Tag: bagalkote

  • ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಬಾಗಲಕೋಟೆ ಆರೋಪಿಗೆ ಜಾಮೀನು

    ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಬಾಗಲಕೋಟೆ ಆರೋಪಿಗೆ ಜಾಮೀನು

    ಬಾಗಲಕೋಟೆ: ಕೋಲ್ಕತ್ತಾ ಐಐಎಂ (IIM) ಕಾಲೇಜು ಹಾಸ್ಟೆಲ್‌ಗೆ ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ (Bagalkote) ಮೂಲದ ವಿದ್ಯಾರ್ಥಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

    ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ನಿವಾಸಿಯಾಗಿರುವ ಆರೋಪಿ ಪರಮಾನಂದ ಟೋಪಣ್ಣನವರ್‌ಗೆ ಕೋಲ್ಕತ್ತಾದ (Kalkata) ಅಲಿಪುರ 9 ಜೆಎಂಎಫ್‌ಸಿ ಕೋರ್ಟ್ ಶನಿವಾರ ಸಂಜೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರಮಾನಂದ ಪರ ವಕೀಲ ವರುಣ್ ಪಾಟೀಲ್, ಮಹೇಂದ್ರ.ಜಿ ಬೇಲ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಒಂದೇ ವಧುವನ್ನು ಮದುವೆಯಾದ ಸಹೋದರರು!

    ಜಾಮೀನು ಅರ್ಜಿ ವಿಚಾರಣೆ ಮಾಡಿದ ಕೋರ್ಟ್ 50,000 ರೂ. ಬಾಂಡ್ ನೀಡುವಂತೆ ಸೂಚಿಸಿತು. ಪಾಸ್‌ಪೋರ್ಟ್ ಜಪ್ತಿ ಮಾಡಿದ್ದು, ಕೋಲ್ಕತ್ತಾದಿಂದ ಹೊರ ಹೋಗದಂತೆ ಷರತ್ತು ವಿಧಿಸಿದೆ ಎಂದು ವಕೀಲ ವರುಣ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಿವ್-ಇನ್-ಪಾರ್ಟ್ನರ್‌ನ ಕೊಂದು ಆಕೆ ಕೆಲಸ ಮಾಡ್ತಿದ್ದ ಠಾಣೆಗೆ ಹೋಗಿ ಶರಣಾದ ಯೋಧ

    ಆರೋಪಿಯು ಕೊಲ್ಕತ್ತಾದ ಜೋಕಾದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM)ನಲ್ಲಿ 2ನೇ ವರ್ಷದ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ. ಆರೋಪಿಯ ವಿರುದ್ಧ ಯುವತಿಯು, ಹಾಸ್ಟೆಲ್‌ಗೆ ಕರೆಸಿಕೊಂಡು ಪಿಜ್ಜಾ ತಿನ್ನಿಸಿ, ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿ ಹರಿದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಜು.12ರಂದು ಪರಮಾನಂದನನ್ನ ಬಂಧಿಸಿದ್ದರು.

    ಯುವತಿ ಆರೋಪದ ಬೆನ್ನಲ್ಲೇ ಆಕೆಯ ತಂದೆ, ಅತ್ಯಾಚಾರ ನಡೆದಿದೆ ಎಂಬ ವಿಚಾರವನ್ನು ಅಲ್ಲಗಳೆದಿದ್ದರು. ಆಕೆ ಆಟೋದಲ್ಲಿ ಹೋಗುವಾಗ ಬಿದ್ದಿದ್ದಳು. ಆರೋಗ್ಯವಾಗಿದ್ದಾಳೆ ಎಂದು ಹೇಳಿಕೊಂಡಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಪಂಚಮಸಾಲಿ ಪೀಠಕ್ಕೆ ಹೊಸ ಶ್ರೀ? ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?

    ಪಂಚಮಸಾಲಿ ಪೀಠಕ್ಕೆ ಹೊಸ ಶ್ರೀ? ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?

    -ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸ್ವಾಮೀಜಿ

    ಬಾಗಲಕೋಟೆ: ಒಂದು ಕಡೆ ಪೀಠದಿಂದ ಸ್ವಾಮೀಜಿಗಳನ್ನು ಕೆಳಗಿಳಿಸುವ ಕಸರಸ್ತು ನಡೆಯುತ್ತಿದ್ದರೆ, ಇತ್ತ ಅನಾರೋಗ್ಯದಿಂದ ಜಯಮೃತ್ಯುಂಜಯ ಶ್ರೀಗಳು (Jaya Mruthyunjaya Swamiji) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪಂಚಮಸಾಲಿ (Panchamasali) ಶ್ರೀಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ಪ್ರಮಾಣ ವಚನ ಸ್ವೀಕಾರ

