ಗುರುವಾರ ಸಂಜೆ 6:30ಕ್ಕೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಪಿಜಿಗೆ ಹಿಂದಿರುಗುವಾಗ ಫಾರ್ಚೂನರ್ ಕಾರು ಗುದ್ದಿದೆ. ಅಪಘಾತದ ರಭಸಕ್ಕೆ ನಂದಿನಿ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತೀವ್ರ ರಕ್ತಸ್ರಾವವಾಗಿ ನಂದಿನಿ ಸಾವನ್ನಪ್ಪಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು ಚಿಕ್ಕಜಾಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಫಾರ್ಚುನರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು: ವಿಚ್ಛೇದನ ಕೊಡಲು ಒಪ್ಪದ ಗರ್ಭಿಣಿ ಪತ್ನಿಯನ್ನು (Wife) ಕೊಲೆ ಮಾಡಲು ಯತ್ನಿಸಿ ಅಪಘಾತ ಎಂದು ಬಿಂಬಿಸಲು ಹೋಗಿ ಪತಿ (Husband) ಸಿಕ್ಕಿಬಿದ್ದ ಪ್ರಕರಣ ಬಾಗಲೂರಿನಲ್ಲಿ (Bagalur) ನಡೆದಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಅರವಿಂದ್ ಹಾಗೂ ಚೈತನ್ಯ ವಿವಾಹವಾಗಿದ್ದರು. ಪತ್ನಿ ಅತ್ತೆ ಮಾವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಳು. ಇದರಿಂದ ಪತಿ, ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಅಸಮಾಧಾನ ಮಾಡಿಕೊಂಡಿದ್ದ. ಅಲ್ಲದೇ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ. ಆದರೆ ವಿಚ್ಛೇದನ ನೀಡಲು ಪತ್ನಿ ತಯಾರಿರಲಿಲ್ಲ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ
ಇದರಿಂದ ಪತ್ನಿಯನ್ನು ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ. ಅದಕ್ಕಾಗಿ ಹಳೆಯದೊಂದು ಟಾಟಾ ಸುಮೊ ಕಾರು ಖರೀದಿಸಿದ್ದ. ಅಲ್ಲದೇ ಅದಕ್ಕೆ ಒಬ್ಬ ಚಾಲಕನನ್ನ ನೇಮಿಸಿಕೊಂಡಿದ್ದ. ಅಲ್ಲದೇ ಆತನಿಗೆ ಪತ್ನಿಯನ್ನು ಅಪಘಾತವೆಸಗಿ ಕೊಲ್ಲುವಂತೆ ಸೂಚಿಸಿದ್ದ. ಇದಕ್ಕೆ ಚಾಲಕ ಉದಯ್ ಕುಮಾರ್ ಒಪ್ಪಿದ್ದ. ಅಪಘಾತ ಎಸಗಲು ಆಕೆ ಓಡಾಡುವ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಇರದ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದ.
ಬಳಿಕ ದಿನ ನಿಗದಿ ಮಾಡಿಕೊಂಡು ಬಾಗಲೂರಿನ ಕೆಐಡಿಬಿ ಲೇಔಟ್‍ನಲ್ಲಿ ಭರತನಾಟ್ಯ ತರಗತಿ ಮುಗಿಸಿ ಬೈಕ್‍ನಲ್ಲಿ ಬರುತ್ತಿದ್ದ ಚೈತನ್ಯಳಿಗೆ ಕಾರನ್ನು ಗುದ್ದಿಸಲಾಗಿತ್ತು. ಈ ವೇಳೆ ಕಾರಿನಲ್ಲಿ ಪತಿ ಅರವಿಂದ್ ಕೂಡ ಇದ್ದ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದರು. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದ ದೇವನಹಳ್ಳಿ (Devanahalli) ಟ್ರಾಫಿಕ್ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆರಂಭಿಸಿದ್ದರು. ಬಳಿಕ ಪ್ರಕರಣದಲ್ಲಿ ಅನುಮಾನ ವ್ಯಕ್ತವಾಗಿದ್ದು ಬಾಗಲೂರು ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಿದ್ದರು. ಈ ವೇಳೆ ಕಾರನ್ನು ಗ್ಯಾರೆಜ್‍ನಲ್ಲಿ ಪತ್ತೆ ಹಚ್ಚಿದ್ದ ಪೊಲೀಸರು ಕಾರಿನ ಹಿಂದಿನ ಮಾಲೀಕನನ್ನು ವಿಚಾರಿಸಿದ್ದಾರೆ. ಈ ವೇಳೆ ಕಾರನ್ನು ಮಾರಾಟ ಮಾಡಿದ್ದಾಗಿ ಆತ ತಿಳಿಸಿದ್ದಾನೆ.
