Tag: Bagepally

  • ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

    ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

    ಚಿಕ್ಕಬಳ್ಳಾಪುರ: ಕೆರೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ (SSLC Student) ಶವ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ (Bagepally) ಪಟ್ಟಣ ಹೊರವಲಯದ ಕೊಂಡವಾರಪಲ್ಲಿಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಈರೇನಹಳ್ಳಿ ಗ್ರಾಮದ ನಿವಾಸಿ ಶಂಕರ್ ಹಾಗೂ ನಾಗಮ್ಮ ದಂಪತಿಯ ಪುತ್ರಿ ನಯನ (15) ಮೃತ ವಿದ್ಯಾರ್ಥಿನಿ. ಶನಿವಾರ ಗ್ರಾಮದಿಂದ ಚಿಕ್ಕಬಳ್ಳಾಪುರದ ಖಾಸಗಿ ಶಾಲೆಗೆ ಹೋಗುವುದಾಗಿ ಹೇಳಿದ ವಿದ್ಯಾರ್ಥಿನಿ ಶಾಲೆಗೆ ಹೋಗಿಲ್ಲ. ಬದಲಾಗಿ ಚಿಕ್ಕಬಳ್ಳಾಪುರ ನಗರದಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬಾಗೇಪಲ್ಲಿಗೆ ತೆರಳಿ ಅಲ್ಲಿಂದ ಬಾಗೇಪಲ್ಲಿ ಪಟ್ಟಣ ಹೊರವಲಯದ ಕೊಂಡ್ರವಾರಪಲ್ಲಿ ಕೆರೆ ಬಳಿ ಹೋಗಿದ್ದಾಳೆ.

    ಕೆರೆಯ ದಡದಲ್ಲಿ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆಯಾಗಿದ್ದು ಕೆರೆಯಲ್ಲಿ ವಿದ್ಯಾರ್ಥಿನಿ ಶವ ತೇಲಿ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಕುರಿಗಾಹಿಗಳು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಬ್ಯಾಗ್ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿಯ ವಿಳಾಸ ತಿಳಿದುಬಂದಿದೆ. ಬಳಿಕ ಪೋಷಕರು ಹಾಗೂ ಶಾಲೆಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಬೈಕ್‌ಗಳ ಅಪಘಾತದಲ್ಲಿ ನೆಲಕ್ಕೆ ಬಿದ್ದ ಸವಾರರ ಮೇಲೆ ಹರಿದ ಲಾರಿ – ಮೂವರು ಸ್ಥಳದಲ್ಲೇ ಸಾವು

    ವಿದ್ಯಾರ್ಥಿನಿಯ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬುದು ಇನ್ನೂ ಖಚಿತವಾಗಿಲ್ಲ. ಆಕೆಯ ಪೋಷಕರು ಸಹ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ವಿದ್ಯಾರ್ಥಿನಿ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿಗೆ ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಂಟೆಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    ಚಿಕ್ಕಬಳ್ಳಾಪುರ: ಮನೆಯ ಪಕ್ಕದ ನೀರಿನ ಸಿಮೆಂಟ್ ತೊಟ್ಟಿಯಲ್ಲಿ ಮಗುವಿನ (Child) ಮೃತದೇಹ ಪತ್ತೆಯಾಗಿದೆ. ಅನುಮಾಮಾಸ್ಪದವಾಗಿ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರೇಚನಾಯ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಜಶೇಖರ ರೆಡ್ಡಿ ಹಾಗೂ ಕನ್ಯಾಕುಮಾರಿ ದಂಪತಿಯ 2 ವರ್ಷದ ಮಗು ಲಲಿತ ರೆಡ್ಡಿ ಮೃತ ದುರ್ದೈವಿ. ಮಗುವಿನ ತಾಯಿ ಕನ್ಯಾಕುಮಾರಿ ಹಾಗೂ ಅವರ ಅತ್ತೆ-ಮಾವನ ನಡುವೆ ಕೌಟುಂಬಿಕ ಕಲಹವಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ಕೊಡಲಾಗಿತ್ತು. ಹಲವು ಬಾರಿ ಆದರೂ ಅತ್ತೆ, ಸೊಸೆ, ಮಾವನ ನಡುವೆ ಅಷ್ಟಕ್ಕಷ್ಟೇ ಮಾತು ಇತ್ತು ಎನ್ನಲಾಗಿದೆ.