    ಬಾಗಲಕೋಟೆ ಕರೂಡಿ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಸ್ವಾಮೀಜಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶುಕ್ರವಾರ ರಾತ್ರಿಯಿಂದಲೂ ಶ್ರೀಗಳಿಗೆ ತಲೆನೋವು, ವಾಂತಿ, ಎದೆ ನೋವು ಶುರುವಾಗಿತ್ತು. ಇಂದು ಬೆಳಿಗ್ಗೆ ಎದೆ ನೋವು ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತೀಚಿಗೆ ಕೂಡಲಸಂಗಮ ಪೀಠಕ್ಕೆ ಬೀಗ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣದಿಂದ ಶ್ರೀಗಳು ಬಹಳ ನೊಂದುಕೊಂಡಿದ್ದರು. ಇದರ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇನ್ನೂ ಇದೇ ಪ್ರಕರಣದಲ್ಲಿ ಕೋರ್ಟ್ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.ಇದನ್ನೂ ಓದಿ: ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

  • ಚಿಕ್ಕಮಗಳೂರು | ವಿದ್ಯುತ್ ಶಾಕ್‍ಗೆ ನವವಿವಾಹಿತ ಲೈನ್‍ಮೆನ್ ಬಲಿ

    ಚಿಕ್ಕಮಗಳೂರು | ವಿದ್ಯುತ್ ಶಾಕ್‍ಗೆ ನವವಿವಾಹಿತ ಲೈನ್‍ಮೆನ್ ಬಲಿ

    ಚಿಕ್ಕಮಗಳೂರು: ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಲೈನ್‍ಮೆನ್ ವಿದ್ಯುತ್ ಶಾಕ್‍ನಿಂದ (Electric Shock) ಸಾವನ್ನಪ್ಪಿದ ಘಟನೆ ಎನ್.ಆರ್.ಪುರ (NRPura) ತಾಲೂಕಿನ ಹೊನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಪ್ರವೀಣ್ (26) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆಯ (Bagalkote) ಪ್ರವೀಣ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೆಸ್ಕಾಂ ಕಚೇರಿಯಲ್ಲಿ ಲೈನ್‍ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಇಂದು (ಜು.18) ಹೊನ್ನೆಕೊಪ್ಪ ಗ್ರಾಮದಲ್ಲಿ ಕಂಬ ಹತ್ತಿ ಫ್ಯೂಸ್ ಹಾಕಿ ವಿದ್ಯುತ್ ಲೈನ್ ದುರಸ್ಥಿ ಮಾಡುವ ವೇಳೆ ವಿದ್ಯುತ್ ಶಾಕ್ ನಿಂದ ತೀವ್ರ ಅಸ್ವಸ್ತಗೊಂಡಿದ್ದರು. ಕಂಬದಿಂದ ಬಿದ್ದು ಅಸ್ವಸ್ಥನಾಗಿ ಒದ್ದಾಡುತ್ತಿದ್ದ ಅವರನ್ನು ಸ್ಥಳಿಯರು ಹಾಗೂ ಇತರೇ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

    ಆಸ್ಪತ್ರೆಗೆ ಬರುವ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಂಡಕ್ಟರ್ ಯಡವಟ್ಟು, ಹೋಟೆಲ್‍ಗೆ ನುಗ್ಗಿದ ಬಿಎಂಟಿಸಿ ಬಸ್ – ಐವರಿಗೆ ಗಾಯ

  • ಕೋಲ್ಕತ್ತಾ | ಬಾಯ್ಸ್‌ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್‌ ಕೇಸ್ – ಬಾಗಲಕೋಟೆ ಯುವಕ ಅರೆಸ್ಟ್‌

    ಕೋಲ್ಕತ್ತಾ | ಬಾಯ್ಸ್‌ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್‌ ಕೇಸ್ – ಬಾಗಲಕೋಟೆ ಯುವಕ ಅರೆಸ್ಟ್‌

    ಕೋಲ್ಕತ್ತಾ\ ಬಾಗಲಕೋಟೆ: ಯುವತಿಯನ್ನು ಹಾಸ್ಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ (Bagalkote) ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಲೋಕಾಪುರ ಪಟ್ಟಣದ ನಿವಾಸಿ ಪರಮಾನಂದ ಟೋಪಣ್ಣನವರ್ ಎಂದು ಗುರುತಿಸಲಾಗಿದೆ. ಈತ ಕೊಲ್ಕತ್ತಾದ (Kolkata) ಜೋಕಾದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ಎರಡೇ ವರ್ಷದ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ. ಇದನ್ನೂ ಓದಿ: ಕೋಲ್ಕತ್ತಾ IIM ಬಾಯ್ಸ್ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್

    ಆರೋಪಿಯ ವಿರುದ್ಧ ಯುವತಿ, ಹಾಸ್ಟೆಲ್‌ಗೆ ಕರೆಸಿಕೊಂಡು ಫಿಜ್ಜಾ ತಿನ್ನಿಸಿ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಜು.12 ರಂದು ಆರೋಪಿ ಪರಮಾನಂದನನ್ನ ಪೊಲೀಸರು ಬಂಧಿಸಿದ್ದರು. ಇದರ ನಡುವೆ ಅತ್ಯಾಚಾರ ಆರೋಪವನ್ನು ಯುವತಿ ಕುಟುಂಬಸ್ಥರು ತಳ್ಳಿಹಾಕಿದ್ದರು.

