ಬಾಗಲಕೋಟೆ: ಕುರಿ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಯನ್ನ ಮೂವರು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದ ಘಟನೆ ಬಾಗಲಕೋಟೆ (Bagalakote) ಜಿಲ್ಲೆಯ ಬಾದಾಮಿ (Badami) ತಾಲೂಕಿನ ಹಳಗೇರಿ ಗ್ರಾಮದ ಟೋಲನಾಕಾ ಹತ್ತಿರ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿಗಳು, ಶರಣಪ್ಪ ಅವರ ಹೊಲದ ದಡ್ಡಿಯಲ್ಲಿರುವ ಕುರಿಗಳನ್ನು ಕಳ್ಳತನ ಮಾಡಲು ಬಂದಿದ್ದರು. ಕುರಿಕಳ್ಳರನ್ನು ಗಮನಿಸಿದ ಶರಣಪ್ಪ, ಯಾಕುಬ್ ಅಗಸಿಮನಿಯನ್ನು ಹಿಡಿದುಕೊಂಡಿದ್ದರು. ಈ ವೇಳೆ ಆರೋಪಿಗಳು, ಶರಣಪ್ಪ ಅವರನ್ನು ಕಲ್ಲು, ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳ ಚರ್ಚೆಗೆ ವಿಪಕ್ಷಗಳ ಆಗ್ರಹ
ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜಿಆರ್‌ಪಿಎ ಚೀಫ್ ಎಂಜಿನಿಯರ್ ನಂಜುಂಡಪ್ಪ ಮತ್ತು ಬಿಬಿಎಂಪಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಹೆಚ್.ಪಿ ಕಲ್ಲೇಶಪ್ಪ ಅವರ ಮನೆಗಳ ಮೇಲೆ ದಾಳಿ ನಡೆದಿದೆ. ಕೋಲಾರದಲ್ಲಿ ಬೆಸ್ಕಾಂ AEE ಜಿ.ನಾಗರಾಜ್ ಮನೆ ಹಾಗೂ ಅವರಿಗೆ ಸೇರಿದ ಮೂರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇವರು ಬೆಂಗಳೂರಿನ ರಾಜಾಜಿನಗರದಲ್ಲಿ ಹಾಲಿ AEE ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಂಬಂಧಿಕರೊಬ್ಬರ ಮನೆ ಮೇಲೂ ದಾಳಿ ನಡೆದಿದೆ. ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಾಗರಾಜ್ ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳು ಇವೆ.
ದಾವಣಗೆರೆಯಲ್ಲಿ ಫುಡ್ ಸೇಫ್ಟಿ & ಕ್ವಾಲಿಟಿ ಯುನಿಟ್ ಹೆಲ್ತ್ ಡಿಪಾರ್ಟ್ಮೆಂಟ್‌ನ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್ ಮನೆ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ನಾಗರಾಜ್ ನಿವಾಸದಲ್ಲಿ ಶೋಧ ನಡೆಸಲಾಗುತ್ತಿದೆ. ತುಮಕೂರಿನ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಜಗದೀಶ್ ಮನೆ ಮೇಲೂ ‘ಲೋಕಾ’ ದಾಳಿ ನಡೆದಿದೆ.
ಬಾಗಲಕೋಟೆಯ ಬೀಳಗಿ ಲೋಕೋಪಯೋಗಿ ಇಲಾಖೆ ಎಫ್‌ಡಿಸಿ ಮಲ್ಲೇಶ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಅರೋಪದ ಮೇಲೆ ಲೋಕೋಪಯೋಗಿ ಚೀಫ್ ಇಂಜಿನಿಯರ್ ಮನೆ ಮೇಲೆ ದಾಳಿ ನಡೆದಿದೆ. ಕಲಬುರಗಿಯ ಎನ್‌ಜಿಓ ಕಾಲೊನಿ ಮನೆ ಸೇರಿ ಒಟ್ಟು 6 ಕಡೆ ದಾಳಿಯಾಗಿದೆ.
