ಬಾಲಿವುಡ್ (Bollywood) ಬ್ಯೂಟಿ ದಿಶಾ ಪಟಾನಿ (Disha Patani) ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ಹಾರ್ಟಿಗೆ ಸಲ್ಮಾನ್ ಖಾನ್ (Salman Khan) ‘ರಾಧೆ’ (Radhe) ನಾಯಕಿ ಕಚಗುಳಿ ಇಟ್ಟಿದ್ದಾರೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?
ತೆಲುಗಿನ ‘ಲೋಫರ್’ ಚಿತ್ರದಲ್ಲಿ ವರುಣ್ ತೇಜ್‌ಗೆ ನಾಯಕಿಯಾಗಿ ನಟಿಸಿದ ದಿಶಾ ಪಟಾನಿ, ಎಂ.ಎಸ್ ಧೋನಿ ಬಯೋಪಿಕ್, ಭಾಘಿ 2, ಭಾರತ್, ರಾಧೆ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಧೋನಿ ಬಯೋಪಿಕ್‌ನಲ್ಲಿ ಸುಶಾಂತ್ ಸಿಂಗ್ ನಾಯಕಿಯಾಗಿ ಗಮನ ಸೆಳೆದ ನಟಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.
ಇತ್ತೀಚೆಗೆ ದಿಶಾಳ ಹೊಸ ಫೋಟೋಶೂಟ್‌ಗೆ ನೆಟ್ಟಿಗರು ಕಿಡಿಕಾರಿದ್ದರು. ಟ್ಯಾಲೆಂಟ್ ಇಲ್ಲದೇ ಇದ್ದರೂ ಮೈ ತೋರಿಸುವ ಶೋಕಿ ಎಂದು ಕಿಡಿಕಾರಿದ್ದರು. ಆದರೆ ಈಗ ಮತ್ತೆ ಹೊಸ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಲ್ವರ್ ಬಣ್ಣದ ಡ್ರೆಸ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ.
View this post on Instagram
ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಯೋಧ, ತಮಿಳು ನಟ ಸೂರ್ಯ ಜೊತೆ ಕಂಗುವ, ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’, ಸಿನಿಮಾಗಳು ದಿಶಾ ಪಟಾನಿ ಕೈಯಲ್ಲಿದೆ.




ಬಾಲಿವುಡ್‌ನ `ಭಾಗಿ 2′ ಚಿತ್ರದ ಮೂಲಕ ಸಿನಿಪ್ರೇಕ್ಷಕರ ಮನಗೆದ್ದ ಜೋಡಿ ಟೈಗರ್ ಮತ್ತು ದಿಶಾಗೆ ಈ ಸಿನಿಮಾ ಚಿತ್ರೀಕರಣದ ಸಮಯದಲ್ಲೇ ಪ್ರೀತಿ ಚಿಗುರಿತ್ತು. ನಂತರ 6 ವರ್ಷಗಳ ಸುದೀರ್ಫವಾಗಿ ಡೇಟಿಂಗ್ ಮಾಡ್ತಿದ್ದರು. ಈಗ ಈ ಜೋಡಿ ದೂರ ದೂರ ಆಗಿದ್ದಾರೆ. ಡೇಟಿಂಗ್ ವೇಳೆ ವಿದೇಶಕ್ಕೆಲ್ಲ ಜತೆಯಾಗಿ ಹಾರಿದ್ದ ಈ ಜೋಡಿ, ಕಳೆದ ಒಂದು ವರ್ಷದಿಂದ ಜತೆಯಾಗಿಲ್ಲ ಎಂದು ತಿಳಿಸಲಾಗುತ್ತಿದೆ. ಇದನ್ನೂ ಓದಿ;
ಬಹಳ ಸಮಯದಿಂದ ಬೇರೆಯಾಗಿರುವ ಈ ಜೋಡಿ. ಬ್ರೇಕಪ್ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ಈಗ ಸಾಲು ಸಲು ಸಿನಿಮಾಗಳಲ್ಲಿ ಈ ಜೋಡಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಬಿಟೌನ್‌ನಲ್ಲಿ ಕೈ ಕೈ ಹಿಡಿದು ಓಡಾಡಿಕೊಂಡಿದ್ದ ಟೈಗರ್ ಮತ್ತು ದಿಶಾ ಅವರ ದಾರಿ ಬೇರೆ ಬೇರೆಯಾಗಿದೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.