Tag: bagalkote

  • ಹಬ್ಬದಂದು ಹಚ್ಚಿದ ದೀಪದಿಂದ ಅಗ್ನಿ ಅವಘಡ – ಗಾಯಗೊಂಡಿದ್ದ ಯುವತಿ ಸಾವು

    ಹಬ್ಬದಂದು ಹಚ್ಚಿದ ದೀಪದಿಂದ ಅಗ್ನಿ ಅವಘಡ – ಗಾಯಗೊಂಡಿದ್ದ ಯುವತಿ ಸಾವು

    ಬಾಗಲಕೋಟೆ: ತಾಲೂಕಿನ (Bagalkote) ಗದ್ದನಕೇರಿ ಕ್ರಾಸ್‍ನ ಮನೆಯೊಂದರಲ್ಲಿ ದೀಪಾವಳಿ (Deepavali) ಹಬ್ಬದ ಆಚರಣೆ ವೇಳೆ ದೀಪದಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ (Fire Accident) ಗಾಯಗೊಂಡಿದ್ದ ಯುವತಿ ಸಾವನ್ನಪ್ಪಿದ್ದಾಳೆ.

    ಮೃತ ಯುವತಿಯನ್ನು ಸ್ನೇಹಾ ಮೇದಾರ (22) ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಯುವತಿಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಮನೆ ಮುಂದೆ ಹಚ್ಚಿದ ದೀಪದಿಂದ ಅಗ್ನಿ ಅವಘಡ – 3 ಬೈಕ್‌ ಭಸ್ಮ, 7 ಮಂದಿಗೆ ಗಾಯ

    ಅಕ್ಟೋಬರ್ 19 ರಂದು ಅಗ್ನಿ ಅವಘಡ ಸಂಭವಿಸಿತ್ತು. ಬಾಗಿಲಿನ ಮುಂದೆ ಹಚ್ಚಿದ್ದ ದೀಪ ಮನೆ ಮುಂದೆ ಬಿದ್ದ ಆಯಿಲ್‍ಗೆ ತಗುಲಿ. ಮನೆಗೆ ಬೆಂಕಿ ತಗುಲಿತ್ತು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ತೀವ್ರತೆ ಇನ್ನಷ್ಟು ಹೆಚ್ಚಾಗಿತ್ತು.

    ಘಟನೆಯಲ್ಲಿ 8 ಜನ ಗಾಯಗೊಂಡಿದ್ದರು. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ 8 ಬೈಕ್ ಸುಟ್ಟು ಕರಕಲಾಗಿದ್ದವು. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇದನ್ನೂ ಓದಿ:

  • ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರದಿಂದ ಕತ್ತಲೆ ಭಾಗ್ಯ – ಸ್ಥಳೀಯರ ಆಕ್ರೋಶ

    ಬಾಗಲಕೋಟೆ: ಗ್ಯಾರಂಟಿ ಭಾಗ್ಯ ಕೊಟ್ಟ ಸರ್ಕಾರ ಕತ್ತಲೆ ಭಾಗ್ಯವನ್ನೂ ನೀಡಿದೆ ಎಂದು ಬಾಗಲಕೋಟೆಯ (Bagalkote) ಜನರು ಆಕ್ರೋಶ ಹೊರಹಾಕ್ತಿದ್ದಾರೆ.

    ಹೌದು ಜನಪ್ರತಿನಿಧಿಗಳು, ವಿಐಪಿ ಗಣ್ಯರಿಗೆ ಅಂತ ಇರುವ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಪ್ರವಾಸಿ ಮಂದಿರ(IB) ವಿದ್ಯುತ್ ಇಲ್ಲದೇ ಕತ್ತಲು ಆವರಿಸಿದೆ. ನಿರೀಕ್ಷಣಾ ಮಂದಿರಗಳ ಬಿಲ್‌ (Electricity Bill) ಕಟ್ಟದ ಹಿನ್ನೆಲೆಯಲ್ಲಿ ಐಬಿಗಳಿಗೆ ಕತ್ತಲೆ ಭಾಗ್ಯ ಪ್ರಾಪ್ತಿಯಾಗಿದೆ. ‌