    ಪರಮಾನಂದ ಬಂಧನದ ಮಾಹಿತಿಯನ್ನು ಆತನ ಸ್ನೇಹಿತರು ಕುಟುಂಬಸ್ಥರಿಗೆ ನೀಡಿದ್ದು, ಕೊಲ್ಕತ್ತಾಗೆ ಆತನ ಪೋಷಕರು ತೆರಳಿದ್ದಾರೆ.

    ಸಂತ್ರಸ್ತ ಮತ್ತು ಆಕೆಯ ಕುಟುಂಬ ಸದಸ್ಯರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅತ್ಯಾಚಾರದ ತನಿಖೆಗಾಗಿ ಕೋಲ್ಕತ್ತಾ ಪೊಲೀಸರು 9 ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದಾರೆ. ಶಿಕ್ಷಣ ಸಂಸ್ಥೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೊಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾದ ಕಾರು – 7 ಮಂದಿ ದುರ್ಮರಣ

  • ನೀವೆಲ್ಲ ಮಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ, ಇಲ್ದಿದ್ರೆ ಭಕ್ತರ ಮನೆಯಲ್ಲೇ ಇರುತ್ತೇನೆ: ಭಾವುಕರಾದ ಜಯ ಮೃತ್ಯುಂಜಯ ಶ್ರೀ‌

    ನೀವೆಲ್ಲ ಮಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ, ಇಲ್ದಿದ್ರೆ ಭಕ್ತರ ಮನೆಯಲ್ಲೇ ಇರುತ್ತೇನೆ: ಭಾವುಕರಾದ ಜಯ ಮೃತ್ಯುಂಜಯ ಶ್ರೀ‌

    ಬಾಗಲಕೋಟೆ: ಮಠಕ್ಕೆ ಬೀಗ ಹಾಕಲಾಗಿದೆ, ನೀವೆಲ್ಲ ಮುಖಂಡರು ಸೇರಿ ಪೀಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ. ಇಲ್ಲದಿದ್ರೆ ಹುನಗುಂದ (Hanagunda) ಪಟ್ಟಣದಲ್ಲಿರುವ ಯಾವುದಾದ್ರೂ ಭಕ್ತರ ಮನೆಯಲ್ಲೇ ಇರುತ್ತೇನೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji) ಭಾವುಕರಾಗಿ ನುಡಿದಿದ್ದಾರೆ.

    ಪೀಠಕ್ಕೆ ಬೀಗ ಹಾಕಿದ ವಿಚಾರ ವಿವಾದವಾಗುತ್ತಿದ್ದಂತೆ ಸ್ವಾಮೀಜಿ ಹುನಗುಂದ ಪಟ್ಟಣದ ಬಸವ ಮಂಟಪದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಸಭೆಯಲ್ಲಿ ಬೆಂಬಲಿಗರು ಹೇಳಿದಂತೆ ಮುನ್ನಡೆಯುವ ನಿರ್ಧಾರ ಕೈಗೊಂಡರು. ಸಭೆಯಲ್ಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರದ ಬಗ್ಗೆ ಸ್ವಾಮೀಜಿ ಮಾತನಾಡುತ್ತ ಭಾವುಕರಾದ್ರು. ನಂತರ ಸಮಾಜದ ಮುಖಂಡರ ನಿರ್ಧಾರದಂತೆ ನಾನು ಮುನ್ನೆಡೆಯುತ್ತೇನೆ ಎಂದರು.

    ಪಂಚಮಸಾಲಿ ಪೀಠಕ್ಕೆ ಬೀಗ ಜಡಿದ ವಿಚಾರ ರಾಜ್ಯವ್ಯಾಪಿ ವಿವಾದವಾಗುತ್ತಿದ್ದಂತೆ ಪಂಚಮಸಾಲಿ ಸಮುದಾಯದ ನಾಯಕರಾದ ಮಾಜಿ ಸಚಿವ ಸಿ.ಸಿ.ಪಾಟೀಲ್ ಮತ್ತು ಅರವಿಂದ ಬೆಲ್ಲದ್ ಸೇರಿದಂತೆ ಅನೇಕರು ಶಾಸಕ ಕಾಶಪ್ಪನವರ (Vijayanand Kashappanavar) ನಡೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

    ಏನಿದು ವಿವಾದ?
    ಹುನಗುಂದ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟದಿಂದ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮ ಪಂಚಮಸಾಲಿ ಗುರು ಪೀಠಕ್ಕೆ ಬೀಗ ಜಡಿಯಲಾಗಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಒಡಕು ಮೂಡ್ತಿದ್ದಂತೆ, ಶಾಸಕ ಕಾಶಪ್ಪನವರ ಹಾಗೂ ಸ್ವಾಮೀಜಿ ಸಂಬಂಧಲ್ಲಿ ಬಿರುಕು ಮೂಡಿತ್ತು. ಶಾಸಕ ಕಾಶಪ್ಪನವರ್ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್‌ನ ಅಧ್ಯಕ್ಷರಾದ ನಂತರ ಸ್ವಾಮೀಜಿ ಗುರುಪೀಠಕ್ಕೆ ಬರುವುದು ಅಪರೂಪವಾಗಿತ್ತು.

