Tag: Bagheera

  • ‘ಬಘೀರ’ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು

    ‘ಬಘೀರ’ ಶೂಟಿಂಗ್ ವೇಳೆ ಶ್ರೀಮುರಳಿ ಕಾಲಿಗೆ ಪೆಟ್ಟು

    ರೋರಿಂಗ್ ಸ್ಟಾರ್ ಶ್ರೀಮುರಳಿ (Sriimurali) ಅವರು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ‘ಬಘೀರ’ (Bagheera Film) ಸಿನಿಮಾದ ಚಿತ್ರೀಕರಣದ ವೇಳೆ ಈ ಅವಘಡ ನಡೆದಿದೆ. ಕೂಡಲೇ ಶ್ರೀಮುರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯನ್ನು ಹೊಗಳಿದ ಮಾನುಷಿ ಚಿಲ್ಲರ್

    ಪ್ರಸ್ತುತ ಶ್ರೀಮುರಳಿ ಅವರು ‘ಬಘೀರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಮುರಳಿ ಅವರಿಗೆ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಶ್ರೀಮುರಳಿ ಚೇತರಿಕೊಳ್ಳುತ್ತಿದ್ದಾರೆ.

    ಹೀಗೆ ಕೆಲವು ತಿಂಗಳುಗಳ ಹಿಂದೆ ‘ಬಘೀರ’ ಸಿನಿಮಾ ಸೆಟ್‌ನಲ್ಲಿಯೇ ಶ್ರೀಮುರಳಿ ಕಾಲಿಗೆ ಪೆಟ್ಟು ಬಿದ್ದಿತ್ತು. ಇದೀಗ 2ನೇ ಬಾರಿ ಕೂಡ ಹೀಗೆ ಆಗಿದೆ.

    ಬಘೀರ ಸಿನಿಮಾದಲ್ಲಿ ಶ್ರೀಮುರಳಿ, ರುಕ್ಮಿಣಿ ವಸಂತ್ ಜೋಡಿಯಾಗಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ಬರೆದ ಕಥೆಗೆ ಡಿ.ಆರ್ ಸೂರಿ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆ ಚಿತ್ರ ನಿರ್ಮಾಣ ಮಾಡಿದ್ದಾರೆ.

  • ನಿಮ್ಮ ಆಜ್ಞೆಯಂತೆ ಪಾಲಿಸ್ತೀನಿ: ಅತ್ತಿಗೆ ನೋವಿನಲ್ಲೂ ಶ್ರೀಮುರಳಿ ಹುಟ್ಟುಹಬ್ಬ

    ನಿಮ್ಮ ಆಜ್ಞೆಯಂತೆ ಪಾಲಿಸ್ತೀನಿ: ಅತ್ತಿಗೆ ನೋವಿನಲ್ಲೂ ಶ್ರೀಮುರಳಿ ಹುಟ್ಟುಹಬ್ಬ

    ನಾಳೆ ನಟ ಶ್ರೀಮುರಳಿ ಅವರ ಹುಟ್ಟು ಹಬ್ಬ (Birthday). ಈ ವರ್ಷದಲ್ಲಿ ಅತ್ತಿಗೆಯ ಸಾವಿನಿಂದಾಗಿ ಬಹುಶಃ ಶ್ರೀಮುರಳಿ (Srimurali) ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದೇ ನಂಬಲಾಗಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತ್ತು ಅಭಿಮಾನಿಗಳನ್ನು ಅಂದು ಭೇಟಿ ಕೂಡ ಮಾಡಲಿದ್ದಾರೆ.

    ಈ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಶ್ರೀಮುರಳಿ, ತಮ್ಮ ಮನದಾಳದ ಮಾತುಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಅತ್ತಿಗೆಯ ಕಳೆದುಕೊಂಡ ನೋವಿನ ಮಧ್ಯೆಯೂ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