    ಹೀಗಿದ್ದಾಗ ತಾಯಿ ಮಗುವನ್ನು ಮನೆಯಲ್ಲಿ ಅತ್ತೆ-ಮಾವನ ಜೊತೆ ಬಿಟ್ಟು ಜಮೀನಿನ ಬಳಿ ತೆರಳಿದ್ದಾಗ ಮನೆಯಲ್ಲಿದ್ದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ನೀರಿನ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಶಾಲಾ ಆವರಣದಲ್ಲಿ ವಾಮಾಚಾರ- ತಲೆ ಬುರುಡೆ, ನಿಂಬೆ ಹಣ್ಣು, ಕುಂಕುಮ ಪತ್ತೆ

    ಮಧ್ಯಾಹ್ನ ಜಮೀನಿನ ಬಳಿ ಇದ್ದ ಮಗುವನ್ನು ತಾತ ಸೋಮಶೇಖರ್ ರೆಡ್ಡಿ ಲಾಲಿಪಾಪ್ ಕೊಡಿಸೋದಾಗಿ ಹೇಳಿ ಕರೆದುಕೊಂಡು ಹೋಗಿದ್ದ. ಇಷ್ಟು ದಿನ ಮಗುವನ್ನು ಮಾತನಾಡಿಸದ ತಾತ 3 ದಿನಗಳಿಂದ ಮಗುವಿಗೆ ಚಾಕ್ಲೇಟ್ ಕೊಡಿಸಿ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಾತನೇ ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಸಂಶಯ ಪೋಷಕರದ್ದಾಗಿದೆ. ಈ ಬಗ್ಗೆ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KSRTC ಬಸ್ ನಲ್ಲಿ ಶಿಕ್ಷಕನ ಮೇಲೆ ಯುವಕರ ಹಲ್ಲೆ

    KSRTC ಬಸ್ ನಲ್ಲಿ ಶಿಕ್ಷಕನ ಮೇಲೆ ಯುವಕರ ಹಲ್ಲೆ

    ಚಿಕ್ಕಬಳ್ಳಾಪುರ: ಕೆಎಸ್‍ಆರ್ ಟಿಸಿ ಬಸ್ ನಲ್ಲಿ ಖಾಸಗಿ ಶಾಲೆಯ ಶಿಕ್ಷಕನ ಮೇಲೆ ಕೆಲ ಯುವಕರ ಗುಂಪೊಂದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನಂತರ ಬಸ್ ನಿಂದ ಎಳೆದು ತಂದು ಮತ್ತೆ ಅಟ್ಟಾಡಿಸಿ ಹೊರಳಾಡಿಸಿ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನಕುಂಟೆ ಗ್ರಾಮದಲ್ಲಿ ನಡೆದಿದೆ.

    ಮಾಮಿಡಿಕಾಯಿಲಪಲ್ಲಿ ಗ್ರಾಮದ ಹಾಗೂ ಬಾಗೇಪಲ್ಲಿ ಪಟ್ಟಣದ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ರಾಜ್‍ಕುಮಾರ್ ಹಲ್ಲೆಗೊಳಗಾದವರು. ರಾಜ್‍ಕುಮಾರ್ ಸಹಾಯಕ್ಕೆ ಬಂದ ಶ್ರೀನಿವಾಸ್ ಮೇಲೆಯೂ ಪುಂಡ ಯುವಕರು ಹಲ್ಲೆ ಮಾಡಿದ್ದಾರೆ.