    ಪೀಠದ ಆವರಣದಲ್ಲಿ ರಾತ್ರಿ ಸಮಯದಲ್ಲಿ ಬೇರೆ ರೀತಿಯ ಚಟುವಟಿಕಗಳು ನಡೆಯುತ್ತಿವೆ ಎಂಬ ಆರೋಪದ ಮೇಲೆ ಕಾಶಪ್ಪನವರ ಅಣತಿಯಂತೆ ಪೀಠಕ್ಕೆ ಬೀಗ ಜಡಿಯಲಾಗಿತ್ತು. ಬೀಗ ಜಡಿದ ನಂತರ ಸ್ವಾಮೀಜಿಯವರ ಕೆಲ ಬೆಂಬಲಿಗರು ಪೀಠದ ಬೀಗ ಮುರಿದಿದ್ದಾರೆ ಎಂದು ಕಾಶಪ್ಪನವರ ಬೆಂಬಲಿಗ ಚಂದ್ರಶೇಖರ ಚಿತ್ತರಗಿ ಅವರು ಹುನಗುಂದ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ.

    ಮಲ್ಲನಗೌಡ ಪಾಟೀಲ್, ಬಾಬುಗೌಡ ಪಾಟೀಲ್, ಚಂದ್ರಶೇಖರ ದೇವಲಾಪುರ ಸೇರಿದಂತೆ 7 ಮಂದಿ ಪೀಠದ ಕೀ ನೀಡುವಂತೆ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಕ್ರಮವಾಗಿ ಕೀ ಮುರಿದು ಒಳಗಡೆ ಹೋಗಿ, ಮುಖ್ಯ ಗೇಟ್, ಮಠದ ಮರದ ಬಾಗಿಲು ಒಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಈಗ ಬೀಗ ಜಡಿದ ಪೀಠದ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.

    ಕಳೆದ ಕೆಲವು ದಿನಗಳ ಹಿಂದೆ ಹೊಸ ಪೀಠದ ಚರ್ಚೆ ಶುರುವಾಗಿತ್ತು. ಇನ್ನೊಂದೆಡೆ ವಿಜಯಾನಂದ ಕಾಶಪ್ಪನವರ್‌ ಅವರು ಪ್ರಸಂಗ ಬಂದರೆ ಪೀಠಾಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಎಂದಿದ್ದರು. ಮತ್ತೊಂದೆಡೆ ಮಾಜಿ ಸಚಿವ ಸಿ.ಸಿ ಪಾಟೀಲ್ ಅವರು ಗದಗ ಜಿಲ್ಲೆಯ ಮಲಪ್ರಭಾ ತೀರದಲ್ಲಿ ಹೊಸ ಪಂಚಮಸಾಲಿ ಪೀಠ ಕಟ್ಟಿಸಿಕೊಡುತ್ತೇವೆ ಎಂದು ಗುಡುಗಿದ್ದರು.

  • ಬಾಗಲಕೋಟೆ| ಅನುಮತಿ ಇಲ್ಲದೇ ಅನಧಿಕೃತ ಮಸೀದಿ ನಿರ್ಮಾಣ – ಬಿಜೆಪಿ, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    ಬಾಗಲಕೋಟೆ| ಅನುಮತಿ ಇಲ್ಲದೇ ಅನಧಿಕೃತ ಮಸೀದಿ ನಿರ್ಮಾಣ – ಬಿಜೆಪಿ, ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

    – ಹಿಂದೂ ಮಂದಿರ ನಿರ್ಮಾಣಕ್ಕೆ ಷರತ್ತು ಹಾಕಿ ತಡೆಯುತ್ತಾರೆ
    – ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ ಎಂದ ನಗರಸಭೆ

    ಬಾಗಲಕೋಟೆ: ಅನುಮತಿ ಇಲ್ಲದೇ ವಾರ್ಡ್‌ ನಂ.1 ರಲ್ಲಿ ಮಸೀದಿ (Mosque) ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ (BJP) ಕಾರ್ಯಕರ್ತರು ನಗರ ಸಭೆ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

    ಈ ಮಸೀದಿ ನಿರ್ಮಾಣಕ್ಕೆ ನಗರ ಸಭೆಯಿಂದ (Bagalkote City Municipal Council) ಯಾವುದೇ ಅನುಮತಿ ಪಡೆದಿಲ್ಲ. ನಿರ್ಮಾಣ ಕಾಮಗಾರಿ ವಿರುದ್ಧ ನಗರಸಭೆ ಆಯುಕ್ತರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

    ಪೊಲೀಸರು (Police) ಹಿಂದೂ ಮಂದಿರಗಳ ನಿರ್ಮಾಣದ ವೇಳೆ ಹತ್ತಾರು ಷರತ್ತು ಹಾಕಿ ತಡೆಯುತ್ತಾರೆ. ಆದರೆ ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ನಗರದಲ್ಲಿನ ಅನಧಿಕೃತ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದು. ಕೂಡಲೇ ಆಯುಕ್ತರು ತಡೆಯದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಎಚ್ಚರಿಕೆ ನೀಡಿದ್ದಾರೆ ಇದನ್ನೂ ಓದಿ: ಮತಾಂತರ ಮಾಸ್ಟರ್‌ಮೈಂಡ್ಛಂಗುರ್ ಬಾಬಾನ 5 ಕೋಟಿ ಮೌಲ್ಯದ ಮನೆ ಉಡೀಸ್ ಬುಲ್ಡೋಜರ್‌ನಿಂದ ನೆಲಸಮ

