Tag: badminton player saina nehwal

  • ನಟ ಅಕ್ಷಯ್, ಆಟಗಾರ್ತಿ ಸೈನಾಗೆ ಮಾವೋವಾದಿಗಳಿಂದ ಎಚ್ಚರಿಕೆ!

    ನಟ ಅಕ್ಷಯ್, ಆಟಗಾರ್ತಿ ಸೈನಾಗೆ ಮಾವೋವಾದಿಗಳಿಂದ ಎಚ್ಚರಿಕೆ!

    ರಾಯ್‍ಪುರ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‍ಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ.

    ಸುಕ್ಮಾದಲ್ಲಿ ನಕ್ಸಲರ ದಾಳಿಯಿಂದ ಹುತಾತ್ಮರಾದ ಸಿಆರ್‍ಪಿಎಫ್ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಕ್ಕಾಗಿ ಈ ಇಬ್ಬರಿಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದು, ಈ ಪತ್ರಗಳನ್ನು ಬಸ್ತರ್, ಛತ್ತೀಸ್‍ಘಡ ಮೊದಲಾದ ಕಡೆಗಳಲ್ಲಿ ಹಂಚಿದ್ದಾರೆ. ಸಲೆಬ್ರಿಟಿಗಳು ಹಾಗೂ ಪ್ರಖ್ಯಾತರು ತುಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಪರ ನಿಲ್ಲಬೇಕು ಹಾಗೂ ಅವರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಧ್ವನಿಯೆತ್ತಬೇಕು ಎಂದು ಪತ್ರದಲ್ಲಿ ಮಾವೋವಾದಿಗಳು ಹೇಳಿದ್ದಾರೆ.

    ಅಕ್ಷಯ್ ಕುಮಾರ್ ಹಾಗೂ ಸೈನಾ ಯೋಧರ ಪರವಾಗಿ ನಿಲ್ಲಬಾರದಿತ್ತು ಎಂದು ಈ ಪತ್ರದಲ್ಲಿ ಹೇಳಲಾಗಿದೆ.

    ಕಳೆದ ಮಾರ್ಚ್ ನಲ್ಲಿ ಸುಕ್ಮಾದಲ್ಲಿ ಮಡಿದ 12 ಮಂದಿ ಯೋಧರ ಕುಟುಂಬಕ್ಕೆ ನಟ ಅಕ್ಷಯ್ ಕುಮಾರ್ ತಲಾ 9 ಲಕ್ಷ ರೂ. ಹಣವನ್ನು ನೀಡಿದ್ದರು. ಅಲ್ಲದೇ ಹುತಾತ್ಮರ ಕುಟುಂಬಕ್ಕೆ ದೇಶದ ನಾಗರಿಕರು ನೇರವಾಗಿ ಆರ್ಥಿಕ ಸಹಾಯ ಮಾಡಬಹುದಾದ ‘Bharatkeveer.com’ ಎಂಬ ಸರ್ಕಾರಿ ಪೋರ್ಟಲ್‍ಗೆ ಚಾಲನೆ ನೀಡಿದ್ದರು.

    ಇವರ ಬಳಿಕ ಅಟಗಾರ್ತಿ ಸೈನಾ ಕೂಡ ಯೋಧರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಿದ್ದರು. ಸೈನಾ 12 ಯೋಧರ ಕುಟುಂಬಕ್ಕೆ ತಲಾ 50,000 ರೂ. ಪರಿಹಾರ ಧನವನ್ನು ನೀಡಿದ್ದರು.