    ಎಲ್ಲರಿಗೂ ನಮಸ್ಕಾರ. ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದು ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ಆದ್ರೂ, ಅಭಿಮಾನಿಗಳ ಒತ್ತಾಯದ ಮೇರೆಗೆ , ನೀವು ಕೊಡ್ತಿರೋ ಪ್ರೀತಿ, ಏನ್‌ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಸಿಕ್ಕಿದೆ. ಇದೇ ಡಿಸೆಂಬರ್‌ 17ನೇ ತಾರೀಖು, ವಸಂತ ನಗರದ ದೇವರಾಜ್‌ ಅರಸ್‌ ಭವನ್‌, ಮಿಲರ್ಸ್‌ ರೋಡ್‌, ಅಂಬೇಡ್ಕರ್‌ ಭವನ್‌ ಹಿಂದಿರುವ ಜಾಗದಲ್ಲಿ ಬೆಳಗ್ಗೆ 10:30 ನಂತರ ನಾನು ನಿಮಗೆ ಸಿಗ್ತಿನಿ’.

    “ಯಾರ್ಯಾರು ನೋಡಬೇಕು, ಮೀಟ್‌ ಮಾಡಬೇಕೋ, ಜೊತೆಗೆ ಸೇರೋಣ. ಮತ್ತೊಂದು ಮನವಿ. ಯಾರೂ ಹಾರ ತುರಾಯಿ, ಮತ್ತೊಂದು ಮಗದೊಂದು ಗಿಫ್ಟ್‌ ತರಬೇಡಿ. ಹಣ ಖರ್ಚು ಮಾಡಬೇಡಿ. ಅದು ನಿಮ್ಮ ದುಡಿಮೆ. ಇದಕ್ಕೆಲ್ಲ ಖರ್ಷು ಮಾಡಬೇಡಿ. ಮನಸ್ಸಿದ್ದರೆ, ಅನಾಥಾಶ್ರಮಕ್ಕೆ ನೀಡಿ, ದಾನ ಧರ್ಮ ಮಾಡಿ. ಖಾಲಿ ಕೈಯಲ್ಲಿ ಬನ್ನಿ. ಮನಸ್ಸು ಬಿಚ್ಚಿ ಮಾತನಾಡೋಣ. ನಿಮಗಾಗಿ, ನಿಮ್ಮನ್ನು ಭೇಟಿ ಮಾಡುವ ಉದ್ದೇಶಕ್ಕೆ ಮಾತ್ರ ಈ ಭೇಟಿ. ಬನ್ನಿ ಸಿಗೋಣ, ಜೈ ಹಿಂದ್‌’ ಎಂದು ಶ್ರೀಮುರಳಿ ಹೇಳಿದ್ದಾರೆ.

  • ನಟ ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಹೊಂಬಾಳೆಯಿಂದ ‘ಬಘೀರ’ ಗಿಫ್ಟ್

    ನಟ ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಹೊಂಬಾಳೆಯಿಂದ ‘ಬಘೀರ’ ಗಿಫ್ಟ್

    ದೇ ಡಿಸೆಂಬರ್ 17ರಂದು ನಟ ಶ್ರೀಮುರಳಿ  ತಮ್ಮ ಹುಟ್ಟು ಹಬ್ಬವನ್ನು (Birthday) ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಹುಟ್ಟು ಹಬ್ಬದ ದಿನದಂದು ಹೊಂಬಾಳೆ ಫಿಲ್ಮಸ್ ಭರ್ಜರಿ ಉಡುಗೊರೆಯನ್ನೇ ಕೊಡಲು ಸಿದ್ಧವಾಗಿದೆ. ಅಂದು ಶ್ರೀಮುರಳಿ ನಟನೆಯ ಬಘೀರ ಸಿನಿಮಾದ ಟೀಸರ್ ರಿಲೀಸ್ ಮಾಡಲು ರೆಡಿಯಾಗಿದೆ.

    ಹೌದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ (Bagheera) ಸಿನಿಮಾ ಟೀಮ್ ನಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡವು, ಅದರ ಮೊದಲ ನೋಟವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಇದೇ ಡಿಸೆಂಬರ್ 17ಕ್ಕೆ ಸಿನಿಮಾದ ಟೀಸರ್ (Teaser) ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ. ಅಂದು ಶ್ರೀಮುರಳಿ ಅವರ ಹುಟ್ಟು ಹಬ್ಬವೂ ಆಗಿದೆ.

    ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ.

    ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಹಾಗಾಗಿ ಟೀಸರ್ ಬಗ್ಗೆ ಕಾಯುವಂತಾಗಿದೆ. ಬಘೀರ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ.