    ಹಲ್ಲೆ ಯಾಕೆ? ಘಟನೆಗೆ ಕಾರಣ ಏನು?
    ಲಾಕ್‍ಡೌನ್ ಮುಂಚೆ ಬಾಗೇಪಲ್ಲಿಯಿಂದ ಮಾರ್ಗನುಕುಂಟೆ ಮಾರ್ಗವಾಗಿ ಮಾಮಿಡಿಕಾಯಿಲಪಲ್ಲಿಗೆ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಮಾಡಿತ್ತು. ಕೊರೊನಾ ಅನ್‍ಲಾಕ್ ನಂತರ ಬಸ್ ಸಂಚಾರ ಆರಂಭವಾದರೂ ಮಾಮಿಡಿಕಾಯಿಲಪಲ್ಲಿಗೆ ಬರುತ್ತಿರಲಿಲ್ಲ. ಹೀಗಾಗಿ ಗ್ರಾಮದ ದೈಹಿಕ ಶಿಕ್ಷಕ ರಾಜ್‍ಕುಮಾರ್, ಡಿಪೋ ಮ್ಯಾನೇಜರ್ ಹಾಗೂ ಬಾಗೇಪಲ್ಲಿ ಟಿಸಿ ಬಳಿ ಮನವಿ ಮಾಡಿಕೊಂಡ ಬಸ್ ತಮ್ಮೂರಿಗೆ ಕಳುಹಿಸುವಂತೆ ಕೇಳಿಕೊಂಡಿದ್ದರು.

    ಬಾಗೇಪಲ್ಲಿ ಮಾರ್ಗಾನಕುಂಟೆ ಮಾರ್ಗದ ಬಸ್ ಚಾಲಕ ನಲ್ಲಪ್ಪರೆಡ್ಡಿಪಲ್ಲಿ ಮಂಜುನಾಥ್ ಎಂಬಾತ ನಾನು ನಿಮ್ಮೂರಿಗೆ ಬರಲ್ಲ. ನಿಮ್ಮೂರಿಗೆ ಬಂದರೆ ಪ್ರಯಾಣಿಕರು ಇರಲ್ಲ. ಸುಮ್ಮನೇ ಇಂಧನ ವೇಸ್ಟ್ ಎಂದು ವಾದ ಮಾಡಿದ್ದನು. ಈ ವಿಚಾರವನ್ನು ಬಾಗೇಪಲ್ಲಿ ನಿಲ್ದಾಣದಲ್ಲಿ ಬಸ್ ಹೊರಡುವ ಮುನ್ನ ಮತ್ತೆ ಇಳಿದು ಟಿಸಿ ಬಳಿ ಚಾಲಕನ ವಾದ ಮಾಡಿದ ಬಗ್ಗೆ ರಾಜ್‍ಕುಮಾರ್ ತಿಳಿಸುತಿದ್ದರು. ಅಷ್ಟರಲ್ಲಿಯೇ ರಾಜ್ ಕುಮಾರ್ ಬಿಟ್ಟು ಚಾಲಕ ಬಸ್ ನಿಲ್ದಾಣದಿಂದ ಹೊರಟಿದ್ದನು. ಈ ವೇಳೆ ಮಂಜುನಾಥ್ ಗೆ ಕಾಲ್ ಮಾಡಿದ ಟಿಸಿ ಬುದ್ಧಿವಾದ ಹೇಳಿ ಮರಳಿ ವಾಪಸ್ ಬಂದು ರಾಜ್ ಕುಮಾರ್ ಕರೆದುಕೊಂಡು ಹೋಗಲು ತಿಳಿಸಿದ್ರೂ ಬಂದಿಲ್ಲ. ಕೊನೆಗೆ ರಾಜ್‍ಕುಮಾರ್ ಮುಂದೆ ಹೋಗಿ ನಿಲ್ಲಿಸಿದ್ದ ಬಸ್ ಹತ್ತಿ ಊರಿನತ್ತ ಹೊರಟಿದ್ದಾರೆ.

