Tag: bagalkote

  • ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

    ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ

    ಬಾಗಲಕೋಟೆ: ರಂಭಾಪುರಿ ಶ್ರೀಗಳ (Rambhapuri Shree) ಕಾರಿಗೆ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯ ಕಲಾದಗಿಯಲ್ಲಿ (Kaladgi) ನಡೆದಿದೆ.

    ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ರಂಭಾಪುರಿ ಶ್ರೀ ವಿರುದ್ಧ ಜನರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಂಭಾಪುರಿ ಶ್ರೀಗಳು ತೆರಳುವ ವಾಹನವನ್ನು ಅಡ್ಡಗಟ್ಟಲು ಪ್ರಯತ್ನ ನಡೆದಿದೆ. ಚಪ್ಪಲಿ ಎಸೆತದ ಬಳಿಕ ತಳ್ಳಾಟ, ನೂಕಾಟ ನಡೆದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.  ಇದನ್ನೂ ಓದಿ: 112 ರನ್‌ಗಳಿಗೆ 8 ವಿಕೆಟ್‌ ಉಡೀಸ್‌; ಸಿರಾಜ್‌ ಮಿಂಚಿನ ದಾಳಿಗೆ ಆಂಗ್ಲ ಪಡೆ ಕಂಗಾಲು, ಭಾರತಕ್ಕೆ ಮುನ್ನಡೆ

    ಏನಿದು ಗಲಾಟೆ?
    ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್​.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು. ಇದನ್ನೂ ಓದಿ: 284 ಕೇಸ್, 1.40 ಲಕ್ಷ ರೂ. ಫೈನ್ – ಪೊಲೀಸರ ಬಲೆಗೆ ಬಿದ್ದ ಯುವಕ

    ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ನಂತರ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ.

     

    ಇಂದು ಗಂಗಾಧರ ಸ್ವಾಮೀಜಿ ಮಠದ ಹೊಲದ ಉಳುಮೆಗೆ ಮುಂದಾದಾಗ ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಮಠದ ಒಟ್ಟು 72 ಎಕ್ರೆ ಭೂಮಿಯನ್ನು ರಂಭಾಪುರಿ ಶ್ರೀ ಮತ್ತು ಗಂಗಾಧರ ಸ್ವಾಮೀಜಿ ಲಪಟಾಯಿಸಲು ಮುಂದಾಗಿದ್ದಾರೆ ಎನ್ನುವುದು ಭಕ್ತರ ಆರೋಪ.

    ವಿವಾದ ಕೋರ್ಟ್‌ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಲಾಟೆ ನಡೆಯುತ್ತಿರುವಾಗಲೇ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಈ ವೇಳೆ ರಂಭಾಪುರಿ ಶ್ರೀಗಳು ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ.

     

  • ಅಪ್ಪನ ಕೊಲೆಗೆ 3 ಲಕ್ಷ ಸುಪಾರಿ ಕೊಟ್ಟ ಮಗ!

    ಅಪ್ಪನ ಕೊಲೆಗೆ 3 ಲಕ್ಷ ಸುಪಾರಿ ಕೊಟ್ಟ ಮಗ!

    ಬಾಗಲಕೋಟೆ: ಅಪ್ಪನ ಕೊಲೆ ಮಾಡಲು ಮಗನೇ ಮೂರು ಲಕ್ಷ ಸುಪಾರಿ ಕೊಟ್ಟ ಪ್ರಕರಣವೊಂದು ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಚೆನ್ನಪ್ಪ (66) ಕೊಲೆಯಾದ ತಂದೆ. ವಿಕಲಚೇತನನಾಗಿರುವ ಮಗ ಚೆನ್ನಬಸಪ್ಪ ವಿಜಯಪುರ (Vijayapur) ಜಿಲ್ಲೆ ನಿಡಗುಂದಿ ಮೂಲದ ಮಾಂತೇಶ್‍ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ದುರಂತ – 30 ಲಕ್ಷಕ್ಕೂ ಅಧಿಕ ಮೌಲ್ಯ ವಸ್ತುಗಳು ಬೆಂಕಿಗಾಹುತಿ

    ಆಸ್ತಿಗಾಗಿ ಕೊಲೆ: 32 ಎಕರೆ ಆಸ್ತಿ ಅದರಲ್ಲಿ ವಿಭಾಗ ಮಾಡುವ ವಿಚಾರಕ್ಕೆ ಪದೇ ಪದೇ ಕಲಹ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಅಪ್ಪನನ್ನು ಕೊಲೆ ಮಾಡಲು ಮಗ ಪ್ಲಾನ್ ಮಾಡಿದ್ದಾನೆ. ಅಂತೆಯೇ ಚೆನ್ನಬಸಪ್ಪ, ಸೊಸೆ ಶಿವಬಸವ್ವ ಹಾಗೂ ಮಗನ ಆಪ್ತ ರಮೇಶ್ ಮನಗೂಳಿ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಾರೆ. ಬಳಿಕ ಮಾಂತೇಶ್ ಮರಡಿಮಠ ಎಂಬಾತನಿಗೆ 3 ಲಕ್ಷ ಹಣ ನೀಡಿದ್ದಾರೆ. ಅಂತೆಯೇ ಚೆನ್ನಪ್ಪನನ್ನು ರಾಂಪುರ ಗ್ರಾಮದ ಬಳಿ ಮಚ್ಚಿನಿಂದ ಕೊಚ್ಚಿ ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ.

    ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗ ಚನ್ನಬಸಪ್ಪ, ಸೊಸೆ ಶಿವಬಸವ್ವ, ಸುಪಾರಿ ಪಡೆದು ಕೊಲೆ ಮಾಡಿದ ಮಾಂತೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಮಾತೃ ವಿಯೋಗ

    ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಮಾತೃ ವಿಯೋಗ

    ಬಾಗಲಕೋಟೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ತಾಯಿ ವಿಧಿವಶರಾಗಿದ್ದಾರೆ.

    ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸುಶಿಲಾಬಾಯಿ (78)ಯವರು (Sushila Bai) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

    ಸುಶಿಲಾಬಾಯಿ ಅವರು ಕಳೆದ 10 ದಿನಗಳಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದರು. ಇದೀಗ ಇವರು ಪತಿ‌ ರುದ್ರಪ್ಪ ನಿರಾಣಿ, ಐವರು ಗಂಡುಮಕ್ಕಳು, ಇಬ್ಬರು ಹೆಣ್ಣು‌ಮಕ್ಕಳು, ಐವರು ಸೊಸೆಯಂದಿರು ಹಾಗೂ 14 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹೋದರಿ ನಿಧನ

    ಸುಶಿಲಾಬಾಯಿಯವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಸವಹಂಚಿನಾಳ ಗ್ರಾಮದಲ್ಲಿ‌ ‌ನೆಲೆಸಿದ್ದರು. ಮಂಗಳವಾರ ಮದ್ಯಾಹ್ನ 1 ಗಂಟೆಗೆ ಸ್ವಗ್ರಾಮ ಬಸವಹಂಚಿನಾಳ‌ದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕೃಷಿಪ್ರಧಾನ ಕುಟುಂಬದ ನಿರಾಣಿ ಪರಿವಾರದ ಮನೆಯೊಡತಿಯಾಗಿದ್ದ ಸುಶಿಲಾಬಾಯಿ ಅವರ ಅಗಲಿಕೆಯಿಂದ ನಿರಾಣಿ ಅವರ ಅಪಾರ ಬಂಧು ಬಳಗ ದುಃಖದಲ್ಲಿ‌ ಮುಳುಗಿದೆ.

  • 28 ಸಾವಿರ ಹಣ ಪಡೆದೂ ಕೆಲಸ ಮಾಡಿಕೊಡದ ಸರ್ವೇಯರ್ – ಮತ್ತೆ ಹಣ ಪಡೆಯುವ ವೇಳೆ ಲೋಕಾ ಬಲೆಗೆ

    28 ಸಾವಿರ ಹಣ ಪಡೆದೂ ಕೆಲಸ ಮಾಡಿಕೊಡದ ಸರ್ವೇಯರ್ – ಮತ್ತೆ ಹಣ ಪಡೆಯುವ ವೇಳೆ ಲೋಕಾ ಬಲೆಗೆ

    ಬಾಗಲಕೋಟೆ: ಕಚೇರಿಯಲ್ಲಿ 15 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಬೀಳಗಿಯ ಸರ್ವೇಯರ್ (Surveyor) ರೆಡ್‍ಹ್ಯಾಂಡ್ ಆಗಿ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಸರ್ವೇಯರ್ ಮಹಾಂತೇಶ್ ಕವಳಿಕಟ್ಟಿ, ಅಣ್ಣೇಶಿ ಲಮಾಣಿ ಎಂಬವರಿಂದ 15 ಸಾವಿರ ರೂ. ಹಣ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುನಗ ಗ್ರಾಮದಲ್ಲಿದ್ದ 8 ಎಕರೆ ಜಮೀನಿನ ಪಿಟಿ ಶೀಟ್ ಮಾಡಿ ಕೊಡಲು ಆತ ಲಂಚ ಕೇಳಿದ್ದ. ಈ ಹಿಂದೆ 28 ಸಾವಿರ ರೂ. ಪಡೆದು ಕೆಲಸ ಮಾಡಿಕೊಟ್ಟಿರಲಿಲ್ಲ. ಅಲ್ಲದೇ 38 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 7 ಕೆಜಿ ಸೋಡಿಯಂ ನೈಟ್ರೇಟ್ ಸೀಜ್ – ಎನ್‍ಐಎಯಿಂದ 8 ಮಂದಿ ಅರೆಸ್ಟ್