    ಲೋಕೋಪಯೋಗಿ ಇಲಾಖೆ (PWD) ಹಲವು ತಿಂಗಳಿನಿಂದ ಪ್ರವಾಸಿಮಂದಿರಗಳ ವಿದ್ಯುತ್‌ ಬಿಲ್‌ ಪಾವತಿಸಿಲ್ಲ. ಹೀಗಾಗಿ ಬಾಗಲಕೋಟೆ ಪ್ರವಾಸಿಮಂದಿದಲ್ಲಿ ಕರೆಂಟ್ ಇಲ್ಲದಂತಾಗಿ ಬರಿ ಕತ್ತಲು ಆವರಿಸಿದೆ. ಇದನ್ನೂ ಓದಿ:  ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ಅಸಲಿ ಚಿನ್ನದ ಬಾಗಿಲು ತಾನೇ ಇಟ್ಟುಕೊಂಡು ತಾಮ್ರದ ಬಾಗಿಲನ್ನು ದೇಗುಲಕ್ಕೆ ಕೊಟ್ಟಿದ್ದ ಉನ್ನಿಕೃಷ್ಣನ್

    ಅದರಲ್ಲೂ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ್ದರು. ರಾತ್ರಿ ಐಬಿಯಲ್ಲಿದ್ದು ಬೆಳಗ್ಗೆ ಕಾರ್ಯಕ್ರಮ ಮುಗಿಸಿ ಹೊರಡಬೇಕಿತ್ತು. ಆದರೆ ಐಬಿಯಲ್ಲಿ ಕರೆಂಟ್ ಇಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಬೇರೊಬ್ಬರ ಆಪ್ತರ ಮನೆಯಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ತೆರಳಿದ್ದಾರೆ.

    ಸರ್ಕಾರ ನಿಯಂತ್ರಣದಲ್ಲಿರುವ ಐಬಿಗಳಿಗೆ ಈ ಗತಿಯಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ಮನೆ ಮುಂದೆ ಹಚ್ಚಿದ ದೀಪದಿಂದ ಅಗ್ನಿ ಅವಘಡ – 3 ಬೈಕ್‌ ಭಸ್ಮ, 7 ಮಂದಿಗೆ ಗಾಯ

    ಮನೆ ಮುಂದೆ ಹಚ್ಚಿದ ದೀಪದಿಂದ ಅಗ್ನಿ ಅವಘಡ – 3 ಬೈಕ್‌ ಭಸ್ಮ, 7 ಮಂದಿಗೆ ಗಾಯ

    – ಗ್ಯಾಸ್‌ ಸೋರಿಕೆ, ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿ

    ಬಾಗಲಕೋಟೆ: ದೀಪಾವಳಿ (Deepavali) ಹಿನ್ನೆಲೆ ಮನೆ ಬಾಗಿಲಿನ ಬಳಿ ಹಚ್ಚಿದ ದೀಪದಿಂದ ಸಂಭವಿಸಿದ ಅಗ್ನಿ ಅವಘಡದಿಂದ (Fire Accident) 7 ಮಂದಿ ಗಾಯಗೊಂಡ ಘಟನೆ ಬಾಗಲಕೋಟೆ (Bagalkote) ಗದ್ದನಕೇರಿ ಕ್ರಾಸ್‌ ಬಳಿ ನಡೆದಿದೆ.

    ನಗರದ ರಾಜೇಂದ್ರ ತಪಶೆಟ್ಟಿಯವರ ಮನೆಯ ಎದುರು ದೀಪ ಹಚ್ಚಲಾಗಿತ್ತು. ದೀಪದಿಂದ ಮನೆ ಎದುರಿಗೆ ಚೆಲ್ಲಿದ್ದ ಆಯಿಲ್‌ಗೆ ತಗುಲಿ ಬೆಂಕಿ ಹೊತ್ತಿದೆ. ಇದರಿಂದ ಮನೆ ಮುಂದಿನ 3 ಬೈಕ್ ಸುಟ್ಟು ಕರಕಲಾಗಿವೆ. ಬಳಿಕ ಮನೆಗೆ ಬೆಂಕಿ ತಗುಲಿದ್ದು, ಅಡುಗೆ ಮನೆಯ ಸಿಲಿಂಡರ್ ಕೂಡ ಸೋರಿಕೆಯಾಗಿದೆ. ಇದರಿಂದ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ

    ತಪಶೆಟ್ಟಿ ಕುಟುಂಬಸ್ಥರು ಮನೆ ಬಿಟ್ಟು ಹೊರಗೆ ಬಂದು ಬಚಾವ್‌ ಆಗಿದ್ದಾರೆ. ಮೇಲ್ಮಹಡಿಯಲ್ಲಿದ್ದ 7 ಮಂದಿಗೆ ಬೆಂಕಿಯ ಜಳದಿಂದ ಸಣ್ಣಪುಟ್ಟಗಾಯಗಳಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ರಾಜೇಂದ್ರ ತಪಶೆಟ್ಟಿ ಬೋರ್‌ವೆಲ್‌ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಬೇಕಾದ ಆಯಿಲ್‌ ಸಂಗ್ರಹಿಸಿದ್ದರು. ಅದಕ್ಕೆ ದೀಪದ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ – ಚಿಕಿತ್ಸೆ ಫಲಿಸದೇ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

  • ಲಿಂಗಾಯತ ಧರ್ಮದ ಬಗ್ಗೆ ಅವಹೇಳನ; ಬಾಗಲಕೋಟೆ ತೊರೆಯುವಂತೆ ಕನ್ನೇರಿ ಶ್ರೀಗಳಿಗೆ ನೊಟೀಸ್!

    ಲಿಂಗಾಯತ ಧರ್ಮದ ಬಗ್ಗೆ ಅವಹೇಳನ; ಬಾಗಲಕೋಟೆ ತೊರೆಯುವಂತೆ ಕನ್ನೇರಿ ಶ್ರೀಗಳಿಗೆ ನೊಟೀಸ್!

    – ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ನೇರಿಗೆ ತೆರಳಿದ ಸ್ವಾಮೀಜಿ

    ಬಾಗಲಕೋಟೆ/ವಿಜಯಪುರ: ಮಹಾರಾಷ್ಟ್ರದ ಕೊಲ್ಜಾಪುರದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ (Adrushya Kadhsiddheshwar Swamiji) ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ವಿಚಾರ ಇದೀಗ ಮತ್ತಷ್ಟು ಜಟಿಲಗೊಂಡಿದೆ. ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಸ್ವಾಮಿಜಿಗಳಿಗೆ ಹಿನ್ನಡೆ ಆಗಿದೆ. ಇದರ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯಲ್ಲೂ ನಿರ್ಬಂಧ ಹೇರಲಾಗಿದೆ.

    ಹೌದು. ಮಹಾರಾಷ್ಟ್ರದಲ್ಲಿ ಬಸವ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಲಿಂಗಾಯತ ಧರ್ಮದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬಾಗಲಕೋಟೆಯ ಬೀಳಗಿ ತಾಲೂಕಿನಲ್ಲಿರೋ ಕನ್ನೇರಿ ಶ್ರೀಗಳಿಗೆ ನಿನ್ನೆ ಜಿಲ್ಲೆ ತೊರೆಯುವಂತೆ ನೋಟಿಸ್ ನೀಡಲಾಗಿದೆ. ಈ ಬೆನ್ನೆಲ್ಲೇ ಇಂದು ನಸುಕಿನ ಜಾವವೇ ಕನ್ನೇರಿ ಸ್ವಾಮೀಜಿ. ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ಹೇರಿಗೆ ತೆರಳಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಪ್ರೀತಿಸಿ ಮದ್ವೆಯಾದ, ವಿಚ್ಛೇದನ ಪಡೆದು ಮಾಜಿ ಪತ್ನಿ ಕೊಂದ ಪೊಲೀಸಪ್ಪ

    ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಎರಡು ದಿನದಿಂದ ವಾಸವಿದ್ದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಕಾನೂನು ಸವ್ಯವಸ್ಥೆ ಹದಗೆಡುವ ಸಾಧ್ಯತೆ ಹಿನ್ನೆಲೆ. ಜಿಲ್ಲೆಯಲ್ಲಿ ಇರಬಾರದು ಎಂದು ನೊಟೀಸ್ ನೀಡಲಾಗಿತ್ತು. ಈ ಬೆನ್ನಲೇ ಶ್ರೀಗಳು ನಿಮ್ಮ ಮೂಲ ಜಾಗಕ್ಕೆ ತೆರಳಿ ಎಂದು ನೊಟೀಸ್ ನೀಡಲಾಗಿತ್ತು. ತಮ್ಮ ಮೂಲಮಠ ಮಹಾರಾಷ್ಟ್ರದ ಕನ್ನೇರಿಗೆ ಹೋಗಿದ್ದಾರೆ. ಇದನ್ನೂ ಓದಿ: ಮುಂದಿನ ಸಿಎಂ ಸತೀಶಣ್ಣನೇ ಆಗ್ಲಿ – ಜಾರಕಿಹೊಳಿ ಪರ ಬ್ಯಾಟ್ ಬೀಸಿದ ರಾಜು ಗೌಡ

  • ಆಲಮಟ್ಟಿ ಬಲದಂಡೆ ಕಾಲುವೆ ಎಂಜಿನಿಯರ್‌ ಮನೆ ಮೇಲೆ ಲೋಕಾ ದಾಳಿ

    ಆಲಮಟ್ಟಿ ಬಲದಂಡೆ ಕಾಲುವೆ ಎಂಜಿನಿಯರ್‌ ಮನೆ ಮೇಲೆ ಲೋಕಾ ದಾಳಿ

    ಬಾಗಲಕೋಟೆ: ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆಯ (Bagalkote) ನವನಗರದಲ್ಲಿರುವ ಸಹಾಯಕ ಮುಖ್ಯ ಎಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokyukta Officials) ದಾಳಿ ನಡೆಸಿದ್ದಾರೆ.

    ಕೆಬಿಜೆಎನ್ಎಲ್‌ನ ಆಲಮಟ್ಟಿ (Almatti Dam) ಬಲದಂಡೆ ಕಾಲುವೆಯ ಸಹಾಯಕ ಮುಖ್ಯ ಎಂಜಿನಿಯರ್ ಚೇತನ್ ಮಾಳಜಿ ಅವರ ಮನೆ ಮತ್ತು ಕಮತಗಿಯಲ್ಲಿರುವ ಕೆಬಿಜೆಎನ್ಎಲ್ ಕಚೇರಿ ಮೇಲೆ ಲೋಕಾಯುಕ್ತ ಎಸ್.ಪಿ ಮಲ್ಲೇಶ್ ಮಾರ್ಗದರ್ಶನದಲ್ಲಿ ಡಿವೈಎಸ್.ಪಿ ನೇತೃತ್ವದ 12 ಸಿಬ್ಬಂದಿಗಳ ತಂಡ ದಾಳಿ ಮಾಡಿದೆ. ಇದನ್ನೂ ಓದಿ:  ಫೋನ್‌ ಟ್ಯಾಪಿಂಗ್‌ ಕೇಸ್;‌ ಅಲೋಕ್‌ ಕುಮಾರ್‌ ವಿರುದ್ಧದ ತನಿಖಾ ಆದೇಶ ರದ್ದು – ಸರ್ಕಾರಕ್ಕೆ ಭಾರೀ ಹಿನ್ನಡೆ

    ಚೇತನ್ ಮಾಳಜಿ ಅವರ ನವನಗರದ ಸೆಕ್ಟರ್ ನಂಬರ್ 16 ರಲ್ಲಿರುವ ಮನೆ ಹಾಗೂ ಕಮತಗಿ ಕಛೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

  • ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಕೈಗೆ ಬಂದ ಈರುಳ್ಳಿ ಫಸಲನ್ನು ಮಣ್ಣಲ್ಲೇ ಮುಚ್ಚಿದ ರೈತ

    ಬಾಗಲಕೋಟೆ: ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದಕ್ಕೆ ರೈತರೊಬ್ಬರು (Farmers)  ಕೈಗೆ ಬಂದಿದ್ದ ಈರುಳ್ಳಿ(Onion) ಫಸಲನ್ನ ಮಣ್ಣಲ್ಲೇ ಮುಚ್ಚಿದ್ದಾರೆ.

    ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಗುರಲಿಂಗಪ್ಲ ಗಡ್ಡಿ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಈರುಳಿ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ಬೇಸರಗೊಂಡಿದ್ದರು.

    ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಒಂದು ಕ್ವಿಂಟಾಲ್ ಈರುಳ್ಳಿಗೆ 200 ರೂ. ಅಥವಾ 300 ರೂ. ಹೇಳುತ್ತಾರೆ. ಬೆಲೆ ಇಲ್ಲದ್ದಕ್ಕೆ ಈರುಳ್ಳಿಯನ್ನು ಮಣ್ಣಲ್ಲೇ ಮುಚ್ಚುತ್ತಿದ್ದೇನೆ ಎಂದು ಹೇಳಿದರು.  ಇದನ್ನೂ ಓದಿ:  ದಾವಣಗೆರೆ | ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ

    ಮೊದಲೇ ಅತೀವೃಷ್ಟಿಯಿಂದ ಬೆಳೆ ಹಾಳಾಗಿತ್ತು. ಈಗ ಅಳಿದುಳಿದ ಫಸಲು ಬಂದಿದೆ. ಆದರೆ ಉತ್ತಮ ದರ ಸಿಗುತ್ತಿಲ್ಲ. ಹೀಗಾದರೆ ರೈತ ಹೇಗೆ ಬದುಕಬೇಕು? ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

  • ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು

    ಹದಗೆಟ್ಟ ರಸ್ತೆ| ಗಣತಿ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಬೈಕಿನಿಂದ ಬಿದ್ದು ಸಾವು

    ಬಾಗಲಕೋಟೆ: ಗಣತಿ ಕಾರ್ಯಕ್ಕೆ ಹೋದ ಶಿಕ್ಷಕಿ (Teacher) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkote) ತಾಲೂಕಿನ ತಿಮ್ಮಾಪೂರ ಕ್ರಾಸ್ ಬಳಿ ನಡೆದಿದೆ.

    ದಾನಮ್ಮ ವಿಜಯಕುಮಾರ ನಂದರಗಿ (52) ಸಾವನ್ನಪ್ಪಿರುವ ಶಿಕ್ಷಕಿ. ಗಣತಿ ಕಾರ್ಯ (Caste Census) ಮುಗಿಸಿಕೊಂಡು ಪುತ್ರನ ಜೊತೆ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ.

    ಮೊದಲೇ ಗಣತಿ ಕಾರ್ಯದ ತಾಂತ್ರಿಕ ಸಮಸ್ಯೆಯಿಂದಾಗಿ ಎರಡ್ಮೂರು ದಿನಗಳಿಂದ ಶಿಕ್ಷಕಿ ದಾನಮ್ಮ ಟೆನ್ಶನ್‌ನಲ್ಲಿದ್ದರು. ಹೀಗಾಗಿ ಅವರನ್ನು ಕರೆದುಕೊಂಡು ಹೋಗಲು ಮಗ ವಿಕಾಸ್ ಬೈಕ್ ತೆಗೆದುಕೊಂಡು ಬಂದಿದ್ದ. ಮಗನ ಜೊತೆ ಬರುವಾಗ ಹದಗೆಟ್ಟ ರಸ್ತೆಯಿಂದ ಬ್ಯಾಲೆನ್ಸ್‌ ತಪ್ಪಿ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

    ಮೃತ ಶಿಕ್ಷಕಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ವಂದಾಲ ಗ್ರಾಮದವರು. ಬಾಗಲಕೋಟೆ ತಾಲೂಕಿನ ರಾಂಪೂರ ಸರ್ಕಾರಿ ಆಶ್ರಯ ಕಾಲೋನಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಕರ್ನಾಟಕದಲ್ಲಿ ಕೇಂದ್ರಕ್ಕೂ ಮೊದಲೇ ರಾಜ್ಯ ಚುನಾವಣಾ ಆಯೋಗದಿಂದ SIR

    ಬಾಗಲಕೋಟೆಯಲ್ಲಿ ವಾಸವಿದ್ದ ಕಾರಣ ಗಣತಿ ಕಾರ್ಯ ಮುಗಿಸಿ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಗಲಕೋಟೆಯಲ್ಲಿ ನಿರಂತರ ಮಳೆ – ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಾಲಕ ಸಾವು