ಬಳಿಕ ಚಾಲಕ ಉದಯ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಆತನ ಮನೆಯಲ್ಲೂ ಕೌಟುಂಬಿಕ ಕಲಹದಿಂದ ಪತಿ-ಪತ್ನಿ ನಡುವೆ ವಿಚ್ಛೇದನ ಮಾತುಕತೆ ನಡೆಯುತ್ತಿತ್ತು. ಇದೇ ಕಾರಾಣಕ್ಕೆ ಎಲ್ಲಾ ಪತ್ನಿಯರೂ ಹೀಗೆ ಎಂದು ಆತ ಈ ಕೊಲೆಗೆ ಒಪ್ಪಿದ್ದ ಎಂದು ತಿಳಿದು ಬಂದಿದೆ.
ವಿಜಯಪುರ: ಅಕ್ರಮವಾಗಿ ವನ್ಯಜೀವಿಗಳ (Wild Animals) ಅಂಗಾಂಗಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಂದಗಿ (Sindagi) ತಾಲ್ಲೂಕಿನ ಬಾಗಲೂರ (Bagalur) ಬಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ (Maharashtra) ಅಸವಲದಾರಾ ಗ್ರಾಮದ ಪವನ್ ಹಾಗೂ ಭೋಸಲೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮಗಳು ಹಾಗೂ ವಿವಿಧ ಜಾತಿಯ ವನ್ಯ ಪ್ರಾಣಿಗಳ ಅಂಗಾಂಗಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ಔಷಧಗಳ ಹಾವಳಿ- 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು
ಆರೋಪಿಗಳ ಬಳಿ ಏನೆಲ್ಲ ಇತ್ತು?
807 ಉಡದ ಶಿಶ್ನಗಳು, 116 ಇಂದ್ರಜಾಲಗಳು, 2 ಕಾಡು ಬೆಕ್ಕಿನ ಪಾದಗಳು, 2 ಕಾಡು ಬೆಕ್ಕು ಉಗುರುಗಳು, 3 ಕರಡಿಯ ಉಗುರುಗಳು, 28 ನೀರು ಪಕ್ಷಿಗಳ ಕಾಲುಗಳು, 2 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 4 ಕರಡಿಯ ಹಲ್ಲುಗಳು, 32 ಮುಂಗಸಿಯ ಕಾಲುಗಳು, 7 ಮುಂಗುಸಿಯ ದವಡೆಗಳು, 16 ಮುಂಗುಸಿಯ ಚರ್ಮದಿಂದ ಮಾಡಿದ ಉಂಡೆಗಳು, 26 ಕಾಡು ಹಂದಿಯ ಹಲ್ಲುಗಳು, 3 ಅಪರಿಚಿತ ಕಾಡು ಪ್ರಾಣಿಯ ಉಗುರುಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು: ತಾಯಿ ಅಕ್ರಮ ಸಂಬಂಧಕ್ಕೆ ಮಗ ಬಲಿಯಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪ್ರಿಯಕರ ಸಂಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮೆ ಫೋನ್ (mobile) ಸ್ವೀಕಾರ ಮಾಡುತ್ತಿಲ್ಲವೆಂದು ಕೋಪಗೊಂಡು ಆಕೆಯ ಮಗವನ್ನು ಕಿಡ್ನ್ಯಾಪ್ (Kidnap) ಮಾಡಿ ಕೆರೆಯಲ್ಲಿ ಎಸೆದಿದ್ದ. ಇದನ್ನೂ ಓದಿ: 15 ಕೋಟಿ ವ್ಯವಹಾರವೇ ಖ್ಯಾತ ನಟ ಸತೀಶ್ ಕೌಶಿಕ್ ಸಾವಿಗೆ ಕಾರಣ
ಏನಿದು ಘಟನೆ?