     

    ಶೂಟಿಂಗ್ ವೇಳೆ ಶ್ರೀಮುರಳಿಗೆ ಪೆಟ್ಟಾಗಿದ್ದರಿಂದ ಕೆಲ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆರೋಗ್ಯ ಸುಧಾರಿಸಿಕೊಂಡು ಮತ್ತೆ ಮುರಳಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇದೀಗ ಬಹುತೇಕ ಚಿತ್ರೀಕರಣ ಮುಗಿದೆ ಎಂದು ಹೇಳಲಾಗುತ್ತಿದೆ.

  • ಡಿ.17ಕ್ಕೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟೀಸರ್

    ಡಿ.17ಕ್ಕೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟೀಸರ್

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ (Bagheera) ಸಿನಿಮಾ ಟೀಮ್ ನಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡವು, ಅದರ ಮೊದಲ ನೋಟವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಇದೇ ಡಿಸೆಂಬರ್ 17ಕ್ಕೆ ಸಿನಿಮಾದ ಟೀಸರ್ (Teaser) ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ.

    ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ.

    ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಹಾಗಾಗಿ ಟೀಸರ್ ಬಗ್ಗೆ ಕಾಯುವಂತಾಗಿದೆ. ಬಘೀರ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ.

     

    ಶೂಟಿಂಗ್ ವೇಳೆ ಶ್ರೀಮುರಳಿಗೆ ಪೆಟ್ಟಾಗಿದ್ದರಿಂದ ಕೆಲ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆರೋಗ್ಯ ಸುಧಾರಿಸಿಕೊಂಡು ಮತ್ತೆ ಮುರಳಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇದೀಗ ಬಹುತೇಕ ಚಿತ್ರೀಕರಣ ಮುಗಿದೆ ಎಂದು ಹೇಳಲಾಗುತ್ತಿದೆ.

  • ವಿಶ್ರಾಂತಿ ಬಳಿಕ ‘ಬಘೀರ’ ಶೂಟಿಂಗ್ ನಲ್ಲಿ ಭಾಗಿಯಾದ ಶ್ರೀಮುರಳಿ

    ವಿಶ್ರಾಂತಿ ಬಳಿಕ ‘ಬಘೀರ’ ಶೂಟಿಂಗ್ ನಲ್ಲಿ ಭಾಗಿಯಾದ ಶ್ರೀಮುರಳಿ

    ರೋಬ್ಬರಿ ಮೂರು ತಿಂಗಳು ನಂತರ ಮತ್ತೆ ಬಘೀರ (Bagheera) ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ. ಚಿತ್ರೀಕರಣದಲ್ಲಿ ಗಾಯಗೊಂಡಿದ್ದ ನಟ ಶ್ರೀಮುರಳಿಗೆ ವೈದ್ಯರು ಮೂರು ತಿಂಗಳ ಕಾಲ ವಿಶ್ರಾಂತಿ ತಗೆದುಕೊಳ್ಳುವಂತೆ ಸೂಚಿಸಿದ್ದರು. ಇದೀಗ ವಿಶ್ರಾಂತಿ ಪಡೆದು ಮತ್ತೆ ಚಿತ್ರೀಕರಣದಲ್ಲಿ (Shooting) ಪಾಲ್ಗೊಂಡಿದ್ದಾರೆ. ಅರ್ಧಕ್ಕೆ ನಿಂತಿದ್ದ ಸಾಹಸ ದೃಶ್ಯದ ಚಿತ್ರೀಕರಣಲ್ಲಿ ಅವರು ಭಾಗಿಯಾಗಿದ್ದಾರೆ.

