Tag: Badlapur

  • Badlapur Encounter | ಆರೋಪಿ ತಲೆಗೆ ಗುಂಡಿಟ್ಟಿದ್ದು ಏಕೆ? – ಪ್ರಕರಣ ಟೈಮ್‌ಲೈನ್ ಕೊಡುವಂತೆ ʻಹೈʼಸೂಚನೆ!

    Badlapur Encounter | ಆರೋಪಿ ತಲೆಗೆ ಗುಂಡಿಟ್ಟಿದ್ದು ಏಕೆ? – ಪ್ರಕರಣ ಟೈಮ್‌ಲೈನ್ ಕೊಡುವಂತೆ ʻಹೈʼಸೂಚನೆ!

    ಮುಂಬೈ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಎನ್‌ಕೌಂಟರ್‌ (Badlapur Encounter) ಆಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬದ್ಲಾಪುರ ಪ್ರಕರಣದ 24 ವರ್ಷದ ಆರೋಪಿ ಅಕ್ಷಯ್ ಶಿಂಧೆಯ (Akshay Shinde) ಕಸ್ಟಡಿ ಸಾವಿಗೆ ಕಾರಣವಾದ ಸನ್ನಿವೇಶಗಳ ಅಂಶಗಳ ಕುರಿತು ಪೊಲೀಸರಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದೆ.

    ನಕಲಿ ಎನ್‌ಕೌಂಟರ್‌ನಲ್ಲಿ ತಮ್ಮ ಮಗನನ್ನು ಹತ್ಯೆ ಮಾಡಲಾಗಿದ್ದು, ವಿಶೇಷ ತನಿಖಾ ತಂಡದಿಂದ ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಆರೋಪಿ ಅಕ್ಷಯ್ ಶಿಂಧೆಯ ತಂದೆ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಹೈಕೋರ್ಟ್ (Bombay High Court) ಬುಧವಾರ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಬಿಜೆಪಿ ಅನೈತಿಕ ರಾಜಕೀಯ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಕೇಜ್ರಿವಾಲ್ ಐದು ಪ್ರಶ್ನೆ

    ಬದ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಅಕ್ಷಯ್ ಶಿಂಧೆ, ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಬಂಧಿತನಾಗಿದ್ದ. ಆತನನ್ನು ಸೋಮವಾರ ತಲೋಜಾ ಜೈಲಿಗೆ ಕರೆದೊಯ್ಯುವಾಗ, ಪೊಲೀಸರೊಬ್ಬರ ಪಿಸ್ತೂಲು ಕಿತ್ತುಕೊಂಡು ಗುಂಡು ಹಾರಿಸಿದ್ದ. ಘಟನೆಯಲ್ಲಿ ಸಹಾಯಕ ಇನ್‌ಸ್ಪೆಕ್ಟರ್ ಒಬ್ಬರು ಗಾಯಗೊಂಡಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಅಕ್ಷಯ್ ಶಿಂಧೆ ಸತ್ತುಹೋಗಿದ್ದ.

    ಅಣ್ಣಾ ಶಿಂಧೆ ಪರ ವಕೀಲರ ವಾದ ಏನು?
    ಘಟನೆ ನಡೆದ ಹಿಂದಿನ ದಿನವಷ್ಟೇ ಆರೋಪಿಯನ್ನು ಆತನ ಪೋಷಕರು ಭೇಟಿ ಮಾಡಿದ್ದರು. ಪೊಲೀಸರು ಹೇಳುವಂತೆ ಅಂತಹ ಕೃತ್ಯ ಎಸಗುವ ಯಾವುದೇ ಮಾನಸಿಕ ಬದಲಾವಣೆ ಆತನಲ್ಲಿ ಕಂಡುಬಂದಿರಲಿಲ್ಲ ಎಂದು ಅರ್ಜಿದಾರ ಅಣ್ಣಾ ಶಿಂಧೆ ಅವರ ಪರ ವಕೀಲರು, ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠದ ಎದುರು ವಾದಿಸಿದರು. ಇದನ್ನೂ ಓದಿ: ಭಾಷಣದ ವೇಳೆ ಯಡವಟ್ಟು – ಕಾಶ್ಮೀರಿ ಪಂಡಿತರಿಗೆ ಬದಲಾಗಿ ʻಪಾಕ್‌ ಆಕ್ರಮಿತ ಕಾಶ್ಮೀರʼದಿಂದ ಬಂದ ನಿರಾಶ್ರಿತರು ಎಂದ ರಾಗಾ

