ನಟ-ನಟಿಯರು ನಿರ್ದೇಶಕರ ಕೈಗೊಂಬೆಗಳು. ಪಾತ್ರಗಳಿಗೆ ತಕ್ಕಂತೆ ಬಣ್ಣ ಹಚ್ಚಿ ನಟನೆ ಮಾಡುತ್ತಾರೆ. ಪರದೆ ಮೇಲೆ ಕಣ್ಣೀರು, ನಗು, ಸಂಸಾರ ಅಂತಾ ನಿರ್ದೇಶಕರ ಅಣತಿಯಂತೆ ನಟನೆ ಮಾಡುತ್ತಾರೆ. ಆದರೆ ಈಗ ಕಿರುತೆರೆ ನಟ ನಕುಲ್ ಮೆಹ್ತಾ (Nakuul Mehta) ಅವರು ಸ್ವತಃ ತಾವು ಅನುಭವಿಸುತ್ತೀರುವ ಕಷ್ಟವನ್ನು ಹೇಳಿಕೊಂಡಿದ್ದಾರೆ. 17 ಬಾರಿ ಮದುವೆಯಾಗಿರೋದ್ದಾರೆ. ಈಗ 18ನೇ ಬಾರಿ ಮದುವೆಯಾಗುತ್ತಿರೋದ್ದರ ಬಗ್ಗೆ ನಟ ಮಾತನಾಡಿದ್ದಾರೆ.
ಬಿಟೌನ್ ಅಡ್ಡಾದಲ್ಲಿ ಲವ್, ಮದುವೆ, ಬ್ರೇಕಪ್, ಸೆಕ್ಸ್ ಎಲ್ಲವೂ ಕಾಮನ್. ತೆರೆಯ ಮೇಲಿನ ಬದುಕು ಬೇರೆ ಆದರೆ ತೆರೆಹಿಂದಿನ ಅಸಲಿ ಮತ್ತೊಂದು ರೀತಿ ಎಂದೇ ಹೇಳಬಹುದು. ಪಾತ್ರಕ್ಕಾಗಿ ತಾವು ಪಡುವ ಪಾಡನ್ನ ಈಗ ‘ಬಡೇ ಅಚ್ಚೆ ಲಗ್ತೆ ಹೇ’ (Bade Achhe Lagte Hain 2) ಸೀರಿಯಲ್ ಖ್ಯಾತಿಯ ನಕುಲ್ ಮೆಹ್ತಾ ಅವರು ಹೇಳಿದ್ದಾರೆ. 18ನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ವೀಡಿಯೋ ಮೂಲಕ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ
ಹೇ.. ಗಾಬರಿಯಾಗಬೇಡಿ! ವಾಸ್ತವವಾಗಿ, ಟಿವಿ ನಟ ನಕುಲ್ ಮೆಹ್ತಾ ಅವರು ತಮ್ಮ ಜೀವನದಲ್ಲಿ 17 ಬಾರಿ ವರ ಆಗಿದ್ದಾರೆ. ಅವರ 18ನೇ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ ತೆರೆಮೇಲೆ 17 ಬಾರಿ ಮದುವೆಯಾಗಿದ್ದೇನೆ. ನಿಜ ಜೀವನದಲ್ಲಿ 1 ಬಾರಿ ಮದುವೆಯಾಗಿದ್ದೇನೆ. ನಾನು ಎಷ್ಟು ಬಾರಿ ಅಂತ ಮದುವೆಯಾಗಲಿ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಹಿಂದಿ ಕಿರುತೆರೆ ನಟ ನಕುಲ್ ಮೆಹ್ತಾ ಅವರು ವೀಡಿಯೊದಲ್ಲಿ, ‘ಬಡೆ ಅಚ್ಚೆ ಲಗ್ತೆ ಹೇ ಸೀಸನ್ 3’ನಲ್ಲಿ ತಮ್ಮ ಮತ್ತು ದಿಶಾ ಪರ್ಮಾರ್ ಅವರ ಮದುವೆಯ ದೃಶ್ಯ ಅಂದರೆ ರಾಮ್ ಮತ್ತು ಪ್ರಿಯಾ ಅವರ ವಿವಾಹದ ದೃಶ್ಯ ಚಿತ್ರೀಕರಣ ನಡೆಯುತ್ತಿದೆ. ಮತ್ತೆ ಮತ್ತೆ ಮದುಮಗ ಎಂದು ಬೇಸರದಿಂದ ಹೇಳಿದ್ದಾರೆ. ಅದೇನೇ ಇರಲಿ, ನಕುಲ್‌ನ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅದೃಷ್ಟ ಅಂದರೆ ಹೀಗಿರಬೇಕು 18 ಬಾರಿ ಮದುವೆಯಾಗುತ್ತೀದ್ದೀರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