    ನಿರ್ದೇಶಕ ಸೂರಿ ಸದ್ಯ ಪ್ರಕಾಶ್ ರೈ (Prakash Rai) ಕಾಣಿಸಿಕೊಳ್ಳುವ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದು, ಈ ದೃಶ್ಯಗಳು ಮುಗಿಯುತ್ತಿದ್ದಂತೆಯೇ ಚಿತ್ರತಂಡ ಮೈಸೂರಿಗೆ ಹಾರಲಿದೆಯಂತೆ. ರೇಸ್ ಕೋರ್ಸ್ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಮಾಡಿದೆಯಂತೆ ಚಿತ್ರತಂಡ. ಈ ಭಾಗದ ಶೂಟಿಂಗ್ ನಲ್ಲೂ ಶ್ರೀಮುರಳಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

    ಮೂರು ತಿಂಗಳ ಹಿಂದೆ ರಾಕ್‌ಲೈನ್ ಸ್ಟುಡಿಯೋದಲ್ಲಿ (Rockline Studio) ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ `ಬಘೀರ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ (Actor Srimurali) ಗಾಯಗಳಾಗಿದ್ದವು. ಸೂರಿ ನಿರ್ದೇಶನದ ಈ ಚಿತ್ರ ಕೊನೆಯ ಹಂತದ ಚಿತ್ರೀಕರಣದಲ್ಲಿತ್ತು. ಇನ್ನೇರೆಡೆ ದಿನಗಳಲ್ಲಿ ಶೂಟಿಂಗ್‌ಗೆ ಬ್ರೇಕ್ ಬೀಳೋದರಲ್ಲಿತ್ತು. ಈ ವೇಳೆ ಶ್ರೀಮುರಳಿಗೆ ಪೆಟ್ಟಾಗಿತ್ತು.

    `ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು.

  • ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಬಹುಭಾಷಾ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿ

    ಲಯಾಳಂ ಸೇರಿದಂತೆ ದಕ್ಷಿಣದ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ, ಪ್ರತಿಭಾವಂತ ಕಲಾವಿದ ಫಹಾದ್ ಫಾಸಿಲ್ (Fahad Faasil) ಇದೀಗ ಸಿಬಿಐ ಅಧಿಕಾರಿಯಾಗಿದ್ದಾರೆ. ಕನ್ನಡದ ಬಘೀರ (Bagheera)ಸಿನಿಮಾದಲ್ಲಿ ಅವರು ಇಂಥದ್ದೊಂದು ಪಾತ್ರ ನಿರ್ವಹಿಸಲಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ನಾಯಕನಾಗಿ ನಟಿಸಿರುವ ಈ ಚಿತ್ರವು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿಸಿದೆ.

    ಬಘೀರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಗಾಯ ಮಾಡಿಕೊಂಡಿದ್ದ ಶ್ರೀಮುರಳಿ, ಆನಂತರ ಆಸ್ಪತ್ರೆ ಸೇರಿ ಗಾಯಕ್ಕೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಮರಳಲಿದ್ದು, ಆಗ ಫಹಾದ್ ಫಾಸಿಲ್ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕಾಲಿವುಡ್ ವಿಕ್ರಮ್ ಸಿನಿಮಾ ಗೆಲುವಿನ ನಂತರ ಫಹಾದ್ ಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ: ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್

    ಅಂದಹಾಗೆ ಬಘೀರ್ ಸಿನಿಮಾವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಲಕ್ಕಿ ಚಿತ್ರದ ನಂತರ ಸೂರಿ ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ಫಹಾದ್ ಸಿಬಿಐ ಅಧಿಕಾರಿಯಾಗಿ ಶ್ರೀಮುರಳಿಗೆ ಸಾಥ್ ನೀಡಲಿದ್ದಾರೆ. ಮಂಗಳೂರು ಸೇರಿದಂತೆ ಹಲವು ಕಡೆ ಈಗಾಗಲೇ ಹಲವು ಹಂತದ ಚಿತ್ರೀಕರಣ ನಡೆದಿದೆ. ಫೆಬ್ರವರಿಯಿಂದ ಮುಂದಿನ ಹಂತದ ಚಿತ್ರೀಕರಣ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಶಸ್ವಿ ಶಸ್ತ್ರ ಚಿಕಿತ್ಸೆ: ಮನೆಗೆ ಮರಳಿದ ನಟ ಶ್ರೀಮುರಳಿ

