾತ್ರದಲ್ಲಿ ತಮಿಳಿನ ನಟ ಸತ್ಯರಾಜ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಬಾಲಿವುಡ್ ಬಳಿಕ ಸೌತ್‌ನಲ್ಲಿ ಮತ್ತೊಮ್ಮೆ ಸಿನಿಮಾ ಮಾಡಿ ತೋರಿಸಲು ಚಿತ್ರತಂಡ ಸಜ್ಜಾಗಿದ್ದಾರೆ. ಈ ಬಾರಿ ಸಿ.ಎಚ್ ಕ್ರಾಂತಿ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ‘ಬಾಹುಬಲಿ’ (Bahubali) ಕಟ್ಟಪ್ಪ ಪಾತ್ರದಲ್ಲಿ ನಟಿಸಿದ್ದ ಸತ್ಯರಾಜ್ (Sathyaraj) ಅವರು ನರೇಂದ್ರ ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲು ಆಫರ್ ಸಿಕ್ಕಿದೆ ಎನ್ನಲಾಗಿದೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ಈಗಾಗಲೇ ಸೌತ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿರುವ ಸತ್ಯರಾಜ್ ಜೊತೆ ಚಿತ್ರತಂಡ ಸಂಪರ್ಕಿಸಿದೆ. ಸಿನಿಮಾ ಬಗ್ಗೆ ಒಂದು ಹಂತದ ಮಾತುಕತೆ ಕೂಡ ನಡೆದಿದೆ. ಆದರೆ ಪಿಎಂ ಪಾತ್ರದಲ್ಲಿ ನಟಿಸಲು ಸತ್ಯರಾಜ್ ಒಪ್ಪಿಗೆ ನೀಡಿದ್ರಾ? ಎಂಬುದು ತಿಳಿದು ಬಂದಿಲ್ಲ. ಸಿನಿಮಾತಂಡದಿಂದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಪಿಎಂ ಬಯೋಪಿಕ್ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಈ ಹಿಂದೆ ಪೆರಿಯಾರ್ ಇವಿ ರಾಮಸ್ವಾಮಿ ಅವರ ಪಾತ್ರವನ್ನು ಮಾಡಿ ಸತ್ಯರಾಜ್ ಸೈ ಎನಿಸಿಕೊಂಡಿದ್ದರು. ಅವರ ನಟನೆಗೆ ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಹಾಗಾಗಿ ಪಿಎಂ ಪಾತ್ರಕ್ಕೂ ಇವರೇ ಸೂಕ್ತ ಅಂತ ನೆಟ್ಟಿಗರು ಮಾತನಾಡಿಕೊಳ್ತಿದ್ದಾರೆ.

  • ರಾಜಮೌಳಿ ಚಿತ್ರದಲ್ಲಿ 8 ಗೆಟಪ್‌ನಲ್ಲಿ ಕಾಣಿಸಿಕೊಳ್ತಾರೆ ಪ್ರಿನ್ಸ್

    ರಾಜಮೌಳಿ ಚಿತ್ರದಲ್ಲಿ 8 ಗೆಟಪ್‌ನಲ್ಲಿ ಕಾಣಿಸಿಕೊಳ್ತಾರೆ ಪ್ರಿನ್ಸ್

    ಸ್ಟಾರ್ ಡೈರೆಕ್ಟರ್ ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬು (Mahesh Babu) ಹೊಸ ಯುದ್ಧಕ್ಕೆ ಸಜ್ಜಾಗುತ್ತಿದ್ದಾರೆ. ಇಷ್ಟು ವರ್ಷ ರಾಜಮೌಳಿ (Rajamouli) ಮಾಡಿದ ಸಿನಿಮಾಗಳದ್ದು ಒಂದು ತೂಕ. ಈಗ ಹೊಸ ಹಿಸ್ಟರಿ ಕ್ರಿಯೇಟ್ ಮಾಡಲು ಹೊರಟಿದ್ದಾರೆ. ಅದಕ್ಕೆ ಕಾರಣ ಹಲವಾರಿವೆ. ಅದರಲ್ಲಿ ಕೆಲವು ಮಾತ್ರ ಹೊರ ಬಿದ್ದಿವೆ. ಚಿತ್ರದಲ್ಲಿ ಹೀರೋ ಲುಕ್ ಹೇಗಿರಲಿದೆ. ಎಲ್ಲೆಲ್ಲಿ ಶೂಟಿಂಗ್ ನಡೆಸಲಿದೆ? ಎಷ್ಟು ಕೋಟಿ ಸುರಿಯಲಿದ್ದಾರೆ ಈ ಚಿತ್ರಕ್ಕೆ? ಇಲ್ಲಿದೆ ಮಾಹಿತಿ.