    ಬಾಗಲಕೋಟೆಯಲ್ಲಿ ನಿರಂತರ ಮಳೆ – ಮನೆಯ ಮೇಲ್ಛಾವಣಿ, ಗೋಡೆ ಕುಸಿದು ಬಾಲಕ ಸಾವು

    ಬಾಗಲಕೋಟೆ: ಶುಕ್ರವಾರ ರಾತ್ರಿ ಸುರಿದ ನಿರಂತರ ಮಳೆಗೆ (Rain) ಮನೆಯ ತಗಡಿನ ಮೇಲ್ಛಾವಣಿ ಹಾಗೂ ಗೋಡೆ ಕುಸಿದು (Wall Collapse) ಬಾಲಕ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ (Mahalingapura) ಪಟ್ಟಣದಲ್ಲಿ ನಡೆದಿದೆ.

    ನಾಗಪ್ಪ ಲಾತೂರ್ ಮಗ ದರ್ಶನ್ ಲಾತೂರ್ (11) ಮೃತ ಬಾಲಕ. ಘಟನೆಯಲ್ಲಿ ಇನ್ನೊಬ್ಬ ಬಾಲಕ ಶ್ರೀಶೈಲ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಿರಂತರ ಮಳೆ – ಶಾಲೆಗಳಿಗೆ ಇಂದು, ನಾಳೆ ರಜೆ ಘೋಷಣೆ

    ಮನೆಯಲ್ಲಿ ಕೋಣೆಯೊಂದರಲ್ಲಿ ಮಕ್ಕಳು ತಾಯಿಯೊಂದಿಗೆ ಮಲಗಿದ್ದರು. ಬೆಳಗ್ಗೆ ತಾಯಿ ಎದ್ದು ಬೇರೆ ಕೊಠಡಿಗೆ ಬರುತ್ತಲೇ ಮನೆಯ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರೌದ್ರರೂಪ ತಾಳಿದ ಭೀಮಾ ನದಿ – ಪ್ರವಾಹದಲ್ಲಿ ಸಿಲುಕಿದ್ದ 8 ಜನರ ರಕ್ಷಣೆ

  • ಪಿಜಿಯಲ್ಲಿ ಯುವತಿ ಅನುಮಾನಾಸ್ಪದ ಸಾವು – ನೇತಾಡುತ್ತಿದ್ದ ಶವ ಕಂಡು ಹೊರಗೆ ಓಡಿದ ವಿದ್ಯಾರ್ಥಿನಿಯರು

    ಪಿಜಿಯಲ್ಲಿ ಯುವತಿ ಅನುಮಾನಾಸ್ಪದ ಸಾವು – ನೇತಾಡುತ್ತಿದ್ದ ಶವ ಕಂಡು ಹೊರಗೆ ಓಡಿದ ವಿದ್ಯಾರ್ಥಿನಿಯರು

    ಬಾಗಲಕೋಟೆ: ನಗರದ (Bagalkote) ವಿದ್ಯಾಗಿರಿಯ ಖಾಸಗಿ ಪಿಜಿಯೊಂದರಲ್ಲಿ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಸಾವಿಗೀಡಾದ ವಿದ್ಯಾರ್ಥಿನಿಯನ್ನು (Student) ಸುನಗ ತಾಂಡಾದ ಸೀಮಾ ರಾಠೋಡ (17) ಎಂದು ಗುರುತಿಸಲಾಗಿದೆ. ನಗರದ ಪಿಯು ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದಳು. ಪಿಜಿಯಲ್ಲಿ ಕೆಲವು ವಿದ್ಯಾರ್ಥಿನಿಯರು ರೂಮ್ ಒಳಗೆ ಹೋಗುತ್ತಿದ್ದಂತೆ ಯುವತಿಯ ಮೃತದೇಹ ಸ್ಲ್ಯಾಬ್‍ನ ಹುಕ್‍ನಲ್ಲಿ ನೇತಾಡುತ್ತಿರುವುದನ್ನು ಕಂಡು ಕಿರುಚಾಡುತ್ತ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Bengaluru | ಮಹಿಳೆಗೆ ಥಳಿತ ಕೇಸ್‌ – ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್

    ವಿದ್ಯಾರ್ಥಿನಿಯರು ಹೊರಗೆ ಬಂದಿದ್ದನ್ನು ಕಂಡು, ಪಿಜಿಯ ಭದ್ರತಾ ಸಿಬ್ಬಂದಿ ಬಂದು ನೋಡಿದ್ದಾರೆ. ಬಳಿಕ ನೇಣು ಬಿಚ್ಚಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಜಿಲ್ಲಾಸ್ಪತ್ರೆ ವೈದ್ಯರು ಪರೀಕ್ಷಿಸಿ ಯುವತಿ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ.

    ಯುವತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು, ನಮಗೆ ಕರೆ ಮಾಡಿ ಪಿಟ್ಸ್ ಬಂದಿದೆ ಎಂದಿದ್ದರು. ಈಗ ನೇಣು ಹಾಕಿಕೊಂಡಿದ್ದಾಳೆ ಎನ್ನುತ್ತಿದ್ದಾರೆ ಎಂದು ಪಿಜಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ | ಚರಂಡಿಗೆ ಬಿದ್ದು 4 ವರ್ಷದ ಬಾಲಕ ಸಾವು

  • ಬದಲಾವಣೆ ಬಯಸಿದ ಬಸವಣ್ಣನನ್ನೇ ಬಿಟ್ಟಿಲ್ಲ – ಉಚ್ಚಾಟನೆಗೆ ಜಯಮೃತ್ಯುಂಜಯ ಶ್ರೀ ಬೇಸರ

    ಬದಲಾವಣೆ ಬಯಸಿದ ಬಸವಣ್ಣನನ್ನೇ ಬಿಟ್ಟಿಲ್ಲ – ಉಚ್ಚಾಟನೆಗೆ ಜಯಮೃತ್ಯುಂಜಯ ಶ್ರೀ ಬೇಸರ

    ಚಿಕ್ಕೋಡಿ: ಉಚ್ಚಾಟನೆಯ ವಿಷಯ ತಿಳಿಯುತ್ತಿದ್ದಂತೆ ಕೂಡಲಸಂಗಮ ಪೀಠದ (Panchamasali Jagadguru Peeta) ಜಯಮೃತ್ಯುಂಜಯ ಶ್ರೀಗಳು (Jaya Mruthyunjaya Swamiji) ಬೇಸರ ವ್ಯಕ್ತಪಡಿಸಿದರು.

    ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸ್ವಾಮೀಜಿ ಉಚ್ಚಾಟನೆ ವಿಷಯ ತಿಳಿಯುತ್ತಿದ್ದಂತೆ ಶ್ರೀಗಳ ಧ್ವನಿಯಲ್ಲಿ ಹತಾಶೆ ಭಾವ ಮೂಡಿತ್ತು. ಬದಲಾವಣೆ ಬಯಸಿದಂತಹ ವ್ಯಕ್ತಿಗಳಿಗೆ ತೊಂದರೆ ಕೊಡುವುದು ಸಹಜ. ಅದು ಯಾರನ್ನೂ ಬಿಟ್ಟಿಲ್ಲ. ಬಸವಣ್ಣನವರನ್ನು ಬಿಟ್ಟಿಲ್ಲ, ಅಂಬೇಡ್ಕರ್‌ರವರನ್ನು ಸಹ ಬಿಟ್ಟಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯಮೃತ್ಯುಂಜಯ ಶ್ರೀ ಉಚ್ಚಾಟನೆ

    ನಮ್ಮ ಗುರಿ, ನಿಷ್ಠೆ ಮಾತ್ರ ಅಚಲವಾಗಿರುವಂತದ್ದು. ಎಲ್ಲರೂ ಸೇರಿಕೊಂಡು ಬಸವ ಸಂಪ್ರದಾಯ ಉಳಿಸಬೇಕು. ಶರಣ ಸಮಾಜವನ್ನು ಕಟ್ಟೋಣ ಎಂದ ಶ್ರೀಗಳು ಕರೆ ನೀಡಿದರು. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಸುಭದ್ರೆ ಕೊಡಲು ನಿರಾಕರಿಸಿದ ಹೊನ್ನಾಳಿ ಹಿರೇಕಲ್ಮಠ – ಸ್ಥಳದಲ್ಲಿ ಬಿಗುವಿನ ವಾತಾವರಣ