    ಯಶಸ್ವಿ ಶಸ್ತ್ರ ಚಿಕಿತ್ಸೆ: ಮನೆಗೆ ಮರಳಿದ ನಟ ಶ್ರೀಮುರಳಿ

    ಸ್ಯಾಂಡಲ್ ವುಡ್ ಹೆಸರಾಂತ ನಟ ಶ್ರೀಮುರಳಿ (Srimurali) ಎರಡು ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗೆ (Surgery) ಒಳಗಾಗಿದ್ದಾರೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದು, ಇದೀಗ ಮನೆಗೆ ಮರಳಿದ್ದಾರೆ. ಶೂಟಿಂಗ್ (Shooting) ವೇಳೆ ಅವರಿಗೆ ಮೊಣಕಾಲಿಗೆ ಪೆಟ್ಟು ಬಿದ್ದಿತ್ತು. ಆಗ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೆ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದರು. ನಂತರದ ದಿನಗಳಲ್ಲಿ ಮತ್ತೆ ಮತ್ತೆ ಮೊಣಕಾಲು ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಲಹೆ ಮೇರೆಗೆ ಶಸ್ತ್ರ ಚಿಕಿತ್ಸೆಗೆ ಅವರು ಒಳಗಾಗಿದ್ದರು.

    ಎರಡು ದಿನಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಡಾ.ಶಂಕರ್ ಮತ್ತು ವೈದ್ಯರ ತಂಡ ಯಶಸ್ಸಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ತಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ, ಮೂರು ತಿಂಗಳ ಕಾಲ ಡ್ಯಾನ್ಸ್ ಹಾಗೂ ಫೈಟ್ ಮಾಡದಂತೆ ಸೂಚನೆ ಕೂಡ ನೀಡಿದ್ದಾರೆ. ಸ್ವಲ್ಪ ದಿನಗಳ ನಂತರ ವಾಕಿಂಗ್ ಮಾಡಲು ಕೂಡ ಹೇಳಿದ್ದಾರೆ.  ಇದನ್ನೂ ಓದಿ: `ಪುಷ್ಪ 2′ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ರಶ್ಮಿಕಾ ಮಂದಣ್ಣ

    ಹೊಂಬಾಳೆ (Hombale Films) ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ (Bagheera) ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆದಿತ್ತು. ಇದೇ ವೇಳೆ ಶ್ರೀಮುರಳಿ ಮೊಣಕಾಲಿಗೆ ಏಟು ಮಾಡಿಕೊಂಡಿದ್ದರು. ಆ ಸಮಯದಲ್ಲಿ ಅದೊಂದು ಸಣ್ಣ ಪೆಟ್ಟು ಎಂದೇ ಹೇಳಲಾಗಿತ್ತು. ಆದರೆ, ತೀವ್ರವಾಗಿ ನೋವು ಕಾಣಿಸಿಕೊಂಡ ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಸೂಚಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ಶ್ರೀಮುರಳಿಗೆ ಶಸ್ತ್ರ ಚಿಕಿತ್ಸೆ: ಮೂರು ತಿಂಗಳು ಕೆಲಸಕ್ಕೆ ಬ್ರೇಕ್

    ನಟ ಶ್ರೀಮುರಳಿಗೆ ಶಸ್ತ್ರ ಚಿಕಿತ್ಸೆ: ಮೂರು ತಿಂಗಳು ಕೆಲಸಕ್ಕೆ ಬ್ರೇಕ್

    ನ್ನಡದ ಖ್ಯಾತ ನಟ ಶ್ರೀಮುರಳಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಶೂಟಿಂಗ್ ವೇಳೆ ಅವರಿಗೆ ಮೊಣಕಾಲಿಗೆ ಪೆಟ್ಟು ಬಿದ್ದಿತ್ತು. ಆಗ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೆ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದರು. ನಂತರದ ದಿನಗಳಲ್ಲಿ ಮತ್ತೆ ಮತ್ತೆ ಮೊಣಕಾಲು ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಲಹೆ ಮೇರೆಗೆ ಇದೀಗ ಶಸ್ತ್ರ ಚಿಕಿತ್ಸೆಗೆ ಅವರು ಒಳಗಾಗಿದ್ದಾರೆ.