    ರಾಜಮೌಳಿ ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಅದನ್ನು ದಾಟಿ ಹೋಗಲಿದ್ದಾರೆ. ಇದು ಗ್ಲೋಬಲ್ ಸಿನಿಮಾ. ಬರೀ ಭಾರತೀಯ ಭಾಷೆಗಳಲ್ಲಿ ಮಾತ್ರ ಅಲ್ಲ. ಇಂಗ್ಲಿಷ್ ಹಾಗೂ ಇತರ ದೇಶದ ಭಾಷೆಗೂ ಡಬ್ ಆಗಲಿದೆ. ಅಲ್ಲಿಗೆ ಜಕ್ಕಣ್ಣನ ಸವಾರಿ ಸಪ್ತಸಾಗರ ದಾಟಿ ಹೊಸ ಹಬ್ಬ ಮಾಡಲಿದೆ. ಇದನ್ನೂ ಓದಿ:ಶರಣ್ ನಟನೆಯ ‘ಛೂ ಮಂತರ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಅದಕ್ಕೆ ಸಾಕ್ಷಿಯಾಗಿ ಸಿಕ್ಕಿದೆ ಈ ಸುದ್ದಿ. ಹೆಚ್ಚು ಕಮ್ಮಿ ಇಪ್ಪತ್ತು ದೇಶಗಳಲ್ಲಿ ಇದರ ಶೂಟಿಂಗ್ ನಡೆಯಲಿದೆ. ಬಹುತೇಕ ಕಾಡಿನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅದಷ್ಟೇ ಅಲ್ಲ, 8 ಗೆಟಪ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪಾತ್ರ ಹೀಗೆ ಬರಬೇಕು ಅದಕ್ಕೆ ಏನೆಲ್ಲಾ ಮಾಡಬೇಕೋ ಅದರ ತಯಾರಿಯಲ್ಲಿದ್ದಾರೆ. ಅದು ಎಲ್ಲೆಲ್ಲಿ ಎನ್ನುವುದು ನಿಗೂಢ. ಹೀಗಾಗಿ ಮಹೇಶ್ ಬಾಬು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹೇಗಿರಲಿದೆಯೋ ರುಸ್ತುಂ ಜೋಡಿ ಬೆಳ್ಳಿತೆರೆ?

    ಇನ್ನೇನು ಮುಂದಿನ ತಿಂಗಳಲ್ಲಿ ಮುಹೂರ್ತ ನಡೆಸಲಿದೆ. ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಅದಕ್ಕೆ ಏನೇನು ಮಸಾಲೆ ಬೇಕು ರಾಜಮೌಳಿ ತುಂಬಿದ್ದಾರೆ. ಭರ್ತಿ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಕೋಟಿ ಖರ್ಚು ಮಾಡುತ್ತಿರುವುದು ಇದೇ ಮೊದಲು. ಗ್ಲೋಬಲ್ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಇದೆ. ಇದರಲ್ಲಿ ಹೀರೋ ಬಿಟ್ಟರೆ ಇನ್ಯಾರ ಹೆಸರೂ ಗೊತ್ತಾಗಿಲ್ಲ. ಅದಕ್ಕೂ ಅಂತಿಮ ತೆರೆ ಬೀಳುವ ದಿನ ದೂರ ಇಲ್ಲ. ಪ್ರಿನ್ಸ್ ಈ ಸಿನಿಮಾದಿಂದ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತಾರೊ? ಏನಾಗಲಿದೆಯೋ? ಎಲ್ಲವೂ ಸಿನಿಮಾ ತೆರೆ ಕಂಡ ನಂತರ ಗೊತ್ತಾಗಲಿದೆ.