    ಹಳೆ ಬಾಗಲಕೋಟೆ ಹಾಗೂ ನವನಗರ ಎರಡು ಕಡೆ 20 ಕ್ಕೂ ಅಧಿಕ ಮಸೀದಿಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂಬುದು ಇವರ ಆರೋಪ. ಖಾಸಗಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಮಾಡಬೇಕಾದರೂ ಅನುಮತಿ ಕಡ್ಡಾಯ. ಆದರೆ ಇಲ್ಲಿ ಮಸೀದಿ ಕಟ್ಟುತ್ತಿದ್ದರೂ ಅದಕ್ಕೆ ಅನುಮತಿ ಪಡೆಯುತ್ತಿಲ್ಲ. ಇನ್ನೊಂದು ಕಡೆ ಇದೆಲ್ಲ ಗೊತ್ತಿದ್ದರೂ ನಗರಸಭೆ ಆಯುಕ್ತರು, ಸಿಬ್ಬಂದಿ ಕಂಡು ಕಾಣದಂತಿರುತ್ತಾರೆ ಎಂದು ದೂರಿದ್ದಾರೆ.

    ಮಸೀದಿಗಳ ನಿರ್ಮಾಣದ ಬಗ್ಗೆ ನಗರಸಭೆ ಬಿಜೆಪಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಅನಧಿಕೃತ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬೇಡಿ ಎಂದು ಆಯುಕ್ತರಿಗೆ ತಿಳಿಸಿದ್ದಾರೆ. ಆದರೂ ಆಯುಕ್ತರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.  ಇದನ್ನೂ ಓದಿ: ಭಾರತದ ಹಾನಿಯ ಒಂದೇ ಒಂದು ಫೋಟೋ ತೋರಿಸಿ ವಿದೇಶಿ ಮಾಧ್ಯಮಗಳ ವಿರುದ್ಧ ದೋವಲ್ಕೆಂಡಾಮಂಡಲ

    ನಗರಸಭೆ ಆಯುಕ್ತ ವಾಸಣ್ಣ ಅವರನ್ನು ಕೇಳಿದಾಗ, ನಾವು ಈ ಬಗ್ಗೆ ಯಾವುದೇ ಅನುಮತಿ ಕೊಟ್ಟಿಲ್ಲ. ಅವರು ಅನುಮತಿ ಕೇಳಿದರೂ ಅನುಮತಿ ಕೊಟ್ಟಿಲ್ಲ. ಆದರೂ ನಗರಸಭೆ ರಜಾ ದಿನದಲ್ಲಿ ಇಂತಹ ಕೃತ್ಯ ಮಾಡಿದ್ದಾರೆ. ಈ ಬಗ್ಗೆ ನೋಟಿಸ್‌ ಕೊಟ್ಟಿದ್ದೇವೆ. ಈಗಲೂ ನಾವು ನಮ್ಮ ಎಂಜಿನಿಯರ್‌ ಮೂಲಕ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಅನಧಿಕೃತ ಮಸೀದಿ ನಿರ್ಮಾಣ ಕಾರ್ಯ ಹೀಗೆ ಬಿಟ್ಟರೆ ಮುಂದೆ ಮತ್ತಷ್ಟು ಗಲಾಟೆ ನಡೆಯುವ ಸಾಧ್ಯತೆ ಇದೆ. ಆದಷ್ಟು ಬೇಗ ನಗರಸಭೆ ಅಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಂಡು ವಿವಾದವಾಗದಂತೆ ತಡೆಯಬೇಕಿದೆ.

     

  • 10 ಗಂಟೆಗಳಲ್ಲಿ ಜೋಡೆತ್ತುಗಳಿಂದ ಬರೋಬ್ಬರಿ 20 ಎಕ್ರೆ ಈರುಳ್ಳಿ ಬಿತ್ತನೆ – ಬಾಗಲಕೋಟೆ ರೈತನ ಸಾಧನೆ

    10 ಗಂಟೆಗಳಲ್ಲಿ ಜೋಡೆತ್ತುಗಳಿಂದ ಬರೋಬ್ಬರಿ 20 ಎಕ್ರೆ ಈರುಳ್ಳಿ ಬಿತ್ತನೆ – ಬಾಗಲಕೋಟೆ ರೈತನ ಸಾಧನೆ

    ಬಾಗಲಕೋಟೆ: ಬೆನಕಟ್ಟಿ ಗ್ರಾಮದಲ್ಲಿ ಜೋಡೆತ್ತುಗಳೆರಡು 10 ಗಂಟೆಗಳಲ್ಲಿ ಬರೋಬ್ಬರಿ 20 ಎಕರೆ ಈರುಳ್ಳಿ (Onion) ಬಿತ್ತನೆ‌ ಮಾಡಿ ವಿಶಿಷ್ಟ ಸಾಧನೆ‌ ಮಾಡಿವೆ.

