Tag: badagalapura nagendra

  • ಚಾರ್ಜ್‌ಶೀಟ್‌ ಆದ್ಮೇಲೆ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ನಮ್ಮ ನಿಲುವು ತಿಳಿಸ್ತೀವಿ: ರೈತ ಸಂಘದ ರಾಜ್ಯಾಧ್ಯಕ್ಷ

    ಚಾರ್ಜ್‌ಶೀಟ್‌ ಆದ್ಮೇಲೆ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ನಮ್ಮ ನಿಲುವು ತಿಳಿಸ್ತೀವಿ: ರೈತ ಸಂಘದ ರಾಜ್ಯಾಧ್ಯಕ್ಷ

    – ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಪರ ಬಡಗಲಪುರ ನಾಗೇಂದ್ರ ಬ್ಯಾಟಿಂಗ್

    ಚಾಮರಾಜನಗರ: ಚಾರ್ಜ್‌ಶೀಟ್‌ ಆದ್ಮೇಲೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ನಮ್ಮ ಸ್ಪಷ್ಟ ನಿಲುವು ತಿಳಿಸುತ್ತೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ (Badagalapura Nagendra) ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಪ್ರಕರಣ ಸಂಬಂಧ ಪರೋಕ್ಷವಾಗಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು. ರಾಜ್ಯಪಾಲರ ನಡೆಯನ್ನು ಕೋರ್ಟ್ ಒಪ್ಪಿದೆ, ಇಲ್ಲಾ ಅಂತಾ ಹೇಳ್ತಾಯಿಲ್ಲ. ಬೇರೆ ಅರ್ಜಿಗಳನ್ನು ತೆಗೆದುಕೊಳ್ಳದೇ ಬರಿ ಈ ಅರ್ಜಿಯನ್ನ ಮಾತ್ರ ಏಕೆ ತೆಗೆದುಕೊಂಡ್ರು? ಆದರೆ ಈ ನಡೆಯಲ್ಲಿ ಕೂಡ ರಾಜಕೀಯ ದಾಳವಿದೆ. ರಾಜ್ಯದ ಲೋಕಾಯುಕ್ತ ತನಿಖೆ ಮೇಲೆ ನಂಬಿಕೆಯಿದೆ ಎಂದು ಪರೋಕ್ಷವಾಗಿ ಲೋಕಾಯುಕ್ತ ತನಿಖೆ ಪರ ಒಲವು ವ್ಯಕ್ತಪಡಿಸಿದರು. ಇದನ್ನೂ ಓದಿ: ಮುಡಾ ಸಣ್ಣ ಕೇಸ್, ಚುನಾವಣಾ ಬಾಂಡ್ ದೊಡ್ಡ ಹಗರಣ; ಪ್ರಧಾನಿಯಿಂದ ಎಲ್ಲಾ ಸಚಿವರು ಬರ್ತಾರೆ: ಶರಣಪ್ರಕಾಶ ಪಾಟೀಲ್

    ಚಾರ್ಜ್ಶೀಟ್ ಆದ ಮೇಲೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೊ ಬೇಡವೊ ಎಂಬುದರ ಬಗ್ಗೆ ನಮ್ಮ ಸ್ಪಷ್ಟ ನಿಲುವು ತಿಳಿಸುತ್ತೇವೆ. ಯಾವುದೇ ರಾಜ್ಯ ತನಿಖಾ ಸಂಸ್ಥೆಗಳು ರಿಪೋರ್ಟ್ನಲ್ಲಿ ಸತ್ಯಾಂಶವನ್ನ ಮುಚ್ಚಿ ಹಾಕಲು ಸಾದ್ಯವಿಲ್ಲ ಎಂದು ತಿಳಿಸಿದರು.

    ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ವಿಚಾರವಾಗಿ ಮಾತನಾಡಿ, ಅದು ಕೂಡ ತನಿಖೆಯಾಗಬೇಕು. ಅವರನ್ನು ನಾವು ರಾಜೀನಾಮೆ ನೀಡಿ ಎಂದು ಕೇಳಲ್ಲ. ಬಾಂಡ್‌ಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅವ್ಯವಹಾರ ಮಾಡುತ್ತವೆ. ಅಧಿಕಾರದಲ್ಲಿ ಇರುವ ಪಕ್ಷ ಹೆಚ್ಚು ಬಾಂಡ್ ತೆಗೆದುಕೊಳ್ಳುತ್ತದೆ. ವಿರೋಧ ಪಕ್ಷಗಳಿಗೆ ಕಡಿಮೆ ಸಿಗುತ್ತೆ. ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡಂತೆ ಎಲ್ಲಾ ಪಕ್ಷಗಳು ಕಾರ್ಪೊರೇಟ್‌ಗಳಿಂದ ನೆರವು ಪಡೆದುಕೊಳ್ಳುತ್ತವೆ. ಆದ್ದರಿಂದ ಎಲ್ಲಾ ಪಕ್ಷಗಳು ಕಾರ್ಪೊರೇಟ್ ಕಂಪನಿಗಳ ಪರ ಇರುತ್ತವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಎಲ್ಲ ಪಕ್ಷಗಳೂ ಪಾರದರ್ಶಕವಾಗಿರಬೇಕು. ನಿರ್ಮಲಾ ಸೀತಾರಾಮನ್ ಆಗಿರಬಹುದು, ವಿಜಯೇಂದ್ರ ಆಗಿರಬಹುದು ಎಲ್ಲರ ವಿರುದ್ಧ ಇರುವ ದೂರುಗಳು ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಈ ಬ್ಲ್ಯಾಕ್‌ಮೇಲರ್ ಹೇಗೆ ಲೂಟಿ ಮಾಡಿದ್ದಾನೆ ಅಂತಾ ಹೇಳಿದ್ದೀನಿ: ಎಡಿಜಿಪಿ ಚಂದ್ರಶೇಖರ್ ವಿರುದ್ಧ ಹೆಚ್‌ಡಿಕೆ ಕಿಡಿ

  • ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಧಾರವಾಡ: ಕಾಂಗ್ರೆಸ್‍ನಲ್ಲಿ ಈಗಲೇ ಹತ್ತಿಪ್ಪತ್ತು ಜನ ಸಿಎಂ ಸೂಟ್‍ಗೆ ಆರ್ಡರ್ ಕೊಟ್ಟಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪೂರ ನಾಗೇಂದ್ರ ಲೇವಡಿ ಮಾಡಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಣೆ ಮಾಡುತ್ತಿಲ್ಲ, ಕಾಂಗ್ರೆಸ್‍ನ ಹತ್ತಿಪ್ಪತ್ತು ಜನ ಸಿಎಂ ಸೂಟ್‍ಗೆ ಆರ್ಡರ್ ಕೊಟ್ಟಿದ್ದಾರೆ. ಏಕೆಂದರೆ ಸಿಎಂ ಆದ ಮೇಲೆ ಅವರು ಪ್ರಮಾಣ ವಚನ ಸ್ವೀಕರಿಸಲು ಡ್ರೆಸ್ ಹಾಕಿಕೊಳ್ಳಬೇಕಲ್ವಾ ಎಂದಿದ್ದಾರೆ.

    ಜನ ಬಹುಮತವನ್ನೇ ಕೊಟ್ಟಿಲ್ಲ, ಆದರೂ 10 ರಿಂದ 20 ಜನ ಸಿಎಂ ಕನಸು ಹೊತ್ತಿದ್ದಾರೆ. ಚುನಾವಣೆ ಇನ್ನೂ ಎರಡು ವರ್ಷ ಇದೆ. ಆಗಲೇ ಮುಂಬೈ, ಮೈಸೂರು, ದೆಹಲಿ, ಬೆಂಗಳೂರು, ಕೋಲ್ಕತಾದ ಟೇಲರ್ ಅಂಗಡಿಗೆ ಸೂಟ್ ಆರ್ಡರ್ ಕೊಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ, ಜನರ ಸಮಸ್ಯೆಗೆ ಸ್ಪಂದಿಸುವ ವಿರೋಧ ಪಕ್ಷನಾ ಇದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

    ಈಗಲೇ ಕಾಂಗ್ರೆಸ್ ನವರು ನಾನು ಸಿಎಂ, ನೀನು ಸಿಎಂ ಅಂತಾ ಬೀದಿಯಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ನಾಗೇಂದ್ರ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ -ಯತ್ನಾಳ್‍ಗೆ ಬಿಎಸ್‍ವೈ ಅಭಿಮಾನಿಗಳಿಂದ ಘೆರಾವ್

  • ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ- ತಿರುಗಿ ಬಿದ್ದ ರೈತ ಸಂಘದ ರಾಜ್ಯಾಧ್ಯಕ್ಷ

    ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ- ತಿರುಗಿ ಬಿದ್ದ ರೈತ ಸಂಘದ ರಾಜ್ಯಾಧ್ಯಕ್ಷ

    – ಹಸಿರು ಟವಲ್ ಹಾಕಿ, ಆಟವಾಡಿ ರೈತರಿಗೆ ಅವಮಾನ ಮಾಡಬೇಡಿ

    ಮೈಸೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿರುಗಿ ಬಿದ್ದಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ. ನೀವು ಸಾರಿಗೆ ನೌಕರರ ಪರ ಹೋರಾಟ ಮಾಡಿ. ಆದರೆ ಹಸಿರು ಟವಲ್ ಇಳಿಸಿ ಹೋರಾಟ ಮಾಡಿ. ಸುಮ್ಮನೆ ಹಸಿರು ಟವಲ್ ಹಾಕಿಕೊಂಡು ರೈತರಿಗೆ ಅವಮಾನ ಮಾಡಬೇಡಿ. ನಿಮ್ಮಿಂದ ರೈತ ಮುಖಂಡರು, ರೈತ ಸಂಘಟನೆಗಳ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಟೀಕಿಸಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಕೊಡಬೇಕಿತ್ತು. ಅದನ್ನು ಬಿಟ್ಟು ಸಾರಿಗೆ ನೌಕರರ ಜೊತೆ ಮುಷ್ಕರ ನಡೆಸಿ, ಅದನ್ನೂ ಹಳ್ಳ ಹಿಡಿಸಿದರು. ಅಲ್ಲದೆ ಇದರಿಂದ ರೈತ ಸಂಘದ ವರ್ಚಸ್ಸು ಕುಂದಿದೆ. ಗೌರವ ಕಡಿಮೆಯಾಗಿದೆ. ಹಸಿರು ಟವಲ್ ಹಾಕಿಕೊಂಡು ಆಟವಾಡಬೇಡಿ. ನಿಮಗೆ ಬದ್ಧತೆ ಇದ್ದರೆ ರೈತರ ಬಗ್ಗೆ ಆ ಕಾಳಜಿ ತೋರಿಸಿ. ಪ್ರಚಾರಕ್ಕಾಗಿ, ಬೇರೆ ಸಂಘಟನೆಗಳಲ್ಲಿ ಒಡಕು ಉಂಟುಮಾಡಲು ಈ ರೀತಿ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಮಡಿದ್ದಾರೆ.

    ರಾಜ್ಯದ ಜನ ನಾಲ್ಕು ದಿನಗಳಿಂದ ಸಂಕಷ್ಟ ಅನುಭವಿಸುವುದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರ ತಪ್ಪು ನಿರ್ಧಾರಗಳೇ ಕಾರಣ. ಕೋಡಿಹಳ್ಳಿಗೆ ಸಮಸ್ಯೆಯ ಅರಿವಿಲ್ಲ ಹಾಗಾಗಿ ಅದಕ್ಕೆ ಪರಿಹಾರವೂ ಗೊತ್ತಿಲ್ಲ. ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸಿರೋದೆ ಕೋಡಿಹಳ್ಳಿ ಚಂದ್ರಶೇಖರ್. ಭಾನುವಾರ ಮುಕ್ತಾಯವಾಗಿದ್ದ ಮುಷ್ಕರವನ್ನು ಮುಂದುವರೆಸಲು ಚಿತಾವಣೆ ಮಾಡಿದ್ದೇ ಕೋಡಿಹಳ್ಳಿ. ಸಾರಿಗೆ ನೌಕರರೇ ನಿಮ್ಮ ಬಗ್ಗೆ ಜನರಿಗೆ ಸಹಾನುಭೂತಿ ಇದೆ. ಕೋಡಿಹಳ್ಳಿ ಮಾತು ಕಟ್ಟಿಕೊಂಡು ಹೋದರೆ ಅವರ ಸಂಘಟಯೇ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.