  • ಮೈಸೂರಿನಲ್ಲಿ ಪ್ರಭಾಸ್ ಮೇಣದ ಪ್ರತಿಮೆ- ಬಾಹುಬಲಿ ನಿರ್ಮಾಪಕ ಗರಂ

    ಮೈಸೂರಿನಲ್ಲಿ ಪ್ರಭಾಸ್ ಮೇಣದ ಪ್ರತಿಮೆ- ಬಾಹುಬಲಿ ನಿರ್ಮಾಪಕ ಗರಂ

    ಬಾಹುಬಲಿ (Bahubali) ಪ್ರಭಾಸ್‌ಗೆ (Prabhas) ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಕರ್ನಾಟಕದಲ್ಲೂ ಪ್ರಭಾಸ್‌ಗೆ ಫ್ಯಾನ್ಸ್ ಇದ್ದಾರೆ. ಮೈಸೂರಿನಲ್ಲಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ ಮೇಣದ ನಿರ್ಮಿಸಿಲಾಗಿದೆ. ಈ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆಗೆ ಪ್ರಭಾಸ್ ಪಾತ್ರರಾಗಿದ್ದಾರೆ. ಪ್ರಭಾಸ್ ಮೇಣದ ಪ್ರತಿಮೆ ನಿರ್ಮಿಸಿದ್ದಕ್ಕೆ ಬಾಹುಬಲಿ ನಿರ್ಮಾಪಕ ಗರಂ ಆಗಿದ್ದಾರೆ.

    ಮೈಸೂರಿನ ಮ್ಯೂಸಿಯಂನಲ್ಲಿ (Mysuru Museum) ಪ್ರಭಾಸ್ ಪ್ರತಿಮೆ ನಿರ್ಮಾಣ ಮಾಡಿರುವ ವಿಚಾರಕ್ಕೆ ಸ್ವತಃ ಬಾಹುಬಲಿ ನಿರ್ಮಾಪಕ ಶೋಬು ಯರ್ಲಗಡ್ಡ ಅಸಮಾಧಾನ ಹೊರಹಾಕಿದ್ದಾರೆ. ಮ್ಯೂಸಿಯಂನಲ್ಲಿ ಪ್ರಭಾಸ್ ಬಾಹುಬಲಿ ಲುಕ್ ವೈರಲ್ ಆಗ್ತಿದ್ದಂತೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಮೆ ನೋಡಲು ಬಾಹುಬಲಿ ರೀತಿ ಇದೆ. ಆದರೆ ಬಾಹುಬಲಿ ಲುಕ್‌ಗೂ ಪ್ರಭಾಸ್‌ಗೂ ಹೊಂದಾಣಿಕೆ ಆಗುತ್ತಿಲ್ಲ. ಇದನ್ನೂ ಓದಿ:ಶ್ರೀಲೀಲಾ ಔಟ್, ವಿಜಯ್ ದೇವರಕೊಂಡಗೆ ಮತ್ತೆ ರಶ್ಮಿಕಾ ಮಂದಣ್ಣ ನಾಯಕಿ

    ಕ್ರಿಕೆಟಿಗ ಡೇವಿಡ್ ವಾರ್ನರ್ ರೀತಿ ಕಾಣುತ್ತಿದೆ ಎಂದು ಟ್ರೋಲ್ ಮಾಡ್ತಿದ್ದಾರೆ. ಲೈಸೆನ್ಸ್ ಇಲ್ಲದೇ ಈ ರೀತಿ ಪ್ರತಿಮೆ ಮಾಡಿರೋದು ತಪ್ಪು ಎಂದು ನಿರ್ಮಾಪಕ ಟ್ವೀಟ್ ಮಾಡಿದ್ದಾರೆ. ಪ್ರಭಾಸ್ ಪ್ರತಿಮೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಅದನ್ನು ತೆಗೆದು ಹಾಕುವಂತೆ ಬಾಹುಬಲಿ ನಿರ್ಮಾಪಕ ಆಗ್ರಹಿಸಿದ್ದಾರೆ.