– ಕರ್ನಾಟಕ ಬಸ್‌ಗೆ ಮರಾಠಿಗರು ಮಸಿ ಬಳಿದಿದ್ದಕ್ಕೆ ಕನ್ನಡಿಗರ ತಿರುಗೇಟು
ಬಾಗಲಕೋಟೆ: ಇಳಕಲ್ ಬಸ್‌ಗೆ ಮಹಾರಾಷ್ಟ್ರದಲ್ಲಿ (Maharashtra) ಮಸಿ ಬಳಿದಿರುವುದಕ್ಕೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರ ಬಸ್‌ಗೆ ‘ಜೈ ಕರ್ನಾಟಕ’ ಎಂದು ಬರೆದಿರುವ ಘಟನೆ ಚಿತ್ರದುರ್ಗ (Chitradurga) ಹಾಗೂ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಇಳಕಲ್ ಬಸ್ ನಿಲ್ದಾಣದಿಂದ ಮಹಾರಾಷ್ಟ್ರದ ಸೋಲಾಪುರ (Solapur) ಕಡೆ ಹೊರಟಿದ್ದ ಬಸ್‌ನ್ನು ಕೂಡಲಸಂಗಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಬಾಗಲಕೋಟೆ ಜನರು, ಬಸ್ ಮುಂಭಾಗದ ಗಾಜಿನ ಮೇಲೆ ‘ಜೈ ಕರ್ನಾಟಕ’ ಎಂದು ಬರೆದಿದ್ದಾರೆ. ಅಲ್ಲದೇ, ಚಾಲಕನಿಗೆ ಕನ್ನಡ ಧ್ವಜ ಹಿಡಿಸಿ, ಜೈ ಕರ್ನಾಟಕ ಎಂದು ಘೋಷಣೆ ಹಾಕಿಸಿದ್ದಾರೆ. ಇದನ್ನೂ ಓದಿ: ತಡರಾತ್ರಿ ತಲ್ವಾರ್ ಝಳಪಿಸುತ್ತ ವ್ಹೀಲಿಂಗ್ ಮಾಡಿದ್ದ ಪುಂಡರ ಮೇಲೆ ರೌಡಿಶೀಟ್
ಫೆ.22 ರಂದು ರಾತ್ರಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಗೂಂಡಾ ವರ್ತನೆ ತೋರಿದ್ದರು. ನಡುರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಮಸಿ ಬಳಿದಿದ್ದರು. ಮರಾಠಿಗರ ಈ ವರ್ತನೆಗೆ ಬಾಗಲಕೋಟೆ ಜನರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?
ಬಾಗಲಕೋಟೆ: ಹೆಣ್ಣು ಸಿಗಲಿಲ್ಲ ಎಂಬ ಕೊರಗಿನಲ್ಲಿದ್ದ ವ್ಯಕ್ತಿಗೆ ಮದುವೆ ಮಾಡಿಸಿ ಲಕ್ಷಾಂತರ ಹಣ ಪಡೆದು ಬ್ರೋಕರ್ ವಂಚಿಸಿರುವ ಘಟನೆ ನಡೆದಿದೆ. ಮದುವೆ ಬಳಿಕ ಬ್ರೋಕರ್ ಮತ್ತು ವಿವಾಹವಾದ ಹೆಣ್ಣು ಇಬ್ಬರೂ ಪರಾರಿಯಾಗಿದ್ದಾರೆ.
ಈಗಾಗಲೇ ಎರಡು ಮದುವೆಯಾಗಿದ್ದ ಶಿವಮೊಗ್ಗದ ಮಹಿಳೆ ಮಂಜುಳಾನ್ನ ಕರೆತಂದು ಬ್ರೋಕರ್ ಟೀಂ ಮದುವೆ ಮಾಡಿಸಿತ್ತು. ಇತ್ತ ಹೆಣ್ಣಿಗಾಗಿ ಅಲೆದಾಡುತ್ತಿದ್ದ ಸೋಮಶೇಖರನನ್ನ ಟಾರ್ಗೆಟ್ ಮಾಡಿದ್ದರು. ಹೆಣ್ಣು ಕೊಡಿಸ್ತೀವಿ ಅಂತ ಹೇಳಿ 4 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಹೆಣ್ಣು ಸಿಗದೇ ಕೊನೆಗೆ ಸೋಮಶೇಖರ್ ಮದುವೆಗೆ ಒಪ್ಪಿಕೊಂಡಿದ್ದ.