    ಅಶೋಕ್ ಮೆಳ್ಳಿ ಅವರು ಒಂದೇ ದಿನದಲ್ಲಿ 20 ಎಕ್ರೆ ಬಿತ್ತನೆ ಮಾಡುವ ಗುರಿ ಹೊಂದಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ 7 ಗಂಟೆಗೆ ತಮ್ಮ ಎತ್ತುಗಳಿಂದ ಬೆನಕಟ್ಟಿ ಗ್ರಾಮದ ಹೊರವಲಯದಲ್ಲಿರುವ 20 ಎಕ್ರೆ ಹೊಲದಲ್ಲಿ ಸಂಪೂರ್ಣವಾಗಿ ಈರುಳ್ಳಿ ಬಿತ್ತನೆ‌ ಮಾಡಿ ಸಾಹಸ ಮರೆದಿದ್ದಾರೆ. ಅಶೋಕ್ ಮೆಳ್ಳಿ ಅವರ ಈ ಸಾಧನೆಗೆ ಗ್ರಾಮದ ರೈತ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

    ಕಿಲಾರಿ ತಳಿಯ (Khillari Cattle) ಈ ಎತ್ತುಗಳ ನಡಿಗೆಯಲ್ಲಿನ ವೇಗ, ಬಿತ್ತನೆ ಜಾಣ್ಮೆಯನ್ನು ನೋಡಿ 3 ತಿಂಗಳ ಹಿಂದೆ ಸಂಗಾಪುರ ಗ್ರಾಮದಿಂದ 2.20 ಲಕ್ಷ ರೂ. ನೀಡಿ‌ ಖರೀದಿಸಿದ್ದರು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಬಿತ್ತನೆ ಆರಂಭಿಸಿದ್ದರು. ಆದರೆ ಮಧ್ಯಾಹ್ನ 1 ಗಂಟೆಗೆ ಮಳೆ ಬಂದ ಕಾರಣ ಮತ್ತೆ ಬಿಡುವು ಮಾಡಿಕೊಂಡು 3 ಗಂಟೆಗೆ ಬಿತ್ತನೆ ಆರಂಭಿಸಿ ಸಾಯಂಕಾಲ 7 ಗಂಟೆಯ ಹೊತ್ತಿಗೆ ಇಡೀ 20 ಎಕ್ರೆ ಹೊಲದಲ್ಲಿ ಈರುಳ್ಳಿ ಬಿತ್ತನೆ ಮಾಡಿ ವಿಶಿಷ್ಟ ಸಾಹಸ ಮೆರೆದಿದ್ದಾರೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

    ಅಶೋಕ್ ಮೆಳ್ಳಿ ಈ ಹಿಂದೆ ಎತ್ತುಗಳಿಗೆ ಜತ್ತಿಗೆ (ಕೊರಳು ಕುಣಿಕೆ) ಕಟ್ಟದೇ 20 ಎಕರೆ ಬಿತ್ತನೆ‌ ಮಾಡಿದ್ದರು. ಈಗ ಮತ್ತೆ ತಮ್ಮ ಹೊಸದಾಗಿ ಖರೀದಿಸಿದ ಎತ್ತುಗಳಿಂದ ಈರುಳ್ಳಿ ಬಿತ್ತನೆ‌ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ರೈತ ಅಶೋಕ್ ಅವರು ಭವಿಷ್ಯದಲ್ಲಿ 30 ರಿಂದ 36 ಎಕ್ರೆ ವಿಸ್ತೀರ್ಣದ ಹೊಲದಲ್ಲಿ ಜೋಳ ಆಥವಾ ಕಡಲೆ ಬಿತ್ತನೆ ಮಾಡುವ ಕನಸು ಕಂಡಿದ್ದಾರೆ.

  • ಪ್ಯಾಸೆಂಜರ್‌ ಟ್ರೈನ್‌ ಡಿಕ್ಕಿ – 6 ದನಗಳ ದೇಹ ಛಿದ್ರ ಛಿದ್ರ

    ಪ್ಯಾಸೆಂಜರ್‌ ಟ್ರೈನ್‌ ಡಿಕ್ಕಿ – 6 ದನಗಳ ದೇಹ ಛಿದ್ರ ಛಿದ್ರ

    ಬಾಗಲಕೋಟೆ: ರೈಲಿಗೆ ಸಿಲುಕಿ 6 ದನಗಳು (Cow) ಮೃತಪಟ್ಟ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಕಡ್ಡಿಮಟ್ಟಿ ರೈಲ್ವೇ ನಿಲ್ದಾಣದ ಸಮೀಪ ಗುಡ್ಡದ ತಿರುವಿನಲ್ಲಿ ನಡೆದಿದೆ.