    ಇಂದು 15 ಸಾವಿರ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ಮಹಾಂತೇಶ್ ಕವಳಿಕಟ್ಟಿಯನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಲೋಕಾಯುಕ್ತ ಎಸ್‍ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಪುಷ್ಪಲತಾ ನೇತೃತ್ವದಲ್ಲಿ ದಾಳಿ ನಡೆದಿದೆ. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣ – ಶಾಲೆಗೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಆರ್‌.ಅಶೋಕ್‌ ಭೇಟಿ

  • ಬಾಗಲಕೋಟೆಯಲ್ಲಿ 50 ಸಾವಿರ ಮಂದಿಗೆ ಸಿಕ್ಕಿಲ್ಲ ಗೃಹಲಕ್ಷ್ಮಿಯ 2 ಸಾವಿರ ರೂ.!

    ಬಾಗಲಕೋಟೆಯಲ್ಲಿ 50 ಸಾವಿರ ಮಂದಿಗೆ ಸಿಕ್ಕಿಲ್ಲ ಗೃಹಲಕ್ಷ್ಮಿಯ 2 ಸಾವಿರ ರೂ.!

    ಬಾಗಲಕೋಟೆ: ಕಾಂಗ್ರೆಸ್‍ನ (Congress) ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಪ್ರಮುಖವಾದದ್ದಾಗಿದೆ. ಮನೆಯೊಡತಿಗೆ ಎರಡು ಸಾವಿರ ನೀಡುವ ಯೋಜನೆ ಇದಾಗಿದ್ದು, ಇದರಿಂದ ಮಹಿಳಾಮಣಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಇನ್ನೊಂದು ಕಡೆ ಅದೆಷ್ಟೋ ಮಹಿಳೆಯರು ಹಣ ಬಾರದೇ ಇಂದಿಗೂ ಅಲೆದಾಡುತ್ತಿದ್ದಾರೆ. ಅದೊಂದು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಇಂದಿಗೂ 50 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸಿಕ್ಕಿಲ್ಲ.

    ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಕೆಲವರಿಗೆ ಸಿಕ್ಕಿದ್ದರೆ, ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ 2000 ರೂಪಾಯಿ ಹಣ ಇನ್ನೂ ದಕ್ಕಿಲ್ಲ. ಆಧಾರ್ ಸರಿಯಿಲ್ಲ, ಕೆವೈಸಿ, ರೇಷನ್ ಕಾರ್ಡ್ ತಿದ್ದುಪಡಿಗಾಗಿ ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ಒನ್ ಕೇಂದ್ರಗಳಿಗೆ ಯಜಮಾನಿಯರು ನಿತ್ಯ ಅಲೆದಾಡುವಂತಾಗಿದೆ. ಅಧಿಕಾರಿಗಳಿಗೆ ಕೇಳಿದ್ರೆ ತಾಂತ್ರಿಕ ಸಮಸ್ಯೆ ಅಂತಿದ್ದಾರೆ ಅಂತ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ ಒಟ್ಟು 4 ಲಕ್ಷದ 34 ಸಾವಿರ 852 ಫಲಾನುಭವಿಗಳ ಗುರಿ ಹೊಂದಲಾಗಿದೆ. ಇದರಲ್ಲಿ 3 ಲಕ್ಷದ 80 ಸಾವಿರದ 312 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ 3 ಲಕ್ಷದ 18 ಸಾವಿರದ 270 ಜನರಿಗೆ ತಲಾ 2 ಸಾವಿರ ರೂಪಾಯಿ ಬಂದರೆ 43 ಸಾವಿರದ 438 ಮಂದಿಗೆ ಹಣ (Gruhalakshmi Money) ಬಂದಿಲ್ಲ. ಸೆಪ್ಟಂಬರ್ ನಲ್ಲಿ 3 ಲಕ್ಷದ 17 ಸಾವಿರದ 606 ಜನರಿಗೆ ಹಣ ಬಂದರೆ ಅಗಸ್ಟ್ ನಲ್ಲಿ ಬಂದ ಫಲಾನುಭವಿಗಳ ಪೈಕಿ ಸೆಪ್ಟಂಬರ್ ನಲ್ಲಿ 664 ಮಂದಿಗೆ ಹಣ ಸಿಕ್ಕಿಲ್ಲ.

    ಜಿಲ್ಲೆಯಲ್ಲಿ 46,408 ಮಹಿಳೆಯರ ಹೆಸರು ನೊಂದಣಿ ಆಗಿಯೇ ಇಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕೆವೈಸಿ, ರೇಷನ್ ಕಾರ್ಡ್ ತಿದ್ದುಪಡಿ ಸೇರಿದಂತೆ ತಾಂತ್ರಿಕ ಕಾರಣದಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.  ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಕುಡುಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?

    ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ‌ (Gruhalakshmi Scheme) ಕೆಲವರಿಗೆ ಪ್ರಸಾದವಾದರೆ ಕೆಲವರಿಗೆ ಕೈಗೆಟುಕದೆ ನಿರಾಸೆಯಾಗಿದೆ. ಆದಷ್ಟು ಬೇಗ ತಾಂತ್ರಿಕ ಸಮಸ್ಯೆಗಳನ್ನು ಸರಿದೂಗಿಸಿ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕಿದೆ.

  • ಕೇಸ್ ವಿಥ್‌ಡ್ರಾ ಮಾಡಿದ್ದು ನೋಡಿದ್ರೆ ಗೊತ್ತಾಗುತ್ತೆ ಸರ್ಕಾರ ನಡೆಸುತ್ತಿರೋದು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಂತ: ನಿರಾಣಿ

    ಕೇಸ್ ವಿಥ್‌ಡ್ರಾ ಮಾಡಿದ್ದು ನೋಡಿದ್ರೆ ಗೊತ್ತಾಗುತ್ತೆ ಸರ್ಕಾರ ನಡೆಸುತ್ತಿರೋದು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಂತ: ನಿರಾಣಿ

    ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕ್ಯಾಬಿನೆಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕೇಸ್ ವಿಥ್‌ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆ ಶಿವಕುಮಾರ್ ಅಂತ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ‌ (Murugesh Nirani) ಹೇಳಿಕೆ ನೀಡಿದ್ದಾರೆ.

    ಡಿಸಿಎಂ ಡಿಕೆಶಿ ಮೇಲೆ ಸಿಬಿಐ ಕೇಸ್ (CBI Case) ಪ್ರಸ್ತಾವನೆ ವಾಪಸ್ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ನಿರಾಣಿ, ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ಹಿರಿಯರು. ಸಾಕಷ್ಟು ಏಳು ಬೀಳು ನೋಡಿದಂತವರು. ಈಗಾಗಲೇ ಈ ಕೇಸ್ ಕೋರ್ಟ್‌ನಲ್ಲಿ ತನಿಖೆ ಹಂತದಲ್ಲಿರುವಾಗ ಅದನ್ನು ಏಕಾಏಕಿಯಾಗಿ ಹೆದರಿಕೆಯಿಂದ ಸೋಲಾಗುತ್ತದೆ ಎಂಬ ಭಾವನೆಯಿಂದ ಕ್ಯಾಬಿನೆಟ್‌ನಲ್ಲಿ ವಿಥ್ ಡ್ರಾ ಮಾಡಿದ್ದಾರೆ. ಇದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.

    ಸಿದ್ದರಾಮಯ್ಯ ಅವರ ಬಗ್ಗೆ ಕರ್ನಾಟಕದಲ್ಲಿ ಅವರದ್ದೇ ಆದ ಘನತೆ ಗೌರವವಿತ್ತು. ಅವರು ಕಾನೂನಿಗೆ ತಲೆ ಬಾಗುತ್ತಾರೆ. ಕಾನೂನಿಗೆ ಹೆಚ್ಚು ಗೌರವ ಕೊಡುತ್ತಾರೆ ಎಂಬ ಭಾವನೆ ಎಲ್ಲರಲ್ಲಿತ್ತು. ಆದರೆ ಸಿದ್ದರಾಮಯ್ಯ ಅವರು ಕ್ಯಾಬಿನೆಟ್‌ನಲ್ಲಿ ಡಿಕೆ ಶಿವಕುಮಾರ್ ಕೇಸ್ ವಿಥ್‌ಡ್ರಾ ಮಾಡಿದ್ದನ್ನು ನೋಡಿದರೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ ಸರ್ಕಾರ ನಡೆಸುತ್ತಿರೋರು ಸಿದ್ದರಾಮಯ್ಯ ಅಲ್ಲ ಡಿಕೆಶಿ ಎಂದು ಆರೋಪಿಸಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಕಾನೂನು ನೆರವಿಗೆ ಶೀಘ್ರವೇ ಕಾಲ್ ಸೆಂಟರ್ ಪ್ರಾರಂಭ: ವಿಜಯೇಂದ್ರ

    ಈ ಕೇಸಲ್ಲಿ ನಿರಪರಾಧಿ ಎಂಬ ಆತ್ಮವಿಶ್ವಾಸ ಅವರಲ್ಲಿದ್ದರೆ ಅದನ್ನು ವಿಥ್‌ಡ್ರಾ ಮಾಡಲು ಹೋಗುವಂತಹ ಅವಶ್ಯಕತೆ ಇರಲಿಲ್ಲ. ಅವರು ಮಾಡಿರೋದು ತಪ್ಪಿದೆ. ಮುಂದೆ ನಾವು ಬಿಜೆಪಿಯಿಂದ ಬೇರೆ ಬೇರೆ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದೆ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

