Tag: bagalkote

  • ಪ್ರೇಮಿ ಮದುವೆಗೆ ನಿರಾಕರಿಸಿದ ಆರೋಪ- ಯುವತಿ ಆತ್ಮಹತ್ಯೆಗೆ ಶರಣು

    ಪ್ರೇಮಿ ಮದುವೆಗೆ ನಿರಾಕರಿಸಿದ ಆರೋಪ- ಯುವತಿ ಆತ್ಮಹತ್ಯೆಗೆ ಶರಣು

    ಬಾಗಲಕೋಟೆ: ಪ್ರೇಮಿಯೊಬ್ಬ ಪ್ರಿಯತಮೆಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಮನೆಯವರು ಆರೋಪಿಸಿರುವ ಘಟನೆ ಬೀಳಗಿ (Beelagi) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

    ರುಕ್ಕವ್ವ (19) ವಡವಾಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಅ.02 ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಯುವತಿಯ ತಂದೆ ರುದ್ರಪ್ಪ ನನ್ನ ಮಗಳ ಸಾವಿಗೆ ಪ್ರೀತಿಸಿ ಕೈಕೊಟ್ಟ ಶಂಕ್ರಪ್ಪ ಪತ್ತಾರ ಕಾರಣ ಎಂದು ಆರೋಪಿಸಿ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇಲ್ಲಿಯವರೆಗೆ ಬೀಳಗಿ ಪೊಲೀಸರು ಆತನನ್ನ ಬಂಧಿಸಿಲ್ಲ ಎಂದು ಆರೋಪಿಸಿ ಯುವತಿಯ ತಂದೆ ಸೋಮವಾರ ಬಾಗಲಕೋಟೆ ಎಸ್‌ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ

    ಸುಮಾರು ವರ್ಷಗಳಿಂದ ಯುವಕ ಶಂಕ್ರಪ್ಪ ಪತ್ತಾರ ನನ್ನ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಮದುವೆ ಆಗಲು ನಿರಾಕರಿಸಿದ್ದ. ನನ್ನ ಮಗಳ ಸಾವಿಗೆ ಶಂಕ್ರಪ್ಪ ಮಾಡಿದ ನಿರಾಕರಣೆಯೇ ಕಾರಣ ಎಂದು ಪ್ರಿಯಕರ ಮಾಡಿದ ವಾಟ್ಸಪ್ ಮೆಸೇಜ್, ಫೋಟೋಗಳನ್ನ ಸಾಕ್ಷಿಯಾಗಿ ಇಟ್ಟುಕೊಂಡು ದೂರು ನೀಡಲು ಯುವತಿಯ ತಂದೆ ಮುಂದಾಗಿದ್ದಾರೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

    ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದರೂ ಆರೋಪಿ ಶಂಕ್ರಪ್ಪನನ್ನ ಬೀಳಗಿ ಪೊಲೀಸರು ಬಂಧಿಸಿಲ್ಲ. ಬದಲಾಗಿ ಆರೋಪಿಗಳಿಗೆ ಪೊಲೀಸರು ಸಹಕಾರ ನೀಡಿದ್ದಾರೆ. ಆತನಿಗೆ ಜಾಮೀನು ಸಿಗುವಂತೆ ಮಾಡಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್‌ ಗೆಲ್ಲಿಸಿ: ಹೆಚ್‌ಡಿಕೆ ಮನವಿ

    ಹೀಗೆ ಆರೋಪಿಗಳು ಜಾಮೀನು ಪಡೆದು ಓಡಾಡುತ್ತಿರುವುದನ್ನ ಕಂಡ ರುದ್ರಪ್ಪ, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಎಸ್ಪಿ ಅಮರನಾಥ್ ರೆಡ್ಡಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

  • ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಕ್ಫ್‌ಗೆ ಪರಭಾರೆ ಆರೋಪ; ವಕ್ಫ್ ಬೋರ್ಡ್, ಸರ್ಕಾರದ ವಿರುದ್ಧ ಪ್ರತಿಭಟನೆ

    ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಕ್ಫ್‌ಗೆ ಪರಭಾರೆ ಆರೋಪ; ವಕ್ಫ್ ಬೋರ್ಡ್, ಸರ್ಕಾರದ ವಿರುದ್ಧ ಪ್ರತಿಭಟನೆ

    ಗದಗ: ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ (Waqf Board) ಭೂ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ವಕ್ಫ್ ಬೋರ್ಡ್ ವಿರುದ್ಧ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ರೈತರು ಸೇರಿಕೊಂಡು ಗದಗ-ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