    ಅನುಮತಿ ಪಡೆಯದೇ ಯಾರ ಗಮನಕ್ಕೂ ತರದೇ ಈ ಪ್ರತಿಮೆ ಮಾಡಲಾಗಿದೆ. ಇದನ್ನೂ ತೆಗೆದು ಹಾಕಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ವತಃ ಬಾಹುಬಲಿ ನಿರ್ಮಾಪಕ ಶೋಬು ಯರ್ಲಗಡ್ಡ (Shobu Yarlagadda) ಪ್ರತಿಕ್ರಿಯೆ ನೀಡಿದ್ದಾರೆ.

    2015ರಲ್ಲಿ ಬಾಹುಬಲಿ ಸಿನಿಮಾ ತೆರೆ ಕಂಡಿತ್ತು. ಪ್ರಭಾಸ್, ಅನುಷ್ಕಾ ಶೆಟ್ಟಿ (Anushka Shetty), ರಮ್ಯಾ ಕೃಷ್ಣನ್, ತಮನ್ನಾ (Tamanna Bhatia) ಸೇರಿದಂತೆ ಹಲವರು ನಟಿಸಿದ್ದರು. ರಾಜಮೌಳಿ ನಿದೇಶನಕ್ಕೆ, ನಿರ್ಮಾಪಕ ಶೋಬು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ನಿರ್ಮಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ರಿಲೀಸ್ ಬಳಿಕ ಮಹಿಳಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಅನುಷ್ಕಾ ಶೆಟ್ಟಿ

    ಸಿನಿಮಾ ರಿಲೀಸ್ ಬಳಿಕ ಮಹಿಳಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಅನುಷ್ಕಾ ಶೆಟ್ಟಿ

    ‘ಮಿಸ್ ಶೆಟ್ಟಿ ಮಿಸ್ಟರ್ ಶೆಟ್ಟಿ’ (Miss Shetty Mr Polishetty) ಸಿನಿಮಾ ಮೂಲಕ ಸಂಚಲನ ಮೂಡಿಸುತ್ತಿರುವ ಅನುಷ್ಕಾ ಶೆಟ್ಟಿ (Anushka Shetty) ಇದೀಗ ತಮ್ಮ ಮಹಿಳಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮಹಿಳಾ ಅಭಿಮಾನಿಗಳಿಗಾಗಿ (Fans) ವಿಶೇಷ ವಿಡಿಯೋವೊಂದನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ‘ಜವಾನ್’ (Jawan) ಸಿನಿಮಾ ಮುಂದೆ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಶೆಟ್ಟಿ’ ರಿಲೀಸ್ ಆಗಿ ಗೆದ್ದು ಬೀಗುತ್ತಿದೆ. ಇದೇ ಖುಷಿಯಲ್ಲಿ ತಮ್ಮ ಫೀಮೇಲ್ ಫ್ಯಾನ್ಸ್‌ಗೆ ಅನುಷ್ಕಾ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಸಿನಿಮಾವನ್ನ ಗೆಲ್ಲಿಸಿದ್ದಕ್ಕೆ ನಟಿ ಧನ್ಯವಾದಗಳನ್ನ ತಿಳಿಸಿದ್ದಾರೆ. ಸೆ.14ರಂದು ಗುರುವಾರ ಬೆಳಿಗ್ಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಲ್ಲಿ ಮಹಿಳೆಯರಿಗೆಂದೇ ಸ್ಪೆಷಲ್ ಶೋ ಅರೆಂಜ್ ಮಾಡಿದ್ದಾರೆ. ಅವರ ಅಭಿಮಾನಕ್ಕೆ ಸಾಕ್ಷಿಯಾಗಲು ನಟಿ ಅನುಷ್ಕಾ ಕೂಡ ತಂಡದ ಜೊತೆ ಬರುತ್ತಿದ್ದಾರೆ. ಎಲ್ಲಾ ಮಹಿಳೆಯರು ಬನ್ನಿ ಎಂದು ನಟಿ ಮನವಿ ಮಾಡಿದ್ದಾರೆ.