ಬಾಗಲಕೋಟೆ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಮದುವೆ ನಡೆದಿತ್ತು. ಮದುವೆ ದಿನವೇ ಬ್ರೋಕರ್ ತಂಡವು ಪೂರ್ಣ 4 ಲಕ್ಷ ಹಣ ಪಡೆದಿತ್ತು. ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಎಸ್ಕೇಪ್ ಆಗಿದ್ದಳು. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಆಕೆಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಬ್ರೋಕರ್ ಟೀಂ ಕರೆ ತಂದಿತ್ತು. ಬ್ರೋಕರ್ ಟೀಮ್‌ಗೆ ತಾನು ನೀಡಿದ 4 ಲಕ್ಷ ಹಣ ಮರಳಿಸುವಂತೆ ಸಂತ್ರಸ್ತ ಸೋಮಶೇಖರ್, ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ತಂದೆಯನ್ನೇ ಹತ್ಯೆಗೈದು ಹೃದಯಾಘಾತದ ಕತೆಕಟ್ಟಿದ್ದ ಮಗ ಅರೆಸ್ಟ್
ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಮುಧೋಳ ಠಾಣೆ ಪೋಲಿಸರು ಮುಂದಾಗಿದ್ದಾರೆ.
ಮದುವೆ ಮಾಡಿಸಿ ಹಣ ಹೊಡೆಯಲು ಇದೊಂದು ದೊಡ್ಡ ಜಾಲವೇ ಇದೆ. ಈ ಗ್ಯಾಂಗ್ ಎಲ್ಲಿ ಕಾರ್ಯಪ್ರವೃತ್ತಿಯಾಗಿದೆ ಅಂತ ಹುಡುಕಿ ತನಿಖೆ ಮಾಡುತ್ತಿದ್ದೇವೆ. ಈ ಜಾಲದಲ್ಲಿ ಆರೋಪಿಗಳು ಬೆಳಗಾವಿ, ರಾಮದುರ್ಗ, ಶಿವಮೊಗ್ಗ, ಧಾರವಾಡ ಮೂಲದವರಿದ್ದಾರೆ. ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸುವ ಕೆಲಸ ಮಾಡುತ್ತೇವೆ. ಇವರಿಂದ ಈ ಹಿಂದೆಯೂ ಪ್ರಕರಣ ನಡೆದಿದೆ. ಎಲ್ಲವನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಾಗಲಕೋಟೆ ಎಸ್.ಪಿ.ಅಮರನಾಥ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಬಿಬಿಎಂಪಿ ಕಸದ ಲಾರಿಗೆ ಅಕ್ಕ-ತಂಗಿ ಬಲಿ
ಬಾಗಲಕೋಟೆ: ಅಂಜುಮಾನ್ ಮಸೀದಿ (Anjuman Mosque) ಮೌಲಾನಾ ಮೇಲೆ ನಾಲ್ವರು ಯುವಕರಿಂದ ಹಲ್ಲೆ ನಡೆಸಿರುವ ಆರೋಪ ಬಾಗಲಕೋಟೆಯಲ್ಲಿ (Bagalakote) ಕೇಳಿಬಂದಿದೆ.
ಬಾಗಲಕೋಟೆಯ ನವನಗರದ (Navanagara Police) ಸೆಕ್ಟರ್ ನಂ.4 ರಲ್ಲಿ ಘಟನೆ ನಡೆದಿದ್ದು, ಮೌಲಾನಾ ಮೇಲಿನ ಹಲ್ಲೆ ಖಂಡಿರಿ ನೂರಾರು ಮುಸ್ಲಿಂ ಮುಖಂಡರು ರಾತ್ರೋ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣೆಮುಂದೆ ಜಮಾಯಿಸಿದ ನೂರಾರು ಮುಸ್ಲಿಂ ಮುಖಂಡರು ಕಾರ್ತಿಕ್, ಗಣೇಶ್, ಶಿವು ಹಾಗೂ ಆದಿತ್ಯ ಎಂಬ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬೆನ್ನಲ್ಲೇ ನಾಲ್ವರು ಆರೋಪಿಗಳ (Accused) ಪೈಕಿ ಆರೋಪಿ ಕಾರ್ತಿಕ್ ಹಾಗೂ ಪ್ರೀತಮ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಸದ್ಯ ನವನಗರ ಪೊಲೀಸ್ ಠಾಣೆ ಬಳಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಪ್ರತಿಭಟನಾ ನಿರತರನ್ನ ಪೊಲೀಸರು ಚದುರಿಸಿದ್ದಾರೆ.