    ಡಿಕೆಶಿ ಮೇಲೆ ಸಿಬಿಐ ಕೇಸ್ ಪ್ರಸ್ತಾವನೆ ದುರುದ್ದೇಶಪೂರಿತವಾಗಿತ್ತು ಎಂಬ ಸಚಿವ ತಿಮ್ಮಾಪುರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಕ್ಲೀನ್ ಆಗಿದ್ದರೆ ತನಿಖೆ ಮಾಡೋಕೆ ಬಿಡಲಿ. ಅವರದ್ದೇ ಸರ್ಕಾರ ಇದೆ, ತನಿಖಾಧಿಕಾರಿಗಳು ಯಾವುದೇ ಸರ್ಕಾರಕ್ಕೆ ಸೀಮಿತವಾಗಿರುವುದಿಲ್ಲ. ರಾಜ್ಯದ ಅಧಿಕಾರಿಗಳು ಅವರು. ಅವರ ಮೇಲೆ ವಿಶ್ವಾಸವಿದ್ದರೆ, ತನಿಖೆ ಮಾಡೋಕೆ ಬಿಟ್ಟು, ಅಲ್ಲಿ ಕ್ಲೀನ್ ಚಿಟ್ ಆಗಿ ಬಂದಿದ್ದರೆ ಗೌರವ ಇರುತ್ತಿತ್ತು. ಆದರೆ ತನಿಖೆ ಮಾಡೋದಕ್ಕೇನೇ ಬಿಡ್ತಿಲ್ಲ ಎಂದು ನಿರಾಣಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನರೇಗಾ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಗೋಲ್ಮಾಲ್- ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್

  • ಮೇಲಾಧಿಕಾರಿಗಳ ಕಿರುಕುಳ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ  ಬೀಳಗಿಯ ಚಾಲಕ

    ಮೇಲಾಧಿಕಾರಿಗಳ ಕಿರುಕುಳ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೀಳಗಿಯ ಚಾಲಕ

    ಬಾಗಲಕೋಟೆ: ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಚಾಲಕ (Driver) ಕಂ ನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿದ (Suicide Attempt) ಘಟನೆ ನಡೆದಿದೆ.

    ಬೀಳಗಿ ಡೀಪೋದಲ್ಲಿ (Bilagi Depot) ಕೆಲಸ ಮಾಡುತ್ತಿದ್ದ ಮಲ್ಲು ಜ್ಯೋತಿಖಾನ್ (41) ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಅಪಾಯದಿಂದ ಪಾರಾಗಿರುವ ಮಲ್ಲು ಜ್ಯೋತಿಖಾನ್ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

  • ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ- ಸಚಿವರ ಪರ ವಾಲ್ಮೀಕಿ ಶ್ರೀ ಬ್ಯಾಟಿಂಗ್

    ಸತೀಶ್ ಜಾರಕಿಹೊಳಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ- ಸಚಿವರ ಪರ ವಾಲ್ಮೀಕಿ ಶ್ರೀ ಬ್ಯಾಟಿಂಗ್

    ಬಾಗಲಕೋಟೆ: ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿವಾದ ಕಾಂಗ್ರೆಸ್ ನಲ್ಲಿ (Congress) ತಾರಕಕ್ಕೇರಿದೆ. ಸಿಎಂ ಬದಲಾವಣೆ ಅಂತ ಕೆಲವರು ಹೇಳಿದ್ರೆ, ಕೆಲವರು ದಲಿತ ಸಿಎಂ ಅಂತಿದ್ದಾರೆ. ಈ ಮಧ್ಯೆ ದಲಿತ ಸಿಎಂ ಬಗ್ಗೆ ಪ್ರಸ್ತಾಪಿಸುತ್ತಾ ಸತೀಶ್ ಜಾರಕಿಹೊಳಿ (Sathish Jarakiholi) ಪರ ವಾಲ್ಮೀಕಿ ಸ್ವಾಮೀಜಿ ಭರ್ಜರಿ ಬ್ಯಾಟಿಂಗ್ ಬೀಸಿದ್ದಾರೆ. ದಲಿತರು ಸಿಎಂ ಆಗಬಾರದಾ? ಕೇವಲ ವೋಟ್ ಬ್ಯಾಂಕ್ ಆಗಬೇಕಾ ಎಂದು ವಾಲ್ಮೀಕಿ ಸ್ವಾಮೀಜಿ ಗುಡುಗು ಹಾಕುವ ಮೂಲಕ ರಾಜ್ಯ ರಾಜಕೀಯದಲ್ಲಿ ಕಿಚ್ಚೆಬ್ಬಿಸಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಅಸಮಾಧಾನಗಳು ಮೇಲಿಂದ ಮೇಲೆ ಸ್ಫೋಟಿಸುತ್ತಲೇ ಇವೆ. ಸಚಿವ ಸ್ಥಾನ ಆಗಿರಬಹುದು ಡಿಸಿಎಂ ಆಗಿರಬಹುದು ಕೈ ನಾಯರು ಒಂದಿಲ್ಲೊಂದು ಹೇಳಿಕೆ ಕೊಡುತ್ತಲೇ ಇದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಆ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಾಗಲಕೋಟೆಯಲ್ಲಿ (Bagalkote) ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತಾಡಿದ ವಾಲ್ಮೀಕಿ ಪ್ರಸನ್ನಾನಂದ ಶ್ರೀ, ದಲಿತ ಸಿಎಂ ಕೂಗೆಬ್ಬಿಸಿದ್ದಾರೆ. ಸತೀಶ್ ಜಾರಕಿಹೊಳಿಗೆ ನಾಡಿನ ಸಿಎಂ ಆಗಲು ಎಲ್ಲ ಅರ್ಹತೆಗಳಿವೆ. ಅವರ ಬೆನ್ನಿಗೆ ನಾವೆಲ್ಲಾ ನಿಲ್ಲಬೇಕಿದೆ. ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು ಎಂದು ಪ್ರಶ್ನಿಸಿದ್ದಾರೆ.