    6ನೇ ವಿಕ್ರಮಾದಿತ್ಯನ ಕಾಲದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ (Someshwara Temple) ಜಮೀನು ವಕ್ಫ್‌ಗೆ ಸೇರಿಸುವ ಹುನ್ನಾರ ನಡೆಸಿದ್ದಾರೆ. ಇದು ಸಂಸ್ಕೃತ ವಿಶ್ವವಿದ್ಯಾಲಯ ಕೇಂದ್ರವಾಗಿತ್ತು. ಕವಿ ಚಾಮರಸಾ ಬರೆದ ಪ್ರಭುಲಿಂಗಲೀಲೆ ಪುರಾಣ ಇದೇ ದೇವಸ್ಥಾನದಲ್ಲಿ ಬರೆದಿರುವ ಇತಿಹಾಸವಿದೆ. ಅಂತಹ ಐತಿಹಾಸಿಕ ದೇವಸ್ಥಾನದ ಭೂಮಿಯನ್ನು ವಕ್ಫ್‌ಗೆ ಪರಭಾರೆ ಮಾಡಲು ಹೊರಟಿರುವುದು ಖಂಡನೀಯ. ಇದನ್ನೂ ಓದಿ: ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    ಗೆಜೆಟ್‌ನಲ್ಲಿ ಸೋಮೇಶ್ವರ ದೇವಸ್ಥಾನಕ್ಕೆ ಸೇರಿದ ಸರ್ವೆ ನಂ.562 ರ 12 ಎಕರೆ 22 ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಎಲ್ಲದರಿಂದ ಆಕ್ರೋಶಕ್ಕೆ ಒಳಗಾದ ಜನರು ರಾಜ್ಯ ಹೆದ್ದಾರಿ ತಡೆದು ವಕ್ಫ್ ಬೋರ್ಡ್, ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹಾಗೂ ರಾಜ್ಯ ಸರ್ಕಾರದ ವಿರುಧ್ಧ ಧಿಕ್ಕಾರ ಕೂಗಿದರು. ನಡು ರಸ್ತೆಯಲ್ಲೇ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ತಾಯಿ, ಮಗಳಿಗೆ ಗಂಭೀರ ಗಾಯ

    ಗಂಟೆ ಗಟ್ಟಲೆ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತವು. ಕೆಲಕಾಲ ವಾಹನ ಸವಾರರು ಪರದಾಡಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಗದಗ ತಹಶೀಲ್ದಾರ್‌ಗೆ ಸ್ಥಳಿಯರು ತರಾಟೆಗೆ ತೆಗೆದುಕೊಂಡರು. ಸೋಮೇಶ್ವರ ದೇವಸ್ಥಾನದ ಜಾಗ ವಕ್ಫ್ ಹೇಗೆ ಆಯಿತು? ಶೀಘ್ರದಲ್ಲೇ ಇದನ್ನು ರದ್ದು ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬೀದಿ ನಾಯಿ ಜೊತೆ ಅಸಭ್ಯ ವರ್ತನೆ – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

    ಈ ವೇಳೆ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಧರ್ ಕುಲಕರ್ಣಿ ಸೇರಿದಂತೆ ಅನೇಕ ಸಂಘಟಿಕರು, ಸೋಮೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು, ರೈತರು ಉಪಸ್ಥಿತರಿದ್ದರು. ಇದನ್ನೂ ಓದಿ: ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ-‘ದಿ ಟಾಸ್ಕ್’ನಲ್ಲಿ ನವಪ್ರತಿಭೆಗಳ ಸಂಗಮ

  • ಬಾಗಲಕೋಟೆಯ 16,000 ಜನರಿರುವ ಗ್ರಾಮವೇ ವಕ್ಫ್‌ ಆಸ್ತಿ!

    ಬಾಗಲಕೋಟೆಯ 16,000 ಜನರಿರುವ ಗ್ರಾಮವೇ ವಕ್ಫ್‌ ಆಸ್ತಿ!

    ಜಾಗವನ್ನು ಬಿಡಿಸಿಕೊಡುವಂತೆ ಇಸ್ಲಾಮಿಯಾ ತಂಜೀಮ್ ಸಮಿತಿಯಿಂದ ಮನವಿ

    ಬಾಗಲಕೋಟೆ: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ವಕ್ಫ್‌ ಆಸ್ತಿ ವಿವಾದ (Waqf property Controversy) ಬಾಗಲಕೋಟೆ ಜಿಲ್ಲೆಗೂ ವ್ಯಾಪಿಸಿದೆ. ಇಲ್ಲಿನ ಸರ್ಕಾರಿ ಕಚೇರಿಗಳು ವಸತಿ ನಿಲಯಗಳು, ಆಶ್ರಯ ಮನೆಗಳಿಗೆ ವಕ್ಫ್‌ ಆಸ್ತಿಯಾಗಿದ್ದು, ತಮಗೆ ಬಿಡಿಸಿಕೊಡುವಂತೆ ಇಸ್ಲಾಮಿಯಾ ತಂಜೀಮ್ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

    ಬಾಗಲಕೋಟೆ ತಾಲೂಕಿನ ಸುಮಾರು 16,000 ಜನಸಂಖ್ಯೆಯುಳ್ಳ ಶಿರೂರು ಗ್ರಾಮದಲ್ಲಿನ ಮೊರಾರ್ಜಿ ವಸತಿ ಶಾಲೆ (Morarji desai Residential School), ಪಕ್ಕದಲ್ಲಿರುವ ಬಾಲಕಿಯರ ವಸತಿ ಶಾಲೆ, ಆಶ್ರಯ ಮನೆಗಳು, ಹೆಸ್ಕಾಮ್ ಕಚೇರಿ, ಇವೆಲ್ಲ ವಕ್ಫ್‌ ಆಸ್ತಿ. ಗ್ರಾಮದ ಸರ್ವೆ ನಂ.92 ರಲ್ಲಿ ಬರುವ 54.2 ಎಕರೆ ಜಾಗ ಎಲ್ಲವೂ ವಕ್ಫ್‌ ಆಸ್ತಿ ಎಂದು ಇಸ್ಲಾಮಿಯಾ ತಂಜೀಮ್ ಸಮಿತಿ ಹೇಳಿಕೊಂಡಿದೆ. ಇದನ್ನೂ ಓದಿ: ಸಿಎಂ ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ: ಡಿಕೆಶಿ

    ತಂಜೀಮ್‌ ಸಮಿತಿ ನೋಟಿಸ್ ನೀಡಿರುವ ಸರ್ವೆ ನಂಬರ್‌ ಜಾಗದಲ್ಲಿ ಹೆಸ್ಕಾಮ್, ಮೊರಾರ್ಜಿ ವಸತಿ ಶಾಲೆ, ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, 1,200 ಆಶ್ರಯ ಯೋಜನೆ ಮನೆಗಳಿವೆ. ಇವೆಲ್ಲವೂ ವಕ್ಫ್‌ ಆಸ್ತಿಯಾಗಿದ್ದು, ತೆರವು ಮಾಡಿಸುವಂತೆ ಇಸ್ಲಾಮಿಯಾ ತಂಜೀಮ್ ಕಮೀಟಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ಬೆನ್ನಲ್ಲೇ ಮೇಲ್ಕಂಡ ಎಲ್ಲ ಸಂಸ್ಥೆ ಹಾಗೂ ಗ್ರಾಮದ ನಿವಾಸಿಗಳಿಗೆ ನೋಟಿಸ್‌ ಬಂದಿದ್ದು, ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

    ಇಲ್ಲಿ ಗ್ರಾಮಸ್ಥರಿಗೆ ನೇರವಾಗಿ ನೋಟಿಸ್‌ ಬಂದಿಲ್ಲ, ಪಹಣಿಯಲ್ಲೂ ವಕ್ಪ್ ಎಂದು ನಮೂದಾಗಿಲ್ಲ. ಆದರೆ ಇಸ್ಲಾಮಿಯಾ ತಂಜೀಮ್ ಕಮೀಟಿ ಇದು ವಕ್ಪ್ ಆಸ್ತಿ, ಇದನ್ನ ತನ್ನ ಸುಪ‌ರ್ದಿಗೆ ತೆಗೆದುಕೊಂಡು ನಮಗೆ ನೀಡಬೇಕೆಂದು ಡಿಸಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ICC Test Ranking | ಆರಕ್ಕೇರಿದ ಪಂತ್, ಟಾಪ್‌-20 ಪಟ್ಟಿಯಿಂದಲೂ ಕೊಹ್ಲಿ ಔಟ್‌

    ಜಿಲ್ಲೆಯ ವಕ್ಫ್‌ ಆಸ್ತಿ ವಿವಾದ ಧಾರವಾಡ ಹೈಕೋರ್ಟ್‌ ಮೆಟ್ಟಿಲೇರಿದ್ದು, ರೈತರು ತಮ್ಮ ಆಸ್ತಿ ಉಳಿಸಿಕೊಳ್ಳಲು ಅಲೆದಾಡುವಂತಾಗಿದೆ. ಈ ನಡುವೆ ಸರ್ಕಾರ, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಸ್ಲಾಮಿಯಾ ತಂಜೀಮ್ ಕಮೀಟಿ ಮನವಿಯಂತೆ ವಕ್ಪ್ ಎಂದು ಜಪ್ತಿ ಮಾಡಿದರೆ, ನಾವು ಕಾನೂನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕೋದಿಲ್ಲ ಎಂದು ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  Tungabhadra Dam | ಡ್ಯಾಂಗೆ ಬೋರ್ಡ್ ಅಧಿಕಾರಿಗಳ ಭೇಟಿ, 33 ಗೇಟ್ ಬದಲಾವಣೆಗೆ ಚಿಂತನೆ

  • ನಾಳೆ ಒಳಗಡೆ ಬಾಕಿ ಹಣ ನೀಡಿ: ಸಕ್ಕರೆ ಕಾರ್ಖಾನೆಗಳಿಗೆ ಬಾಗಲಕೋಟೆ ರೈತರ ಗಡುವು

    ನಾಳೆ ಒಳಗಡೆ ಬಾಕಿ ಹಣ ನೀಡಿ: ಸಕ್ಕರೆ ಕಾರ್ಖಾನೆಗಳಿಗೆ ಬಾಗಲಕೋಟೆ ರೈತರ ಗಡುವು

    ಬಾಗಲಕೋಟೆ: ಅಕ್ಟೋಬರ್ 28ರ ಒಳಗಡೆ 2022ರ ಸಾಲಿನ ಹೆಚ್ಚುವರಿ 62 ರೂ. ಬಾಕಿ ಹಣವನ್ನು ನೀಡಬೇಕು ಎಂದು ರೈತರು ಬಾಗಲಕೋಟೆ (Bagalkote) ಸಕ್ಕರೆ ಕಾರ್ಖಾನೆಗಳಿಗೆ (Sugarcane Mill) ಗಡುವು ನೀಡಿದ್ದಾರೆ.

    ಮುಧೋಳ ನಗರದ (Mudhol) ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಕೆಲ ನಿರ್ಣಯ ಕೈಗೊಂಡ ರೈತರು (Farmers) 2022ರ ಸಾಲಿನ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ನೀಡಬೇಕಿದ್ದ 62 ರೂ. ಹಣವನ್ನು ಸಮೀರವಾಡಿ ಸಕ್ಕರೆ ಕಾರ್ಖಾನೆಯವರು ಪಾವತಿಸಿದ್ದಾರೆ. ಉಳಿದ ಕಾರ್ಖಾನೆಯವರು ಶೀಘ್ರವೇ ಬಾಕಿ ಹಣವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮುಧೋಳದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ

    ಒಂದು ವೇಳೆ ಬಾಕಿ ಹಣ ನೀಡದೇ ಇದ್ದರೆ ಅ.28 ರ ನಂತರ ಮುಂದಿನ ಹೋರಾಟದ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ರೈತರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಸಭೆಯಲ್ಲಿ ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದುಂಡಪ್ಪ ಯರಗಟ್ಟಿ, ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೊಮ್ಮಾರ, ಹನಮಂತ ನಬಾಬ, ಸುರೇಶ ಚಿಂಚಲಿ, ನಾಗೇಶ ಗೊಲಶೇಟ್ಟಿ, ಸುಭಾಶ್ ಶಿರಬೂರ, ಮಹೇಶಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

     

  • ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

    ಬಾಗಲಕೋಟೆ: ವಿದ್ಯಾಗಿರಿಯಲ್ಲಿ ಒಳಚರಂಡಿ ನಿರ್ವಹಣೆಯನ್ನು ಬಾಗಲಕೋಟೆ (Bagalkote) ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಬಿಟಿಡಿಎ ಕೈ ಬಿಟ್ಟಿದೆ. ಪರಿಣಾಮ ರಸ್ತೆಗಳಲ್ಲಿ ಶೌಚಗುಂಡಿಗಳು, ಒಳಚರಂಡಿ ತುಂಬಿ ಹರಿಯುತ್ತಿದ್ದು ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ.

    ದಿಢೀರ್‌ ನಿರ್ಮಾಣವಾಗಿರುವ ಈ ಸ್ಥಿತಿಯಿಂದ ನಗರಸಭೆ ಸಿಬ್ಬಂದಿಯೂ ಅಸಹಾಯಕರಾಗಿದ್ದಾರೆ. ವಿದ್ಯಾಗಿರಿ ನಗರಸಭೆ ನಿರ್ವಹಣೆಗೆ ಒಳಪಟ್ಟರೂ ಈವರೆಗೆ ಇಲ್ಲಿನ ಒಳಚರಂಡಿಯನ್ನು (Drainage) ಬಿಟಿಡಿಎಯಿಂದ ನಿರ್ವಹಿಸಲಾಗುತ್ತಿತ್ತು. ಆದರೆ ಲೆಕ್ಕಪರಿಶೋಧಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿರ್ವಹಣೆ ಸಾಧ್ಯವಿಲ್ಲ ಎಂದು ಬಿಟಿಡಿಎ ಕೈ ತೊಳೆದುಕೊಂಡಿದೆ.

    ವಿದ್ಯಾಗಿರಿಯ ತೆಗ್ಗಿಲೇಔಟ್, ರೂಪ್‌ಲ್ಯಾಂಡ್, ಕುದರಿಕನ್ನೂರ ಲೇಔಟ್, ರೋಣ ಲೇಔಟ್, ಫುಡ್‌ಸ್ಟೇಶನ್ ಮುಂಭಾಗ ರಸ್ತೆಗಳಲ್ಲೇ ನೀರು ಉಕ್ಕಿ ಹರಿಯುತ್ತಿದೆ. ತೆಗ್ಗಿ ಲೇಔಟ್‌ನಲ್ಲಿ ನೀರು ಮನೆಗೆ ನುಗ್ಗಿದ್ದು, ನಮ್ಮ ಕಷ್ಟ ಕೇಳುವವರು ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಗೋಳಾಡುತ್ತಿದ್ದಾರೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್‌ನನ್ನು ಎನ್‌ಕೌಂಟರ್‌ ಮಾಡಿದ್ರೆ 1,11,11,111 ರೂ. ಬಹುಮಾನ – ಕರ್ಣಿ ಸೇನೆಯಿಂದ ಘೋಷಣೆ

