Tag: bahamani utsav

  • ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರನ್ನು ತರಾಟೆಗೆ ತೆಗದುಕೊಂಡ ಸಿಎಂ- ಕಲಬುರಗಿಯಲ್ಲಿ ಬಹಮನಿ ಉತ್ಸವ ರದ್ದು

    ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರನ್ನು ತರಾಟೆಗೆ ತೆಗದುಕೊಂಡ ಸಿಎಂ- ಕಲಬುರಗಿಯಲ್ಲಿ ಬಹಮನಿ ಉತ್ಸವ ರದ್ದು

    ಕಲಬುರಗಿ: ಹಲವಾರು ಟೀಕೆಗಳ ನಂತರ ಕಲಬುರಗಿಯಲ್ಲಿ ಬಹಮನಿ ಉತ್ಸವ ರದ್ದಾಗಿದೆ. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಕೊನೆಗೂ ಮಣಿದ ರಾಜ್ಯ ಸರ್ಕಾರ ಉತ್ಸವ ಆಚರಣೆಯಿಂದ ಹಿಂದೆ ಸರಿದಿದೆ.

    ಸಚಿವ ಸಂಪುಟ ಸಭೆಯಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ, ಯಾರ ಜೊತೆ ಚರ್ಚಿಸಿ ನೀವು ಉತ್ಸವ ಮಾಡಲು ಹೊರಟಿದ್ದಿರಿ ಪಾಟೀಲರೇ? ಏತಕ್ಕಾಗಿ ಉತ್ಸವ ಮಾಡಲು ಹೊರಟಿರಿ?. ನಾನು ಜನರಿಗೆ, ಮಾಧ್ಯಮದವರಿಗೆ ಏನಂತ ಉತ್ತರ ಕೊಡಲಿ? ಎಂದು ಸಿಎಂ ಅವರು ಸಚಿವರಿಗೆ ಪ್ರಶ್ನೆಗಳ ಸುರಿಮಳೆಗೈದರು.

    ಈ ಕೂಡಲೇ ನೀವು ಕಲಬುರಗಿಗೆ ತೆರಳಿ ಉತ್ಸವ ರದ್ದು ಅಂತಾ ಅಧಿಕೃತವಾಗಿ ಘೋಷಣೆ ಮಾಡಿ ಅಂತಾ ಸಿಎಂ ತಾಕೀತು ಮಾಡಿದ್ದಾರೆ ಅಂತ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಬಹಮನಿ ಸುಲ್ತಾನರ ಉತ್ಸವ ಆಚರಣೆಯಿಂದ ಸಚಿವರು ಹಿಂದೆ ಸರಿದಿದ್ದಾರೆ ಅಂತ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

    https://www.youtube.com/watch?v=4RlmyYKDuh0

  • ಸರ್ಕಾರದಿಂದ `ಬಹುಮನಿ’ ರಾಜಕೀಯ- ಕಲಬುರಗಿಯಲ್ಲಿ ಉತ್ಸವಕ್ಕೆ ತೀವ್ರ ವಿರೋಧ

    ಸರ್ಕಾರದಿಂದ `ಬಹುಮನಿ’ ರಾಜಕೀಯ- ಕಲಬುರಗಿಯಲ್ಲಿ ಉತ್ಸವಕ್ಕೆ ತೀವ್ರ ವಿರೋಧ

    ಕಲಬುರಗಿ: ಸೂಫಿ ಸಂತರ ನಾಡು ಎಂದೇ ಖ್ಯಾತಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಬಹುಮನಿ ಉತ್ಸವಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ.

    ಮಾರ್ಚ್ 6ರಂದು ನಗರದ ಬಹುಮನಿ ಕೋಟೆ ಮತ್ತು ಹಫ್ತ್ ಗುಮ್ಮಜ್ ಬಳಿ ಉತ್ಸವ ನಡೆಯುತಿದ್ದು ಇದಕ್ಕೆ ಬಿಜೆಪಿ ಮತ್ತು ಕೆಲ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

    ಬಹುಮನಿ ಸುಲ್ತಾನರು ವಚನ ಸಾಹಿತ್ಯ, ದಾಸ ಸಾಹಿತ್ಯ, ಸೂಫಿಸಂತರ ಸಾಹಿತ್ಯದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬಹುಮನಿ ಉತ್ಸವ ನಡೆಸಬಾರದು ಅಂತಾ ಹೋರಾಟಗಾರರು ಆಗ್ರಹಿಸಿದ್ದಾರೆ.

    ಶತಾಯಗತಾಯ ಬಹುಮನಿ ಹೆಸರಿನಲ್ಲಿಯೆ ಉತ್ಸವ ಮಾಡಲು ಕೈ ನಾಯಕರು ನಿರ್ಧರಿಸಿದ್ದು, ಮಾರ್ಚ್ 6ರಂದು ಖವಾಲಿ ಸೇರಿದಂತೆ ಬಹುಮನಿ ಸುಲ್ತಾನರ ಸಂಸ್ಕೃತಿ ಅನಾವರಣಕ್ಕೆ ಸಜ್ಜಾಗಿದ್ದಾರೆ. ಈ ಕುರಿತು ಕಲಬುರಗಿ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆಯೋಜಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಯಾರೆ ಏನು ಹೇಳಿದ್ರು ಉತ್ಸವ ಮಾಡಿಯೇ ತೀರುತ್ತೇವೆ ಅಂತ ಹೇಳಿದ್ದಾರೆ.