    ವಾಲ್ಮೀಕಿ ಸಮುದಾಯದ ಸಚಿವ ಕೆ.ಎನ್ ರಾಜಣ್ಣ ಇತ್ತೀಚಿಗೆ ದಲಿತ ಸಿಎಂ ಹೆಸರಲ್ಲಿ ಪರಮೇಶ್ವರ್ ಹೆಸರು ಹೇಳಿದ್ದರು. ವಾಲ್ಮೀಕಿ ಸ್ವಾಮೀಜಿ ಸತೀಶ್ ಪರ ಬ್ಯಾಟ್ ಮಾಡಿದ್ದಾರೆ. ಆದರೆ ಈ ಬಗ್ಗೆ ಜಾಣ ಉತ್ತರ ನೀಡಿ ಸತೀಶ್ ಜಾರಕಿಹೊಳಿ ಜಾರಿಕೊಂಡರು. ಜೊತೆಗೆ ಪರೋಕ್ಷವಾಗಿ ಮನದಲ್ಲಿನ ಸಿಎಂ ಆಗುವ ಬಯಕೆ ಇರುವ ಬಗ್ಗೆಯೂ ಸೂಕ್ಷ್ಮವಾಗಿ ಹೇಳಿದರು. ನಮ್ಮ ಆಶಯ ಇರಬಹುದು ಸಮುದಾಯದ ಆಶಯ ಇರಬಹುದು ಅದು ಬೇರೆ. ಪಕ್ಷ ದೊಡ್ಡದು. ಪಕ್ಷದ ತೀರ್ಮಾನ ಅಂತಿಮ, ಸಮಯ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕಾಗಲ್ಲ ಎಂದರು. ಇದನ್ನೂ ಓದಿ; ಕೊಹ್ಲಿ 49ನೇ ಶತಕವನ್ನು ಚಪ್ಪಾಳೆಯೊಂದಿಗೆ ಸಂಭ್ರಮಿಸಿದ ರೋಹಿತ್‌ ಶರ್ಮಾ ಪತ್ನಿ ರಿತಿಕಾ

    ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರು ಸಚಿವರ ಬಾಯಿಗೆ ಕಾಂಗ್ರೆಸ್ ಹೈಕಮಾಂಡ್ ಬೀಗ ಹಾಕುತ್ತಿದೆ. ಇದೆ ವೇಳೆ ವಾಲ್ಮೀಕಿ ಸ್ವಾಮೀಜಿ ದಲಿತ ಸಿಎಂ ಅಸ್ತ್ರದ ಮೂಲಕ ಜಾರಕಿಹೊಳಿ ಪರ ಬ್ಯಾಟ್ ಮಾಡಿದ್ದು, ಸಿಎಂ ಬದಲಾವಣೆ ಚರ್ಚೆ ಯಾವ ತಿರುವು ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

  • ಸದ್ದಿಲ್ಲದೇ ನಡೆಯುತ್ತಿದೆ ಮಲಪ್ರಭಾ ನದಿ ಪ್ರದೇಶ ಒತ್ತುವರಿ ಕಾರ್ಯ – ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ

    ಸದ್ದಿಲ್ಲದೇ ನಡೆಯುತ್ತಿದೆ ಮಲಪ್ರಭಾ ನದಿ ಪ್ರದೇಶ ಒತ್ತುವರಿ ಕಾರ್ಯ – ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ

    ಬಾಗಲಕೋಟೆ: ಮಲಪ್ರಭಾ ನದಿ (Malaprabha River) ಬೆಳಗಾವಿ (Belagavi) ಜಿಲ್ಲೆಯ ಕಣಕುಂಬಿಯಲ್ಲಿ ಜನ್ಮತಾಳಿ ಬಾಗಲಕೋಟೆ, ಗದಗ ಹೀಗೆ ಮೂರು ಜಿಲ್ಲೆಗಳಲ್ಲಿ ಹರಿಯುತ್ತದೆ. ಮಳೆ ಇಲ್ಲದೆ, ನದಿಯಲ್ಲಿ ನೀರಿಲ್ಲದೆ, ಸದ್ಯ ಮಲಪ್ರಭ ಬರದ ನದಿ ಎಂಬಂತೆ ಗೋಚರವಾಗುತ್ತಿದೆ. ಮತ್ತೊಂದು ಕಡೆ ನದಿ ಪ್ರದೇಶ ಒತ್ತುವರಿ ಕಾರ್ಯ (Encroachment of River Area) ಸದ್ದಿಲ್ಲದೇ ಸಾಗಿದೆ. ಆದರೆ ಇದನ್ನು ತಡೆಯಬೇಕಾಗಿರುವ ಜಿಲ್ಲಾಡಳಿತ (District Administration) ಕಣ್ಮುಚ್ಚಿ ಕುಳಿತಿದೆ.

    ಬಾಗಲಕೋಟೆ (Bagalkote) ಜಿಲ್ಲೆಯ ಬಾದಾಮಿ ತಾಲೂಕಿನ ಭಾಗದ ಜನರಿಗೆ ಈ ನದಿ ಜೀವನಾಡಿಯಾಗಿದೆ. ಈ ನದಿಯನ್ನೇ ನಂಬಿ ತಾಲೂಕಿನ ರೈತರು, ಪೇರಳೆ, ದಾಳಿಂಬೆ, ಬಾಳೆ, ಚಿಕ್ಕು ಹಾಗೂ ಕಬ್ಬು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಫಲವತ್ತಾದ ಮಸಾರಿ ಭೂಮಿ ಇರುವ ಈ ಪ್ರದೇಶದ ಭೂಮಿಗೆ ಸ್ವಲ್ಪ ಕಡಿಮೆ ನೀರಿದ್ದರೂ ಸಹಾ ಚೆನ್ನಾಗಿ ಬೆಳೆ ಬೆಳೆದು ಇಲ್ಲಿನ ರೈತರು ಬೇರೆಯವರಿಗೆ ಮಾದರಿಯಾಗಿದ್ದಾರೆ. ಇದನ್ನೂ ಓದಿ: 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ

    ಈ ಬಾರಿ ಮಳೆಯಾಗದ ಹಿನ್ನೆಲೆ ರೈತರ ಮೊಗದಲ್ಲಿ ಬರದ ಕರಿಛಾಯೆ ಆವರಿಸಿದೆ. ನದಿ ಬತ್ತಿ ಬರಿದಾಗಿದ್ದರೆ, ಹೊಲಗದ್ದೆಗಳಿಗೆ ಅಷ್ಟೇ ಅಲ್ಲ, ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಮತ್ತೊಂದು ಕಡೆ ಬರಿದಾದ ನದಿಯ ಪ್ರದೇಶವನ್ನು ನದಿ ಪಾತ್ರದ ರೈತರೇ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ರಾಮನ ಬಾಣ ಹುಸಿಯಿಲ್ಲ, ಸುರರು-ಅಸುರರು ಕಾದಾಡಿದರು, ಭಕ್ತಕೋಟಿಗೆ ಮಂಗಳವಾಯಿತು: ಮೈಲಾರಲಿಂಗ ಸ್ವಾಮಿ ಕಾರ್ಣಿಕ

    2019ರಿಂದ ಸತತ ಮೂರು ವರ್ಷ ಪ್ರವಾಹದಿಂದ ಕಂಗಾಲಾಗಿರುವ ಈ ಭಾಗದ ರೈತರು, ಈ ಬಾರಿ ಬರ ಸಿಡಿಲಿಗೆ ಸಿಕ್ಕು ನಲುಗಿ ಹೋಗಿದ್ದಾರೆ. ಈ ಹಿಂದೆ ಪ್ರವಾಹ ಆವರಿಸಿದ ಸಂದರ್ಭದಲ್ಲಿ, ಮಲಪ್ರಭಾ ನದಿ ನೀರಿನ ಹರಿವಿನ ದಿಕ್ಕೇ ಬದಲಾಗಿದೆ. ನದಿ ಪ್ರದೇಶ ಒತ್ತುವರಿ ಆಗಿರುವುದೇ ಆ ಪ್ರವಾಹಕ್ಕೆ ಕಾರಣ ಎಂಬುದನ್ನು ಅರಿತು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಲಪ್ರಭಾ ನದಿ ಒತ್ತುವರಿ ಸರ್ವೆ ಕಾರ್ಯಕ್ಕೆ ಸೂಚನೆ ನೀಡಿತ್ತು. ಅಧಿಕಾರಿ ವರ್ಗ ಒತ್ತುವರಿ ಸರ್ವೆ ಮುಗಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ಥಾವನೆಯನ್ನೂ ಸಲ್ಲಿಸಿದ್ದರು. ಇದನ್ನೂ ಓದಿ: ಸರ್ಕಾರದ ಹಣ ತಿಂದಿಲ್ಲವೆಂದು ಹೆಚ್‍ಡಿಕೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ಲಿ: ಬಾಲಕೃಷ್ಣ