    ರೈಲು ಹಳಿಯ ಮೇಲೆ ಆರು ದನಗಳು ತೆರಳುತ್ತಿದ್ದವು. ಈ ವೇಳೆ ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ರಯಾಣಿಕ ರೈಲು (Passenger Train) ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಡಿಕ್ಕಿಯ ರಭಸಕ್ಕೆ 6 ದನಗಳ ದೇಹಗಳು ಛಿದ್ರಛಿದ್ರವಾಗಿ ಹಳಿಯಲ್ಲಿ ಬಿದ್ದಿದೆ. ಬಾಗಲಕೋಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

  • ಡ್ಯೂಟಿಗೆ ಚಕ್ಕರ್ ಪಗಾರ್‌ಗೆ ಹಾಜರ್ – ಹಾಸ್ಟೆಲಿಗೆ ಬರುತ್ತಿಲ್ಲ ವಾರ್ಡನ್‌, ಮುಖ್ಯ ಅಡುಗೆ ಸಹಾಯಕ!

    ಡ್ಯೂಟಿಗೆ ಚಕ್ಕರ್ ಪಗಾರ್‌ಗೆ ಹಾಜರ್ – ಹಾಸ್ಟೆಲಿಗೆ ಬರುತ್ತಿಲ್ಲ ವಾರ್ಡನ್‌, ಮುಖ್ಯ ಅಡುಗೆ ಸಹಾಯಕ!

    – ಬೀಳಗಿ ಅಂಬೇಡ್ಕರ್‌ ಹಾಸ್ಟೆಲಿನಲ್ಲಿ ಅವ್ಯವಸ್ಥೆ
    – ‌ವಿದ್ಯಾರ್ಥಿಗಳು ದೂರು ನೀಡಿದ್ರೂ ಕ್ಯಾರೇ ಅನ್ನದ ಸಮಾಜ ಕಲ್ಯಾಣ ಇಲಾಖೆ

    ಬಾಗಲಕೋಟೆ: ವಾರ್ಡನ್‌ ಆದವರು ಹಾಸ್ಟೆಲ್‌ನಲ್ಲಿರಬೇಕು. ವಿದ್ಯಾರ್ಥಿಗಳ ಕಷ್ಟಗಳಿಗೆ ನೆರವಾಗಬೇಕು. ಹಾಸ್ಟೆಲ್‌ನಲ್ಲಿರುವ (Hostel) ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ವೋ ಎಂಬುದನ್ನು ಪರಿಶೀಲಿಸಬೇಕು. ಆದರೆ ಬೀಳಗಿ ತಾಲೂಕಿನ ಕೋಲೂರ ಪುನರ್ ವಸತಿ ಕೇಂದ್ರದ ಬಿ ಆರ್ ಅಂಬೇಡ್ಕರ್ ಹಾಸ್ಟೆಲಿನಲ್ಲಿರುವ (BR Ambedkar Hostel) ವಾರ್ಡನ್‌ (Warden) ಡ್ಯೂಟಿಗೆ ಚಕ್ಕರ್ ಪಗರ್‌ಗೆ ಹಾಜರ್ ಎನ್ನುವ ಹಾಗೆ ಕೆಲಸ ಮಾಡುತ್ತಿದ್ದಾರೆ.

    ವಸತಿ ನಿಲಯದಲ್ಲಿ 6 ರಿಂದ 10ನೇ ತರಗತಿಯ 40ಕ್ಕೆ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಪ್ರತಿ ನಿತ್ಯ ಹಾಸ್ಟೆಲ್ ಬಾರದೇ ವಾರ್ಡನ್‌ ಮತ್ತು ಮುಖ್ಯ ಅಡುಗೆ ಸಹಾಯಕ ವಾರಕ್ಕೆ ಒಂದು, ಎರಡು ಬಾರಿ ಬಂದು ಸಹಿ ಮಾಡಿ ಹೋಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ಕೋಲೂರ ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಇತರೇ ಪಾಲಕರು ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಆವ್ಯವಸ್ಥೆ ಕಂಡು ಶಾಕ್ ಆಗಿದ್ದಾರೆ. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ಹಾಸ್ಟೆಲಿನಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಿದೆ. ಸ್ನಾನ ಮಾಡುವ ಸ್ನಾನ ಗೃಹ, ಶೌಚಾಲಯಗಳು ಸ್ವಚ್ಛವಿಲ್ಲದೇ ವಾಸನೆ ಹೊಡೆಯುತ್ತಿದೆ. ಕಳಪೆ ಗುಣಮಟ್ಟದ ಆಹಾರ ಪದಾರ್ಥ ವಿತರಣೆ ಆಗುತ್ತಿದ್ದು, ಫ್ಯಾನ್‌ಗಳು ಕೆಟ್ಟು ನಿಂತಿವೆ. ವಿದ್ಯುತ್‌ ಹೋದ ಸಂದರ್ಭದಲ್ಲಿ ಆನ್ ಆಗಬೇಕಾದ ಯುಪಿಎಸ್‌ಸಿ ಹಾಳಾಗಿದೆ. ಹಾಸ್ಟೆಲ್ ಸುತ್ತಮುತ್ತ ಕಸ, ಮುಳ್ಳು ಕೊಂಪೆ ಬೆಳೆದಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.