    ಬಹುದಿನಗಳ ನಂತರ ಈ ವಿಡಿಯೋ ಮೂಲಕ ನಟಿ ದರ್ಶನ ನೀಡಿದಕ್ಕೆ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ವಿಡಿಯೋದಲ್ಲಿ ಮತ್ತಷ್ಟು ಫಿಟ್ ಆಗಿ ಮುದ್ದಾಗಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.

    ಸೆ.7ರಂದು ‘ಮಿಸ್ ಶೆಟ್ಟಿ ಮಿಸ್ಟರ್ ಶೆಟ್ಟಿ’ ರಿಲೀಸ್ ಆಗಿತ್ತು. ವರ್ಷಗಳ ನಂತರ ಅನುಷ್ಕಾ ಶೆಟ್ಟಿ ತೆರೆಯ ಮೇಲೆ ಬಂದರು. ನವಪ್ರತಿಭೆ ನವೀನ್ ಪೋಲಿಶೆಟ್ಟಿಗೆ ಜೋಡಿಯಾಗಿ ಸ್ವೀಟಿ ನಟಿಸಿದ್ದರು. ಕಾಮಿಡಿ ವಿತ್ ಲವ್ ಸ್ಟೋರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್

    ‘ಬಾಹುಬಲಿ’ (Bahubali) ನಟಿ ಅನುಷ್ಕಾ ಶೆಟ್ಟಿ ಯಾವುದೇ ಪಾತ್ರ ಕೊಟ್ಟರು ಆ ಪಾತ್ರವೇ ತಾವಾಗಿ ನಟಿಸುವ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನ ಅವರು ಸಿನಿಮಾದಲ್ಲೂ ಪ್ರೂವ್ ಮಾಡಿದ್ದಾರೆ. ಸದ್ಯ ಈ ಚಿತ್ರದಲ್ಲಿನ ಅನುಷ್ಕಾರ ಶೆಫ್ ಪಾತ್ರಕ್ಕೆ ಫ್ಯಾನ್ಸ್ ಮನಸೋತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಬಾಹುಬಲಿ’ ಸಕ್ಸಸ್ ಬಳಿಕ ನಟನೆಯಿಂದ ದೂರವಾಗಿದ್ಯಾಕೆ? ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ

    ‘ಬಾಹುಬಲಿ’ ಸಕ್ಸಸ್ ಬಳಿಕ ನಟನೆಯಿಂದ ದೂರವಾಗಿದ್ಯಾಕೆ? ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ

    ನ್ನಡತಿ, ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಇದೀಗ ಮತ್ತೆ ಚಿತ್ರಮಂದಿರಗಳಲ್ಲಿ ಮೋಡಿ ಮಾಡ್ತಿದ್ದಾರೆ. ಮಿಸ್ ಶೆಟ ಮಿಸ್ಟರ್ ಶೆಟ್ಟಿ ಸಿನಿಮಾ ಮೂಲಕ ನಟಿ ಕಮ್‌ಬ್ಯಾಕ್ ಆಗಿದ್ದಾರೆ. ಹೀಗಿರುವಾಗ ‘ಬಾಹುಬಲಿ’ (Bahubali) ಅಂತಹ ಸೂಪರ್ ಸಕ್ಸಸ್‌ಫುಲ್ ಸಿನಿಮಾ ಕೊಟ್ರು ನಟನೆಯಿಂದ ಸ್ವೀಟಿ ದೂರವಾಗಿದ್ದು ಯಾಕೆ? ಎಂಬುದನ್ನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಮಾಡುವಾಗಲೇ ನಾನು ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದೆ. ಆ ಸಮಯದಲ್ಲಿ ನನಗೆ ಬ್ರೇಕ್ ಎಂಬುದು ಬಹಳ ಅವಶ್ಯಕವಾಗಿತ್ತು. ಬಾಹುಬಲಿ ಸಿನಿಮಾ ಮುಗಿದ ಬಳಿಕ ಈ ಹಿಂದೆಯೇ ಒಪ್ಪಂದ ಆಗಿದ್ದ ‘ಭಾಗಮತಿ’ ಸಿನಿಮಾದ ಕೆಲಸ ಮುಗಿಸಿ ನಾನು ಬ್ರೇಕ್ ತೆಗೆದುಕೊಂಡೆ. ಕೆಲವು ವರ್ಷ ಯಾವೊಂದು ಚಿತ್ರಕತೆಯನ್ನು ಸಹ ನಾನು ಕೇಳಲಿಲ್ಲ. ಚಿತ್ರರಂಗದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡೆ ಎಂದಿದ್ದಾರೆ. ಇದನ್ನೂ ಓದಿ:ಏಳು ಸಲ ಗರ್ಭಪಾತ ಮಾಡಿಸಿದ: ರಾಜಕಾರಣಿ ಸೀಮನ್ ವಿರುದ್ಧ ನಟಿ ಜಯಲಕ್ಷ್ಮಿ ಆರೋಪ

    ‘ಬಾಹುಬಲಿ’ (Bahubali) ಅಂಥಹಾ ದೊಡ್ಡ ಹಿಟ್ ಸಿನಿಮಾ ನೀಡಿದ ಬಳಿಕ ಅದರ ಲಾಭ ತೆಗೆದುಕೊಳ್ಳಬೇಕು ಎಂದು ಹಲವರು ಬಯಸುವುದು ಸಹಜ. ಆದರೆ ನನಗೆ ಅದರ ಅವಶ್ಯಕತೆ ಇರಲಿಲ್ಲ. ನನಗೆ ನನ್ನ ವೃತ್ತಿ ಜೀವನದಿಂದ ಒಂದು ಬ್ರೇಕ್ ಬೇಕಿತ್ತು ಹಾಗಾಗಿ ಬ್ರೇಕ್ ತೆಗೆದುಕೊಂಡೆ. ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ‘ನಿಶ್ಯಬ್ಧಂ’ ಮತ್ತು ಈಗ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಅನುಷ್ಕಾ ಶೆಟ್ಟಿ ಮಾತನಾಡಿದ್ದಾರೆ.

    ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ನಾನು ಕತೆಗಳನ್ನು ಕೇಳುತ್ತೇನೆ. ಒಳ್ಳೆಯ ಕತೆ ಸಿಕ್ಕರೆ ಭಾರತದ ಯಾವುದೇ ಭಾಷೆಯಾಗಿದ್ರು ನಟಿಸಲು ಸಿದ್ಧ ಎಂದಿದ್ದಾರೆ. ಪ್ರಸ್ತುತ ನವೀನ್ ಪೋಲಿಶೆಟ್ಟಿ ಜೊತೆ ನಟಿಸಿರುವ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ (Miss Shetty Mr Polishetty) ಸಿನಿಮಾ ಜವಾನ್ (Jawan) ಚಿತ್ರದ ಮುಂದೆ ಸೆ.7ರಂದು ರಿಲೀಸ್ ಆಗಿದ್ದು, ಅನುಷ್ಕಾ ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಬಿಟ್ಟು ರಾಜಕೀಯದತ್ತ ರಮ್ಯಾ ಕೃಷ್ಣನ್? ಸ್ಪಷ್ಟನೆ ನೀಡಿದ ನಟಿ

    ಸಿನಿಮಾ ಬಿಟ್ಟು ರಾಜಕೀಯದತ್ತ ರಮ್ಯಾ ಕೃಷ್ಣನ್? ಸ್ಪಷ್ಟನೆ ನೀಡಿದ ನಟಿ

    ನ್ನಡದ ರಾಜ ನರಸಿಂಹ, ನೀಲಾಂಬರಿ, ಗಡಿಬಿಡಿ ಗಂಡ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ರಮ್ಯಾ ಕೃಷ್ಣನ್ (Ramya Krishnan) ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ದಾರೆ. ಸಿನಿಮಾರಂಗದಲ್ಲಿ ‘ಬಾಹುಬಲಿ’ (Bahubali) ನಟಿಗೆ ಭರ್ಜರಿ ಡಿಮ್ಯಾಂಡ್ ಇದೆ. ಹೀಗಿರುವಾಗ ರಾಜಕೀಯ ಎಂಟ್ರಿಯ ಬಗ್ಗೆ ನಟಿ ಮಾತನಾಡಿದ್ದಾರೆ.