ಬಾಗಲಕೋಟೆ: ಬೆಳಗ್ಗೆ ಮದುವೆ (Marriage) ಮಾಡಿಕೊಂಡು ಮಧ್ಯಾಹ್ನದ ವೇಳೆಗೆ ಮಚ್ಚಿನಿಂದ ಹೊಡೆದಾಡಿಕೊಂಡು ನವಜೋಡಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ಕೋಲಾರದಲ್ಲಿ ನಡೆದಿತ್ತು. ಇದಕ್ಕೆ ವಿರುದ್ಧವೆಂಬಂತೆ ಮನೆಯವರು ಮದುವೆಗೆ ಒಪ್ಪದ ಹಿನ್ನೆಲೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ (Bagalakote) ನಡೆದಿದೆ.
ಒಂದೇ ಮರಕ್ಕೆ ನೇಣು:
ಸಚಿನ್ ದಳವಾಯಿ, ಪ್ರಿಯಾ ಮಡಿವಾಳರ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪರಸ್ಪರ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದರು. ಆದ್ರೆ ಸಚಿನ್ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಸಚಿನ್ ಪ್ರಿಯಾಳಿಗೆ ತಿಳಿಸಿದ್ದಾನೆ. ಇದರಿಂದ ಮನನೊಂದ ಪ್ರೇಮಿಗಳು ಗುರುವಾರ ರಾತ್ರಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ: ಬೆಳ್ಳಂಬೆಳಗ್ಗೆ ಉಳಿ, ಚಾಣ, ಸುತ್ತಿಗೆ ಹಿಡಿದರೆ ಕಲ್ಲು ಮಣಿಸುವುದೇ ಅವರ ನಿತ್ಯದ ಕಾಯಕ. ಕಲ್ಲು ತಂದು ಅದಕ್ಕೊಂದು ರೂಪ ಕೊಟ್ಟು ಶಿಲ್ಪಗಳನ್ನು ತಯಾರಿಸುತ್ತಾರೆ. ಲಲಿತಕಲಾ ಸೇವೆಗೆ ನೀಡುವ ಯಾವುದೇ ಸವಲತ್ತು ಸಿಕ್ಕಿಲ್ಲವಾದರೂ ತಮ್ಮ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರು ಯಾರಿರಬಹುದು ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆಯಾ? ಅವರೇ ಬಾಗಲಕೋಟೆ (Bagalakote) ಜಿಲ್ಲೆ ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮದ ಲೋಕಣ್ಣ ಬಡಿಗೇರ (Lokanna Badigera).
ಮೂರ್ತಿ ಕೆತ್ತನೆಗೆ ಆಸಕ್ತಿ, ತಾಳ್ಮೆ, ಏಕಾಗ್ರತೆ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆ ದಿನದ ಶ್ರಮ ಸಂಪೂರ್ಣ ವ್ಯರ್ಥ. ಆದರೂ ಕಲೆಯನ್ನೇ (Art) ನಂಬಿ ಜೀವನ ನಡೆಸುತ್ತಿದೆ ಲೋಕಣ್ಣ ಬಡಿಗೇರ ಕುಟುಂಬ. ತಾತ-ಮುತ್ತಾತಂದಿರ ಕಾಲದಿಂದಲೂ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಶಿಲ್ಪಕಲಾ ಕ್ಷೇತ್ರದಲ್ಲಿ ನೈಪುಣ್ಯ ಮೈಗೂಡಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತ ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಲ್ಪಕಲಾ ಅಕಾಡೆಮಿಗಳಿಂದ ಸಹಾಯ ಕೋರಿದ್ದಾರೆ.
ನೋಡುಗರ ಕಣ್ಣಿಗೆ ಬರೀ ಕಲ್ಲು ಕಂಡರೆ, ಶಿಲ್ಪಿಯ (Sculptor) ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನು ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಕಲ್ಲನ್ನು ಕೆತ್ತಿ ಸುಂದರ ಶಿಲ್ಪವನ್ನು ರೂಪಿಸುತ್ತಾರೆ.