    ಮಕ್ಕಳ ಕಲಿಕೆಗೆ ಯಾವುದೇ ರೀತಿಯಲ್ಲಿ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ವಸತಿ ನಿಲಯಕ್ಕೆ ವಾರ್ಡನ್‌ಗಳನ್ನು ನೇಮಕ ಮಾಡುತ್ತದೆ. ಆದರೆ ಈ ವಾರ್ಡನ್, ಅಡುಗೆ ಸಹಾಯಕರು ತಮಗೆ ತಿಳಿದಾಗ ಬಂದು ಸಹಿ ಮಾಡಿ ಹೋಗುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ಪಾಂಡು ಆರೋಪಿಸಿದ್ದಾರೆ. ಇದನ್ನೂ ಓದಿ: ಪತಿಯಿಂದ ದೂರವಿದ್ದ ತಾಯಿ, ಮಗಳು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು

    ವಿದ್ಯಾರ್ಥಿಗಳು ಹಲವು ಬಾರಿ ವಸತಿ ನಿಲಯದ ಸಮಸ್ಯೆಗಳು ಮತ್ತು ಅನಾನುಕೂಲತೆಗಳ ಬಗ್ಗೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಗಡ್ಡದೇವರಮಠ ಅವರಿಗೆ ತಿಳಿಸಿದ್ದರೂ ವಾರ್ಡನ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನಹರಿಸಿ ವಸತಿ ನಿಲಯ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸ್ಥಳೀಯರು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

  • ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಿಗ್ಗೆ ʻಲೋಕಾʼ ರೇಡ್

    ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಿಗ್ಗೆ ʻಲೋಕಾʼ ರೇಡ್

    ಬಾಗಲಕೋಟೆ/ಗದಗ: ಇಂದು ಬೆಳಿಗ್ಗೆ ಬಾಗಲಕೋಟೆ (Bagalkote) ಹಾಗೂ ಗದಗ (Gadag) ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು (Lokayuktha Officers) ದಾಳಿ ನಡೆಸಿದ್ದಾರೆ.

    ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನೆಯ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ್ ವಸಂದ್‌ ಅವರ ನಿವಾಸದ ಮೇಲೆ ದಾಳಿ ನಡೆದಿದೆ. ಜಮಖಂಡಿ ಹಾಗೂ ಖಜ್ಜಿಡೋಣಿ ಗ್ರಾಮದಲ್ಲಿರುವ ಅಶೋಕ್ ಅವರ ಎರಡು ನಿವಾಸದ ಮೇಲೆಯೂ ಲೋಕಾ ದಾಳಿ ನಡೆಸಿ, ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್‌

    ಗದಗ ನಗರ ಠಾಣಾ ಸಿಪಿಐ ಆಗಿರುವ ಡಿ.ಬಿ.ಪಾಟೀಲ್ ಅವರ ಮನೆಯ ಗದಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ. ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಹಿನ್ನೆಲೆ ದಾಳಿ ಮಾಡಲಾಗಿದೆ. ಡಿ.ಬಿ ಪಾಟೀಲ್‌ಗೆ ಸಂಬಂಧಿಸಿದ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಶಿವಾನಂದ ನಗರದ ಬಾಡಿಗೆ ಮನೆ, ಶಹರ ಪೊಲೀಸ್ ಠಾಣೆ ಕಚೇರಿ, ಬಾಗಲಕೋಟೆ, ಜಮಖಂಡಿ, ಕೆರೂರು ಮನೆಗಳ ಮೇಲೂ ದಾಳಿ ಮಾಡಲಾಗಿದೆ.

    ಇಂಚಿಂಚು ಪರಿಶೀಲನೆ ನಡೆಸಿದ ಅಧಿಕಾರಿಗಳು, ಶೌಚಾಲಯದೊಳಗೆ ಕುಳಿತಿದ್ದ ಸಿಪಿಐ ಮೊಬೈಲ್‌ನಲ್ಲಿ ಯಾರ ಜೊತೆಯಾದರೂ ಕದ್ದು ಮಾತಾಡುತ್ತಿದ್ದಾನಾ ಎಂದು ಬಾಗಿಲಿಗೆ ಕಿವಿಗೊಟ್ಟು ಕೇಳಿಸಿಕೊಂಡಿದ್ದಾರೆ. ಬಾಗಿಲು ತಟ್ಟಿ ಹೊರಗೆ ಬರುವಂತೆ ಸೂಚಿಸಿದ್ದ ಅಧಿಕಾರಿಗಳ ನಡೆಯನ್ನು ಕಂಡು ಡಿ.ಬಿ ಪಾಟೀಲ್ ಬೆಚ್ಚಿ ಬಿದ್ದಿದ್ದಾರೆ.

    ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ.ಎಸ್ ಪಾಟೀಲ, ಸಿಪಿಐ ಪರಶುರಾಮ್ ಕವಟಗಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾಳಿ ವೇಳೆ ಅನೇಕ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ, ಬೆಳ್ಳಿ, ಚಿನ್ನಾಭರಣಗಳ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