    ಹಾಲಿ ಪ್ರಕರಣದಲ್ಲಿ ಯಾರು ಅಪರಾಧಿ ಎಂದು ಪೊಲೀಸರೇ ನಿರ್ಧರಿಸುತ್ತಿದ್ದಾರೆ. ಕಾನೂನಿನ ನಿಯಮ ಪಾಲನೆಯಾಗಬೇಕಿತ್ತು. ಇಂತಹ ಎನ್‌ಕೌಂಟರ್ ನಡೆಸಲು ಪೊಲೀಸರಿಗೆ ಉತ್ತೇಜನ ನೀಡುವುದು ಕೆಟ್ಟ ಉದಾಹರಣೆ. ಶಿಂಧೆ ಸಾವಿನ ಕುರಿತು ಕೋರ್ಟ್ ನಿಗಾವಣೆಯಲ್ಲಿ ತನಿಖೆ ನಡೆಯಬೇಕು ಎಂದು ವಕೀಲರು ಪ್ರಬಲ ವಾದ ಮಂಡನೆ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ತನಿಖೆಯಾಗಬೇಕು – ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮೋದಿ ಆಗ್ರಹ

    ಸಾವಿಗೆ ಕಾರಣ ಏನು ಎಂದು ಕೋರ್ಟ್ ಪ್ರಶ್ನಿಸಿದಾಗ, ಎಡ ತೊಡೆಯ ಬಳಿ ಗುಂಡೇಟಿನ ಗಾಯವಾಗಿರುವುದು ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಪೊಲೀಸರಿಂದ ಶಿಂಧೆ ಕಸಿದುಕೊಂಡ ಪಿಸ್ತೂಲನ್ನು ಎರಡು ರೀತಿಗಳಲ್ಲಿ ಅನ್‌ಲಾಕ್ ಮಾಡಿರಬಹುದು. ಮೇಲಿನ ಭಾಗವನ್ನು ಎಳೆದ ಆರೋಪಿ, ಸ್ಲೈಡರ್ ಎಳೆದಿರಬಹುದು. ಆಗ ಅದು ತೆರೆದುಕೊಂಡಾಗ ಗುಂಡು ಹಾರಿಸಿರಬಹುದು ಎಂದು ವಕೀಲರು ಹೇಳಿದರು. ಇದನ್ನೂ ಓದಿ: ಯುಪಿ ಬಳಿಕ ಹಿಮಾಚಲದಲ್ಲೂ ಆಹಾರ ಮಳಿಗೆಗಳ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ!

    ಉಳಿದ ಎರಡು ಗುಂಡುಗಳು ಎಲ್ಲಿ?
    ಆದರೆ ಇದರಿಂದ ಕೋರ್ಟ್ ತೃಪ್ತವಾಗಲಿಲ್ಲ. ಇದನ್ನು ನಂಬಲಿಕ್ಕಷ್ಟೇ ಕಷ್ಟವಾಗುತ್ತದೆ. ಪಾಪ್‌ ಕಡೆಗೆ ಸ್ಲೈಡರ್ ಎಳೆಯಲು ಸಾಕಷ್ಟು ಶಕ್ತಿ ಬೇಕು. ಪರಿಣತಿ ಇಲ್ಲದ ವ್ಯಕ್ತಿಯು ತರಬೇತಿ ಹೊಂದದ ಹೊರತು ಪಿಸ್ತೂಲಿನಿಂದ ಗುಂಡು ಹಾರಿಸಲಾರ. ರಿವಾಲ್ವರ್ ವಿಭಿನ್ನ. ನಿಮ್ಮ ಪ್ರಕಾರ, ಆತ ಮೂರು ಬುಲೆಟ್‌ಗಳನ್ನು ಹಾರಿಸಿದ್ದಾನೆ. ಒಂದು ಮಾತ್ರವೇ ಪೊಲೀಸ್ ಅಧಿಕಾರಿಗೆ ತಗುಲಿದೆ. ಹಾಗಾದರೆ ಉಳಿದ ಎರಡು ಗುಂಡುಗಳು ಎಲ್ಲಿ? ಎಂದು ಕೋರ್ಟ್ ಪ್ರಶ್ನಿಸಿತು.