ದಿನಕ್ಕೆ 2 ತಾಸು ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತಾರೆ. 1 ಮೂರ್ತಿ ರೂಪುಗೊಳ್ಳಲು ಎರಡರಿಂದ ನಾಲ್ಕು ತಿಂಗಳು ಸಮಯ ಹಿಡಿಯುತ್ತದೆ. 2 ಇಂಚಿನ ಮೂರ್ತಿಯಿಂದ, 9 ಅಡಿ ಉದ್ದದ ಮೂರ್ತಿಯವರೆಗೂ ಶಿಲ್ಪ ಕೆತ್ತನೆ ಮಾಡುತ್ತಾರೆ.
ಕಲಾವಿದ ಲೋಕಣ್ಣ ಬಡಿಗೇರ ಅವರ ಕಲಾಕುಸುರಿಯಿಂದ ಶಿವ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ, ವಾಲ್ಮೀಕಿ ಮೂರ್ತಿಗಳು, ಸಿದ್ಧಾರೊಢ, ಶಿವಾಜಿ, ವೀರಭದ್ರೇಶ್ವರ, ಗಣಪತಿ, ಬುದ್ಧ, ಬಸವ ಸೇರಿದಂತೆ ದೇವಸ್ಥಾನದ ದ್ವಾರಗಳು ಸಿದ್ಧಗೊಂಡಿವೆ. ಇವರ ಕೈಯಿಂದ ಅರಳಿದ ಕಲಾಕೃತಿಗಳು ಹೈದರಾಬಾದ್, ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಮಾರಾಟವಾಗಿವೆ. ಮುಂಗಡವಾಗಿ ಬೇಡಿಕೆ ಸಲ್ಲಿಸಿ ಜನರು ಮೂರ್ತಿಗಳನ್ನು ಕೆತ್ತಿಸಿಕೊಳ್ಳಬಹುದಾಗಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವಕರ್ಮ ಶಿಲ್ಪಕಲಾವಿದ ಲೋಕಣ್ಣ ಬಡಿಗೇರ, ತನಗೆ ಶಿಲ್ಪಕಲೆ ಬಿಟ್ಟು ನನಗೆ ಬೇರೆ ಗೊತ್ತಿಲ್ಲ. ಈ ಕಲೆಯೇ ಜೀವನಾಧಾರ. 20 ವರ್ಷಗಳಿಂದ ನಾನು ಶಿಲ್ಪಕಲೆ ಮತ್ತು ಕ್ಲೇ ಮೋಡ್ಲಿಂಗ್ (ಮಣ್ಣಿನ ಮೂರ್ತಿ) ಮಾಡುತ್ತಿದ್ದೇನೆ. ಈ ಶಿಲ್ಪಕಲೆ ನಮ್ಮ ಅಜ್ಜಿ ಮುತ್ತಜ್ಜನ ಕಾಲದಿಂದಲೂ ತಂದೆ ಮಾಡಿಕೊಂಡು ಬರುತ್ತಿದ್ದ ಕೆಲಸ ಮುಂದುವರಿಸಿಕೊಂಡು ಬಂದಿದ್ದೇವೆ. 20 ವರ್ಷದಲ್ಲಿ ಸಾವಿರಾರು ಮೂರ್ತಿ ಕೆತ್ತನೆ ಮಾಡುವುದರ ಮೂಲಕ ಜನಮನ ಗಳಿಸಿದ್ದೇನೆ. ಜನರು ಬಂದು ತಮ್ಮಿಷ್ಟದ ಮೂರ್ತಿ ಮಾಡಿಸಿಕೊಂಡು ಹೋಗ್ತಾರೆ. ಆದ್ರೆ, ಇಷ್ಟೇ ಹಣ ಕೊಡಬೇಕು ಎಂದು ಯಾರಿಗೂ ಒತ್ತಾಯಿಸುವುದಿಲ್ಲ. ಅವರು ನೀಡುವ ಹಣದಲ್ಲಿಯೇ ಸಂತೃಪ್ತ ಜೀವನ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಆದರೀಗ ಕಲ್ಲಲ್ಲಿ ಕಲೆಯನ್ನು ಅರಳಿಸುವ ಕಲಾವಿದನಿಗೆ ಸರ್ಕಾರದ ನೆರವು ಬೇಕಿದೆ. ಲೋಕಣ್ಣ ಬಡಿಗೇರ ಅವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂಬುದು ಕಲಾಪ್ರಿಯರ ಒತ್ತಾಸೆ.