    ಆದರೆ ಸದ್ಯ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಪಕ್ಷ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ನದಿ ಪ್ರದೇಶ ಒತ್ತುವರಿ ಸದ್ದಿಲ್ಲದೇ ಸಾಗುತ್ತಿದೆ ಎನ್ನುತ್ತಿದ್ದಾರೆ ರೈತರು. ಇನ್ನು ಸುಮಾರು 130 ಮೀಟರ್ ಅಗಲವಾಗಿ ಹರಿಯುತ್ತಿದ್ದ ನದಿಯ ಒಡಲು ಕೆಲ ಭಾಗದಲ್ಲಿ ಕೇವಲ 20ರಿಂದ 30 ಮೀಟರ್ ಅಗಲಕ್ಕೆ ಬಂದು ತಲುಪಿದೆ. ನದಿ ಒತ್ತುವರಿ ತೆರವು ಮಾಡದೇ ಇದ್ದರೇ ನದಿ ಯಾವುದು, ರೈತರ ಜಮೀನು ಯಾವುದು ಎಂಬುದೇ ತಿಳಿಯದಂತಾಗುತ್ತದೆ. ನದಿ ಪ್ರದೇಶ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಜರುಗಿಸಿ ನದಿಯ ಒಡಲು ಹಿಗ್ಗಿಸಿ ಎಂದು ರೈತರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡ್ತೇವೆ: ಬಾಲಕೃಷ್ಣ

    ಆದರೆ ನದಿಯ ಒಡಲು ಹಿಗ್ಗಿಸುವ ಕೆಲಸ ಮಾಡಬೇಕಿರುವ ಅಧಿಕಾರಿಗಳು ನಿದ್ರೆಗೆ ಜಾರಿದರೆ ಜನಪ್ರತಿನಿಧಿಗಳು ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಹೀಗಾಗಿ ಮಳೆ ಇಲ್ಲದೇ ಮಲಪ್ರಭಾ ಬತ್ತಿ ಬರಿದಾಗುತ್ತಿದ್ದರೆ ಇತ್ತ ನದಿ ಪ್ರದೇಶ ಒತ್ತುವರಿ ಕಾರ್ಯ ಸುಲಲಿತವಾಗಿ ಸಾಗುತ್ತಿದೆ. ಇದನ್ನೂ ಓದಿ: ಅದ್ಧೂರಿಯಾಗಿ ತೆರೆಕಂಡ ಮಂಗಳೂರು ದಸರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಕಾರು, ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ – ಇಬ್ಬರು ಮಹಿಳೆಯರ ಸಾವು, 8 ಮಂದಿಗೆ ಗಾಯ

    ಬಾಗಲಕೋಟೆ: ಕಾರು (Car) ಹಾಗೂ ಗೂಡ್ಸ್ ವಾಹನ (Goods Vehicle) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮಹಿಳೆಯರು (Women) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ (Hungund) ತಾಲೂಕಿನ ರಕ್ಕಸಗಿಯಲ್ಲಿ (Rakkasagi) ನಡೆದಿದೆ.

    ಮೃತ ಮಹಿಳೆಯರು ಗೂಡ್ಸ್ ವಾಹನದಲ್ಲಿದ್ದು, ಹುನಗುಂದದಿಂದ ಅಮೀನಗಢ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಕಾರು ಮತ್ತು ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಎಂಟು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್ ಓಪನ್ ಆದ ಕಾರಣ ಕಾರು ಚಾಲಕ ಸಾವಿನಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆ ಕೊಂದಿದ್ದ ಸೊಸೆ ಅರೆಸ್ಟ್

    ಮೃತರು ರಾಯಚೂರು (Raichur) ಜಿಲ್ಲೆಯ ಲಿಂಗಸೂರು ಭಾಗದವರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಶಿವಾಜಿಗೆ ಅವಮಾನ – ಠಾಣೆ ಮುಂದೆ ಜನ ಸೇರುತ್ತಿದ್ದಂತೆ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]