    ಆರೋಪಿಯ ಮೊಣಕಾಲಿನ ಕೆಳಗೆ ಗುಂಡು ಹಾರಿಸಬಹುದಿತ್ತು ಎಂದು ಕೋರ್ಟ್ ಹೇಳಿದಾಗ, ಆತನಿಗೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಗೆ ಅಷ್ಟೆಲ್ಲಾ ಆಲೋಚನೆ ಮಾಡುವಷ್ಟು ಸಮಯ ಇರಲಿಲ್ಲ ಎಂದು ಸರ್ಕಾರಿ ಪರ ವಕೀಲರು ಪ್ರತಿಕ್ರಿಯಿಸಿದರು. ಆರೋಪಿಯ ಮೇಲೆ ಪೊಲೀಸರು ಬಲ ಪ್ರಯೋಗಿಸಿಲ್ಲ ಎಂದು ನಾವು ನಂಬುವುದು ಹೇಗೆ? ಎಂದು ಕೋರ್ಟ್ ಪ್ರಶ್ನಿಸಿತು. ಅಲ್ಲದೇ ಆತ ಭಾರಿ ತೂಕದ ಆಸಾಮಿಯಂತೇನೂ ಕಾಣಿಸುವುದಿಲ್ಲ. ಇದನ್ನು ಎನ್‌ಕೌಂಟರ್ ಎಂದು ಕರೆಯಲು ಸಾಧ್ಯವಿಲ್ಲ. ಇದು ಎನ್‌ಕೌಂಟರ್ ಅಲ್ಲ ಎಂದು ಹೇಳಿತು.

    ಮುಂದುವರಿದು, ಅಕ್ಷಯ್ ಶಿಂಧೆ ಸಾವಿಗೆ ಕಾರಣವಾದ ಸಂಪೂರ್ಣ ಟೈಮ್‌ಲೈನ್‌ನಲ್ಲಿ ವ್ಯತ್ಯಾಸಗಳಿವೆ ಎಂಬುದನ್ನು ಕೋರ್ಟ್‌ ಗಮನಿಸಿದೆ. ಘಟನೆಯ ಸಮಯದಲ್ಲಿ ಪೊಲೀಸ್ ವ್ಯಾನ್‌ನಲ್ಲಿದ್ದ ಎಲ್ಲಾ ಐದು ಜನರ ದೂರವಾಣಿ ಕರೆ ದಾಖಲೆಗಳನ್ನು ಕೇಳಿದೆ. ಶಿಂಧೆ ಬ್ಯಾರಕ್‌ನಿಂದ ಹೊರಬಂದು ವ್ಯಾನ್‌ಗೆ ಪ್ರವೇಶಿಸಿದಾಗಿನಿಂದ ಅವರ ದೇಹವನ್ನು ಆಸ್ಪತ್ರೆಗೆ ತಲುಪುವವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದೆ.

  • ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು

    ನನ್ನ ಮಗ ಪಟಾಕಿ ಹಾರಿಸಲು ಹೆದರುತ್ತಿದ್ದ, ಗುಂಡು ಹಾರಿಸಲು ಸಾಧ್ಯವೇ – ಮೃತ ರೇಪ್ ಆರೋಪಿಯ ತಾಯಿ ಕಣ್ಣೀರು

    ಮುಂಬೈ: ಬದ್ಲಾಪುರದಲ್ಲಿ (Badlapur) ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಅಕ್ಷಯ್ ಶಿಂಧೆಯನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಪೊಲೀಸರ ಈ ನಡೆಯನ್ನು ಆರೋಪಿ ತಾಯಿ ಮತ್ತು ಸಹೋದರ ಅಲ್ಕಾ ಶಿಂಧೆ ತೀವ್ರವಾಗಿ ಖಂಡಿಸಿದ್ದಾರೆ.