    ಈ ಸಂಬಂಧ ಚಾಲಕ ಮಂಜುನಾಥ್ ಹಾಗೂ ರಾಜ್‍ಕುಮಾರ್ ನಡುವೆ ಜಗಳ ನಡೆದಿದೆ. ಬಸ್ ತಮ್ಮೂರಿಗೆ ಬರಲೇಬೇಕು ಅಂತ ರಾಜ್‍ಕುಮಾರ್ ಹಾಗೂ ಮಾಮಿಡಿಕಾಯಿಲಪಲ್ಲಿ ಗ್ರಾಮದವರು ಎರಡು ಗಂಟೆ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ನಂತರ ಬಸ್ ಮಾಮಿಡಕಾಯಿಲಪಲ್ಲಿಗೆ ಹೋಗಿ ಬಂದಿದೆ. ಇದನ್ನೂ ಓದಿ: ಬಾಗೇಪಲ್ಲಿ ಪಟ್ಟಣದಲ್ಲಿ ಚಿನ್ನ ಖರೀದಿ ನೆಪ-ಸರ ಕದ್ದು ಯುವಕ ಪರಾರಿ

    ಚಾಲಕ ಮಂಜುನಾಥ್ ಅಧಿಕಾರಿಗಳು ಆ ರೂಟ್ ನಿಂದ ತೆಗೆದು ಹಾಕಿ ಚಿಂತಾಮಣಿ ರೂಟ್ ಗೆ ಹಾಕಿದ್ದಾರೆ. ಹೀಗಾಗಿ ರಾಜ್ ಕುಮಾರ್ ವಿರುದ್ಧ ಜಿದ್ದು ಇಟ್ಟುಕೊಂಡಿದ್ದ ಚಾಲಕ ಮಂಜುನಾಥ್, ತನ್ನ ಚಿಕ್ಕಪ್ಪನ ಮಗನಿಗೆ ವಿಷಯ ತಿಳಿಸಿದ್ದಾನೆ. ನನಗೆ ರಾಜ್‍ಕುಮಾರ್ ತೊಂದರೆ ಕೊಟ್ಟ ಅಂತ ದ್ವೇಷಕ್ಕೆ ಅವನ ಮೇಲೆ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ. ಮಧು ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿ ಮಾರನೇ ದಿನ ಬಸ್ ನಲ್ಲಿ ಹೋಗುತ್ತಿದ್ದಾಗ ಸೀಟಿನಲ್ಲಿ ಕೂತಿದ್ದ ಶಿಕ್ಷಕ ರಾಜ್‍ಕುಮಾರ್ ಮೇಲೆ ವಿನಾಕಾರಣ ಕಿರಿಕ್ ತೆಗೆದಿದ್ದಾರೆ. ಬೇಕಂತಲೇ ಕಾಲು ತಗುಲಿಸಿ ಗಲಾಟೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದ ರೇಷ್ಮೆ ಸೀರೆ- ಕುಗ್ರಾಮದ ನೇಕಾರನಿಗೆ ಒಲಿಯಿತು ರಾಜ್ಯ ಮಟ್ಟದ ಪ್ರಶಸ್ತಿ

    ಈ ವೇಳೆ ಯುವಕರೆಲ್ಲಾ ಸೇರಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ರಾಜೀ ಪಂಚಾಯತಿಗಳು ನಡೆದು ಕೊನೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಹಲ್ಲೆಗೆ ಕುಮ್ಮಕ್ಕು ನೀಡಿದ ಚಾಲಕ ಮಂಜುನಾಥ್ ಹಾಗೂ ಮಧು ಎಂಬಾತನನ್ನ ವಶಕ್ಕೆ ಪಡೆದಿದ್ದು ಕ್ರಮ ಕೈಗೊಳ್ಳುತ್ತಿರುವುದಾಗಿ ಬಾಗೇಪಲ್ಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 35 ಸ್ಥಾನ ಗೆಲ್ಲಲಿದೆ: ಸಲೀಂ ಅಹಮದ್ ವಿಶ್ವಾಸ