ಪ್ರವೀಣ್ ಮತ್ತು ಸಂಪತ್ ಇಬ್ಬರೂ ಸ್ನೇಹಿತರು. ಹೀಗಾಗಿ ಪ್ರವೀಣ್ ತನ್ನ ಮನೆಗೆ ಸಂಪತ್‍ನನ್ನು ಆಗಾಗ್ಗೆ ಕರೆದುಕೊಂಡು ಬರುತ್ತಿದ್ದ. ಈ ವೇಳೆ ಪ್ರವೀಣ್ ಪತ್ನಿಯೊಂದಿಗೆ ಸಂಪತ್ ಸಲುಗೆ ಬೆಳಸಿಕೊಂಡು, ಅಕ್ರಮ ಸಂಬಂಧ ಹೊಂದುತ್ತಾನೆ. ಈ ವಿಚಾರ ತಿಳಿದ ಪ್ರವೀಣ್, ಪತ್ನಿಗೆ ವಿಚ್ಛೇದನ ನೀಡುತ್ತಾನೆ.
ಪ್ರವೀಣ್ ಜೊತೆ ವಿಚ್ಛೇದನ ( Divorce) ಪಡೆದ ಬಳಿಕ ಮಹಿಳೆ ಸಂಪತ್ ಜೊತೆ ಬೇರೆ ಮನೆ ಮಾಡಿಕೊಂಡು ಕೋಲಾರದ ಕೆಜಿಎಫ್ ನಲ್ಲಿ ವಾಸವಾಗಿರುತ್ತಾರೆ. ದಿನ ಕಳೆದಂತೆ ಪ್ರಿಯತಮೆ ನಡತೆ ಸರಿಯಿಲ್ಲ ಎಂದು ಸಂಪತ್ ಹಿಂಸೆ ಕೊಡುವುದಕ್ಕೆ ಶುರು ಮಾಡುತ್ತಾನೆ. ಸಂಪತ್ ಕಿರುಕುಳ ತಾಳಲಾರದೆ ಆತನ ನಂಬರ್ ಬ್ಲಾಕ್ ಮಾಡಿಕೊಂಡು ಪ್ರಿಯತಮೆ ಬೇರೆ ಕಡೆ ಹೋಗಿರುತ್ತಾಳೆ. ಹೇಗಾದ್ರು ಮಾಡಿ ಆಕೆಗೆ ಬುದ್ದಿ ಕಲಿಸಬೇಕೆಂದು ಸಂಪತ್ ತನ್ನ ಪ್ರಿಯತಮೆಯ ಗಂಡು ಮಗನನ್ನ ಕಿಡ್ನ್ಯಾಪ್ ಮಾಡಿ ಕೆರೆಯಲ್ಲಿ ಎಸೆದಿದ್ದ. ಬಳಿಕ ಸಂಪತ್ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದ.
ಮಗ ನಾಪತ್ತೆಯಾಗಿರುವುದು ತಿಳಿದ ಮಹಿಳೆ ಪೊಲೀಸರಿಗೆ ದೂರು ನೀಡುತ್ತಾಳೆ. ದೂರು ನೀಡಿದ 9 ದಿನಗಳ ಬಳಿಕ ಕೆರೆಯಲ್ಲಿ ಮಗುವಿನ ಶವ ಪತ್ತೆ ಆಗುತ್ತೆ. ಬಳಿಕ ಪೊಲೀಸರು ಸಂಪತ್ ನನ್ನ ವಿಚಾರಣೆ ಮಾಡಿದಾಗ, ಪ್ರಿಯತಮೆ ಮೇಲಿದ್ದ ಕೋಪಕ್ಕೆ ಹುಡುಗನನ್ನು ಕರೆದುಕೊಂಡು ಹೋಗಿ ಕೆರೆಗೆ ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಬಾಗಲೂರು (Bagalur) ಪೊಲೀಸರು (Police) ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು