Tag: bagalkote

  • ಬಾಗಲಕೋಟೆ ಡಿಸಿ ಕಚೇರಿ ಎದುರು ಹಾವು ಪ್ರತ್ಯಕ್ಷ – ಹೌಹಾರಿದ ನೌಕರರು

    ಬಾಗಲಕೋಟೆ ಡಿಸಿ ಕಚೇರಿ ಎದುರು ಹಾವು ಪ್ರತ್ಯಕ್ಷ – ಹೌಹಾರಿದ ನೌಕರರು

    ಬಾಗಲಕೋಟೆ: ಜಿಲ್ಲಾಧಿಕಾರಿಗಳ ಕಚೇರಿ (District Headquarters) ಎದುರೇ ಹಾವು (Snake) ಕಾಣಿಸಿಕೊಂಡು ಕೆಲಹೊತ್ತು ಅಲ್ಲಿಯ ನೌಕರರನ್ನ ಭಯಭೀತಗೊಳಿಸಿದ್ದ ಘಟನೆ ಬಾಗಲಕೋಟೆ (Bagalkote) ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.

    ಎಂದಿನಂತೆ ನೌಕರರು ತಮ್ಮ ಕೆಲಸಕ್ಕೆ ಹಾಜರಾಗುವ ವೇಳೆ ಹಾವು ಕಚೇರಿ ಎದುರು ಹರಿದು ಮುಂದೆ ಹೊರಟಿತ್ತು.ನಂತರ ಜಿಲ್ಲಾಡಳಿತ ಸಿಬ್ಬಂದಿ ಸ್ನೇಕ್ ಕ್ಯಾಚರ್ ರಾಜುಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ರಾಜು ಹಾವನ್ನು ರಕ್ಷಣೆ ಮಾಡಿದರು. ಇದನ್ನೂ ಓದಿ: ಪೊಲೀಸ್‌ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ

    ಇದು ಮಂಡಲದ ಹಾವಾಗಿದ್ದು ವಿಷಕಾರಿ ಅಲ್ಲ. ಈ ಹಾವು ಕಚ್ಚಿದರೆ ಜನರು ಸಾಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ಹಾವಿನ ಜಾತಿಯ ಬಗ್ಗೆ ರಾಜು ಅರಿವು ಮೂಡಿಸಿದರು.

    ಸುಮಾರು ಎರಡು ಅಡಿಯ ಉದ್ದದ ಹಾವು ಇದಾಗಿದ್ದು, ಇದು ಮನೆಯ ಗೋಡೆ ಹಾಗೂ ಸಂದಿಗೊಂದಿಗಳಲ್ಲಿ ಸಂಚರಿಸುತ್ತದೆ. ಅಡಗಿರುವ ಇಲಿಯನ್ನು ಬೇಟೆಯಾಡುತ್ತದೆ. ಆಹಾರ ಅರಸುತ್ತಾ ಡಿಸಿ ಕಚೇರಿಗೆ ಬಂದಿರಬಹುದು ಎಂದು ರಾಜು ಹೇಳಿದರು.

     

  • ಹಕ್ಕಿ ಜ್ವರ ಭೀತಿ – ಬಾಗಲಕೋಟೆ ಜಿಲ್ಲಾಡಳಿತದಿಂದ ಸಭೆ

    ಹಕ್ಕಿ ಜ್ವರ ಭೀತಿ – ಬಾಗಲಕೋಟೆ ಜಿಲ್ಲಾಡಳಿತದಿಂದ ಸಭೆ

    ಬಾಗಲಕೋಟೆ: ರಾಜ್ಯದಲ್ಲಿ ಹಕ್ಕಿ ಜ್ವರ (Bird Flu) ಭೀತಿ ಬೆನ್ನಲ್ಲೇ ಬಾಗಲಕೋಟೆ (Bagalkote) ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಡಿಸಿ ಜಾನಕಿ.ಕೆ.ಎಂ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಜಾಗ್ರತಾ ಸಭೆ ನಡೆಸಲಾಗಿದೆ.

    ಹಕ್ಕಿ ಜ್ವರ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಡಿಸಿ ಕೆ.ಎಂ ಜಾನಕಿ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಒಟ್ಟು 417 ವಾಣಿಜ್ಯ ಬಾಯ್ಲರ್ ಹಾಗೂ ಲೇಯರ್ಸ್ ಕೋಳಿ ಫಾರಂ ಇದ್ದು, ಅವುಗಳಲ್ಲಿ 9 ಲಕ್ಷ 28 ಸಾವಿರ ಬಾಯ್ಲರ್ ಕೋಳಿಗಳು ಹಾಗೂ 10 ಲಕ್ಷ 30 ಸಾವಿರ ಲೇಯರ್ ಕೋಳಿಗಳಿವೆ. ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಹಕ್ಕಿಜ್ವರ ಭೀತಿ ಇಲ್ಲ. ಜನರು ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಾಧ್ಯವಾದಷ್ಟು ಬೇಗ ಮಕ್ಕಳನ್ನ ಮಾಡಿಕೊಳ್ಳಿ – ಜನಸಂಖ್ಯೆ ಹೆಚ್ಚಿಸಲು ಎಂ.ಕೆ ಸ್ಟಾಲಿನ್ ಮನವಿ

    ಕೋಳಿ ಹಾಗೂ ಉತ್ಪನ್ನಗಳ ಆಹಾರ, ಸಾಗಾಣಿಕೆ ಬಂದ್ ಮಾಡುವ ಬಗ್ಗೆ ಹಾಗೂ ಗಡಿ ಪ್ರದೇಶದಲ್ಲಿ ಚೆಕ್‌ಪೋಸ್ಟ್ ಹಾಕಿ ಪರಿಶೀಲನೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಯಾವುದೇ ಅನುದಾನ ತಂದಿಲ್ಲ: ಹೆಚ್‌ಸಿ ಬಾಲಕೃಷ್ಣ

    ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಜಿಲ್ಲಾ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ರೋಹಿತ್‌ ಶರ್ಮಾ ದಪ್ಪಗಿದ್ದಾರೆ – ಕಾಂಗ್ರೆಸ್‌ ವಕ್ತಾರೆ ಪೋಸ್ಟ್, ವಿವಾದದ ಬೆನ್ನಲ್ಲೇ ಪಕ್ಷದಿಂದ ಛೀಮಾರಿ

  • ನಮಗೆ ನಿಮ್ಮ ದುಡ್ಡು ಬೇಡ – ಸನಾದಿ ಅಪ್ಪಣ್ಣ ವಂಶಸ್ಥರಿಗೆ ರನ್ನ ಉತ್ಸವದಲ್ಲಿ ಅಪಮಾನ

    ನಮಗೆ ನಿಮ್ಮ ದುಡ್ಡು ಬೇಡ – ಸನಾದಿ ಅಪ್ಪಣ್ಣ ವಂಶಸ್ಥರಿಗೆ ರನ್ನ ಉತ್ಸವದಲ್ಲಿ ಅಪಮಾನ

    ಬಾಗಲಕೋಟೆ: ಸನಾದಿ ಅಪ್ಪಣ್ಣ (Sanaadi Appanna) ವಂಶಸ್ಥರಿಗೆ ಬಾಗಲಕೋಟೆ (Bagalkote) ಜಿಲ್ಲಾಡಳಿತದಿಂದ ಅಪಮಾನವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಫೆಬ್ರವರಿ 22 ರಿಂದ 25ರವರೆಗೆ ಮೂರು ದಿನಗಳ ಕಾಲ ಅದ್ಧೂರಿ ರನ್ನ ಉತ್ಸವ (Ranna Uthsava) ಕಾರ್ಯಕ್ರಮ ಮಾಡಲಾಗಿತ್ತು. ಆದರೆ ಕೋಟ್ಯಂತರ ರೂ. ಖರ್ಚು ಮಾಡಿದ ರನ್ನ ವೈಭವದಲ್ಲಿ ಸನಾದಿ ಅಪ್ಪಣ್ಣ ವಂಶಸ್ಥರಾದ ನಮಗೆ, ಕಲೆ ಪ್ರಸ್ತುತ ಪಡಿಸಲು ಸರಿಯಾದ ವೇದಿಕೆಯನ್ನೂ ಕಲ್ಪಿಸಲಿಲ್ಲ. ಕೇವಲ 5 ಸಾವಿರ ರೂ. ಸಂಭಾವನೆ ನೀಡಿ ಜಿಲ್ಲಾಡಳಿತ ನಮಗೆ ಅಪಮಾನವೆಸಗಿದೆ‌ ಎಂದು ಅಪ್ಪಣ್ಣ ಅವರ ವಂಶಸ್ಥರಾದ ಬಸವಂತ್ ಭಜಂತ್ರಿ ಆರೋಪ‌ ಮಾಡಿದ್ದಾರೆ.

    4.5 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಡೆದ ರನ್ನ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರನ್ನ ವೈಭವದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ, ಸಿನಿಮಾ, ಹಾಡುಗಳ ಝಲಕ್, ಚಿತ್ರನಟಿ ರಕ್ಷಿತಾ, ಗಾಯಕ ವಿಜಯ್ ಪ್ರಕಾಶ್,ಸಂಗೀತ ನಿರ್ದೇಶಕ ಗಾಯಕ ಗುರುಕಿರಣ್, ರಾಜೇಶ್ ಕೃಷ್ಣನ್ ತಂಡದಿಂದ ಭರ್ಜರಿ ಹಾಡು ನೃತ್ಯ ನಡೆದಿತ್ತು.

    ವೈಭವದಲ್ಲಿ ಮುಖ್ಯ ವೇದಿಕೆಯಲ್ಲಿ ಶಹನಾಯಿ ವಾದನಕ್ಕೆ ಅವಕಾಶ ಕೊಟ್ಟಿರಲಿಲ್ಲ. ಬದಲಾಗಿ ಅಂಬೇಡ್ಕರ್ ಭವನದಲ್ಲಿ ನಡೆದ ಕಿರು ವೇದಿಕೆಯಲ್ಲಿ ನಮಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಸರಿಯಾದ ಮೈಕ್ ವ್ಯವಸ್ಥೆ ಕೂಡ ಇಲ್ಲ ಎಂದು ಬಸವಂತ್ ಭಜಂತ್ರಿ ಕಿಡಿಕಾರಿದ್ದಾರೆ.

    ಜಿಲ್ಲಾಡಳಿತ ನೀಡಿದ ಕೀಳು ಮಟ್ಟದ ಗೌರವಕ್ಕೆ ಅಪ್ಪಣ್ಣ ವಂಶಸ್ಥರು ಆಕ್ರೋಶ ವ್ಯಕ್ತಪಡಿಸಿ ಚೆಕ್‌ ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಸ್ ನೀಡಿದ್ದಾರೆ. 300 ವರ್ಷದ ಶಹನಾಯಿ ಇತಿಹಾಸ ನಮ್ಮ ಕುಟುಂಬಕ್ಕಿದೆ. ಆದರೆ ಇಲ್ಲಿ ನಮಗೆ ಅಪಮಾನ ಮಾಡಿದರು. ನಮಗಷ್ಟೇ ಅಲ್ಲ ಸ್ಥಳೀಯ ಕಲಾವಿದರಿಗೆ ಸರಿಯಾಗಿ ಮಾನ್ಯತೆ ನೀಡಲಿಲ್ಲ ಎಂದು ಅಪ್ಪಣ್ಣ ವಂಶಸ್ಥರು ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.

     

  • ಬಲವಂತವಾಗಿ ಕೆಳಗಿಳಿಸಿ, ಜೈ ಮಹಾರಾಷ್ಟ್ರ ಹೇಳುವಂತೆ ಒತ್ತಾಯಿಸಿದ್ರು: ಚಾಲಕ ಬೇಸರ

    ಬಲವಂತವಾಗಿ ಕೆಳಗಿಳಿಸಿ, ಜೈ ಮಹಾರಾಷ್ಟ್ರ ಹೇಳುವಂತೆ ಒತ್ತಾಯಿಸಿದ್ರು: ಚಾಲಕ ಬೇಸರ

    ಬಾಗಲಕೋಟೆ: ಬಲವಂತವಾಗಿ ಬಸ್‌ನಿಂದ ಕೆಳಗಿಳಿಸಿ, ಕೇಸರಿ ಬಣ್ಣ ಬಳಿದು ಹಾರ ಹಾಕಿ, ಜೈ ಮಹಾರಾಷ್ಟ್ರ ಹೇಳುವಂತೆ ಒತ್ತಾಯಿಸಿದರು ಎಂದು ಇಳಕಲ್ ಬಸ್ ಚಾಲಕ ಹಾಗೂ ನಿರ್ವಾಹಕ ಬೇಸರ ವ್ಯಕ್ತಪಡಿಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಇಳಕಲ್ ಡಿಪೋದ ಕೆಎಸ್‌ಆರ್‌ಟಿಸಿ ಬಸ್‌ನ್ನು ಮಹಾರಾಷ್ಟ್ರ ಪುಂಡರು ತಡೆಹಿಡಿದು, ಕಂಡಕ್ಟರ್ ಹಾಗೂ ಚಾಲಕನನ್ನು ಬಲವಂತವಾಗಿ ಕೆಳಗಿಳಿಸಿ ಕೇಸರಿ ಬಣ್ಣ ಬಳಿದು, ಜೈ ಮಹಾರಾಷ್ಟ್ರ ಎನ್ನುವಂತೆ ಅವಮಾನ ಮಾಡಿರುವ ಘಟನೆ ಸೋಲಾಪುರ ಬಳಿ ನಡೆದಿದೆ.ಇದನ್ನೂ ಓದಿ: ಶ್ರೀಶೈಲಂ ಸುರಂಗ ಕುಸಿತ – ರಕ್ಷಣಾ ಕಾರ್ಯಕ್ಕೆ ಉತ್ತರಾಖಂಡದ ರ‍್ಯಾಟ್ ಮೈನರ್‌ಗಳ ಸಾಥ್

    ಸೋಲಾಪುರದಿಂದ ಸಾಥ್ ರಸ್ತೆ ಮಾರ್ಗವಾಗಿ ಹಿಂತಿರುಗುತ್ತಿರುವಾಗ, ಕರ್ನಾಟಕದ ಬಸ್ ಕಂಡ ಮಹಾರಾಷ್ಟ್ರದ ಸುಮಾರು 15 ಜನ ದುರುಳರು, ಬಸ್ ತೆಡೆದು ಜೈ ಮಹಾರಾಷ್ಟ್ರ ಎನ್ನುವಂತೆ ಕಿರಿಕಿರಿ ಇಟ್ಟಿದ್ದಾರೆ. ಇದಕ್ಕೆ ಬಸ್ ಚಾಲಕ ಶಿವಪ್ಪ ಚಳಗೇರಿ ಹಾಗೂ ಕಂಡಕ್ಟರ್ ಬೇಸರ ವ್ಯಕ್ತಪಡಿಸಿದ್ದು, ನಮಗೆ ಭದ್ರತೆ ಇಲ್ಲದಂತಾಗಿದೆ ಎಂದಿದ್ದಾರೆ.

    ಇಳಕಲ್ ಡಿಪೋಗೆ ಬಂದಿಳಿದ ನಂತರ ಮಾತನಾಡಿದ ಅವರು, ಸೋಲಾಪುರ ಬಳಿ ಬಸ್ ತಡೆದು ನಮ್ಮನ್ನು ಬಲವಂತವಾಗಿ ಬಸ್‌ನಿಂದ ಕೆಳಗಿಳಿಸಿ, ಹಾರ ಹಾಕಿ, ಜೈ ಮಹಾರಾಷ್ಟ್ರ ಎನ್ನುವಂತೆ ಒತ್ತಾಯಿಸಿದರು, ನಂತರ ಬಸ್ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು, ನಮಗೆ ಕೇಸರಿ ಬಣ್ಣ ಬಳಿದು ಅವಮಾನಮಾಡಿ, ಬಳಿಕ ನಮ್ಮನ್ನು ಹೊರಡಲು ಬಿಟ್ಟರು ಎಂದರು.

    ಬಸ್‌ನ ಮಹಿಳಾ ಕಂಡಕ್ಟರ್ ಮಾತನಾಡಿ, ಮಹಾರಾಷ್ಟ್ರದ ಸುಮಾರು 15 ಜನ ಏಕಾಏಕಿ ನಮ್ಮ ಬಸ್ ತಡೆದು ಹೀಗೆ ಮಾಡುತ್ತಾರೆ ಎಂದರೆ ನಮಗೆ ಭದ್ರತೆ ಇಲ್ಲದಂತಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಓಡಾಡುವ ಬಸ್ಸುಗಳಿಗೆ ಈ ರೀತಿಯಾದರೆ ಹೇಗೆ? ಜೈ ಮಹಾರಾಷ್ಟ್ರ ಎನ್ನುವಂತೆ ಒತ್ತಾಯಿಸಿ, ಮೀಡಿಯಾದವರನ್ನು ಕರೆದು, ನಮ್ಮಿಂದ ಜೈ ಮಹಾರಾಷ್ಟ್ರ ಎಂದು ಘೋಷಣೆ ಹಾಕಿಸುತ್ತಾರೆ. ನಂತರ ನಮ್ಮ ಜೊತೆ ಫೋಟೊ ತೆಗೆಸಿಕೊಂಡು ಬಳಿಕ ಹೊರಡಲು ಬಿಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.

    ಅವರಿಗೆ ನಾವು ಭಾರತೀಯರು ಎಂಬ ಭಾವನೆಯೇ ಇಲ್ಲ. ಭಾರತ ಮಾತೆಯ ಮಕ್ಕಳು ಅಂದರೆ ಎಲ್ಲರೂ ಭಾರತೀಯರು, ಅದನ್ನ ಬಿಟ್ಟು ಜೈ ಮಹಾರಾಷ್ಟ್ರ, ಜೈ ಕರ್ನಾಟಕ ಎನ್ನುವುದು ಸರಿನಾ? ನಾವೆಲ್ಲರೂ ಭಾರತೀಯರು, ಜೈ ಭಾರತ್ ಎನ್ನುವ ಬದಲು, ಜೈ ಮಹಾರಾಷ್ಟ್ರ ಎಂದು ಉಪಟಳವಿಟ್ಟರು ಎಂದರು.ಇದನ್ನೂ ಓದಿ: 2028ರ ಚುನಾವಣೆಗೆ ಸಜ್ಜಾಗಿ – ಪರಾಜಿತ ಅಭ್ಯರ್ಥಿಗಳಿಗೆ ಡಿಕೆಶಿ ಸೂಚನೆ

     

  • ದೆಹಲಿ ವಿಶ್ವವಿದ್ಯಾಲಯದಿಂದ ಸಂಗಪ್ಪ ವಗ್ಗರ್‌ಗೆ ಡಾಕ್ಟರೇಟ್ ಪದವಿ

    ದೆಹಲಿ ವಿಶ್ವವಿದ್ಯಾಲಯದಿಂದ ಸಂಗಪ್ಪ ವಗ್ಗರ್‌ಗೆ ಡಾಕ್ಟರೇಟ್ ಪದವಿ

    ನವದೆಹಲಿ: ಪ್ರತಿಷ್ಠಿತ ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನಿಂದ (Delhi School of Social Work) ಸಮಾಜ ಕಾರ್ಯದಲ್ಲಿ ಸಂಗಪ್ಪ ವಗ್ಗರ್ ಅವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.

    ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನಿಂದ ಫೆಬ್ರವರಿ 22ರಂದು ನಡೆದ 101ನೇ ಘಟಿಕೋತ್ಸವದಲ್ಲಿ ಡಾ. ಸಂಗಪ್ಪ ವಗ್ಗರ್ ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ನೆರವೇರಿದ ರೇಣುಕಾಸ್ವಾಮಿ ಪುತ್ರನ ನಾಮಕರಣ – ಹೆಸರೇನು ಗೊತ್ತಾ?

    ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳಲ್ಲಿ ಸಾಮಾಜಿಕ ಬೆಂಬಲ, ಯೋಗಕ್ಷೇಮ ಮತ್ತು ನಿಭಾಯಿಸುವ ಮಾದರಿಗಳು ಎಂಬ ಶೀರ್ಷಿಕೆಯ ಅವರ ಸಂಶೋಧನೆಯು ಮಕ್ಕಳ ಕಲ್ಯಾಣ ಮತ್ತು ಬಾಲ ನ್ಯಾಯದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ. ಸಂಗಪ್ಪ ಅವರು ಪ್ರೊ.ಬೀನಾ ಆಂಥೋನಿ ರೆಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು.

    ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಮಳಗಾವಿ ಗ್ರಾಮದವರಾದ ಡಾ. ವಗ್ಗರ್ ಪ್ರಸ್ತುತ ಉಡುಪಿಯಲ್ಲಿ ನೆಲೆಸಿದ್ದಾರೆ. ಅವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಅಲ್ಲಿ ಅವರ ಶೈಕ್ಷಣಿಕ ಕೊಡುಗೆಗಳು ಮತ್ತು ವ್ಯಾಪಕ ಕ್ಷೇತ್ರಕಾರ್ಯವು ದುರ್ಬಲ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಅವರ ಕೆಲಸವು ಸಾಮಾಜಿಕ ನ್ಯಾಯ ಮತ್ತು ಮಕ್ಕಳ ಕಲ್ಯಾಣಕ್ಕೆ ಆಳವಾದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.ಇದನ್ನೂ ಓದಿ: Grand Championship | ಭಾರತ ತಂಡ ಪ್ರತಿನಿಧಿಸುತ್ತಿರೋ ಎನ್‍ಎಫ್‍ಸಿ ಕ್ಲಬ್

  • ಗುಳೇದಗುಡ್ಡ ತಾಲೂಕಿನ 3 ಗ್ರಾಮದಲ್ಲಿ ಚಿರತೆ ಆತಂಕ

    ಗುಳೇದಗುಡ್ಡ ತಾಲೂಕಿನ 3 ಗ್ರಾಮದಲ್ಲಿ ಚಿರತೆ ಆತಂಕ

    ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ (Guledgudda) ತಾಲೂಕಿನಲ್ಲಿ ಬರುವ ಮಂಗಳಗುಡ್ಡ, ಚಿಮ್ಮಲಗಿ ಹಾಗೂ ಪಟ್ಟದಕಲ್ಲು ಗ್ರಾಮಕ್ಕೆ ಹೊಂದಿಕೊಂಡಂತಿರುವ ಗುಡ್ಡದಲ್ಲಿ ಚಿರತೆ (Leopard) ಕಾಣಿಸಿದೆ.

    ಚಿರತೆ ಗುಡ್ಡದಲ್ಲಿ ಓಡಾಡುವ ದೃಶ್ಯವನ್ನು ಗ್ರಾಮಸ್ಥರು ಮೊಬೈಲಿನಲ್ಲಿ ಸೆರೆಹಿಡಿದಿದ್ದು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಇನ್ನುಂದೆ ʻಅನ್ನಭಾಗ್ಯʼ ಹಣದ ಬದಲು ಅಕ್ಕಿ ಕೊಡಲು ಸರ್ಕಾರ ತೀರ್ಮಾನ


    ಚಿರತೆ ರಾತ್ರಿ ಆಕಳು ಮತ್ತು ಕರುವಿನ ಮೇಲೆ ದಾಳಿ ಮಾಡಿ, ತಿಂದು ಹೋದ ಘಟನೆಗಳು ನಡೆದಿವೆ. ಚಿರತೆ ಕಾಣಿಸಿದ್ದರಿಂದ ಗ್ರಾಮದ ರೈತರು ಹಾಗೂ ಗದ್ದೆಗಳಲ್ಲಿ ಕೆಲಸ ಮಾಡುವ ಜನರು ಭಯದಲ್ಲಿದ್ದಾರೆ.

  • ಕಳ್ಳರ ಹಾವಳಿಗೆ ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು – ರಾತ್ರಿ ಗಸ್ತು ಸಂಚಾರ

    ಕಳ್ಳರ ಹಾವಳಿಗೆ ಒನಕೆ ಓಬವ್ವನ ರೂಪ ತಾಳಿದ ಮಹಿಳೆಯರು – ರಾತ್ರಿ ಗಸ್ತು ಸಂಚಾರ

    ಬಾಗಲಕೋಟೆ: ಮನೆಗಳ್ಳರ ಹಾವಳಿ‌ಗೆ ಬೇಸತ್ತ ಮಹಿಳೆಯರು ಒನಕೆ ಓಬವ್ವನ (Onake Obavva) ರೂಪ ತಾಳಿ ಗಮನ ಸೆಳೆದಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ‌ ಮುಧೋಳ ನಗರದಲ್ಲಿ ನಡೆದಿದೆ.

    ನಗರದ ಜಯನಗರ ನಿವಾಸಿಗಳೇ ಓಬವ್ವನ ರೂಪ ತಾಳಿದ ಮಹಿಳೆಯರು. ಕಳ್ಳರ‌ ಕಾಟದಿಂದ ಬೇಸತ್ತ ಮಹಿಳೆಯರು, ರಾತ್ರಿಪೂರ್ತಿ ಬಡಿಗೆ ಹಿಡಿದು ಬಡಾವಣೆಯಲ್ಲಿ ಗಸ್ತು ತಿರುಗಿ ಗಮನ ಸೆಳೆದಿದ್ದಾರೆ.

     

    ಕಳೆದ ಒಂದು ತಿಂಗಳಲ್ಲಿ ಜಯನಗರದಲ್ಲಿ ಎರಡು ಮನೆಗಳ ಕಳ್ಳತನವಾಗಿದ್ದರೆ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕಳ್ಳತನದ (Theft) ಪ್ರಕರಣಗಳು ದಾಖಲಾಗಿವೆ. ಇದರಿಂದ ಅಲರ್ಟ್ ಆದ ಮಹಿಳೆಯರು ಪೊಲೀಸರನ್ನು ನಂಬದೇ, ರಾತ್ರಿ ಪೂರ್ತಿ ಬಡಿಗೆ ಹಿಡಿದು ತಮ್ಮ ಬಡಾವಣೆ ರಕ್ಷಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ನಮ್ಮ ಮಕ್ಕಳು ಲವ್‌ ಜಿಹಾದ್‌ಗೆ ತುತ್ತಾಗಿದ್ದಾರೆ, ಸಹಾಯ ಮಾಡಿ: ಶ್ರೀರಾಮಸೇನೆಯ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿಗಳು

    ಬಡಾವಣೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಬಂದರೆ ವಿಚಾರಿಸಿ ನಂತರ ಅವರನ್ನು ಬಡಾ ವಣೆ ಒಳಗಡೆ ಬಿಟ್ಟುಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಜಯನಗರ ಬಡಾವಣೆಯಲ್ಲಿ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಇಬ್ಬರು ವ್ಯಕ್ತಿಗಳ ಥಳಿಸಿ ಪೊಲೀಸರಿಗೂ ಒಪ್ಪಿಸಿದ್ದಾರೆ.

  • ಕಾಶಿ | ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಬಾಗಲಕೋಟೆಯ ವ್ಯಕ್ತಿ ಸಾವು

    ಕಾಶಿ | ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿ ಬಾಗಲಕೋಟೆಯ ವ್ಯಕ್ತಿ ಸಾವು

    ಬಾಗಲಕೋಟೆ: ಕಾಶಿಯಲ್ಲಿ (Kashi) ನದಿಸ್ನಾನ ಮಾಡುವ ವೇಳೆ ನೀರಿನಲ್ಲಿ ಮುಳುಗಿ ಬಾಗಲಕೋಟೆಯ (Bagalkote) ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

    ಸತೀಶ್ ಜೋಷಿ (44) ಮೃತ ದುರ್ದೈವಿ. ಇವರು ಬಾಗಲಕೋಟೆ ಜಿ.ಪಂ ಹೊರಗುತ್ತಿಗೆ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ವಾರದ ಹಿಂದೆ ಸತೀಶ್ ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಮಹಾ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: Aeroindia 2025 | ಬೆಂಗಳೂರಿಗೆ ಬಂದಿಳಿದ ಅಮೆರಿಕ – ರಷ್ಯಾ ಜೆಟ್

    ಕುಂಭಮೇಳದಲ್ಲಿ ಭಾಗಿಯಾದ ಬಳಿಕ ಸತೀಶ್ ಹಾಗೂ ಕುಟುಂಬಸ್ಥರು ಅಲ್ಲಿಂದ ಕಾಶಿಗೆ ತೆರಳಿದ್ದರು. 35 ಜನ ಸೇರಿ ಪ್ರವಾಸಿ ಬಸ್‌ನಲ್ಲಿ ತೆರಳಿದ್ದರು. ಇಂದು ಬೆಳಗಿನ ಜಾವ ಕಾಶಿಯಲ್ಲಿ ನದಿಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿದ್ದ ಸತೀಶ್ ಶವವಾಗಿ ಹೊರಬಂದಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ಕಲ್ಯಾಣಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು – ಮೊಬೈಲ್‌ನಲ್ಲಿ ದೃಶ್ಯ ಸೆರೆ

  • ಜಮಖಂಡಿಯಲ್ಲಿ ಸರಣಿ ಅಪಘಾತ – ಮೂವರು ಸಾವು

    ಜಮಖಂಡಿಯಲ್ಲಿ ಸರಣಿ ಅಪಘಾತ – ಮೂವರು ಸಾವು

    ಬಾಗಲಕೋಟೆ: ಟಾಟಾ ಏಸ್, ಕಾರು, ಎರಡು ಬೈಕ್‍ಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ (Accident) ಮೂವರು ಸಾವಿಗೀಡಾದ ಘಟನೆ ಜಮಖಂಡಿ (Jamkhandi) ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ.

    ಜಮಖಂಡಿಯಿಂದ ವಿಜಯಪುರಕ್ಕೆ ತರಳುತ್ತಿದ್ದ ಟಾಟಾ ಏಸ್‍ಗೆ ವಿಜಯಪುರದಿಂದ ಜಮಖಂಡಿಗೆ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಇದೇ ವೇಳೆ ಟಾಟಾ ಏಸ್ ಹಿಂದೆ ಇದ್ದ ಎರಡು ಬೈಕ್‍ಗಳು ಡಿಕ್ಕಿಯಾಗಿವೆ. ಪರಿಣಾಮ ಟಾಟಾ ಏಸ್, ಕಾರು ಹಾಗೂ ಬೈಕ್‍ನಲ್ಲಿದ್ದ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ.

    ಮೃತರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಮೃತರ ಗುರುತು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

    ಸ್ಥಳಕ್ಕೆ ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‍ಐ ಗಂಗಾಧರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

  • ನಡುರಸ್ತೆಯಲ್ಲೇ ಹೊತ್ತಿ ಉರಿದ ಲಾರಿ – 30 ಟನ್ ಅಕ್ಕಿ ಭಸ್ಮ

    ನಡುರಸ್ತೆಯಲ್ಲೇ ಹೊತ್ತಿ ಉರಿದ ಲಾರಿ – 30 ಟನ್ ಅಕ್ಕಿ ಭಸ್ಮ

    ಬಾಗಲಕೋಟೆ: ನಡು ರಸ್ತೆಯಲ್ಲೇ ಅಕ್ಕಿ ಲಾರಿ ಹೊತ್ತಿ ಉರಿದ ಘಟನೆ ಮುಧೋಳ (Mudhol) ತಾಲೂಕಿನ ಲೋಕಾಪುರ ಸಮೀಪದ ದಿ ವಿಲೇಜ್ ಹೋಟೆಲ್ ಬಳಿ ನಡೆದಿದೆ.

    ಗಂಗಾವತಿಯಿಂದ ಕೊಲ್ಲಾಪುರಕ್ಕೆ ಸುಮಾರು 30 ಟನ್ ಅಕ್ಕಿ ತುಂಬಿಕೊಂಡು ಹೊರಟಿದ್ದ ಲಾರಿ  ರಾಜ್ಯ ಹೆದ್ದಾರಿ ಮಧ್ಯದಲ್ಲೇ ಬೆಂಕಿಗಾಹುತಿಯಾಗಿದೆ.

    ಟಯರ್ ಬ್ಲಾಸ್ಟ್ ಹಿನ್ನೆಲೆ ಲಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿ ಹತ್ತಿದ ಕೂಡಲೇ ಲಾರಿಯಿಂದ ಕೆಳಗಿಳಿದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ – ಕಾರು, ಬೈಕ್‌ ಸೇರಿ 100ಕ್ಕೂ ಹೆಚ್ಚು ವಾಹನಗಳು ಬೆಂಕಿಗಾಹುತಿ

    ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮುಧೋಳ ತಾಲೂಕಿನ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.