ಬಾಗಲಕೋಟೆ: ಅಯೋಧ್ಯೆ (Ayodhya) ರಾಮಮಂದಿರ (Rama Mandir) ಮಂಡಲರಾಧನೆ ಪೂಜೆಗೆ ಜಿಲ್ಲೆಯ ಮುಧೋಳ (Mudhol) ನಗರದ ಅರ್ಚಕರನ್ನು ಆಯ್ಕೆ ಮಾಡಲಾಗಿದೆ.
ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿಯಾದ ಗುರುನಾಥ ಜೋಷಿ (Gurunath Joshi) ಅವರು ರಾಮಮಂದಿರದ ಮಂಡಲರಾಧನೆ ಆಯ್ಕೆಯಾಗಿದ್ದಾರೆ. ಸದ್ಯ ಮೂಧೋಳ ನಗರದಲ್ಲಿ ವಾಸವಿದ್ದಾರೆ. ಇವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಶುಕ್ಲ ಯಜುರ್ವೇದ ಅಧ್ಯಯನವನ್ನು ಮಾಡಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳ ಮೂಲಕ ಜೋಷಿಯವರು ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಪಲ್ಸ್ ಪೋಲಿಯೋ ಯಾವಾಗ? – ಗೊಂದಲಕ್ಕೆ ಒಳಗಾಗಿದ್ದ ಪೋಷಕರಿಗೆ ಗುಡ್ ನ್ಯೂಸ್
ಜೋಷಿಯವರು ಪ್ರಸ್ತುತ ಮುಧೋಳ ನಗರದಲ್ಲಿ ಸದ್ಗುರು ಶ್ರೀ ಚಿದಂಬರ ವೈದಿಕ ಜ್ಯೋತಿಷ್ಯಾಲಯವನ್ನು ನಡೆಸುತ್ತಿದ್ದಾರೆ. ಮೂಲತಃ ಅರ್ಚಕ ವೃತ್ತಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ಈ ಹಿಂದೆ ನಗರದ ಸಾಯಿ ಬಾಬಾ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು. ಇದನ್ನೂ ಓದಿ: ನಿಮಗೆ ಕೊಟ್ಟ ಕೆಲಸ ಮಾತ್ರ ಪೂರ್ಣ ಮಾಡಿ – ಟಾರ್ಗೆಟ್ 28 ಗೆಲ್ಲಲು ಶಾ ಕ್ಲಾಸ್
ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಓರ್ವ ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಹೊನಗನಳ್ಳಿ ಮೂಲದ ನಾಲ್ವರು ಸವದತ್ತಿ ಯಲ್ಲಮ್ಮ ದರ್ಶನಕ್ಕೆ ಹೋಗಿ ಬರುತ್ತಿದ್ದ ವೇಳೆ ಅನಗವಾಡಿ ಗ್ರಾಮದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಘಟನೆ ನಡೆದಿದೆ.
ಬಾಗಲಕೋಟೆ: ಬೀಳಗಿ ಪಟ್ಟಣದಲ್ಲಿ ದೇಶ ಕಾಯುವ ಸೈನಿಕ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದಾರೆ. ಮದುವೆ ಮಂಟಪದಲ್ಲೇ ಹುತಾತ್ಮ ಯೋಧರ ಪತ್ನಿಯರು, ನಿವೃತ್ತ ಸೈನಿಕರು ಹಾಗೂ ಯುದ್ಧದಲ್ಲಿ ಗಾಯಗೊಂಡ ಯೋಧರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಬೀಳಗಿ ಪಟ್ಟಣ ನಿವಾಸಿಯಾಗಿರುವ ಸಂತೋಷ್ ಭಾವಿಕಟ್ಟಿ ಸೇನಾ ಯೋಧ, ಗುರುವಾರ ಜರುಗಿದ ತಮ್ಮ ಮದುವೆ ಸಮಾರಂಭದಲ್ಲಿ ಹುತಾತ್ಮ ಯೋಧರ ಧರ್ಮಪತ್ನಿಯರು, ಯುದ್ದದಲ್ಲಿ ಗಾಯಾಳು ಆಗಿರುವ ಸೈನಿಕರು, ನಿವೃತ್ತ ಸೈನಿಕರನ್ನು ಸನ್ಮಾನಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ
ಶೃತಿ ಎಂಬ ಯುವತಿಯ ಕೈಹಿಡಿದ ಯೋಧ ಸಂತೋಷ್, ಬೀಳಗಿ ಪಟ್ಟಣದ ಹೊರವಲಯದ ಸಿದ್ದೇಶ್ವರ ದೇವಸ್ಥಾನದಲ್ಲಿ ಮದುಯಾಗಿದ್ದಾರೆ. ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯ ಮಂತ್ರಗಳ ಜೊತೆ ‘ಬೋಲೋ ಭಾರತ್ ಮಾತಾಕೀ ಜೈ… ಇಂಡಿಯನ್ ಆರ್ಮಿಗೆ ಜೈ’ ಎಂಬ ಘೋಷಣೆಗಳು ಮೊಳಗಿದ್ದು ವಿಶೇಷವಾಗಿತ್ತು.