    ನಿನ್ನೆ ಬೆಳಿಗ್ಗೆ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಡಾ.ಶಂಕರ್ ಮತ್ತು ವೈದ್ಯರ ತಂಡ ಯಶಸ್ಸಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ತಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ, ಮೂರು ತಿಂಗಳ ಕಾಲ ಡ್ಯಾನ್ಸ್ ಹಾಗೂ ಫೈಟ್ ಮಾಡದಂತೆ ಸೂಚನೆ ಕೂಡ ನೀಡಿದ್ದಾರೆ. ಸ್ವಲ್ಪ ದಿನಗಳ ನಂತರ ವಾಕಿಂಗ್ ಮಾಡಲು ಕೂಡ ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಹೊಂಬಾಳೆ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆದಿತ್ತು. ಇದೇ ವೇಳೆ ಶ್ರೀಮುರಳಿ ಮೊಣಕಾಲಿಗೆ ಏಟು ಮಾಡಿಕೊಂಡಿದ್ದರು. ಆ ಸಮಯದಲ್ಲಿ ಅದೊಂದು ಸಣ್ಣ ಪೆಟ್ಟು ಎಂದೇ ಹೇಳಲಾಗಿತ್ತು. ಆದರೆ, ತೀವ್ರವಾಗಿ ನೋವು ಕಾಣಿಸಿಕೊಂಡ ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಸೂಚಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ – ಶ್ರೀಮುರುಳಿ ನಾಯಕ

    ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ – ಶ್ರೀಮುರುಳಿ ನಾಯಕ

    ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಈಗಾಗಲೇ ಘೋಷಣೆ ಆಗಿರುವ ಶ್ರೀಮುರುಳಿ ನಟನೆಯ ʼಬಘೀರʼ ಚಿತ್ರಕ್ಕೆ ಮೇ 20ರಂದು ಸಿಂಪಲ್ ಆಗಿ ಮುಹೂರ್ತ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಯಶ್ ನಟನೆಯ ‘ಲಕ್ಕಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಡಾ.ಸೂರಿ, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಪ್ರಶಾಂತ್ ನೀಲ್ ಅವರು ಕಥೆ ಬರೆದಿದ್ದಾರೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಹಲವು ಚಿತ್ರಗಳನ್ನು ಘೋಷಣೆ ಮಾಡಿದೆ. ಸಂತೋಷ್ ಆನಂದ್ ರಾಮ್ ಜಗ್ಗೇಶ್‌ಗಾಗಿ ಒಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ರಿಷಭ್ ಶೆಟ್ಟಿ ಕೂಡ ಮತ್ತೊಂದು ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ಒಂದು ಚಿತ್ರವನ್ನು ನಿರ್ದೇಶನ ಮಾಡಬೇಕಿದೆ. ಈ ಸಿನಿಮಾಗೂ ಮುನ್ನ ಬಘೀರ ಸಿನಿಮಾ ಸೆಟ್ಟೇರುತ್ತಿದೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ಇದು ಹೊಂಬಾಳೆ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಎಂಟನೇ ಸಿನಿಮಾ. ಇದು ಪಕ್ಕಾ ಮಾಸ್ ಸಿನಿಮಾವಾಗಿದ್ದು, ವಿಭಿನ್ನ ಶೀರ್ಷಿಕೆಯಿಂದಾಗಿಯೇ ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಶ್ರೀಮುರುಳಿ ಕೂಡ ಸಖತ್ ತಯಾರಿ ಆಗಿದ್ದಾರಂತೆ. ಎಂದಿನಂತೆ ಪ್ರಶಾಂತ್ ನೀಲ್ ಆಶಯದಂತೆಯೇ ಈ ಸಿನಿಮಾ ಮೂಡಿ ಬರುತ್ತಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಈಗಾಗಲೇ ಲಕ್ಕಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಡಾ.ಸೂರಿ, ನಾಲ್ಕು ವರ್ಷಗಳಿಂದ ಯಾವುದೇ ಚಿತ್ರ ಮಾಡಿರಲಿಲ್ಲ. ಬಘೀರ ಮೂಲಕ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಶ್ರೀಮುರುಳಿ ಹುಟ್ಟು ಹಬ್ಬದಂದು ವಿಶೇಷ ಪೋಸ್ಟರ್ ಮತ್ತು ಟೈಟಲ್ ರಿಲೀಸ್ ಮಾಡಲಾಗಿದೆ.