    ಸದಾ ಹೊಸ ಹೊಸ ಪಾತ್ರಗಳ ಮೂಲಕ ರಂಜಿಸುವ ನಟಿ ರಮ್ಯಾ ಕೃಷ್ಣನ್ ಇದೀಗ ಸಿನಿಮಾ ಬಿಟ್ಟು ರಾಜಕೀಯ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಇತ್ತೀಚಿಗೆ ಸಚಿವೆ ರೋಜಾ (Roja) ಜೊತೆ ರಮ್ಯಾ ಕೃಷ್ಣನ್ ಕುಟುಂಬ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.

    ಕೆಲವು ನಟ-ನಟಿಯರು ಒಂದು ಹಂತ ತಲುಪಿದ ಮೇಲೆ ರಾಜಕೀಯ ಪ್ರವೇಶ ಮಾಡುವುದು ಮಾಮೂಲು. ಕೆಲವರಿಗೆ ಅದೃಷ್ಟ ಒಲಿದರೆ, ರಾಜಕೀಯಲ್ಲಿ ಹಲವು ತಾರೆಯರಿಗೆ ಅದೃಷ್ಟ ಖುಲಾಯಿಸುವುದು ಕಷ್ಟವೇ. ಅದೇನೇ ಇದ್ದರೂ ಈಗ ರಮ್ಯಾ ಕೃಷ್ಣನ್ ಅವರ ವಿಷಯ ಬಹಳ ಸುಳಿದಾಡುತ್ತಿದೆ. ಇತ್ತೀಚಿಗೆ ನಟಿ-ಸಚಿವೆ ರೋಜಾ ಅವರನ್ನು ರಮ್ಯಾಕೃಷ್ಣ ಭೇಟಿ ಮಾಡಿದ್ದರು. ರೋಜಾ ಅವರ ಮನೆಗೂ ಹೋಗಿದ್ದರು. ಇದರಿಂದ ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಅಭಿದಾಸ್‌, ಶರಣ್ಯ ಶೆಟ್ಟಿ ನಟನೆಯ ‌’ನಗುವಿನ ಹೂಗಳ ಮೇಲೆ’ ಸಿನಿಮಾದ ಸಾಂಗ್ ಔಟ್

    ಇದಕ್ಕೆ ಸ್ಪಷ್ಟೀಕರಣ ನೀಡಿರುವ ರಮ್ಯಾ ಕೃಷ್ಣನ್, ಸದ್ಯ ಅಂಥದ್ದೇನೂ ವಿಷಯವಿಲ್ಲ ಎಂದಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ರೋಜಾ ಅವರ ಸಹಾಯವನ್ನು ತೆಗೆದುಕೊಂಡಿದ್ದೆ ಮತ್ತು ರೋಜಾ ಅವರನ್ನು ನೋಡಿ ಬಹಳ ದಿನಗಳಾಗಿದ್ದರಿಂದ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ ಅಷ್ಟೇ ಎಂದಿದ್ದಾರೆ. ಒಂದು ವೇಳೆ ರಾಜಕೀಯ ಸೇರುವ ಯೋಚನೆ ಇದ್ದರೆ ನಿಮಗೇ ಮೊದಲು ತಿಳಿಸುತ್ತೇನೆ. ಯಾವ ಪಕ್ಷ ಎಂದೂ ಆಗಲೇ ಹೇಳುತ್ತೇನೆ ಎನ್ನುವ ಮೂಲಕ ಸದ್ಯ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ. ಒಟ್ನಲ್ಲಿ ತಾವು ರಾಜಕೀಯಕ್ಕೆ ಬರೋದಿಲ್ಲ ಎಂದು ಕ್ಲ್ಯಾರಿಟಿ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]