ಸಂತೋಷ್ ಬಾವಿಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೊಂದಿರುವ ಸೇನಾ ಯೋಧರಾಗಿದ್ದು, ದೇಶಭಕ್ತಿ ಹಾಗೂ ವಿವಿಧ ವಿಷಯದ ಬಗ್ಗೆ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಯೋಧ ಸಂತೋಷ್ ತಮ್ಮ ಮದುವೆಯಲ್ಲಿ ಪುಲ್ವಾಮಾ, ಸಿಯಾಚಿನ್ ಪ್ರದೇಶದಲ್ಲಿ ಹುತಾತ್ಮ ಯೋಧರ ಪತ್ನಿಯರನ್ನು ಸನ್ಮಾನಿಸುವ ಕನಸು ಹೊತ್ತಿದ್ದರು. ಅದರಂತೆ ಸೈನಿಕರು ಹಾಗೂ ಸೈನಿಕರ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ: ವಿಜಯಪುರದ ನಡು ರಸ್ತೆಯಲ್ಲೇ ಹೊತ್ತಿ ಉರಿದ ಜನತಾ ಬಸ್ – ತಪ್ಪಿದ ಭಾರೀ ಅನಾಹುತ
ತಮ್ಮ ಮದುವೆಗೆ ಸಿಯಾಚಿನ್ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಪತ್ನಿ ಮಹಾದೇವಿ ಕೊಪ್ಪದ, ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ, ಕಾರ್ಗಿಲ್ ಯುದ್ದದ ಗಾಯಾಳು ಯೋಧ ರಂಗಪ್ಪ ಆಲೂರು, ಪುಲ್ವಾಮಾ ಹುತಾತ್ಮ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರ ಪತ್ನಿ ಸಂಗೀತಾ ಬೊಮ್ಮನಹಳ್ಳಿ ಸೇರಿದಂತೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ಎಂಟು ಮಂದಿಯನ್ನು ಸನ್ಮಾನಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಿವೃತ್ತ ಯೋಧರು, ಹುತಾತ್ಮ ಯೋಧರ ಕುಟುಂಬದವರನ್ನ ಸಾಮಾನ್ಯವಾಗಿ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮಾತ್ರ ನೆನಪು ಮಾಡಿಕೊಳ್ಳುತ್ತಾರೆ. ಆದರೆ, ಸಂತೋಷ್ ತನ್ನ ಜೀವನದ ಸಂತೋಷದ ಗಳಿಗೆಗೆ ನಮ್ಮನ್ನೆಲ್ಲ ಕರೆದು ಸನ್ಮಾನಿಸಿ, ಗೌರವಿಸಿದ್ದಾರೆ. ತಮ್ಮ ಕುಟುಂಬದ ಸಂಭ್ರಮದಲ್ಲಿ ನಮ್ಮನ್ನು ಭಾಗಿ ಆಗುವಂತೆ ಮಾಡಿದ್ದಾನೆ. ಅವರ ದಾಂಪತ್ಯ ಜೀವನ ಚೆನ್ನಾಗಿ ಸಾಗಲಿ ಎಂದು ಹಾರೈಸಿದ್ದಾರೆ.