    ಈ ಕುರಿತು ಮಾತನಾಡಿದ ನಗರಸಭೆ ಸದಸ್ಯ ವೀರಪ್ಪ ಶಿರಗಣ್ಣವರ ಪ್ರತಿಕ್ರಿಯಿಸಿ, ನಗರಸಭೆ ಬಳಿ ಇರುವ ಒಂದು ವಾಹನದಿಂದಲೇ ಎಲ್ಲವನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆದಿದೆ. ಸಿಬ್ಬಂದಿ ಸಹಕಾರಿಯಾಗಿದ್ದಾರೆ ಎಂಬ ಕಾರಣಕ್ಕೆ ಎಷ್ಟೇ ಕೆಲಸ ಬಂದರೂ ಅವರು ಗೊಣಗದೇ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆಯ ಶಾಸಕರು ಬಿಟಿಡಿಎಗೆ ಸಭಾಪತಿಯಾಗಿದ್ದು, ಇಂಥ ಸಂದರ್ಭದಲ್ಲಿ ಜನಕ್ಕೆ ನೆರವಾಗುವ ಕೆಲಸ ಮಾಡಬೇಕಿದೆ ಎಂದರು.

    ಬಿಟಿಡಿಎ-ನಗರಸಭೆ ಸಿಬ್ಬಂದಿಯನ್ನು ಕರೆದು ಬಗೆಹರಿಸುವ ಕೆಲಸವನ್ನಾದರೂ ಮಾಡಬೇಕು. ನಾವು ಸಾಧ್ಯವಾದಷ್ಟು ಜನರ ತೊಂದರೆಯನ್ನು ನಿವಾರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ವಿದ್ಯಾಗಿರಿಯಲ್ಲಿನ ಒಳಚರಂಡಿ ನಿರ್ವಹಣೆ ಸಂಬಂಧ ನಗರಸಭೆಯಿಂದ ಟೆಂಡರ್ ಕರೆಯಬೇಕಿದ್ದು, ಅಲ್ಲಿಯವರೆಗೂ ಜನರ ಕಷ್ಟ ತಪ್ಪಿದಲ್ಲ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ತುಂಗಾ ಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿ

    ಈ ನಡುವೆ ವಿದ್ಯಾಗಿರಿಯ 20ನೇ ಕ್ರಾಸ್ ನಲ್ಲಿ ಹೊಸದಾಗಿ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಕೆಳಭಾಗದ ಪೈಪ್‌ಗಳು ಒಡೆದು ನಿರಂತರವಾಗಿ ನೀರು ಪೋಲಾಗುತ್ತಿದೆ. ಈ ಬಗ್ಗೆಯೂ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.

  • ಅ.20ಕ್ಕೆ ಬಾಗಲಕೋಟೆಯಲ್ಲಿ ರಾಯಣ್ಣ ಚನ್ನಮ್ಮ ಬ್ರಿಗೇಡ್ ಸಭೆ: ಕೆಎಸ್ ಈಶ್ವರಪ್ಪ

    ಅ.20ಕ್ಕೆ ಬಾಗಲಕೋಟೆಯಲ್ಲಿ ರಾಯಣ್ಣ ಚನ್ನಮ್ಮ ಬ್ರಿಗೇಡ್ ಸಭೆ: ಕೆಎಸ್ ಈಶ್ವರಪ್ಪ

    ಶಿವಮೊಗ್ಗ: ಹಿಂದೂ ಧರ್ಮದ ಎಲ್ಲಾ ಸಮುದಾಯದ ಬಡವರ ಏಳಿಗೆಗಾಗಿ ರಾಯಣ್ಣ ಚನ್ನಮ್ಮ ಬ್ರಿಗೇಡ್ (Rayanna Channamma Brigade) ಆರಂಭಿಸುತ್ತಿದ್ದು, ಅ.20 ರಂದು ಬಾಗಲಕೋಟೆಯ (Bgalkote) ಚರಂತಿಮಠ ಸಭಾಂಗಣದಲ್ಲಿ ಚಿಂತನ ಮಂಥನ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ತಿಳಿಸಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದೆ. ಆಗ ಈ ಬ್ರಿಗೇಡ್ ನಿಲ್ಲಿಸುವಂತೆ ಯಡಿಯೂರಪ್ಪ ಅವರು ತಿಳಿಸಿದ್ದರು. ಹೀಗಾಗಿ ಬ್ರಿಗೇಡ್ ಸ್ಥಗಿತಗೊಳಿಸಿದ್ದೆ. ಆದರೆ ಈ ಬಾರಿ ಅಂತಹ ತಪ್ಪು ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಇಸ್ರೇಲ್‌ ಜೊತೆ ಮೋದಿಗೆ ಉತ್ತಮ ಸಂಬಂಧವಿದೆ – ಕಾಂಗ್ರೆಸ್‌ನಿಂದ ಇವಿಎಂ-ಪೇಜರ್‌ ಅನುಮಾನ

    ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ 25 ಮಂದಿ ಸಾಧು ಸಂತರು ಭಾಗವಹಿಸಲಿದ್ದು, ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ| ಡಿವೈಡರ್‌ಗೆ ಡಿಕ್ಕಿ ಹೊಡೆದು ಆಟೋ ಮೇಲೆ ಬಿದ್ದ ಕಾರು – ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

  • ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು

    ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು

    ಬಾಗಲಕೋಟೆ: ಎತ್ತಿನ ಮೈ ತೊಳೆಯಲು ಹೋಗಿದ್ದಾಗ ರೈತನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಸಾಕಿದ ಎತ್ತು ರೈತನ ಜೀವ ಉಳಿಸಿರುವ ರೋಚಕ ಘಟನೆ ಜಿಲ್ಲೆಯ ಬೀಳಗಿ ( Bilagi) ತಾಲ್ಲೂಕಿನ ಹೊನ್ಯಾಳ ಗ್ರಾಮದ ಬಳಿ ಆಲಮಟ್ಟಿ (Almatti) ಜಲಾಶಯದ ಹಿನ್ನೀರಲ್ಲಿ ನಡೆದಿದೆ.

    ದಾಳಿಗೊಳಗಾದ ರೈತನನ್ನು ಹೊನ್ಯಾಳ (Honyal)  ಗ್ರಾಮದ ನಿವಾಸಿ ಧರಿಯಪ್ಪ ಮೇಟಿ(32) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ

    ಹೊನ್ಯಾಳ ಗ್ರಾಮದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ರೈತ ಎತ್ತಿನ ಮೈ ತೊಳೆಯಲು ಹೋಗಿದ್ದ. ಆ ವೇಳೆ ರೈತನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಆತನ ಬಲಗೈಗೆ ಬಾಯಿಹಾಕಿದೆ. ಗಾಬರಿಯಲ್ಲಿ ಏನೂ ತೋಚದೇ ಪಕ್ಕದಲ್ಲಿದ್ದ ಎತ್ತಿನ ಹಗ್ಗವನ್ನು ತನ್ನ ಎಡಗೈಯಿಂದ ಹಿಡಿದುಕೊಂಡಿದ್ದಾನೆ. ಹಗ್ಗ ಹಿಡಿದಿದ್ದನ್ನು ಕಂಡ ಎತ್ತು ತನ್ನ ಮಾಲೀಕನನ್ನು ನೀರಿನಿಂದ ಹೊರಗೆ ಎಳೆದಿದೆ. ಆತನನ್ನು ಎತ್ತು ಹೊರಕ್ಕೆ ಎಳೆದಾಗ ಮೊಸಳೆ ಓಡಿಹೋಗಿದ್ದು, ರೈತನ ಬಲಗೈ ಕತ್ತರಿಸಿದೆ. ಆದರೆ ಸಾಕಿದ ಎತ್ತು ತನ್ನ ಮಾಲೀಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

    ಗಾಯಳು ಧರಿಯಪ್ಪನನ್ನು ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಬೀಳಗಿ ಶಾಸಕ ಜೆಟಿ ಪಾಟೀಲ್ (JT Patil) ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಕರೆಯ ಮೂಲಕ ಮಾತನಾಡಿ, ಸೂಕ್ತ ಪರಿಹಾರ ಕೊಡಬೇಕು ಹಾಗೂ ಎಲ್ಲ ದಾಖಲೆಗಳನ್ನು ಕಲೆ ಹಾಕಿ ಪರಿಹಾರಕ್ಕೆ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಆಯುಧ ಪೂಜೆಯ ದಿನದಂದೇ ಸಿಹಿಸುದ್ದಿ ಕೊಟ್ಟ ಯುವ- ಚಿತ್ರದ ಪೋಸ್ಟರ್‌ ಔಟ್

  • ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

    ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

    ಬಾಗಲಕೋಟೆ: ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ (Gururaj Hosakote) ಅವರ ಕಾರು ಅಪಘಾತಕ್ಕೀಡಾದ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಮುಧೋಳ (Mudhol) ತಾಲೂಕಿನ ಸೋರಗಾವಿ ಬಳಿ ನಡೆದಿದೆ.

    ಎದುರು ಬಂದ ವಾಹನ ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿದ್ದ ಕಲ್ಲಿಗೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ಯುವದಸರಾಗೆ ಅದ್ಧೂರಿ ಚಾಲನೆ – ಶ್ರೇಯಾ ಘೋಷಾಲ್ ಹಾಡಿಗೆ ಹುಚ್ಚೆದ್ದು ಕುಣಿದ ಯುವಜನ

    ಇನ್ನು ಕಾರಿನಲ್ಲಿದ್ದ ಗುರುರಾಜ ಹೊಸಕೋಟೆ ಅವರು ಪ್ರಾಣಾಪಾದಿಂದ ಪಾರಾಗಿದ್ದು, ಯಾರಿಗೂ ಯಾವುದೇ ಗಾಯ ಹಾಗೂ ಪ್ರಾಣಹಾನಿ ಉಂಟಾಗಿಲ್ಲ. ಸಿಂಧನೂರಿನಿಂದ ಮಹಾಲಿಂಗಪುರಕ್ಕೆ ಹೊರಟಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ದೇವರಾಜ ಅರಸು ಸೇರಿ ಎಲ್ಲಾ ಸಿಎಂಗಳ ಮೇಲೂ ಆಪಾದನೆ ಬಂದಿತ್ತು, ಸಿದ್ದರಾಮಯ್ಯನವರೇ ದೃತಿಗೆಡಬೇಡಿ: ಪಿಜಿಆರ್ ಸಿಂಧ್ಯಾ

    ಗುರುರಾಜ ಹೊಸಕೋಟೆ ಕರ್ನಾಟಕ ಜನಪದ ಗಾಯನ, ರಂಗಭೂಮಿ ಮತ್ತು ಸಿನಿಮಾ ಲೋಕದಲ್ಲಿ ಮಹತ್ವದ ಪ್ರತಿಭೆ. ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ಸಿಎಂ `ಸತೀಶ್ ಜಾರಕಿಹೊಳಿ’ – ಸಚಿವರ ಸಮ್ಮುಖದಲ್ಲೇ ಬೆಂಬಲಿಗನ ಘೋಷಣೆ!

  • ಕ್ಯಾಂಟರ್‌ಗೆ ಕಾರು ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು

    ಕ್ಯಾಂಟರ್‌ಗೆ ಕಾರು ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು

    ಬಾಗಲಕೋಟೆ: ಕ್ಯಾಂಟರ್  ಹಾಗೂ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ಹುನಗುಂದ ತಾಲ್ಲೂಕಿನ ಧನ್ನೂರು ಎಂಬಲ್ಲಿ ನಡೆದಿದೆ.

    ಲಕ್ಷ್ಮಣ ವಡ್ಡರ್ (55),ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕಮಕ್ಕಳು (50) ಹಾಗೂ ಕಾರು ಚಾಲಕ ರಫಿಕ್ ಮುಲ್ಲಾ(25) ಸಾವಿಗೀಡಾದವರು. ಮೃತರು ವಿಜಯಪುರ (Vijayapura) ಜಿಲ್ಲೆ ಬಿದರಕುಂದಿ ಗ್ರಾಮದವರು. ತಡರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ

    ಕಾರು ಮುದ್ದೇಬಿಹಾಳ (Muddebihal) ಕಡೆ ಹೊರಟಿತ್ತು. ಕ್ಯಾಂಟರ್ ಮುದ್ದೇಬಿಹಾಳದಿಂದ ಹುನಗುಂದ ಕಡೆ ಬರುತ್ತಿತ್ತು. ಈ ವೇಳೆ ಕಾರು ಚಾಲಕ ನಿದ್ರೆಗೆ ಜಾರಿದ್ದು, ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ನಜ್ಜುಗುಜ್ಜಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Karawar | ಹಣಕೋಣ ಉದ್ಯಮಿ ಹತ್ಯೆ -ಪ್ರಮುಖ ಆರೋಪಿ ಆತ್ಮಹತ್ಯೆ, ಮೂವರ ಬಂಧನ

    ಘಟನೆ ನಡೆದ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದದ ಬಳಿಕ ಹೆಚ್ಚಿದ ಬೇಡಿಕೆ – ಹಾಸನಾಂಬ ಲಡ್ಡು ಪ್ರಸಾದಕ್ಕೂ ನಂದಿನಿ ತುಪ್ಪ

  • ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ, ಇದು 7ನೇ ಹಂತದ ಪಂಚಮಸಾಲಿ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ

    ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲಿಸಲ್ಲ, ಇದು 7ನೇ ಹಂತದ ಪಂಚಮಸಾಲಿ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ

    ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವ ವಿಚಾರವಾಗಿ ಮತ್ತೆ ಹೋರಾಟ ಮಾಡುವ ಮುನ್ಸೂಚನೆಯನ್ನು ಬಸವ ಜಯಮೃತ್ಯುಂಜಯ (Basava Jayamruthyunjaya Swamiji) ಸ್ವಾಮೀಜಿ ನೀಡಿದ್ದಾರೆ.

    ಬಾಗಲಕೋಟೆಯಲ್ಲಿ (Bagalkote) ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಸಿಎಂ ಆದ ಮೇಲೆ ಹೋರಾಟ ಶಾಂತಸ್ವರೂಪ ಪಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಬೊಮ್ಮಾಯಿ ಅವರಿಗೆ ನಮ್ಮ ಸಮಾಜದ ಬಗ್ಗೆ ಗೌರವ ಇತ್ತು. ಭಯವೂ ಇತ್ತು. ಆದರೆ ಇವರಿಗೆ (ಸಿದ್ದರಾಮಯ್ಯ) ಏನು ಇಲ್ಲ. ಇವರನ್ನು ಕಂಡರೆ ನಾವು ಭಯ ಪಡುವಂತಹ ಪರಿಸ್ಥಿತಿ ಬಂದಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದರು. ಇದನ್ನೂ ಓದಿ: Tirupati Laddu Row | ಟಿಟಿಡಿ ಲಡ್ಡು ತಯಾರಿಕೆಗೆ ಪ್ರಮಾಣಿಕೃತ ತುಪ್ಪವನ್ನೇ ಬಳಸಲಾಗಿದೆ: ಜಗನ್ ಸ್ಪಷ್ಟನೆ

    ಅವತ್ತಿನ ಸಂದರ್ಭವೇ ಬೇರೆ. ಬೊಮ್ಮಾಯಿ ಅವರಿಗೆ ನಮ್ಮ ಜನಾಂಗದ ಮತದ ಬಗ್ಗೆ ಗೌರವ ಇತ್ತು. ಹಾಗಾಗಿ ನಾವು ಎಲ್ಲೇ ಕರೆದರೂ ಬರುತ್ತಿದ್ದರು ಮತ್ತು ಮಾತನಾಡುತ್ತಿದ್ದರು. ಈಗ ನಾನು ಸಿಎಂ ಅವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಅದು ಅನಿವಾರ್ಯವೂ ಆಗಿದೆ. ಆದರೆ ನಾವು ಹೋರಾಟದಲ್ಲಿ ಇರುವುದರಿಂದ ಎಷ್ಟೇ ಕಷ್ಟ ಆದರೂ ಹೋರಾಟ ಕೈ ಬಿಡಲ್ಲ. ನಮ್ಮ ಸಮಾಜದ ಶಾಸಕರ ಮೂಲಕವೂ ಸಿಎಂಗೆ ಒತ್ತಡ ಹಾಕಿಸುತ್ತೆವೆ. ಸಮಾಜದ ವಕೀಲರ ಮೂಲಕವೂ ಒತ್ತಡ ಹಾಕುತ್ತೇನೆ. ಯಾವುದೇ ಮುಖ್ಯಮಂತ್ರಿ ಇರಲಿ ಸ್ಪಂದನೆ ಮಾಡಲೇಬೇಕು ಎಂದರು. ಇದನ್ನೂ ಓದಿ: ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

    ಯಾರೂ ಖಾಯಂ ಆಗಿ ಸಿಎಂ ಆಗಿರುವುದಿಲ್ಲ. ಈಗ ಇಲ್ಲದಿದ್ದರೂ ಮುಂದೆ ದೇವರು ಮೀಸಲಾತಿಗೆ ಸ್ಪಂದನೆ ಮಾಡುವಂತಹ ಒಳ್ಳೆಯ ಸಿಎಂ ರನ್ನು ಕೊಟ್ಟೆ ಕೊಡುತ್ತಾನೆ. ವಕೀಲರನ್ನು ನೋಡಿಯಾದರೂ ಸಿದ್ದರಾಮಯ್ಯ ಅವರ ಮನಸ್ಸು ಕರಗಿ ಮೀಸಲಾತಿ ಘೋಷಣೆ ಮಾಡಬಹುದು ಎಂದು ಅಂದುಕೊಂಡಿದ್ದೇವೆ. ಇದು ನಮ್ಮ ಏಳನೇ ಹಂತದ ಹೋರಾಟ. ಈ ಬಾರಿ ವಕೀಲರ ಮೂಲಕ ಪ್ರಯತ್ನ ಮಾಡುತ್ತಿದ್ದೇವೆ. ವಕೀಲರು ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಧ್ವನಿ ಜೋಡಿಸಿದರೆ ನಮಗೆ ಆನೆಬಲ ಬರುತ್ತದೆ. ಆಗಲಾದರೂ ಮುಖ್ಯಮಂತ್ರಿಗಳು ವಕೀಲರ ಮಾತಿಗೆ ಬೆಲೆ ಕೊಟ್ಟು ನಮಗೆ ನ್ಯಾಯ ಕೊಡಬಹುದು ಎನ್ನುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಗಮಂಗಲ ಗಲಭೆಗೆ ಪೊಲೀಸರ ವೈಫಲ್ಯ ಕಾರಣ: NIA ತನಿಖೆಗೆ ಆಗ್ರಹಿಸಿದ ಅಶ್ವಥ್ ನಾರಾಯಣ

    ರಾಜ್ಯಾದ್ಯಂತ ನಮ್ಮ ಸಮಾಜದ ವಕೀಲರು ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಸೆ.22ರಂದು ವಕೀಲರ ಮೂಲಕ ಹೋರಾಟ ಪ್ರಾರಂಭಿಸಿತ್ತೇವೆ. ಮೊದಲು ಬೆಳಗಾವಿಯ ಗಾಂಧಿ ಭವನದಲ್ಲಿ ಹೋರಾಟ ಮಾಡುತ್ತೇವೆ. ಸಿಎಂ ಕಾನೂನು ತಜ್ಞರ ಸಭೆ ಕರೆಯಲು ಅವರೇ ದಿನಾಂಕ ಘೋಷಣೆ ಮಾಡಬೇಕು. ಘೋಷಣೆ ಮಾಡಿದರೆ ಹೋರಾಟ ಕೈ ಬಿಡುತ್ತೇವೆ. ಇಲ್ಲದಿದ್ದರೆ ಘೋಷಣೆ ಮಾಡುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಸರ್ಕಾರಕ್ಕೆ ಹಾಗೂ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರಹಸ್ಯ ಮಾಹಿತಿ ಸೋರಿಕೆ ಬಗ್ಗೆ ಮಾಹಿತಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