    ಪೊಲೀಸರ ಎನ್‌ಕೌಂಟರ್ ಕುರಿತು ಮಾತನಾಡಿರುವ ಮೃತ ಆರೋಪಿ ತಾಯಿ, ಪೊಲೀಸರು ನನ್ನ ಮಗನನ್ನು ಕೊಂದಿದ್ದಾರೆ. ಈ ಸಂಬಂಧ ಶಾಲೆಯ ಆಡಳಿತ ಮಂಡಳಿಯನ್ನೂ ತನಿಖೆ ಮಾಡಬೇಕು ಎಂದು ಆರೋಪಿಯ ತಾಯಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಪ್ರಸಾದದಲ್ಲಿ ಗುಟ್ಕಾ ಪತ್ತೆ – ಭಕ್ತೆಯಿಂದ ಆರೋಪ!

    ಪೊಲೀಸರು ನನ್ನ ಮಗನ ಹೇಳಿಕೆ ದಾಖಲಿಸುವ ಸಲುವಾಗಿ ಕರೆದುಕೊಂಡು ಹೋದರು. ಅದೇನೆಂದು ನಮಗೆ ತಿಳಿದಿಲ್ಲ. ನನ್ನ ಮಗ ಪಟಾಕಿ ಸಿಡಿಸುವುದಕ್ಕೆ ಹೆದರುತ್ತಿದ್ದ. ಹಾಗಿರುವಾಗ ಅವನು ಪೊಲೀಸರ ಮೇಲೆ ಹೇಗೆ ಗುಂಡು ಹಾರಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಝೆಲೆನ್ಸ್ಕಿ ಭೇಟಿಯಾದ ಮೋದಿ – ಶಾಂತಿಮಂತ್ರ ಪಠಿಸಿದ ಪ್ರಧಾನಿ

    ಈ ಬಗ್ಗೆ ಅಕ್ಷಯ್ ಶಿಂಧೆ ಸಹೋದರ ಅಲ್ಕಾ ಶಿಂಧೆ ಮಾತನಾಡಿ, ಹತ್ಯೆಯು ಯೋಜಿತ ಸಂಚಾಗಿದೆ. ಪೊಲೀಸರೊಂದಿಗೆ ಶಾಲಾ ಆಡಳಿತ ಮಂಡಳಿಯನ್ನೂ ತನಿಖೆ ಮಾಡಬೇಕು. ಅಲ್ಲಿಯವರೆಗೆ ನಾವು ಅಕ್ಷಯ್ ಶವವನ್ನು ಸ್ವೀಕರಿಸುವುದಿಲ್ಲ. ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾತ್ರೋ ರಾತ್ರಿ ಫೀಲ್ಡಿಗಿಳಿದು ರಸ್ತೆ ಗುಂಡಿ ಪರಿಶೀಲಿಸಿದ ಡಿಸಿಎಂ – 14,307 ರಸ್ತೆಗುಂಡಿಗಳಿಗೆ ಮುಕ್ತಿ

    ಐದು ದಿನಗಳ ಹಿಂದೆಯಷ್ಟೇ ಶಾಲೆಯ ಶೌಚಾಲಯದಲ್ಲಿ ನಾಲ್ಕು ಮತ್ತು ಐದು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಅಕ್ಷಯ್ ಶಿಂಧೆಯನ್ನ ಬಂಧಿಸಲಾಗಿತ್ತು. ಆರೋಪಿಯನ್ನು ಕರೆತರುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರ ಗನ್ ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದು ಆರೋಪಿ ಸಾವನ್ನಪ್ಪಿದ್ದ. ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆ ಪ್ರಕರಣ – ವೈದ್ಯರಿಂದ ಇಂದು ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